Connect with us

ದಿನದ ಸುದ್ದಿ

ಕೊನೆಗೂ ಫಲಿಸಿತು ಉತ್ತರ ಕರ್ನಾಟಕದ ಹೋರಾಟ

Published

on

ಹಾದಾಯಿ ನೀರಿಗಾಗಿ ಹಲವು ವರ್ಷಗಳಿಂದ ಸತತವಾಗಿ ಹೋರಾಟ ನಡೆದಿದೆ. ಸುದೀರ್ಘ ಹೋರಾಟಕ್ಕೆ ಇದೀಗ ದೀಪಾವಳಿಯ ಬಂಪರ ಆಪರ್ ಎಂಬತೆ ಕೇಂದ್ರ ಸರ್ಕಾರಯು ಕುಡಿಯುವ ನೀರಿಗಾಗಿ ಕಳಸಾ, ಬಂಡೂರಿ, ಹಳತಾರಾ ಹಳ್ಳಗಳ ನೀರನ್ನ ಮಲಪ್ರಭಾ ನದಿಗೆ ತಿರಿಗಿಸುವ ಯೋಜನೆಗೆ ಷರತ್ತುಬದ್ಧ ಒಪ್ಪಿಗೆ ಸೂಚಿಸುವ ಮೂಲಕ ರೈತರಿಗೆ ಸಿಹಿ ಸುದ್ದಿ ನೀಡಿದೆ. ಈ ಯೋಜನೆಯ ಆದೇಶವನ್ನು ಕೇಂದ್ರ ಪರಿಸರ ಸಚಿವಾಲಯ ಹೋರಡಿಸಿದ್ದು, ಉತ್ತರ ಕರ್ನಾಟಕ ಭಾಗದ ಜನರ ಮುಖದಲ್ಲಿ ಸಂತಸವನ್ನು ಮೂಡಿಸಿದೆ.

ಪಶ್ಚಿಮ ವಾಹಿನಿಯ ನೀರನ್ನು ಪೂರ್ವಕ್ಕೆ ತಿರಿಗಿಸುವ ಯೋಜನೆ ರಾಜ್ಯದಲ್ಲಿಯೇ ಮೊಟ್ಟಮೊದಲದ್ದಾಗಿದೆ. ಈ ಯೋಜನೆಗೆ ಇದ್ದ ಪ್ರಮುಖ ಅಡೆತಡೆಗಳು ನಿವಾರಣೆಯಾದಂತಾಗಿವೆ. ಅರ್ಧಕ್ಕೆ ಸ್ಥಗಿತಗೊಂಡಿರುವ ನಾಲಾ ತಿರುವು ಯೋಜನೆಯ ಕಾಮಗಾರಿಯನ್ನು ಪೂರ್ಣಗೊಳಿಸಲು ಪರಿಸರ ಇಲಾಖೆಯ ನಿರಾಕ್ಷೇಪಣಾ ಪತ್ರ ಇಲ್ಲದಿರುವುದು ಸಮಸ್ಯೆಯಾಗುತ್ತಿತ್ತು. ಇದೀಗ ಷರತ್ತುಬದ್ಧವಾಗಿ ಅಅನುಮತಿ ದೊರೆತಿರುವುದುದರಿಂದ ಬಾಕಿ ಇರುವ ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಳಿಸಲು ಅನುಕುಲವಾಗಲಿದೆ.

ಕಳಸಾ ಬಂಡುರಿ ಯೋಜನೆಯಿಂದ ರೈತರಿಗೆ ತಲುಪ ಬೇಕಾದ ನೀರು ಸಲೀಸಾಗಿ ಸಿಗಲಿದೆ.
ಹುಬ್ಬಳ್ಳಿ-ಧಾರವಾಡ ಅವಳಿ ನಗರ, ಕುಂದಗೋಳ ಹಾಗೂ 40 ಹಳ್ಳಿಗಳ ಕುಡಿಯುವ ನೀರಿಗಾಗಿ ರಾಜ್ಯದಲ್ಲೇ ಕಳಸಾ, ಬಂಡೂರಿ ಮತ್ತಿತರ ಹಳ್ಳಿಗಳ ನೀರನ್ನು ತಿರುಗಿಸಿ ಮಹದಾಯಿ ನದಿಪಾತ್ರಕ್ಕೆ ಸೇರಿಸುವುದೇ ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ನಾಲ್ಕು ಜಿಲ್ಲೆಗಳು ಫಲಾನುಭವಿ ಪ್ರದೇಶ ಹೊಂದಿದ್ದು, 499.13 ಹೆಕ್ಟೇರ್ ಅರಣ್ಯ ಭೂಮಿ ಬಳಕೆ ಆಗಲಿದೆ. ಕುಡಿಯುವ ನೀರಿಗಾಗಿ 3.90 ಟಿಎಂಸಿ ನೀರು ಅಗತ್ಯವಿದೆ. ಇನ್ನು ಕೆಲ ತಾಂತ್ರಿಕ ತೊಡಕುಗಳು ಇದ್ದು, ನ್ಯಾಯಮಂಡಳಿಯ ತೀರ್ಪನ್ನು ಆಧರಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಬೇಕಿದೆ.

ಅಲ್ಲದೆ, ಈ ಯೋಜನೆಗೆ ಗೋವಾ ತಕರಾರು ತೆಗೆದಿದ್ದು, ಮಾತುಕತೆ ಮೂಲಕ ಅದನ್ನು ಬಗೆಹರಿಸಿಕೊಳ್ಳುವುದು ತುರ್ತು ಅಗತ್ಯ. ಭೀಮಗಡ ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ಯೋಜನೆ ನಡೆಯಬೇಕಿರುವುದರಿಂದ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಅನುಮತಿ ಅಗತ್ಯ. ಆದರೆ, ಇದು ಕುಡಿಯುವ ನೀರಿನ ಯೋಜನೆ ಆಗಿರುವುದರಿಂದ ಅನುಮತಿ ಪಡೆಯುವುದು ಕಷ್ಟವೇನಲ್ಲ.
ಈಗಾಗಲೇ ಈ ಯೋಜನೆಗಾಗಿ ರೈತರು ಹಲವು ದಶಕಗಳ ಕಾಲ ಕಾಯ್ದಿದ್ದಾರೆ. ಪ್ರಭುತ್ವ ನಿರ್ಲಕ್ಷ÷್ಯ ವಹಿಸಿದಾಗ ಉಗ್ರ ಹಾಗೂ ದೀರ್ಘ ಹೋರಾಟ ಮಾಡಿ ಎಚ್ಚರಿಸಿದ್ದಾರೆ. ಹಾಗಾಗಿ, ಇನ್ಮುಂದೆಯಾದರೂ ಕಾಮಗಾರಿಗಳು ವಿಳಂಬವಾಗದಂತೆ ನೋಡಿಕೊಳ್ಳಬೇಕಿದೆ.

ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರ ಅಧಿಕಾರದಲ್ಲಿ ಇರುವುದರಿಂದ ಪ್ರಕ್ರಿಯೆಗಳನ್ನು ಚುರುಕುಗೊಳಿಸಲು, ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಸಾಧ್ಯವಿದೆ. ಇಲ್ಲಿನ ನೀರನ್ನು ವಿದ್ಯುತ್ ಉತ್ಪಾದನೆಗೋ, ಮತ್ತಾವುದೋ ಉದ್ದೇಶಕ್ಕೆ ಕೇಳುತ್ತಿಲ್ಲ. ಕುಡಿಯುವ ನೀರಿನ ಅಗತ್ಯವನ್ನು ಪರಿಗಣಿಸಿ ಯೋಜನೆಗಳಿಗೆ ಅನುಮತಿ ನೀಡಬೇಕು ಎಂದು ಈ ಹಿಂದೆ ಸುಪ್ರೀಂ ಕೋರ್ಟ್ ಕೂಡ ಹೇಳಿತ್ತು. ಪ್ರಸಕ್ತ, ಮೊದಲ ಹಂತದ ಜಯ ಸಿಕ್ಕಿರುವುದಂತೂ ನಿಜ. ಈಗ ಉಳಿದ ಕಾಮಗಾರಿಗಳು ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಂಡು, ಉತ್ತರ ಕರ್ನಾಟಕ ಜನರ ಬವಣೆ ನಿವಾರಣೆ ಆಗಬೇಕು. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಲಿ ಎಂಬುದು ನಮ್ಮೆಲ್ಲರ ಆಶಯವಾಗಿದೆ.

ಕಾಂಚನಾ ‌ಬಸವರಾಜ ಪೂಜಾರಿ
ಪತ್ರಿಕೋದ್ಯಮ ವಿದ್ಯಾರ್ಥಿನಿ
ಮಹಿಳಾ ವಿವಿ
ವಿಜಾಪುರ

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ರಾಜ್ಯದಲ್ಲಿ ಒಟ್ಟು 2781 ಕೋವಿಡ್ ಪ್ರಕರಣಗಳು

Published

on

ಸುದ್ದಿದಿನ, ಬೆಂಗಳೂರು : ಕರ್ನಾಟಕದಲ್ಲಿ ಕೊರೋನ ತಡೆಗಾಗಿ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕೊರೋನಾ ಮುಕ್ತ ರಾಜ್ಯವಾಗಲು ಶ್ರಮಿಸುತ್ತಿದೆ. ಹಾಗೆಯೇ ಕೋವಿಡ್ ವಾರಿಯರ್ಸ್ ಕೂಡಾ ಹಗಲಿರುಳು ಶ್ರಮವಹಿಸಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕೋವಿಡ್19: 29 ಮೇ 2020 ರ ಸಂಜೆಯವರೆಗಿನ ಮಾಹಿತಿ

  • ಒಟ್ಟು ಪ್ರಕರಣಗಳು: 2781
  • ಮೃತಪಟ್ಟವರು: 48
  • ಗುಣಮುಖರಾದವರು: 894
  • ಹೊಸ ಪ್ರಕರಣಗಳು: 248

ಇತರೆ ಮಾಹಿತಿ

ಜಿಲ್ಲಾವಾರು ಸೋಂಕಿತರು, ನಿಗದಿತ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿರುವವರು, ಟೆಲಿಮೆಡಿಸಿನ್ ಸೌಲಭ್ಯದ ಮಾಹಿತಿ, ತಬ್ಲಿಘಿ ಜಮಾತ್ ನಲ್ಲಿ ಭಾಗವಹಿಸಿದವರಿಗೆ ಸೂಚನೆಗಳು, ಕೊರೊನ ನಿಗಾ ಅಪ್ಲಿಕೇಶನ್ ಹಾಗೂ ಸಹಾಯವಾಣಿ ವಿವರಗಳಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಸೂಳೆಕೆರೆ | ಮುಂಗಾರು ಅವಧಿ ಮುಗಿಯುವವರೆಗೆ ಮೀನು ಹಿಡಿಯುವುದು ನಿಷೇಧ

Published

on

ಸುದ್ದಿದಿನ,ದಾವಣಗೆರೆ : ಚನ್ನಗಿರಿ ತಾಲ್ಲೂಕು ಶಾಂತಿಸಾಗರ ಕೆರೆಯಲ್ಲಿ ಮುಂಗಾರು ಮಳೆಗಾಲದ ಅವಧಿಯಲ್ಲಿ ಒಳನಾಡು ಜಲಸಂಪನ್ಮೂಲಗಳ ಮೀನು ಪಾಶುವಾರು ಹಕ್ಕಿನ ವಿಲೇವಾರಿ ಕಾರ್ಯನೀತಿ 2014ರ ಆದೇಶದಂತೆ ಮುಂಗಾರು ಮಳೆಗಾಲದ ಅವಧಿ ಜೂನ್ 1 ರಿಂದ ಜುಲೈ 30 ರವರೆಗೆ ಮೀನು ವಂಶಾಭಿವೃದ್ದಿ ಚಟುವಟಿಕೆ ನಡೆಸುವುದರಿಂದ, ಶಾಂತಿಸಾಗರ ಕೆರೆಯಲ್ಲಿ ಮೀನುಹಿಡಿಯುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಈ ನಿಯಮ ಉಲ್ಲಂಘಿಸಿ ಮೀನು ಹಿಡುವಳಿ ಮಾಡಿದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು (ಶ್ರೇಣಿ-2) ಮೀನುಗಾರಿಕೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ವಾಷಿಂಗ್ಟನ್ ನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ 105 ಪ್ರಯಾಣಿಕರು

Published

on

ಸುದ್ದಿದಿನ,ಬೆಂಗಳೂರು: ಕೋವಿಡ್-19 ಲಾಕ್ ಡೌನ್ ಪರಿಸ್ಥಿತಿಯಲ್ಲಿ ಅಮೇರಿಕಾದ(ಯು.ಎಸ್.ಎ.) ವಾಷಿಂಗ್ಟನ್‌ ನಿಂದ ಇಂದು (ಮೇ 30) ಬೆಳಗಿನ ಜಾವ 3.15 ಗಂಟೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ, ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಇಪ್ಪತ್ಮೂರನೇ ಏರ್ ಇಂಡಿಯಾ ವಿಮಾನದಲ್ಲಿ 105 ಮಂದಿ ಅನಿವಾಸಿ ಭಾರತೀಯರು ಆಗಮಿಸಿದ್ದಾರೆ.

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಒಟ್ಟು 105 ಮಂದಿ ಪ್ರಯಾಣಿಕರಲ್ಲಿ ಎರಡು ಮಕ್ಕಳು ಸೇರಿದಂತೆ 54 ಪುರುಷರು ಮತ್ತು 49 ಮಹಿಳೆಯರು ಇದ್ದಾರೆ.

ನಂತರ ಏರ್ ಇಂಡಿಯಾ ವಿಮಾನವು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗುಜರಾತ್ ನ ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಿತು.

ತಜ್ಞ ವೈದ್ಯರು ಹಾಗೂ ಸಿಬ್ಬಂದಿಗಳು 105 ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಿದ್ದು, ಯಾವುದೇ ಪ್ರಯಾಣಿಕರಲ್ಲಿ ಕೊರೋನಾ ವೈರಾಣು ಸೋಂಕಿನ ಲಕ್ಷಣಗಳು ಕಂಡುಬಂದಿರುವುದಿಲ್ಲ.

105 ಪ್ರಯಾಣಿಕರನ್ನು 14 ದಿನಗಳ ಕ್ವಾರಂಟೈನ್ ಗಾಗಿ ಹೋಟೆಲ್ ಗಳಿಗೆ ಕಳುಹಿಸಿಕೊಡಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending