Connect with us

ದಿನದ ಸುದ್ದಿ

ಸಾಧನೆಯ ಶಿಖರ ತರಳಬಾಳು ವಿಶ್ವಗುರುವಿನ ಸಾರ್ಥಕ ಸಮಾಜಭ್ಯುದಯಕ್ಕೆ ನಾಲ್ಕು ದಶಕಗಳ ಸಂಭ್ರಮ

Published

on

ಪರಮಪೂಜನೀಯ ಶ್ರೀ ಮದುಜ್ಜಯನಿ ಸದ್ದರ್ಮ ಸಿಂಹಾಸನಧೀಶ ಶ್ರೀ ತರಳಬಾಳು ಜಗದ್ಗುರು ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಜಿಗಳವರು ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಪಟ್ಟಾಭಿಷಿಕ್ತರಾಗಿ ( 11-02-1979 ಭಾನುವಾರ ) ನಿನ್ನೆಗೆ ನಲವತ್ತು ವರ್ಷಗಳ ಸಂದ ಸುದಿನ.

ಬಸವಾದಿ ಮರುಳಸಿದ್ದರ ಬಳಿವಿಡಿದು , ಶ್ರೀ ಗುರು ಪಿತಾಮಹಾ ಶ್ರೀ ಗುರುಶಾಂತದೇಶಿಕೇಂದ್ರ ಮಹಾಸ್ವಾಮೀಜಿಗಳವರ ಆಶಯದ ಕಾರಣಿಕ ತೇಜಸ್ವಿಗುರುವಾಗಿ ,ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿಗಳವರ ಕರಕಮಲ ಸಂಜಾತರಾಗಿ ಸಮಾಜದ ಅಭ್ಯುಧಯಕ್ಕೆ ಅಹರ್ನಿಶಿ ಕೈಕಂಕರ್ಯ ಬದ್ದರಾಗಿ ,ಕಾಯಕವೇ ಕೈಲಾಸ ಅದುವೇ ಕರ್ತವ್ಯದ ಮಹಾಉದ್ದೇಶವೆಂದು ಸಮಾಜಮುಖಿ,ರೈತಮುಖಿ,ಶರಣಮುಖಿ,ಧಾರ್ಮಮುಖಿ,ನ್ಯಾಯಮುಖಿ,ಶಿಕ್ಷಣಮುಖಿಯಾಗಿ ಸಾಧನೆಗಳ ಪರ್ವತವಾಗಿ ,ಸರಸ್ವತಿ ವರಪುತ್ರ ವಿದ್ವತ್ ಪ್ರವೀಣರಂತೆ ಅಪರೂಪದ ಗುರುರಾಜತೇಜಪುಂಜದಿ ವಿರಾಜಮಾನರಾಗಿ ನೊಂದ ಮನಗಳಿಗೆ ಬೆಂದ ಹೃದಯಗಳಿಗೆ ಬೆಳದಿಂಗಳ ನೀರ ತಾವರೆಯಂತೆ ಸುಧಾರಣೆಯ ಕಂಪನ್ನು ಪಸರಿಸುತ್ತಿರುವ ಅಸಂಖ್ಯಾತ ಶಿಷ್ಯರ ವಿಶ್ವಗುರುವಿಗೆ ಭಕ್ತಿ ಪೂರ್ವಕ ಅನಂತ ಪ್ರಣಾಮಗಳು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ

ನಿಮ್ಮ ಪ್ರಶ್ನೆಗೆ ಉತ್ತರಿಸಲು ‘ನಾಳೆ ಟ್ವಿಟರ್ ನಲ್ಲಿ ಲೈವ್’ ಬರಲಿದ್ದೇನೆ ; ಸಂವಾದದಲ್ಲಿ ಭಾಗವಹಿಸಿ : ಸಿದ್ದರಾಮಯ್ಯ

Published

on

ಸುದ್ದಿದಿನ ಡೆಸ್ಕ್ : ಲೋಕಸಭಾ ಚುನಾವಣೆ ರಂಗೇರಿರುವ ಈ‌ ಸಂಧರ್ಭದಲ್ಲಿ, ರಾಜಕೀಯವಲಯದಲ್ಲಿ ಎಲ್ಲಿಲ್ಲದ ಚಟುವಟೆಕೆ ಗರಿಗೆದರಿದೆ. ಪಕ್ಷಗಳ ನಾಯಕರು ತಮ್ಮವಿರೋಧಿ ಪಕ್ಷಗಳ ಮೇಲೆ ವಾಗ್ದಾಳಿ ನಡೆಸಿದ್ದಾರೆ.

ಈ ಚುನಾವಣಾ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಟ್ವಿಟರ್ ಖಾತೆಯ ಮೂಲಕ ನಾಳೆ ಮಾರ್ಚ್ 26 (ನಾಳೆ) ನೇರ ಪ್ರಸಾರದಲ್ಲಿ ಮಾತುಕತೆ ಗೆ ಬರಲಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ. ಆ ಟ್ವೀಟ್ ಹೀಗಿದೆ, “ಮಾರ್ಚ್ 26 ರಂದು ಮಧ್ಯಾಹ್ನ 2:30ಕ್ಕೆ ನಾನು ಟ್ವಿಟ್ಟರ್ ಲೈವ್‌ನಲ್ಲಿ ನಿಮ್ಮೊಂದಿಗೆ ಸಂವಾದ ನಡೆಸಲಿದ್ದೇನೆ.
ನಿಮ್ಮ ಪ್ರಶ್ನೆಗಳನ್ನು #ಸಿದ್ದರಾಮಯ್ಯನವರಿಗೆನಿಮ್ಮಪ್ರಶ್ನೆ ಎಂಬ ಹ್ಯಾಷ್‌ಟ್ಯಾಗ್‌ನೊಂದಿಗೆ ಕೇಳುವುದರ ಮೂಲಕ ಸಂವಾದದಲ್ಲಿ ಭಾಗವಹಿಸಿ.
ಧನ್ಯವಾದಗಳು” ಎಂದು ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Continue Reading

ದಿನದ ಸುದ್ದಿ

ಶಿವಳ್ಳಿ ಕುಟುಂಬದ ಸಹೋದರನಾಗಿ ಸಂಕಷ್ಟಗಳಿಗೆ ಸ್ಪಂದಿಸುತ್ತೇನೆ : ಎಚ್.ಡಿ.ಕೆ

Published

on

ಸುದ್ದಿದಿನ, ಧಾರವಾಡ : ಸಚಿವ ಸಿ.ಎಸ್. ಶಿವಳ್ಳಿ ಅವರ ನಿಧನದ ಸುದ್ದಿ ಕೇಳಿ ಅತ್ಯಂತ ಆಘಾತವಾಗಿದೆ. ಬಡವರ ಬಗೆಗಿನ ಅವರ ಕಾಳಜಿ ನಿಜವಾದ ಜನನಾಯಕನೊಬ್ಬ ಅಳವಡಿಸಿಕೊಳ್ಳಲು ಮಾದರಿಯಾಗಿತ್ತು. ಅವರ ಕುಟುಂಬದ ಸಹೋದರನಾಗಿ ಸಂಕಷ್ಟಗಳ ನಿವಾರಣೆಗೆ ಶ್ರಮಿಸುತ್ತೇನೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ತಿಳಿಸಿದರು.

ಯರಗುಪ್ಪಿಯಲ್ಲಿ ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ ಮಾತನಾಡಿದ ಅವರು, ಗುರುವಾರ ತಾವು ಧಾರವಾಡಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಂಪೂರ್ಣವಾಗಿ ಅವರು ನನ್ನೊಂದಿಗೆ ಇದ್ದರು. ಕಟ್ಟಡ ಕುಸಿತದ ಸಂತ್ರಸ್ತರ ಬಗ್ಗೆ ಮಮ್ಮಲ ಮರುಗಿದ್ದರು.ಕಿಮ್ಸ್ ಭೇಟಿಯ ಸಂದರ್ಭದಲ್ಲಿ ಆ ಸಂಸ್ಥೆಯನ್ನು ಬಹಳ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿ ಪಡಿಸುವ ಕನಸು ವ್ಯಕ್ತಪಡಿಸಿದ್ದರು. ಶಿವಳ್ಳಿ ಅವರೊಂದಿಗೆ ಕಳೆದ ಆರೇಳು ತಿಂಗಳುಗಳಿಂದ ಬಹಳ ಆತ್ಮೀಯತೆ ಬೆಳೆದಿತ್ತು.

ಇಲ್ಲಿ ನೆರೆದ ಜನಸ್ತೋಮ ನೋಡಿ, ಅವರ ಬಗೆಗಿನ ಗೌರವ ಇಮ್ಮಡಿಯಾಗಿದೆ. ಸದಾಕಾಲ ಜನರ ಸೇವೆಗೆ ಒತ್ತು ನೀಡಿದ್ದ ಸಿ.ಎಸ್‌. ಶಿವಳ್ಳಿ ಅವರ ಕುಟುಂಬದ ಸಂಕಷ್ಟಗಳಲ್ಲಿ ಭಾಗಿಯಾಗೋಣ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Continue Reading

ದಿನದ ಸುದ್ದಿ

ಯಡಿಯೂರಪ್ಪ ಡೈರಿ ನಕಲಿ : ಐಟಿ ಇಲಾಖೆ ಡಿಜಿ ಸ್ಪಷ್ಟನೆ

Published

on

ಸುದ್ದಿದಿನ, ಬೆಂಗಳೂರು : ಕಾಂಗ್ರೆಸ್ ನ ವಕ್ತಾರ ರಣದೀಪ್ ಸುರ್ಜೆವಾಲಾ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿಡುಗಡೆ ಮಾಡಿದ್ದ ಡೈರಿಯ ದಾಖಲೆಗಳು ನಕಲಿಯಾಗಿವೆ ಎಂದು ಆದಾಯ ತೆರಿಗೆ ಇಲಾಖೆಯ ಕರ್ನಾಟಕ ಮತ್ತು ಗೋವಾ ಡಿಜಿ ಬಿ.ಆರ್. ಬಾಲಕೃಷ್ಣನ್ ಅವರು ಇಂದು ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಪ್ರಾಥಮಿಕ ಹಮನತದ ವರದಿಯು ಹೇಳುವಂತೆ ಡೈರಿಯ ದಾಖಲೆಗಳು ನಕಲಿಯಾಗಿದ್ದು, ಅವುಗಳನ್ನು ಹೈದರಾಬಾದಿನ ವಿಧಿ ವಿಜ್ಞಾನ ಲ್ಯಾಬ್ (ಸಿ. ಎಫ್. ಎಸ್. ಎಲ್ ) ಗೆ ಕಳುಹಿಸಲಾಗಿದೆ‌ ಎಂದರು.

ಕಾಂಗ್ರೆಸ್ ಡೈರಿ ಬಿಡುಗಡೆ ಮಾಡಿದ್ದ ಸುದ್ದಿಗೋಷ್ಟಿ

ಸುದ್ದಿದಿನ.ಕಾಂ|ವಾಟ್ಸಾಪ್|9986715401

Continue Reading
Advertisement

Trending