Connect with us

ದಿನದ ಸುದ್ದಿ

ನೇಪಾಳದ ವಿಶ್ವ ಶಾಂತಿ ಸಮ್ಮೇಳನ : ಭಾರತವನ್ನು ಪ್ರತಿನಿಧಿಸಲಿರುವ ತರಳಬಾಳು ಶ್ರೀಗಳು

Published

on

ಭರತಖಂಡದ ಶ್ರೇಷ್ಠ ವಿದ್ವಾಂಸರಲ್ಲಿ ಆಗ್ರಗಣ್ಯರದ ಪರಮಪೂಜ್ಯ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರಿಗೆ ಅಂತರರಾಷ್ಟ್ರೀಯ ಶಾಂತಿ ಪ್ರತಿಷ್ಠಾನದ ಆಹ್ವಾನದ ಮೇರೆಗೆ ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ನ.30 ರಿಂದ ಡಿ.3 ರವರೆಗೆ ನಡೆಯಲಿರುವ ಏಷ್ಯಾ ಶಾಂತಿ ಶೃಂಗ ಸಭೆಯಲ್ಲಿ ಗುರುವರ್ಯರು ” ನಮ್ಮ ಕಾಲದ ಪ್ರಚಲಿತ ಸವಾಲುಗಳು,ಅಭಿವೃದ್ಧಿ & ಸಾರ್ವಕಾಲಿಕ ಮೌಲ್ಯಗಳ “ಕುರಿತು ವಿಷಯ ಮಂಡಿಸುವರು.

ಭಾರತದ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಕೂಡ ಭಾಗವಹಿಸಲಿದ್ದಾರೆ.ಕಳೆದ ಹಲವು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಶ್ರೀ ಗಳು ತಮ್ಮ ವಿದ್ವತ್ಪೂರ್ಣ ಜ್ಞಾನ ಪ್ರಭೆಯನ್ನು ಜಗತ್ತಿನ ವಿದ್ವಾಂಸರ ಸಮ್ಮುಖದಿ ಭಾರತದ ಭವ್ಯ ಪರಂಪರೆಯ ವಿಶ್ವರೂಪ ದರ್ಶನ ಮಾಡಿರುವುದು ಭಾರತೀಯರೆಲ್ಲರು ಹೆಮ್ಮೆ ಪಡುವಂತಹದು.

ನೇಪಾಳದ ಶಾಂತಿ ಶೃಂಗ ಸಮ್ಮೇಳನಕ್ಕೆ ತರಳಬಾಳು ಶ್ರೀ ಜಗದ್ಗುರುವರ್ಯರು.ನಮ್ಮ ಕಾಲದಲ್ಲಿ ಪ್ರಚಲಿತ ಸವಾಲುಗಳು ಅಭಿವೃದ್ಧಿ ಮತ್ತು ಸಾರ್ವಜನಿಕ ಮೌಲ್ಯಗಳು ಕುರಿತು ಶ್ರೀ ಜಗದ್ಗುರುವರ್ಯರಿಂದ ವಿಷಯ ಮಂಡನೆ.ಶ್ರೀ ಜಗದ್ಗುರುವರ್ಯರ ಜೊತೆ ಮಾಜಿ ರಾಷ್ಟ್ರಪತಿ ಶ್ರೀ ಪ್ರಣವ್ ಮುಖರ್ಜಿ ಭಾಗಿ.

ದಶಕಗಳ ಹಿಂದೆಯೇ ಅಮೇರಿಕಾದ ಸಂಸ್ಥೆಯಿಂದ ವಿಶ್ವ ಶಾಂತಿಧೂತ ಪ್ರಶಸ್ತಿ ಪುರಸ್ಕೃತರಾಗಿವ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಗಳವರುನವಂಬರ್ 30 ರಿಂದ ಡಿಸೆಂಬರ್ 3 ರವರೆಗೆ ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಜರುಗಲಿರುವ ಶಾಂತಿ ಶೃಂಗ ಸಮ್ಮೇಳನ.

ಗುರುವರ್ಯರು ಸಕಲ ಭಾಷೆ ವಿದ್ವಾಂಸರಾಗಿದರು ಸಹ ಮಾತೃಭಾಷೆಯ ಮೇಲಿನ ಅವರ ಪ್ರೇಮ ಅನನ್ಯ..
ಅಂತರರಾಷ್ಟ್ರೀಯ ವೇದಿಕೆಗಳಲ್ಲಿ
ಕನ್ನಡದಲ್ಲಿ ಸಹಿಮಾಡುವ ಮುಖೇನ ಕರುನಾಡ ತಾಯಿ ಭುವನೇಶ್ವರಿ ಯ ಹೆಮ್ಮೆಯ ಪುತ್ರ ರತ್ನರೆನಿಸಿದ್ದಾರೆ.

ಭಾರತ್ ಮಾತಾಕ್ಕಿ ಜೈ…
ಜೈ ಕರ್ನಾಟಕ

ದಿನದ ಸುದ್ದಿ

ಸಿದ್ದರಾಮಯ್ಯರ ದೇವಸ್ಥಾನ ಕಟ್ಟಿಸುತ್ತೇವೆ : ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ

Published

on

ಸುದ್ದಿದಿನ, ಬಾಗಲಕೋಟೆ : ಸಿದ್ದರಾಮಯ್ಯ ಅವರು ನಮ್ಮ ನಾಲ್ಕು ದಶಕಗಳ ಕಾಲದ ಬೇಡಿಕೆಯನ್ನು ಈಡೇರಿಸಿದರೆ ಅವರ ದೇವಸ್ಥಾನವನ್ನು ಕಟ್ಟುತ್ತೇವೆ ಎಂದು ಬೋವಿ ಸಮಾಜದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.

ಗುರುವಾರ ಬದಾಮಿಯಲ್ಲಿ ನಡೆದ ಸಿದ್ದರಾಮೇಶ್ವೇರ ಜಯಂತಿಯ ವೇಳೆ ಮಾತನಾಡಿದ ಅವರು,‌ಸರ್ಕಾರಿ ಸುಮಾರು ನೋರು ಕುಟುಂಬಗಳಿದ್ದು, ಅವರನ್ನು ಆ ಸ್ಥಳದಿಂದ ತೆರವುಗೊಳಿಸಲಾಗುತ್ತಿದೆ. ಈ ವಿಷಯಕ್ಕೆ‌ ಸಂಭಂದಿಸಿದಂತೆ ಅದೇ ಜಾಗದಲ್ಲಿ ಅವರಿಗೆ ಸೂರುಗಳನ್ನು ಕಲ್ಪಿಸಿ ಕೊಟ್ಟರೆ ಸಿದ್ದರಾಮಯ್ಯ ಅವರ ದೇವಸ್ಥಾನವನ್ನು ಬಾದಾಮಿಯಲ್ಲಿ ಕಟ್ಟಿಸುತ್ತೇವೆ ಎಂದು ಸ್ವಾಮೀಜಿ ತಿಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Continue Reading

ದಿನದ ಸುದ್ದಿ

ಕೆ.ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ : ಲೋಗೋ ವಿನ್ಯಾಸಕ್ಕೆ ಹಣ ವ್ಯಯ

Published

on

ಒಂದೆಡೆ ಯುವಕರು ಕೆಲಸವಿಲ್ಲದೆ ಕಂಗಾಲಾಗುತ್ತಿದ್ದಾರೆ. ಸಂಶೋಧಕರಿಗೆ ಸರ್ಕಾರ ನೀಡುವ ಫೆಲೋಷಿಪ್ ಗಳನ್ನೇ ಮುಂದುವರೆಸಿಕೊಂಡು ಹೋಗುತ್ತಾ ಉದ್ಯೋಗಕ್ಕಾಗಿ ಯುವಕರು ಹಪಹಪಿಸುತ್ತಿದ್ದಾರೆ.

ಹಿಂದಿನ ಸಿದ್ಧರಾಮಯ್ಯನವರ ಸರ್ಕಾರ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಮತ್ತು ಸಂಶೋಧನಾ ಕೇಂದ್ರ ಸ್ಥಾಪಿಸಲು ಬರೋಬ್ಬರಿ 5 ಕೋಟಿ ಹಣವನ್ನು ಬಿಡುಗಡೆಗೊಳಿಸಿತ್ತು. ಆದರೆ, ಇಲ್ಲಿಯವರೆವಿಗೂ ಬಿಡುಗಡೆಗೊಳಿಸಿದ ಹಣ ಇನ್ನೂ ಪ್ರತಿಷ್ಠಾನಕ್ಕೆ ಸಮರ್ಪಕವಾಗಿ ದಕ್ಕಿಲ್ಲ. ಈ ಸಂದರ್ಭದಲ್ಲಿ ತೇಜಸ್ವಿ ಪ್ರತಿಷ್ಠಾನದ ಅಧ್ಯಕ್ಷರು,ಸದಸ್ಯರುಗಳು, ಸಹಾಯಕ ನಿರ್ದೇಶಕ ಕನ್ನಡ ಸಂಸ್ಕೃತಿ ಇಲಾಖೆ, ಚಿಕ್ಕಮಗಳೂರು ಇವರುಗಳು ಪ್ರತಿಷ್ಠಾನದ ಲೋಗೋ ಮಾಡಿಕೊಡಲು ಸೃಜನಶೀಲ ವಿನ್ಯಾಸಕರು, ಕಲಾವಿದರಿಗೆ ‘ ಲೋಗೋ ಸ್ಪರ್ಧೆ’ ಯನ್ನು ಏರ್ಪಡಿಸಿದ್ದಾರೆ.

ಹೀಗೆ ಸಾರ್ವಜನಿಕರ ಹಣವನ್ನು ಹರಾಜಿಗಿಡುವುದು ದುರದುಷ್ಟಕರ ಸಂಗತಿ.ಕನ್ನಡ ಸಂಸ್ಕೃತಿ ಇಲಾಖೆ ಯ ಬಳಿಯೇ ಹಲವಾರು ಜನ ಕಲಾವಿದರು, ಲೋಗೋ ವಿನ್ಯಾಸಕರನ್ನು ಸರ್ಕಾರ ಸಂಬಳ ನೀಡಿ ನೇಮಿಸಿಕೊಂಡಿದೆ. ಅವರ ಬಳಿ ಲೋಗೋವನ್ನು ನಿರ್ಮಿಸಿಕೊಳ್ಳಬಹುದಿತ್ತು. ಅದನ್ನು ಬಿಟ್ಟು ಪ್ರತಿಷ್ಠಾನ ಹೀಗೆ ತೇಜಸ್ವಿಯವರ ಹೆಸರಿನಲ್ಲಿ ಸರಿಯಾದ ಕಾರ್ಯಕ್ರಮಗಳನ್ನು ರೂಪಿಸಲಾಗದೆ. ಒಂದು ಸಣ್ಣ ಲೋಗೋ ನಿರ್ಮಿಸಲು ಪ್ರತಿಷ್ಠಾನದ ಹಣವನ್ನು ಹೀಗೆ ಸ್ಪರ್ಧೆಯ ನೆಪವೊಡ್ಡಿ ಹರಾಜಿಗಿಡುವುದು ಸರಿಯಲ್ಲ.

– ಕನ್ನಡಪ್ರೇಮಿ ಓಂಕಾರಸ್ವಾಮಿ

ಸುದ್ದಿದಿನ.ಕಾಂ|ವಾಟ್ಸಾಪ್|9986715401

Continue Reading

ದಿನದ ಸುದ್ದಿ

‘ಡಿ ಬಾಸ್’ ಕ್ಲಿಕ್ಕಿಸಿರೋ ‘ವನ್ಯಜೀವಿಗಳ ಫೋಟೋ’ ಪ್ರದರ್ಶನ ಮತ್ತು ಮಾರಾಟ

Published

on

ಸುದ್ದಿದಿನ ಡೆಸ್ಕ್ : ವೈಲ್ಡ್ ಲೈಫ್ ಫೋಟೋಗ್ರಫಿಯಲ್ಲಿ ವಿಷೇಶವಾದ ಆಸಕ್ತಿ ಹೊಂದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ಲಿಕ್ಕಿಸಿರುವ ವನ್ಯಜೀವಿಗಳ ಛಾಯಾಚಿತ್ರ ಪ್ರದರ್ಶನವು ಮಾರ್ಚ್1ರಿಂದ3ರವರೆಗೆ ಮೈಸೂರಿನ ದಿ ಪ್ರಿನ್ಸ್ ಹೋಟೆಲ್‌ ನಲ್ಲಿ ನಡೆಯಲಿದೆ.

‘ಲೈಫ್ ಆನ್‌ ದಿ ವೈಲ್ಡ್ ಸೈಡ್’ ಎಂಬ ಹೆಸರಿನಡಿ ದರ್ಶನ್ ಅರಣ್ಯದಲ್ಲಿ‌ ಕ್ಲಿಕ್ಕಿಸಿರುವ ಫೋಟೋಗಳ ಪ್ರದರ್ಶನವನ್ನು ಆಯೋಜಿಸಲಾಗಿದೆ. ಈ ಫೋಟೋಗಳ ಮಾರಾಟವಿದ್ದು,ಮಾರಾಟದಿಂದ ಬಂದ ಹಣವನ್ನು ವನ್ಯಜೀವಿ ಸಂರಕ್ಷಣಾ ನಿಧಿಗೆಬಳಕೆಯಾಗಲಿದೆಯಂತೆ.

ಒಂದು ಛಾಯಾಚಿತ್ರಕ್ಕೆ ಎರಡರಿಂದ ಎರಡೂವರೆ ಸಾವಿರ ನಿಗದಿ ಮಾಡಲಾಗಿದ್ದು, ಎರಡೂವರೆ ಸಾವಿರ ಕೊಟ್ಟರೆ ದರ್ಶನ್ ಆಟೋಗ್ರಾಫ್ ಇರುವ ಚಿತ್ರ ಲಭ್ಯವಾಗಲಿದೆ. ಅರಣ್ಯ ಇಲಾಖೆ ಸಹಯೋಗದಲ್ಲಿ ಛಾಯಾಚಿತ್ರ ಪ್ರದರ್ಶನ ಆಯೋಜನೆಗೊಳ್ಳುತ್ತಿದೆ.

ಈ ಕಾರ್ಯಕ್ರಮವು ಅರಣ್ಯ ಇಲಾಖೆಯ ಸಹಯೋಗದಲ್ಲಿ ನಡೆಯುತಲಿದ್ದು ದರ್ಶನ್ ಈ ಬಗ್ಗೆ ಟ್ವಿಟರ್ ನಲ್ಲಿ ಮಾಹಿತಿ ಹಂಚಿ ಕೊಂಡಿದ್ದಾರೆ.

ಈ ಬಗ್ಗೆ ದರ್ಶನ್ ಅವರು ಟ್ವಿಟ್ಟರಿನಲ್ಲಿ ತಾವು ಸಫಾರಿಗೆ ತೆರಳಿದ್ದಾಗ ಪ್ರಾಣಿಗಳ ಫೋಟೋ ಕ್ಲಿಕ್ಕಿಸುತ್ತಿರುವ ವಿಡಿಯೋವನ್ನು ಹಾಕುವುದರ ಮೂಲಕ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|998671540

Continue Reading
Advertisement

Trending