Connect with us

ದಿನದ ಸುದ್ದಿ

ದಾವಣಗೆರೆ | ಅಶೋಕ ಟಾಕೀಸ್ ಬಳಿಯ ರೈಲ್ವೇ ಗೇಟ್ ಸಮಸ್ಯೆಗೆ ಪರಿಹಾರ : ಎರಡು ಕಡೆ ಅಂಡರ್ ಬ್ರಿಡ್ಜ್ ನಿರ್ಮಿಸಿ ಕಾಮಗಾರಿ ಆರಂಭ : ರೈಲ್ವೇ ಸಚಿವ ಸುರೇಶ್ ಅಂಗಡಿ

Published

on

ಸುದ್ದಿದಿನ,ದಾವಣಗೆರೆ : ಅಶೋಕ ಟಾಕೀಸ್ ಬಳಿಯ ರೈಲ್ವೇ ಗೇಟ್‍ಗೆ ಸಂಬಂಧಿಸಿದಂತೆ ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ರೈಲ್ವೇ ಅಂಡರ್ ಬ್ರಿಡ್ಜ್ ಅಥವಾ ಓವರ್‍ಬ್ರಿಡ್ಜ್ ಸಮಸ್ಯೆಗೆ ಪರಿಹಾರ ದೊರೆತಿದ್ದು, ಶೀಘ್ರದಲ್ಲಿಯೇ ಈ ಸ್ಥಳದಲ್ಲಿ ಎರಡು ಕಡೆ ವೆಂಟ್‍ಗಳ(ಅಂಡರ್‍ಬ್ರಿಡ್ಜ್)ನಿರ್ಮಾಣಕ್ಕೆ ಯೋಜನೆ ಸಿದ್ದಪಡಿಸಿ ಕಾಮಗಾರಿ ಆರಂಭಿಸಲಾಗುವುದು ಎಂದು ಕೇಂದ್ರದ ರಾಜ್ಯ ರೈಲ್ವೇ ಸಚಿವರಾದ ಸುರೇಶ್ ಸಿ.ಅಂಗಡಿ ಹೇಳಿದರು.

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ರೈಲ್ವೇ ಯೋಜನೆಗಳ ಕುರಿತು ಶುಕ್ರವಾರ ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಅಶೋಕ ಟಾಕೀಸ್ ಬಳಿ ಇರುವ ರೇಲ್ವೇ ಗೇಟ್ ಬಳಿ ಸಾರ್ವಜನಿಕರು ಸೇರಿದಂತೆ ಓಡಾಟಕ್ಕೆ ಅನೇಕ ವರ್ಷಗಳಿಂದ ಸಮಸ್ಯೆ ಉಂಟಾಗುತ್ತಿದ್ದು ಈ ಸಮಸ್ಯೆಯನ್ನು ಬಗೆಹರಿಸಲು ಹಲವಾರು ಬಾರಿ ಪ್ರಯತ್ನಿಸಿದ್ದು, ಈ ಬಾರಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ.

ಪ್ರಸ್ತುತ ರೇಲ್ವೇ ಗೇಟ್ ಬಳಿ ಒಂದು ಮತ್ತು ಪುಷ್ಪಾಂಜಲಿ ಟಾಕೀಸ್ ಬಳಿ ಲಾರಿಗಳನ್ನು ನಿಲ್ಲಿಸುವ ಜಾಗದಲ್ಲಿ ಒಂದು ಒಟ್ಟು ಎರಡು ರೈಲ್ವೇ ಅಂಡರ್ ಬಿಡ್ಜ್ (ಆರ್‍ಯುಬಿ-ವೆಂಟ್)ಗಳನ್ನು ನಿರ್ಮಿಸಲಾಗುವುದು. ಈ ವೆಂಟ್‍ಗಳಿಂದ ದೊಡ್ಡ ದೊಡ್ಡ ವಾಹನಗಳೂ ಓಡಾಡುವ ರೀತಿಯಲ್ಲಿ ಯೋಜನೆ ಸಿದ್ದಪಡಿಸಿ ನಿರ್ಮಿಸುವ ಮೂಲಕ ಅನೇಕ ವರ್ಷಗಳ ಸಮಸ್ಯೆಗೆ ಪರಿಹಾರ ಒದಗಿಸಲಾಗುವುದು ಎಂದರು.

ಹಾಗೂ ಪಿ.ಬಿ.ರಸ್ತೆಯಲ್ಲಿರುವ ಎ.ಸಿ ರವರ ಕಚೇರಿಯನ್ನು ಬೇರೆಡೆ ಶಿಫ್ಟ್ ಮಾಡಿ, ಆ ಜಾಗದಲ್ಲಿ ಆರ್‍ಯುಬಿ ನಿರ್ಮಿಸಲಾಗುವುದು. ಜೊತೆಗೆ ಸಣ್ಣ ಪುಟ್ಟ ಮೋಟಾರ್ ಸೈಕಲ್ ಓಡಾಡಲು ಪಾಥ್ ನಿರ್ಮಿಸಲಾಗುವುದು ಎಂದರು.

ರೈಲ್ವೇ ಸಚಿವರ ಪ್ರಮುಖ ಹೇಳಿಕೆಗಳು

  • 2022 ರ ವೇಳೆಗೆ ದೇಶಾದ್ಯಂತ ಎಲ್ಲ ರೈಲ್ವೆಗಳನ್ನು ವಿದ್ಯುದೀಕರಣ ಮಾಡಲಾಗುವುದು. ಹಾಗೂ 2022 ರ ಅಂತ್ಯಕ್ಕೆ ರಾಜ್ಯಾದ್ಯಂತ ರೈಲ್ವೇ ಡಬ್ಲಿಂಗ್ ಕಾಮಗಾರಿಗಳನ್ನು ಮುಗಿಸಲು ಸಂಪೂರ್ಣ ಪ್ರಯತ್ನ ಮಾಡಲಾಗುವುದು.
  • ಮುಂಬೈ ಕೋಲ್ಕತ್ತಾ ವರೆಗೆ ರಫ್ತು ಮತ್ತು ಆಮದು ಮಾಡಲಿಕ್ಕೋಸ್ಕರ ಒಂದು ಡೆಡಿಕೇಟೆಡ್ ಟ್ರೈನ್ ಬಿಡಲಾಗಿದ್ದು ಇದೇ ರೀತಿಯ ರೈಲನ್ನು ರಾಜ್ಯದ ಅಂಕೋಲ-ಹುಬ್ಬಳಿಯಲ್ಲಿ ಬಿಡಲು ಪ್ರಸ್ತಾವನೆ ಆಗಿದೆ. ಆದರೆ ಈ ರೈಲಿನ ಕುರಿತಾಗಿ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿರುವ ಕಾರಣ ಈಗ ಬಾಕಿ ಇದೆ. ಇದು ಇತ್ಯರ್ಥವಾದ ಬಳಿಕ ಆದಷ್ಟು ಶೀಘ್ರದಲ್ಲಿ ಕೆಲಸ ಆರಂಭಿಸಲಾಗುವುದು.
  • ರಾಜ್ಯದ ಪ್ರಸ್ತಾಪಿತ ರೈಲ್ವೇ ಯೋಜನೆಗಳಿಗೆ ಸಂಬಂಧಿಸಿದಂತೆ ಡಿಸಿ ಗಳು ಮತ್ತು ಎಸ್‍ಎಲ್‍ಓ ಗಳು ಎಷ್ಟು ಬೇಗ ಭೂಸ್ವಾಧೀನ ಪ್ರಕ್ರಿಯೆ ನಡಸಿ ಜಾಗ ನೀಡುತ್ತಾರೋ ಅಷ್ಟು ಬೇಗ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು.

ತುಮಕೂರು-ಚಿತ್ರದುರ್ಗ-ದಾವಣಗೆರೆ ಹೊಸ ರೈಲ್ವೆ ಲೈನ್ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ದಾವಣಗೆರೆ ತಾಲ್ಲೂಕಿನ 14 ಗ್ರಾಮಗಳು ಒಳಪಡಲಿದ್ದು ಒಟ್ಟು ವಿಸ್ತೀರ್ಣ 238 ಎಕರೆ ಭೂಸ್ವಾಧೀನ ಮಾಡಬೇಕಿದ್ದು, ಈ ಪೈಕಿ 209 ಎಕರೆ ಭೂಸ್ವಾಧೀನಕ್ಕೆ ಅಂತಿಮ ನೋಟಿಫಿಕೇಷನ್ ಆಗಿದೆ. ಇನ್ನೊಂದು ತಿಂಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ವಿಶೇಷ ಭೂಸ್ವಧೀನಾಧಿಕಾರಿ ರೇಷ್ಮಾ ಹಾನಗಲ್ ಹೇಳಿದರು.

ಹುಬ್ಬಳ್ಳಿ-ಚಿಕ್ಕಜಾಜೂರು ರೈಲ್ವೇ ಟ್ರ್ಯಾಕ್ ಡಬ್ಲಿಂಗ್ ಲೈನ್ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಇಲ್ಲ. ಆದರೆ ಒಂದು ಸ್ಟ್ರೆಚ್‍ಗೆ ಜನರಲ್ ಅವಾರ್ಡ್ ಮಾಡಬೇಕಿದ್ದು ರೂ. 5 ಕೋಟಿ ಠೇವಣಿ ಇರಿಸಬೇಕಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಹೊಸ ರೈಲು ಮಾರ್ಗಕ್ಕಾಗಿ ಎರಡು ಹಂತದಲ್ಲಿ ಒಟ್ಟು 1349.23 ಎಕರೆ ಜಮೀನು ಭೂಸ್ವಾಧೀನ ಮಾಡಿಕೊಳ್ಳಬೇಕಿದ್ದು ಇದಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ ಎಂದು ವಿಶೇಷ ಭೂಸ್ವಾಧೀನಾಧಿಕಾರಿ ಸರೋಜಾ ಹೇಳಿದಾಗ, ಸಚಿವರು ಇನ್ನು ನಾಲ್ಕು ತಿಂಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಮುಗಿಸುವಂತೆ ತಿಳಿಸಿದರು.

ಸಚಿವರು ಮಾತನಾಡಿ, ರೈಲ್ವೇ ಸೇವೆಗೆ ಸಂಬಂಧಿಸಿದಂತೆ ನಮ್ಮ ಆದ್ಯತೆ ಸುರಕ್ಷತೆ, ಸ್ವಚ್ಚತೆ ಮತ್ತು sಸಮಯಪ್ರಜ್ಞೆ ಆಗಿದೆ. ಸಮಯಕ್ಕೆ ಕೂಡ ಹೆಚ್ಚಿನ ಒತ್ತು ನೀಡಲಾಗುವುದು. ರೈಲ್ವೆ ಸಾರ್ವಜನಿಕರ ಆಸ್ತಿಯಾಗಿದ್ದು ಸಾರ್ವಜನಿಕರು ಸ್ವಚ್ಚವಾಗಿ ಇಟ್ಟುಕೊಳ್ಳಬೇಕು ಎಂದು ಕರೆ ನೀಡಿದರು.

ಸಂಸದರಾದ ಜಿ.ಎಂ.ಸಿದ್ದೇಶ್ವರ್ ಮಾತನಾಡಿ, ದಾವಣಗೆರೆಯ ಹೊಸ ರೇಲ್ವೇ ಸ್ಟೇಷನ್‍ನ ಪ್ಲಾಟ್‍ಫಾರಂಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸಬೇಕು. ಹಾಗೂ ಸ್ಟೇಷನ್‍ನ ಪ್ರವೇಶ ಮತ್ತು ನಿರ್ಗಮನಗಳಲ್ಲಿ ಎರಡು ಕಡೆ ಎಸ್ಕಲೇಟರ್‍ಗಳನ್ನು ಈ ಸಾಲಿನ ಡಿಸೆಂಬರ್ ಅಂತ್ಯದೊಳಗೆ ನಿರ್ಮಿಸಬೇಕು ಎಂದರು.

ಹರಿಹರ ರೈಲ್ವೇ ನಿಲ್ದಾಣದ ಉನ್ನತೀಕರಣ, ಹರಪನಹಳ್ಳಿ ಸ್ಟೇಷನ್‍ನಲ್ಲಿ ರಾತ್ರಿ ಮತ್ತು ಬೆಳಗಿನ ಜಾವ ಸ್ಟ್ರೀಟ್ ಲೈಟ್‍ಗಳ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ಸೌಲಭ್ಯ ಆಗಬೇಕು. ಬಾತಿ-ಕರೂರ್ ರೈಲ್ವೇ ಕ್ರಾಸಿಂಗ್ ಬಳಿ ನೀರು ಸಂಗ್ರಹವಾಗುತ್ತಿದೆ. ಈ ಬಗ್ಗೆ ಇಂಜಿನಿಯರ್‍ಗಳು ಕ್ರಮ ಕೈಗೊಳ್ಳಬೇಕೆಂದರು

ಸಂಶೋಧನೆಗೆ ಸೂಚನೆ

ರೈಲ್ವೇ ಸಚಿವರು ಪ್ರತಿಕ್ರಿಯಿಸಿ, ರೈಲ್ವೇ ಅಂಡರ್ ಬ್ರಿಡ್ಜ್‍ಗಳಲ್ಲಿ ನೀರು ನಿಲ್ಲುವ ಸಮಸ್ಯೆ ಸಾಮಾನ್ಯವಾಗಿದ್ದು, ಈ ಸಮಸ್ಯೆ ಬಗೆಹರಿಸಲು ರೈಲ್ವೇ ಇಂಜಿನಿಯರ್‍ಗಳು ಸಂಶೋಧನೆ ನಡೆಸಬೇಕು. ಪಂಪ್ ಇಟ್ಟು ನೀರು ತೆಗೆಯುವುದು ಮುಖ್ಯವಲ್ಲ, ಬದಲಾಗಿ ಶಾಶ್ವತ ಪರಿಹಾರಕ್ಕಾಗಿ ಸಂಶೋಧನೆ ಕೈಗೊಳ್ಳುವಂತೆ ಅವರಿಗೆ ಸೂಚನೆ ನೀಡಿದರು.

ಸಂಸದರು, ವಾಸ್ಕೋ-ಯಶವಂತಪುರದ ಟ್ರೈನುಗಳು ಚಿಕ್ಕಜಾಜೂರಿನಲ್ಲಿ ನಿಲುಗಡೆ ಮಾಡಬೇಕು. ಎಲ್‍ಸಿ 174 ಆನಗೋಡು ಇಲ್ಲಿ ಫ್ಲೈಓವರ್ ಆಗಬೇಕು. ಮಂಡ್ಯ-ಹಡಗಲಿ ಹೈವೇ ಆಗಬೇಕು, ಜೊತೆಗೆ ಮಾಯಕೊಂಡದಲ್ಲಿ ಫ್ಲೈ ಓವರ್ ನಿರ್ಮಿಸಬೇಕು. ಭರಮಸಾಗರ-ಜಗಳೂರು ಏತ ನೀರಾವರಿ ಕಾಮಗಾರಿಗೆ ರೈಲ್ವೇಯವರು ಅನುಮತಿ ನೀಡಬೇಕು ಎಂದು ಹೇಳಿದರು.

ಸಭೆಯಲ್ಲಿ ಶಾಸಕರಾದ ಎಸ್.ಎ ರವೀಂದ್ರನಾಥ್, ಪ್ರೊ. ಲಿಂಗಣ್ಣ, ಎಸ್.ವಿ ರಾಮಚಂದ್ರಪ್ಪ, ಜಿಪಂ ಅಧ್ಯಕ್ಷೆ ದೀಪಾ ಜಗದೀಶ್, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಪಾಲಿಕೆ ಸದಸ್ಯರು, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ, ರೈಲ್ವೇ ಜಿಎಂ ಎ.ಕೆ ಸಿಂಗ್, ಮೈಸೂರ್ ರೈಲ್ವೇ ಡಿಆರ್‍ಎಂ ಅಪರ್ಣ ಗರಗ್, ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ಎಸಿ ಮಮತಾ ಹೊಸಗೌಡರ್, ದೂಡಾ ಆಯುಕ್ತ ಬಿ.ಟಿ ಕುಮಾರಸ್ವಾಮಿ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಸುದ್ದಿದಿನ‌.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ರಾಜ್ಯದಲ್ಲಿಂದು 4,169 ಕೊರೋನಾ ಕೇಸ್ ಪತ್ತೆ, ಒಟ್ಟು 51,422 ಕೇಸ್..!

Published

on

ಸುದ್ದಿದಿನ:ಬೆಂಗಳೂರು: ಇಲ್ಲಿಯವರೆಗಿನ ಎಲ್ಲ ದಾಖಲೆಗಳನ್ನು ಕೊರೊನಾ ಇಂದು ಬ್ರೇಕ್ ಮಾಡಿದ್ದು, ರಾಜ್ಯದಲ್ಲಿ ಒಂದೇ ದಿನ 4,169 ಹೊಸ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 51,422ಕ್ಕೇರಿಕೆ ಆಗಿದೆ. ಇವತ್ತು 104 ಜನರನ್ನು ಮಹಾಮಾರಿ ಕೊರೊನಾ ಬಲಿ ಪಡೆದಿದೆ.

ಬೆಂಗಳೂರಿನಲ್ಲಿ ಸಹ ಕೊರೊನಾ ಸ್ಫೋಟವಾಗಿದ್ದು, ಒಂದೇ ದಿನ 2,344 ಪ್ರಕರಣಗಳು ವರದಿ ಆಗಿವೆ. ಒಟ್ಟಾರೆ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 25 ಸಾವಿರದ ಗಡಿ ದಾಟಿದೆ. ದಿನದಿಂದ ದಿನಕ್ಕೆ ರಾಜ್ಯದಲ್ಲಿ ಕೊರೊನಾದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಿದೆ. ರಾಜ್ಯದಲ್ಲಿ ಇದುವರೆಗೂ 1032 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

‘ಸುದ್ದಿ ಸಂವಿಧಾನ’ ಕೃತಿ ಬಿಡುಗಡೆ ವೆಬಿನಾರ್ ಮಾಧ್ಯಮಕ್ಕೆ ಹೊಸ ಆಯಾಮ ಅಗತ್ಯ: ವೀರೇಂದ್ರ ಪಿ.ಎಂ

Published

on

ಸುದ್ದಿದಿನ,ಉಜಿರೆ: ಆಧುನಿಕ ಸುದ್ದಿಮಾಧ್ಯಮ ವಲಯವು ವಾಚಾಳಿತನದ ಶಾಪಕ್ಕೀಡಾಗಿದ್ದು, ಇದರ ನಕಾರಾತ್ಮಕ ಪರಿಣಾಮಗಳನ್ನು ತಡೆದು ಹೊಸ ಆಯಾಮ ನೀಡುವ ವೃತ್ತಿಪರ ಬದ್ಧತೆಯ ಅನಿವಾರ್ಯತೆ ಇದೆ ಎಂದು ಪತ್ರಕರ್ತ, ತುಂಗಭದ್ರಾ ನ್ಯೂಸ್ ಪೋರ್ಟಲ್ ಸಂಪಾದಕ ವೀರೇಂದ್ರ ಪಿ.ಎಂ ಅಭಿಪ್ರಾಯಪಟ್ಟರು.

ಉಜಿರೆಯ ಎಸ್.ಡಿ.ಎಂ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮಲ್ಟಿಮೀಡಿಯಾ ಸ್ಟುಡಿಯೋದಲ್ಲಿ ಆಯೋಜಿತವಾದ ಸಹಾಯಕ ಪ್ರಾಧ್ಯಾಪಕ ಡಾ.ಎನ್.ಕೆ.ಪದ್ಮನಾಭ ಅವರ ‘ಸುದ್ದಿ ಸಂವಿಧಾನ’ ಕೃತಿ ಬಿಡುಗಡೆ ವೆಬಿನಾರ್‌ನಲ್ಲಿ ಕೃತಿಯ ಕುರಿತು ಅವರು ಮಾತನಾಡಿದರು.

ಯಾವಾಗ ಒಬ್ಬ ಪತ್ರಕರ್ತ ವಾಚಾಳಿತನಕ್ಕೆ ಬೀಳುತ್ತಾನೋ ಆಗ ಮಾಧ್ಯಮ ನಿರೀಕ್ಷಿಸುವ ವೃತ್ತಿಬದ್ಧತೆಯಿಂದನುಣುಚಿಕೊಳ್ಳಲಾರಂಭಿಸುತ್ತಾನೆ. ಮಾತಿನ ಮಂಟಪ ಕಟ್ಟುವುದರಿಂದ ಯಾವುದೇ ಪ್ರಯೋಜನವಿಲ್ಲ. ಸುದ್ದಿಲೋಕಕ್ಕೆ ಬೇಕಾದದ್ದು ವಾಚಾಳಿತನವಲ್ಲ. ಸುದ್ದಿಮಾಧ್ಯಮವು ಸಂಯಮಪೂರ್ಣ ಚಿಂತನೆ ಮತ್ತು ಅದಕ್ಕೆ ಅನುಗುಣವಾದ ಕಾರ್ಯನಿರ್ವಹಣೆಯನ್ನು ವರದಿಗಾರರು, ಸಂಪಾದಕರಿಂದ ನಿರೀಕ್ಷಿಸುತ್ತದೆ ಎಂದು ಹೇಳಿದರು.

ವರದಿಗಾರನಾದವನು ಕಣ್ಣು ಮತ್ತು ಕಿವಿಯನ್ನು ಸದಾ ಕಾಲ ಜಾಗೃತ ಸ್ಥಿತಿಯಲ್ಲಿಡಬೇಕು. ಆಗ ಮಾತ್ರ ವಿವಿಧ ವಿಚಾರಗಳನ್ನು ಭಿನ್ನವಾಗಿ ಗ್ರಹಿಸಿಕೊಳ್ಳಲು ಸಾಧ್ಯವಾಗುತ್ತದೆ. ಸುದ್ದಿಗೆ ಕಲೆ ಮತ್ತು ವಿಜ್ಞಾನದ ಆಯಾಮವೂ ಇದೆ ಎಂಬುದನ್ನು ಗ್ರಹಿಸಿಕೊಂಡ ವರದಿಗಾರರು ಸುದ್ದಿ ಮಾಧ್ಯಮದಲ್ಲಿ ಭಿನ್ನವಾಗಿ ಗುರುತಿಸಿಕೊಳ್ಳಲು ಸಾಧ್ಯ.

ಈ ಬಗೆಯ ಗ್ರಹಿಕೆಯು ವೃತ್ತಿಪರ ಯಶಸ್ಸನ್ನು ಕಂಡುಕೊಳ್ಳುವುದಕ್ಕೆ ಪೂರಕವಾಗುವುದಲ್ಲದೇ ಬರಹ-ಚಿಂತನೆಯ ಮೂಲಕ ಸಾಮಾಜಿಕ ಕೊಡುಗೆಯನ್ನೂ ನೀಡಬಹುದು. ಈ ಅಂಶವನ್ನು ಡಾ.ಎನ್.ಕೆ.ಪದ್ಮನಾಭ ಅವರ ‘ಸುದ್ದಿ ಸಂವಿಧಾನ’ ಕೃತಿಯು ಆಪ್ತವಾಗಿ ಕಟ್ಟಿಕೊಟ್ಟಿದೆ ಎಂದರು.

ವಿವಿಧ ಬಗೆಯ ಸಮಸ್ಯೆಗಳನ್ನು ಗ್ರಹಿಸುವ ವಿಧಾನ ಸುದ್ದಿ ಬರವಣಿಗೆಯಲ್ಲಿ ಬಹಳ ಮುಖ್ಯವಾದುದು. ಈ ಗ್ರಹಿಕೆಯ ನೆರವಿನೊಂದಿಗೇ ಜನರಿಗೆ ಮಾಹಿತಿ ನೀಡಿ ಅವರೊಳಗೆ ಜಾಗೃತಿ ಮೂಡಿಸಬಹುದಾದ ಸುದ್ದಿಸಂಸ್ಕೃತಿಯನ್ನು ಹುಟ್ಟುಹಾಕಬಹುದು. ಈ ಆಶಾವಾದದೊಂದಿಗೇ ಎಲ್ಲ ಸುದ್ದಿ ಮಾಧ್ಯಮ ವೃತ್ತಿಪರರು ಕಾರ್ಯನಿರ್ವಹಿಸಬೇಕಾಗುತ್ತದೆ ಎಂದು ನುಡಿದರು.

ಸುದ್ದಿ ಸಂವಿಧಾನ’ ಕೃತಿಯನ್ನು ಬಿಡುಗಡೆಗೊಳಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರೊ.ಭಾಸ್ಕರ ಹೆಗಡೆ ಮಾತನಾಡಿದರು. ಬಹುಮಾಧ್ಯಮಗಳು ತರಹೇವಾರಿ ಮಾಹಿತಿಯನ್ನು ನೀಡುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಯಾವುದು ನಿಜವಾದ ಸುದ್ದಿ ಎಂಬುದನ್ನು ಮನಗಾಣಿಸುವಲ್ಲಿ ಎನ್.ಕೆ.ಪದ್ಮನಾಭ ಅವರ ಕೃತಿ ಯಶಸ್ವಿಯಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೃತಿಯ ಲೇಖಕ ಡಾ.ಎನ್.ಕೆ.ಪದ್ಮನಾಭ ಪರಂಪರೆಯ ಚಲನಶೀಲತೆಯನ್ನು ಮುನ್ನಡೆಸುವ ಪಾತ್ರ ಸುದ್ದಿಯಿಂದ ನಿರ್ವಹಿಸಲ್ಪಡಬೇಕಾದ ಅಗತ್ಯವಿದೆ ಎಂದರು. ಸುದ್ದಿಮಾಧ್ಯಮವನ್ನು ಪ್ರಜಾಪ್ರಭುತ್ವದ ಕಾವಲುನಾಯಿ ಎಂದು ಹೇಳಲಾಗುತ್ತದೆ. ಆದರೆ, ಈ ಕಾವಲು ನಾಯಿಯ ಸ್ಥಾನವನ್ನು ಧನದಾಹದ ಸಂಕುಚಿತತೆಯನ್ನೇ ಗುಣಲಕ್ಷಣವನ್ನಾಗಿಸಿಕೊಂಡ ರಾಕ್ಷಸಪ್ರಾಣಿ ಆಕ್ರಮಿಸಿಕೊಂಡಿದೆ. ಇದರ ಹಿಡಿತದಿಂದ ಈ ಸ್ಥಾನವನ್ನು ವಿಮುಕ್ತಗೊಳಿಸಿ ಕಾವಲುನಾಯಿಯ ಪಾತ್ರ ನಿರಂತರವಾಗಬೇಕಿದೆ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಕೃತಿಯ ಮುಖಪುಟ ರಚಿಸಿದ ಸುಷ್ಮಾ ಉಪ್ಪಿನ್ ಇಸಳೂರು, ಗ್ರಾಫಿಕ್ ಸ್ಪರ್ಶ ನೀಡಿದ ಕೃಷ್ಣಪ್ರಶಾಂತ್, ಸಹಾಯಕ ಪ್ರಾಧ್ಯಾಪಕರಾದ ಸುನೀಲ್ ಹೆಗ್ಡೆ, ಡಾ.ಹಂಪೀಶ್, ಗೀತಾ ವಸಂತ್ ಇಜಿಮಾನ್ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕೋಗಲೂರು ಗ್ರಾಮದಲ್ಲಿ ಕೊರೋನ ಆತಂಕ : ಹೊರ ರಾಜ್ಯದಿಂದ ಬಂದವರನ್ನು ಕ್ವಾರಂಟೈನ್ ಮಾಡಲಾಗುವುದು : ತಹಶಿಲ್ದಾರ್ ಪುಟ್ಟರಾಜಗೌಡ

Published

on

ಸುದ್ದಿದಿನ,ಚನ್ನಗಿರಿ/ಕೋಗಲೂರು : ಗ್ರಾಮದಲ್ಲಿ‌ 65 ವರ್ಷ ವಯಸ್ಸಿನ ಮಹಿಳೆಯೊಬ್ಬರಿಗೆ ಕೊರೋನ ಸೋಂಕು‌ ದೃಡ ಪಟ್ಟಿದ್ದು. ಸೋಂಕಿತ ವ್ಯಕ್ತಿಯು ಮದುವೆ ಸಮಾರಂಭಗಳಲ್ಲಿ ಹಾಗೂ ಗ್ರಾಮದಲ್ಲಿ‌ ಸಾಕಷ್ಟು ಓಡಾಡಿರುವುದನ್ನು ಕಂಡ ಗ್ರಾಮಸ್ಥರು ಅತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಬೆಂಗಳೂರು ಹಾಗೂ ವಿವಿದ ಕಡೆಗೆ ಕೆಲಸಕ್ಕಾಗಿ ಹರಸಿ ಹೋಗಿದ್ದವರೆಲ್ಲರೂ ಸಹ ತಂತಮ್ಮ ಗ್ರಾಮಗಳಿಗೆ ವಾಪಸ್ಸಾಗುತ್ತಿರುವುದನ್ನು ನೋಡಿದರೆ ಮತ್ತಷ್ಟು ಗ್ರಾಮಸ್ಥರಲ್ಲಿ ಭಯದ ವಾತವರಣ ಸೃಷ್ಠಿಯಾಗುತ್ತಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತ ಪಡಿಸಿದ್ದಾರೆ.

ಹೊರಗಡೆಯಿಂದ ಬರುತ್ತಿರುವವರ ಮೇಲೆ ಗ್ರಾಪಂ ಆಡಳಿತ ಹಾಗೂ ಅಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಈ ವಿಚಾರದ ಮುನ್ನೆಚ್ಚರಿಕೆಯಿಂದ ಗ್ರಾಮದಲ್ಲಿ‌ ಗ್ರಾಮಪಂಚಾಯಿತಿ ಆಡಳಿತವು ದ್ವನಿವರ್ಧಕ ಮೂಲಕ‌  ಜನತೆರಿಗೆ ಮಾಸ್ಕ್ ಧರಸಿ ಅಂತರ ಕಾಯ್ದುಕೊಳ್ಳಲು ಸಂದೇಶ ಸಾರುತಿದ್ದರೂ ಸಹ ಕೆಲವರು ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರುಗಳಿಗೆ ಮಾಹಿತಿಯನ್ನು ನೀಡದೆ ಗುಪ್ತವಾಗಿ ಮನೆಗಳನ್ನು ಸೇರಿಕೊಳ್ಳುತ್ತಿದ್ದಾರೆ ಎಂದು ಗ್ರಾಮದ ಜನತೆ ಹೇಳಿದ್ದಾರೆ. ‌

ಕೋಗಲೂರು ಗ್ರಾಮದಲ್ಲಿ ಸೀಲ್ ಡೌನ್

ಕೊರೋನ ಬಗ್ಗೆ ಭಯ ಬೇಡ ಎಚ್ಚರಿಕೆಯಿಂದ ಇರಿ : ತಹಸೀಲ್ದಾರ್ ಪುಟ್ಟರಾಜಗೌಡ

ಇತ್ತೀಚೆಗೆ ಹೊರ ರಾಜ್ಯಗಳಿಂದ ಹಳ್ಳಿಗಳಿಗೆ ಬರುವವರ ಸಂಖ್ಯೆ ಹೆಚ್ಚಾಗುತಿದ್ದು ತಾಲೂಕು ಆಡಳಿತವು ಸೂಕ್ಷ್ಮವಾಗಿ ಗಮನಿಸುತಿದೆ, ನಮ್ಮ ಕಂದಾಯ ಅಧಿಕಾರಿಗಳು ಅರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆ ಪರಸ್ಪರ ಸಂಪರ್ಕಹೊಂದಿದ್ದು ಹೊರಗಡೆಯಿಂದ ಬರುವವರ ಮೇಲೆ ನಿಗಾ ಇಟ್ಟಿರುತ್ತಾರೆ. ಗುಪ್ತವಾಗಿ ಮನೆ ಸೇರಿ ಕೊಂಡಿರುವವರನ್ನು ಪತ್ತೆ ಮಾಡಿ ಅವರ ಗಂಟಲು ಮಾದರಿ ಪರೀಕ್ಷೆಗೆ ಒಳಪಡಿಸಿ ಕ್ವಾರಂಟೈನ್ ಮಾಡಲಾಗುವುದೆಂದು ದೂರವಾಣಿ ಮುಖಾಂತರ ತಹಸೀಲ್ದಾರ್ ಪುಟ್ಟರಾಜಗೌಡ ರವರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending