ದಿನದ ಸುದ್ದಿ
ರಾಮದುರ್ಗ : ಕೈಮಗ್ಗ ನೇಕಾರರ ಪ್ರತಿಭಟನೆ

ಸುದ್ದಿದಿನ ಡೆಸ್ಕ್ : ಕಳೆದ ಒಂದು ತಿಂಗಳುಗಳಿಂದ ತಮ್ಮಗೆ ನೇಯಲು ಕಚ್ಚಾ ಮಾಲು ಪೊರೈಕೆ ಯಾಗಿಲ್ಲವೆಂದು ಆಗ್ರಹಿಸಿ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಶಿವಪೇಠ ಗ್ರಾಮದ ಕೆ.ಎಚ್.ಡಿ.ಸಿ ನೇಕಾರರು ಕೆಲಕಾಲ ಕೆ.ಎಚ್.ಡಿ.ಸಿ ಕಚೇರಿಯ ಮುಂದೆ ಪ್ರತಿಭಟನೆ ಮಾಡಿದ ಘಟನೆ ಸೋಮವಾರ ನಡೆದಿದೆ.
ಘಟನೆ ಹಿನ್ನೆಲೆ
ಕೈಮಗ್ಗ ನೇಕಾರರು ತಮ್ಮ ಮನವಿಯನ್ನು ಸಲ್ಲಿಸಲು ಶಿವಪೇಠ ಗ್ರಾಮದ ಕೆ.ಎಚ್.ಡಿ.ಸಿ ಹೋದಾಗ, ತಮ್ಮ ಮನವಿಯನ್ನು ತಾಲೂಕಾ ಅಧಿಕಾರಿಗಳಿಗೆ ನೀಡಬೇಕೆಂಬ ಮಹದಾಸೇಯಿಂದ, ತಾಲೂಕಾ ಅಧಿಕಾರಿಗಳನ್ನು ಕರೆಸುವಂತೆ ಶಿವಪೇಠ ಕೆ.ಎಚ್.ಡಿ.ಸಿ ಅಧಿಕಾರಿಗಳಲ್ಲಿ ವಿನಂತಿಸಿಕೊಂಡರು. ಶಿವಪೇಠ ಶಾಖೆಯ ಅಧಿಕಾರಿ ಮಾಟುರವರು ತಾಲೂಕಾ ಅಧಿಕಾರಿ ಜವಾಹರ ಹುಬ್ಬಳ್ಳಿ ಅವರನ್ನು ಪೋನ್ ಮೂಲಕ ಸಂಪರ್ಕಿಸಿದಾಗ ಅವರು ಆಫೀಸನ್ನು ಮುಚ್ಚಿಕೊಂಡು ಬರುವಂತೆ ಹೇಳಿದ್ದರ ಹಿನ್ನೆಲೆಯಲ್ಲಿ ಅದಕ್ಕೆ ಬೆಸತ್ತ ನೇಕಾರರು ದಿಢೀರ್ನೆ ಶಿವಪೇಠ ಗ್ರಾಮದ ಕೆ.ಎಚ್.ಡಿ.ಸಿ ಕಚೇರಿಯ ಸೆಟರ್ಸ ಎಳೆದು ಕೆಲಕಾಲ ಪ್ರತಿಭಟನೆ ಮಾಡಿದರು.
ಈ ಸುದ್ದಿ ತಿಳಿದ ತಕ್ಷಣವೇ ಸುರೇಬಾನ ಪೊಲೀಸ್ ಉಪ ಠಾಣೆಯ ಹವಾಲ್ದಾರ ಬಿ.ಕೆ.ರಂಗಣ್ಣವರ ಪ್ರತಿಭಟನೆ ನಡೆಸಿದ ಶಿವಪೇಠ ಗ್ರಾಮದ ಕೆ.ಎಚ್.ಡಿ.ಸಿ ನೇಕಾರರತ್ತ ಆಗಮಿಸಿ, ಕೆ.ಎಚ್.ಡಿ.ಸಿ ಹಿರಿಯ ಅಧಿಕಾರಿಗಳೊಂಗಿ ಚರ್ಚಿಸಿ, ನಿಮ್ಮ ಸಮಸ್ಯೆಯನ್ನು ನಾಳೆ ಮಂಗಳವಾರ ಬಗೆಹರಿಸುವುದಾಗಿ ನಿಮ್ಮ ರಾಮದುರ್ಗ ಕಚೇರಿಯ ಅಧಿಕಾರಿಗಳು ಹೇಳಿದ್ದಾರೆ. ಅದಕ್ಕೆ ತಾವು ತಮ್ಮ ಈ ಪ್ರತಿಭಟನೆಯನ್ನು ನಿಲ್ಲಿಸಿ ಎಂದು ವಿನಂತಿಸಿದಾಗ ನೇಕರರು ತಮ್ಮ ಮನವಿಯನ್ನು ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿಯೇ ಶಿವಪೇಠ ಕೆ.ಎಚ್.ಡಿ.ಸಿ ಅಧಿಕಾರಿಗಳಿಗೆ ಸಲ್ಲಿಸಿದರು.
ನಮ್ಮ ಈ ಸಮಸ್ಯೆ ನಾಳೆ ಬಗೆಹರಿಯದಿದ್ದರೆ ತಮ್ಮ ಕಚೇರಿಯ ಮುಂದೇ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಸುರೇಬಾನ ಪೊಲೀಸ್ ಉಪ ಠಾಣೆಯ ಹವಾಲ್ದಾರ ಬಿ.ಕೆ.ರಂಗಣ್ಣವರ ಅವರಿಗೆ ಎಚ್ಚರಿದರು.
ಈ ಪ್ರತಿಭಟನೆಯಲ್ಲಿ ಕೈಮಗ್ಗ ನೇಕಾರರ ಸಂಘದ ಜಿಲ್ಲಾ ಅಧ್ಯಕ್ಷ ಸುರೇಶ ಗಣಮುಖಿ, ನಾಗಪ್ಪ ದೇವನಾಳ, ಬಸಪ್ಪ ಕೊಣ್ಣೂರ, ಮಲ್ಲಪ್ಪ ಕಾತರಕಿ, ಬಸಪ್ಪ ಇಟಗಿ, ಶಂಕ್ರಪ್ಪ ದೇವನಾಳ, ಈರತಯ್ಯ ಹಿರೇಮಠ, ಈರಪ್ಪ ದೇವನಾಳ, ಸಿದ್ದಪ್ಪ ಕೊಣ್ಣೂರ, ಈರಪ್ಪ ಗಣಮುಖಿ, ಈರಪ್ಪ ಬಿಳಗಿ, ಶಂಕ್ರಪ್ಪ ಗೌಡರ, ಮಾಗುಂಡಪ್ಪ ಆಲೂರ, ಶಂಕ್ರಪ್ಪ ಚನ್ನಪ್ಪನವರ, ಜಗಧೀಶ ಗಣಮುಖಿ ಮತ್ತಿತರರು ಇದ್ದರು.
ಒಂದುವಾರದಲ್ಲಿ ನೇಕಾರರ ಇಗಿರುವ ಸಮಸ್ಯೆಯನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನಾನೇ ನಾಳೆ ಮಂಗಳವಾರ ಖುದ್ದಾಗಿ ಬೆಟಿನೀಡಿ ಕೈಮಗ್ಗ ನೇಕಾರರ ಸಮಸ್ಯೆಯನ್ನು ಆಲಿಸುತ್ತೇನೆ ಎಂದು ಕೆ.ಎಚ್.ಡಿ.ಸಿ ರಾಮದುರ್ಗ ತಾಲೂಕ್ ಅಧಿಕಾರಿ ಭರವಸೆ ನೀಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401
ದಿನದ ಸುದ್ದಿ
ಸಿದ್ದರಾಮಯ್ಯರ ದೇವಸ್ಥಾನ ಕಟ್ಟಿಸುತ್ತೇವೆ : ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ

ಸುದ್ದಿದಿನ, ಬಾಗಲಕೋಟೆ : ಸಿದ್ದರಾಮಯ್ಯ ಅವರು ನಮ್ಮ ನಾಲ್ಕು ದಶಕಗಳ ಕಾಲದ ಬೇಡಿಕೆಯನ್ನು ಈಡೇರಿಸಿದರೆ ಅವರ ದೇವಸ್ಥಾನವನ್ನು ಕಟ್ಟುತ್ತೇವೆ ಎಂದು ಬೋವಿ ಸಮಾಜದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.
ಗುರುವಾರ ಬದಾಮಿಯಲ್ಲಿ ನಡೆದ ಸಿದ್ದರಾಮೇಶ್ವೇರ ಜಯಂತಿಯ ವೇಳೆ ಮಾತನಾಡಿದ ಅವರು,ಸರ್ಕಾರಿ ಸುಮಾರು ನೋರು ಕುಟುಂಬಗಳಿದ್ದು, ಅವರನ್ನು ಆ ಸ್ಥಳದಿಂದ ತೆರವುಗೊಳಿಸಲಾಗುತ್ತಿದೆ. ಈ ವಿಷಯಕ್ಕೆ ಸಂಭಂದಿಸಿದಂತೆ ಅದೇ ಜಾಗದಲ್ಲಿ ಅವರಿಗೆ ಸೂರುಗಳನ್ನು ಕಲ್ಪಿಸಿ ಕೊಟ್ಟರೆ ಸಿದ್ದರಾಮಯ್ಯ ಅವರ ದೇವಸ್ಥಾನವನ್ನು ಬಾದಾಮಿಯಲ್ಲಿ ಕಟ್ಟಿಸುತ್ತೇವೆ ಎಂದು ಸ್ವಾಮೀಜಿ ತಿಳಿಸಿದರು.
ಬಾದಾಮಿಯಲ್ಲಿ ಇಂದು ಆಯೋಜಿಸಿದ್ದ ಬಾಗಲಕೋಟೆ ಜಿಲ್ಲಾ ಮಟ್ಟದ ಗಂಗಾ ಮತಸ್ಥ ಅಂಬಿಗರ ಸಮಾವೇಶದಲ್ಲಿ ಭಾಗವಹಿಸಿದೆ. pic.twitter.com/E60w4vypc5
— Siddaramaiah (@siddaramaiah) February 21, 2019
ಸುದ್ದಿದಿನ.ಕಾಂ|ವಾಟ್ಸಾಪ್|9986715401
ದಿನದ ಸುದ್ದಿ
ಕೆ.ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ : ಲೋಗೋ ವಿನ್ಯಾಸಕ್ಕೆ ಹಣ ವ್ಯಯ

ಒಂದೆಡೆ ಯುವಕರು ಕೆಲಸವಿಲ್ಲದೆ ಕಂಗಾಲಾಗುತ್ತಿದ್ದಾರೆ. ಸಂಶೋಧಕರಿಗೆ ಸರ್ಕಾರ ನೀಡುವ ಫೆಲೋಷಿಪ್ ಗಳನ್ನೇ ಮುಂದುವರೆಸಿಕೊಂಡು ಹೋಗುತ್ತಾ ಉದ್ಯೋಗಕ್ಕಾಗಿ ಯುವಕರು ಹಪಹಪಿಸುತ್ತಿದ್ದಾರೆ.
ಹಿಂದಿನ ಸಿದ್ಧರಾಮಯ್ಯನವರ ಸರ್ಕಾರ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಮತ್ತು ಸಂಶೋಧನಾ ಕೇಂದ್ರ ಸ್ಥಾಪಿಸಲು ಬರೋಬ್ಬರಿ 5 ಕೋಟಿ ಹಣವನ್ನು ಬಿಡುಗಡೆಗೊಳಿಸಿತ್ತು. ಆದರೆ, ಇಲ್ಲಿಯವರೆವಿಗೂ ಬಿಡುಗಡೆಗೊಳಿಸಿದ ಹಣ ಇನ್ನೂ ಪ್ರತಿಷ್ಠಾನಕ್ಕೆ ಸಮರ್ಪಕವಾಗಿ ದಕ್ಕಿಲ್ಲ. ಈ ಸಂದರ್ಭದಲ್ಲಿ ತೇಜಸ್ವಿ ಪ್ರತಿಷ್ಠಾನದ ಅಧ್ಯಕ್ಷರು,ಸದಸ್ಯರುಗಳು, ಸಹಾಯಕ ನಿರ್ದೇಶಕ ಕನ್ನಡ ಸಂಸ್ಕೃತಿ ಇಲಾಖೆ, ಚಿಕ್ಕಮಗಳೂರು ಇವರುಗಳು ಪ್ರತಿಷ್ಠಾನದ ಲೋಗೋ ಮಾಡಿಕೊಡಲು ಸೃಜನಶೀಲ ವಿನ್ಯಾಸಕರು, ಕಲಾವಿದರಿಗೆ ‘ ಲೋಗೋ ಸ್ಪರ್ಧೆ’ ಯನ್ನು ಏರ್ಪಡಿಸಿದ್ದಾರೆ.
ಹೀಗೆ ಸಾರ್ವಜನಿಕರ ಹಣವನ್ನು ಹರಾಜಿಗಿಡುವುದು ದುರದುಷ್ಟಕರ ಸಂಗತಿ.ಕನ್ನಡ ಸಂಸ್ಕೃತಿ ಇಲಾಖೆ ಯ ಬಳಿಯೇ ಹಲವಾರು ಜನ ಕಲಾವಿದರು, ಲೋಗೋ ವಿನ್ಯಾಸಕರನ್ನು ಸರ್ಕಾರ ಸಂಬಳ ನೀಡಿ ನೇಮಿಸಿಕೊಂಡಿದೆ. ಅವರ ಬಳಿ ಲೋಗೋವನ್ನು ನಿರ್ಮಿಸಿಕೊಳ್ಳಬಹುದಿತ್ತು. ಅದನ್ನು ಬಿಟ್ಟು ಪ್ರತಿಷ್ಠಾನ ಹೀಗೆ ತೇಜಸ್ವಿಯವರ ಹೆಸರಿನಲ್ಲಿ ಸರಿಯಾದ ಕಾರ್ಯಕ್ರಮಗಳನ್ನು ರೂಪಿಸಲಾಗದೆ. ಒಂದು ಸಣ್ಣ ಲೋಗೋ ನಿರ್ಮಿಸಲು ಪ್ರತಿಷ್ಠಾನದ ಹಣವನ್ನು ಹೀಗೆ ಸ್ಪರ್ಧೆಯ ನೆಪವೊಡ್ಡಿ ಹರಾಜಿಗಿಡುವುದು ಸರಿಯಲ್ಲ.
– ಕನ್ನಡಪ್ರೇಮಿ ಓಂಕಾರಸ್ವಾಮಿ
ಸುದ್ದಿದಿನ.ಕಾಂ|ವಾಟ್ಸಾಪ್|9986715401
ದಿನದ ಸುದ್ದಿ
‘ಡಿ ಬಾಸ್’ ಕ್ಲಿಕ್ಕಿಸಿರೋ ‘ವನ್ಯಜೀವಿಗಳ ಫೋಟೋ’ ಪ್ರದರ್ಶನ ಮತ್ತು ಮಾರಾಟ

ಸುದ್ದಿದಿನ ಡೆಸ್ಕ್ : ವೈಲ್ಡ್ ಲೈಫ್ ಫೋಟೋಗ್ರಫಿಯಲ್ಲಿ ವಿಷೇಶವಾದ ಆಸಕ್ತಿ ಹೊಂದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ಲಿಕ್ಕಿಸಿರುವ ವನ್ಯಜೀವಿಗಳ ಛಾಯಾಚಿತ್ರ ಪ್ರದರ್ಶನವು ಮಾರ್ಚ್1ರಿಂದ3ರವರೆಗೆ ಮೈಸೂರಿನ ದಿ ಪ್ರಿನ್ಸ್ ಹೋಟೆಲ್ ನಲ್ಲಿ ನಡೆಯಲಿದೆ.
‘ಲೈಫ್ ಆನ್ ದಿ ವೈಲ್ಡ್ ಸೈಡ್’ ಎಂಬ ಹೆಸರಿನಡಿ ದರ್ಶನ್ ಅರಣ್ಯದಲ್ಲಿ ಕ್ಲಿಕ್ಕಿಸಿರುವ ಫೋಟೋಗಳ ಪ್ರದರ್ಶನವನ್ನು ಆಯೋಜಿಸಲಾಗಿದೆ. ಈ ಫೋಟೋಗಳ ಮಾರಾಟವಿದ್ದು,ಮಾರಾಟದಿಂದ ಬಂದ ಹಣವನ್ನು ವನ್ಯಜೀವಿ ಸಂರಕ್ಷಣಾ ನಿಧಿಗೆಬಳಕೆಯಾಗಲಿದೆಯಂತೆ.
ಒಂದು ಛಾಯಾಚಿತ್ರಕ್ಕೆ ಎರಡರಿಂದ ಎರಡೂವರೆ ಸಾವಿರ ನಿಗದಿ ಮಾಡಲಾಗಿದ್ದು, ಎರಡೂವರೆ ಸಾವಿರ ಕೊಟ್ಟರೆ ದರ್ಶನ್ ಆಟೋಗ್ರಾಫ್ ಇರುವ ಚಿತ್ರ ಲಭ್ಯವಾಗಲಿದೆ. ಅರಣ್ಯ ಇಲಾಖೆ ಸಹಯೋಗದಲ್ಲಿ ಛಾಯಾಚಿತ್ರ ಪ್ರದರ್ಶನ ಆಯೋಜನೆಗೊಳ್ಳುತ್ತಿದೆ.
ಈ ಕಾರ್ಯಕ್ರಮವು ಅರಣ್ಯ ಇಲಾಖೆಯ ಸಹಯೋಗದಲ್ಲಿ ನಡೆಯುತಲಿದ್ದು ದರ್ಶನ್ ಈ ಬಗ್ಗೆ ಟ್ವಿಟರ್ ನಲ್ಲಿ ಮಾಹಿತಿ ಹಂಚಿ ಕೊಂಡಿದ್ದಾರೆ.
ಈ ಬಗ್ಗೆ ದರ್ಶನ್ ಅವರು ಟ್ವಿಟ್ಟರಿನಲ್ಲಿ ತಾವು ಸಫಾರಿಗೆ ತೆರಳಿದ್ದಾಗ ಪ್ರಾಣಿಗಳ ಫೋಟೋ ಕ್ಲಿಕ್ಕಿಸುತ್ತಿರುವ ವಿಡಿಯೋವನ್ನು ಹಾಕುವುದರ ಮೂಲಕ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ.
Darshan Thoogudeepa Showcases
"Life on the Wild Side"
Exhibition proceeds earmarked for various conservation causes by Karnataka Forest Department
Exhibition Date :- 1st , 2nd and 3rd of March 2019
Venue : Hotel Sandesh the Prince, Mysuru pic.twitter.com/wOZlm519bo— Darshan Thoogudeepa (@dasadarshan) February 20, 2019
Darshan Thoogudeepa Showcases
"Life on the Wild Side"
A photographic expression of some of the finest wildlife moments captured by none other than
Challenging Star Darshan
Collector's pieces priced… https://t.co/wU8K9eLayo
— Darshan Thoogudeepa (@dasadarshan) February 20, 2019
Darshan Thoogudeepa Showcases
"Life on the Wild Side"
Exhibition proceeds earmarked for various conservation causes by Karnataka Forest Department
Exhibition Date :- 1st , 2nd and 3rd of March 2019 Time – 10am To 6m
Venue : Hotel Sandesh the Prince, Mysuru pic.twitter.com/oqmk9uRHoZ— Darshan Thoogudeepa (@dasadarshan) February 20, 2019
ಸುದ್ದಿದಿನ.ಕಾಂ|ವಾಟ್ಸಾಪ್|998671540
-
ರಾಜಕೀಯ5 days ago
ಸಿದ್ದರಾಮಯ್ಯ ಈಗಲೂ ನನ್ನ ಮುಖ್ಯಮಂತ್ರಿ ; ಕರ್ನಾಟಕದ ಬೊಬ್ಬುಲಿ ಪುಲಿ : ರಮೇಶ್ ಕುಮಾರ್
-
ದಿನದ ಸುದ್ದಿ6 days ago
‘ಕಾಶ್ಮೀರ ಸಮಸ್ಯೆ’ ಇತ್ಯರ್ಥಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಿದವರು ‘ಇಂದಿರಾಗಾಂಧಿ ಮತ್ತು ವಾಜಪೇಯಿ’..!
-
ರಾಜಕೀಯ6 days ago
ಯೋಧರ ಸಂತಾಪ ಸಭೆಯನ್ನು ಸ್ವಾರ್ಥ ರಾಜಕೀಯಕ್ಕೆ ಬಳಸುವ ದೇಶದ್ರೋಹಿಗಳಿಗೆ ಧಿಕ್ಕಾರ : ಪ್ರಕಾಶ್ ರೈ ಆಕ್ರೋಶ
-
ಬಹಿರಂಗ3 days ago
ಜಾತಿ ಹೃದಯ ವೈಶಾಲ್ಯತೆಯನ್ನು ಹಾಳುಮಾಡಿದೆ : ಡಾ.ಬಿ.ಆರ್.ಅಂಬೇಡ್ಕರ್ ಓದಿ ಈ ಬರಹ
-
ಬಹಿರಂಗ7 days ago
ನೀಚತನ ಕ್ರೌರ್ಯಕ್ಕಿಂತ ಕೆಟ್ಟದ್ದು : ಮರೆಯದೆ ಓದಿರಿ ಡಾ. ಬಿ.ಆರ್.ಅಂಬೇಡ್ಕರ್ ಈ ಬರಹ
-
ದಿನದ ಸುದ್ದಿ7 days ago
ಪ್ರಕಾಶ್ ರೈ,ಯಶ್,ದರ್ಶನ್ ರಿಂದ ಹುತ್ಮಾತ ಯೋಧರಿಗೆ ನಮನ
-
ಲೈಫ್ ಸ್ಟೈಲ್4 days ago
‘ತುಳಸಿ’ ಮನೆ ಮದ್ದು..!
-
ಬಹಿರಂಗ5 days ago
‘ಉಪೇಕ್ಷಾ ಮನೋವೃತ್ತಿ’, ಹಿಂದೂಗಳಿಗಿರುವ ಮಹಾರೋಗ : ಡಾ.ಬಿ.ಆರ್. ಅಂಬೇಡ್ಕರ್ ಈ ಲೇಖನ ಓದಿ