Connect with us

ದಿನದ ಸುದ್ದಿ

ಗಾಂಧಿ ಜಯಂತಿ | ನಗರಗೆರೆಯಲ್ಲಿ ಗ್ರಾಮ ಪಂಚಾಯತ್ ಅದಾಲತ್ ಗೆ ಚಾಲನೆ

Published

on

ಸುದ್ದಿದಿನ, ಮದ್ದೂರು : ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಅಂಗವಾಗಿ ಇಂದು ಮದ್ದೂರು ತಾಲ್ಲೂಕಿನ ನಗರಕೆರೆ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಪಂಚಾಯತ್ ಅದಾಲತ್ ಹಾಗೂ ಸಾರ್ವಜನಿಕರ ತಕರಾರು ವ್ಯಾಜ್ಯಗಳ ರಾಜಿ ಇತ್ಯರ್ಥ ಕಾರ್ಯಕ್ರಮದ ಚಾಲನೆ ನೀಡಲಾಯಿತು.ಗ್ರಾಮ ಪಂಚಾಯಿತಿಯ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಹಾತ್ಮರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀ ಹುಲಿಗೆರೆಪುರ ಮಹದೇವು ಮಾತನಾಡಿ ಗ್ರಾಮ ಪಂಚಾಯಿತಿಯ ವತಿಯಿಂದ ಗ್ರಾಮ ಪಂಚಾಯಿತಿ ಅದಾಲತನ್ನು ಏರ್ಪಡಿಸಿರುವುದಾಗಿ ತಿಳಿಸಿದರು.

ರೈತರ ಹೊಲ ಗದ್ದೆಗಳಿಗೆ ರಸ್ತೆ ಕಲ್ಪಿಸುವ ವ್ಯವಸ್ಥೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ನಿವೇಶನ ಮನೆ ಕಟ್ಟಡಗಳ ವಿಚಾರವಾಗಿ ತಕರಾರು ವ್ಯಾಜ್ಯಗಳಿದ್ದು ಇತ್ಯರ್ಥವಾಗದೆ ನೆನೆಗುದಿಗೆ ಬಿದ್ದಿರುವ ಇನ್ನೂ ಇತ್ಯರ್ಥವಾಗದ ಸಮಸ್ಯೆಗಳನ್ನು ಆಯಾ ಗ್ರಾಮದಲ್ಲೇ ಗ್ರಾಮ ಪಂಚಾಯಿತಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ಸದಸ್ಯರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಒಳಗೊಂಡಂತೆ ಮತ್ತು ಆಯಾ ಗ್ರಾಮದ ಹಿರಿಯರು ಯಜಮಾನರುಗಳ ಸಲಹೆ ಪಡೆದು ಉಭಯ ಪಾರ್ಟಿಗಳ ತಕರಾರುಗಳನ್ನು ಕೇಳಿ ಗ್ರಾಮದಲ್ಲಿ ರಾಜೀ ಸಂಧಾನ ಮಾಡಲು ಅದಾಲತ್ ನಡೆಸುತ್ತಿರುವುದಾಗಿ ತಿಳಿಸಿದರು.

ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಹಾಗೂ ಪರಿಷ್ಟ ಜಾತಿ ಪರಿಷ್ಟ ಪಂಗಡದ ಜನಾಂಗದವರಿಗೆ ಗ್ರಾಮ ಪಂಚಾಯಿತಿ ವತಿಯಿಂದ ನೀಡಲಾಗುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ
ಉಪಾಧ್ಯಕ್ಷರಾದ ರೇಣುಕಮ್ಮ ಸದಸ್ಯರಾದ ಶಿವಚರಣ್ ರುದ್ರಯ್ಯ ಸಿದ್ದರಾಜು ಗೌರಮ್ಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದೇವಕುಮಾರ್ ಸಂತೋಷ್ ಕುಮಾರ್ ಕಾರ್ಯದರ್ಶಿ ಪ್ರದೀಪ್ ಕುಮಾರ್ ಸಿಬ್ಬಂದಿಗಳು ಹಾಗೂ ಗ್ರಾಮದ ಮುಖಂಡರಾದ ಶ್ರೀ ನ.ಲಿ. ಕೃಷ್ಣ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ

‘ಸುದ್ದಿ ಸಂವಿಧಾನ’ ಕೃತಿ ಬಿಡುಗಡೆ ವೆಬಿನಾರ್ ಮಾಧ್ಯಮಕ್ಕೆ ಹೊಸ ಆಯಾಮ ಅಗತ್ಯ: ವೀರೇಂದ್ರ ಪಿ.ಎಂ

Published

on

ಸುದ್ದಿದಿನ,ಉಜಿರೆ: ಆಧುನಿಕ ಸುದ್ದಿಮಾಧ್ಯಮ ವಲಯವು ವಾಚಾಳಿತನದ ಶಾಪಕ್ಕೀಡಾಗಿದ್ದು, ಇದರ ನಕಾರಾತ್ಮಕ ಪರಿಣಾಮಗಳನ್ನು ತಡೆದು ಹೊಸ ಆಯಾಮ ನೀಡುವ ವೃತ್ತಿಪರ ಬದ್ಧತೆಯ ಅನಿವಾರ್ಯತೆ ಇದೆ ಎಂದು ಪತ್ರಕರ್ತ, ತುಂಗಭದ್ರಾ ನ್ಯೂಸ್ ಪೋರ್ಟಲ್ ಸಂಪಾದಕ ವೀರೇಂದ್ರ ಪಿ.ಎಂ ಅಭಿಪ್ರಾಯಪಟ್ಟರು.

ಉಜಿರೆಯ ಎಸ್.ಡಿ.ಎಂ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮಲ್ಟಿಮೀಡಿಯಾ ಸ್ಟುಡಿಯೋದಲ್ಲಿ ಆಯೋಜಿತವಾದ ಸಹಾಯಕ ಪ್ರಾಧ್ಯಾಪಕ ಡಾ.ಎನ್.ಕೆ.ಪದ್ಮನಾಭ ಅವರ ‘ಸುದ್ದಿ ಸಂವಿಧಾನ’ ಕೃತಿ ಬಿಡುಗಡೆ ವೆಬಿನಾರ್‌ನಲ್ಲಿ ಕೃತಿಯ ಕುರಿತು ಅವರು ಮಾತನಾಡಿದರು.

ಯಾವಾಗ ಒಬ್ಬ ಪತ್ರಕರ್ತ ವಾಚಾಳಿತನಕ್ಕೆ ಬೀಳುತ್ತಾನೋ ಆಗ ಮಾಧ್ಯಮ ನಿರೀಕ್ಷಿಸುವ ವೃತ್ತಿಬದ್ಧತೆಯಿಂದನುಣುಚಿಕೊಳ್ಳಲಾರಂಭಿಸುತ್ತಾನೆ. ಮಾತಿನ ಮಂಟಪ ಕಟ್ಟುವುದರಿಂದ ಯಾವುದೇ ಪ್ರಯೋಜನವಿಲ್ಲ. ಸುದ್ದಿಲೋಕಕ್ಕೆ ಬೇಕಾದದ್ದು ವಾಚಾಳಿತನವಲ್ಲ. ಸುದ್ದಿಮಾಧ್ಯಮವು ಸಂಯಮಪೂರ್ಣ ಚಿಂತನೆ ಮತ್ತು ಅದಕ್ಕೆ ಅನುಗುಣವಾದ ಕಾರ್ಯನಿರ್ವಹಣೆಯನ್ನು ವರದಿಗಾರರು, ಸಂಪಾದಕರಿಂದ ನಿರೀಕ್ಷಿಸುತ್ತದೆ ಎಂದು ಹೇಳಿದರು.

ವರದಿಗಾರನಾದವನು ಕಣ್ಣು ಮತ್ತು ಕಿವಿಯನ್ನು ಸದಾ ಕಾಲ ಜಾಗೃತ ಸ್ಥಿತಿಯಲ್ಲಿಡಬೇಕು. ಆಗ ಮಾತ್ರ ವಿವಿಧ ವಿಚಾರಗಳನ್ನು ಭಿನ್ನವಾಗಿ ಗ್ರಹಿಸಿಕೊಳ್ಳಲು ಸಾಧ್ಯವಾಗುತ್ತದೆ. ಸುದ್ದಿಗೆ ಕಲೆ ಮತ್ತು ವಿಜ್ಞಾನದ ಆಯಾಮವೂ ಇದೆ ಎಂಬುದನ್ನು ಗ್ರಹಿಸಿಕೊಂಡ ವರದಿಗಾರರು ಸುದ್ದಿ ಮಾಧ್ಯಮದಲ್ಲಿ ಭಿನ್ನವಾಗಿ ಗುರುತಿಸಿಕೊಳ್ಳಲು ಸಾಧ್ಯ.

ಈ ಬಗೆಯ ಗ್ರಹಿಕೆಯು ವೃತ್ತಿಪರ ಯಶಸ್ಸನ್ನು ಕಂಡುಕೊಳ್ಳುವುದಕ್ಕೆ ಪೂರಕವಾಗುವುದಲ್ಲದೇ ಬರಹ-ಚಿಂತನೆಯ ಮೂಲಕ ಸಾಮಾಜಿಕ ಕೊಡುಗೆಯನ್ನೂ ನೀಡಬಹುದು. ಈ ಅಂಶವನ್ನು ಡಾ.ಎನ್.ಕೆ.ಪದ್ಮನಾಭ ಅವರ ‘ಸುದ್ದಿ ಸಂವಿಧಾನ’ ಕೃತಿಯು ಆಪ್ತವಾಗಿ ಕಟ್ಟಿಕೊಟ್ಟಿದೆ ಎಂದರು.

ವಿವಿಧ ಬಗೆಯ ಸಮಸ್ಯೆಗಳನ್ನು ಗ್ರಹಿಸುವ ವಿಧಾನ ಸುದ್ದಿ ಬರವಣಿಗೆಯಲ್ಲಿ ಬಹಳ ಮುಖ್ಯವಾದುದು. ಈ ಗ್ರಹಿಕೆಯ ನೆರವಿನೊಂದಿಗೇ ಜನರಿಗೆ ಮಾಹಿತಿ ನೀಡಿ ಅವರೊಳಗೆ ಜಾಗೃತಿ ಮೂಡಿಸಬಹುದಾದ ಸುದ್ದಿಸಂಸ್ಕೃತಿಯನ್ನು ಹುಟ್ಟುಹಾಕಬಹುದು. ಈ ಆಶಾವಾದದೊಂದಿಗೇ ಎಲ್ಲ ಸುದ್ದಿ ಮಾಧ್ಯಮ ವೃತ್ತಿಪರರು ಕಾರ್ಯನಿರ್ವಹಿಸಬೇಕಾಗುತ್ತದೆ ಎಂದು ನುಡಿದರು.

ಸುದ್ದಿ ಸಂವಿಧಾನ’ ಕೃತಿಯನ್ನು ಬಿಡುಗಡೆಗೊಳಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರೊ.ಭಾಸ್ಕರ ಹೆಗಡೆ ಮಾತನಾಡಿದರು. ಬಹುಮಾಧ್ಯಮಗಳು ತರಹೇವಾರಿ ಮಾಹಿತಿಯನ್ನು ನೀಡುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಯಾವುದು ನಿಜವಾದ ಸುದ್ದಿ ಎಂಬುದನ್ನು ಮನಗಾಣಿಸುವಲ್ಲಿ ಎನ್.ಕೆ.ಪದ್ಮನಾಭ ಅವರ ಕೃತಿ ಯಶಸ್ವಿಯಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೃತಿಯ ಲೇಖಕ ಡಾ.ಎನ್.ಕೆ.ಪದ್ಮನಾಭ ಪರಂಪರೆಯ ಚಲನಶೀಲತೆಯನ್ನು ಮುನ್ನಡೆಸುವ ಪಾತ್ರ ಸುದ್ದಿಯಿಂದ ನಿರ್ವಹಿಸಲ್ಪಡಬೇಕಾದ ಅಗತ್ಯವಿದೆ ಎಂದರು. ಸುದ್ದಿಮಾಧ್ಯಮವನ್ನು ಪ್ರಜಾಪ್ರಭುತ್ವದ ಕಾವಲುನಾಯಿ ಎಂದು ಹೇಳಲಾಗುತ್ತದೆ. ಆದರೆ, ಈ ಕಾವಲು ನಾಯಿಯ ಸ್ಥಾನವನ್ನು ಧನದಾಹದ ಸಂಕುಚಿತತೆಯನ್ನೇ ಗುಣಲಕ್ಷಣವನ್ನಾಗಿಸಿಕೊಂಡ ರಾಕ್ಷಸಪ್ರಾಣಿ ಆಕ್ರಮಿಸಿಕೊಂಡಿದೆ. ಇದರ ಹಿಡಿತದಿಂದ ಈ ಸ್ಥಾನವನ್ನು ವಿಮುಕ್ತಗೊಳಿಸಿ ಕಾವಲುನಾಯಿಯ ಪಾತ್ರ ನಿರಂತರವಾಗಬೇಕಿದೆ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಕೃತಿಯ ಮುಖಪುಟ ರಚಿಸಿದ ಸುಷ್ಮಾ ಉಪ್ಪಿನ್ ಇಸಳೂರು, ಗ್ರಾಫಿಕ್ ಸ್ಪರ್ಶ ನೀಡಿದ ಕೃಷ್ಣಪ್ರಶಾಂತ್, ಸಹಾಯಕ ಪ್ರಾಧ್ಯಾಪಕರಾದ ಸುನೀಲ್ ಹೆಗ್ಡೆ, ಡಾ.ಹಂಪೀಶ್, ಗೀತಾ ವಸಂತ್ ಇಜಿಮಾನ್ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕೋಗಲೂರು ಗ್ರಾಮದಲ್ಲಿ ಕೊರೋನ ಆತಂಕ : ಹೊರ ರಾಜ್ಯದಿಂದ ಬಂದವರನ್ನು ಕ್ವಾರಂಟೈನ್ ಮಾಡಲಾಗುವುದು : ತಹಶಿಲ್ದಾರ್ ಪುಟ್ಟರಾಜಗೌಡ

Published

on

ಸುದ್ದಿದಿನ,ಚನ್ನಗಿರಿ/ಕೋಗಲೂರು : ಗ್ರಾಮದಲ್ಲಿ‌ 65 ವರ್ಷ ವಯಸ್ಸಿನ ಮಹಿಳೆಯೊಬ್ಬರಿಗೆ ಕೊರೋನ ಸೋಂಕು‌ ದೃಡ ಪಟ್ಟಿದ್ದು. ಸೋಂಕಿತ ವ್ಯಕ್ತಿಯು ಮದುವೆ ಸಮಾರಂಭಗಳಲ್ಲಿ ಹಾಗೂ ಗ್ರಾಮದಲ್ಲಿ‌ ಸಾಕಷ್ಟು ಓಡಾಡಿರುವುದನ್ನು ಕಂಡ ಗ್ರಾಮಸ್ಥರು ಅತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಬೆಂಗಳೂರು ಹಾಗೂ ವಿವಿದ ಕಡೆಗೆ ಕೆಲಸಕ್ಕಾಗಿ ಹರಸಿ ಹೋಗಿದ್ದವರೆಲ್ಲರೂ ಸಹ ತಂತಮ್ಮ ಗ್ರಾಮಗಳಿಗೆ ವಾಪಸ್ಸಾಗುತ್ತಿರುವುದನ್ನು ನೋಡಿದರೆ ಮತ್ತಷ್ಟು ಗ್ರಾಮಸ್ಥರಲ್ಲಿ ಭಯದ ವಾತವರಣ ಸೃಷ್ಠಿಯಾಗುತ್ತಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತ ಪಡಿಸಿದ್ದಾರೆ.

ಹೊರಗಡೆಯಿಂದ ಬರುತ್ತಿರುವವರ ಮೇಲೆ ಗ್ರಾಪಂ ಆಡಳಿತ ಹಾಗೂ ಅಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಈ ವಿಚಾರದ ಮುನ್ನೆಚ್ಚರಿಕೆಯಿಂದ ಗ್ರಾಮದಲ್ಲಿ‌ ಗ್ರಾಮಪಂಚಾಯಿತಿ ಆಡಳಿತವು ದ್ವನಿವರ್ಧಕ ಮೂಲಕ‌  ಜನತೆರಿಗೆ ಮಾಸ್ಕ್ ಧರಸಿ ಅಂತರ ಕಾಯ್ದುಕೊಳ್ಳಲು ಸಂದೇಶ ಸಾರುತಿದ್ದರೂ ಸಹ ಕೆಲವರು ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರುಗಳಿಗೆ ಮಾಹಿತಿಯನ್ನು ನೀಡದೆ ಗುಪ್ತವಾಗಿ ಮನೆಗಳನ್ನು ಸೇರಿಕೊಳ್ಳುತ್ತಿದ್ದಾರೆ ಎಂದು ಗ್ರಾಮದ ಜನತೆ ಹೇಳಿದ್ದಾರೆ. ‌

ಕೋಗಲೂರು ಗ್ರಾಮದಲ್ಲಿ ಸೀಲ್ ಡೌನ್

ಕೊರೋನ ಬಗ್ಗೆ ಭಯ ಬೇಡ ಎಚ್ಚರಿಕೆಯಿಂದ ಇರಿ : ತಹಸೀಲ್ದಾರ್ ಪುಟ್ಟರಾಜಗೌಡ

ಇತ್ತೀಚೆಗೆ ಹೊರ ರಾಜ್ಯಗಳಿಂದ ಹಳ್ಳಿಗಳಿಗೆ ಬರುವವರ ಸಂಖ್ಯೆ ಹೆಚ್ಚಾಗುತಿದ್ದು ತಾಲೂಕು ಆಡಳಿತವು ಸೂಕ್ಷ್ಮವಾಗಿ ಗಮನಿಸುತಿದೆ, ನಮ್ಮ ಕಂದಾಯ ಅಧಿಕಾರಿಗಳು ಅರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆ ಪರಸ್ಪರ ಸಂಪರ್ಕಹೊಂದಿದ್ದು ಹೊರಗಡೆಯಿಂದ ಬರುವವರ ಮೇಲೆ ನಿಗಾ ಇಟ್ಟಿರುತ್ತಾರೆ. ಗುಪ್ತವಾಗಿ ಮನೆ ಸೇರಿ ಕೊಂಡಿರುವವರನ್ನು ಪತ್ತೆ ಮಾಡಿ ಅವರ ಗಂಟಲು ಮಾದರಿ ಪರೀಕ್ಷೆಗೆ ಒಳಪಡಿಸಿ ಕ್ವಾರಂಟೈನ್ ಮಾಡಲಾಗುವುದೆಂದು ದೂರವಾಣಿ ಮುಖಾಂತರ ತಹಸೀಲ್ದಾರ್ ಪುಟ್ಟರಾಜಗೌಡ ರವರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ವೆಬಿನಾರ್ ಮೂಲಕ ಇಂದು ಡಾ. ಎನ್.ಕೆ‌ ಪದ್ಮನಾಭ ಅವರ ‘ಸುದ್ದಿ ಸಂವಿಧಾನ’ ಕೃತಿ ಬಿಡುಗಡೆ : ಲಿಂಕ್ ಬಳಸಿ ನೀವೂ ಭಾಗವಹಿಸಿ

Published

on

ಸುದ್ದಿದಿನ ಡೆಸ್ಕ್ : ಉಜಿರೆಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಎಸ್ ಡಿ ಎಂ ಸ್ನಾತಕೋತ್ತರ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಎನ್.ಕೆ. ಪದ್ಮನಾಭ ಅವರ ನೂತನ ಕೃತಿ ‘ಸುದ್ದಿ ಸಂವಿಧಾನ’ ವೆಬಿನಾರ್ ಮೂಲಕ ಜುಲೈ 13 ಇಂದು (ಸೋಮವಾರ) ಬೆಳಿಗ್ಗೆ 11ಗಂಟೆಗೆ ಲೋಕಾರ್ಪಣೆಗೊಳ್ಳಲಿದೆ.

ಕೃತಿಯನ್ನು ಎಸ್ ಡಿ ಎಂ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರೊ.ಭಾಸ್ಕರ ಹೆಗಡೆ ಬಿಡುಗಡೆಗೊಳಿಸಲಿದ್ದಾರೆ. ‘ದಿ ಹಿಂದೂ’ ಪತ್ರಿಕೆಯ ನಿಕಟಪೂರ್ವ ಪ್ರಧಾನ ವರದಿಗಾರ, ‘ತುಂಗಭದ್ರಾ’ ಇಂಗ್ಲಿಷ್ ನ್ಯೂಸ್ ಪೋರ್ಟಲ್ ಸಂಪಾದಕ ವೀರೇಂದ್ರ ಪಿ.ಎಂ ಕೃತಿಯ ಬಗ್ಗೆ ಮಾತನಾಡಲಿದ್ದಾರೆ.

ಕೆಳಗಿನ ಲಿಂಕ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ. ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

meet.google.com/iye-wtdv-fnr

Dial-in: (US) +1 219-401-0040 PIN: 227 877 321#

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ನೆಲದನಿ5 hours ago

ರಂಗಲೋಕದ ಮೂಲಕ ಸಿನಿಮಾ ಲೋಕ ಪ್ರವೇಶಿಸಿದ ಯುವಪ್ರತಿಭೆ ‘ಬಿಂದು ರಕ್ಷಿದಿ’

ಡಾ.ಕೆ.ಎ.ಓಬಳೇಶ್ ಜಗತ್ತಿನ ಸಾಂಸ್ಕøತಿಕ ಪರಂಪರೆಯಲ್ಲಿ ರಂಗಲೋಕವು ವಿಶಿಷ್ಟವಾಗಿ ಗಮನ ಸೆಳೆಯುತ್ತ ಸಾಗಿದೆ. ಇಂತಹ ರಂಗಲೋಕದ ಮೂಲಕ ಹಲವಾರು ದಾರ್ಶನಿಕರು, ಚಿಂತಕರು, ಕಲಾವಿದರು ಮೂಡಿಬಂದಿದ್ದಾರೆ. ಇವರು ರಂಗ ಪರಂಪರೆಯನ್ನು...

ನಿತ್ಯ ಭವಿಷ್ಯ7 hours ago

ಆರ್ಥಿಕ ಪರಿಸ್ಥಿತಿ ಸರಿಪಡಿಸುವ ತಂತ್ರ

ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂಜ್ಯೋತಿಷ್ಯರು ಪ್ರದಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ :9945410150 ನಿಮ್ಮ ಸಾಲದ ಸಮಸ್ಯೆ ಅಥವಾ ಹಣಕಾಸಿನ ಸಮಸ್ಯೆಗೆ ಪರಿಹಾರಕ್ಕಾಗಿ ಬಹಳಷ್ಟು ಯೋಚನೆ ಮಾಡಿರ ಬಹುದು....

ನಿತ್ಯ ಭವಿಷ್ಯ7 hours ago

ಗುರುವಾರದ ರಾಶಿ ಫಲಗಳನ್ನು ತಿಳಿಯೋಣ ಬನ್ನಿ

ಶ್ರೀ ಗುರು ರಾಘವೇಂದ್ರ ಸ್ಮರಣೆ ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್ ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ...

ಬಹಿರಂಗ1 day ago

ದಲಿತ ಚಳುವಳಿಯ ಮುಂದೆ ಮತ್ತೊಂದು ಸವಾಲು

ಮೂಲ: ಬದ್ರಿನಾರಾಯಣ್(ಹಿಂದೂ ಜುಲೈ 14), ಅನುವಾದ: ನಾ ದಿವಾಕರ ಕೋವಿದ್ 19 ಬದಲಾಗುತ್ತಿರುವ ಸಮಾಜದ ಲಕ್ಷಣಗಳನ್ನು ಗ್ರಹಿಸಲು ನಮ್ಮನ್ನು ಪ್ರೇರೇಪಿಸುತ್ತಿದೆ. ವಿಶೇಷವಾಗಿ ಉತ್ತರ ಭಾರತದಲ್ಲಿ ಕೊರೋನಾ ಪಿಡುಗು...

ದಿನದ ಸುದ್ದಿ1 day ago

‘ಸುದ್ದಿ ಸಂವಿಧಾನ’ ಕೃತಿ ಬಿಡುಗಡೆ ವೆಬಿನಾರ್ ಮಾಧ್ಯಮಕ್ಕೆ ಹೊಸ ಆಯಾಮ ಅಗತ್ಯ: ವೀರೇಂದ್ರ ಪಿ.ಎಂ

ಸುದ್ದಿದಿನ,ಉಜಿರೆ: ಆಧುನಿಕ ಸುದ್ದಿಮಾಧ್ಯಮ ವಲಯವು ವಾಚಾಳಿತನದ ಶಾಪಕ್ಕೀಡಾಗಿದ್ದು, ಇದರ ನಕಾರಾತ್ಮಕ ಪರಿಣಾಮಗಳನ್ನು ತಡೆದು ಹೊಸ ಆಯಾಮ ನೀಡುವ ವೃತ್ತಿಪರ ಬದ್ಧತೆಯ ಅನಿವಾರ್ಯತೆ ಇದೆ ಎಂದು ಪತ್ರಕರ್ತ, ತುಂಗಭದ್ರಾ...

ನಿತ್ಯ ಭವಿಷ್ಯ2 days ago

ಮಂಗಳವಾರದ ರಾಶಿ ಭವಿಷ್ಯ

ಶ್ರೀ ದುರ್ಗಾ ದೇವಿ ಸ್ಮರಣೆ ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್ ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ...

ದಿನದ ಸುದ್ದಿ3 days ago

ಕೋಗಲೂರು ಗ್ರಾಮದಲ್ಲಿ ಕೊರೋನ ಆತಂಕ : ಹೊರ ರಾಜ್ಯದಿಂದ ಬಂದವರನ್ನು ಕ್ವಾರಂಟೈನ್ ಮಾಡಲಾಗುವುದು : ತಹಶಿಲ್ದಾರ್ ಪುಟ್ಟರಾಜಗೌಡ

ಸುದ್ದಿದಿನ,ಚನ್ನಗಿರಿ/ಕೋಗಲೂರು : ಗ್ರಾಮದಲ್ಲಿ‌ 65 ವರ್ಷ ವಯಸ್ಸಿನ ಮಹಿಳೆಯೊಬ್ಬರಿಗೆ ಕೊರೋನ ಸೋಂಕು‌ ದೃಡ ಪಟ್ಟಿದ್ದು. ಸೋಂಕಿತ ವ್ಯಕ್ತಿಯು ಮದುವೆ ಸಮಾರಂಭಗಳಲ್ಲಿ ಹಾಗೂ ಗ್ರಾಮದಲ್ಲಿ‌ ಸಾಕಷ್ಟು ಓಡಾಡಿರುವುದನ್ನು ಕಂಡ...

ದಿನದ ಸುದ್ದಿ3 days ago

ವೆಬಿನಾರ್ ಮೂಲಕ ಇಂದು ಡಾ. ಎನ್.ಕೆ‌ ಪದ್ಮನಾಭ ಅವರ ‘ಸುದ್ದಿ ಸಂವಿಧಾನ’ ಕೃತಿ ಬಿಡುಗಡೆ : ಲಿಂಕ್ ಬಳಸಿ ನೀವೂ ಭಾಗವಹಿಸಿ

ಸುದ್ದಿದಿನ ಡೆಸ್ಕ್ : ಉಜಿರೆಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಎಸ್ ಡಿ ಎಂ ಸ್ನಾತಕೋತ್ತರ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಎನ್.ಕೆ. ಪದ್ಮನಾಭ ಅವರ ನೂತನ...

ದಿನದ ಸುದ್ದಿ3 days ago

ಭಾನುವಾರ ರಾಜ್ಯದಲ್ಲಿ 2627 ಕೊರೋನಾ ಕೇಸ್ ಪತ್ತೆ ; ಜಿಲ್ಲಾವಾರು ಪ್ರಕರಣಗಳ ವರದಿ

ಸುದ್ದಿದಿನ, ಬೆಂಗಳೂರು: ಭಾನುವಾರ ರಾಜ್ಯದಲ್ಲಿ 2627 ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ಜಿಲ್ಲಾವಾರು ವರದಿ ಈ ಕೆಳಗಿನಂತಿವೆ. ಜಿಲ್ಲಾವಾರು ಪ್ರಕರಣಗಳು ಬೆಂಗಳೂರು ನಗರ-1525, ದಕ್ಷಿಣ ಕನ್ನಡ-196, ಧಾರವಾಡ-129,...

ದಿನದ ಸುದ್ದಿ3 days ago

ದಾವಣಗೆರೆ | ಜಿಲ್ಲೆಯಲ್ಲಿ 410 ಮಂದಿ ಬಿಡುಗಡೆ , 104 ಸಕ್ರಿಯ ಪ್ರಕರಣಗಳು

ಸುದ್ದಿದಿನ,ದಾವಣಗೆರೆ : ಜಿಲ್ಲೆಯಲ್ಲಿ ಭಾನುವಾರ 20 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಹಾಗೂ 3 ಸಾವು ಸಂಭವಿಸಿದ್ದು, 66 ಮಂದಿ ಸಂಪೂರ್ಣ ಗುಣಮುಖರಾಗಿ ಜಿಲ್ಲಾ ನಿಗದಿತ ಕೋವಿಡ್...

Trending