Connect with us
http://www.suddidina.com/category/political-news

ದಿನದ ಸುದ್ದಿ

ನಡೆದಾಡುವ ದೇವರು ನನ್ನ ಪಾಲಿಗೆ ‘ನಡೆದಾಡುತ್ತಿದ್ದ ಬಸವಣ್ಣ’ : ಸಿದ್ದರಾಮಯ್ಯ‌

Published

on

ಸುದ್ದಿದಿನ ಡೆಸ್ಕ್ : ಡಾ.ಶ್ರೀ ಶಿವಕುಮಾರ ಸ್ವಾಮಿಗಳ ಲಿಂಗೈಕ್ಯದಿಂದ ನಾನು ಆಘಾತಕ್ಕೀಡಾಗಿದ್ದೇನೆ. ಇತ್ತೀಚಿನ ಕೆಲವು ದಿನಗಳಲ್ಲಿ ಅವರ ಆರೋಗ್ಯದಲ್ಲಿ ನಡೆಯುತ್ತಿದ್ದ ಏರುಪೇರು ನಮ್ಮೆಲ್ಲರನ್ನೂ ಆತಂಕಕ್ಕೀಡುಮಾಡಿತ್ತು. ಇಂತಹದ್ದೊಂದು ದಿನ ಎದುರಾಗಬಹುದೆಂಬ ನಮ್ಮ ಭಯ ನಿಜವಾಗಿದೆ. ಸಾಧನೆಯ ಮೂಲಕ ಲೋಕವನ್ನೇ ಗೆದ್ದಿರುವ ಸ್ವಾಮಿಗಳು ಕೊನೆಗೂ ಸಾವನ್ನು ಗೆಲ್ಲಲಾಗದೆ ಶರಣಾಗಿ ನಮ್ಮನ್ನು ಅನಾಥರಾಗಿಸಿದ್ದಾರೆ.

ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ತುಂಬಿದ ಹೃದಯದಿಂದ ಹಾರೈಸುತ್ತೇನೆ. ದು:ಖದಲ್ಲಿರುವ ಸಮಸ್ತ ಭಕ್ತಾಭಿಮಾನಿಗಳ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ. ನಾವು ಬಸವಣ್ಣನವರನ್ನು ಕಣ್ಣಾರೆ ನೋಡಿಲ್ಲ, ನಾನು ಡಾ.ಶಿವಕುಮಾರ ಸ್ವಾಮೀಜಿಗಳಲ್ಲಿ ಬಸವಣ್ಣನನ್ನು ಕಾಣುತ್ತಿದ್ದೆ. ಅವರನ್ನು ‘’ನಡೆದಾಡುವ ದೇವರು’’ ಎನ್ನುತ್ತಾರೆ. ನನ್ನ ಪಾಲಿಗೆ ಅವರು ‘’ನಡೆದಾಡುತ್ತಿದ್ದ ಬಸವಣ್ಣ’’ ಆಗಿದ್ದರು. ಅಂತಹದ್ದೊಂದು ಆದರ್ಶ ಬದುಕನ್ನು ಅವರು ಬದುಕಿ ತೋರಿಸಿ ನಮಗೆ ಮಾದರಿಯಾಗಿ ಬಿಟ್ಟು ಹೋಗಿದ್ದಾರೆ. ಆ ದಾರಿಯಲ್ಲಿ ನಡೆಯುವುದೇ ಸ್ವಾಮೀಜಿಗಳಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿಯಾಗಿದೆ.

ವೈಯಕ್ತಿಕ ಮತ್ತು ರಾಜಕೀಯ ಜೀವನದಲ್ಲಿ ಬಸವಣ್ಣ ನನ್ನ ನಾಯಕ. ಇದಕ್ಕಾಗಿಯೇ ಬಸವ ಜಯಂತಿಯಂದೇ ನಾನು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದವನು. ಸ್ವಾಮೀಜಿಗಳು ಬಸವಣ್ಣನವರ ತತ್ವಕ್ಕೆ ನೂರಕ್ಕೆ ನೂರರಷ್ಟು ಬದ್ಧರಾಗಿ ಬದುಕಿದವರು. ಹಸಿದವರಿಗೆ ಅನ್ನ, ಮಕ್ಕಳಿಗೆ ಶಿಕ್ಷಣ ಮತ್ತು ವಸತಿ ಕಲ್ಪಿಸಲು ತಮ್ಮ ಜೀವವನ್ನೇ ತೇದ ಸ್ವಾಮೀಜಿಯವರ ಬದುಕು ಮತ್ತು ಸಾಧನೆ ನಮಗೆಲ್ಲ ಮಾದರಿ.

ಮುಖ್ಯಮಂತ್ರಿಯಾಗಿದ್ದಾಗ ನಾನು ಅನುಷ್ಠಾನಗೊಳಿಸಿದ್ದ ಅನ್ನಭಾಗ್ಯ, ಕ್ಷೀರಭಾಗ್ಯ, ವಿದ್ಯಾಸಿರಿ ಮೊದಲಾದ ಅನೇಕ ಕಾರ್ಯಕ್ರಮಗಳಿಗೆ ಸ್ವಾಮೀಜಿಯವರ ಸೇವಾ ಕಾರ್ಯಕ್ರಮಗಳೂ ಕೂಡಾ ಸ್ವೂರ್ತಿಯಾಗಿತ್ತು.
ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಅನನ್ಯವಾದುದು. ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ಅನೇಕ ಸಂಸ್ಥೆಗಳನ್ನು ಕಟ್ಟಿ ಮುನ್ನಡೆಸಿದ್ದ ಸ್ವಾಮೀಜಿಗಳು ಕೊನೆಯ ವರೆಗೂ ಶಿಕ್ಷಣವನ್ನು ಸೇವೆಯೆಂದೇ ತಿಳಿದಿದ್ದರೆ ಹೊರತು ಅದನ್ನು ವ್ಯಾಪಾರ-ಉದ್ಯಮ ಮಾಡಲು ಹೋಗಲೇ ಇಲ್ಲ. ಶಿಕ್ಷಣ ಕ್ಷೇತ್ರವೇ ಉದ್ಯಮವಾಗುತ್ತಿರುವ ಹಿನ್ನೆಲೆಯಲ್ಲಿ ಸ್ವಾಮೀಜಿಯವರ ಈ ಸಂದೇಶವನ್ನು ನಾವೆಲ್ಲರೂ ಅರಿತುಕೊಳ್ಳಬೇಕಾಗಿದೆ ಮತ್ತು ಶಿಕ್ಷಣೋದ್ಯಮಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.

ಉದ್ಧಾನ ಸ್ವಾಮೀಜಿಗಳಿಂದ ಪ್ರಾರಂಭವಾಗಿದ್ದ ಅನ್ನ-ಅರಿವುಗಳ ದಾಸೋಹವನ್ನು ಡಾ.ಶ್ರೀ ಶಿವಕುಮಾರ ಸ್ವಾಮೀಜಿಗಳು ಸರ್ವರನ್ನೂ ಒಳಗೊಂಡ ದಾಸೋಹವನ್ನಾಗಿ ವಿಸ್ತರಿಸಿದರು. ಸ್ವಾಮೀಜಿಗಳ ತುಮಕೂರಿನ ಸಿದ್ದಗಂಗಾ ಮಠ ಡಾ.ಶ್ರೀ ಶಿವಕುಮಾರ ಸ್ವಾಮೀಜಿಗಳ ನೇತೃತ್ವದಲ್ಲಿ ಒಂದು ವಿಶ‍್ವವಿದ್ಯಾಲಯವೇ ಯಾಕೆ, ಒಂದು ಸರ್ಕಾರವೇ ಮಾಡಬೇಕಾಗಿರುವ ಕೆಲಸವನ್ನು ಮಾಡುತ್ತಾ ಬಂದಿದೆ.

ಅಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದು ವಿವಿಧ ಕ್ಷೇತ್ರಗಳಲ್ಲಿ ಉನ್ನತ ಹುದ್ದೆಗಳಲ್ಲಿರುವವರು ಇಂದು ವಿಶ್ವದಾದ್ಯಂತ ಇದ್ದಾರೆ. ಸ್ವಾಮೀಜಿಗಳು ಎಂದೂ ಹೆಚ್ಚು ಮಾತನಾಡಿದವರಲ್ಲ, ಮಾತಿಗಿಂತ ಮೌನದಲ್ಲಿಯೇ ಸಾಧನೆ ಮಾಡಿದವರು. ಅವರು ನುಡಿದಂತೆಯೇ ನಡೆದವರು. ಕಾಯಕಪ್ರಜ್ಞೆಯನ್ನು ಬಾಳಿ ಬದುಕಿದವರು. ಕೊನೆಗೂ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರಿಗೆ ಅವರೇ ಸಾಟಿ ಹೊರತು ಆ ಸ್ಥಾನದಲ್ಲಿ ಭವಿಷ್ಯದಲ್ಲಿಯೂ ಇನ್ನೊಬ್ಬರನ್ನು ಊಹಿಸುವುದು ಕಷ್ಟ.

ಸ್ವಾಮೀಜಿಗಳ ಲಿಂಗೈಕದಿಂದ ರಾಜ್ಯ,ದೇಶಕ್ಕೆ ಮಾತ್ರವಲ್ಲ ಇಡೀ ಮನುಕುಲಕ್ಕೆ ಆಗಿರುವ ನಷ್ಟವನ್ನು ಶಬ್ದಗಳಿಂದ ಹೇಳಿಕೊಳ್ಳಲು ಸಾಧ್ಯ ಇಲ್ಲ. ನಮ್ಮಿಂದ ಮರೆಯಾದ ಸ್ವಾಮೀಜಿಗಳು ಒಂದು ದೊಡ್ಡ ನಿರ್ವಾತವನ್ನು ಬಿಟ್ಟು ಹೋಗಿದ್ದಾರೆ, ಅದನ್ನು ತುಂಬಲು ಬಹುಷ: ಮುಂದೆಯೂ ಯಾರಿಗೂ ಸಾಧ‍್ಯವಾಗಲಾರದು. ಸ್ವಾಮೀಜಿಯವರಿಗೆ ದೇಶದ ಅತ್ಯುನ್ನತ ಗೌರವವಾದ ಭಾರತ ರತ್ನ ನೀಡಬೇಕೆಂದು ನಾನು ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದೆ. ಸ್ವಾಮೀಜಿಗಳು ಇಂತಹ ಪ್ರಶಸ್ತಿ-ಪಾರಿತೋಷಕಗಳನ್ನು ಮೀರಿ ಬದುಕಿದವರು. ಆದರೆ ಆ ಗೌರವ ಸ್ವಾಮೀಜಿಯವರಿಗೆ ಸಂದಿದ್ದರೆ ಆ ಪ್ರಶಸ್ತಿಯ ಗೌರವ ಹೆಚ್ಚಾಗುತ್ತಿತ್ತು.

https://www.facebook.com/595111904167609/posts/807113292967468/

ಸುದ್ದಿದಿನ.ಕಾಂ|ವಾಟ್ಸಾಪ್| 9986715401

ದಿನದ ಸುದ್ದಿ

ಹುತಾತ್ಮರನ್ನು ಅವಮಾನಿಸುವ ಬಿಜೆಪಿಗರು ದೇಶಪ್ರೇಮಿಗಳಾಗಲು ಹೇಗೆ ಸಾಧ್ಯ? : ಸಿದ್ದರಾಮಯ್ಯ ಆಕ್ರೋಶ

Published

on

ಸುದ್ದಿದಿನ, ಬಾಗಲಕೋಟೆ : ದೇಶದ ಗಡಿ ಕಾಯುವ ಸೈನಿಕರಂತೆಯೇ ದೇಶದೊಳಗೆ ಜನರ ಪ್ರಾಣ, ಆಸ್ತಿ-ಪಾಸ್ತಿ ಕಾಪಾಡುವ ಪೊಲೀಸರು ದೇಶ ಸೇವಕರಲ್ಲವೇ? ಹುತಾತ್ಮ ಪೊಲೀಸರನ್ನು ಅವಮಾನಿಸುವ ಬಿಜೆಪಿಗರು ಹೇಗೆ ದೇಶ ಪ್ರೇಮಿಗಳಾಗಲು ಸಾಧ್ಯ? ಇಂತಹ ಪ್ರಶ್ನೆಗಳಿಗೆ ಉತ್ತರಿಸಬೇಕಾದ ಪ್ರಧಾನಿಗಳು ಮಾಧ್ಯಮಗಳ ಕಣ್ಣು ತಪ್ಪಿಸಿ ತಿರುಗಾಡುತ್ತಾರೆ. ಇಂಥವರಿಂದ ದೇಶಪ್ರೇಮದ ಪಾಠ ಅಗತ್ಯವಿದೆಯೇ? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಬಾಗಲಕೋಟೆ ಲೋಕಸಭೆ ಕ್ಷೇತ್ರದ ಬಾದಾಮಿಯ ಕೆರೂರಿನಲ್ಲಿ ಇಂದು ಆಯೋಜಿಸಿದ್ದ ಬೃಹತ್ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು,
60 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಬಿಜೆಪಿಯವರು ಪ್ರಶ್ನಿಸುತ್ತಾರೆ. 60 ವರ್ಷಗಳಲ್ಲಿ ಕಾಂಗ್ರೆಸ್ ಸೌಹಾರ್ದ ಭಾರತ ಕಟ್ಟಿದೆ ಎಂದು ನಮ್ಮ ಪ್ರತಿ ಕಾರ್ಯಕರ್ತನು ಹೆಮ್ಮೆಯಿಂದ ಹೇಳಬೇಕು ಎಂದರು.

ನಮ್ಮ‌ ಆ 60 ವರ್ಷಗಳ ಶ್ರಮವನ್ನು ಕೇವಲ ಐದೇ ವರ್ಷಗಳಲ್ಲಿ ಬಿಜೆಪಿ ಸಾಕಷ್ಟು ಹಾಳುಗೆಡವಿದೆ. ಸಂವಿಧಾನ ಸುಡುವುದು, ದಲಿತರು, ಅಲ್ಪಸಂಖ್ಯಾತರ ಮೇಲೆ ಹಲ್ಲೆ, ಮಹಿಳೆಯರ ಶೋಷಣೆಯಂತಹ ಘಟನೆಗಳು ಕಳೆದ 5 ವರ್ಷಗಳಿಂದ ನಿರಂತರ ಏರುತ್ತಾ ಸಾಗಿದೆ. ಮತ್ತೈದು ವರ್ಷ ಬಿಜೆಪಿಗರ ಕೈಗೆ ಅಧಿಕಾರ ಸಿಕ್ಕರೆ ನಮ್ಮ 60 ವರ್ಷಗಳ ಶ್ರಮ ವ್ಯರ್ಥವಾಗಿಬಿಡುತ್ತದೆ ಎಂದು ಆತಂಕ ವ್ಯಕ್ತ ಪಡಿಸಿದರು.

ಧರ್ಮ-ಧರ್ಮಗಳ ನಡುವೆ, ಜಾತಿ-ಜಾತಿಗಳ ನಡುವೆ ದ್ವೇಷದ ವಿಷಬೀಜ ಬಿತ್ತಿ, ಅಮಾಯಕರನ್ನು ಬಲಿಕೊಟ್ಟು ಇವರು ಕಟ್ಟಲು ಹೊರಟಿರುವ ಸ್ವಾರ್ಥ ಸಾಮ್ರಾಜ್ಯ ಶಾಶ್ವತವಾಗಿ ಉಳಿಯುವುದೇ? ಮುಂದಿನ ಪೀಳಿಗೆಗೆ ಇವರು ಬಳುವಳಿಯಾಗಿ ನೀಡಲು ಹೊರಟಿರುವ ಸಮಾಜವಾದರೂ ಎಂತಹುದು? ಈ ಬಗ್ಗೆ ನಾವು ಈಗಲೇ ಎಚ್ಚೆತ್ತುಕೊಳ್ಳಲೇಬೇಕು ಎಂದು ಹೇಳಿದರು.

ಮಹಿಳೆಯರು, ದಲಿತರು, ಬಡವರು, ಅಲ್ಪಸಂಖ್ಯಾತರನ್ನು ಅಭಿವೃದ್ಧಿಯಿಂದ ಹೊರಗಿಟ್ಟು ಸದೃಢ ರಾಷ್ಟ್ರ ನಿರ್ಮಿಸಲು ಸಾಧ್ಯವೇ? ಉದ್ಯಮಿಗಳ ಸಹಸ್ರಾರು ಕೋಟಿ ಸಾಲ ಮನ್ನಾ ಮಾಡುವ ನರೇಂದ್ರ ಮೋದಿಯವರ ಕಣ್ಣಿಗೆ ದೇಶದ ಬಡ ರೈತರು, ಕೂಲಿ ಕಾರ್ಮಿಕರೇಕೆ ಕಾಣುವುದೇ ಇಲ್ಲ? ಇದನ್ನು ಪ್ರಶ್ನಿಸುವವರು ಹೇಗೆ ದೇಶದ್ರೋಹಿಗಳಾಗುತ್ತಾರೆ? ಎಂದು ಪ್ರಶ್ನಿಸಿದರು.

ಈ ಬಾರಿಯ ಚುನಾವಣೆ ಬಿಜೆಪಿಯ ಸುಳ್ಳುಗಳು ಮತ್ತು ದೇಶದ ಜನರ ನೈಜ ಸಮಸ್ಯೆಗಳ ನಡುವಿನ ಸಂಘರ್ಷ. 5 ವರ್ಷಗಳ ಹಿಂದೆ ಬಣ್ಣದ ಮಾತುಗಳನ್ನಾಡಿ ಅಧಿಕಾರ ಹಿಡಿದ ಬಿಜೆಪಿಗೆ ಈ ಬಾರಿಯ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಿ ಎಂದು ಮತದಾರರಲ್ಲಿ ಮನವಿ ಮಾಡುತ್ತೇನೆ. ಕಾಂಗ್ರೆಸ್‌ ಬೆಂಬಲಿಸೋಣ, ಸಮೃದ್ಧ ಭಾರತದ ಸಂಕಲ್ಪಕ್ಕೆ ಜೊತೆಯಾಗೋಣ ಎಂದು ಕರೆ ನೀಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಶ್ರೀಲಂಕಾ ಸರಣಿ ಬಾಂಬ್ ಸ್ಫೋಟ : 207 ಕ್ಕೆ ಏರಿದ ಮೃತರ ಸಂಖ್ಯೆ

Published

on

ಸುದ್ದಿದಿನ, ಕೊಲಂಬೊ : ಶ್ರೀಲಂಕಾದ ಕೊಲಂಬೊದಲ್ಲಿ 8ಕಡೆ ಸರಣಿ ಬಾಂಬ್ ಸ್ಫೋಟದಲ್ಲಿ 207 ಜನರು ಸಾವನ್ನಪ್ಪಿದ್ದು, 500ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಈಸ್ಟರ್ ಹಬ್ಬದ ಆಚರಣೆ ವೇಳೆ ಉಗ್ರರ ಅಟ್ಟಹಾಸ ಮೆರೆದಿದ್ದು, ಕೊಲಂಬೊದಲ್ಲಿರುವ ಸೇಂಟ್ ಆಂಥೋನಿ ಚರ್ಚ್​ ಮತ್ತು ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಬಾಂಬ್ ದಾಳಿ ಮಾಡಿದ್ದಾರೆ.

ಈ‌ ಹಿನ್ನೆಲೆಯಲ್ಲಿ ಕೊಲಂಬೋ ದಲ್ಲಿ ಕರ್ಫ್ಯೂ ಜಾರಿ ಮಾಡಿಲಾಗಿದೆ. ದಾಳಿಯಲ್ಲಿ ಸುಮಾರು 450 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ಆತ್ಮಾಹುತಿ ಬಾಂಬ್ ದಾಳಿಗೆ 3 ಪೊಲೀಸ್ ಆಫೀಸರ್ಸ್ ಬಲಿಯಾಗಿದ್ದಾರೆ‌.

ಚರ್ಚ್ ಬಾಂಬ್ ಸ್ಪೋಟಕ್ಕೆ ಸಂಬಂಧಿಸಿದಂತೆ ಶ್ರೀಲಂಕಾ ದಾಳಿ ಖಂಡನೀಯ ಎಂದಿದ್ದಾರೆ ಬ್ರಿಟನ್ ಪ್ರಧಾನಿ ತೆರೆಸಾ. ಹಾಗೇ ಮೇ ಶ್ರೀಲಂಕಾ ದಾಳಿ ತುಂಬಾ ಕ್ರೂರವಾದದು ಎಂದಿರುವ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಅವರು, ಜಾಗತಿಕ ಉಗ್ರವಾದದ ವಿರುದ್ಧ ಹೋರಾಡುವಂತೆ ಕರೆ ನೀಡಿದ್ದಾರೆ.

ಚರ್ಚ್ ಒಂದರಲ್ಲೇ 50 ಜನರು ಬಲಿಯಾಗಿದ್ದು,
ಕೊಲಂಬಿಯಾ ನ್ಯಾಷನಲ್ ಆಸ್ಪತ್ರೆ ಯಲ್ಲಿ 300 ಕ್ಕೂ ಹೆಚ್ಚು ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.‌ ಈ ಘಟನೆ ಬಗ್ಗೆ ಭಾರತೀಯ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು,ಕೊಲಂಬೋದಲ್ಲಿರುವ ಭಾರತೀಯ ಹೈ ಕಮಿಷನರ್ ಜೊತೆ ನಾವು ನಿರಂತರ ಸಂಪರ್ಕ ದಲ್ಲಿದ್ದೇವೆ ಸಧ್ಯದ ಸ್ಥಿತಿ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುತ್ತಿರುವುದಾಗಿ ಹೇಳಿದ್ದಾರೆ.

7 ಶಂಕಿತರ ಬಂಧನ

ಈ ಸರಣಿ ಸ್ಪೋಟಕ್ಕೆ ಸಂಬಂಧಿಸಿದ 7 ಶಂಕಿತರನ್ನು ಬಂಧಿಸಿದ್ದು, ಇವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಶ್ರೀಲಂಕಾ ರಕ್ಷಣಾ ಸಚಿವ ರುವನ್ ಮಾಹಿತಿ ನೀಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಪತನವಾಗೋದು ಮೋದಿ ಸರ್ಕಾರ : ಸಿದ್ದರಾಮಯ್ಯ ತಿರುಗೇಟು

Published

on

ಸುದ್ದಿದಿನ, ದಾವಣಗೆರೆ : ಮೇ 23ರ ಬಳಿಕ ಮೈತ್ರಿ ಸರಕಾರ ಪತನವಾಗುತ್ತದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ, ಪತನವಾಗೋದು ರಾಜ್ಯ ಸರಕಾರ ಅಲ್ಲ. ಮೋದಿ ನೇತೃತ್ವದ ಕೇಂದ್ರ ಸರಕಾರವಾಗಿದ್ದು, ಅದನ್ನೇ ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಸರಕಾರ ಪತನವಾಗುತ್ತದೆ ಎಂದು ಯಡಿಯೂರಪ್ಪ ಹೇಳುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಮಾಯಕೊಂಡ ಕ್ಷೇತ್ರ ವ್ಯಾಪ್ತಿಯ ತ್ಯಾವಣಿಗೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮೈತ್ರಿ ಅಭ್ಯರ್ಥಿ ಎಚ್‌.ಬಿ.ಮಂಜಪ್ಪ ಪರ ಪ್ರಚಾರ ನಡೆಸುವ ಸಂಬಂಧ ನಗರದ ಎಂಬಿಎ ಕಾಲೇಜ್‌ ಹೆಲಿಪ್ಯಾಡ್‌ನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗ ನಾನು ಸಿಎಂ ಆಗುತ್ತೇನೆ ಎಂದು ಹೇಳಿದ್ದೇ. ನಾನೇನೂ ರಾಜಕೀಯ ಸನ್ಯಾಸಿ ಅಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತದೆ. ಆಗ ನಾನು ಸಿಎಂ ಆಗಿ ಹತ್ತು ಕೆಜಿ ಅಕ್ಕಿ ಕೊಡುತ್ತೇನೆ ಎಂದಿದ್ದೇ. ಇದರಲ್ಲಿ ತಪ್ಪೇನಿದೆ?. ನಾನೇನು ನಾಳೆನೇ ಸಿಎಂ ಆಗುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ಮುಂದೆ ಸಿಎಂ ಆಗುತ್ತೇನೆ ಎಂದಿದ್ದೇ ಅಷ್ಟೇ ಎಂದು ಸ್ಪಷ್ಟನೆ ನೀಡಿದರು.

ಎರಡು ದಿನ ಮಾತ್ರ ಯಡಿಯೂರಪ್ಪ ಸಿಎಂ ಆಗಿ ಅಧಿಕಾರದಿಂದ ಕೆಳಗಿಳಿದ್ರು. ಅಧಿಕಾರ ಹಿಡಿಯಲು ಏನೆಲ್ಲಾ ಮಾಡಿದ್ರೂ ವಿಫಲವಾಗಿದ್ದಾರೆ. ಮಾನ- ಮರ್ಯಾದೆ ಇಲ್ಲದೆ ಮಾತಾಡ್ತಿರೋ ಅವರಿಗೆ ಅಧಿಕಾರ ಹುಚ್ಚಿದೆ. ಇನ್ನು ಸಿಟಿ ರವಿ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ, ಅವರು ಸಿಟಿ ರವಿ ಅಲ್ಲ, ಲೂಟಿ ರವಿ. ಅವನ ಬಗ್ಗೆ ನಾನು ಮಾತಾಡಲ್ಲ. ಇನ್ನು ಕೆ. ಎಸ್‌. ಈಶ್ವರಪ್ಪ, ಶೋಭಾ ಕರಂದ್ಲಾಜೆ ಬುದ್ಧಿ ಇಲ್ಲದೇ ಮಾತಾಡ್ತಾರೆ. ಇವರ ಹೇಳಿಕೆಗೂ ನಾನು ಸ್ಪಂದಿಸಲ್ಲ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending