Connect with us

ದಿನದ ಸುದ್ದಿ

ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆ ಅನುಷ್ಟಾನ

Published

on

ಸುದ್ದಿದಿನ,ಶಿವಮೊಗ್ಗ : ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ಪ್ರಸಕ್ತ ಸಾಲಿನ ವಿವಿಧ ಯೋಜನೆಯಡಿ ಅಲ್ಪಸಂಖ್ಯಾತರ ಸಮುದಾಯದವರಿಗೆ (ಮುಸ್ಲಿಂ, ಕ್ರೈಸ್ತ, ಜೈನ, ಬೌದ್ದ, ಸಿಖ್ಖ್, ಪಾರ್ಸಿ) ಸಾಲ ಸೌಲಭ್ಯ ನೀಡಲು ಉದ್ದೇಶಿಸಿದ್ದು, ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಅಹ್ವಾನಿಸಿದೆ.

ಅರ್ಜಿ ಸಲ್ಲಿಸಲಿಚ್ಚಿಸುವ ಅಭ್ಯರ್ಥಿಗಳು ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದವರಾಗಿದ್ದು, 18-45ವರ್ಷ ವಯೋಮಿತಿಯೊಳಗಿನವರಾಗಿದ್ದು, ಕರ್ನಾಟಕ ರಾಜ್ಯದಲ್ಲಿ ಖಾಯಂ ವಾಸಿಯಾಗಿರಬೇಕು. ಅಭ್ಯರ್ಥಿಯ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ. 81,000/-, ನಗರ ಪ್ರದೇಶದವರಿಗೆ 1.03ಲಕ್ಷ ರೂ. ಮೀರಿರಬಾರದು ಹಾಗೂ ಅರಿವು ಯೋಜನೆಯಡಿ ಮಾತ್ರ ಕುಟುಂಬದ ವಾ.ಆ. ರೂ. 6.00 ಲಕ್ಷ ಮೀರಿರಬಾರದು. ತಮ್ಮ ವಿಳಾಸದ ದೃಢೀಕರಣಕ್ಕಾಗಿ ಆಧಾರ್ ಪ್ರತಿಯನ್ನು ಮತ್ತು ಅದನ್ನು ಬ್ಯಾಂಕ್‍ನ ಉಳಿತಾಯ ಖಾತೆಗೆ ಹೊಂದಾಣಿಕೆ (ಲಿಂಕ್) ಮಾಡಿರಬೇಕು.

ಯೋಜನೆಗಳು

ಸ್ವಯಂ ಉದ್ಯೋಗ ಯೋಜನೆ

ಈ ಯೋಜನೆಯಲ್ಲಿ ಅಲ್ಪಸಂಖ್ಯಾತರಿಗೆ ವ್ಯಾಪಾರ, ಸೇವಾ ಉದ್ದಿಮೆ, ಗುಡಿ ಕೈಗಾರಿಕೆ ಹಾಗೂ ಕೃಷಿ ಆಧಾರಿತ ಕಾರ್ಯಗಳಿಗೆ ರಾಷ್ಟ್ರೀಕೃತ ಬ್ಯಾಂಕುಗಳಿಂದ ಗರಿಷ್ಠ 35ಸಾವಿರ ರೂ.ಗಳನ್ನು ಸಹಾಯಧನ ಹಾಗೂ ಘಟಕವೆಚ್ಚ ಗರಿಷ್ಠ 2 ಲಕ್ಷ ರೂ ಸಹಾಯಧನವನ್ನು ಚಾಲ್ತಿ ಬಡ್ಡಿದರದಲ್ಲಿ ಸಾಲ ನೀಡಲಾಗುವುದು.

ಶ್ರಮಶಕ್ತಿ ಯೋಜನೆ

ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ಹಾಗೂ ಕುಲಕಸುಬುದಾರರಿಗೆ ತಂತ್ರಜ್ಞಾನ ಬಳಸಿ ತಮ್ಮ ಸಾಂಪ್ರದಾಯಿಕ ಮಾರುಕಟ್ಟೆ ಹಾಗೂ ವೃತ್ತಿ ಕೌಶಲ್ಯವನ್ನು ಅಭಿವೃದ್ದಿ ಪಡೆಸಿಕೊಳ್ಳಲು ಗರಿಷ್ಠ 50ಸಾವಿರ ರೂ.ಗಳನ್ನು ಹಾಗೂ ಘಟಕ ವೆಚ್ಚಕ್ಕೆ 25ಸಾವಿರ ರೂಗಳನ್ನು ಸಬ್ಸಿಡಿ ಸೇರಿ ಸಾಲ ಕೊಡಲಾಗುವುದು.

ಮೈಕ್ರೋ ಸಾಲಯೋಜನೆ

ಮಹಿಳಾ ಸ್ವಸಾಯ ಸಂಘಗಳಿಗೆ ಅನಕ್ಷರಸ್ಥ ಕುಶಲಿಯಲ್ಲದ ಅಲ್ಪಸಂಖ್ಯಾತ ಮಹಿಳೆಯರ 10 ರಿಂದ 20 ಮಹಿಳೆಯರನ್ನು ಹೊಂದಿರುವ ಗುಂಪಿನ ಪ್ರತಿ ಸದಸ್ಯರಿಗೆ ಆರ್ಥಿಕ ಅಭಿವೃದ್ಧಿಗಾಗಿ 5000 ಸಹಾಯಧನ ಹಾಗೂ 5000 ಸಾಲವಾಗಿ ಒಟ್ಟು 10ಸಾವಿರ ರೂಗಳನ್ನು ನೀಡಲಾಗುತ್ತದೆ.

ಕೃಷಿ ಭೂಮಿ ಖರೀದಿ ಯೋಜನೆ

ಗ್ರಾಮೀಣ ಪ್ರದೇಶದಲ್ಲಿ ವಾಸವಿರುವ ಅಲ್ಪಸಂಖ್ಯಾತ ಭೂ ರಹಿತ ಕೃಷಿ ಕಾರ್ಮಿಕರಿಗೆ 2 ಎಕರೆ ಖುಷ್ಕಿ ಅಥವ 1 ಎಕರೆ ತರಿ ಭೂಮಿಯನ್ನು ನಿಗಮದಿಂದ 5ಕಿಮಿ ವ್ಯಾಪ್ತಿಯೊಳಗೆ ಖರೀದಿ ಮಾಡಿ ಕೊಡಲಾಗುತ್ತದೆ. ಇದರಲ್ಲಿ 50% ಅವದಿ ಸಾಲ 6% ಬಡ್ಡಿದರದೊಂದಿಗೆ ಮರುಪಾವತಿಸುವುದು. ಹಾಗೂ ಇನ್ನುಳಿದ 50% ಹಣವನ್ನು ಸಹಾಯಧನವನ್ನಾಗಿ ಪರಿಗಣಿಸಲಾಗುವುದು. ಭೂಮಿಯನ್ನು ಮಾರಾಟ ಮಾಡುವವರು ಹಿಂದುಳಿದ ವರ್ಗದವರಾಗಿರಬಾರದು ಮತ್ತು ಮಾರಾಟಮಾಡುವವರು ಲಿಖಿತವಾಗಿ ಅರ್ಜಿಯೊಂದಿಗೆ ಭೂಮಿಯ ದಾಖಲೆಗಳನ್ನು ಸಲ್ಲಿಸಬೇಕು.

ಗಂಗಾ ಕಲ್ಯಾಣ ಯೋಜನೆ

ಒಂದು ಎಕರೆ ಎರಡು ಗುಂಟೆಯಿಂದ ಐದು ಎಕರೆ ಖುಷ್ಕಿ ಭೂಮಿ ಹೊಂದಿದ ಸಣ್ಣ ಅಥವ ಅತಿ ಸಣ್ಣ ರೈತರು ಕೊಳವೆ ಭಾವಿ ಕೊರೆಸಲು 3.50 ಲಕ್ಷ ಸಹಾಯಧನ ಬಯಸಿದಲ್ಲಿ 50,000 ಸಾಲವನ್ನು ಒದಗಿಸಲಾಗುತ್ತದೆ.

ಮನೆ ಮಳಿಗೆ ಯೋಜನೆ

ದುರ್ಬಲ ಹಾಗೂ ವಿಶೇಷ ಫಲಾನುಭವಿಗಳಿಗೆ 5ಲಕ್ಷ ರೂಗಳ ಸಾಲ ಸೌಲಭ್ಯ ಕೊಡುವ ಯೋಜನೆ ಇದಾಗಿದೆ. ಕೋಮುಗಲಭೆ, ಪರಿಸರ ವಿಕೋಪ, ಸಂದರ್ಭದಲ್ಲಿ ತೊಂದರೆಗೊಳಗಾದವರು, ಸನ್ನಡತೆ ಮೇಲೆ ಬಿಡುಗಡೆಯಾದ ಕೈದಿಗಳು ಹಾಗೂ ಇನ್ನಿತರೆ ಪ್ರಕರಣಗಳಲ್ಲಿ ಬಂಧಿಯಾಗಿ ಆರೋಪ ಸಾಭೀತಾಗದೆ ಬಿಡುಗಡೆಯಾದ ನಿರಪರಾಧಿಗಳಿಗೆ ಜೀವನೋಪಾಯ ಕಲ್ಪಿಸುವ ಯೋಜನೆ ಇದಾಗಿದೆ.

ಪಶು ಸಂಗೋಪನೆ

ಹೈನುಗಾರಿಕೆ, ಕೋಳಿಸಾಕಣಿಕೆ, ಕುರಿ ಸಾಕಾಣಿಕೆಗೆ ಉತ್ತೇಜನ ನೀಡುವ ಸಲುವಾಗಿ 50% ದಷ್ಟು ಸಹಾಯಧನ ಸೇರಿ 40ಸಾವಿರ ರೂಗಳನ್ನು ನೀಡುವ ಯೋಜನೆ ಇದಾಗಿದೆ. ಟ್ಯಾಕ್ಸಿ / ಗೂಡ್ಸ್ ಖರೀದಿ ಯೋಜನೆ: ಟ್ಯಾಕ್ಸಿ ಹಾಗೂ ಗೂಡ್ಸ್ ವಾಹನಗಳನ್ನು ಖರಿದಿಸಲು 3ಲಕ್ಷರೂಗಳ ಸಹಾಯಧನ ನೀಡುವ ಯೋಜನೆ ಇದಾಗಿದೆ.

ಪ್ರವಾಸಿ ಲೋನ್ ಯೋಜನೆ

ಕೊಲ್ಲಿ ರಾಷ್ಟ್ರಗಳಿಂದ ಉದ್ಯೋಗ ವಂಚಿತರಾಗಿ ಎಕ್ಸಿಟ್ ಮುದ್ರೆಯೊಂದಿಗೆ ಹಿಂದಿರುಗಿದವರಿಗೆ ಸ್ವಯಂ ಉದ್ಯೋಗ್ಯ ಕಲ್ಪಿಸುವ ಯೋಜನೆ ಇದಾಗಿದೆ.

ಇದರೊಂದಿಗೆ ವೃತ್ತಿ ಪ್ರೋತ್ಸಾಹ, ಕೃಷಿ ಆಧುನಿಕ ಯಂತ್ರೋಪಕರಣ ಖರೀದಿ, ಶೈಕ್ಷಣಿಕ ಸಾಲ ನೇರ ಅವಧಿ ಸಾಲ ಹಾಗೂ ಆಟೋಮೊಬೈಲ್ಸ್ ಸರ್ವಿಸ್ ಹಾಗೂ ತರಬೇತಿ ಸಾಲ ಯೋಜನೆಗಳು ಸೇರಿವೆ.

ಅರ್ಹ ಅಭ್ಯರ್ಥಿಗಳು ನಿಗಧಿತ ನಮೂನೆಯ ಅರ್ಜಿಯನ್ನು ನಿಗಮದ ಅಂತರ್ಜಾಲತಾಣ WWW.Kmdc.kar.nic.in/loan/login.aspx ಮೂಲಕ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಜುಲೈ 31 ರೊಳಗಾಗಿ
ಜಿಲ್ಲಾ ವ್ಯವಸ್ಥಾಪಕರು, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ನಂಜಪ್ಪ ಆಸ್ಪತ್ರೆ ಮುಂಭಾಗ ರಸ್ತೆ, ಅಚ್ಯುತ್‍ರಾವ್ ಲೇಔಟ್, 4ನೇ ತಿರುವು, ಶಿವಮೊಗ್ಗ ಈ ಕಛೇರಿಗೆ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕು. ವಿವರಗಳಿಗಾಗಿ 08182-228262ನ್ನು ಸಂಪರ್ಕಿಸಬಹುದಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9880346243

ದಿನದ ಸುದ್ದಿ

ಮೈಸೂರು : ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಡೆಂಗ್ಯೂ ಗೆ ಬಾಲಕಿ ಬಲಿ

Published

on

ಸುದ್ದಿದಿನ, ಮೈಸೂರು : ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಸಾಧುಗೋನಹಳ್ಳಿ ಗ್ರಾಮದಲ್ಲಿ ಡೆಂಗ್ಯೂ ಜ್ವರದಿಂದ ಒಂದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಹೆಣ್ಣು ಮಗು ಮನಸ್ವಿನಿ(6) ಸಾವನ್ನಪ್ಪಿರುವ ಘಟನೆ ಮಂಗಳವಾರ ನಡೆದಿದೆ.

ಕೆ.ಆರ್.ಪೇಟೆ ಪಟ್ಟಣದ ಸ್ಕೂಲ್ ಆಫ್ ಇಂಡಿಯಾ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸಾಧುಗೋನಹಳ್ಳಿ ಗ್ರಾಮದ ಮಂಜು ಅವರ ಪುತ್ರಿಯಾದ ಮನಸ್ವಿನಿ ನಿನ್ನೆ ತೀವ್ರವಾದ ಜ್ವರದಿಂದ ಬಳಲುತ್ತಿರುವುದನ್ನು ನೋಡಿದ ಪೋಷಕರು,ಕೂಡಲೇ ಪಟ್ಟಣದ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೊಲಂಬಿಯಾ ಏಷಿಯಾ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು ಆದರೆ ಮನಸ್ವಿನಿ ಸಂಜೆ 5 ಗಂಟೆ ಸಮಯದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ.ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ ವಿವಿಗೆ 3 ಸ್ಟಾರ್ ಮನ್ನಣೆ

Published

on

ಸುದ್ದಿದಿನ,ದಾವಣಗೆರೆ : ರಾಜ್ಯ ಉನ್ನತ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ ವತಿಯಿಂದ ನಡೆದ ಶಿಕ್ಷಣ ಗುಣಮಟ್ಟದ ಮೌಲ್ಯ ಪ್ರಮಾಣೀಕರಣದಲ್ಲಿ ದಾವಣಗೆರೆ ವಿಶ್ವ ವಿದ್ಯಾಲಯವು 3 ಸ್ಟಾರ್ ಮನ್ನಣೆಯನ್ನು ಹಾಗೂ ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 11 ನೇ ಸ್ಥಾನ ಪಡೆದಿದೆ. ಹೊಸ ವಿಶ್ವವಿದ್ಯಾಲಯಗಳ ಪೈಕಿ ಅತ್ಯುತ್ತಮ ಸಾಧನೆ ಮಾಡಿದ ವಿವಿ ಗೌರವಕ್ಕೂ ಪಾತ್ರವಾಗಿದೆ.

ವಿವಿಯ ಈ ಸಾಧನೆಗೆ ಕಾರಣವಾದ ಭೋದಕ ಮತ್ತು ಬೋಧಕೇತರ ಸಿಬ್ಬಂದಿ, ಆಡಳಿತ ಮಂಡಳಿ, ಸಿಂಡಿಕೇಟ್ ಸದಸ್ಯರಿಗೆ ವಿವಿ ಕುಲಪತಿ ಪ್ರೊ. ವಿ.ಹಲಸೆ, ಕುಲಸಚಿವವ ಪ್ರೊ. ಬಸವರಾಜ ಬಣಕಾರ ಹಾಗೂ ಪ್ರೊ. ಗಾಯತ್ರಿ ದೇವರಾಜ ಅಭಿನಂದಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ರೋಹಿಣಿ ಮುಂದ್ರ ರವರ ‘ದಿ 1% ಕ್ಲಬ್’ ಪುಸ್ತಕ ಲೋಕಾರ್ಪಣೆ

Published

on

ರೋಹಿಣಿ ಮುಂದ್ರ ಅವರ ಪುಸ್ತಕ “ದಿ 1% ಕ್ಲಬ್” ಬೆಂಗಳೂರಿನಲ್ಲಿ ಇಂದು ಅನಾವರಣಗೊಂಡಿತು. ಅತ್ಯುತ್ತಮ ಭಾಷಣಕಾರ್ತಿಯಾಗಿ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ವಿಶೇಷ ವಿಚಾರ ಸಂಕಿರಣಗಳ ಮೂಲಕ ಪ್ರಖ್ಯಾತಿಯಾಗಿರುವ ‘ರೋಹಿಣಿ ಮುಂಡ್ರಾ’ ತನ್ನ ಮೊದಲ ಪುಸ್ತಕ “ದಿ 1% ಕ್ಲಬ್” ಅನ್ನು ಬೆಂಗಳೂರಿನ ಹೋಟೆಲ್ ರಾಯಲ್ ಆರ್ಕಿಡ್ಸ್ ನಲ್ಲಿ ಬಿಡುಗಡೆ ಮಾಡಿದರು. ಈ ಮೂಲಕ ಉದಯೋನ್ಮುಖ ಲೇಖಕಿಯಾಗಿ ಹೊರಹೊಮ್ಮಿದ್ದು, ಇದು ಇವರ ಸಾಧನೆಯ ಮತ್ತೊಂದು ಗರಿಯಾಗಿ ಸೇರ್ಪಡೆಯಾಗಿದೆ.

ರೋಹಿಣಿ ಮುಂದ್ರ ರವರ ಪುಸ್ತಕವನ್ನು ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕಾರ್ಯಕರ್ತ ಡಾ.ಅಕ್ಕೈ ಪದ್ಮಶಾಲಿ ಅನಾವರಣಗೊಳಿಸಿದರು ಮತ್ತು ಈ ಸಮಾರಂಭದಲ್ಲಿ ಶ್ರೀ. ಕರುಣಾ ವಿಜಯಕುಮಾರ್ ಜೈನ್, (ಭಾರತೀಯ ಅಂತರರಾಷ್ಟ್ರೀಯ ಕ್ರಿಕೆಟಿಗ) ರವರು ರೋಹಿಣಿ ಮುಂದ್ರ ಅವರ ಪುಸ್ತಕ ಮತ್ತು ಅವರು ನಡೆದುಬಂದ ದಾರಿಯ ಕುರಿತು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಕೆಪಿಸಿಸಿಯ ಅತ್ಯುತ್ತಮ ಶಿಕ್ಷಣ ತಜ್ಞ ಮತ್ತು ಪ್ರಧಾನ ಕಾರ್ಯದರ್ಶಿ ಅಗಾ ಸುಲ್ತಾನ್ ಸಹ ಈ ಪುಸ್ತಕ ಬಿಡುಗಡೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಡಾ.ಅಕ್ಕೈ ಪದ್ಮಶಾಲಿಯವರು ರೋಹಿಣಿ ರವರ ಈ ಪ್ರಯತ್ನವನ್ನು ಶ್ಲಾಘಿಸಿದರು.
ಆರಂಭಿಕ ಹಂತಗಳಲ್ಲಿನ ತನ್ನ ವೈಫಲ್ಯಗಳನ್ನು ಅನುಭವಗಳಾಗಿ ಪರಿವರ್ತಿಸಿ ಓದುಗರಿಗೆ ಅವರ ವೃತ್ತಿಜೀವನವನ್ನು ರೂಪಿಸಕೊಳ್ಳಲು ಪ್ರೇರಣೆ ನೀಡುವಂತಹ ಬರಹಗಳನ್ನು ಈ ಪುಸ್ತಕದಲ್ಲಿ ಬರೆದಿದ್ದಾರೆ ಎಂದು ನುಡಿದರು.

ಈ ಸಮಾರಂಭದಲ್ಲಿ ಅವರು ತಮ್ಮ ಆರ್ ಎಂ ಫೌಂಡೇಶನ್ ಅನ್ನು ಉದ್ಘಾಟಿಸಿದರು. ತನ್ನ ಆರ್‌ಎಂ ಫೌಂಡೇಶನ್ ಸಮಾಜದ ದೀನ ದಲಿತರಿಗಾಗಿ ಕೆಲಸ ಮಾಡುತ್ತದೆ ಎಂದು ಅವರು ಅಧಿಕೃತವಾಗಿ ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಒಟ್ಟು ಆದಾಯದ 40% ಆರ್‌ಎಂ ಫೌಂಡೇಶನ್‌ಗೆ ದೇಣಿಗೆ ನೀಡುವುದಾಗಿ ಅವರು ಘೋಷಿಸಿದರು.

ರೋಹಿಣಿ ತನ್ನ ಕುಟುಂಬ ಮತ್ತು ತಂಡದ ಸದಸ್ಯರನ್ನು ನೆನಪಿಸಿಕೊಳ್ಳುತ್ತಾ ಪೋಷಕರಿಗೆ ವಿಶೇಷ ಧನ್ಯವಾದಗಳನ್ನು ಈ ಸಮಾರಂಭದ ಮೂಲಕ ತಿಳಿಸಿದರು.ಒಂದು ಒಳ್ಳೆಯ ಪುಸ್ತಕ 100 ಸ್ನೇಹಿತರಿಗೆ ಸಮಾನವಾಗಿರುತ್ತದೆ ಎಂದು ಈ ಸಂದರ್ಭದಲ್ಲಿ ನುಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending