Connect with us

ದಿನದ ಸುದ್ದಿ

ನೇತ್ರಾವತಿ ಸೇತುವೆಯಿಂದ ಹಾರಿ ಎಸ್.ಎಂ ಕೃಷ್ಣರ ಅಳಿಯ ಸಿದ್ಧಾರ್ಥ ಆತ್ಮಹತ್ಯೆ ? ಹುಡುಕಾಟ

Published

on

ಸುದ್ದಿದಿನ,ಮಂಗಳೂರು : ಸೋಮವಾರ ಸಂಜೆ ಬೆಂಗಳೂರಿನಿಂದ ಇನೋವಾ ಕಾರಿನಲ್ಲಿ ಮಂಗಳೂರಿಗೆ ಆಗಮಿಸಿದ್ದರು. ರಾತ್ರಿ 7.30ರ ವೇಳೆ ಕಾರಿನಲ್ಲಿ ಚಾಲಕನ ಜತೆ ಉಳ್ಳಾಲದತ್ತ ತೆರಳಿ ಕಾರನ್ನು ಒಂದು ಸೇತುವೆಯ ಬದಿ ನಿಲ್ಲಿಸಲು ಹೇಳಿ, ಏಕಾಂಗಿಯಾಗಿ ಸೇತುವೆಯಲ್ಲಿ ನಡೆದುಕೊಂಡು ಹೋಗಿದ್ದಾರೆ. ಆ ಬಳಿಕ ಚಾಲಕ ಸುಮಾರು ಎರಡು ಗಂಟೆ ಕಾದರೂ ಸಿದ್ಧಾರ್ಥ ಬರಲಿಲ್ಲ. ಇದಕ್ಕೆ ಆತಂಕಿತರಾದ ಚಾಲಕ ಪೊಲೀಸ್ ಹಾಗೂ ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿದ್ದಾರೆ. ಸಿದ್ಧಾರ್ಥ ಅವರು ಸೇತುವೆಯ ಮಧ್ಯಭಾಗದಿಂದ ನದಿಗೆ ಹಾರಿರಬಹುದೆಂದು ಶಂಕೆ ಹಿನ್ನೆಲೆಯಲ್ಲಿ ದೇಹಕ್ಕಾಗಿ ಬೋಟ್ ಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ.

ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ. ಶಸಿಕಾಂತ್ ಸೇಂಥಿಲ್, ಡಿಸಿಪಿಗಳಾದ ಲಕ್ಷ್ಮೀ ಗಣೇಶ್, ಹನುಮಂತರಾಯ, ಎಸಿಪಿ ಶ್ರೀನಿವಾಸ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ದಿನದ ಸುದ್ದಿ

ದಾವಣಗೆರೆ | ‘ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ ಪಟ್ಟಣ ವ್ಯಾಪಾರ ಸಮಿತಿ’ ಚುನಾವಣೆ : ವೇಳಾಪಟ್ಟಿ ಪ್ರಕಟ

Published

on

ಸುದ್ದಿದಿನ,ದಾವಣಗೆರೆ : ಆಯುಕ್ತರು, ಸಹಕಾರ ಚುನಾವಣಾ ಆಯೋಗ ಬೆಂಗಳೂರು ಇವರ ಆದೇಶದನ್ವಯ ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ (ಜೀವನೋಪಾಯ ಸಂರಕ್ಷಣೆ ಮತ್ತು ಬೀದಿ ಬದಿ ವ್ಯಾಪಾರ ನಿಯಂತ್ರಣ)ನಿಯಮ-2019 ರನ್ವಯ ಪಟ್ಟಣ ವ್ಯಾಪಾರ ಸಮಿತಿ ಮಹಾನಗರ ಪಾಲಿಕೆ ದಾವಣಗೆರೆ ಇವರ ಸರ್ಕಾರೇತರ ಸದಸ್ಯರ ಪ್ರತಿನಿದಿಗಳ ಆಯ್ಕೆಯ ಚುನಾವಣೆಯು ಡಿ.21 ರಂದು ಶ್ರೀಮತಿ ಗೌರಮ್ಮ ಹನಗೋಡಿ ಮಠ ಹಿರಿಯ ಪ್ರಾಥಮಿಕ ಶಾಲೆ, ಕೊಠಡಿ ಸಂಖ್ಯೆ: 4,5,7 ಮತ್ತು 8, ಹದಡಿ ರಸ್ತೆ, ದಾವಣಗೆರೆ ಇಲ್ಲಿ ನಡೆಯಲಿದೆ.

ಈ ಚುನಾವಣೆಯಲ್ಲಿ ಪಟ್ಟಣದ ವ್ಯಾಪಾರ ಸಮಿತಿಯ ಒಟ್ಟು 10 ಜನ ಪ್ರತಿನಿಧಿಗಳು (3ನೇ ಒಂದರಷ್ಟು) ಮಹಿಳಾ ವ್ಯಾಪಾರಿಗಳಿಗೆ, ಪರಿಶಿಷ್ಟ ಜಾತಿ, ಪರಿಶಿಷ್ಠ ಪಂಗಡ, ಇತರೆ ಹಿಂದುಳಿದ ವರ್ಗಗಳ, ಅಲ್ಪ ಸಂಖ್ಯಾತರ ಹಾಗೂ ವಿಕಲ ಚೇತನರ ಕನಿಷ್ಠ ಒಬ್ಬ ಪ್ರತಿನಿಧಿಗೆ ಮೀಸರಿಸಿದ ಪಟ್ಟಣ ವ್ಯಾಪಾರ ಸಮಿತಿಗೆ ಚುನಾಯಿಸಲು ಈ ಚುನಾವಣೆಗೆ ನೋಟಿಸ್, ನಾಮಪತ್ರ ಆಹ್ವಾನಿಸಿ ಡಿ. 7 ರಂದು ಅಧಿಸೂಚನೆ ಹೊರಡಿಸಿದೆ.

ದಾವಣಗೆರೆ ಮಹಾನಗರಪಾಲಿಕೆಯ ಎಸ್‍ಜೆಎಸ್‍ಆರ್‍ವೈ ವಿಭಾಗ ಕೆಂಪು ಕಟ್ಟಡ ಕಚೇರಿಯಲ್ಲಿ ಡಿ 9 ರಿಂದ 13 ರವರೆಗೆ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ರವರೆಗೆ ನಾಮ ಪತ್ರಗಳನ್ನು ಚುನಾವಣಾ ಅಧಿಕಾರಿ/ಸಹಾಯಕ ಚುನಾವಣಾ ಅಧಿಕಾರಿಯವರಿಗೆ ನಿಗದಿಪಡಿಸಿದ ಅವಧಿಯಲ್ಲಿ ಸಲ್ಲಿಸುವುದು. ಡಿ. 14 ರಂದು ಬೆಳಿಗ್ಗೆ 11 ಗಂಟೆಗೆ ನಾಮ ಪತ್ರಗಳನ್ನು ಪರಿಶೀಲಿಸುವ ದಿನವಾಗಿರುತ್ತದೆ. ಡಿ. 14 ರಂದು ಮಧ್ಯಾಹ್ನ 3 ಗಂಟೆಗೆ ಸಿಂಧುವಾದ ನಾಮಪತ್ರಗಳನ್ನು ಪ್ರಕಟಿಸಬೇಕಾದ ದಿನಾಂಕವಾಗಿರುತ್ತದೆ.

ಡಿ. 15 ರಂದು ಸಂಜೆ 5 ಗಂಟೆಗಿಂತ ಮುಂಚೆ ನಾಮಪತ್ರಗಳನ್ನು ಹಿಂತೆಗೆದುಕೊಳ್ಳುವ ದಿನವಾಗಿದೆ. ಹಾಗೂ ಅದೇ ದಿನ ಸಂಜೆ 5.30 ಗಂಟೆಯವರೆಗೆ ನಾಮಪತ್ರಗಳು ಸಿಂಧುವಾಗಿವೆ ಎಂದು ಘೋಷಿಸಲಾಗಿರುವ ಅಭ್ಯರ್ಥಿಗಳ ಸಂಖ್ಯೆಯು ಚುನಾಯಿಸಬೇಕಾದ ಅಭ್ಯರ್ಥಿಗಳ ಸಂಖ್ಯೆಯನ್ನು ಮೀರದಿದ್ದರೆ ಉಮೇದುವಾರಿಕೆಯನ್ನು ಹಿಂಪಡೆಯಲು ನಿಗದಿಪಡಿಸಲಾದ ದಿನ ಮುಕ್ತಾಯಗೊಂಡ ತರುವಾಯ, ಅಂಥ ಎಲ್ಲ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸತಕ್ಕದ್ದು. ಹಾಗೂ ಪಟ್ಟಣ ವ್ಯಾಪಾರ ಸಮಿತಿಗೆ ಅವರು ಯುಕ್ತವಾಗಿ ಚುನಾಯಿತರಾಗಿದ್ದಾರೆಂದು ಘೋಷಿಸತಕ್ಕದ್ದು.

ಡಿ 21 ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಶ್ರೀಮತಿ ಗೌರಮ್ಮ ಹನಗೋಡಿ ಮಠ ಹಿರಿಯ ಪ್ರಾಥಮಿಕ ಶಾಲೆ, ಕೊಠಡಿ ಸಂಖ್ಯೆ: 4,5,7 ಮತ್ತು 8, ಹದಡಿ ರಸ್ತೆ, ದಾವಣಗೆರೆ ಇಲ್ಲಿ ಮತದಾನ ನಡೆಯಲಿದೆ. ಹಾಗೂ ಅದೇ ದಿನ ಮತದಾನದ ಅವಧಿ ಮುಗಿದ ನಂತರ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಿ ಚುನಾವಣಾ ಫಲಿತಾಂಶ ಪ್ರಕಟಿಸಲಾಗುವುದು.

ಉಮೇದುವಾರರು ನಾಮಪತ್ರವನ್ನು ನಮೂನೆ-1 ರಲ್ಲಿ ನಾಮಪತ್ರ ಚುನಾವಣಾಧಿಕಾರಿಗಳಿಗೆ ಸಲ್ಲಿಸುವುದು. ಮತದಾನಕ್ಕೆ ಬರುವ ಬೀದಿ ಬದಿ ವ್ಯಾಪಾರಿಗಳು ಮಹಾನಗರಪಾಲಿಕೆ ದಾವಣಗೆರೆ ಇಂದ ನೀಡಿರುವ ಗುರುತಿನ ಚೀಟಿಗಳನ್ನು ಕಡ್ಡಾಯವಾಗಿ ಹಾಜರುಪಡಿಸಿ ಮತ ಚಲಾಯಿಸತಕ್ಕದ್ದು, ಮತ್ತು ನಿಗದಿಪಡಿಸಿದ ಪುಸ್ತಕದಲ್ಲಿ ಸಹಿ ಮಾಡಬೇಕು.

ಹೆಚ್ಚಿನ ಮಾಹಿತಿಗಾಗಿ ರಿಟರ್ನಿಂಗ್ ಅಧಿಕಾರಿ/ಸಹಾಯಕ ಚುನಾವಣಾಧಿಕಾರಿಗಳನ್ನು ಕಚೇರಿ ವೇಳೆಯಲ್ಲಿ ಮಾತ್ರ ಸಂಪರ್ಕಿಸುವಂತೆ ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ (ಜೀವನೋಪಾಯ ಸಂರಕ್ಷಣೆ ಮತ್ತು ಬೀದಿ ಬದಿ ವ್ಯಾಪಾರ ನಿಯಂತ್ರಣ) ಪಟ್ಟಣ ವ್ಯಾಪಾರ ಸಮಿತಿ ಮಹಾನಗರ ಪಾಲಿಕೆ ಚುನಾವಣಾ ಅಧಿಕಾರಿಗಳು ಹಾಗೂ ದಾವಣಗೆರೆ ತಾಲ್ಲೂಕು ತಹಶಿಲ್ದಾರರಾದ ಜಿ. ಸಂತೋಷ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ವಿಡಿಯೊ | ‘ನನ್ ಯಾರೂ ಟಚ್​ ಮಾಡೋಕಾಗಲ್ಲ’ : ನಿತ್ಯಾನಂದನ

Published

on

ಸುದ್ದಿದಿನ‌ ಡೆಸ್ಕ್ : ಸ್ವಯಂಘೋಷಿತ ದೇವಮಾನವ ನಿತ್ಯಾನಂದ ನನ್ನನ್ನು ಯಾರೂ ಮುಟ್ಟಲಾರರು, ನಿಮಗೊಂದು ಸತ್ಯ ಹೇಳುತ್ತೇನೆ. ನಾನೂ ಪರಮ ಶಿವ, ಅರ್ಥವಾಯ್ತ…? ಎಂದು ಅತ್ಯಾಚಾರದ ಆರೋಪಿ ನಿತ್ಯಾನಂದ ವಿಡಿಯೋವನ್ನ ಹರಿಬಿಟ್ಟಿದ್ದಾರೆ.

ಯಾವ ಕೋರ್ಟ್​ ಕೂಡ ನನ್ನ ಬಗ್ಗೆ ತೀರ್ಪು ನೀಡಲಾರದು. ಯಾರೂ ನನ್ನನ್ನು ಮುಟ್ಟಲಾರರು ಎಂದಿದ್ದಾನೆ. ಅಹಮದಾಬಾದ್​ ಅಪಹರಣ ಮತ್ತು ಅತ್ಯಾಚಾರ ಪ್ರಕರಣವೊಂದರಲ್ಲಿ ಗುಜರಾತ್​ ಪೊಲೀಸರು ಈತನಿಗಾಗಿ ಹುಡುಕಾಟ ನಡೆಸಿದ್ದಾರೆ.
ಇನ್ನೂ ಇತ್ತೀಚೆಗೆ ನಿತ್ಯಾನಂದ ನಮ್ಮ ದೇಶ ಎಂದರೆ ಅದು ದೊಡ್ಡ ಹಿಂದು ರಾಷ್ಟ್ರ. ಅದರ ಹೆಸರು ಕೈಲಾಸ, ಅದಕ್ಕೆ ಗಡಿಗಳಿಲ್ಲ ಎಂದು ತನ್ನ ವೆಬ್​ಸೈಟ್​ನಲ್ಲಿ ನೀಡಿದ್ದ ಹೇಳಿಕೆಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದವು.

ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ನಿತ್ಯಾನಂದ, ನ್ಯಾಯಾಲಯದ ಶಿಕ್ಷೆಯಿಂದ ಬಚಾವಾಗಲು ಪಾಸ್​​ಪೋರ್ಟ್​ ಇಲ್ಲದೆ ದೇಶ ತೊರೆದಿದ್ದಾನೆ. ದಕ್ಷಿಣ ಅಮೆರಿಕದ ರಾಷ್ಟ್ರ ಈಕ್ವೆಡಾರ್​​ಗೆ ಪರಾರಿಯಾಗಿದ್ದಾನೆ ಎನ್ನಲಾಗಿದ್ದು, ದಕ್ಷಿಣ ಅಮೆರಿಕ ಈ ಮಾತನ್ನು ತಳ್ಳಿ ಹಾಕಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಉಚಿತ ಕೌಶಲ್ಯ ತರಬೇತಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ : 2019-20ನೇ ಸಾಲಿನ ತಂತ್ರಜ್ಞಾನ ತರಬೇತಿಗಳ ಸಂಸ್ಥೆಗಳಿಗೆ ನೆರವಿನ ಯೋಜನೆಯ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಕೌಶಲ್ಯ ತರಬೇತಿಗಳನ್ನು ಹರಿಹರದಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಉಚಿತವಾಗಿ ನಡೆಸಲಾಗುವುದು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 18 ರಿಂದ 45 ವಯೋಮಾನದೊಳಗಿನ ನಿರುದ್ಯೋಗಿ ಯುವಕ/ಯುವತಿಯರಿಗಾಗಿ ಉದ್ಯೋಗಾವಕಾಶ ಕಲ್ಪಿಸಲು ಎಸ್.ಎಸ್.ಎಲ್.ಸಿ/ ಐ.ಟಿ.ಐ / ಡಿಪ್ಲೋಮ / ಬಿ.ಇ ಪಾಸ್ ಆಗಿರುವ ಅಭ್ಯರ್ಥಿಗಳಿಗೆ 3 ತಿಂಗಳ ಅವಧಿಯ ಸಿಎನ್‍ಸಿ ಟೆಕ್ನಲಾಜಿಸ್ಟ್, ಸಿಎನ್‍ಸಿ ಪ್ರೋಗ್ರಾಮರ್/ ಸಿಎನ್‍ಸಿ ಆಪರೇಟರ್ ವರ್ಟಿಕಲ್ ಮಷಿನಿಂಗ್ ಸೆಂಟರ್/ ಕನ್ವೆನ್ಷನಲ್ ಮಿಲ್ಲಿಂಗ್/ಟರ್ನಿಂಗ್ ಆಪರೇಟರ್ ಉಚಿತ ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗುವುದು.

ತರಬೇತಿ ಮುಗಿದ ನಂತರ ಉದ್ಯೋಗಾವಕಾಶಕ್ಕೆ ಮಾರ್ಗದರ್ಶನ ನೀಡಲಾಗುವುದು. ತರಬೇತಿ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಶಿಷ್ಯವೇತನ ನೀಡಲಾಗುವುದು. ಅರ್ಜಿಗಳನ್ನು ಕಾಲೇಜಿನ ಕಚೇರಿಯಲ್ಲಿ ಪಡೆಯಬಹುದಾಗಿದ್ದು, ಅರ್ಜಿ ಸಲ್ಲಿಸಲು ಡಿ.20 ಕೊನೆಯ ದಿನವಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ

ಪ್ರಾಂಶುಪಾಲರು, ಜಿ.ಟಿ.ಟಿ.ಸಿ, 22 ಸಿ & ಡಿ, ಕೆಐಎಡಿಬಿ, ಇಂಡಸ್ಟ್ರಿಯಲ್ ಏರಿಯಾ, ಹರ್ಲಾಪುರ, ಕೆಎಸ್‍ಆರ್‍ಟಿಸಿ ಡಿಪೋ ಹತ್ತಿರ, ಹರಿಹರ ದೂರವಾಣಿ: 08192-243937, 9513010166, 8711913947, 8884488202 ನ್ನು ಸಂಪರ್ಕಿಸಬಹುದೆಂದು ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending