Connect with us

ದಿನದ ಸುದ್ದಿ

ಬಾಬಾಸಾಹೇಬ್ ಅಂಬೇಡ್ಕರ್‌ರವರು 1956 ಅಕ್ಟೋಬರ್14 ರಂದು ಬೌದ್ಧರಿಗೆ ಬೋಧಿಸಿದ 22 ಪ್ರತಿಜ್ಞೆಗಳು

Published

on

  • ಮೂಲ: ಅಂಬೇಡ್ಕರ್
  • ಕನ್ನಡಕ್ಕೆ: ರಘೋತ್ತಮ ಹೊ.ಬ

1.    ನಾನು ಬ್ರಹ್ಮ, ವಿಷ್ಣು, ಮಹೇಶ್ವರ ಇವರುಗಳನ್ನು ದೇವರುಗಳು ಎಂದು ನಂಬುವುದಿಲ್ಲ, ಮತ್ತು ಅವರುಗಳನ್ನು ಪೂಜಿಸುವುದಿಲ್ಲ.

2.    ನಾನು ರಾಮ ಮತ್ತು ಕೃಷ್ಣ ಇವರುಗಳನ್ನು ದೇವರುಗಳು ಎಂದು ನಂಬುವುದಿಲ್ಲ, ಮತ್ತು ಅವರುಗಳನ್ನು ಪೂಜಿಸುವುದಿಲ್ಲ.

3.    ನಾನು ಗಣಪತಿ ಮತ್ತು ಗೌರಿ ಇವರುಗಳನ್ನು ದೇವರುಗಳು ಎಂದು ನಂಬುವುದಿಲ್ಲ, ಮತ್ತು ಅವರುಗಳನ್ನು ಪೂಜಿಸುವುದಿಲ್ಲ.

4.    ನಾನು ದೇವರ ಅವತಾರಗಳ ಸಿದ್ಧಾಂತದಲ್ಲಿ ನಂಬಿಕೆ ಇಡುವುದಿಲ್ಲ.

5.    ನಾನು ಬುದ್ಧ ವಿಷ್ಣುವಿನ ಅವತಾರ ಎಂಬುದನ್ನು ನಂಬುವುದಿಲ್ಲ.

6.    ನಾನು ಯಾವುದೇ ಶ್ರಾದ್ಧ ಮತ್ತು ಪಿಂಡ ದಾನಗಳನ್ನು ಮಾಡುವುದಿಲ್ಲ.

7.    ನಾನು ಬೌದ್ಧ ಧರ್ಮಕ್ಕೆ ಕೇಡು ತರುವ ಯಾವುದೇ ಕ್ರಿಯೆಗಳನ್ನು ಮಾಡುವುದಿಲ್ಲ.

8.    ನಾನು ಬ್ರಾಹ್ಮಣರ ಮೂಲಕ ಯಾವುದೇ ಧಾರ್ಮಿಕ ಕ್ರಿಯೆಗಳನ್ನು ನಡೆಸುವುದಿಲ್ಲ.

9.    ನಾನು ಮನುಷ್ಯರೆಲ್ಲ ಸಮಾನರು ಎಂಬುದನ್ನು ನಂಬುತ್ತೇನೆ.

10.   ನಾನು ಸಮಾನತೆಯನ್ನು ಸ್ಥಾಪಿಸಲು ಪ್ರಯತ್ನಿಸುತ್ತೇನೆ.

11.    ನಾನು ಬುದ್ಧರ ಅಷ್ಟಾಂಗ ಮಾರ್ಗವನ್ನು ಪಾಲಿಸುತ್ತೇನೆ.

12.    ನಾನು ಬುದ್ಧರ ದಶ ಪಾರಮಿತ ತತ್ವಗಳನ್ನು ಅನುಸರಿಸುತ್ತೇನೆ.

13.     ನಾನು ಎಲ್ಲಾ ಜೀವರಾಶಿಗಳ ಮೇಲೆ ಸಹಾನುಭೂತಿ ತೋರುತ್ತೇನೆ ಮತ್ತು ಅವುಗಳ ಮೇಲೆ ದಯೆ ಇಟ್ಟು ಅವುಗಳನ್ನು ಕಾಪಾಡುತ್ತೇನೆ.

14.    ನಾನು ಕಳ್ಳತನ ಮಾಡುವುದಿಲ್ಲ.

15.     ನಾನು ಸುಳ್ಳು ಹೇಳುವುದಿಲ್ಲ

16.     ನಾನು ವ್ಯಭಿಚಾರ ಮಾಡುವುದಿಲ್ಲ

17.     ನಾನು ಮದ್ಯಪಾನ ಮಾಡುವುದಿಲ್ಲ.

18.      ನಾನು ಬೌದ್ಧ ಧರ್ಮದ ಮೂರು ಮೂಲಭೂತ ತತ್ವ (ಪ್ರಜ್ಞೆ, ಕರುಣೆ ಮತ್ತು ಮೈತ್ರಿ)ಗಳ ಸಮರಸವಾದ ಸಂಯೋಜನೆಯನ್ನು ಸಾಧಿಸಲು ಜೀವನ ಪೂರ ಯತ್ನಿಸುತ್ತೇನೆ.

19.     ಈ ಮೂಲಕ ನಾನು ಮನುಕುಲದ ಏಳಿಗೆಗೆ ತಡೆಯಾಗಿರುವ, ಮನುಷ್ಯ ಮನುಷ್ಯರ ನಡುವೆ ಭೇದ ಎಣಿಸುವ, ನನ್ನನ್ನು ಕೀಳು ಎಂದು ಪರಿಗಣಿಸುವ ನನ್ನ ಹಳೆಯ ಧರ್ಮ ಹಿಂದೂ ಧರ್ಮವನ್ನು ತ್ಯಜಿಸುತ್ತಿದ್ದೇನೆ.

20.    ಬೌದ್ಧ ಧರ್ಮವೇ ಸದ್ಧಮ್ಮ ಎಂಬುದನ್ನು ನಾನು ಸಂಪೂರ್ಣವಾಗಿ ನಂಬುತ್ತೇನೆ.

21.    ಈ ಹಿನ್ನೆಲೆಯಲ್ಲೇ ಬೌದ್ಧ ಧರ್ಮವನ್ನು ಸ್ವೀಕರಿಸುತ್ತಿದ್ದೇನೆ ಮತ್ತು ಇದರಿಂದ ನನಗಿಂದು ಮರುಜನ್ಮ ಪಡೆದಂತೆ ಆಗಿದೆ.

22.    ಒಟ್ಟಾರೆ ಇನ್ನು ಮುಂದೆ ನಾನು ಬುದ್ಧರ ಬೋಧನೆಯ ಪ್ರಕಾರ ನಡೆದುಕೊಳ್ಳುತ್ತೇನೆ ಎಂದು ಈ ಮೂಲಕ ಪ್ರತಿಜ್ಞೆ ಸ್ವೀಕರಿಸುತ್ತೇನೆ.

ಸೂಚನೆ: ಇದನ್ನು ವಿಹಾರಗಳಲ್ಲಿ ಬೌದ್ಧ ಅನುಯಾಯಿಗಳು ಪ್ರತಿ ವಾರ ಪಠಣ ಮಾಡುವುದು.

ಸುದ್ದಿದಿನ‌.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಬಳ್ಳಾರಿ | ಲಾಕ್ ಡೌನ್ ನಿಯಮ ಉಲಂಘನೆ, ಪ್ರಭಾವಿ ವ್ಯಕ್ತಿಗೆ ಸೇರಿದ ರೇಣುಕಾ’ಸ್ ಕಿಚನ್ ಹೋಟೆಲ್ ಓಪನ್ : ಸಾರ್ವಜನಿಕರ ಆಕ್ರೋಶ

Published

on

ಸುದ್ದಿದಿನ,ಬಳ್ಳಾರಿ: ನಗರದಲ್ಲಿ ಲಾಕ್ ಡೌನ್ ಗೆ ಕ್ಯಾರೇ ಎನ್ನದೆ ರೇಣುಕಾ ಕಿಚನ್ ನ ಹೊಟೇಲ್ ಮಾಲೀಕರು ಎಂದಿನಂತೆ ಹೋಟೆಲ್ ತೆರೆದಿದ್ದಾರೆ.

ಪ್ರತಿ ಭಾನುವಾರ ಸಂಪೂರ್ಣ ಲಾಕ್ ಡೌನ್ ಇದ್ದರೂ ಜಿಲ್ಲಾಡಳಿತ ನಿಯಮ ಉಲಂಘಿಸಿ ಹೋಟೆಲ್ ತೆರೆದಿರುವ ಇವರಿಗೆ ಲಾಕ್ ಡೌನ್ ಅನ್ವಯ ಆಗೋಲ್ವ? ಎಂದು ನಗರದ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೇಣುಕಾ ಹೋಟೆಲ್ ಬಳ್ಳಾರಿಯ ಪ್ರಭಾವಿ ವ್ಯಕ್ತಿಗೆ ಸೇರಿದ್ದೆನ್ನಲಾಗಿದೆ. ಜನ ಸಾಮನ್ಯರು ಓಡಾಡಿದರೆ ಕೇಸ್ ಮಾಡ್ತಾರೆ, ಇವರಿಗೆ ರೂಲ್ಸ್ ಅಪ್ಲೈ ಆಗಲ್ವ? ಒಬ್ಬರಿಗೊಂದು ನ್ಯಾಯಾನಾ? ಸಾರ್ವಜನಿಕರು ಆಕ್ರೋಶದ ಪ್ರಶ್ನೆ ಎತ್ತಿದ್ದಾರೆ.

ಬಳ್ಳಾರಿ ಸಂಡೇ ಲಾಕ್ ಡೌನ್ ಹಿನ್ನೆಲೆ, ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಬಿಗಿ ಪಹರೆ ಇದ್ದು, 250 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. 5 ಡಿ ಎಸ್ ಪಿ, 23 ಸಿಪಿಐ, 66ಪಿ ಎಸ್ ಐ ಒಳಗೊಂಡ ತಂಡವೆ ನಿಯೋಜಿಸಿ ಬಳ್ಳಾರಿ ಎಸ್ ಪಿ ಸಿಕೆ ಬಾಬಾಅವರು ಪರಿಸ್ಥಿತಿ ನಿಯಂತ್ರಿಸಿ ಲಾಕ್ ಡೌನ್ ಯಶಸ್ವಿಗೊಳಿಸಲು ಆದೇಶ ಹೊರಡಿಸಿದ್ದಾರೆ. ಮನೆಯಿಂದ ತುರ್ತುಪರಿಸ್ಥಿತಿಯನ್ನು ಹೊರತು ಪಡಿಸಿ ಅನಾವಶ್ಯಕವಾಗಿ ಹೊರಬರದಂತೆ ಜನರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಇಷ್ಟೆಲ್ಲಾ ನಿಯಮಗಳನ್ನು ಜಾರಿಗೊಳಿಸಿಯೂ ರೇಣುಕಾ ಹೋಟೆಲ್ ತೆರೆಯಲು ಅವಕಾಶ ದೊರೆತದ್ದಾದರೂ ಹೇಗೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕೊರೋನಾ ಸೋಂಕಿತರು ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿ..? ಇಲ್ಲಿದೆ ಮಾಹಿತಿ

Published

on

ಸುದ್ದಿದಿನ, ಬೆಂಗಳೂರು: ಆರೋಗ್ಯ ಇಲಾಖೆ ಬಿಡುಗಡೆಗೊಳಿಸಿದ ಬುಲೆಟಿನ್ ಪ್ರಕಾರ ಶನಿವಾರ ಪತ್ತೆಯಾದ ಕೊರೋನಾ ಸೋಂಕಿತರ ಸಂಖ್ಯೆ ಹೀಗಿದೆ.

ಬೆಂಗಳೂರು ನಗರ 1,172, ದಕ್ಷಿಣ ಕನ್ನಡ 75,ಬಳ್ಳಾರಿ 73, ಬೀದರ್ 51, ಧಾರವಾಡ 45, ರಾಯಚೂರು 41, ಮೈಸೂರು 38, ಕಲಬುರಗಿ 37, ವಿಜಯಪುರ 37, ಮಂಡ್ಯ 35, ಉತ್ತರ ಕನ್ನಡ 35, ಶಿವಮೊಗ್ಗ 31, ಹಾವೇರಿ 28, ಬೆಳಗಾವಿ 27, ಹಾಸನ 25, ಉಡುಪಿ 18, ಚಿಕ್ಕಬಳ್ಳಾಪುರ 12, ತುಮಕೂರು 12, ಬೆಂಗಳೂರು ಗ್ರಾಮಾಂತರ 11, ಕೋಲಾರ 11, ದಾವಣಗೆರೆ 7, ಚಾಮರಾಜನಗರ 5, ಗದಗ 4, ಕೊಪ್ಪಳ 3, ಚಿಕ್ಕಮಗಳೂರು 3, ರಾಮನಗರ 2 ಮತ್ತು ಯಾದಗಿರಿಯಲ್ಲಿ 1 ಪ್ರಕರಣ ಬೆಳಕಿಗೆ ಬಂದಿದೆ.

ಶನಿವಾರ ಒಟ್ಟು 42 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಬೆಂಗಳೂರಿನಲ್ಲಿ 24, ಬೀದರ್ 6, ಬೆಂಗಳೂರು ಗ್ರಾಮಾಂತರ 1, ಧಾರವಾಡ 3, ದಕ್ಷಿಣ ಕನ್ನಡ 4, ಕಲಬುರಗಿ 3 ಮತ್ತು ಹಾಸನದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಬೆಂಗಳೂರಿನಲ್ಲಿ ಒಂದೇ ದಿನ 1.172 ಕೊರೋನಾ ಕೇಸ್ ಪತ್ತೆ , ರಾಜ್ಯದಲ್ಲಿ ಒಟ್ಟು 21,549 ಕೇಸ್

Published

on

ಸುದ್ದಿದಿನ,ಬೆಂಗಳೂರು: ಈ ಹಿಂದಿನ ಎಲ್ಲ ದಾಖಲೆಗಳನ್ನು ಕೊರೋನಾ ಮಾಹಾಮಾರಿ ಮುರಿದಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಒಂದೇ ದಿನ 1,172 ಮಂದಿಗೆ ಸೋಂಕು ತಗುಲಿದೆ. ರಾಜ್ಯದಲ್ಲಿ 1,839 ಮಂದಿಗೆ ಸೋಂಕಿಗೆ ತುತ್ತಾಗಿದ್ದು, ಸೋಂಕಿತರ ಸಂಖ್ಯೆ 21,549ಕ್ಕೆ ಏರಿಕೆಯಾಗಿದೆ.

ಶನಿವಾರ 439 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ 11,966 ಸಕ್ರಿಯ ಪ್ರಕರಣಗಳಿದ್ದು, ಇದುವರೆಗೂ 9,244 ಮಂದಿ ಆಸ್ಪತ್ರೆಯಿಂದ ಹೊರ ಬಂದಿದ್ದಾರೆ. ಕೊರೊನಾಗೆ ಬಲಿಯಾದವರ ಸಂಖ್ಯೆ 335ಕ್ಕೆ ತಲುಪಿದ್ದು, ಐಸಿಯುನಲ್ಲಿ 226 ರೋಗಿಗಳು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending