Connect with us

ದಿನದ ಸುದ್ದಿ

ಗೌರಿ-ಗಣೇಶ ಹಬ್ಬಕ್ಕೆ ಶುಭಕೋರಿದ ಎಚ್.ಡಿ.ಕೆ : ವೀಡಿಯೋ ನೋಡಿ

Published

on

ಸುದ್ದಿದಿನ ಡೆಸ್ಕ್ : ನಾಡಿನ ಜನತೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗೌರಿ-ಗಣೇಶ ಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ ಜನತೆಗೆ ಒಂದು ಮನವಿಯನ್ನೂ ಕೂಡ ಮಾಡಿದ್ದಾರೆ. “ನಾವು ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸೋಣ. ಮಣ್ಣಿನ ಗಣಪತಿಯ ಮೂರ್ತಿಗಳನ್ನು ಪ್ರತಿಷ್ಠಾಪಿಸಿ. ಯಾವುದೇ ಕಾರಣಕ್ಕೂ ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ತಯಾರಿಸಿದ ಗಣಪತಿ ಮೂರ್ತಿಯನ್ನು ಬಳಸ ಬೇಡಿ. ಪರಿಸರಕ್ಕೆ ಹಾನಿಯಾಗುವಂತಹ ಕೆಲಸ ಮಾಡಬೇಡಿ ಎಂದು ಸಂದೇಶ ನೀಡಿದ್ದಾರೆ.

ವೀಡಿಯೋ ನೋಡಿ

ದಿನದ ಸುದ್ದಿ

‘ಟಿಪ್ಪು ಪ್ರತಿಮೆ‌’ ಸಂಸತ್ ಭವನದ ಮುಂದೆ ನಿರ್ಮಾಣವಾಗಬೇಕು‌ : ವಾಟಾಳ್ ಒತ್ತಾಯ

Published

on

ಸುದ್ದಿದಿನ,ಮಂಡ್ಯ : ಇದೊಂದು ಅಧ್ಬುತ ಸ್ಥಳ, ಟಿಪ್ಪು ವೀರಾವೇಶದಿಂದ ಹೋರಾಟ ಮಾಡಿದ ಸ್ಥಳ.ಈ ಪ್ರದೇಶವನ್ನು ಈ ಪುರಾತತ್ವ ಇಲಾಖೆ ಪ್ಯಾಕೇಜ್ ರೂಪದಲ್ಲಿ‌ ಅಭಿವೃದ್ದಿ ಪಡಿಸಬೇಕು. ಟಿಪ್ಪು ಪ್ರತಿಮೆ‌ ಸಂಸತ್ ಭವನದ ಮುಂದೆ ನಿರ್ಮಾಣವಾಗಬೇಕು‌ ಇದು ನಮ್ಮ ಒತ್ತಾಯ ಎಂದು ಮಂಡ್ಯದಲ್ಲಿ ವಾಟಾಳ್ ನಾಗರಾಜ್ ಹೇಳಿದರು.

ಟಿಪ್ಪು ಹೆಸರಲ್ಲಿ ಒಂದು ದೊಡ್ಡ ಪ್ರಶಸ್ತಿ ‌ ಜ್ಯಾತಾತೀತರಿಗೆ ನೀಡಲು‌ರಾಜ್ಯ ಸರ್ಕಾರ ನಿರ್ಧರಿಸಬೇಕು. ಆದರೆ ಕಾವೇರಿ ಪ್ರತಿಮೆ ನಿರ್ಮಾಣಕ್ಕೆ ವಾಟಾಳ್ ವಿರೋಧವ್ಯಕ್ತ ಪಡಿಸಿದ್ದು, ನಮಗೆ ಕನ್ನಂಬಾಡಿ ಕಟ್ಟೆಯೇ ಕಾವೇರಿ,ಆದನ್ನ ಬಿಟ್ಟು ಈ ಪ್ರತಿಮೆ ಅವಶ್ಯಕತೆ ಇಲ್ಲ ಎಂದರು.

ಈ ಪ್ರದೇಶದಲ್ಲಿ ಕಾವೇರಿ ಪ್ರತಿಮೆ ನಿರ್ಮಾಣಕ್ಕೆ ಮುಂದಾಗೋವಾಗ ಜಲಾಶಯಕ್ಕೆ ಕಾರಣವಾಗಲಿದೆ. ಈ ಯೋಜನೆಯನ್ನು ಸರ್ಕಾರ ಕೈ ಬಿಡಲು 15 ದಿನಗಳ ಕಾಲಾವಕಾಶ ನೀಡ್ತೇವೆ. ಈ ಯೋಜನೆಯನ್ನು ಕೈಬಿಡೋ ಬಗ್ಗೆ ಸರ್ಕಾರ ನಿರ್ಧಾರ ಪ್ರಕಟಿಸದಿದ್ರೆ‌ ಹೋರಾಟ ಮಾಡ್ತೇವೆ. ಈ ವಿಚಾರವಾಗಿ ಮುಂದಿನ ವಾರ ಕೆ.ಆರ್.ಎಸ್. ಜಲಾಶಯ ಮುಂಭಾಗ ಪ್ರತಿಭಟನೆ ನಡೆಸುತ್ತೇವೆ ಎಂದು ಗುಡುಗಿದರು.

ಉತ್ತರ ಕರ್ನಾಟಕದ ಕಬ್ಬು ಬೆಳೆಗಾರ ಹೋರಾಟಕ್ಕೆ ನಮ್ಮ‌ ಸಂಪೂರ್ಣ ಬೆಂಬಲವಿದೆ.
ಸರ್ಕಾರ ರೈತರ ಸಮಸ್ಯೆ ಬಗೆ ಹರಿಸಲು 15 ದಿನ ಕಾಲಾವಕಾಶ ಕೇಳಿದೆ.15 ದಿನದಲ್ಲಿ ಆ ರೈತರ ಸಮಸ್ಯೆ ಬಗೆ ಹರಿಸದಿದ್ರೆ ಕರ್ನಾಟಕ ಬಂದ್ ಗೆ ಕರೆ ನೀಡುವುದಾಗಿ‌ ವಾಟಾಳ್ ಎಚ್ಚರಿಕೆ ನೀಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Continue Reading

ದಿನದ ಸುದ್ದಿ

ಮೋದಿ ವಿರುದ್ಧ ಹರಿಹಾಯ್ದ ರಾಹುಲ್ ಗಾಂಧಿ; ಕ್ರೈಂ ಥ್ರಿಲ್ಲರ್ ಎಂದು ಆರೋಪ

Published

on

ಸುದ್ದಿದಿನ ದೆಹಲಿ: ಒಂದಿಲ್ಲೊಂದು ವಿವಾದ ಹುಟ್ಟು ಹಾಕುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮೋದಿ ಮೇಲೆ ಹರಿಹಾಯ್ದಿದ್ದು, ಕಳ್ಳನಾಗಿರುವ ಚೌಕಿದಾರ ಹೆಸರಿನ ಕ್ರೈ ಥ್ರಿಲ್ಲರ್ ದೇಶದ ರಾಜಧಾನಿ ದೆಹಲಿಯಲ್ಲಿ ಇದ್ದಾನೆ ಹೇಳಿಕೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ರಾಹುಲ್ ಗಾಂಧಿ ತಮ್ಮ ಟ್ವಿಟರ್ ಖಾತೆಯಲ್ಲಿ ‘ಕ್ರೈ ಥ್ರಿಲ್ಲರ್’ ಎಂದು ಕಿಡಿಕಾರಿದ್ದಾರೆ.

https://twitter.com/RahulGandhi/status/1064720065206108160

ಸಿಬಿಐನ ಮಹಾ ನಿರ್ದೇಶಕರೊಬ್ಬರು ಪ್ರಧಾನಿ ನರೇಂದ್ರ ಮೋದಿ, ರಾಷ್ಟೀಯ ಭದ್ರತಾ ಸಲಹೆಗಾರರು ಮತ್ತು ಕಾನೂನು ಮತ್ತು ಸಂಸದೀಯ ಸಚಿವಾಲಯಗಳ ಮೇಲೆ ಗಂಭೀರವಾದ ಆರೋಪ ಮಾಡಿದ್ದಾರೆ. ಗುಜರಾತಿನಿಂದ ಕರೆತಂದ ಅವರ ಪಾಲುದಾರ ಕೋಟ್ಯಂತರ ರೂಪಾಯಿ ಲೂಟಿ ಮಾಡುತ್ತಿದ್ದಾರೆ. ಅಧಿಕಾರಿಗಳು ಸುಸ್ತು ಹೊಡೆದಿದ್ದಾರೆ. ಭರವಸೆಗಳು ಹುಸಿಯಾಗಿವೆ. ಪ್ರಜಾಪ್ರಭುತ್ವ ಅಪಾಯದಲ್ಲಿ ಸಿಲುಕಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Continue Reading

ದಿನದ ಸುದ್ದಿ

ಇಂದಿನಿಂದ ರಾಜ್ಯದ್ಯಂತ ಹೊಟೇಲ್ ,ಬಾರ್, ಪಬ್ ಗಳಲ್ಲಿ ತಂಬಾಕು ನಿಷೇಧ : ಸಚಿವ ಯು.ಟಿ.ಖಾದರ್

Published

on

ಸುದ್ದಿದಿನ ಡೆಸ್ಕ್ : ರಾಜ್ಯದಲ್ಲಿ ತಂಬಾಕು ನಿಯಂತ್ರಣ ಹಾಗು ಪರಿಸರ ಮಾಲಿನ್ಯ ತಡೆ ಚರ್ಚೆಯಲ್ಲಿ ಅಮೇರಿಕಾದ ಬರಾಕ್ ಒಬಾಮ್ ಜೊತೆ ಇದ್ದ ಆರೋಗ್ಯ ವಿಭಾಗದ ಜನರಲ್ ಕೌನ್ಸಿಲರ್ ರಜೀನಾ ಬೆಂಜಮಿನ್ ಇಂದು ಭಾಗಿಯಾಗಿದ್ದರು. ಅಮೇರಿಕಾದಲ್ಲಿ ಒಬಮಾ‌ ಕೇರ್ ಜಾರಿಗ ತಂದ ಕೀರ್ತಿ ರಜಿನಾ ಅವರದ್ದಾಗಿದೆ ಎಂದು ಸಚಿವ ಯು.ಟಿ. ಖಾದರ್ ಬೆಂಗಳೂರಿನಲ್ಲಿ ಇಂದು ಹೇಳಿದ್ದಾರೆ.

ಇವತ್ತಿನಿಂದ ರಾಜ್ಯದ್ಯಂತ ಹೊಟೇಲ್ ,ಬಾರ್, ಪಬ್ ಗಳಲ್ಲಿ ತಂಬಾಕು ನಿಷೇಧ ಮಾಡಲಾಗಿದೆ.
ಇದುವರೆಗೂ ಬಿಬಿಎಮ್‌ಪಿ ವ್ಯಾಪ್ತಿಯಲ್ಲಿ ಮಾತ್ರ ಜಾರಿಗೆ ಇತ್ತು, ಇನ್ಮುಂದೆ ರಾಜ್ಯದ್ಯಂತ ಎಲ್ಲ ಕಾರ್ಪರೇಷನ್ ಹಾಗು ನಗರಗಳ ವ್ಯಾಪ್ತಿಯಲ್ಲಿ ಜಾರಿಯಾಗಲಿದೆ.ಪೌರಾಡಳಿತ ಇಲಾಖೆಯ ಮೂಲಕ ಆದೇಶ ಜಾರಿ ಮಾಡುತ್ತೇವೆ ಎಂದಿದ್ದಾರೆ.

ನಿಯಮ ಉಲ್ಲಂಘಿಸಿದರೆ ಪಬ್ ಹಾಗು ಬಾರ್ ಗಳ‌ ಲೈಸೆನ್ಸ್ ಕ್ಯಾನ್ಸಲ್ ಮಾಡುತ್ತೇವೆ.
ಅಷ್ಟೇ ಅಲ್ಲ ವಿದೇಶದಿಂದ ತರುವ ತಂಬಾಕು ಹಾಗು ಮದ್ಯದ ಮೇಲೆ ಸುಂಕ ವಿನಾಯಿತಿ ಇದೆ.
ಇಂತಹ ವಿನಾಯಿತಿಯನ್ನು ತೆಗೆದು ಹಾಕುವಂತೆ ಕೇಂದ್ರಕ್ಕೆ ರಾಜ್ಯ ಸರ್ಕಾರ ಪತ್ರ ಬರೆಯಲಿದೆ ಎಂದು ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Continue Reading
Advertisement

Trending