Connect with us
http://www.suddidina.com/category/political-news

ದಿನದ ಸುದ್ದಿ

‘ಮತ ಚಲಾಯಿಸಿ ಸೆಲ್ಫಿ ಕಳುಹಿಸಿ’ : ಬಹುಮಾನ ಗೆಲ್ಲಿ..!

Published

on

ಸುದ್ದಿದಿನ,ಧಾರವಾಡ: 18 ವರ್ಷ ಪೂರ್ಣಗೂಂಡ ಯವಕ, ಯುವತಿಯರು ಫಾರಂ ಇದೇ ಮೊದಲ ಬಾರಿಗೆ ಮತದಾನದ ಹಕ್ಕು ಪಡೆದಿರುವ ಅರ್ಹರು ಬರುವ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಉತ್ಸಾಹದಿಂದ ಪಾಲ್ಗೊಂಡು ಮತ ಚಲಾಯಿಸಿದ ನಂತರ, ನಿಮ್ಮ ಕೈ ಬೆರಳಿನ ಶಾಹಿ ಕಾಣುವ ಹಾಗೆ ಸೆಲ್ಫಿ ತೆಗೆದುಕೊಂಡು ಸ್ವೀಪ್ ಸಮಿತಿಗೆ ಕಳುಹಿಸಬೇಕು. ಜಿಲ್ಲಾಡಳಿತದಿಂದ ಅತ್ಯುತ್ತಮ ಸೆಲ್ಫಿಗೆ ಬಹುಮಾನ ನೀಡಲಾಗುವುದು ಎಂದು ಜಿಲ್ಲಾ ಪಂಚಾಯತ್ ಸಿಇಓ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರೂ ಆಗಿರುವ ಡಾ. ಬಿ.ಸಿ. ಸತೀಶ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಇವರ ಸಂಯುಕ್ತ ಆಶ್ರಯದಲ್ಲಿ ಸ್ವೀಪ್ ಸಮಿತಿ ಅಡಿಯಲ್ಲಿ ಆಯೋಜಿಸಿರುವ ಮತದಾರರ ಜಾಗೃತಿ ಸೈಕಲ್ ಜಾಥಾ ಕಾರ್ಯಕ್ರಮಕ್ಕೆ ಅಂಜುಮನ್ ಮಹಾವಿದ್ಯಾಲಯದ ಆವರಣದಲ್ಲಿ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿ, ಮಾತನಾಡಿದರು.

ಮತದಾನ ಪ್ರತಿಯೊಬ್ಬರ ಪವಿತ್ರ ಕರ್ತವ್ಯ ಮತ್ತು ಹಕ್ಕು ಆಗಿದೆ. ಪ್ರಜ್ಞಾವಂತ ಯುವಜನರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಭಾಗೀದಾರರಾಗಬೇಕು. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಮೂಲಕ ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೇ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಪ್ರೇರೇಪಿಸಬೇಕು ಎಂದರು.

ಅಂಜುಮನ್-ಎ-ಇಸ್ಲಾಂ ಸಂಸ್ಥೆಯ ಪದವಿ ವಿದ್ಯಾಲಯದ ಚುನಾವಣಾ ಸಾಕ್ಷರತಾ ಕ್ಲಬ್‌ನ ರಾಯಭಾರಿ ಸಚಿನ್ ಸಾಲಿಮಠ, ಸದಸ್ಶರಾದ ರಮೇಶ ವಾಲೀಕಾರ, ಬಸವರಾಜ ನಂದಪ್ಪನವರ, ಉಮರ್ ಜಕಾತಿ, ರುದ್ರಪ್ಪ ಮರೇವಾಡ ಅವರು ಸೈಕಲ್ ಜಾಥಾ ಮೂಲಕ ಅಮ್ಮಿನ ಭಾವಿ, ಹಾರೋಬೆಳವಡಿ, ಮನಸೂರ, ಮನಗುಂಡಿ, ಕ್ಯಾರಕೊಪ್ಪ, ನುಗ್ಗಿಕೇರಿ, ಕಣವಿ ಹೊನ್ನಾಪೂರ, ಹುಬ್ಬಳ್ಳಿ ಭೈರಿದೇವರ ಕೊಪ್ಪ, ಸತ್ತೂರಗಳಲ್ಲಿ ಸಂಚರಿಸಿ ಮಾರ್ಚ್ 16 ರಂದು ಸಾಯಂಕಾಲ 4 ಕ್ಕೆ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಆವರಣ ತಲುಪುವರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಜಾನನ ಮನ್ನಿಕೇರಿ, ಕೆ.ಎಮ್. ಶೇಖ್, ಜೆ.ಎನ್. ನಂದನ್, ಪ್ರೊ.ಎಂ.ಎಂ. ಜವಳಿ, ಪ್ರೊ. ಆರ್.ಬಿ. ಸೋನೆಖಾನ್, ಎಂ.ಎಸ್. ಕಿಲ್ಲೇದಾರ ಹಾಗೂ ಕಿಟೆಲ್, ಅಂಜುಮನ್ ಹಾಗೂ ಸರ್ಕಾರಿ ಮಹಿಳಾ ಕಾಲೇಜುಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ

ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ

Published

on

ಸುದ್ದಿದಿನ,ಮೈಸೂರು : ಮೈಸೂರು ವಿಶ್ವವಿದ್ಯಾನಿಲಯ ಪ್ರಸಾರಂಗದ ಪ್ರಕಟಣೆಗಳನ್ನು ಶೇ.50 ಮತ್ತು ವಿಶ್ವಕೋಶಗಳು ಹಾಗೂ ಇಂಗ್ಲಿಷ್-ಕನ್ನಡ ನಿಘಂಟುಗಳಿಗೆ ಶೇ.25 ರಂತೆ ರಿಯಾಯಿತಿ ದರದಲ್ಲಿ ಜೂನ್ 15 ರವರೆಗೆ ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗ ಮಾರಾಟ ಮಳಿಗೆ ಮತ್ತು ರಾಮಸ್ವಾಮಿ ವೃತ್ತದ ಮಳಿಗೆಗಳಲ್ಲಿ ಮಾರಾಟ ಮಾಡಲಾಗುವುದು ಎಂದು ಪ್ರಸಾರಾಂಗದ ನಿರ್ದೇಶಕರು ಪ್ರಕಟಣೆ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಹೆಚ್‍ಏಎಲ್ ಅಪ್ರೆಂಟಿಷಿಪ್‍ಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ಶಿವಮೊಗ್ಗ : ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಊಂಐ) ನಲ್ಲಿ ಎಸ್‍ಎಸ್‍ಎಲ್‍ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ 15-18 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಅಪ್ರೆಂಟಿಷಿಪ್‍ಗೆ ಅರ್ಜಿ ಆಹ್ವಾನಿಸಿದೆ.

ಇತರೆ ವರ್ಗ 60% ಹಾಗೂ ಎಸ್ಸಿ/ಎಸ್ಟಿ ಅಭ್ಯರ್ಥಿಗಳು 50% ಅಂಕದೊಂದಿಗೆ ತೇರ್ಗಡೆ ಹೊಂದಿರುವ ಆರ್ಥಿಕವಾಗಿ ಹಿಂದುಳಿದ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡನ್ನು ಹೊಂದಿರುವವರು ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯಲ್ಲಿ ಹೆಸರು ನೊಂದಾಯಿಸಿಕೊಂಡು ಜೂನ್-1 ರೊಳಗಾಗಿ ಅರ್ಜಿಸಲ್ಲಿಸಲು ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08182-255293/8861890866/9482023412 ಕ್ಕೆ ಸಂಪರ್ಕಿಸುವಂತೆ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮಹಿಳಾ ಮಿಲಟರಿ ಪಡೆಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ಶಿವಮೊಗ್ಗ,: ಭಾರತೀಯ ಸೇನೆಯಲ್ಲಿ ಮಹಿಳಾ ಮಿಲಿಟರಿ ಪೊಲೀಸ್ ಹುದ್ದೆಗಳನ್ನು ಭರ್ತಿಮಾಡಲು ಬರುವ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ರಾಜ್ಯದ ಬೆಳಗಾವಿ ನಗರದಲ್ಲಿ ನೇಮಕಾತಿ ರ್ಯಾಲಿಯನ್ನು ಆಯೋಜಿಸಲಾಗಿದ್ದು ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್‍ನಲ್ಲಿ ಹೆಸರು ನೊಂದಾಯಿಸಿಕೊಳ್ಳುವಂತೆ ತಿಳಿಸಲಾಗಿದೆ.

ಹೆಸರು ನೊಂದಾಯಿಸಲು ಜೂನ್- 8 ಕೊನೆಯ ದಿನಾಂಕವಾಗಿದ್ದು ನೊಂದಾಣಿ ಕಾರ್ಡ್ ಹಾಗೂ ರ್ಯಾಲಿಯ ನಿಖರ ದಿನಾಂಕವನ್ನು ಅಭ್ಯರ್ಥಿಗಲ ಇ-ಮೇಲ್‍ಗೆ ಕಳುಹಿಸಲಾಗುವುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 08182-255293, 8861890866, 9482023412 ಕ್ಕೆ ಸಂಪರ್ಕಿಸುವಂತೆ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending