Connect with us

ದಿನದ ಸುದ್ದಿ

ಹಿಮೋಫಿಲಿಯಾ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವುದಕ್ಕೋಸ್ಕರ ಬಂದಿದ್ದೇನೆ : ನಟ ಚೇತನ್

Published

on

ಸುದ್ದಿದಿನ,ದಾವಣಗೆರೆ: ಹಿಮೋಫಿಲಿಯಾಕ್ಕೆ ತುತ್ತಾಗಿರುವ ಮಕ್ಕಳಲ್ಲಿ  ಆತ್ಮವಿಶ್ವಾಸ ತುಂಬುವುದಕ್ಕೋಸ್ಕರವೆಂದೇ ನಾನು ಇಲ್ಲಿಗೆ ಬಂದಿದ್ದೇನೆ ಎಂದು ನಟ ಚೇತನ್‌ ಹೇಳಿದರು.

ನಗರದ ನಿಜಲಿಂಗಪ್ಪ ಬಡಾವಣೆಯ ಹಿಮೋಫಿಲಿಯಾ ಸೊಸೈಟಿಯಲ್ಲಿ ವಿಶ್ವ ಹಿಮೋಫಿಲಿಯಾ ದಿನಾಚರಣೆ ಅಂಗವಾಗಿ ನಡೆದ ಸಮಾರಂಭವನ್ನು ಹಿಮೋಫಿಲಿಯಾ ಮಕ್ಕಳ ಜೊತೆ ಬಲೂನ್‌ ಹಾರಿ ಬಿಡುವುದರ ಮೂಲಕ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.

ಸಿನಿಮಾ ರಂಗದೊಂದಿಗೆ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ನಾನು ಹಿಮೋಫಿಲಿಯಾ ಜತೆ ದೇವದಾಸಿ ಪದ್ದತಿ ವಿರುದ್ಧ ಹೋರಾಟ ಮಾಡುತ್ತಿದ್ದೇನೆ. ಅವರಲ್ಲಿಯೂ ಜಾಗೃತಿ ಮೂಡಿಸಲು ಶ್ರಮಿಸುತ್ತಿದ್ದೇನೆ. ಇನ್ನು ಸರಕಾರ ಮತ್ತು ಇತರೆ ರಾಜಕೀಯ ಪಕ್ಷಗಳು ಹಿಮೋಫಿಲಿಯಾದ ರೋಗಿಗಳ ಬಗ್ಗೆ ಗಮನ ಹರಿಸಿ ಸಹಾಯ ಮಾಡುವುದರ ಜತೆ ಈ ರೋಗಿಗಳ ಬಗ್ಗೆ ಚಿಂತನೆ ನಡೆಸಬೇಕು ಎಂದು ಮನವಿ ಮಾಡಿದರು.

ಔಷಧಿ ತೆಗೆದುಕೋಳ್ಳಲು ಜನಸಾಮಾನ್ಯರಿಗೆ ಬಲುಕಷ್ಟ

ವಿಜ್ಞಾನ ಮುಂದುವರೆದಿದ್ದು, ಈ ಕಾಯಿಲೆಗೆ ಔಷಧಿ ಕಂಡುಹಿಡಿಯಲಾಗಿದೆ. ಆದರೆ ಈ ಔಷಧಿಗಳ ಬೆಲೆ ತುಂಬಾ ದುಬಾರಿಯಾಗಿದೆ. ಆದ್ದರಿಂದ ಮಧ್ಯಮ ಮತ್ತು ಬಡಕುಟುಂಬದ ಜನರು ಇಷ್ಟು ಹಣ ಹೊಂದಿಸುವುದು ಕಷ್ಟವಾಗಿದೆ. ಮಾನವೀಯತೆ ನೆಲೆಯಲ್ಲಿ ನಿಂತು ನಾವು ರೋಗಿಗಳನ್ನು ನೋಡಬೇಕಿದೆ. ಕಷ್ಟದಲ್ಲಿರುವವರ ಪರವಾಗಿ ಎಲ್ಲರು ಸಹಾಯಹಸ್ತ ಚಾಚಬೇಕು. ಈ ನಿಟ್ಟಿನಲ್ಲಿ ಮಾಧ್ಯಮಗಳು ಇನ್ನೂ ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ. ಸರಕಾರಗಳು ಕೂಡ ಇಂಥಹ ಸಾಮಾಜಿಕ ಸೇವಾ ಕಾರ್ಯವನ್ನು ಹೆಚ್ಚಾಗಿ ಮಾಡಬೇಕಾದ ಅಗತ್ಯವಿದೆ ಎಂದರು. ಇನ್ನು ಹಿಮೋಫಿಲಿಯಾ ಬಾಧಿತರೊಂದಿಗೆ ಕೆಲ ಸಮಯ ವಿನಿಯೋಗಿಸಿದ ನಟ ಚೇತನ್‌ ರೋಗಿಗಳಿಗೆ ಆತ್ಮಸ್ಥೈರ್ಯ ತುಂಬಿದರು.

ಖ್ಯಾತ ವೈದ್ಯ ಸುರೇಶ್‌ ಹನಗವಾಡಿ ಮಾತನಾಡಿ, ಏ.17ಕ್ಕೆ ವಿಶ್ವ ಹಿಮೊಫಿಲಿಯಾ ದಿನಾಚರಣೆ ಇದ್ದು, ಇದರ ನಿಮಿತ್ತ ಸಾರ್ವಜನಿಕರ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿಶ್ವ ಹಿಮೊಫಿಲಿಯಾ ಫೆಡರೇಷನ್‌ನ್ನು  1963ರಲ್ಲಿ ಕೆನಡಾ ದೇಶದ ಮಾಂಟ್ರಿಯಲ್‌ನಲ್ಲಿ  ವ್ಯಾಪಾರಿ ಫ್ರಾಂಕ್‌ ಶಾನ್‌ ಬೆಲ್‌ ಹುಟ್ಟು ಹಾಕಿದ್ದು, ಆ ನಿಮಿತ್ತ ಈ ದಿನಾಚರಣೆ ಹಮ್ಮಿಕೊಳ್ಳಲಾಗಿದೆ.

ಈ ಕಾಯಿಲೆ 10,000 ಜನರಲ್ಲಿ ಒಬ್ಬರಿಗೆ ಬರಲಿದ್ದು, ರಕ್ತದಲ್ಲಿ ಪ್ರೋಟಿನ್‌ಗಳು ಕಡಿಮೆಯಾದಾಗ ರಕ್ತಸ್ರಾವ ಆಗುತ್ತದೆ. ಈ ಕಾಯಿಲೆ ಜೀವನ ಪರ್ಯಂತ ಇರುತ್ತದೆ. ಇಂಜೆಕ್ಷನ್‌ ಮೂಲಕ ಪ್ರೋಟಿನ್‌ಗಳನ್ನು ಕೊಡುವ ಮುಖಾಂತರ ಮಾತ್ರ ಇದನ್ನು ನಿಯಂತ್ರಿಸಬಹುದಾಗಿದೆ. ಆದರೆ ಈ ಇಂಜೆಕ್ಷನ್‌ ಹೆಚ್ಚು ಬೆಲೆವುಳ್ಳದಾಗಿದ್ದು, ನಮ್ಮ ಸಂಸ್ಥೆಯಲ್ಲಿ ಉಚಿತವಾಗಿ ಸಿಗುತ್ತದೆ.

ದಾವಣಗೆರೆ ಜಿಲ್ಲೆಯಲ್ಲಿ 126 ರೋಗಿಗಳು

27ವರ್ಷದಿಂದ ಹಿಮೋಫಿಲಿಯಾ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ದೇಶದಲ್ಲಿ 1 ಲಕ್ಷಕ್ಕೂ ಹೆಚ್ಚು ಜನ ಈ ರೋಗಕ್ಕೆ ತುತ್ತಾಗಿದ್ದಾರೆ. ದಾವಣಗೆರೆಯಲ್ಲಿ 126 ಹಿಮೋಫಿಲಿಯಾ ರೋಗಿಗಳಿದ್ದು, ರಾಜ್ಯದಲ್ಲಿ 6,000 ರೋಗಿಗಳಿದ್ದಾರೆ. ಅದರಲ್ಲಿ 2,000 ರೋಗಿಗಳು ಮಾತ್ರ ನೋಂದಣಿಯಾಗಿದ್ದಾರೆ. ಗುಡ್ಡಗಾಡು ಪ್ರದೇಶ, ಸ್ಲಂ ಸೇರಿದಂತೆ ಇತರೆಡೆ ಈ ಬಗ್ಗೆ ಜಾಗೃತಿ ಇಲ್ಲದ ಕಾರಣ ಇನ್ನೂ 4,000 ರೋಗಿಗಳು ನೋಂದಣಿಯಾಗಿಲ್ಲ.

ಲೋಕಸಭೆಯಲ್ಲಿ ಅಂಗೀಕಾರ: ಇನ್ನು ಶಾಶ್ವತ ವಿಕಲಚೇತನರ ಪಟ್ಟಿಗೆ ಇವರನ್ನು ಸೇರಿಸಲು ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ. ಈ ಹಿಂದೆ ಸರಕಾರ ಹಿಮೋಫಿಲಿಯಾ ಬಂದವರಿಗೆ ಕೀಲು, ಮೂಳೆ ನೋವು ಬಂದ ನಂತರ ಅವರನ್ನು ವಿಕಲಚೇತನರ ಸರ್ಟೀಫಿಕೇಟ್‌ ಕೊಡಲಾಗುತ್ತಿತ್ತು. ಆದರೆ ಈಗ ಆ್ಯಕ್ಟ್ನಲ್ಲಿ ಸೇರಿಸುವುದರಿಂದ ಅವರಿಗೆ ವಿಕಲಚೇತನರ ಪ್ರಮಾಣ ಪತ್ರ ಕೊಡಲಾಗುತ್ತಿದೆ. ಸರಕಾರ, ನಾನಾ ವೈದ್ಯರ ತಂಡ ಈ ರೋಗಿಗಳಿಗೆ ಸಾಕಷ್ಟು ಸಹಾಯ ಮಾಡುತ್ತಿದೆ. ಇನ್ನೂ ಗಾಯಕ ಎಸ್ಪಿ ಬಾಲಸುಬ್ರಹ್ಮಣ್ಯ ನಮ್ಮ ಸಂಸ್ಥೆಗೆ ಮಹಾಪೋಷಕರಾಗಿ, ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಲು ಹಾಡುಗಳನ್ನು ಹೇಳುತ್ತಾರೆ. ಎಂದು ಅಭಿಪ್ರಾಯಿಸಿದರು. ಈ ಸಂದರ್ಭದಲ್ಲಿ  ದಾನಿಗಳಾದ ಕಿರುವಾಡಿ ಗಿರಿಜಮ್ಮ, ಸೊಸೈಟಿ ಅಧ್ಯಕ್ಷ  ಡಾ. ಸುರೇಶ್‌ ಹನಗವಾಡಿ, ಹೈಕೋರ್ಟ್‌ವಕೀಲ ಅನಂತ ನಾಯ್ಕ, ಮೀರಾ ಹನಗವಾಡಿ ಸೇರಿದಂತೆ ಇತರರು ಇದ್ದರು.

ರಷ್ಯಾ ದೊರೆಗೆ ಮತ್ತು ಕ್ಲಿಯೋಪಾತ್ರಗೂ ಇತ್ತು ಹಿಮೋಫಿಲಿಯಾ

ಹಿಮೋಫಿಲಿಯಾ ಬಗ್ಗೆ ನನಗೆ ಚಿಕ್ಕಂದಿನಿಂದಲೂ ಹೆಚ್ಚು ಆಸಕ್ತಿ ಇತ್ತು. ಈ ಕಾಯಿಲೆ ಬಗ್ಗೆ ಇತಿಹಾಸದಲ್ಲಿಯೇ ದಾಖಲೆಗಳಿವೆ. ರಷ್ಯಾ ದೊರೆ ನಿಕೋಸಲ್‌ನ ಎರಡನೇ ಮಗನಿಗೆ ಈ ಖಾಯಿಲೆ ಇತ್ತು. ಈ ಸಂದರ್ಭದಲ್ಲಿ ಆ ರಾಜಮನೆತನದಲ್ಲಿ ನಡೆದ ಬೆಳವಣಿಗೆಗಳು ಮತ್ತು ಅದರ ನಂತರ ನಡೆದ ಸಾಮಾಜಿಕ ಬೆವಳಣಿಗೆಗಳು ನನ್ನ ಕುತೂಹಲಕ್ಕೆ ಕಾರಣವಾಯಿತು ಎಂದು ನಟ ಚೇತನ ಹೇಳಿದರು.

ಸುದ್ದಿಗಾಗಿ ಸುದ್ದಿದಿನ.ಕಾಂ 9986715401

ದಿನದ ಸುದ್ದಿ

CAB ಯಿಂದ ಆಗುವುದೇನು..?

Published

on

  • ಶ್ರೀನಿವಾಸ್ ಕಕ್ಕಿಲಾಯ

ತಾವು ಮತೀಯ ಕಿರುಕುಳಕ್ಕೊಳಗಾಗಿ ಭಾರತಕ್ಕೆ ಓಡಿ ಬಂದಿದ್ದೇವೆ, ನಮಗೆ ಪೌರತ್ವ ಕೊಡಿ ಎಂದು ಕೇಳಿರುವವರು ಕೇವಲ 4044 ಜನರು. ಅವರಿಗಷ್ಟೇ ಈ CAB ನೆರವಾಗಲಿದೆ.
ಇನ್ನು ಅಸ್ಸಾಂನಲ್ಲಿ ಭಾರತೀಯರಲ್ಲ ಎಂದು ಗುರುತಿಸಲಾಗಿರುವವರು 19.1 ಲಕ್ಷ, ಅವರಲ್ಲಿ 15 ಲಕ್ಷ ಹಿಂದೂಗಳು ಮತ್ತು ಆದಿವಾಸಿಗಳು. ಅವರು ಯಾರೂ ಮತೀಯ ಕಿರುಕುಳದ ಕಾರಣಕ್ಕೆ ಇಲ್ಲಿಗೆ ಬಂದವರಲ್ಲ, ಬದಲಿಗೆ ಆರ್ಥಿಕ ಕಾರಣಗಳಿಗಾಗಿ ನುಸುಳಿ ಬಂದವರು.

ಎಲ್ಲಾ ನುಸುಳುಕೋರರನ್ನು ಹೊರಹಾಕುತ್ತೇವೆ ಎಂದು ಆರ್ಭಟಿಸುತ್ತಿದ್ದ ಅಮಿತ್ ಶಾ ತಂದಿರುವ ಈ ಮಸೂದೆ ಈ ನುಸುಳಿ ಬಂದವರಿಗೆ ಪೌರತ್ವ ನೀಡಲಿದೆಯೇ? ನೀಡುವುದಿದ್ದರೆ ಅವರಿಂದ ಮತೀಯ ಕಿರುಕುಳಕ್ಕೊಳಗಾದವರು ಎಂದು ಹೊಸ ಸುಳ್ಳನ್ನು ಹೇಳಿಸುತ್ತದೆಯೇ?

ಈ CAB ಯಿಂದ ಯಾರಿಗೂ ಉಪಕಾರವಿಲ್ಲ, ಎಲ್ಲರಿಗೂ ತೊಂದರೆಯೇ. ಅದಕ್ಕಾಗಿಯೇ ಈಶಾನ್ಯ ರಾಜ್ಯಗಳು ಈಗ ಹೊತ್ತಿ ಉರಿಯುತ್ತಿರುವುದು.
ಭಾಜಪದ ನಾಯಕರಿಗಾಗಲೀ, ಅವರ ಬಾಲಂಗೋಚಿ ಭಕ್ತರಿಗಾಗಲೀ ತಲೆಯಲ್ಲಿರುವುದು ವಿಷ ಮಾತ್ರ, ಅದಕ್ಕಿಂತ ಆಚೆ ಅವರ ಯೋಚನೆಗಳು ಹೋಗುವುದಿಲ್ಲ.

ನೋಟು ರದ್ದತಿ, ಜಿಎಸ್ ಟಿ, 370 ರದ್ದತಿ ಯಂತಹ ವಿನಾಶಕಾರಿ, ದೇಶದ್ರೋಹಿ ನಿರ್ಧಾರಗಳನ್ನು ಇದೇ ಭಕ್ತ ಮಂಡಳಿ ಸಂಭ್ರಮಿಸಿರಲಿಲ್ಲವೇ? ಏನಾಯಿತು? ಅವೆಲ್ಲವೂ ಸಂಪೂರ್ಣ ವಿಫಲವಾಗಿ ದೇಶವನ್ನು ಹಾಳುಗೆಡವಿರುವುದು, ಕೇಂದ್ರದ ಖಜಾನೆಯನ್ನೇ ಖಾಲಿ ಮಾಡಿ ರಾಜ್ಯಗಳಿಗೆ ನೀಡಬೇಕಾದ ತೆರಿಗೆಯ ಹಣವನ್ನೂ ನೀಡಲಾಗದಂತೆ, ಶಾಲಾ ಮಕ್ಕಳ ಪರೀಕ್ಷೆಗಳನ್ನು ನಡೆಸುವುದಕ್ಕೂ ಹಣವಿಲ್ಲದಂತೆ ಪ್ರಪಾತಕ್ಕೆ ತಳ್ಳಿರುವುದು ಕಾಣುತ್ತಿಲ್ಲವೇ?

ಭಕ್ತರನ್ನು ಬಿಟ್ಟು ಬಿಡಿ, ಚರ್ಚೆಗೆ ನಿಲ್ಲಬೇಡಿ. ನಮ್ಮ ಅಮೂಲ್ಯ ಸಮಯ ಏನಿದ್ದರೂ ನಮ್ಮವರಿಗೆ ತಿಳಿಸಿ ಹೇಳುವುದಕ್ಕೆ, ಇನ್ನೂ ಭಕ್ತರ ಪಾಶಕ್ಕೆ ಸಿಲುಕಿಲ್ಲದವರಿಗೆ ತಿಳಿಸಿ ಹೇಳುವುದಕ್ಕೆ ವ್ಯಯಿಸೋಣ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಉಚಿತ ಪರೀಕ್ಷಾಪೂರ್ವ ತರಬೇತಿ

Published

on

ಸುದ್ದಿದಿನ,ದಾವಣಗೆರೆ :ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ (PSI) ಹುದ್ದೆ ಭರ್ತಿಗಾಗಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲಿರುವ ಪರೀಕ್ಷಾರ್ಥಿಗಳಿಗೆ ಉಚಿತ ಪರೀಕ್ಷಾಪೂರ್ವ ತರಬೇತಿಯನ್ನು ಆಯೋಜಿಸಲಾಗಿದೆ.

ಡಿ.16 ರಿಂದ 24 ರವರೆಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಕೊಠಡಿ ಸಂಖ್ಯೆ-51, 2ನೇ ಮಹಡಿ, ಬಿ ಬ್ಲಾಕ್, ಜಿಲ್ಲಾ ಆಡಳಿತ ಭವನ, ಕರೂರು ಇಂಡಸ್ಟ್ರಿಯಲ್ ಏರಿಯಾ, ಪಿ.ಬಿ. ರಸ್ತೆ, ದಾವಣಗೆರೆ ಇಲ್ಲಿ ಉಚಿತ ಪರೀಕ್ಷಾಪೂರ್ವ ತರಬೇತಿಯನ್ನು ಆಯೋಜಿಸಲಾಗಿದ್ದು, ತರಬೇತಿಗೆ ಹಾಜರಾಗಲಿಚ್ಛಿಸುವ ಅಭ್ಯರ್ಥಿಗಳು ಡಿ.16 ರಂದು ಬೆಳಿಗ್ಗೆ 10.30 ಗಂಟೆಗೆ ತಮ್ಮ ಸ್ವಂತ ಖರ್ಚಿನಲ್ಲಿ ತರಬೇತಿಗೆ ಹಾಜರಾಗಬೇಕು.

ಹೆಚ್ಚಿನ ಮಾಹಿತಿಗೆ ದೂ.ಸಂ: 08192-259446 ಸಂಪರ್ಕಿಸಬಹುದೆಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ರವೀಂದ್ರ.ಡಿ ಪ್ರಕಟಣೆ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಹೆಡ್‍ಕಾನ್ಸ್ಟೇಬಲ್ ಹುದ್ದೆಗೆ ‘ಸ್ಪೋಟ್ರ್ಸ್’ ಕೋಟಾದಡಿ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ : ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್(ಸಿಐಎಸ್‍ಎಫ್)ನಲ್ಲಿ 300 ಹೆಡ್‍ಕಾನ್ಸ್‍ಟೇಬಲ್(ಜನರಲ್ ಡ್ಯೂಟಿ) ಹುದ್ದೆಗಳಿಗೆ ಅರ್ಹ ಪುರುಷ/ಮಹಿಳೆಯರಿಂದ ಸ್ಪೋಟ್ರ್ಸ್ ಕೋಟಾದಡಿ ಅರ್ಜಿ ಆಹ್ವಾನಿಸಲಾಗಿದೆ.

ಪಿ.ಯು.ಸಿ ಯಾವುದೇ ವಿಷಯದಲ್ಲಿ ತೇರ್ಗಡೆಯಾದ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ಕ್ರೀಡೆ ಅಥವಾ ಅಥ್ಲೆಟಿಕ್ಸ್‍ನ ಕ್ರೀಡಾಪಟುಗಳು ಅರ್ಜಿ ಸಲ್ಲಿಸಬಹುದು. ಕನಿಷ್ಠ 18 ರಿಂದ ಗರಿಷ್ಠ 23 ವರ್ಷ (02-08-1996 ರಿಂದ 01-08-2001 ರ ಒಳಗೆ ಜನಿಸಿರಬೇಕು) ವಯೋಮಾನ, ಪ. ಜಾತಿ/ ಪ. ಪಂಗಡದವರಿಗೆ 5 ವರ್ಷ ಹಾಗೂ ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

ಅರ್ಹ ಅಭ್ಯರ್ಥಿಗಳು ಆನ್‍ಲೈನ್‍ನಲ್ಲಿ ವೆಬ್‍ಸೈಟ್ https://cisfrectt.in
ನಲ್ಲಿ ಅರ್ಜಿಗಳನ್ನು ಡೌನ್‍ಲೋಡ್ ಮಾಡಿಕೊಂಡು, ಭರ್ತಿಮಾಡಿದ ಅರ್ಜಿಗಳನ್ನು ಡಿ.17 ವೆಬ್‍ಸೈಟ್‍ನಲ್ಲಿ ತಿಳಿಸಿದ ವಿಳಾಸಕ್ಕೆ ಕಳುಹಿಸಿಕೊಡಬೇಕು.

ಹೆಚ್ಚಿನ ಮಾಹಿತಿಗಾಗಿ

ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ದಾವಣಗೆರೆ, ದೂರವಾಣಿ ಸಂಖ್ಯೆ: 08192-259446 ಇಲ್ಲಿಗೆ ಸಂಪರ್ಕಿಸಬಹುದೆಂದು ಉದ್ಯೋಗಾಧಿಕಾರಿ ರವೀಂದ್ರ.ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending