Connect with us

ದಿನದ ಸುದ್ದಿ

ಕೆಆರ್‌ಎಸ್‌ನಿಂದ ಧುಮ್ಮಿಕ್ಕುತ್ತಿದೆ ಬಣ್ಣದ ಚಿತ್ತಾರ

Published

on

ಸುದ್ದಿದಿನ ಡೆಸ್ಕ್: ದಶಕದ ನಂತರ ತುಂಬಿರುವ ಕೆಆರ್‌ಎಸ್‌ನಿಂದ ನೀರು ಧುಮ್ಮಿಕ್ಕುತ್ತಿರುವ ವಿಡಿಯೊ ಎಲ್ಲೆಡೆ ವೈರಲ್ ಆಗುತ್ತಿವೆ. ಇದೀಗ ಕನ್ನಂಬಾಡಿ ಜಲಾಶಯ ಇನ್ನಷ್ಟು ಪ್ರವಾಸಿಗರನ್ನು ಸೆಳೆಯಲು ಸಿದ್ಧವಾಗಿದೆ.

ಕೆಆರ್‌ಎಸ್ ಕ್ರಸ್ಟ್ ಗೇಟ್ ತೆಗೆದ ನಂತರ ಹೊರ ಹರಿವು ಹೆಚ್ಚಾಗಿದ್ದು, ಇದೇ ಜಾಗದಲ್ಲಿ ಬಣ್ಣದ ದೀಪಗಳನ್ನು ಅಳವಡಿಸಲಾಗಿದ್ದು, ಈಗ ಹೊರ ಹೋಗುತ್ತಿರುವ ನೀರು ಬಣ್ಣದ ಚಿತ್ತಾರದಿಂದ ಕಣ್ಣು ಕೋರೈಸುತ್ತಿದೆ.

ಕೆಆರ್‌ಎಸ್ ಜಲಾಶಯದ ಒಳಗೆ ಪ್ರವೇಶ ನಿರ್ಬಂಧಿಸಲಾಗಿದೆ. ಆದರೆ, ಹೊರ ಹೋಗುತ್ತಿರುವ ನೀರಿಗೆ ಲೈಟಿಂಗ್ ಮಾಡಿರುವುದರಿಂದ ಪ್ರವಾಸಿಗರು ದೂರದಿಂದಲೇ ಬಣ್ಣದೋಕುಳಿಯಂತೆ ಕಾಣುವ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದು. ನೀಲಿ, ಕೆಂಪು, ಹಸಿರು ಮೊದಲಾದ ಬಣ್ಣದ ದೀಪಗಳನ್ನು ಅಳವಡಿಸಲಾಗಿದೆ.

ಉಕ್ಕಿ ಹರಿಯುತ್ತಿದೆ ದೇಶಭಕ್ತಿ: ಕ್ರಸ್ಟ್‌ಗೇಟ್‌ನಿಂದ ಹರಿಯುತ್ತಿರುವ ನೀರು ಕೇಸರಿ, ಬಿಳಿ, ಹಸಿರು ಬಣ್ಣವನ್ನು ಪ್ರತೀಕಿಸುತ್ತಿದ್ದು, ನೋಡುಗರಲ್ಲಿ ದೇಶ ಭಕ್ತಿ ಉಕ್ಕಿ ಹರಿಸುತ್ತಿದೆ.


 

ದಿನದ ಸುದ್ದಿ

ಅತಿ ಹೆಚ್ಚು ಊಟ ಮಾಡಿದ್ರೆ ವಾಂತಿ ಆಗುತ್ತೆ: ಬಿಜೆಪಿ ಟೀಕಿಸಿದ ಹೊರಟ್ಟಿ

Published

on

ಕಲಬುರಗಿ: ಅತಿ ಹೆಚ್ಚು ಊಟ ಮಾಡಿದರೆ ವಾಂತಿ ಆಗುತ್ತದೆ. ಇದು ಬಿಜೆಪಿಗೆ ಬೇಕಾ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಪ್ರಶ್ನಿಸಿದ್ದಾರೆ. ಪಕ್ಷಾಂತರ ಮಾಡುವುದು ಸರಿಯಲ್ಲ. ಆದರೆ ನಮ್ಮವರ ತಪ್ಪಿನಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಬಿಜೆಪಿಗೆ ಹೋಗುವವರಿಗೆ ಈಗ ಅಲ್ಲಿ ಗೌರವ ಸಿಗುವುದಿಲ್ಲ ಎಂದು ಹೇಳಿದ್ದಾರೆ.

ಬಿಜೆಪಿ ಒಂದೇ ಅಲ. ಎಲ್ಲ ಪಕ್ಷದಲ್ಲೂ ಈ ಅಸಮಧಾನ ಇದ್ದೆ ಇರುತ್ತದೆ. ಆದರೆ, ಬಿಜೆಪಿಯಲ್ಲಿ ಹೈಕಮಾಂಡ್ ಬಲಿಷ್ಠವಾಗಿರುವುದಕ್ಕೆ ಎಲ್ಲರೂ ಸುಮ್ಮನಿದ್ದಾರೆ. ಕಾಂಗ್ರೆಸ್, ಜೆಡಿಎಸ್’ನಲ್ಲಿ ಹಾಗೆ ಇದ್ದಿದ್ದರೆ ಏನು ಬೇಕಾದರೂ ಆಗಬಹುದಿತ್ತು. ಬೇರೆ ಪಕ್ಷ ಆಗಿದ್ದರೆ ಗಲಾಟೆ ಆಗುತ್ತಿತ್ತು. ಆದರೆ, ಬಿಜೆಪಿಯಲ್ಲಿ ಅನಿವಾರ್ಯವಾಗಿ ಸುಮ್ಮನಿದ್ದಾರೆ. ಕಸ ಹೊಡೆದವರು ಮಂತ್ರಿ ಆಗದೆ ಹೋದರೆ ನೋವು ಆಗುತ್ತದೆ ಎಂದು ಹೇಳಿದ್ದಾರೆ..

Continue Reading

ದಿನದ ಸುದ್ದಿ

ಅತಿ ಹೆಚ್ಚು ಊಟ ಮಾಡಿದ್ರೆ ವಾಂತಿ ಆಗುತ್ತೆ: ಬಿಜೆಪಿ ಟೀಕಿಸಿದ ಹೊರಟ್ಟಿ

Published

on

ಕಲಬುರಗಿ:  ಅತಿ ಹೆಚ್ಚು ಊಟ ಮಾಡಿದರೆ ವಾಂತಿ ಆಗುತ್ತದೆ. ಇದು ಬಿಜೆಪಿಗೆ ಬೇಕಾ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಪ್ರಶ್ನಿಸಿದ್ದಾರೆ. ಪಕ್ಷಾಂತರ ಮಾಡುವುದು ಸರಿಯಲ್ಲ. ಆದರೆ ನಮ್ಮವರ ತಪ್ಪಿನಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಬಿಜೆಪಿಗೆ ಹೋಗುವವರಿಗೆ ಈಗ ಅಲ್ಲಿ ಗೌರವ ಸಿಗುವುದಿಲ್ಲ ಎಂದು ಹೇಳಿದ್ದಾರೆ.

ಬಿಜೆಪಿ ಒಂದೇ ಅಲ. ಎಲ್ಲ ಪಕ್ಷದಲ್ಲೂ ಈ ಅಸಮಧಾನ ಇದ್ದೆ ಇರುತ್ತದೆ. ಆದರೆ, ಬಿಜೆಪಿಯಲ್ಲಿ ಹೈಕಮಾಂಡ್ ಬಲಿಷ್ಠವಾಗಿರುವುದಕ್ಕೆ ಎಲ್ಲರೂ ಸುಮ್ಮನಿದ್ದಾರೆ. ಕಾಂಗ್ರೆಸ್, ಜೆಡಿಎಸ್’ನಲ್ಲಿ ಹಾಗೆ ಇದ್ದಿದ್ದರೆ ಏನು ಬೇಕಾದರೂ ಆಗಬಹುದಿತ್ತು. ಬೇರೆ ಪಕ್ಷ ಆಗಿದ್ದರೆ ಗಲಾಟೆ ಆಗುತ್ತಿತ್ತು. ಆದರೆ, ಬಿಜೆಪಿಯಲ್ಲಿ ಅನಿವಾರ್ಯವಾಗಿ ಸುಮ್ಮನಿದ್ದಾರೆ. ಕಸ ಹೊಡೆದವರು ಮಂತ್ರಿ ಆಗದೆ ಹೋದರೆ ನೋವು ಆಗುತ್ತದೆ ಎಂದು ಹೇಳಿದ್ದಾರೆ.

Continue Reading

ದಿನದ ಸುದ್ದಿ

ದೇಶದಲ್ಲಿ ಪೌರತ್ವ ಕಾಯಿದೆ ತಿದ್ದುಪಡಿ ಮಾಡಲು ಕಾಣದ ಕೈಗಳು ಕೆಲಸ ಮಾಡಿವೆ : ಸಿ.ಎಂ ಇಬ್ರಾಹಿಂ

Published

on

ಸುದ್ದಿದಿನ,ಚನ್ನಗಿರಿ : ದೇಶದಲ್ಲಿ ಪೌರತ್ವ ಕಾಯಿದೆ ಜಾರಿಯಾಗಲು ಪ್ರಧಾನಿ ಮೋದಿ, ಹಾಗೂ ಅಮಿತ್ ಷಾ ಕಾರಣರಲ್ಲಾ ಬದಲಾಗಿ ಅವರ ಹಿಂದೆ ಕಾಣದ ಕೈಗಳು ಕೆಲಸ ಮಾಡಿಸಿದ್ದಾವೆ ಎಂದು ವಿಧಾನ ಪರಿಷತ್ ಸದಸ್ಯ ಸಿ,ಎಂ ಇಬ್ರಾಹಿಂ ಅಭಿಪ್ರಾಯ ಪಟ್ಟರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೌರತ್ವ ಕಾಯಿದೆ ತಿದ್ದುಪಡಿ ಮಾಡಿದ್ದಾರೆ ಮುಂದಿನ ದಿನಗಳಲ್ಲಿ ಸಂವಿಧಾನ ತೆಗೆದುಹಾಕುತ್ತಾರೆ ಇದರಲ್ಲಿ ಯಾವುದೇ ಅನುಮಾನವಿಲ್ಲ, ಈಗಾಗಲೇ ಆನಂತ್ ಕುಮಾರ್ ಹೆಗಡೆ ಮತ್ತು ತೇಜಸ್ವಿಸೂರ್ಯ ಅವರು ನಾವು ಬಂದಿರೊದೇ ಸಂವಿಧಾನ ಬದಲಾಯಿಸಲು ಎಂದು ಹೇಳಿದ್ದಾರೆ.

ಸಂವಿಧಾನ ತೆಗೆದುಹಾಕಿ ನಮ್ಮದೇ ಸಂವಿಧಾನ ಅಂದರೆ ಚರ್ತುವರ್ಣ ಪಧ್ದತಿಯನ್ನು ಈ ರಾಷ್ಟ್ರದಲ್ಲಿ ಜಾರಿಗೆ ತರಬೇಕೆಂಬುದು ಇವರ ಗುರಿಯಾಗಿದ್ದು, ಇದರ ವಿರುಧ್ದ ರಾಷ್ಟ್ರದಲ್ಲೇ ಈಗಾಗಲೇ ಪ್ರತಿಭಟನೆಗಳು ನಡೆಯುತ್ತಿದ್ದು, ಅಂತರ್ ರಾಷ್ಟ್ರೀಯ ಸಂಸ್ಥೆಯಾದ ಸಿ.ಎಸ್.ಡಿ.ಎ ಸುಮಾರು 300 ಲೋಕಸಭಾ ಕ್ಷೇತ್ರಗಳಲ್ಲಿ ಸರ್ವೇ ಮಾಡಿದ್ದು, ಈ ದೇಶ ಹಿಂದೂ ದೇಶ ಆಗಬೇಕು ಅನ್ನುವವರ ಸಂಖ್ಯೆ 17% ಇದ್ದು, ಇನ್ನುಳಿದ ಜನತೆ ಇಲ್ಲ ಇದು ಜ್ಯಾತ್ಯಾತೀತ ರಾಷ್ಟ್ರವಾಗಬೇಕು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನ ಅತ್ಯಂತ ಶ್ರೇಷ್ಠವಾದದ್ದು, ಮಹಾತ್ಮ ಗಾಂಧಿ ಅವರು ರಾಷ್ಟ್ರಪಿತ ನಮ್ಮ ದೇಶದ ತತ್ವ ಸಿಧ್ಧಾಂತದ ಆದಾರದ ಮೇಲೆ ನಿಂತಿರುವಂತಹವರು ಎಂದಿದ್ದಾರೆ, ಇದೀಗಾ ದೆಹಲಿಯ ಚುನಾವಣೆಯಲ್ಲಿ ಇದೇ ವಿಚಾರವನ್ನು ಮಂಡಿಸಿದ್ದು ಫಲಿತಾಂಶದ ಬಳಿಕ ಸಂಘಪರಿವಾರಗಳು ಮೋದಿಯವರನ್ನು ಇಟ್ಟುಕೊಳ್ಳುತ್ತಾರೋ ಇಲ್ಲವೋ ಎಂಬುವುದನ್ನು ಕಾದು ನೋಡಬೇಕಿದೆ.

ಬಿ.ಎಸ್.ವೈ ಅವರ ಪರಿಸ್ಥಿಯೂ ಅದೇ ಗತಿಯಾಗಿದೆ, ಪಾಪ ಅವರಿಗೆ ಮದುವೆ ಮಾಡಿದ್ದಾರೆ ಆದರೆ ಹೆಣ್ಣು ಗಂಡನ್ನು ಕೂಡಲು ಬಿಡುತ್ತಿಲ್ಲ, ಅವರ ಸಚಿವ ಸಂಪುಟ ರಚನೆ ಮಾಡಲು ಇವತ್ತು, ನಾಳೆ, ನಾಡಿದ್ದು ಎನ್ನುತಿದ್ದು, ಅವರ ಸಮಸ್ಯೆಯಲ್ಲಿ ಅವರಿದ್ದಾರೆ.

ಅದ್ದರಿಂದ ರಾಜ್ಯದಲ್ಲಿ ಈ ಅಂದೋಲನ ರಾಜಕೀಯ ಪಕ್ಷ ಜಾತಿ ಭಾಷೆ ಬಿಟ್ಟು ಹೊಂದಾಗಿ ಹೋರಾಟ ಮಾಡುತ್ತಿದ್ದಾರೆ, ಸಿರಿಗೆರೆಯ ಸಾಣಿಹಳ್ಳಿ ಸ್ವಾಮೀಜಿ ಅವರ ಮಾತುಗಳನ್ನು ನೆನೆದು ಹಿಂದೂ ಧರ್ಮ ಸಮಾಜವನ್ನು ಕೂಡಿಸುವುದೇ ಹೊರತು ಹೊಡೆಯುವುದಲ್ಲ ಎಂದಿದ್ದಾರೆ, ಕರುಣಾ ಮೂರ್ತಿಯಾದ ಶ್ರೀರಾಮ ಎಂದರೆ ಎಲ್ಲರ ಮನಸಲ್ಲಿ ಪ್ರೀತಿ ಮೂಡಬೇಕು ಆದರೆ ಜೈ ಶ್ರೀರಾಮ್ ಎಂದರೆ ಎಲ್ಲರಲ್ಲೂ ಭಯ ಶುರುವಾಗುವಂತಾಗಿದೆ, ಇಂದು ರಾಮಾಯಣ ಬೇಕು ವಾಲ್ಮೀಕಿ ಬೇಡವಾಗಿದೆ.

ಚಾಣುಕ್ಯನ ಮಾತಿನಂತೆ ಯಾವ ದೇಶದ ರಾಜ ವ್ಯಾಪಾರಿಯಾಗುತ್ತಾನೋ ಅ ದೇಶದ ಜನ ಬಿಕಾರಿಯಾಗುತ್ತಾರೆ ಎಂಬುವಂತೆ ಅದು ನಮ್ಮ ದೇಶದಲ್ಲಿ ಆಗಿದ್ದಾಗದೆ. ಎನೇ ಆಗಲಿ ಹಿಂಸೆಗೆ ಅವಕಾಶ ಕೊಡದೇ ಗಾಂಧಿ, ಅಂಬೇಡ್ಕರ್ ಅವರಂತೆ ರಾಷ್ಟ್ರ ಧ್ವಜ ಹಿಡಿದು ಹೋರಾಟ ಮಾಡಬೇಕು ಎಂದು ಸರ್ವ ಸಮಾಜದ ಜನತೆಗೆ ಕರೆ ಕೊಡಲಾಗಿದೆ ಒಟ್ಟಾರೆ ರಾಜ್ಯ. ದೇಶದ ಅಭಿವೃಧ್ದಿ ನಾವೆಲ್ಲರೂ ಕೈ ಜೋಡಿಸಬೇಕಿದೆ ಎಂದರು.

ಈ ವೇಳೆ ಮುಸ್ಲಿಂ ಸಮಾಜದ ಮುಖಂಡರಾದ ಅಸಾದುಲ್ಲಾ, ಸಯ್ಯದ್ ಸರ್ದಾರ್, ಖದೀರ್‌ ಮತ್ತು ಜೋಳದಾಳ್‍ಕುಮಾರ್, ರುದ್ರಪ್ಪ ಹಾಜರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending