Connect with us

ದಿನದ ಸುದ್ದಿ

ದಾವಣಗೆರೆ ವಿವಿಯಲ್ಲಿ ರಂಗೇರಿತು ‘ಕನ್ನಡ ಹಬ್ಬ’

Published

on

ಸುದ್ದಿದಿನ,ದಾವಣಗೆರೆ : ದಾವಣಗೆರೆ ವಿಶ್ವವಿದ್ಯಾನಿಲಯದ ಆವರಣದಲ್ಲಿ ಶನಿವಾರ ಕನ್ನಡದ ಕಂಪು ಎಲ್ಲೆಡೆ ಹರಡಿತ್ತು. ಇಡೀ ಆವರಣದ ತುಂಬ ಹಳದಿ-ಕೆಂಪು ಬಣ್ಣದ ಬಾವುಟಗಳ ಹಾರಾಟ, ತಳಿರು ತೋರಣಗಳ ವಿಶೇಷ ಅಲಂಕಾರ ಕನ್ನಡದ ಹಬ್ಬದ ವಾತಾವರಣ ಸೃಷ್ಟಿಸಿತ್ತು.

ವಿಶೇಷ ಅಲಂಕೃತ ಟ್ರಾಕ್ಟರ್‍ನಲ್ಲಿ ಕನ್ನಡ ತಾಯಿ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪುಷ್ಪಾರ್ಚನೆಯೊಂದಿಗೆ ಆರಂಭವಾದ ಹಬ್ಬದ ಆಚರಣೆ ಸುಮಾರು ಮೂರು ತಾಸು ನಡೆಯಿತು. ಕನ್ನಡದ ಹಾಡುಗಳಿಗೆ ವಿದ್ಯಾರ್ಥಿಗಳು ದಣಿವರಿಯದೆ ಕುಣಿದು ಕುಪ್ಪಳಿಸಿದರು. ವೈವಿಧ್ಯಮಯ ಹಾಡುಗಳಿಗೆ ಹೆಜ್ಜೆ ಹಾಕಿ ರಾಜ್ಯೋತ್ಸವಕ್ಕೆ ಮೆರುಗು ನೀಡಿದರು.

‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು… ಹಾಡು ಶುರುವಾಗುತ್ತಿದ್ದಂತೆ ವಿದ್ಯಾರ್ಥಿಗಳ ಕುಣಿತವೂ ಆರಂಭವಾಯಿತು. ತಲೆಗೆ ಕಟ್ಟಿದ ಹಳದಿ-ಕೆಂಪು ಬಣ್ಣದ ಪಟ್ಟಿಯನ್ನು ತಲೆಗೆ ಕಟ್ಟಿಕೊಂಡವರು ಕೆಲವರು, ಕೊರಳಲ್ಲಿ ಸುತ್ತಿಕೊಂಡು ಕುಣಿದರು ಮತ್ತಷ್ಟು ಜನರು. ಹುಡುಗರ ಜೊತೆಗೆ ಪೈಪೋಟಿ ನಡೆಸುವಂತೆ ಹುಡುಗಿಯರೂ ಕುಣಿದರು. ಕುಣಿತದ ಜೊತೆಗೆ ಸೆಲ್ಫೀಗೂ ಫೋಸು ಕೊಟ್ಟ ವಿದ್ಯಾರ್ಥಿಗಳು, ವಿಡಿಯೊ ಚಿತ್ರೀಕರಣ ಮಾಡಿಕೊಂಡು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದರು.

ಕನ್ನಡ ನಾಡಿನ ಹಿರಿಮೆ ಗರಿಮೆಯನ್ನು ಬಿಂಬಿಸುವ ಸಿನಿಮಾ ಹಾಡು, ಜನಪದ ಗೀತೆಗಳಿಗೆ ಕುಣಿತ, ಜಯಘೋಷಗಳಿಂದ ವಿದ್ಯಾರ್ಥಿಗಳಲ್ಲಿದ್ದ ಸಂಭ್ರಮವನ್ನು ತಡೆಯಲು ಸಾಧ್ಯವಾಗಲಿಲ್ಲ. ಹಾಡಿನ ತಾಳಕ್ಕೆ ಹಾಕಿದ ಹೆಜ್ಜೆ ಆವರಣದಲ್ಲಿ ಹೊಸ ಸಾಂಸ್ಕøತಿಕ ಆಯಾಮ ನೀಡಿತು. ವಿದ್ಯಾರ್ಥಿಗಳೊಂದಿಗೆ ವಿಶ್ವವಿದ್ಯಾನಿಲಯದ ಬೋಧಕ, ಬೋಧಕೇತರ ಸಿಬ್ಬಂದಿಯೂ ಕುಣಿದರು.

ಇದಕ್ಕೂ ಮುನ್ನ ಕನ್ನಡ ಅಧ್ಯಯನ ವಿಭಾಗದ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮವನ್ನು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ. ಬಸವರಾಜ ಬಣಕಾರ ನಾಡದೇವಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಉತ್ಸವಕ್ಕೆ ಚಾಲನೆ ನೀಡಿದರು. ಪರೀಕ್ಷಾಂಗ ಕುಲಸಚಿವೆ ಪ್ರೊ. ಅನಿತಾ ಎಚ್.ಎಸ್., ಹಣಕಾಸು ಅಧಿಕಾರಿ ಪ್ರೊ. ಗೋಪಾಲ ಎಂ. ಅಡವಿರಾವ್, ವಿವಿಧ ವಿಭಾಗಗಳ ಪ್ರಾಧ್ಯಾಪಕರಾದ ಪ್ರೊ. ಮಹಾಬಲೇಶ್ವರ, ಪ್ರೊ. ಶಿವಕುಮಾರ ಕಣಸೋಗಿ, ಡಾ. ಅಶೋಕಕುಮಾರ ಪಾಳೇದ, ರಾಜಕುಮಾರ, ಪೊಲೀಸ್ ಅಧೀಕ್ಷಕ ದೇವರಾಜ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಬ್ರೇಕಿಂಗ್: ಕೇಂದ್ರ ಸಚಿವ ಸಂಪುಟಕ್ಕೆ ಸರ್ಜರಿ?

Published

on


ದೆಹಲಿ:  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಮಂತ್ರಿ ಮಂಡಲದಲ್ಲಿ ಬಜೆಟ್ ಮಂಡನೆ ಯಾದ ಬಳಿಕ ಭಾರಿ ಬದಲಾವಣೆ ಆಗಲಿದ್ದು, ಆರ್ಥಿಕ ಹಾಗೂ ಬ್ಯಾಂಕಿಂಗ್ ಕ್ಷೇತ್ರದ ಪರಿಣಿತರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಗಳಿವೆ.

ದಾಳಿಂಬೆ ಬೆಳೆದರೆ ಕೈ ತುಂಬಾ ಕಾಸು

ದೇಶದ ಆರ್ಥಿಕ ಪರಿಸ್ಥಿತಿಯ ಸುಧಾರಣೆಗೆ ಮುಂದಾಗಿರುವ ಕೇಂದ್ರ ಸರ್ಕಾರದ ಆರ್ಥಿಕ, ಬ್ಯಾಂಕಿಂಗ್ ಕ್ಷೇತ್ರದ ಪರಿಣಿತರಿಗೆ ಆದ್ಯತೆ ನೀಡಲಿದ್ದು, ಸಚಿವ ಸಂಪುಟದಲ್ಲಿ ಸ್ವಲ್ಪ ಬದಲವಣೆಗೆ ಮುಂದಾಗಿದೆ. ಬ್ರಿಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ವಿ. ಕಾಮತ್ ಹಾಗೂ ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ಶೀಘ್ರವೇ ಕೇಂದ್ರ ಸಚಿವ ಸಂಪುಟ ಸೇರಿಕೊಳ್ಳಲಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

Continue Reading

ದಿನದ ಸುದ್ದಿ

ಶಿವಮೊಗ್ಗ | ಕೊಡಚಾದ್ರಿ – ಕೊಲ್ಲೂರು ನಡುವೆ ಕೇಬಲ್‌ ಕಾರ್

Published

on

ಸುದ್ದಿದಿನ,ಶಿವಮೊಗ್ಗ : ಕೊಡಚಾದ್ರಿ ಮತ್ತು ಕೊಲ್ಲೂರು ನಡುವೆ ಸುಗಮ ಸಂಚಾರಕ್ಕಾಗಿ ಕೇಬಲ್‌ ಕಾರ್ ಸಂಪರ್ಕ ಯೋಚನೆ ಕೈಗೆತ್ತಿಕೊಳ್ಳಲಾಗುತ್ತಿದೆ.

ಕೊಲ್ಲೂರು ಮತ್ತು ಕೊಡಚಾದ್ರಿ ನಡುವೆ ಸುಮಾರು 32ಕಿ.ಮೀ. ದೂರವಿದ್ದು, ಕೇಬಲ್ ಕಾರ್ ಸಂಪರ್ಕ ಅಳವಡಿಸಿದರೆ ಪ್ರಯಾಣದ ದೂರ ಹನ್ನೊಂದು ಕಿಮೀ ಆಗಲಿದೆ. ಸಮಯವೂ ಉಳಿಯಲಿದೆ. ಪ್ರಸ್ತಾಪಿತ ಯೋಜನೆಗೆ ಅಂದಾಜು 1200ಕೋಟಿ ರೂ.ಗಳಲ್ಲಿ ತಗಲಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಹೆಣ್ಣುಮಗು ಮಾರಾಟ ಪ್ರಕರಣ ಪತ್ತೆ, ಮಗು ರಕ್ಷಣೆ : ಎಸ್‍ಪಿ ಹನುಮಂತರಾಯ

Published

on

ಸುದ್ದಿದಿನ,ದಾವಣಗೆರೆ : ನಗರದಲ್ಲಿ ಹೆಣ್ಣುಮಗುವೊಂದನ್ನು ಮಾರಾಟ ಮಾಡಿದ ಪ್ರಕರಣವನ್ನು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಮಾರ್ಗದರ್ಶನದಲ್ಲಿ ಮಹಿಳಾ ಪೊಲೀಸ್ ಠಾಣೆ ಅಧಿಕಾರಿ ಮತ್ತು ಸಿಬ್ಬಂದಿಗಳು ಪತ್ತೆ ಹಚ್ಚಿ ಮಗುವನ್ನು ರಕ್ಷಿಸಿದ್ದಾರೆಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಕಚೇರಿಯಲ್ಲಿ ಹೆಣ್ಣು ಮಗು ಮಾರಾಟ ಮತ್ತು ಖರೀದಿಗೆ ಸಂಬಂಧಿಸಿದ ಪ್ರಕರಣದ ಕುರಿತು ಮಾಹಿತಿ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಅವರು ಮಾತನಾಡಿ, ಮಹಿಳಾ ರಕ್ಷಣಾ ಘಟಕದ ಅಧಿಕಾರಿ/ಸಿಬ್ಬಂದಿಗಳು ನೀಡಿದ ದೂರು ಮತ್ತು ಮಾಹಿತಿ ಮೇರೆಗೆ ಹೆಣ್ಣುಮಗುವಿನ ಮಾರಾಟ ಪ್ರಕರಣ ಪತ್ತೆ ಹಚ್ಚಿದ್ದು, ಮಧ್ಯವರ್ತಿಗಳಾಗಿ ಆಸ್ಪತ್ರೆಯೊಂದರ ಆಯಾ ಒಬ್ಬರು ಪಾಲ್ಗೊಂಡಿದ್ದು, ಮಕ್ಕಳ ಮಾರಾಟ ಪ್ರಕರಣದಲ್ಲಿ ವ್ಯವಸ್ಥಿತ ಜಾಲವೇನಾದರು ಕೆಲಸ ಮಾಡುತ್ತಿದೆಯೇ ಎಂಬ ತನಿಖೆ ನಡೆಸಲಾಗುವುದು ಹಾಗೂ ಈ ಪ್ರಕರಣ ಕುರಿತು ಸಮಗ್ರ ತನಿಖೆಗೆ ಈಗಾಗಲೇ ಆದೇಶಿಸಲಾಗಿದೆ ಎಂದರು.

ಜ.17 ರ ಸಂಜೆ ದಾವಣಗೆರೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿಯ ಅಧಿಕಾರಿ ಕೆ.ಸಿ.ಬಸವರಾಜಯ್ಯನವರು ಮಹಿಳಾ ಠಾಣೆಗೆ ಹಾಜರಾಗಿ, 2019 ರ ಡಿ.26 ರಂದು ಡಾನ್‍ಬಾಸ್ಕೋ ಬಾಲಕಾರ್ಮಿಕ ಮಿಷನ್ ಸಹಾಯವಾಣಿ ಮೂಲಕ ಅನಾಮಧೇಯ ಕರೆ ಮಾಡಿ ಅಂಬೇಡ್ಕರ್ ನಗರ ನಿವಾಸಿ ಕವಿತಾ ಕೋಂ ಮಂಜುನಾಥ ಎಂಬವವರು ತಮ್ಮ ನಾಲ್ಕನೇ ಹೆಣ್ಣು ಮಗುವಾದ ಒಂದು ವರ್ಷ ಒಂದು ತಿಂಗಳಿನ ಸಾನ್ವಿ ಎಂಬ ಹೆಣ್ಣು ಮಗುವನ್ನು ಮಾರಾಟ ಮಾಡಿರುವುದಾಗಿ ಕರೆ ಮಾಡಿ ಮಾಹಿತಿ ನೀಡಿರುತ್ತಾರೆ.

ಈ ಕರೆಯನ್ನು ಆಧರಿಸಿ ಸಹಾಯವಾಣಿ ಸಿಬ್ಬಂದಿಗಳು ಸ್ಥಳ ಪರಿಶೀಲನೆ ನಡೆಸಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಿಗೆ ಜ.8 ರಂದು ಪತ್ರ ಸಲ್ಲಿಸುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳಾದ ಚಂದ್ರಶೇಖರ್.ಎನ್.ಕೆ ಮತ್ತು ಕಿರಣ್‍ಕುಮಾರ್ ಎಂಬುವವರು ಆರೋಪಿಯ ಮನೆಯ ಕುರಿತಾಗಿ ಅಂಗನವಾಡಿ ಕಾರ್ಯಕರ್ತೆಯಿಂದ ಸಂಪೂರ್ಣ ಮಾಹಿತಿ ಪಡೆದುಕೊಂಡು ಜ.9 ರಂದು ಮನೆಗೆ ಭೇಟಿ ನೀಡಿದಾಗ ಮಗುವಿನ ತಂದೆ ಮಂಜುನಾಥ್ ಸಿಕ್ಕಿದ್ದು, ವಿಚಾರಣೆ ನಡೆಸಿದಾಗ ಈಗಾಗಲೇ ತಮಗೆ 3 ಹೆಣ್ಣು ಮಕ್ಕಳಿದ್ದು, 4ನೇ ಮಗವೂ ಹೆಣ್ಣು ಮಗುವಾಗಿರುವ ಕಾರಣ ಹಾಗೂ ಮನೆಯಲ್ಲಿ ಕಷ್ಟವಿದ್ದ ಕಾರಣ ತಮ್ಮ ಮಗು ಸಾನ್ವಿಯನ್ನು ರಾಣೇಬೆನ್ನೂರಿನ ದ್ರಾಕ್ಷಾಯಿಣಿ ಕೋಂ ಸಿದ್ದು ಎಂಬುವವರಿಗೆ ರೂ.25 ಸಾವಿರಕ್ಕೆ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾರೆ.

ಮಗು ಮಾರಾಟ ಮಾಡಿದ ತಂದೆ ಮಂಜುನಾಥ, ತಾಯಿ ಕವಿತಾ ಮತ್ತು ಮಗುವನ್ನು ಖರೀದಿಸಿದ ದ್ರಾಕ್ಷಾಯಿಣಿ ಮತ್ತು ಆಕೆಯ ಗಂಡ ಸಿದ್ದು ಹಾಗೂ ಮಗು ಮಾರಾಟಕ್ಕೆ ಸಹಕಾರ ನೀಡಿದ ರವಿ, ಕರಿಬಸಪ್ಪ, ಚಿತ್ರಮ್ಮ ಮತ್ತು ಕಮಲಮ್ಮರವರ ಮೇಲೆ ದೂರು ದಾಖಲಿಸಿ ದಸ್ತಗಿರಿ ಮಾಡಲಾಗಿದೆ. ಮಗುವನ್ನು ರಕ್ಷಿಸಿ ನಿಯಮಾನುಸಾರ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದು, ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿ ನಂತರ ಕಾನೂನಿನ ಮಾರ್ಗದರ್ಶನದಲ್ಲಿ ಮಗುವಿನ ಪಾಲನೆ-ಪೋಷಣೆ ಮಾಡಲಾಗುವುದು ಎಂದರು.

ಜಿಲ್ಲಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರನ್ನೊಳಗೊಂಡು ಜಿಲ್ಲೆಯ ಎಲ್ಲ ಹೆರಿಗೆ ಆಸ್ಪತ್ರೆಗಳು, ಮಿಡ್‍ವೈಫರಿ, ಶುಶ್ರೂಷಕರ ಸಭೆ ನಡೆಸಿ ಹೆಣ್ಣು ಮಕ್ಕಳ ಸಂರಕ್ಷಣೆ ಮತ್ತು ದತ್ತು ನಿಯಮಗಳ ಕುರಿತು ಸೂಕ್ತ ಕಾನೂನಿನ ಅರಿವು ಮೂಡಿಸಲಾಗುವುದು ಎಂದ ಅವರು ಮಗು ಮಾರಾಟ ಪ್ರಕರಣ ಬೇಧಿಸುವಲ್ಲಿ ಸಹಕರಿಸಿದ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ, ಸಿಬ್ಬಂದಿ ಹಾಗೂ ಮಹಿಳಾ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಅಭಿನಂದಿಸಿದರು.

ಈ ಪ್ರಕರಣದಲ್ಲಿ ಆರೋಪಿಗಳ ಪತ್ತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ, ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ, ಎಎಸ್‍ಪಿ ರಾಜೀವ್.ಎಂ, ನಗರ ಉಪವಿಭಾಗದ ಡಿವೈಎಸ್‍ಪಿ ಯು.ನಾಗೇಶ್ ಐತಾಳ್ ಇವರ ಸೂಕ್ತ ಮಾರ್ಗದರ್ಶನದಲ್ಲಿ ಮಹಿಳಾ ಠಾಣೆಯ ಪೊಲೀಸ್ ನಿರೀಕ್ಷಕಿ ನಾಗಮ್ಮ, ಸಿಬ್ಬಂದಿಗಳಾದ ಪಿಎಸ್‍ಐ ಮಾಳವ್ವ, ಪರಶುರಾಮ, ಪ್ರಸನ್ನ ಕುಮಾರ್, ರೇಣುಕಮ್ಮ, ಜಂಷಿದಾ ಖಾನಂ, ಕವಿತಾ, ಶಿವಲಿಂಗಮ್ಮ ಬಾಗೇವಾಡಿ, ಛಾಯಾ, ಕವಿತಾ.ಟಿ.ಎಸ್ ರವರ ತಂಡ ಪಾಲ್ಗೊಂಡಿತ್ತು ಎಂದು ಮಾಹಿತಿ ನೀಡಿದರು.

ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಅರಿವು

ರಸ್ತೆ ಸುರಕ್ಷತೆ ಕುರಿತು ಈ ವಾರ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸಲಾಗುತ್ತಿದೆ. ನಗರದಲ್ಲಿ ಒಟ್ಟು 10 ಹೈವೇ ಪೆಟ್ರೋಲಿಂಗ್ ವಾಹನ ವ್ಯವಸ್ಥೆ, 02 ಇಂಟರ್‍ಸೆಪ್ಟರ್ ಹಾಗೂ ಪ್ರತಿ ಠಾಣೆಗೆ ಒಂದರಂತೆ 13 ಪಿಸಿಆರ್ ವಾಹನಗಳು ಗಸ್ತು ವ್ಯವಸ್ಥೆಯಲ್ಲಿ ಪಾಲ್ಗೊಳ್ಳುತ್ತಿವೆ.

ಲೇನ್ ಡಿಸಿಪ್ಲೀನ್

ಮುಖ್ಯವಾಗಿ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಲೇನ್ ಡಿಸಿಪ್ಲೀನ್ ಇಲ್ಲದೇ ಅನೇಕ ಸಾವು ನೋವು ಸಂಭವಿಸುತ್ತಿದ್ದು, ಇದನ್ನು ತಡೆಗಟ್ಟಲು ಲೇನ್ ಡಿಸಿಪ್ಲೀನ್‍ನನ್ನು ಕಟ್ಟುನಿಟ್ಟಾಗಿ ಪಾಲಿಸಲು ಕ್ರಮ ವಹಿಸಲು ಸರ್ವೋಚ್ಚ ನ್ಯಾಯಾಲಯ ಸೂಚಿಸಿದ್ದು ಇದರಂತೆ ಕ್ರಮ ವಹಿಸಲಾಗುವುದು.

ಸರಗಳ್ಳತನ ಜಾಲ ಪತ್ತೆಗೆ ಕ್ರಮ

ಜಿಲ್ಲೆಯಲ್ಲಿ ಸರಗಳ್ಳರ ಹಾವಳಿ ಹೆಚ್ಚಿದ್ದು ಇತ್ತೀಚೆಗೆ ನಡೆದ ಸರಣಿ ಸರಗಳ್ಳತನದಲ್ಲಿ ಪುಣೆಯ ಇರಾನಿ ತಂಡದ ಕೈವಾಡವಿದೆ ಎಂದು ತಿಳಿದುಬಂದಿದ್ದು ಈ ಕುರಿತು ಸಮಗ್ರ ತನಿಖೆ ಜೊತೆಗೆ ಸರಗಳ್ಳರನ್ನು ನಿಗ್ರಹಿಸಲು ಕ್ರಮ ವಹಿಸಲಾಗಿದೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಎಎಸ್‍ಪಿ ರಾಜೀವ್, ಮಹಿಳಾ ಪೊಲೀಸ್ ಠಾಣೆಯ ನಿರೀಕ್ಷಕಿ ನಾಗಮ್ಮ ಇದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending