Connect with us

ದಿನದ ಸುದ್ದಿ

ವಿಡಿಯೋ | ಹಾವೇರಿ : ನೆರೆ ಸಂತ್ರಸ್ತರಿಗೆ ನೆರವಾದ ನವಿಲೇಹಾಳು ಗ್ರಾಮಸ್ಥರು

Published

on

ಸುದ್ದಿದಿನ, ಹಾವೇರಿ : ಮಹಾಮಳೆಗೆ ಕರ್ನಾಟಕ ತತ್ತರಿಸಿ ಹೋಗಿದೆ. ಉತ್ತರ ಕರ್ನಾಟಕ ಪ್ರವಾಹಕ್ಕೆ ಸಿಲುಕಿ ಸಾವಿರಾರು ಕೋಟಿ ನಷ್ಟವಾಗಿದೆ. ಜನಜೀವನ ಸಹಜ ಸ್ಥಿತಿಗೆ ಬರಲು ಇನ್ನು ಅದೆಷ್ಟು ದಿನ ಬೇಕೋ? ತಿಳಿಯದು. ಇಂತಹ ಪರಿಸ್ಥಿತಿಯಲ್ಲಿ ಸಂತ್ರಸ್ತರ ನೆರವಿಗೆ ಕರ್ನಾಟಕದ ಜನೆತೆ ಸಹಾಯ ಹಸ್ತ ಚಾಚಿದ್ದಾರೆ.

ಅದರಲ್ಲಿ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನವಿಲೇಹಾಳು ಗ್ರಾಮಸ್ಥರು ನೆರೆ ಹಾವಳಿಗೆ ತುತ್ತಾದ ಹಾವೇರಿ ತಾಲ್ಲೂಕಿನ
ಗೊಡೂರು ಗ್ರಾಮದ ಜನತೆಗೆ ನೆರವಾಗಿದ್ದಾರೆ.

ಆಗಸ್ಟ್ 14 ರ ಮಧ್ಯರಾತ್ರಿ ಗ್ರಾಮಕ್ಕೆ ತಲುಪಿದ ಅವರು, ನವಿಲೇಹಾಳು ಗ್ರಾಮದ ಪರವಾಗಿ ಮೂಲಭೂತ ಅವಶ್ಯಕತೆಯುಳ್ಳ ಸಾಮಗ್ರಿಗಳನ್ನು ನೆರೆ ಸಂತ್ರಸ್ತರಿಗೆ ತಲುಪಿಸಿ ಆ ಗ್ರಾಮದ ಜನತೆಯ ಪ್ರೀತಿಗೆ ಪಾತ್ರರಾಗಿದ್ದಾರೆ.

ನೆರೆ ಸಂತ್ರಸ್ತರಿಗೆ ನೀಡಿದ ಸಾಮಗ್ರಿಗಳು

 1. ಅಕ್ಕಿ – 60 ಚೀಲ
 2. ಉಪ್ಪು – 3 ಚೀಲ
 3. ಬೆಲ್ಲ – 1 ಚೀಲ
 4. ತೆಂಗಿನ ಕಾಯಿ – 400
 5. ಬಿಸ್ಕೇಟ್ – 1 ಬಾಕ್ಸ್
 6. ಎಣ್ಣೆ – 1 ಬಾಕ್ಸ್
 7. ಸೀರೆ – 100
 8. ಪಂಚೆ – 300
 9. ಟವೇಲ್ – 200
 10. ನೈಟಿ – 70
 11. ಬೆಡ್ ಶೀಟ್ – 54
 12. ನ್ಯಾಪ್ಕಿನ್ – 1 ಬಾಕ್ಸ್
 13. ಚಿಕ್ಕಮಕ್ಕಳ ಬಟ್ಟೆ – 100+100
 14. ಔಷಧಿ – 1 ಬಾಕ್ಸ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಬೆಳೆ ವಿಮೆ ಪಾವತಿಸಲು ಅವಧಿ ವಿಸ್ತರಣೆ

Published

on

ಸುದ್ದಿದಿನ,ದಾವಣಗೆರೆ : 2020-21 ನೇ ಸಾಲಿನ ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಮುಂಗಾರು ಮತ್ತು ಹಿಂಗಾರು ಅವಧಿಗಳಿಗೆ ವಿಮೆ ಕಟ್ಟಲು ಜುಲೈ 10 ರವರೆಗೆ ಅವಧಿ ವಿಸ್ತರಿಸಲಾಗಿದೆ.

ಈ ಹಿಂದೆ ಬೆಳೆ ವಿಮೆ ಕಟ್ಟಲು ಜೂನ್ 30 ಕಡೆಯ ದಿನವೆಂದು ನಿಗದಿಪಡಿಸಲಾಗಿದ್ದು, ಇದೀಗ ಈ ಅವಧಿಯನ್ನು ಜು.10 ರವರೆಗೆ ವಿಸ್ತರಿಸಲಾಗಿದೆ. ದಾವಣಗೆರೆ ಜಿಲ್ಲೆಯ ತಾಲ್ಲೂಕುಗಳಲ್ಲಿನ ಪ್ರಮುಖ ತೋಟಗಾರಿಕೆ ಬೆಳೆಗಳಾದ ಅಡಿಕೆ, ಮಾವು, ದಾಳಿಂಬೆ, ವೀಳ್ಯದೆಲೆ ಮತ್ತು ಕಾಳು ಮೆಣಸು ಬೆಳೆಗಳಿಗೆ ವಿಮಾ ಯೋಜನೆ ಜಾರಿಗೊಳಿಸಲಾಗಿದೆ.

ರೈತರು ತಮ್ಮ ಹತ್ತಿರದ ಬ್ಯಾಂಕ್‍ಗಳಲ್ಲಿ ಹಾಗು ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ವಿಮೆ ಕಟ್ಟಲು ಅವಕಾಶವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಅಥವಾ ಸಂಬಂಧಪಟ್ಟ ಹೋಬಳಿ ಅಧಿಕಾರಿಗಳನ್ನು ಸಂರ್ಪಕಿಸಬೇಕೆಂದು ತೋಟಗಾರಿಕೆ ಉಪನಿರ್ದೇಶಕರಾದ ಲಕ್ಷ್ಮೀಕಾಂತ್ ಬೊಮ್ಮನ್ನಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ : ಶಿಷ್ಟಾಚಾರದಂತೆ ಅಂತ್ಯಕ್ರಿಯೆ ನಡೆಸದೇ ಇರುವ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್

Published

on

ಸುದ್ದಿದಿನ,ದಾವಣಗೆರೆ : ಚನ್ನಗಿರಿ ತಾಲ್ಲೂಕಿನ ಕೋವಿಡ್ ರೋಗಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಜೂ.17 ರಂದು ಮೃತಪಟ್ಟಿದ್ದು ರೋಗಿಯ ಅಂತ್ಯಕ್ರಿಯೆಯನ್ನು ವೈದ್ಯಕೀಯ ಶಿಷ್ಟಾಚಾರದಂತೆ ನಿರ್ವಹಿಸದೇ ಇರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದ್ದು, ಇದಕ್ಕೆ ಸಂಬಂಧಿಸಿದ ವೈದ್ಯರು/ಅಧಿಕಾರಿಗಳಿಗೆ ಇಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ.

ಕೋವಿಡ್ 19 ಸಾಂಕ್ರಾಮಿಕ ರೋಗದ ನಿಯಂತ್ರಣ ಹಿನ್ನೆಲೆ ಅಧಿಕಾರಿ/ನೌಕರರಿಗೆ ನಿರ್ದೇಶನ ನೀಡಲಾಗಿರುತ್ತದೆ ಹಾಗೂ ಜಿಲ್ಲಾಡಳಿತದಿಂದಲೂ ಸಹ ಸಾಕಷ್ಟು ಮಾರ್ಗದರ್ಶನ ನೀಡಲಾಗಿರುತ್ತದೆ. ಕೊರೊನಾ ರೋಗಾಣುವಿನಿಂದ ವ್ಯಕ್ತಿ ಮೃತಪಟ್ಟ ಪ್ರಕರಣದಲ್ಲಿ ಅವರ ಅಂತ್ಯಕ್ರಿಯೆಯನ್ನು ಹೇಗೆ ನಡೆಸಬೇಕೆಂಬ ಕುರಿತು ಸರ್ಕಾರ ಎಸ್‍ಓಪಿಯನ್ನು ಹೊರಡಿಸಿದ್ದು ಅದರಂತೆ ಕ್ರಮ ಕೈಗೊಳ್ಳಬೇಕಾಗಿರುತ್ತದೆ. ಆದರೆ ಜೂ.17 ರಂದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟ ಚನ್ನಗಿರಿ ತಾಲ್ಲೂಕಿನ ಕೋವಿಡ್ ರೋಗಿಯಾದ ವೃದ್ದೆಯ ಮೃತದೇಹವನ್ನು ವೈದ್ಯಕೀಯ ಶಿಷ್ಟಾಚಾರದಂತೆ ನಿರ್ವಹಿಸಿರುವುದಿಲ್ಲವೆಂದು ಮಾಧ್ಯಮಗಳಲ್ಲಿ ವರದಿಯಾಗಿರುತ್ತದೆ.

ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿದ 56 ವರ್ಷದ ವೃದ್ದೆಯ ಮೃತದೇಹವನ್ನು ಚನ್ನಗಿರಿಯ ಹೆದ್ದಾರಿ ಬಳಿ ಇರುವ ವೀರಶೈವ ರುದ್ರಭೂಮಿಯಲ್ಲಿ ಜೆಸಿಬಿಯಲ್ಲಿ ತೆಗೆದುಕೊಂಡು ಹೋಗಿ ಕಸ ಬಿಸಾಡುವಂತೆ ಬಿಸಾಡಿ ಶವಸಂಸ್ಕಾರ ಮಾಡಿದ ತಾಲ್ಲೂಕು ಆಡಳಿತ ಎಂದು ವರದಿಯಾಗಿದೆ.

ಈ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಈ ಬಗ್ಗೆ ಸಮಗ್ರವಾಗಿ ಪರಿಶೀಲಿಸಿ ಒಂದು ವೇಳೆ ನಿಜವಾಗಿದ್ದಲ್ಲಿ ಕಠಿಣ ಕ್ರಮ ಜರುಗಿಸುವಂತೆ ಸೂಚಿಸಿರುವ ಪ್ರಯುಕ್ತ ಜಿಲ್ಲಾಧಿಕಾರಿಗಳು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚನ್ನಗಿರಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪ್ರಭು, ತಾಲ್ಲೂಕು ವೈದ್ಯಾಧಿಕಾರಿ ಡಾ.ಗಿರಿ, ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಪ್ರಕಾಶ್, ತಹಶೀಲ್ದಾರ್ ಪುಟ್ಟರಾಜುಗೌಡ, ಕೋವಿಡ್ ನೋಡಲ್ ಅಧಿಕಾರಿ ಡಾ.ಮುರಳಿ ಇವರಿಗೆ ಕಾರಣ ಕೇಳಿ ನೋಟಿಸ್ ನೀಡಿ, ಜು.3 ರೊಳಗೆ ಲಿಖಿತ ವಿವರಣೆಯನ್ನು ಖುದ್ದು ಹಾಜರಾಗಿ ನೀಡುವಂತೆ ಸೂಚಿಸಿದ್ದಾರೆ. ವಿವರಣೆ ನೀಡುವುದು ತಪ್ಪಿದಲ್ಲಿ ವಿವರಣೆ ಏನೂ ಇಲ್ಲವೆಂದು ತಿಳಿದು ನಿಯಮಾನುಸಾರ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆಯಲ್ಲಿ‌ 325 ಕೊರೋನಾ ಕೇಸ್, 266 ಮಂದಿ ಗುಣಮುಖ

Published

on

ಸುದ್ದಿದಿನ,ದಾವಣಗೆರೆ : ಜಿಲ್ಲೆಯಲ್ಲಿ ಇಂದು 16 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಒಬ್ಬರು ಸಂಪೂರ್ಣರಾಗಿ ಗುಣಮುಖರಾಗಿ ಜಿಲ್ಲಾ ನಿಗದಿತ ಕೋವಿಡ್ ಆಸ್ಪತ್ರೆಯಿಂದ ಇಂದು ಬಿಡುಗಡೆಗೊಳಿಸಲಾಗಿದೆ.

ರೋಗಿ ಸಂಖ್ಯೆ 15374 45 ವರ್ಷದ ಪುರುಷ ರೋಗಿ ಸಂಖ್ಯೆ 8064 ರ ಸಂಪರ್ಕಿತರು. ರೋಗಿ ಸಂಖ್ಯೆ 15375 35 ವರ್ಷದ ಪುರುಷ ರೋಗಿ ಸಂಖ್ಯೆ 10386 ರ ಸಂಪರ್ಕಿತರು. ರೋಗಿ ಸಂಖ್ಯೆ 15376 66 ವರ್ಷದ ವೃದ್ದ ಶೀತ ಜ್ವರದ(ಐಎಲ್‍ಐ) ಹಿನ್ನೆಲೆ ಹೊಂದಿದ್ದಾರೆ.

ರೋಗಿ ಸಂಖ್ಯೆ 15377 28 ವರ್ಷದ ಪುರುಷ, ರೋಗಿ ಸಂಖ್ಯೆ 15378 30 ವರ್ಷದ ಪುರುಷ ಇವರುಗಳ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ರೋಗಿ ಸಂಖ್ಯೆ 15379 01 ವರ್ಷದ ಮಗು ರೋಗಿ ಸಂಖ್ಯೆ 9892 ರ ಸಂಪರ್ಕಿತರು. ರೋಗಿ ಸಂಖ್ಯೆ 15380 33 ವರ್ಷದ ಪುರುಷ ಶೀತ ಜ್ವರದ(ಐಎಲ್‍ಐ) ಹಿನ್ನೆಲೆ ಹೊಂದಿದ್ದಾರೆ.

ರೋಗಿ ಸಂಖ್ಯೆ 15381 40 ವರ್ಷದ ಪುರುಷ, ರೋಗಿ ಸಂಖ್ಯೆ 15382 11 ವರ್ಷದ ಬಾಲಕಿ, ರೋಗಿ ಸಂಖ್ಯೆ 15383 31 ವರ್ಷದ ಪುರುಷ ಇವರುಗಳ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

ರೋಗಿಸಂಖ್ಯೆ 15384 58 ವರ್ಷದ ವೃದ್ದೆ ರೋಗಿ ಸಂಖ್ಯೆ 14403 ರ ಸಂಪರ್ಕ, ರೋಗಿ ಸಂಖ್ಯೆ 15385 58 ವರ್ಷದ ಪುರುಷ ರೋಗಿ ಸಂಖ್ಯೆ 9892 ರ ಸಂಪರ್ಕಿತರು.

ರೋಗಿ ಸಂಖ್ಯೆ 15386 65 ವರ್ಷದ ವೃದ್ದ, ರೋಗಿ ಸಂಖ್ಯೆ 15387 49 ವರ್ಷದ ಪುರುಷ, ರೋಗಿ ಸಂಖ್ಯೆ 15388 58 ವರ್ಷದ ಪುರುಷ, ರೋಗಿ ಸಂಖ್ಯೆ 15389 50 ವರ್ಷದ ಮಹಿಳೆ ಇವರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

ರೋಗಿ ಸಂಖ್ಯೆ 10390 ಜಿಲ್ಲಾ ನಿಗದಿತ ಕೋವಿಡ್ ಆಸ್ಪತ್ರೆಯಿಂದ ಸಂಪೂರ್ಣರಾಗಿ ಇಂದು ಬಿಡುಗಡೆ ಹೊಂದಿದ್ದಾರೆ.

ಒಟ್ಟು 325 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 266 ಜನರು ಸಂಪೂರ್ಣ ಗುಣಮುಖರಾಗಿ ಬಿಡುಗಡೆ ಹೊಂದಿರುತ್ತಾರೆ. 08 ಸಾವು ಸಂಭವಿಸಿದ್ದು ಪ್ರಸ್ತುತ 51 ಸಕ್ರಿಯ ಪ್ರಕರಗಣಗಳು ಇವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending