Connect with us

ದಿನದ ಸುದ್ದಿ

ಆಗಸದಿಂದ ಇಳಿದು ಬಂದ ‘ಮತದಾನ ಸಂದೇಶ’..!

Published

on

ಸುದ್ದಿದಿನ,ಧಾರವಾಡ : ಏ.13 ರ ಶನಿವಾರ ಬೆಳಿಗಿನ ಜಾವ ಧಾರವಾಡದ ಕರ್ನಾಟಕ ಕಾಲೇಜು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಗಸದಿಂದ ಇಳಿದು ಬಂದ ಮತದಾನ ಸಂದೇಶದ ಕರಪತ್ರಗಳು, ಧಾರವಾಡಿಗರಲ್ಲಿ ಅಚ್ಚರಿ ಮತ್ತು ಸಂತಸ ಮೂಡಿಸಿದವು.

ಜಿಲ್ಲಾ ಸ್ವೀಪ್ ಸಮಿತಿಯು ಮತದಾರರ ಜಾಗೃತಿಗಾಗಿ ಏರ್ಪಡಿಸಿದ್ದ ಪ್ಯಾರಾಗ್ಲೈಡಿಂಗ್ ಕಾರ್ಯಕ್ರಮ ಇಂದು ಬೆಳಿಗ್ಗೆ ಕೆಸಿಡಿ ಆವರಣದಿಂದ ಆರಂಭವಾಯಿತು.

ಬೆಂಗಳೂರಿನ ಏವಿಯೇಷನ್ ಮತ್ತು ಸ್ಪೋರ್ಟ್ ಎಂಟರ್‌ಪ್ರೈಸಸ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರೂ ಆಗಿರುವ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸಿ.ಸತೀಶ ಅವರು ಪ್ಯಾರಾಗ್ಲೈಡಿಂಗ್ ನಲ್ಲಿ ಬಾನಂಗಳಕ್ಕೆ ಹಾರಿ , ಮತದಾರರ ಜಾಗೃತಿ ಸಂದೇಶ ಹರಡಿದರು.

ಪ್ಯಾರಾಗ್ಲೈಡಿಂಗ್ ಬೃಹತ್ ಪರದೆಯು ಮೇಲಕ್ಕೆ ಹಾರುತ್ತಲೇ ಸಂಪೂರ್ಣವಾಗಿ ಬಿಚ್ಚಿಕೊಂಡಿತು, ಅದರ ಹಿನ್ನೆಲೆಯಲ್ಲಿ ಕಟ್ಟಲಾಗಿದ್ದ ಮತದಾರರ ಜಾಗೃತಿ ಸಂದೇಶ
ಅನಾವರಣಗೊಂಡು ಮೈದಾನದಲ್ಲಿ ಬೆಳಗಿನ ವಾಯುವಿಹಾರಕ್ಕೆ ನೆರೆದಿದ್ದ ಜನರನ್ನು ಆಕರ್ಷಿಸಿತು.

ಪ್ಯಾರಾಗ್ಲೈಡಿಂಗ್ ವಾಯು ವಾಹನವು ಕೆಲಗೇರಿ,ಸಂಪಿಗೆ ನಗರ,ಶ್ರೀನಗರ,ಸಪ್ತಾಪೂರ ಸುತ್ತಮುತ್ತಲಿನ ಪರಿಸರದಲ್ಲಿ ಹಾರಾಡಿತು. ವಾಯುವಿಹಾರಕ್ಕೆ ಬಂದಿದ್ದ ಯುವಕರು,ಮಹಿಳೆಯರು, ಹಿರಿಯ ನಾಗರಿಕರು ಸೇರಿದಂತೆ ಎಲ್ಲಾ ಸಾರ್ವಜನಿಕರು ಸಂತಸದಿಂದ ಪ್ಯಾರಾಗ್ಲೈಡಿಂಗ್ ವಾಹನದೊಂದಿಗೆ ಸೆಲ್ಫಿ ತೆಗೆದುಕೊಂಡರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಜಾನನ ಮನ್ನಿಕೇರಿ, ಕ್ಚೇತ್ರ ಶಿಕ್ಷಣಾಧಿಕಾರಿ ಎಸ್.ಎಂ‌.ಹುಡೇದಮನಿ,ನಿವೃತ್ತ ಡಿಸಿಎಫ್ ಶಂಕರ್ ಸಾಧನಿ,ಜಲಮಂಡಳಿಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಿಶ್ವನಾಥ, ಸ್ವೀಪ್ ಸಮಿತಿಯ ಕೆ.ಎಂ.ಶೇಖ್, ಜಿ.ಎನ್.ನಂದನ ಮತ್ತಿತರರು ಇದ್ದರು.

ದಿನದ ಸುದ್ದಿ

ಎಸ್‌.ಎಂ.ಕೃಷ್ಣ ಸಹೋದರ ಶಂಕರ್ ವಿಧಿವಶ

Published

on

ಸುದ್ದಿದಿನ,ಮಂಡ್ಯ : ಮಾಜಿ ವಿದೇಶಾಂಗ ಸಚಿವ ಎಸ್‌.ಎಂ.ಕೃಷ್ಣ ಸಹೋದರ ಹಾಗೂ ಮಾಜಿ‌ ವಿಧಾನ ಪರಿಷತ್ ಸದಸ್ಯ ಎಸ್.ಎಂ ಶಂಕರ್(83) ರವರು ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

ಎಸ್.ಎಂ.ಕೃಷ್ಣರವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಎಸ್.ಎಂ.ಶಂಕರ್ ಎಂ.ಎಲ್.ಸಿ. ಆಗಿದ್ದರು. ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ, ಸ್ವಗ್ರಾಮವಾದ ಸೋಮನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ನಿರ್ಧಾರ ಮಾಡಿದ್ದಾರೆ.

ವರದಿ , ಗಿರೀಶ್ ರಾಜ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಶಿವಮೊಗ್ಗ : ಪತ್ರಿಕೋದ್ಯಮ ಮಹಿಳಾ ಪದವೀಧರರಿಂದ ಅರ್ಜಿ ಆಹ್ವಾನ

Published

on

ಸುದ್ದಿದಿನ,ಶಿವಮೊಗ್ಗ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮಹಿಳಾ ಉದ್ದೇಶಿತ ಆಯವ್ಯಯದಡಿ ಇಬ್ಬರು ಮಹಿಳಾ ಅಭ್ಯರ್ಥಿಗಳನ್ನು ಅಪ್ರೆಂಟಿಸ್ ತರಬೇತಿಗೆ ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಪತ್ರಿಕೋದ್ಯಮದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದ ಹಾಗೂ ಕಂಪ್ಯೂಟರ್ ಜ್ಞಾನವಿರುವ, ಕನ್ನಡ ಭಾಷೆ ಬಳಸಲು ಪ್ರಬುದ್ಧತೆ ಇರುವ ಮಹಿಳಾ ಅಭ್ಯರ್ಥಿಗಳನ್ನು ಕ್ಷೇತ್ರ ಪ್ರಚಾರ ಹಾಗೂ ಮಾಧ್ಯಮ ತರಬೇತಿಗೆ ನೇಮಿಸಲಾಗುವುದು.

ಅಭ್ಯರ್ಥಿಗಳು ಪಡೆದಿರುವ ಅಂಕಗಳ ಮೆರಿಟ್ ಆಧಾರದಲ್ಲಿ ಆಯ್ಕೆ ಮಾಡಲಾಗುವುದು. ಶಿವಮೊಗ್ಗ ಜಿಲ್ಲೆಯ ಅಭ್ಯರ್ಥಿಗಳಿಗೆ ಪ್ರಥಮ ಆದ್ಯತೆ ನೀಡಲಾಗುವುದು. ವಯೋಮಿತಿ 40ವರ್ಷ ಮೀರಿರಬಾರದು.

ಆಯ್ಕೆಯಾದವರಿಗೆ ಮಾಸಿಕ 15 ಸಾವಿರ ರೂಪಾಯಿ ಗೌರವ ಧನ ನೀಡಲಾಗುವುದು. ತರಬೇತಿ ಅವಧಿ 9 ತಿಂಗಳು. ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಲು ಜುಲೈ 4 ಕಡೆಯ ದಿನ. ಅರ್ಜಿ ಹಾಗೂ ಹೆಚ್ಚಿನ ಮಾಹಿತಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ನೆಹರು ಸ್ಟೇಡಿಯಂ ಹತ್ತಿರ, ಸವಳಂಗ ರಸ್ತೆ, ಶಿವಮೊಗ್ಗ, ದೂರವಾಣಿ ಸಂಖ್ಯೆ 08182- 278638 ಸಂಪರ್ಕಿಸಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಪತ್ರಿಕೋದ್ಯಮ ಮಹಿಳಾ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ಮಂಡ್ಯ : ರಾಜ್ಯ ಸರ್ಕಾರದ ಮಹಿಳಾ ಉದ್ದೇಶಿತ 2019-2020 ರ ಅಯವ್ಯಯದ ಕಾರ್ಯಕ್ರಮಗಳಡಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪತ್ರಿಕೋದ್ಯಮದ ಮಹಿಳಾ ಅಭ್ಯರ್ಥಿಗಳಿಗೆ ಅಪ್ರೆಂಟಿಸ್ ತರಬೇತಿ ನೀಡಲು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರುವ ಕನ್ನಡ ಭಾಷೆ ಬಳಸುವ ಪ್ರಬುದ್ಧತೆ ಹೊಂದಿರುವ ಇಬ್ಬರು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಮಂಡ್ಯ ಜಿಲ್ಲಾ ಕಛೇರಿಯ ಕ್ಷೇತ್ರ ಹಾಗೂ ಮಾಧ್ಯಮ ಪ್ರಚಾರ ಕಾರ್ಯನಿರ್ವಹಿಸಲು ಹಾಗೂ ಅಪ್ರೆಂಟಿಸ್ ತರಬೇತಿಗಾಗಿ ಆಯ್ಕೆಯಾಗುವ ಇಬ್ಬರು ಮಹಿಳಾ ಅಭ್ಯರ್ಥಿಗಳ ತರಬೇತಿ ಅವಧಿ 9 ತಿಂಗಳುಗಳಾಗಿದ್ದು, ತರಬೇತಿ ಸಂಭಾವನೆ ನೀಡಲಾಗುವುದು.

ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ 40 ರ ವಯೋಮಿತಿಯಲ್ಲಿರುವ ಮಂಡ್ಯ ಜಿಲ್ಲೆಯ ನಿವಾಸಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು. ಒಂದು ವೇಳೆ ಜಿಲ್ಲೆಯಲ್ಲಿ ಅಭ್ಯರ್ಥಿಗಳು ಲಭ್ಯವಾಗದಿದ್ದಲ್ಲಿ ಮಾತ್ರ ಪಕ್ಕದ ಇತರೆ ಜಿಲ್ಲೆಗಳ ಅಭ್ಯರ್ಥಿಗಳನ್ನು ಪರಿಗಣಿಸಲಾಗುವುದು.

ಜಿಲ್ಲಾ ಸಮಿತಿಯು ಇಬ್ಬರು ಮಹಿಳಾ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ. ಅಭ್ಯರ್ಥಿಗಳು ಅರ್ಜಿಯೊಂದಿಗೆ ಸ್ನಾತಕೋತ್ತರ ಪದವಿ ಅಂಕಪಟ್ಟಿ, ಅಭ್ಯರ್ಥಿಗಳು ಆಯ್ಕೆಯಾದಲ್ಲಿ ಮೂಲ ಪ್ರಮಾಣ ಪತ್ರಗಳನ್ನು ಜಿಲ್ಲಾ ಕಚೇರಿಗೆ ತರಬೇತಿ ಅವಧಿಯವರೆಗೆ ಇಟ್ಟುಕೊಳ್ಳಲು ನೀಡುವುದು ಕಡ್ಡಾಯವಾಗಿದೆ.
ಕೇಂದ್ರ ಕಚೇರಿ ನಿರ್ದೇಶನದಂತೆ ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು.

ನಿಗದಿತ ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಹೆಚ್.ಕೆ.ವೀರಣ್ಣಗೌಡ ರಸ್ತೆ ಮಂಡ್ಯ ಇಲ್ಲಿಂದ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಜೂನ್ 29 ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಹೆಚ್.ಕೆ.ವೀರಣ್ಣಗೌಡ ರಸ್ತೆ ಮಂಡ್ಯ ಅಥವಾ ಕಚೇರಿ ದೂರವಾಣಿ ಸಂಖ್ಯೆ:08232-224153 ನ್ನು ಸಂಪರ್ಕಿಸಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending