Connect with us
http://www.suddidina.com/category/political-news

ದಿನದ ಸುದ್ದಿ

ರಿಯಲ್ ‘ಮಾಲ್ಗುಡಿ ಡೇಸ್​​ ‘ರೇಲ್ವೆ ಸ್ಟೇಷನ್​​ ..!

Published

on

ನೀವು 90s kid ಆಗಿದ್ರೆ ಮಾಲ್ಗುಡಿ ಡೇಸ್ ಸೀರಿಯಲ್​​​​ ನೋಡಿರ್ತೀರ. ಸ್ವಾಮಿ ಮತ್ತು ಆತನ ಗೆಳೆಯರ ಬಗ್ಗೆ ನಿಮಗೆ ಗೊತ್ತೇ ಇರುತ್ತೆ. ಹಾಗೇ ಇದ್ರಲ್ಲಿ ಬರೋ ಮಾಲ್ಗುಡಿ ರೇಲ್ವೆ ಸ್ಟೇಷನ್​ ಮೆರಯೋಕಾಗಲ್ಲ. ಆರ್​​.ಕೆ ನಾರಾಯಣ್​ ಅವರ ಸಣ್ಣ ಕಥೆಗಳನ್ನ ಆಧರಿಸಿ ಮಾಲ್ಗುಡಿ ಡೇಸ್​ ಚಿತ್ರಿಸಲಾಗಿತ್ತು. ನಾರಾಯಣ್​ ಅವರ ಕಥೆಯಲ್ಲಿ ಮಾಲ್ಗುಡಿ ಅನ್ನೋದು ಕಾಲ್ಪನಿಕ ಸ್ಥಳವಾದ್ರೂ, ನಿಜವಾದ ಊರಿನಂತೆಯೇ ಅನ್ನಿಸುತ್ತದೆ. ಮಾಲ್ಗುಡಿ ರೇಲ್ವೆ ನಿಲ್ದಾಣಕ್ಕೆ ಒಮ್ಮೆ ಭೇಟಿ ಕೊಡಬೇಕು ಅಂತ ಅನ್ನಿಸದೇ ಇರದು. ಆ ಆಸೆ ನಿಜವಾಗೋ ಟೈಂ ಬಂದಿದೆ.

ಶಿವಮೊಗ್ಗದಿಂದ 34 ಕಿ.ಮೀ ದೂರದಲ್ಲಿರೋ ಅರಸಾಳು ರೇಲ್ವೆ ನಿಲ್ದಾಣಕ್ಕೆ ಮಾಲ್ಗುಡಿ ಅಂತ ಮರುನಾಮಕರಣ ಮಾಡಲು ತೀರ್ಮಾನಿಸಲಾಗಿದೆ. ಹೊಸನಗರ ತಾಲೂಕಿನಲ್ಲಿರೋ ಈ ರೇಲ್ವೆ ನಿಲ್ದಾಣಕ್ಕೆ ಮಾಲ್ಗುಡಿ ಅಂತ ಹೆಸರಿಡಲು ಸರ್ಕಾರದಿಂದ ಅನುಮತಿ ಸಿಕ್ಕಿದೆ.

ಅರಸಾಳು ಯಾವುದೋ ಹತ್ತರಲ್ಲಿ ಒಂದು ರೇಲ್ವೆ ನಿಲ್ದಾಣವಲ್ಲ. ಇದಕ್ಕೆ ವಿಶೇಷ ಮಹತ್ವವೂ ಇದೆ. ನಟ, ನಿರ್ದೇಶಕ ಶಂಕರ್​ ನಾಗ್​ ಮಾಲ್ಗುಡಿ ಡೇಸ್​ ಚಿತ್ರೀಕರಣ ಮಾಡಿದ್ದು ಇದೇ ಸ್ಥಳದಲ್ಲಿ. ಹೀಗಾಗಿ ಈ ರೇಲ್ವೆ ಸ್ಟೇಷನ್​​ಗೆ ಮಾಲ್ಗುಡಿ ಅಂತ ಮರುನಾಮಕರಣ ಮಾಡುವುದರ ಜೊತೆಗೆ ₹1.3 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಲು ನೈಋತ್ಯ ರೇಲ್ವೆ ಮುಂದಾಗಿದೆ.

ಮಾಲ್ಗುಡಿ ಡೇಸ್​​ ಚಿತ್ರೀಕರಣ ನಡೆದ ಅರಸಾಳುವಿನ ಹಳೇ ರೇಲ್ವೆ ನಿಲ್ದಾಣದ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, ಇದನ್ನ ರೇಲ್ವೆ ಮ್ಯೂಸಿಯಂ ಮಾಡೋ ಪ್ಲಾನ್ ಕೂಡ ಇದೆ. ಮಾಲ್ಗುಡಿ ಡೇಸ್​​ನಲ್ಲಿ ಸ್ವಾಮಿ ಪಾತ್ರ ನಿರ್ವಹಿಸಿದ್ದ ಮಾಸ್ಟರ್​​ ಮಂಜುನಾಥ್​ ರೇಲ್ವೆ ನಿಲ್ದಾಣ ಮರುನಾಮಕರಣ ವಿಷಯ ತಿಳಿದು ಸಂತಸ ವ್ಯಕ್ತಪಡಿಸಿದ್ದಾರೆ.

ಬ್ರಿಟಿಷ್​ ಕಾಲದ ಸೀನ್​​​ಗಳನ್ನ ಚಿತ್ರೀಕರಿಸೋಕೆ ಅರಸಾಳು ರೇಲ್ವೆ ನಿಲ್ದಾಣ ಅತ್ಯಂತ ಸೂಕ್ತವಾಗಿತ್ತು. ಮೊದಲನೇ ಶಾಟ್​​ ಬಲ ಭಾಗದ ಪ್ಲಾಟ್​ಫಾರ್ಮ್​​ನಲ್ಲಿ ತೆಗೆಯಲಾಗಿತ್ತು. 20 ನಿಮಿಷಗಳ ನಂತರ ರೈಲು ಮರಳಿ ಬಂದಾಗ ಮತ್ತೊಂದು ಭಾಗದಲ್ಲಿದ್ದ ಪ್ಲಾಟ್​ಫಾರ್ಮ್​​ನಲ್ಲಿ ಎರಡನೇ ಶಾಟ್​​ ತೆಗೆಯಲಾಯಿತು ಎಂದು ಅವರು ಆ ದಿನಗಳನ್ನ ಮೆಲುಕು ಹಾಕಿದ್ರು. ಸದ್ಯ ಈ ರೇಲ್ವೆ ನಿಲ್ದಾಣದಲ್ಲಿ 5 ರೈಲುಗಳು ಸಾಗುತ್ತವೆ. ಒಂದು ರೈಲು ಮಾತ್ರ ನಿಲುಗಡೆ ಆಗುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ

ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ

Published

on

ಸುದ್ದಿದಿನ,ಮೈಸೂರು : ಮೈಸೂರು ವಿಶ್ವವಿದ್ಯಾನಿಲಯ ಪ್ರಸಾರಂಗದ ಪ್ರಕಟಣೆಗಳನ್ನು ಶೇ.50 ಮತ್ತು ವಿಶ್ವಕೋಶಗಳು ಹಾಗೂ ಇಂಗ್ಲಿಷ್-ಕನ್ನಡ ನಿಘಂಟುಗಳಿಗೆ ಶೇ.25 ರಂತೆ ರಿಯಾಯಿತಿ ದರದಲ್ಲಿ ಜೂನ್ 15 ರವರೆಗೆ ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗ ಮಾರಾಟ ಮಳಿಗೆ ಮತ್ತು ರಾಮಸ್ವಾಮಿ ವೃತ್ತದ ಮಳಿಗೆಗಳಲ್ಲಿ ಮಾರಾಟ ಮಾಡಲಾಗುವುದು ಎಂದು ಪ್ರಸಾರಾಂಗದ ನಿರ್ದೇಶಕರು ಪ್ರಕಟಣೆ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಹೆಚ್‍ಏಎಲ್ ಅಪ್ರೆಂಟಿಷಿಪ್‍ಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ಶಿವಮೊಗ್ಗ : ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಊಂಐ) ನಲ್ಲಿ ಎಸ್‍ಎಸ್‍ಎಲ್‍ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ 15-18 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಅಪ್ರೆಂಟಿಷಿಪ್‍ಗೆ ಅರ್ಜಿ ಆಹ್ವಾನಿಸಿದೆ.

ಇತರೆ ವರ್ಗ 60% ಹಾಗೂ ಎಸ್ಸಿ/ಎಸ್ಟಿ ಅಭ್ಯರ್ಥಿಗಳು 50% ಅಂಕದೊಂದಿಗೆ ತೇರ್ಗಡೆ ಹೊಂದಿರುವ ಆರ್ಥಿಕವಾಗಿ ಹಿಂದುಳಿದ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡನ್ನು ಹೊಂದಿರುವವರು ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯಲ್ಲಿ ಹೆಸರು ನೊಂದಾಯಿಸಿಕೊಂಡು ಜೂನ್-1 ರೊಳಗಾಗಿ ಅರ್ಜಿಸಲ್ಲಿಸಲು ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08182-255293/8861890866/9482023412 ಕ್ಕೆ ಸಂಪರ್ಕಿಸುವಂತೆ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮಹಿಳಾ ಮಿಲಟರಿ ಪಡೆಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ಶಿವಮೊಗ್ಗ,: ಭಾರತೀಯ ಸೇನೆಯಲ್ಲಿ ಮಹಿಳಾ ಮಿಲಿಟರಿ ಪೊಲೀಸ್ ಹುದ್ದೆಗಳನ್ನು ಭರ್ತಿಮಾಡಲು ಬರುವ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ರಾಜ್ಯದ ಬೆಳಗಾವಿ ನಗರದಲ್ಲಿ ನೇಮಕಾತಿ ರ್ಯಾಲಿಯನ್ನು ಆಯೋಜಿಸಲಾಗಿದ್ದು ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್‍ನಲ್ಲಿ ಹೆಸರು ನೊಂದಾಯಿಸಿಕೊಳ್ಳುವಂತೆ ತಿಳಿಸಲಾಗಿದೆ.

ಹೆಸರು ನೊಂದಾಯಿಸಲು ಜೂನ್- 8 ಕೊನೆಯ ದಿನಾಂಕವಾಗಿದ್ದು ನೊಂದಾಣಿ ಕಾರ್ಡ್ ಹಾಗೂ ರ್ಯಾಲಿಯ ನಿಖರ ದಿನಾಂಕವನ್ನು ಅಭ್ಯರ್ಥಿಗಲ ಇ-ಮೇಲ್‍ಗೆ ಕಳುಹಿಸಲಾಗುವುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 08182-255293, 8861890866, 9482023412 ಕ್ಕೆ ಸಂಪರ್ಕಿಸುವಂತೆ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending