Connect with us

ದಿನದ ಸುದ್ದಿ

ಮತ್ತೆಲ್ಲಿಯ ನ್ಯಾಯ !? ಯಾರಿಗೆ ನ್ಯಾಯ ?

Published

on

  • ಕಾರ್ತಿಕ್ ಬೆಳಗೋಡು ಅವರ ಫೇಸ್‌ಬುಕ್‌ ವಾಲ್ನಿಂದ

ಪ್ರಿಯಾಂಕ ರೆಡ್ಡಿ ಎಂಬ ಹುಡುಗಿಯ ದಾರುಣ ಕೊಲೆಯ ಸುದ್ದಿ ನೋಡಿದಾಗ ‘ಅಯ್ಯೋ ಛೇ…’ ಎನಿಸುವ ಬದಲು ತೀವ್ರ ಆತಂಕವಾಗುತ್ತಿದೆ. ಈ ದೇಶ ಈ (ಅ)ನಾಗರಿಕ ಜಗತ್ತು ಎಲ್ಲಿಗೆ ಹೋಗಿ ಮುಟ್ಟುತ್ತದೋ ಎಂಬ ಆತಂಕ ಕಾಡುತ್ತಿದೆ. ಇತ್ತೀಚೆಗೆ ಗೆಳೆಯರೊಬ್ಬರು ಕುಟುಂಬ ಸಮೇತ ಜರ್ಮನಿಗೆ ವಲಸೆ ಹೋದರು. ಅವರು ಅಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದರು. ಅವರಿಗಲ್ಲಿನ ನಾಗರಿಕತ್ವ ದೊರೆತಿದೆ.

ಅವರೊಂದಿಗೆ ಮಾತನಾಡಿದಾಗ ‘ ಅಯ್ಯೋ ದೇಶಭಕ್ತಿ , ಊರಿನ ಮೇಲಿನ ಪ್ರೀತಿ ಎಂದೆಲ್ಲಾ ಯೋಚಿಸಿದರೆ ಈ ಕೆಟ್ಟ ವ್ಯವಸ್ಥೆಯೊಳಗೆ ಕೊಳೆತುಹೋಗ್ಬೇಕಾಗುತ್ತೆ ಈ ಭ್ರಷ್ಟ ವ್ಯವಸ್ಥೆ , ಈ ಶಿಕ್ಷಣ, ಆರೋಗ್ಯ ಸಂಸ್ಥೆಗಳ ಸುಲಿಗೆ ಅದರೊಂದಿಗೆ ಮೃಗಗಳಂತೆ ವರ್ತಿಸುವ ಈ ಜನ. ನನಗಿರೋದು ಇಬ್ಬರು ಹೆಣ್ಣು ಮಕ್ಕಳು ಅವರನ್ನು ಈ ಕೆಟ್ಟ ಸಮಾಜದೊಳಗೆ ಬೆಳೆಸಲು ಆತಂಕವಾಗುತ್ತದೆ. ಆ ದೇಶ ಎಲ್ಲಾ ದೃಷ್ಟಿಯಿಂದಲೂ ನಮಗೆ ಸುರಕ್ಷಿತ ಎನಿಸುತ್ತಿದೆ.’ ಎಂದಿದ್ದರು. ದೇಶಭಕ್ತಿ ಬದನೇಕಾಯಿ ಎಂದೆಲ್ಲಾ ಭ್ರಮೆಯಿಂದ ಬಡಬಡಿಸದೆ ಒಂಚೂರು ವಾಸ್ತವದ ನೆಲೆಯಲ್ಲಿ ನಿಂತು ಯೋಚಿಸಿದರೆ ಅವರ ಮಾತಿನಲ್ಲೂ ಹುರುಳಿದೆ ಎನ್ನಿಸುತ್ತದೆ.

ನಮ್ಮ ಜನಗಳ್ಯಾಕೆ ದಿನದಿನಕ್ಕೂ ಇಷ್ಟೊಂದು ಕ್ರೂರಿಗಳಾಗುತ್ತಿದ್ದಾರೆ. ? ನಮ್ಮನ್ನು ಅಡರಿಕೊಂಡಿರುವ ಪುಗಸಟ್ಟೆ ತಂತ್ರಜ್ಞಾನ ಕಾರಣವಾ ? ತಂತ್ರಜ್ಞಾನದ ಬಳಸುವ ಕುರಿತಾಗಿರುವ ಅಜ್ಞಾನ ಕಾರಣವಾ ? ಅಥವಾ ಮಾನಸಿಕತೆಗೆ ತಗುಲಿರುವ ಕೆಟ್ಟ ವ್ಯಾಧಿ ಕಾರಣವಾ ? ಇವುಗಳಿಂದ ಹೊರಬರುವ ದಾರಿ ಯಾವುದು ? ಏನೊಂದೂ ಅರ್ಥವಾಗುತ್ತಿಲ್ಲ. ಎಲ್ಲಾ ಮಸುಕು ಮಸುಕಾಗಿದೆ.
ನಿರ್ಭಯಾ ಅತ್ಯಾಚಾರಿಯನ್ನು ಅಪ್ರಾಪ್ತ ಎನ್ನುವ ಕಾರಣಕ್ಕೆ ಕೋರ್ಟು ಬಿಟ್ಟು ಕಳಿಸಿತು. ಈ ಹುಡುಗಿಯನ್ನು ದಾರುಣವಾಗಿ ಕೊಂದವರೂ ನಾಳೆ ಸಾಕ್ಷಿ ಕೊರತೆಯಿಂದ ಹೊರ ಬರಬಹುದು. ಅಂಥವರನ್ನು ಹೊರತರಲೂ ನ್ಯಾಯವಾದಿಗಳು ಸಿದ್ದವಾಗುತ್ತಾರೆ ಕೇಳಿದರೆ ‘ವೃತ್ತಿಧರ್ಮ’ ಎನ್ನುತ್ತಾರೆ.! ಧರ್ಮ…!!!?? ವೃತ್ತಿಯಷ್ಟೇ…

ಮತ್ತೆಲ್ಲಿಯ ನ್ಯಾಯ !? ಯಾರಿಗೆ ನ್ಯಾಯ ?

ಜಡ್ಡುಗಟ್ಟಿ ನಿಂತಿರುವ ನಮ್ಮ ದೇಶದ ವ್ಯವಸ್ಥೆ ಯಾಕೋ ತುಂಬಾ ಅಸಹನೀಯವೆನಿಸುತ್ತಿದೆ. ನಮ್ಮಿಂದ ಈ ಜಡವನ್ನು ಕರಗಿಸಲು ಸಾಧ್ಯವಾ… ? RIP , I AM WITH ಎಂದು ಕಂಡಕಂಡಲ್ಲಿ ಬರೆದುಕೊಳ್ಳುವ ಹೊರತಾಗಿ…

ತುಂಬಾ ನೋವಾಗುತ್ತಿದೆ…

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಕೋಗಲೂರು ಗ್ರಾಮದಲ್ಲಿ ಕೊರೋನ ಆತಂಕ : ಹೊರ ರಾಜ್ಯದಿಂದ ಬಂದವರನ್ನು ಕ್ವಾರಂಟೈನ್ ಮಾಡಲಾಗುವುದು : ತಹಶಿಲ್ದಾರ್ ಪುಟ್ಟರಾಜಗೌಡ

Published

on

ಸುದ್ದಿದಿನ,ಚನ್ನಗಿರಿ/ಕೋಗಲೂರು : ಗ್ರಾಮದಲ್ಲಿ‌ 65 ವರ್ಷ ವಯಸ್ಸಿನ ಮಹಿಳೆಯೊಬ್ಬರಿಗೆ ಕೊರೋನ ಸೋಂಕು‌ ದೃಡ ಪಟ್ಟಿದ್ದು. ಸೋಂಕಿತ ವ್ಯಕ್ತಿಯು ಮದುವೆ ಸಮಾರಂಭಗಳಲ್ಲಿ ಹಾಗೂ ಗ್ರಾಮದಲ್ಲಿ‌ ಸಾಕಷ್ಟು ಓಡಾಡಿರುವುದನ್ನು ಕಂಡ ಗ್ರಾಮಸ್ಥರು ಅತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಬೆಂಗಳೂರು ಹಾಗೂ ವಿವಿದ ಕಡೆಗೆ ಕೆಲಸಕ್ಕಾಗಿ ಹರಸಿ ಹೋಗಿದ್ದವರೆಲ್ಲರೂ ಸಹ ತಂತಮ್ಮ ಗ್ರಾಮಗಳಿಗೆ ವಾಪಸ್ಸಾಗುತ್ತಿರುವುದನ್ನು ನೋಡಿದರೆ ಮತ್ತಷ್ಟು ಗ್ರಾಮಸ್ಥರಲ್ಲಿ ಭಯದ ವಾತವರಣ ಸೃಷ್ಠಿಯಾಗುತ್ತಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತ ಪಡಿಸಿದ್ದಾರೆ.

ಹೊರಗಡೆಯಿಂದ ಬರುತ್ತಿರುವವರ ಮೇಲೆ ಗ್ರಾಪಂ ಆಡಳಿತ ಹಾಗೂ ಅಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಈ ವಿಚಾರದ ಮುನ್ನೆಚ್ಚರಿಕೆಯಿಂದ ಗ್ರಾಮದಲ್ಲಿ‌ ಗ್ರಾಮಪಂಚಾಯಿತಿ ಆಡಳಿತವು ದ್ವನಿವರ್ಧಕ ಮೂಲಕ‌  ಜನತೆರಿಗೆ ಮಾಸ್ಕ್ ಧರಸಿ ಅಂತರ ಕಾಯ್ದುಕೊಳ್ಳಲು ಸಂದೇಶ ಸಾರುತಿದ್ದರೂ ಸಹ ಕೆಲವರು ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರುಗಳಿಗೆ ಮಾಹಿತಿಯನ್ನು ನೀಡದೆ ಗುಪ್ತವಾಗಿ ಮನೆಗಳನ್ನು ಸೇರಿಕೊಳ್ಳುತ್ತಿದ್ದಾರೆ ಎಂದು ಗ್ರಾಮದ ಜನತೆ ಹೇಳಿದ್ದಾರೆ. ‌

ಕೋಗಲೂರು ಗ್ರಾಮದಲ್ಲಿ ಸೀಲ್ ಡೌನ್

ಕೊರೋನ ಬಗ್ಗೆ ಭಯ ಬೇಡ ಎಚ್ಚರಿಕೆಯಿಂದ ಇರಿ : ತಹಸೀಲ್ದಾರ್ ಪುಟ್ಟರಾಜಗೌಡ

ಇತ್ತೀಚೆಗೆ ಹೊರ ರಾಜ್ಯಗಳಿಂದ ಹಳ್ಳಿಗಳಿಗೆ ಬರುವವರ ಸಂಖ್ಯೆ ಹೆಚ್ಚಾಗುತಿದ್ದು ತಾಲೂಕು ಆಡಳಿತವು ಸೂಕ್ಷ್ಮವಾಗಿ ಗಮನಿಸುತಿದೆ, ನಮ್ಮ ಕಂದಾಯ ಅಧಿಕಾರಿಗಳು ಅರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆ ಪರಸ್ಪರ ಸಂಪರ್ಕಹೊಂದಿದ್ದು ಹೊರಗಡೆಯಿಂದ ಬರುವವರ ಮೇಲೆ ನಿಗಾ ಇಟ್ಟಿರುತ್ತಾರೆ. ಗುಪ್ತವಾಗಿ ಮನೆ ಸೇರಿ ಕೊಂಡಿರುವವರನ್ನು ಪತ್ತೆ ಮಾಡಿ ಅವರ ಗಂಟಲು ಮಾದರಿ ಪರೀಕ್ಷೆಗೆ ಒಳಪಡಿಸಿ ಕ್ವಾರಂಟೈನ್ ಮಾಡಲಾಗುವುದೆಂದು ದೂರವಾಣಿ ಮುಖಾಂತರ ತಹಸೀಲ್ದಾರ್ ಪುಟ್ಟರಾಜಗೌಡ ರವರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ವೆಬಿನಾರ್ ಮೂಲಕ ಇಂದು ಡಾ. ಎನ್.ಕೆ‌ ಪದ್ಮನಾಭ ಅವರ ‘ಸುದ್ದಿ ಸಂವಿಧಾನ’ ಕೃತಿ ಬಿಡುಗಡೆ : ಲಿಂಕ್ ಬಳಸಿ ನೀವೂ ಭಾಗವಹಿಸಿ

Published

on

ಸುದ್ದಿದಿನ ಡೆಸ್ಕ್ : ಉಜಿರೆಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಎಸ್ ಡಿ ಎಂ ಸ್ನಾತಕೋತ್ತರ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಎನ್.ಕೆ. ಪದ್ಮನಾಭ ಅವರ ನೂತನ ಕೃತಿ ‘ಸುದ್ದಿ ಸಂವಿಧಾನ’ ವೆಬಿನಾರ್ ಮೂಲಕ ಜುಲೈ 13 ಇಂದು (ಸೋಮವಾರ) ಬೆಳಿಗ್ಗೆ 11ಗಂಟೆಗೆ ಲೋಕಾರ್ಪಣೆಗೊಳ್ಳಲಿದೆ.

ಕೃತಿಯನ್ನು ಎಸ್ ಡಿ ಎಂ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರೊ.ಭಾಸ್ಕರ ಹೆಗಡೆ ಬಿಡುಗಡೆಗೊಳಿಸಲಿದ್ದಾರೆ. ‘ದಿ ಹಿಂದೂ’ ಪತ್ರಿಕೆಯ ನಿಕಟಪೂರ್ವ ಪ್ರಧಾನ ವರದಿಗಾರ, ‘ತುಂಗಭದ್ರಾ’ ಇಂಗ್ಲಿಷ್ ನ್ಯೂಸ್ ಪೋರ್ಟಲ್ ಸಂಪಾದಕ ವೀರೇಂದ್ರ ಪಿ.ಎಂ ಕೃತಿಯ ಬಗ್ಗೆ ಮಾತನಾಡಲಿದ್ದಾರೆ.

ಕೆಳಗಿನ ಲಿಂಕ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ. ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

meet.google.com/iye-wtdv-fnr

Dial-in: (US) +1 219-401-0040 PIN: 227 877 321#

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಭಾನುವಾರ ರಾಜ್ಯದಲ್ಲಿ 2627 ಕೊರೋನಾ ಕೇಸ್ ಪತ್ತೆ ; ಜಿಲ್ಲಾವಾರು ಪ್ರಕರಣಗಳ ವರದಿ

Published

on

ಸುದ್ದಿದಿನ, ಬೆಂಗಳೂರು: ಭಾನುವಾರ ರಾಜ್ಯದಲ್ಲಿ 2627 ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ಜಿಲ್ಲಾವಾರು ವರದಿ ಈ ಕೆಳಗಿನಂತಿವೆ.

ಜಿಲ್ಲಾವಾರು ಪ್ರಕರಣಗಳು

ಬೆಂಗಳೂರು ನಗರ-1525, ದಕ್ಷಿಣ ಕನ್ನಡ-196, ಧಾರವಾಡ-129, ಯಾದಗಿರಿ-120, ಕಲಬುರಗಿ-79, ಬಳ್ಳಾರಿ-63, ಬೀದರ್-62, ರಾಯಚೂರು-48, ಉಡುಪಿ-43, ಮೈಸೂರು-43, ಶಿವಮೊಗ್ಗ-42, ಚಿಕ್ಕಬಳ್ಳಾಪುರ-39, ಹಾಸನ-31, ಕೊಪ್ಪಳ-27, ತುಮಕೂರು-26, ಕೋಲಾರ-24, ದಾವಣಗೆರೆ-20, ಬೆಂಗಳೂರು ಗ್ರಾಮಾಂತರ-19, ಕೊಡಗು-15, ಗದಗ-14, ಚಾಮರಾಜನಗರ-13, ಉತ್ತರ ಕನ್ನಡ-12, ಹಾವೇರಿ-12, ಚಿಕ್ಕಮಗಳೂರು-10, ಬಾಗಲಕೋಟೆ-7, ಮಂಡ್ಯ-4, ರಾಮನಗರ-3, ಬೆಳಗಾವಿ-2, ವಿಜಯಪುರ-0 ಮತ್ತು ಚಿತ್ರದುರ್ಗ-0.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending