Connect with us

ದಿನದ ಸುದ್ದಿ

ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಬಾಲಕಿ ನೆನೆದು ಬೇಸರದಿಂದ ಪೊಲೀಸ್ ಪೇದೆ ಬರೆದ ಪತ್ರ..!

Published

on

ಸುದ್ದಿದಿನ,ಕೊಡಗು : ಸಿದ್ದಾಪುರ ಬಳಿಯ ತೋಟವೊಂದರಲ್ಲಿ ಬಡ ಕುಟುಂಬದ ಹೆಣ್ಣು ಮಗಳನ್ನು ಬಂಗಾಳಿ ಕಾರ್ಮಿಕರು ಅತ್ಯಾಚಾರ ಮಾಡಿ ಕೊಲೆಗೈದಿದ್ದ ಆರೋಪಿಗಳನ್ನು ಕೊಡಗು ಪೊಲೀಸರು ಬಂಧಿಸಿದ್ದಾರೆ. ಇದಾದ ಬಳಿಕ ಪೊಲೀಸರೊಬ್ಬರು ತಮ್ಮ ಮನದ ವೇದನೆಯನ್ನು ಬರೆದಿದ್ದಾರೆ.

ಪೊಲೀಸ್ ಪೇದೆ ಪತ್ರ

ಇದು ಬಹಳ ಆತಂಕಕಾರಿ ಹಾಗು ನೋವಿನ ‌ವಿಚಾರ, ಆ ಹೆಣ್ಣು ಮಗಳು ಶಾಲೆಯಿಂದ ಮನೆಗೆ ತಲುಪುವ ಮದ್ಯೆ ಆ ನೀಚ ಕೈಗಳಲ್ಲಿ ಬಂಧಿಯಾದಳು. ಸಂಜೆ ಮನೆಗೆ ಬರುತ್ತಾಳೆ ಎಂಬ ನಂಬಿಕೆಯಿಂದ ಕಾದು ಕುಳಿತಿದ್ದ ತಂದೆ ತಾಯಿಗೆ ಇಂದು ಮಗಳ ಶವ ಕಂಡಾಗ ಆದ ದುಃಖ ಯೋಚಿಸುವುದು ಅಸಾಧ್ಯ. ನಮ್ಮ ಮನೆಯ ಹುಡುಗಿ ನಮ್ಮ ಹುಡುಗಿ ಬದುಕಿನ ಕನಸು ಹೊತ್ತು ಬದುಕಬೇಕಾದ ಜೀವ ನಶಿಸಿ ಹೋಯಿತು.

ಅಭಿಮಾನ ಇದೆ ಪೊಲೀಸ್ ಎನ್ನಲು, ಯಾವುದೇ ಮಾಹಿತಿಯಿಲ್ಲದೆ ಸೂಕ್ಷ್ಮವಾಗಿ ಕರ್ತವ್ಯ ನಿರ್ವಹಿಸಿ ಅಪರಾಧಿಗಳನ್ನು‌ ಪತ್ತೆ ಹಚ್ಚಲಾಗಿದೆ. ಇಲಾಖೆಯ ಕಡೆಯಿಂದ ಹುಡುಗಿಗೆ ನ್ಯಾಯ ಕೊಟ್ಟಂಗಾಯಿತು. ಹೆಮ್ಮೆಯಿದೆ ನಾನು ಪೊಲೀಸ್ ಎನ್ನಲು.

ಕೂಲಿ ಕೆಲಸಕ್ಕಾಗಿ ಬಂದ ವರ್ಗ ಈ ರೀತಿಯ ಹೇಯ ಕೃತ್ಯ ನಡೆಸುವಷ್ಟು ಮಟ್ಟಕ್ಕೆ ಬೆಳೆದಿದ್ದಾರೆ ಅಂದರೆ ನಿಜಕ್ಕೂ ಆತಂಕಕಾರಿ, ಕೊಲೆ, ಅತ್ಯಾಚಾರ, ಕಳ್ಳತನ ಎಲ್ಲಾತರಹದ ಕೃತ್ಯದಲ್ಲೂ ಭಾಗಿಯಾಗಿದ್ದಾರೆ. ಇದಕ್ಕೊಂದು‌ ಕ್ರಮ ಆಗಲೇ ಬೇಕು.

ಆ ಹೆಣ್ಣುಮಗಳ ಆತ್ಮಕ್ಕೆ ಶಾಂತಿ ಸಿಗಲೀ, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲೀ, ಕುಟುಂಬಕ್ಕೆ ದುಃಖ ಬರಿಸುವ ಶಕ್ತಿ‌ನೀಡಲಿ. ದೇವರೆ ನಮ್ಮ ಮಕ್ಕಳನ್ನು ದುಷ್ಟರ ಕೈಗಳಿಂದ ಕಾಪಾಡು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ

ದಾವಣಗೆರೆ | ಡಿ. 12 ರಂದು ಜಿಲ್ಲಾ ಮಟ್ಟದ ‘ಯುವಜನೋತ್ಸವ’ ಆಯ್ಕೆ ಸ್ಪರ್ಧೆ

Published

on

ಸುದ್ದಿದಿನ,ದಾವಣಗೆರೆ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ 2019-20ನೇ ಸಾಲಿನ ಜಿಲ್ಲಾ ಮಟ್ಟದ ಯುವಜನೋತ್ಸವ ಆಯ್ಕೆ ಸ್ಪರ್ಧೆಗಳನ್ನು ನಗರದ ಚಿಂದೋಡಿ ಲೀಲಾ ಕಲಾ ಕ್ಷೇತ್ರ ದಾವಣಗೆರೆ ಇಲ್ಲಿ ಡಿ.12 ರಂದು ಬೆಳಿಗ್ಗೆ 10.00 ಗಂಟೆಯಿಂದ ಏರ್ಪಡಿಸಲಾಗಿದೆ.

ಕಾರ್ಯಕ್ರಮದಲ್ಲಿ ಗುಂಪು ಸ್ಪರ್ಧೆಗಳ ವಿಭಾಗದಲ್ಲಿ ಜಾನಪದ ನೃತ್ಯ, ಜಾನಪದ ಗೀತೆ, ಇಂಗ್ಲೀಷ್ ಅಥವಾ ಹಿಂದಿಯಲ್ಲಿ ಏಕಾಂಕ ನಾಟಕ, ವೈಯುಕ್ತಿಕ ಸ್ಪರ್ಧೆಗಳ ವಿಭಾಗದಲ್ಲಿ ಕರ್ನಾಟಕ ಸಂಗೀತ, ಹಿಂದೂಸ್ಥಾನಿ ಸಂಗೀತ, ಭರತ ನಾಟ್ಯ, ಒಡಿಸ್ಸಿ, ಮಣಿಪುರಿ, ಕುಚುಪುಡಿ, ಕಥಕ್, ಸಿತಾರ, ಕೊಳಲು, ತಬಲಾ, ವೀಣಾ, ಮೃದಂಗ, ಹಾರ್ಮೋನಿಯಂ, ಗಿಟಾರ್, ಇಂಗ್ಲೀಷ್ ಅಥವಾ ಹಿಂದಿಯಲ್ಲಿ ಆಶುಭಾಷಣ ಸ್ಪರ್ಧೆಗಳನ್ನು ನಡೆಸಲಾಗುವುದು. 15 ರಿಂದ 29 ವರ್ಷ ವಯೋಮಿತಿಯೊಳಗಿನ ಎಲ್ಲಾ ಯುವಜನರು ಭಾಗವಹಿಸಬಹುದು.

ಸ್ಪರ್ಧೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಎಸ್.ಎಸ್.ಎಲ್.ಸಿ. ಅಂಕಪಟ್ಟಿ ಅಥವಾ ಜನನ ಪ್ರಮಾಣ ಪತ್ರಗಳ ಜೆರಾಕ್ಸ್ ಪ್ರತಿಗಳನ್ನು ತರತಕ್ಕದ್ದು. ಇಲ್ಲದೇ ಇದ್ದ ಪಕ್ಷದಲ್ಲಿ ಸ್ಪರ್ಧಿಸಲು ಅವಕಾಶ ಇರುವುದಿಲ್ಲ. ಸ್ಪರ್ಧೆಗೆ ಯಾವುದೇ ಪ್ರವೇಶ ಶುಲ್ಕವಿಲ್ಲ. ಆಯ್ಕೆಯಾದವರು ರಾಜ್ಯಮಟ್ಟದ ಯುವಜನೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಭಾಗವಹಿಸುವ ಸ್ಪರ್ಧಾಳುಗಳು ಡಿ.12 ರಂದು ಬೆಳಿಗ್ಗೆ 9:30 ಕ್ಕೆ ಚಿಂದೋಡಿ ಲೀಲಾ ಕಲಾ ಕ್ಷೇತ್ರ ಇಲ್ಲಿ ಸಂಘಟಕರಲ್ಲಿ ವರದಿ ಮಾಡಿಕೊಳ್ಳತಕ್ಕದ್ದು.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ

ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಡಿ.ಆರ್.ಎಂ. ವಿಜ್ಞಾನ ಕಾಲೇಜು ಎದುರು, ಜಿಲ್ಲಾ ಕ್ರೀಡಾಂಗಣ, ದಾವಣಗೆರೆ ,ದೂರವಾಣಿ ಸಂಖ್ಯೆ: 08192-237480 ಗೆ ಸಂಪರ್ಕಿಸಬಹುದಾಗಿದೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ‘ತೃತೀಯ ಲಿಂಗಿ’ ನರ್ಸ್​ ಆಗಿ ನೇಮಕ

Published

on

ಸುದ್ದಿದಿನ,ತಮಿಳುನಾಡು : ಭಾರತ ದೇಶದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ತೃತೀಯ ಲಿಂಗಿಯೊಬ್ಬರು ನರ್ಸ್​ ಆಗಿ ನೇಮಕಗೊಂಡಿದ್ದಾರೆ. ತಮಿಳುನಾಡು ಮೂಲದ ಅಂಬು ರೂಬಿ ಎಂಬ ತೃತೀಯ ಲಿಂಗಿ ಸರ್ಕಾರಿ ನರ್ಸ್​ ಆಗಿ ನೇಮಕವಾಗಿದ್ದಾರೆ. ಅಲ್ದೇ, ನರ್ಸ್​ ಆಗಿರೋ ಬಗ್ಗೆ ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಮತ್ತು ಆರೋಗ್ಯ ಸಚಿವ ಸಿ. ವಿಜಯಭಾಸ್ಕರ್​ರಿಂದ ನೇಮಕಾತಿ ಪತ್ರ ಪಡೆದಿದ್ದಾರೆ.

ತಮಿಳುನಾಡಿನ ಆರೋಗ್ಯ ಮತ್ತು ಕುಟುಂಬ ಇಲಾಖೆಯ ಒಟ್ಟು 5,224 ನರ್ಸ್​ಗಳನ್ನು ನೂತನವಾಗಿ ನೇಮಕ ಮಾಡಿಕೊಂಡಿದ್ದು ಅದ್ರಲ್ಲಿ ರೂಬಿ ಕೂಡ ಒಬ್ಬರು.

ಇದೇ ವೇಳೆ ರೂಬಿ ತಾನು ನಡೆದು ಬಂದ ಹಾದಿ ಬಗ್ಗೆ ತಿಳಿಸಿದರು. ತಾನು ಮಧ್ಯಮ ಕುಟುಂಬದಿಂದ ಬಂದಿದ್ದು, ಹಲವು ಕಷ್ಟಗಳ ಮಧ್ಯೆ ನನ್ನ ಶಿಕ್ಷಣ ಪೂರೈಸಿದ್ದೇನೆ. ಚಿಕ್ಕವಳಿದ್ದಾಗೆ ನನ್ನ ತಂದೆ ತೀರಿಕೊಂಡರು . ತಾಯಿಯೇ ದುಡಿದ ಹಣದಲ್ಲೇ ನನ್ನ ಕುಟುಂಬ ಹಾಗೂ ನನ್ನ ಓದಿಗೆ ಶ್ರಮಿಸಿದರು.ಸಮಾಜದಲ್ಲಿ ತೃತೀಯ ಲಿಂಗಿಗಳ ಬಗ್ಗೆ ಅರಿಯಬೇಕಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕೆ.ಎಸ್. ಆರ್. ಟಿ.ಸಿ. ಬಸ್ ನಲ್ಲಿ ಹೆರಿಗೆ : ಮಾನವೀಯತೆ ಮೆರೆದ ಮಸ್ತಾನಬಿ ಮತ್ತು ಸಂಗಡಿಗರು

Published

on

ಸುದ್ದಿದಿನ,ಶಹಾಪುರ : ಪಟ್ಟಣಕ್ಕೆ ತೆರಳುವ ಸಂದರ್ಭದಲ್ಲಿ ಮಾರ್ಗ ಮದ್ಯ ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿ ಶಶಿಕಲಾ ಅವರಿಗೆ, ಅದೇ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಹೆರಿಗೆ ಮಾಡಿಸಿರುವ ಘಟನೆ ನಡೆದಿದೆ.

ವಡಗೆರಾ ತಾಲೂಕಿನ ಬೆಂಡೆಬೆಂಬಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಮಸ್ತಾನಬಿ. ಶಬಿನಾ .ಅರುಣಾ ಕುಮಾರಿ. ಪ್ರತಿಭಾ .ಲೋಚನಾ .ಇವರು ತಮ್ಮ ಇಲಾಖೆಯ ಕೆಲಸದ ನಿಮಿತ್ಯ ಯಾದಗಿರಿಯಿಂದ ಶಹಾಪುರಕ್ಕೆ ಬಸ್ ನಲ್ಲಿ ಪ್ರಯಾಣಿಸುವಾಗ ಅದೇ ಬಸ್ ನಲ್ಲಿ ಟೋಕಾಪುರ ಗ್ರಾಮದ ಗರ್ಭಿಣಿ ಮಹಿಳೆ ಶಶಿಕಲಾ ಗಂಡ ಹೊನ್ನಪ್ಪ ಯಾದಗಿರಿ ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸುವುದು ಬೇಡಾ ಎಂದು ಶಹಾಪುರ ಖಾಸಗಿ ಆಸ್ಪತ್ರೆಗೆ ಬರುತ್ತಿದ್ದರು ಎನ್ನಲಾಗಿದೆ.ಇವರಿಗೆ ಬಸ್ ನಲ್ಲಿದ್ದ ಪ್ರಯಾಣಿಕರು ಸಹಕರಿಸಿದ್ದು, ಬಸ್ ಅನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿ ಹೆರಿಗೆ ಮಾಡಿಸಲು ಅನುವು ಮಾಡಿಕೊಟ್ಟಿದ್ದಾರೆ.

ಹೆಣ್ಣು ಮಗು ಜನನ

ಶಶಿಕಲಾ ಗಂಡ ಹೊನ್ನಪ್ಪ
ಮಹಿಳೆಗೆ ಹೆಣ್ಣು ಮಗು ಜನನವಾಗಿದ್ದು ತಾಯಿ ಮಗು ಆರೋಗ್ಯವಾಗಿದ್ದಾರೆ ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಹಾಪುರ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ .ಇವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending