Connect with us

ದಿನದ ಸುದ್ದಿ

ಜೆಎನ್‌ಯು ಸಮಸ್ಯೆ ಎಡ- ಬಲಗಳ ಪ್ರಶ್ನೆಯೇ..?

Published

on

  • ಜಿ.ಎನ್. ನಾಗರಾಜ್

ಜೆಎನ್‌ಯು ಸಮಸ್ಯೆ ಎಡ- ಬಲಗಳ ಪ್ರಶ್ನೆಯೇ..? ಹಾಗೆಂದು ಬಿಜೆಪಿಯ ಮತ್ತು ಬಿಜೆಪಿ ಪರ ಮಾಧ್ಯಮಗಳು ಬೊಬ್ಬಿರಿಯುತ್ತಿವೆ.ಎಬಿವಿಪಿಯೂ ಸೇರಿ ಎಲ್ಲ ವಿದ್ಯಾರ್ಥಿಗಳ ಒಗ್ಗಟ್ಟಿನ ಹೋರಾಟವಾಗಿದ್ದದ್ದು ಇದ್ದಕ್ಕಿದ್ದಂತೆ ಎಡ- ಬಲವಾಗಿ ತಿರುಗಿದ್ದು ಹೇಗೆ, ತಿರುಗಿಸಿದ್ದು ಯಾರು ?

ಜಗಕ್ಕೆಲ್ಲಾ ತಿಳಿದಂತೆ ಇತ್ತೀಚಿನ ಜೆ‌ಎನ್‌ಯುವನ್ನು ಭಾರತದ 40 ಕೇಂದ್ರ ವಿವಿಗಳಲ್ಲಿ ಉಳಿದೆಲ್ಲ ಕೇಂದ್ರ ವಿವಿಗಳಿಗಿಂತ ಅತಿ ಹೆಚ್ಚಿನ ಫೀ ನೀಡಬೇಕಾದ ವಿವಿಯಾಗಿ ಕೇಂದ್ರ ಸರ್ಕಾರ ಮಾಡಹೊರಟಿತು. ಈ ಫೀ ಬೇರೆಲ್ಲ ವಿವಿಗಳಲ್ಲಿ ವರ್ಷಕ್ಕೆ 14,000 ರೂ ನಿಂದ 35,000ರೂ ವರೆಗಿದೆ. ಆದರೆ ಜೆಎನ್‌ಯು ಫೀ ಏರಿಕೆ ಅದನ್ನು 27, 000- 32,000 ದಿಂದ 55,000-65,000 ಕ್ಕೆ ಏರಿಸ ಹೊರಟಿತು.

ಬಿಹಾರ,ಅಸ್ಸಾಂ,ಜಾರ್ಕ‌ಂಡ್ ಮೊದಲಾದ ಅತ್ಯಂತ ಹಿಂದುಳಿದ ಪ್ರದೇಶದ ಬಡ ವಿದ್ಯಾರ್ಥಿಗಳು ಶೇ.40 ರಷ್ಟು ಇರುವ ಈ ವಿವಿಯಲ್ಲಿ ಬಡವರು ವಿದ್ಯಾಭ್ಯಾಸವನ್ನು ಬಿಡಬೇಕಾದ ಪರಿಸ್ಥಿತಿಯಲ್ಲಿ ಅಲ್ಲಿಯ ವಿದ್ಯಾರ್ಥಿ ಸಂಘ ಎಲ್ಲ ವಿದ್ಯಾರ್ಥಿಗಳ ಜೊತೆ ವಿವರವಾಗಿ ಪ್ರತಿ ಹಾಸ್ಟೆಲ್‌ಗಳಲ್ಲಿ ಚರ್ಚಿಸಿ ಎಲ್ಲ ಬಣ್ಣದ ವಿದ್ಯಾರ್ಥಿ ಸಂಘಗಳು ಸೇರಿ ಈ ಫೀ ಏರಿಕೆ ವಿರುದ್ಧ ಹೋರಾಟ ಮಾಡಲು ನಿರ್ಧರಿಸಿತು.

ಎಬಿವಿಪಿ ಕೂಡಾ ಇದನ್ನು ವಿರೋಧಿಸಲಾಗದೆ ಒಟ್ಟಿಗೆ ಸೇರಿತು. ವಿಸಿಗೆ ಮನವಿ, ಚರ್ಚಿಸಲು ವಿನಂತಿ , ವಿವಿಯೊಳಗೆ ಧರಣಿ, ತರಗತಿ ಬಹಿಷ್ಕಾರ ಇತ್ಯಾದಿ ಹಲವು ಹಂತಗಳನ್ನು ದಾಟಿ ವಿವಿಯ ಹೊರಗೆ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಸಚಿವಾಲಯದ ಮುಂದೆ ಹಲವು ಹೋರಾಟ ನಡೆಯಿತು. ಈ ಹಂತದಲ್ಲಿ ಎಬಿವಿಪಿ ಈ ಹೋರಾಟವನ್ನು ವಿಭಜಿಸಲು ಪ್ರಯತ್ನಿಸಿ ವಿಫಲವಾಗಿ ಹೊರನಡೆಯಿತು.

ಆದರೆ ವಿದ್ಯಾರ್ಥಿಗಳ ತೀವ್ರ
ಹೋರಾಟದಿಂದಾಗಿ ಕೆಲ ರಿಯಾಯಿತಿಯನ್ನು ಸರ್ಕಾರ ಘೋಷಿಸಿತು. ಆದರೆ ಅದರಲ್ಲಿ ಹಲವು if’s and but’s ಸೇರಿಸಿ ವಿದ್ಯಾರ್ಥಿಗಳ ಅದರ ನಿಜ ಪ್ರಯೋಜನ ದಕ್ಕದಂತೆ ಆಜ್ಞೆ ಹೊರಡಿಸಿತು. ಅಸಗ ಮತ್ತೆ ವಿದ್ಯಾರ್ಥಿಗಳೆಲ್ಲರ ಸಭೆ ಸೇರಿ ಚರ್ಚಿಸಿ ಫೀ ಏರಿಕೆ ಮತ್ತು ಇತರ ನಿಯಮಗಳನ್ನು ಹಿಂತೆಗೆದುಕೊಳ್ಳುವವರಿಗೂ ಹೋರಾಟ ಮುಂದುವರೆಸಬೇಕೆಂದು ತೀರ್ಮಾನಿಸಲಾಯಿತು. ಕಡಿಮೆ ವಿದ್ಯಾರ್ಥಿಗಳ ಬೆಂಬಲವುಳ್ಳ ಎಬಿವಿಪಿ ಹೊರತು ಪಡಿಸಿ ಉಳಿದೆಲ್ಲರೂ ಹೋರಾಟ ಮುಂದುವರೆಸಿದ್ದಾರೆ.

ಇಂತಹ ಹೋರಾಟ ಫೀ ಹೆಚ್ಚಿಸಿದ ಐಐಟಿ ಮತ್ತಿತರ ಸಂಸ್ಥೆಗಳಲ್ಲೂ ವಿದ್ಯಾರ್ಥಿಗಳು ಹೋರಾಟ ನಡೆಸಿದ್ದಾರೆ. ಹಿಂದುಳಿದ ಪ್ರದೇಶಗಳ ಬಡ ವಿದ್ಯಾರ್ಥಿಗಳ ಶಿಕ್ಷಣ ವಂಚನೆಗೆ ಕಾರಣವಾಗುವ ಫೀ ಏರಿಕೆಯನ್ನು ಹಿಂತೆಗೆದುಕೊಳ್ಳಬೇಕು ಎನ್ನುವ ಎಲ್ಲ ವಿದ್ಯಾರ್ಥಿಗಳ ಹೋರಾಟವನ್ನು ಎಡ ಬಲ ರಾಜಕೀಯ ಎಂಬ ರೂಪ ಕೊಟ್ಟು ವಿದ್ಯಾರ್ಥಿಗಳಿಗೆ ಮಸಿ ಬಳಿಯುವ ಕೆಲಸವನ್ನು ಈಗ ಎಬಿವಿಪಿ, ಮಾಧ್ಯಮ ಮತ್ತು ಪೋಲೀಸರ ಮೂಲಕ ಆರೆಸ್ಸೆಸ್ ಮತ್ತು ಬಿಜೆಪಿ ಮಾಡುತ್ತಿದೆ.

ಈ ಹೋರಾಟ ಕೇವಲ ಜೆ‌ಎನ್‌ಯು ವಿದ್ಯಾರ್ಥಿಗಳದೆಂದು ,ಎಡಪಂಥೀಯವೆಂದು ಸರ್ಕಾರ ವಿರೂಪಗೊಳಿಸುತ್ತಿರುವುದರ ಉದ್ದೇಶವೆಂದರೆ ಮುಂದೆ ಭಾರತದ ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ , ಕೇಂದ್ರ ವಿವಿಗಳಲ್ಲಿನ ಫೀ ಏರಿಕೆಗೆ ಇದು ಟೆಸ್ಟಿಂಗ್ ಡೋಸ್ ಅಷ್ಟೇ. ಇದು ಇಂದು ದೇಶದೆಲ್ಲ ವಿವಿ ವಿದ್ಯಾರ್ಥಿಗಳ ಪರವಾಗಿ ಜೆ‌ಎನ್‌ಯು ವಿದ್ಯಾರ್ಥಿಗಳ ಹೋರಾಟವಷ್ಟೇ.
ಆದ್ದರಿಂದಲೇ ಎಲ್ಲ ವಿವಿಗಳಲ್ಲಿಯೂ ಪಂಥಗಳನ್ನು ಮೀರಿ ಜನ ಬೆಂಬಲವನ್ನು ಪಡೆದುಕೊಂಡಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ದಾವಣಗೆರೆ | ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಓರ್ವ ಶಿಕ್ಷಕಿ ಹುದ್ದೆಗೆ ಸಂದರ್ಶನ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ,ದಾವಣಗೆರೆ: 2020-21 ನೇ ಸಾಲಿನಲ್ಲಿ ದಾವಣಗೆರೆ ತಾಲ್ಲೂಕಿನ ದೊಡ್ಡಬಾತಿಯ ಕರ್ನಾಟಕ ಪಬ್ಲಿಕ್ ಶಾಲೆಯ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಯುಕೆಜಿ ತರಗತಿಯನ್ನು ಪ್ರಾರಂಭಿಸಲು ಸರ್ಕಾರದಿಂದ ಅನುಮೋದನೆ ದೊರೆತಿದ್ದು, ಪೂರ್ವ ಪ್ರಾಥಮಿಕ ಶಾಲೆಗೆ ಓರ್ವ ಅರ್ಹ ಶಿಕ್ಷಕಿಯನ್ನು ತಾತ್ಕಾಲಿಕವಾಗಿ ನೇಮಕಾತಿ ಮಾಡಲು ಜುಲೈ 14 ರಂದು ಬೆಳಿಗ್ಗೆ 11 ಗಂಟೆಗೆ ಸಂದರ್ಶನ ಏರ್ಪಡಿಸಲಾಗಿದೆ.

ಓರ್ವ ಶಿಕ್ಷಕರ ಹುದ್ದೆ ಖಾಲಿ ಇದ್ದು ಮಹಿಳೆಯರಿಗೆ ಮಾತ್ರ ಅವಕಾಶವಿರುತ್ತದೆ. ವಯೋಮಿತಿ 45 ವರ್ಷ ಹಾಗೂ ಮಾಸಿಕ ಸಂಭಾವನೆ ರೂ. 7500 ಇರುತ್ತದೆ. ಅರ್ಜಿ ಸಲ್ಲಿಸುವವರು ಪಿಯುಸಿಯಲ್ಲಿ ಶೇ.50ಬರಷ್ಟು ಅಂಕ ಪಡೆದಿರಬೇಕು ಹಾಗೂ ಡಿಪ್ಲೋಮಾ ಇನ್ ನರ್ಸರಿ ಟೀಚರ್ ಎಜುಕೇಷನ್ ಅಥವಾ ಡಿಪ್ಲೋಮಾ ಇನ್ ಅರ್ಲಿ ಚೈಲ್ಡ್ ಹುಡ್ ಎಜುಕೇಷನ್, ಪ್ರೀ ಸ್ಕೂಲ್ ಎಜುಕೇಷನ್, ಬಿಇಡಿ- ನರ್ಸರಿ ಇವುಗಳಲ್ಲಿ ಯಾವುದಾದರೂ ಒಂದು ಅರ್ಹತೆ ಹೊಂದಿರಬೇಕು.

ಅರ್ಜಿ ಸಲ್ಲಿಸುವವರು ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಪಿಯುಸಿ ಅಂಕಪಟ್ಟಿ, ಡಿಪ್ಲೋಮಾ ಅಥವಾ ಬಿಇಡಿ ನರ್ಸರಿ ತರಬೇತಿ ಪ್ರಮಾಣಪತ್ರ, ವೃತ್ತಿ ಅನುಭವ ಹೊಂದಿರುವ ಪ್ರಮಾಣಪತ್ರ, ನಿವಾಸಿ ದೃಢೀಕರಣ ಪತ್ರ ಹಾಗೂ ಆಧಾರ್ ಕಾರ್ಡ್ ಪ್ರತಿಗಳನ್ನು ಜುಲೈ 11 ರೊಳಗೆ ಮುಖ್ಯ ಶಿಕ್ಷಕರು, ಪ್ರಾಥಮಿಕ ಶಾಲಾ ವಿಭಾಗ, ಕರ್ನಾಟಕ ಪಬ್ಲಿಕ್ ಶಾಲೆ, ದೊಡ್ಡಬಾತಿ ಇವರಿಗೆ ಈ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬೇಕು.

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಹಾಗೂ ಸಂದರ್ಶನಕ್ಕೆ ಹಾಜರಾದಾಗ ಕೋವಿಡ್-19 ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು.

ಶಾಲೆಯ 5 ಸದಸ್ಯರ ಆಯ್ಕೆ ಸಮಿತಿಯ ಮೂಲಕ ಆಯ್ಕೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೊ ಸಂ: 9341460386 ಸಂರ್ಪಕಿಸಬಹುದಾಗಿದೆ ಎಂದು ಕರ್ನಾಟಕ ಪಬ್ಲಿಕ್ ಶಾಲೆ ಪ್ರಾಂಶುಪಾಲರಾದ ಉಷಾ ಕೆ.ಎಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ನಿವೃತ್ತ ಪೇಶ್ ಇಮಾಮ್ ಹಾಗೂ ಮೌಜಿನ್‍ರಿಗೆ ಪಿಂಚಣಿ ಯೋಜನೆ

Published

on

ಸುದ್ದಿದಿನ,ದಾವಣಗೆರೆ : ಜಿಲ್ಲೆಯಲ್ಲಿರುವ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಲ್ಲಿ ನೋಂದಣಿಯಾದ ಮಸೀದಿಗಳಲ್ಲಿ ಈಗಾಗಲೇ ಪೇಶ್ ಇಮಾಮ್ ಹಾಗೂ ಮೌಜಿನ್ ಆಗಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವವರು ಹಾಗೂ 65 ವರ್ಷ ವಯೋಮಾನದ ವೃದ್ದ ಪೇಶ್ ಇಮಾಮ್‍ರಿಗೆ ತಿಂಗಳಿಗೆ ರೂ.2000/- ಹಾಗೂ ಮೌಜಿನ್ ರವರಿಗೆ ತಿಂಗಳಿಗೆ ರೂ.1.500/- ಪಿಂಚಣಿ ಪಾವತಿಸುವ ಯೋಜನೆಯನ್ನು ಕರ್ನಾಟಕ ರಾಜ್ಯ ವಕ್ಪ್ ಮಂಡಳಿ ಜಾರಿಗೊಳಿಸಿದೆ.

ಮಸೀದಿಗಳಿಂದ ನಿವೃತ್ತಿ ಹೊಂದಿದ ವೃದ್ದ ಪೇಶ್ ಇಮಾಮ್ ಹಾಗೂ ಮೌಜಿನ್‍ಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

ಪಿಂಚಣಿ ಪಡೆಯಲು ಬೇಕಾಗುವ ಅಗತ್ಯ ದಾಖಲೆಗಳು

ಅರ್ಜಿ ನಮೂನೆ, ಮಸೀದಿಯ ಅಧ್ಯಕ್ಷರು ನೀಡುವ ಸೇವಾ ಪ್ರಮಾಣಪತ್ರ, 3 ಭಾವಚಿತ್ರ, ಆಧಾರ್ ಕಾರ್ಡ್, ಗುರುತಿನ ಚೀಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ(ಆದಾಯ ರೂ.1.20 ಲಕ್ಷಕ್ಕಿಂತ ಕಡಿಮೆ ಇರುವವರು ಅರ್ಹರು), ರಾಷ್ಟ್ರೀಕೃತ ಬ್ಯಾಂಕ್ ಖಾತೆಯ ಪಾಸ್ ಬುಕ್ ಪ್ರತಿಯನ್ನು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜನಾಬ್ ಮೊಹಮ್ಮದ್ ಸಿರಾಜ್, ಅಧ್ಯಕ್ಷರು, ಜಿಲ್ಲಾ ವಕ್ಪ್ ಸಲಹಾ ಸಮಿತಿ, ದಾವಣಗೆರೆ ಇವರನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಮೀನು ಕೃಷಿ ಕೊಳ ನಿರ್ಮಾಣಕ್ಕೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ :ಮೀನುಗಾರಿಕೆ ಇಲಾಖೆಯಿಂದ ಜಿಲ್ಲೆಯ ಎಲ್ಲಾ ವೃತ್ತಿಪರ ಮೀನುಗಾರರಿಗೆ ಜಿ.ಪಂ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳ ಜಮೀನಿನಲ್ಲಿ ಕನಿಷ್ಠ 2000 ಚ.ಮೀ ಮೀನು ಕೃಷಿ ಕೈಗೊಳ್ಳಲು ಕೊಳ ನಿರ್ಮಾಣಕ್ಕೆ ಸಹಾಯಧನ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ.

ಮೀನು ಮಾರಾಟ ಮತ್ತು ಮತ್ಸ್ಯವಾಹಿನಿಗೆ ಸಹಾಯ ಮತ್ತು ರಾಜ್ಯವಲಯ ಯೋಜನೆಗಳಾದ ಮೀನುಗಾರಿಕೆ ಸಲಕರಣೆ ಕಿಟ್ ಗೆ ಸಹಾಯ, ಫೈಬರ್ ಗ್ಲಾಸ್ ಹರಿಗೋಲು ವಿತರಣೆ, ಮೀನು ಉತ್ಪಾದನೆ ಹೆಚ್ಚಿಸಲು ಮತ್ಸ್ಯಕೃಷಿ ಆಶಾಕಿರಣ ಯೋಜನೆ ಮತ್ತು ಸೀಗಡಿ ಮತ್ತು ಹಿನ್ನೀರು ಮೀನುಕೃಷಿ ಪ್ರೋತ್ಸಾಹ ಕಾರ್ಯಕ್ರಮ ಮತ್ತು ಮೀನುಗಾರರ ಸಹಕಾರ ಸಂಘಗಳಿಗೆ ಹಾಗೂ ವೈಯಕ್ತಿಕ ಮೀನು ಕೃಷಿಕರಿಗೆ ಮೀನುಮರಿ ಖರೀದಿಗೆ ಸಹಾಯ ಯೋಜನೆಯಡಿ ಸಹಾಯ ಮುಂತಾದ ಯೋಜನೆಗಳ ಕುರಿತಾದ ಮಾಹಿತಿಯನ್ನು ಕಚೇರಿ ವೇಳೆಯಲ್ಲಿ ಆಯಾ ತಾಲ್ಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಗೆ ಸಂಪರ್ಕಿಸಿ ಪಡೆಯಬಹುದೆಂದು ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರಾದ ಗಣೇಶ್.ಆರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending