Connect with us

ದಿನದ ಸುದ್ದಿ

ದಾವಣಗೆರೆ | ಕಫ್ರ್ಯೂ ಇದ್ರೂ ಮದುವೆ-ಅಗತ್ಯ ವಸ್ತುಗಳಿಗೆ ಅವಕಾಶ‌ ಇರತ್ತೆ : ಓದಿ ಈ ಸುದ್ದಿ

Published

on

ಸುದ್ದಿದಿನ,ದಾವಣಗೆರೆ: ರಾಜ್ಯ ಸರ್ಕಾರವು ಕೋವಿಡ್ 19 ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ಲಾಕ್‍ಡೌನ್ ಕ್ರಮಗಳ ಕುರಿತು ಮಾರ್ಗಸೂಚಿಯನ್ನು ಹೊರಡಿಸಿದ್ದು ಇವುಗಳು ರಾಜ್ಯಾದ್ಯಂತ ಮೇ 18 ರಿಂದ 31 ರವರೆಗೆ ಜಾರಿಯಲ್ಲಿರುತ್ತವೆ. ಈ ಆದೇಶದ ಮಾರ್ಗಸೂಚಿ ಕ್ರಮ ಸಂಖ್ಯೆ 6 ರಲ್ಲಿ ಭಾನುವಾರದಂದು ಸಂಪೂರ್ಣ ಲಾಕ್‍ಡೌನ್ ವಿಧಿಸಲಾಗಿದೆ.

ಪ್ರತಿದಿನ ರಾತ್ರಿ 7 ರಿಂದ ಬೆಳಿಗ್ಗೆ 7 ರವರೆಗೆ ಎಲ್ಲಾ ಅವಶ್ಯಕವಲ್ಲದ ಚಟುವಟಿಕೆಗಳ ವ್ಯಕ್ತಿಗಳ ಸಂಚಾರವನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಭಾನುವಾರದಂದು ಹೆಚ್ಚುವರಿಯಾಗಿ ಬೆಳಿಗ್ಗೆ 7 ರಿಂದ ಸಂಜೆ ರವರೆಗೆ ಸಹ ಎಲ್ಲಾ ಅವಶ್ಯಕವಲ್ಲದ ಚಟುವಟಿಕೆಗಳ ವ್ಯಕ್ತಿಗಳ ಸಂಚಾರನ್ನು ನಿಷೇಧಿಸಿದೆ (ಭಾನುವಾರದಂದು ಪೂರ್ಣ ದಿನದ ಲಾಕ್‍ಡೌನ್ ಇರುತ್ತದೆ) ಈ ಉದ್ದೇಶಕ್ಕಾಗಿ ಸಿಆರ್‍ಪಿಸಿ ಸೆಕ್ಷನ್ 144 ರಡಿಯಲ್ಲಿ ನಿಷೇಧಾತ್ಮಕ ಆದೇಶ (ಕಫ್ರ್ಯೂ)ವನ್ನು ಹೊರಡಿಸಲಾಗಿದೆ.

ಅನೇಕ ಸಾರ್ವಜನಿಕರು ಭಾನುವಾರದಂದು ಪೂರ್ಣದಿನದ ಲಾಕ್‍ಡೌನ್ ಇರುವ ಹಿನ್ನೆಲೆಯಲ್ಲಿ ಈಗಾಗಲೇ ನಿಗದಿಪಡಿಸಿರುವಂತಹ ಮದುವೆ ಸಮಾರಂಭಗಳನ್ನು ನಡೆಸಲು ಸ್ಪಷ್ಟೀಕರಣ/ಅನುಮತಿ ನೀಡುವಂತೆ ಕೋರಿರುತ್ತಾರೆ.

ಈ ಬಗ್ಗೆ ಸರ್ಕಾರವು ಮೇ 21 ರ ಆದೇಶದಲ್ಲಿ ಸ್ಪಷ್ಟೀಕರಣ ನೀಡಿದ್ದು ಆ ಪ್ರಕಾರ ಮದುವೆ ಸಮಾರಂಭಗಳು ಈ ಹಿಂದೆಯೇ ನಿಗದಿಪಡಿಸಿರುವ ಹಿನ್ನೆಲೆಯಲ್ಲಿ ವಿಶೇಷ ಪ್ರಕರಣವೆಂದು ಪರಿಗಣಿಸಿ ಸಾಮಾಜಿಕ ಅಂತರವನ್ನು ಖಾತರಿಪಡಿಸಿಕೊಂಡು ಗರಿಷ್ಟ ಅತಿಥಿಗಳ ಸಂಖ್ಯೆಯನ್ನು 50 ಕ್ಕೆ ಸೀಮಿತಗೊಳಿಸಿ ರಾಷ್ಟ್ರೀಯ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ ಸರಳವಾಗಿ ಮದುವೆ ಸಮಾರಂಭವನ್ನು ನಡೆಸಲು ಅನುಮತಿಸಲಾಗಿದೆ.

ಇದಲ್ಲದೇ ಭಾನುವಾರದಂದು ಅವಶ್ಯ ಚಟುವಟಿಕೆಗಳಾದ ಮೆಡಿಕಲ್ ಶಾಪ್, ತರಕಾರಿ ಅಂಗಡಿ(ಎಪಿಎಂಸಿ ಹಾಗೂ ತರಕಾರಿ ಮಾರುಕಟ್ಟೆ ಅಂಗಡಿಗಳನ್ನು ಹೊರತುಪಡಿಸಿ) ಹಾಲಿನ ಕೇಂದ್ರ, ಕಿರಾಣಿ ಅಂಗಡಿ, ಪೆಟ್ರೋಲ್ ಬಂಕ್, ಮಟನ್/ಚಿಕನ್ ಅಂಗಡಿಗಳಿಗೆ ಅವಕಾಶವಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಮನ ಇಚ್ಛೆಯ ಪ್ರೇಮ ಸಫಲವಾಗುವ ತಂತ್ರ

Published

on

ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂಜ್ಯೋತಿಷ್ಯರು ಪ್ರದಾನ ತಾಂತ್ರಿಕ್ ಶ್ರೀ ಗಿರಿಧರ ಭಟ್: 9945410150

ನೀವು ಪ್ರೀತಿಸಿದವರನ್ನು ನಿಮ್ಮ ಪ್ರೇಮದ ಜೀವನದಲ್ಲಿ ಬರಮಾಡಿಕೊಳ್ಳಲು ಬಯಸುವಿರಿ. ಆದರೆ ನಿಮ್ಮ ಪ್ರೇಮದಲ್ಲಿ ಜಯಸಾಧಿಸುವ ಮಾರ್ಗದಲ್ಲಿ ಅಡ್ಡಿ ಆತಂಕಗಳೇ ಹೆಚ್ಚು.

ಪ್ರೀತಿಸಿದ ವ್ಯಕ್ತಿಯು ನಿಮ್ಮ ವಿಚಾರಗಳಿಗೆ ಮನಸೋಲ ಬೇಕು. ನಿಮ್ಮ ಪ್ರೇಮದ ಕಲ್ಪನೆ ಮತ್ತು ವಿಸ್ತಾರತೆಯನ್ನು ಅವರ ಅರಿವಿಗೆ ಬರಬೇಕು. ಆಗ ತಾನೇ ಪ್ರೇಮ ಮೂಡಲು ಸಾಧ್ಯವಾಗುತ್ತದೆ.

ಕೆಲವು ಸಂದರ್ಭಗಳು ನಿಮ್ಮ ಪ್ರಯತ್ನವನ್ನು ಹುಸಿ ಗೊಳಿಸುತ್ತದೆ, ಅಂದರೆ ನಿಮ್ಮ ವ್ಯಕ್ತಿತ್ವ ಆಕರ್ಷಿತರಾಗಿರದೇ ಇರಬಹುದು ಅಥವಾ ಏಕಮುಖ ಪ್ರೇಮ ಇರಬಹುದು. ನಿಮ್ಮ ಪ್ರೇಮ ವ್ಯಕ್ತ ಪಡಿಸಲು ಅಡ್ಡಿ, ಭಯ ಇರಬಹುದು. ಇವೆಲ್ಲದಕ್ಕೂ ಪರಿಹಾರ ರೂಪವಾಗಿ ಸರಳ ತಂತ್ರ ಸೂಕ್ತವಾಗಿದೆ.

ಪಾಶಾಂಕುಶಾವಿಕ್ಷುಶರಾಸ ಬಾಣೌ ಕರೈರ್ವಹಂತಿ ಮರುಣಾಂಶುಕಾಢ್ಯಮ್!
ಉದ್ಯತ್ಪತಂಗಾಭಿರುಚಿಂ ಮನೋಜ್ಞಾಂ ಕಾಮೇಶ್ವರಿ ರತ್ನಚಿತಾಂ ಪ್ರಣೌಮಿ!!

ಈ ಮಂತ್ರವನ್ನು ದಿನ-ಒಂಬತ್ತು ಬಾರಿ ಜಪಿಸಿ ಇದರಿಂದ ನಿಮ್ಮ ಪ್ರೇಮ ಮನೋಭಿಲಾಷೆಗೆ ಜಯ ಸಾಗಲಿದೆ.

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ದೈವಿಕ ಶಾಸ್ತ್ರೋಕ್ತ ಪರಿಹಾರ ಶತಸಿದ್ಧ.

ಕರೆಮಾಡಿ: 9945410150

Continue Reading

ದಿನದ ಸುದ್ದಿ

‘ಅಲಾಯನ್ಸ್ ಏರ್’ ನಿಂದ ವಿಮಾನಯಾನ ಸಂಚಾರ ಪುನರಾರಂಭ

Published

on

ಸುದ್ದಿದಿನ,ಕಲಬುರಗಿ: ಲಾಕ್ ಡೌನ್ ಕಾರಣ ಕಳೆದ ಎರಡು ತಿಂಗಳನಿಂದ ತನ್ನ ವಿಮಾನ ಸಂಚಾರ ಸೇವೆ ನಿಲ್ಲಿಸಿದ ಅಲಾಯನ್ಸ್ ಏರ್ ವಿಮಾನ ಸಂಸ್ಥೆಯು ಲಾಕ್‍ಡೌನ್ 4.0 ಸಡಿಲಿಕೆಯ ಕಾರಣ ಗುರುವಾರ ಬೆಂಗಳೂರು-ಕಲಬುರಗಿ ಮಧ್ಯೆ ತನ್ನ ಸೇವೆ ಮತ್ತೆ ಆರಂಭಿಸಿದೆ.

ಗುರುವಾರ ಬೆಂಗಳೂರಿನಿಂದ 19 ಜನ ಯಾತ್ರಿಕರನ್ನು ಹೊತ್ತುಕೊಂಡು ಹೊರಟ ವಿಮಾನ ಬೆಳಿಗ್ಗೆ 11-45 ಗಂಟೆಗೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಂದು ತಲುಪಿತು. ಮರಳಿ ಮಧ್ಯಾಹ್ನ 12-25 ಗಂಟೆಗೆ ಇಲ್ಲಿಂದ 19 ಪ್ರಯಾಣಿಕರನ್ನು ಕರೆದುಕೊಂಡು ಬೆಂಗಳೂರಿಗೆ ಮರು ಪ್ರಯಾಣ ಬೆಳೆಸಿತು.

ಕಳೆದ ಮೇ-25 ರಂದು ಸ್ಟಾರ್ ಏರ್ ಸಂಸ್ಥೆಯು ಸಹ ಬೆಂಗಳೂರು-ಕಲಬುರಗಿ ನಡುವೆ ತನ್ನ ಸೇವೆ ಆರಂಭಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಭಾರತೀಯ ವಿಮಾನಯಾನ ಪ್ರಾಧಿಕಾರದ ಮಾರ್ಗಸೂಚಿಯಂತೆ ಕಲಬುರಗಿ ವಿಮಾನ ನಿಲ್ದಾಣದಿಂದ ಹೋಗುವ ಎಲ್ಲಾ ಪ್ರಯಾಣಿಕರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಪ್ರತಿ ಪ್ರಯಾಣಿಕನಿಂದ ಅರೋಗ್ಯದ ಬಗ್ಗೆ ಸ್ವಯಂ ದೃಢೀಕರಣ ಪಡೆದುಕೊಳ್ಳಲಾಗುತ್ತಿದೆ. ಆರೋಗ್ಯ ಸೇತು ಆ್ಯಪ್ ಪ್ರದರ್ಶಿಸುವುದು ಕಡ್ಡಾಯವಾಗಿದೆ.

ಪ್ರಯಾಣಿಕರ ಲಗೇಜ್‍ಗಳನ್ನು ಡಿಸಿನ್ಫೆಕ್ಟ್ ಮಾಡಿಯೆ ವಿಮಾನಕ್ಕೆ ಹತ್ತಿಸಲಾಗುತ್ತದೆ. ಇನ್ನು ಬೆಂಗಳೂರಿನಿಂದ ಬರುವ ಪ್ರಯಾಣಿಕರಿಗೂ ಸ್ಕ್ರೀನಿಂಗ್ ಮಾಡಲಾಗುವುದಲ್ಲದೆ ಎಲ್ಲರ ವಿವರವನ್ನು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮಾಹಿತಿ ಪಡೆಯುತ್ತಿದ್ದಾರೆ ಎಂದು ಕಲಬುರಗಿ ವಿಮಾನ ನಿಲ್ದಾಣದ ಎ.ಎ.ಐ. ನಿರ್ದೇಶಕ ಜ್ಣಾನೇಶ್ವರ ರಾವ್ ತಿಳಿಸಿದರು.

ಜೂನ್-1 ರಿಂದ ಅಲಾಯನ್ಸ್ ಏರ್ ವಿಮಾನ ಸಂಚಾರ ಸಮಯದಲ್ಲಿ ಬದಲಾವಣೆ: ಅಲಾಯನ್ಸ್ ಏರ್ ಸಂಸ್ಥೆಯ ವಿಮಾನವು ಜೂನ್-1 ರಿಂದ ಸೋಮವಾರ ಮತ್ತು ಮಂಗಳವಾರ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬೆಳಿಗ್ಗೆ 8-45 ಗಂಟೆಗೆ ಆಗಮಿಸಿ 9-25ಕ್ಕೆ ಬೆಂಗಳೂರಿನತ್ತ ಮರು ಪ್ರಯಾಣ ಬೆಳಸಲಿದೆ. ಬುಧವಾರದಿಂದ ರವಿವಾರ ವರೆಗೆ ಬೆಳಿಗ್ಗೆ 11-45 ಗಂಟೆಗೆ ಆಗಮಿಸಿ 12-25ಕ್ಕೆ ಬೆಂಗಳೂರಿಗೆ ಟೇಕ್ ಆಫ್ ಆಗಲಿದೆ ಎಂದು ಜ್ಞಾನೇಶ್ವರರಾವ್ ತಿಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಬುದ್ಧ ಹುಟ್ಟಿದ ನಾಡು ಭಾರತ ಅರ್ಥಾತ್ ಜಂಬೂ ದ್ವೀಪ

Published

on

  • ಶಿವಸ್ವಾಮಿ ಬೌದ್ಧ ಉಪಾಸಕರು

India is the Land of Buddha ” “Buddhism is Future religion in the world” ಬೌದ್ಧ ಧಮ್ಮವು ವಿಶ್ವದ ಮುಂದಿನ ಭವಿಷ್ಯದ ಧರ್ಮವಾಗಲಿದೆ ಎಂಬ ಡಾ.ಬಾಬಾಸಾಹೇಬರ ಆಶಯ ಸತ್ಯವಾಗುತ್ತಿದೆ. ಬುದ್ಧ ಹುಟ್ಟಿದ ನಾಡು ಭಾರತದ 97% ಜನರು ಮೂಲದಲ್ಲಿ ಬೌದ್ಧ ಧಮ್ಮದವರಾಗಿದ್ದರೆಂಬುದು ಪ್ರಕೃತಿಯಷ್ಟೇ ಸತ್ಯ.

ಬುದ್ಧ ಭಾರತವೆಂಬ ಜಂಬೂ ದ್ವೀಪದಲ್ಲಿ ಜನಿಸಿದರು, ಜಂಬೂ ದ್ವೀಪವೆಂದರೆ ಈಗಿನ ಆಫ್ಘಾನಿಸ್ಥಾನ, ಪಾಕಿಸ್ತಾನ, ನೇಪಾಳ, ಭೂತನ್, ಬಾ0ಗ್ಲಾದೇಶ, ಶ್ರೀಲಂಕಾ, ಬರ್ಮಾಕ್ಕೆ ಹೊಂದಿಕೊಂಡಿರುವ ಏಷ್ಯಾಖಂಡದ ಬಹುಭಾಗವೇ ಆಗಿದೆ. ಇಂದೂ ಜಗತ್ತಿನ 38 ರಾಷ್ತ್ರಗಳಲ್ಲಿ ಬೌದ್ಧ ಧಮ್ಮ ಪ್ರತಿಯೊಬ್ಬರ ಮನ ಮನೆಗಳನ್ನು ಪ್ರವೇಶಿಸಿ, ಪ್ರಜ್ವಲಿಸಿ ಬೆಳಕಾಗಿ ನಿಂತಿದೆ. ಒಂದು ಜ್ಞಾನದ ಜ್ಯೋತಿಯಿಂದ ಮತ್ತೊಂದು ಜ್ಞಾನದ ಜ್ಯೋತಿಯನ್ನು ಬೆಳಗಲು ಸಾಧ್ಯವೇ ಹೊರತು, ಅಜ್ಞಾನದಿಂದ ಜ್ಞಾನದ ಜ್ಯೋತಿ ಬೆಳಗಲು ಸಾಧ್ಯವಿಲ್ಲ ಎಂಬ ಸರಳ ಸತ್ಯವನ್ನು ಅರಿತ ಬುದ್ಧ ಅಂಧಕಾರದಲ್ಲಿ ಮುಳುಗಿದ್ದ ಈ ಜಗತ್ತಿಗೆ ಸುಜ್ಞಾನದ ಬೆಳಕನ್ನು ನೀಡಿದ.

ಭಾರತದಲ್ಲೇ ಹುಟ್ಟಿದ ಬೌದ್ಧಧಮ್ಮ ಮನೋವ್ಯಾಧಿಯ ವೈದಿಕತ್ವದ ಅಟ್ಟಹಾಸಕ್ಕೆ ಸಿಕ್ಕಿ ನಲುಗಿ, ಭಾರತದಾಚೆಯ ರಾಷ್ಟ್ರಗಲ್ಲಿ ನೆಲೆಯಾಗಿ ಬುದ್ಧ ಮತ್ತು ಆತನ ಧಮ್ಮವನ್ನು ಅಲ್ಲಿನ ಜನ ಸ್ವೀಕರಿಸಿದ್ದಾರೆ ಈ ಕಾರಣಕ್ಕೆ ಹಲವು ರಾಷ್ಟ್ರಗಳಲ್ಲಿ ಬೌದ್ಧ ಧಮ್ಮ ವಿಶ್ವಮಾನ್ಯತೆ ಪಡೆದು ಬೆಳೆಯುತ್ತಾ, ಬೆಳೆಗುತ್ತಾ ಬರುತಿದೆ.

ಕ್ರಿ ಪೊ 6 ನೇ ಶತಮಾನದಲ್ಲಿ ಜನಿಸಿದ ಗೌತಮರು ಬೋಧಿಯನ್ನು ಪಡೆದು ಬುದ್ಧರಾದಾಗ ಇಲ್ಲಿನ ಶ್ರೇಣೀಕೃತ ಜಾತಿವ್ಯವಸ್ಥೆಯಡಿ ಸಿಕ್ಕಿ ಶೂದ್ರಾತಿಶೂದ್ರರು ಪ್ರಾಣಿ ಪಕ್ಷಿಗಳಿಗಿಂತಲೂ ಕಡೆಯಾಗಿ ಜೀವನ ನಡೆಸುತಿದ್ದರು ಇದಕ್ಕೆಲ್ಲ ಅಜ್ಞಾನದ ಜಾತಿವ್ಯವಸ್ಥೆಯೇ ಕಾರಣವೆಂದು ಅರಿತ ಬುದ್ಧರು ಇದಕ್ಕೆ ಪರಿಹಾರವಾಗಿ ಸರ್ವರಿಗೂ ಒಳಿತನ್ನು ಮಾಡುವ ಪಂಚಶೀಲ ಮತ್ತು ಅಷ್ಟಾಂಗ ಮಾರ್ಗವೆಂಬ ಮಧ್ಯಮ ಆದಿಯ ಮೂಲಕ ಅಂದಿನ ಜನಸಾಮಾನ್ಯರ ಆಡುಭಾಷೆ ಪಾಳಿಯಲ್ಲಿ ತಿಳಿಸುತ್ತಾ, ಮೌಡ್ಯದಿಂದ ಜನರನ್ನು ಮುಕ್ತಗೊಳಿಸುತ್ತಾ ಸುಮಾರು 40 ವರುಷಗಳ ಕಾಲ ಕಾಲುನಡಿಗೆಯಲ್ಲಿಯೇ ಭಾರತವನ್ನು ಸುತ್ತಾಡಿ ತಮ್ಮ ಅಪಾರ ಶಿಸ್ಯವೃಂದದ ಭಿಕ್ಖುಗಳ ಮೂಲಕ ಜನರಿಗೆ ಬೋಧಿಸಿದ ಪರಿಣಾಮವಾಗಿ ಇಲ್ಲಿನ ಮೂಲನಿವಾಸಿ ನಾಗಜನರು ಜಾಗೃತರಾಗಿ ಅಟ್ಟಹಾಸವನ್ನು ಮೆಟ್ಟಿನಿಂತು ಮೌರ್ಯ ಸಾಮ್ರಾಜ್ಯವನ್ನು ಸ್ಥಾಪಿಸಿದರು.

ಚಂದ್ರಗುಪ್ತ ಮೌರ್ಯನಿಂದಿಡಿದು ಅಶೋಕ ಚಕ್ರವರ್ತಿ, ಕೊನೆಯ ದೊರೆ ಬೃಹದ್ರತ ಮೌರ್ಯನತನಕ ಸುಮಾರು 150 ವರ್ಷಗಳ ಕಾಲ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಆರ್ಥಿಕ, ರಾಜಕೀಯ ಕ್ಷೇತ್ರಗಳಿಗೆ ಭದ್ರಬುನಾದಿ ಹಾಕಿ ಆಳ್ವಿಕೆ ಮಾಡಿದರು.

ಸಾಮ್ರಾಟ್ ಅಶೋಕ ಚಕ್ರವರ್ತಿ ಶೋಕವಿಲ್ಲದ ಸಾಮ್ರಾಜ್ಯವನ್ನು ಕಟ್ಟಿ ಆಳ್ವಿಕೆ ಮಾಡಿದ ಜಗತ್ತಿನ ಮೊದಲ ದೊರೆ, ಕಾಳಿಂಗ ಯುದ್ಧದಲ್ಲಿ ಗೆದ್ದರೂ ಅಶೋಕನು ಅಲ್ಲಿನ ಅಪಾರ ಸಾವು ನೋವುಗಳನ್ನು ಕಣ್ಣಾರೆ ಕಂಡು ಮಮ್ಮಲ ಮರುಗಿ ಖಡ್ಗವನ್ನು ತ್ಯಜಿಸಿ ಬೌದ್ಧ ಭಿಕ್ಖು ಉಪಗುಪ್ತನ ಉಪದೇಶಕ್ಕೆ ಮಾರುಹೋಗಿ ಬುದ್ಧ ಧಮ್ಮವೊಂದೇ ಬಹುಜನರನ್ನು ಕಾಪಾಡುವ ಸತ್ಯದ ಮಾರ್ಗವಾಗಿದೆ ಎಂದೂ ಬೌದ್ಧ ಧಮ್ಮ ಸ್ವೀಕಾರ ಮಾಡಿ, ಬೌದ್ಧ ಧಮ್ಮವನ್ನೇ ತನ್ನ ಧಮ್ಮವಾಗಿ ಘೋಷಿಸಿದ.

‘ದಿಗ್ವಿಜಯಕ್ಕಿಂತಲೂ ಧಮ್ಮವಿಜಯವೇ’ ಮೇಲೆಂದು ಇಡೀ ಜಗತ್ತಿಗೆ ಸಾರಿ, ಖಡ್ಗವನ್ನು ತ್ಯೆಜಿಸಿದ ದಿನವೇ ಬುದ್ಧ ಧಮ್ಮವನ್ನು ಸ್ವೀಕರಿಸಿ, ಧಮ್ಮದ ಮೇಲೆ ವಿಜಯ ಸಾದಿಸಿದ ನೆನಪಿಗಾಗಿ ವಿಜಯ ದಶಮಿ ಎಂದೂ ಘೋಷಣೆ ಮಾಡಿ ಧಮ್ಮಅಶೋಕನಾದ ಅಶೋಕನು ತನ್ನಿಬ್ಬರೂ ಮಕ್ಕಳನ್ನು ಧಮ್ಮ ಪ್ರಸಾರಕ್ಕಾಗಿ ಶ್ರೀಲಂಕಾಗೆ ಕಳುಹಿಸಿದ, ಧಮ್ಮ ಪ್ರಚಾರಕ್ಕಾಗಿ ಧಮ್ಮ ದೂತರೆಂಬ ಹೊಸ ಶಾಖೆಯನ್ನು ತೆರೆದು ಧಮ್ಮದೂತರನ್ನು ಇತರೆ ದೇಶಗಳಿಗೆ ಕಳುಹಿಸಿ, ಸುಮಾರು 84000 ಬೌದ್ಧ ಸ್ತೂಪಗಳು ಮತ್ತು ವಿಹಾರಗಳನ್ನು ಕಟ್ಟಿಸಿ ಬೌದ್ಧ ಸಾಮ್ರಾಟನಾಗಿ ವಿಜೃಂಭಿಸಿದ.

ಭಾರತದಲ್ಲಿ ಹುಟ್ಟಿದ ಬೌದ್ಧ ಧಮ್ಮವನ್ನು ಭಾರತದಿಂದಲೇ ಓಡಿಸಿದ ಮನುವಾದಿಗಳಿಗೆ ಮರ್ಮಘಾತ ನೀಡಿದ ಬಾಬಾಸಾಹೇಬರು ಕಣ್ಮರೆಯಾಗಿದ್ದ ಭಾರತೀಯರ ಮೂಲ ಧಮ್ಮವನ್ನು ಮತ್ತೆ!ಅದೇ ವಿಜಯ ದಶಮಿಯದಿನದಂದೆ ನಾಗಪುರದ ದೀಕ್ಷಾಭೂಮಿಯಲ್ಲಿ ದಿನಾಂಕ 14-10-1956 ರಂದು ಸುಮಾರು 10 ಲಕ್ಷ ಅನುಯಾಯಿಗಳೊಂದಿಗೆ “ಬುದ್ಧ ನಡೆಗೆ ಮರಳಿ ಮನೆಗೆ”ಹೋಗುವುದರ ಮೂಲಕ ತಮ್ಮ ಅನುಯಾಯಿಗಳಿಗೆ 22 ಪ್ರತಿಜ್ಞೆಗಳನ್ನು ನೀಡುವುದರ ಮೂಲಕ ಮತ್ತೊಮ್ಮೆ ಭಾರತದಲ್ಲಿ ಬೌದ್ಧ ಧಮ್ಮವನ್ನು ಮರು ಸ್ಥಾಪನೆ ಮಾಡಿದರು.

ಜೈನ ಧರ್ಮದ ಅತಿಯಾದ ಅಹಿಂಸಾ ಪಾಲನೆಯಿಂದ ಬೇಸತ್ತು ರೈತರು ತಮ್ಮ ತಮ್ಮ ಹೊಲ ಗದ್ದೆಗಳಲ್ಲಿ ಬೆಳೆದ ಬೆಳೆಯನ್ನು ಹುಳ ಹುಪ್ಪಟಗಳಿಂದ ರಕ್ಷಿಸಿಕೊಳ್ಳಲು ಕೀಟನಾಶಕಗಳನ್ನು ಸಿಂಪಡಿಸುತ್ತಿರಲಿಲ್ಲ ಅದಕ್ಕೆ ರೈತಾಪಿ ವರ್ಗವು ಭಗವಾನ್ ಬುದ್ಧರ ಸರಳವಾದ ಮಧ್ಯಮ ಮಾರ್ಗವೇ ಲೇಸೆಂದು ಇಡೀ ರೈತ ಸಮುದಾಯವೇ ಬೌದ್ಧರಾದರು ಎಂದೂ ಖ್ಯಾತ ಸಂಶೋಧಕರಾದ ಕೆ ಎಸ್ ಭಗವಾನ್ ರವರು “ಭಾರತದ ರೈತರೆಲ್ಲರೂ ಬೌದ್ಧರೇ”ಆಗಿದ್ದರು ಎಂದೂ ಒಂದು ಪುಸ್ತಕವನ್ನೇ ಬರೆದು ಭಾರತ ಬೌದ್ಧಮಯವಾಗಿತ್ತು ಎಂಬುದಕ್ಕೆ ಪುಷ್ಟಿ ನೀಡಿದ್ದಾರೆ.

ಮೊನ್ನೆ ಅಯೋಧ್ಯಯಲ್ಲಿ ದೊರೆತ ಬೌದ್ಧರ ಕಾಲದ ಸಾಕಷ್ಟು ಅವಶೇಷಗಳು ಭಾರತ ಬುದ್ಧನ ನಾಡಾಗಿತ್ತು ಎಂಬುದನ್ನು ಖಚಿತಪಡಿಸುತ್ತಿವೆ, ಅಯೋಧ್ಯಯ ಮೂಲ ಹೆಸರು ಸಾಕೇತ್ ನಗರವಾಗಿ ಕ್ರಿಸ್ತ ಪೂರ್ವದಲ್ಲಿಯೇ ಒಂದು ಬೌದ್ಧ ಶಿಕ್ಷಣ ಕೇಂದ್ರವಾಗಿತ್ತು, ಕ್ರಿಸ್ತ ಶಕ 1 ನೇ ಶತಮಾನದಲ್ಲಿ ಶುಂಗರ ಆಡಳಿತ ಕಾಲದಲ್ಲಿ ಸಾಕೇತನಗರದ ಹೆಸರನ್ನು ಬದಲಾವಣೆ ಮಾಡಿ ಅಯೋಧ್ಯ ವೆಂದು ಮರು ನಾಮಕರಣ ಮಾಡಲಾಯಿತು ಎನ್ನುತ್ತಾರೆ ಇತಿಹಾಸಕಾರರು.

ಲಿಪಿಯೇ ಇರದಿದ್ದ ಮೌಖಿಕ ಭಾಷೆಯಾಗಿದ್ದ ಸಂಸ್ಕೃತಕ್ಕೆ ದೇವನಾಗರಿ ಲಿಪಿ ಆಳವಡಿಸ್ಸಿದ್ದು, ಹಾಗೆಯೇ ಸಂಸ್ಕೃತದಲ್ಲಿ ರಾಮಾಯಣ ಮಹಾಭಾರತ ಬರೆದದ್ದು ಶುಂಗ ವಂಶದ ಕಾಲದಲ್ಲೇ ಅದಕ್ಕೆ ಮುಂಚೆಯೇ ಚಂದ್ರ ಗುಪ್ತ ಮೌರ್ಯ, ಅಶೋಕ ಚಕ್ರವರ್ತಿ ಹಲವು ಅರಸರ ಕಾಲದಲ್ಲಿ ಭಾರತಕ್ಕೆ ಬಂದಿದ್ದ ಗ್ರೀಕ್ ಇತಿಹಾಸಕಾರರು ಸಾಕೇತನಗರದ ಹೆಸರು ಮತ್ತು ಬ್ರಾಹ್ಮ್ಮಿ ಲಿಪಿಯಲ್ಲಿದ್ದ ಪಾಳಿ ಮತ್ತು ಪ್ರಾಕೃತಗಳ ಬಗ್ಗೆ ಉಲ್ಲೇಖಿಸಿದ್ದಾರೆಯೇ ಹೊರತು ಸಂಸ್ಕೃತ ಮತ್ತು ಅಯೋಧ್ಯಯ ಬಗ್ಗೆ ಎಲ್ಲಿಯೂ ಧಾಖಲಿಸಿಲ್ಲ, ಕ್ರಿಸ್ತ ಪೂರ್ವ 2 ನೇ ಶತಮಾನದಲ್ಲಿ ಅಲೆಗ್ಸಾಂಡರ್ ಭಾರತಕ್ಕೆ ಭೇಟಿ ನೀಡಿದ ಸಂಧರ್ಭದಲ್ಲಿ ಸಾಕೇತ ಎಂಬ ಬೌದ್ಧ ಶಿಕ್ಷಣ ಕೇಂದ್ರವಿತ್ತೆಂದು ಹೇಳಿದ್ಧಾನೆ ಆದ್ದರಿಂದ ಆಯೋಧ್ಯಯಲ್ಲಿ ದೊರೆತ ಬೌದ್ಧರ ಕಾಲದ ಸಾಕಷ್ಟು ಅವಶೇಷಗಳು ಭಾರತ ಬೌದ್ಧ ರಾಷ್ಟ್ರವಾಗಿತ್ತೆಂದು ಸಾರಿ ಸಾರಿ ಹೇಳುತ್ತಿವೆ.

ಇತ್ತೀಚಿನ ದಿನಮಾನಗಳಲ್ಲಿ ಹಲವು ರಾಷ್ಟ್ರಗಳು ಭಗವಾನ್ ಬುದ್ಧರ ಮಾನವಿಯಾ ಗುಣಗಳ ಸದ್ಧಮ್ಮದೆಡೆಗೆ ಆಕರ್ಷಿತರಾಗುತ್ತಿರುವುದನ್ನು ನೋಡಿದರೆ ಮುಂದೊಂದು ದಿನ ಬೌದ್ಧ ಧಮ್ಮವು ವಿಶ್ವದ ಭವಿಷ್ಯದ ಧಮ್ಮವಾಗಲಿದೆ, “Buddhism is Future religion in tha world” ಎಂಬ ಬಾಬಾಸಾಹೇಬರ ಸತ್ಯವಾಗುತ್ತಿದೆ, ಮೊನ್ನೆ ಮೊನ್ನೆ ಇಂಗ್ಲೆಂಡ್ ನಲ್ಲಿ 148 ವರ್ಷದ ಕ್ರೈಸ್ತಧರ್ಮದ ಹಳೆಯ ಚೆರ್ಚನ್ನೇ ಬುದ್ಧನ ವಿಹಾರವಾಗಿ ಅಲ್ಲಿನ ಬುದ್ಧರ ಅನುಯಾಯಿಗಳು ಪರಿವರ್ತಿಸಿದ್ದಾರೆ, ಹಲವು ರಾಷ್ಟ್ರಗಳು ಭವಿಷ್ಯದಲ್ಲಿ ಬುದ್ಧರ ವೈಜ್ಞಾನಿಕ ತತ್ವಗಳಿಗೆ ಮಾರುಹೋಗಿ ಬುದ್ಧ ಧಮ್ಮವನ್ನೇ ಒಪ್ಪಿ ಅಪ್ಪಿಕೊಳ್ಳುವುದರೊಂದಿಗೆ ಅದನ್ನನುಸರಿಸುವ ಒಂದು ಜಾಗತಿಕ ದೊಡ್ಡ ಜನರ ಧಮ್ಮವಾಗುವುದರಲ್ಲಿ ಅನುಮಾನವೇ ಇಲ್ಲಾ! ಮಹಾಕಾರುಣಿಕ ಬುದ್ಧರು ಜನಿಸಿ 2564 ವರ್ಷಗಳಾದರೂ ಬುದ್ಧರ ಕರುಣೆ ಪ್ರೀತಿ ವಿಶ್ವಮೈತ್ರಿ ಯ ಬುದ್ಧಭಾರತವೆಂಬ ಮಾರ್ಗವು ಇಡೀ ವಿಶ್ವಕ್ಕೆ ದಾರಿ ದೀಪವಾಗಿ ವಿಶ್ವದ ಗುರುವಾಗುವುದರಲ್ಲಿ ಸಂಶಯವಿಲ್ಲ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending