Connect with us

ದಿನದ ಸುದ್ದಿ

ದಾವಣಗೆರೆ | 58 ಅಭ್ಯರ್ಥಿಗಳು ಕಣದಿಂದ ಹಿಂದಕ್ಕೆ ಪಾಲಿಕೆ ಚುನಾವಣೆ : ಅಂತಿಮ ಕಣದಲ್ಲಿ 208 ಅಭ್ಯರ್ಥಿಗಳು

Published

on

ಸುದ್ದಿದಿನ,ದಾವಣಗೆರೆ : ದಾವಣಗೆರೆ ಮಹಾನಗರಪಾಲಿಕೆಯ 45ವಾರ್ಡುಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಉಮೇದುವಾರಿಕೆ ಸಲ್ಲಿಸಿದ್ದವರ ಪೈಕಿ 208 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿ ಉಳಿದಿದ್ದು, 58ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಹಿಂತೆಗೆದುಕೊಂಡಿರುತ್ತಾರೆ.

ಪಾಲಿಕೆ ಚುನಾವಣೆಗೆ ಒಟ್ಟು 375 ನಾಮಪತ್ರಗಳು ಸ್ವೀಕೃತವಾಗಿದ್ದು, ಇದರಲ್ಲಿ 65ನಾಮಪತ್ರಗಳು ತಿರಸ್ಕೃತವಾಗಿವೆ. 266ಅಭ್ಯರ್ಥಿಗಳು ಕ್ರಮಬದ್ಧವಾಗಿ ನಾಮನಿರ್ದೇಶಿತರಾಗಿದ್ದರು.

ಉಮೇದುವಾರಿಕೆ ಹಿಂತೆಗದುಕೊಳ್ಳುವ ದಿನ ನ.4ರಂದು 208ಅಭ್ಯರ್ಥಿಗಳು ಅಂತಿಮ ಕಣದಲಲಿ ಉಳಿದಿದ್ದಾರೆ. ಕಾಂಗ್ರೆಸ್ ಪಕ್ಷದಿಂದ 44ಅಭ್ಯರ್ಥಿಗಳು, ಬಿಜೆಪಿಯಿಂದ 45 ಅಭ್ಯರ್ಥಿಗಳು, ಜೆಡಿಎಸ್‌ನಿಂದ 23 ಅಭ್ಯರ್ಥಿಗಳು, ಸಿಪಿಐ ನಿಂದ 06 ಅಭ್ಯರ್ಥಿಗಳು, ಬಿಎಸ್‌ಪಿ 03 ಅಭ್ಯರ್ಥಿ, ಕೆಪಿಜೆಪಿ ಯಿಂದ 02 ಅಭ್ಯರ್ಥಿ, ಸೋಷಿಯಲ್ ಡೆಮೊಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾದಿAದ 01 ಅಭ್ಯಥಿ, ಪಕ್ಷೇತರ 54 ಸೇರಿದಂತೆ ಒಟ್ಟು 208 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಉಳಿದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಚಿಗಟೇರಿ ಆಸ್ಪತ್ರೆಗೆ ಜಿಲ್ಲಾಧಿಕಾರಿಗಳ ಭೇಟಿ: ಆರ್‍ಟಿಪಿಸಿಆರ್ ಲ್ಯಾಬ್ ಸಿದ್ದತೆ ವೀಕ್ಷಣೆ

Published

on

ಸುದ್ದಿದಿನ,ದಾವಣಗೆರೆ: ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಇಂದು ಜಿಲ್ಲಾ ಚಿಗಟೇರಿ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿ ಆರ್‍ಟಿಪಿಸಿಆರ್ ಲ್ಯಾಬ್ ತಯಾರಿ ನಡೆಸುತ್ತಿರುವುದನ್ನು ಪರಿಶೀಲನೆ ನಡೆಸಿದರು. ಈ ವೇಳೆ ಜಿಲ್ಲಾಸ್ಪತ್ರೆ ಶಸ್ತ್ರಚಿಕಿತ್ಸಕ ಡಾ.ನಾಗರಾಜ್, ಆರ್‍ಎಂಓ ಡಾ.ವಿಶ್ವನಾಥ್, ಡಾ.ಸುಭಾಶ್ಚಂದ್ರ, ಇತರೆ ವೈದ್ಯರು ಇದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಆರೋಗ್ಯ ಇಲಾಖೆಯಲ್ಲಿನ ವಿವಿಧ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ಶಿವಮೊಗ್ಗ : ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು ವೈರಲ್ ರೀಸರ್ಚ್ ಡಯಾಗ್ನೋಸ್ಟಿಕ್ ಲ್ಯಾಬೋರೇಟರಿ(ವಿ.ಆರ್.ಡಿ.ಎಲ್.) ವಿಭಾಗದಲ್ಲಿ ಖಾಲಿ ಇರುವ ರೀಸರ್ಚ್ ಸೈಂಟಿಸ್ಟ್ ಮತ್ತು ಪ್ರಯೋಗಶಾಲಾ ತಂತ್ರಜ್ಞರ ತಲಾ ಒಂದು ಹುದ್ದೆಯನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಉದ್ದೇಶಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಅರ್ಹ ಅಭ್ಯರ್ಥಿಗಳು ನಿಗಧಿತ ಅರ್ಜಿ ನಮೂನೆ ಹಾಗೂ ಮಾಹಿತಿಗಾಗಿ ಸಿಮ್ಸ್‍ನ ಜಾಲತಾಣ : www.sims-shimoga.com ನಲ್ಲಿ ಪಡೆದು, ನಿರ್ದೇಶಕರು ಮತ್ತು ಡೀನ್, ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಇವರ ಹೆಸರಿಗೆ ಪಡೆದು ರೂ.500/-ಗಳ ಡಿ.ಡಿ. ಹಾಗೂ ಅಗತ್ಯ ದಾಖಲೆಗಳೊಂದಿಗೆ ಜೂನ್ 05ರೊಳಗಾಗಿ ನಿರ್ದೇಶಕರು ಮತ್ತು ಡೀನ್, ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಸಾಗರ ರಸ್ತೆ, ಶಿವಮೊಗ್ಗ ವಿಳಾಸಕ್ಕೆ ಸಲ್ಲಿಸಬೇಕು.

ಲಕೋಟೆಯ ಮೇಲೆ ಯಾವ ಹುದ್ದೆಗಾಗಿ ಎಂಬುದನ್ನು ಕಡ್ಡಾಯವಾಗಿ ನಮೂದಿಸುವಂತೆ ಸಿಮ್ಸ್ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ ಕೋವಿಡ್-19 | ಒಟ್ಟು 84 ಜನ ಬಿಡುಗಡೆ

Published

on

ಸುದ್ದಿದಿನ,ದಾವಣಗೆರೆ : ದಾವಣಗೆರೆಯಲ್ಲಿ ಇಂದು ಒಟ್ಟು 4 ಜನರಿಗೆ ಕೊರೊನಾ ಸೋಂಕು ಇರುವುದು ವರದಿಯಾಗಿದ್ದು ಇವರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಾಗೂ ಇಂದು ಗುಣಮುಖರಾದ ಐವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ.

ರೋಗಿ ಸಂಖ್ಯೆ 2557 65 ವರ್ಷದ ಮಹಿಳೆ ಹಾಗೂ ರೋಗಿ ಸಂಖ್ಯೆ 2558 68 ವರ್ಷದ ಮಹಿಳೆ ಇವರಿಬ್ಬರು ರೋಗಿ ಸಂಖ್ಯೆ 2208 ಇವರ ಸಂಪರ್ಕಿತರಾಗಿದ್ದಾರೆ. ರೋಗಿ ಸಂಖ್ಯೆ 2559 8 ವರ್ಷದ ಬಾಲಕ 992 ಇವರ ಸಂಪರ್ಕಿತರಾಗಿದ್ದಾರೆ. ರೋಗಿ ಸಂಖ್ಯೆ 2560 68 ವರ್ಷದ ಮಹಿಳೆ ಶೀತ ಜ್ವರದ(ಇನ್‍ಫ್ಲುಯೆಂಜಾ ಲೈಕ್ ಇಲ್‍ನೆಸ್) ಹಿನ್ನೆಲೆ ಹೊಂದಿದ ಪ್ರಕರಣವಾಗಿದೆ.

ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ ರೋಗಿ ಸಂಖ್ಯೆ 960, 1250, 1292, 1247 ಮತ್ತು 1378 ಈ ಐವರು ಇಂದು ಆಸ್ಪತ್ರೆಯಿಂದ ಬಿಡುಗಡೆಗೊಂಡರು. ಜಿಲ್ಲೆಯಲ್ಲಿ ಒಟ್ಟು 146 ಪ್ರಕರಣಗಳ ಪೈಕಿ 84 ಜನರು ಬಿಡುಗಡೆ ಹೊಂದಿದ್ದಾರೆ. 58 ಸಕ್ರಿಯ ಪ್ರಕರಣಗಳಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending