Connect with us

ದಿನದ ಸುದ್ದಿ

ಜೇವರ್ಗಿ | ದಲಿತರ ಮದುವೆ ಮೆರವಣಿಗೆಯಲ್ಲಿ ಸವರ್ಣೀಯರ ಕಲ್ಲು ತೂರಾಟ : ದಲಿತ ಸೇನೆ ಖಂಡನೆ

Published

on

ಗುಲ್ಬರ್ಗಾ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಮಳ್ಳಿ ನಾಗರಾಳ್ ಗ್ರಾಮದ ದಲಿತ ಯುವಕ ಮಲ್ಲು ಬಡಿಗೇರ್ ರವರ ಮದುವೆ ಮೆರವಣಿಗೆ ತಮ್ಮ ಏರಿಯಾ ದಲ್ಲಿ ಏಕೆ? ಎಂದು ಊರೊಳಗಿನ ಸವರ್ಣೀಯರು ಹಾಗೂ ಒಬಿಸಿ ಎಂದು ಕರೆಸಿ ಕೊಳ್ಳುವ ಎಲ್ಲರೂ, ದಲಿತರು ನಮ್ಮೇರಿಯಾದಲ್ಲಿ ಬರಲೇಬಾರದು ಎಂದು ಒಂದಾಗಿ ಮಧು ಮಕ್ಕಳ ಮೆರವಣಿಗೆಯಲ್ಲಿ ಸಂತೋಷದಿಂದ ಬರುತಿದ್ದ ಮಕ್ಕಳು, ಮಹಿಳೆಯರು, ಹಿರಿಯರು, ತಾಯಿಂದಿರಮೆಲೆ ಧಾಳಿ ಮಾಡಿ ಅಟ್ಟಹಾಸ ಮೆರೆದಿದ್ದಾರೆ.

ದಲಿತರು ಏನು ಮಾಡಿದ್ದರು ಮನುವಾದಿಗಳೇ ? ಯಾವ ಕಾರಣಕ್ಕಾಗಿ ಈತರಹದ ಹಲ್ಲೆ???
ಊರೊಳಗಿಂದ ತಮ್ಮ ಮನೆಗಳಿಗೆ ಹೋಗುವುದಕ್ಕೂ ನಿರ್ಬಂಧವೇ? ಇಷ್ಟೊಂದು ಭಯಾನಕವಾಗಿ ಕಲ್ಲು, ಬಡಿಗೆ, ತಲವಾರು, ರಾಡು ಗಳಿಂದ ಮಾರಣಾಂತಿಕವಾಗಿ ಅಟ್ಟಾಡಿಸಿ ಹೊಡೆಯುತ್ತೀರಿ ಅಂದರೆ ! ನಿಮಲ್ಲಿ ಮನುಷ್ಯತ್ವವೇ ಇಲ್ಲವೇ?

ಕತ್ತಲೆಯಲ್ಲಿ ಕಲ್ಲು ತೂರಾಡಿ, ದಲಿತರ ಓಣಿ ಹೊಕ್ಕು, ಮನೆಯಲ್ಲಿದ್ದ ಅಮಾಯಕ ಹೆಣ್ಣು ಮಕ್ಕಳು, ಮಕ್ಕಳು, ವಯಸ್ಕರು ಅನ್ನದೆ ಹೊಡೆದು ಕೈ ಕಾಲು ಮುರಿದು ಕೇ ಕೇ ಹಾಕಿ ನಕ್ಕಿದ್ದೀರಲ್ಲ ,ನಿಮ್ಮನೆಯಲ್ಲಿ ಅವ್ವ, ಅಪ್ಪ,ಚಿಕ್ಕ ಚಿಕ್ಕ ತಮ್ಮ ತಂಗಿಯರು,ಮಕ್ಕಳು ಇಲ್ಲವೇ?

ಆಳುವ ಸರಕಾರ ಜೀವಂತ ಏನಾದ್ರೂ ಇದ್ರೆ, ತಕ್ಷಣ ಕ್ರಮಕ್ಕೆ ಮುಂದಾಗಿ ಫೋನ್ ಕಾಲ್ recieve ಮಾಡದೆ ಸುಮಾರು ಎರಡು ಗಂಟೆಗಳ ಕಾಲ ಉದ್ದೇಶ ಪೂರ್ವಕವಾಗಿ ತಡ ಮಾಡಿದ ಮತ್ತು ಎಸ್ ಪಿ ಗುಲ್ಬರ್ಗಾ ರವರು ಹೇಳುವವರೆಗೂ ಕಾಲಹರಣ ಮಾಡಿ ಕರ್ತ್ಯವ್ಯ ಲೋಪ ಮಾಡಿದ ಕೇವಲ 10 km ದೂರದಲ್ಲಿರುವ ಪಿಎಸ್ಐ ವಿರುದ್ಧ ಕ್ರಮ ಜರುಗಿಸಿ.

ಅನ್ಯಾಯಕ್ಕೊಳಗಾದ ಎಲ್ಲರು ದಲಿತ ಸೇನೆ ಯ ಹೋರಾಟದಲ್ಲಿ ಪಾಲ್ಗೊಳ್ಳಲಿ. ಇವತ್ತು ನಾವು ರಾಜ್ಯದ ಗೃಹಮಂತ್ರಿಗಳಿಗೆ, ಮುಖ್ಯ ಮಂತ್ರಿಗಳಿಗೆ, ಸಮಾಜಕಲ್ಯಾಣ ಮಂತ್ರಿಗಳಿಗೂ, ಉಪ ಮುಖ್ಯ ಮಂತ್ರಿಗಳಿಗೂ ಹಾಗು ಡಿಜಿಪಿ ರವರಿಗೂ ಮನವಿ ಸಲ್ಲಿಸಲಿದ್ದೇವೆ.

ಸಾಮಾಜಿಕ ಅನ್ಯಾಯದ ವಿರುದ್ಧ ಧ್ವನಿಯೆತ್ತುವ ಎಲ್ಲರಿಗೂ ಮೇಲ್ವರ್ಗದ ಸಮಾಜಘಾತುಕರ ವಿರುದ್ಧದ ಹೋರಾಟದಲ್ಲಿ ದಲಿತ ಸೇನೆ ಯೊಂದಿಗೆ ಕೈ ಜೋಡಿಸಲು ಮನವಿ ಕೂಡ ಮಾಡಲಾಗುತ್ತದೆ.

ಮತ್ತು ಇದೆ ವಿಷಯದ ಕುರಿತು ರಾಜ್ಯದ್ಯಂತ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಹೋರಾಟ ಮಾಡಲು ಸೂಚಿಸಲಾಗುತ್ತಿದೆ ಎಂದು ದಲಿತ ಸೇನೆ ರಾಜ್ಯಧ್ಯಕ್ಷರಾದ ಹನುಮಂತ ಜಿ ಯಳಸಂಗಿ ಸುಚಿಸಿದರು ಈ ಸಂದರ್ಭದಲ್ಲಿ ದಲಿತ ಸೇನೆ ಶಹಾಪುರ ತಾಲೂಕು ಪ್ರಧಾನ ಕಾರ್ಯದರ್ಶಿ ಶಿವು ಆಂದೋಲಾ ದಲಿತ ಸೇನೆ ಪದಾಧಿಕಾರಿಗಳು ಭಾಗವಹಿಸಿದ್ದರು.

ದಲಿತ ಸೇನೆ ಕಳುಹಿಸಿದ ಯಥಾವತ್ ವರದಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಬೆಂ.ಗ್ರಾ.ಜಿಲ್ಲೆ | ಪರಿಶಿಷ್ಟ ಜಾತಿಯ ಪತ್ರಿಕೋದ್ಯಮ ವಿದ್ಯಾರ್ಥಿಗಳಿಂದ ಅಪ್ರೆಂಟಿಸ್‌ಶಿಪ್ ತರಬೇತಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ಬೆಂಗಳೂರು ಗ್ರಾಮಾಂತರ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ವತಿಯಿಂದ 2019-20ನೇ ಸಾಲಿನ ವಿಶೇಷ ಘಟಕ ಯೋಜನೆಯಡಿ ಜಿಲ್ಲಾ ಕಚೇರಿಯಲ್ಲಿ ಕ್ಷೇತ್ರ ಪ್ರಚಾರ ಕಾರ್ಯಕ್ರಮ ಹಾಗೂ ಮಾಧ್ಯಮ ಚಟುವಟಿಕೆಗಳ ನಿರ್ವಹಣೆ ಕುರಿತು ತರಬೇತಿ ನೀಡಲು ಪತ್ರಿಕೋದ್ಯಮದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದಿರುವ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

10 ತಿಂಗಳ ತರಬೇತಿ ಇದಾಗಿದ್ದು, ಆಯ್ಕೆಯಾದ ಇಬ್ಬರು ಅಭ್ಯರ್ಥಿಗಳಿಗೆ ಮಾಸಿಕವಾಗಿ 15,000/- ರೂ.ಗಳ ಶಿಷ್ಯವೇತನ ನೀಡಲಾಗುವುದು.

ತರಬೇತಿ ಪಡೆಯಲಿಚ್ಛಿಸುವ ಅಭ್ಯರ್ಥಿಯು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪಡೆದವರಾಗಿರಬೇಕು. ಕನ್ನಡ, ಇಂಗ್ಲಿಷ್ ಭಾಷೆಯಲ್ಲಿ ಓದು ಮತ್ತು ಬರಹ ಬಲ್ಲವರಾಗಿದ್ದು, ಕಂಫ್ಯೂಟರ್ ಜ್ಞಾನ ಹೊಂದಿದವರಾಗಿರಬೇಕು. ಅಭ್ಯರ್ಥಿಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆಯವರಾಗಿರಬೇಕು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ ನೆರೆಯ ಜಿಲ್ಲೆಯ ಅಭ್ಯರ್ಥಿಗಳನ್ನು ಪರಿಗಣಿಸಲಾಗುವುದು.

ಅರ್ಹರು ತಮ್ಮ ಸ್ವ-ವಿವರ, 3-ಭಾವಚಿತ್ರ ಹಾಗೂ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿಯನ್ನು 3 ಪ್ರತಿಗಳೊಂದಿಗೆ, ಡಿಸೆಂಬರ್ 10 ರೊಳಗಾಗಿ ಉಪ ನಿರ್ದೇಶಕರ ಕಚೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಎರಡನೇ ಮಹಡಿ, ನಂ.17, ಭಗವಾನ್ ಮಹಾವೀರ ರಸ್ತೆ, (ಇನ್‌ಫೆಂಟ್ರಿ ರಸ್ತೆ) ಬೆಂಗಳೂರು-560001 ಇಲ್ಲಿಗೆ ಸಲ್ಲಿಸುವುದು ಹಾಗೂ ಹೆಚ್ಚಿನ ಮಾಹಿತಿಗಾಗಿ ದೂ.ಸಂ: 080-22028116/22028063 ಅನ್ನು ಸಂಪರ್ಕಿಸಬಹುದಾಗಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ವಿಡಿಯೋ | ಶಾಸಕ ಪುಟ್ಟರಾಜು ಕಛೇರಿಯಲ್ಲಿ ಅಂಬೇಡ್ಕರ್ ಭಾವಚಿತ್ರ ಕಸದ ಗುಡ್ಡೆಗೆ

Published

on

  • ವರದಿ – ಗಿರೀಶ್ ರಾಜ್

ಸುದ್ದಿದಿನ,ಮಂಡ್ಯ : ಕಳೆದ ದಿನಗಳ ಹಿಂದೆಯಷ್ಟೆ ಶಿಕ್ಷಣ ಇಲಾಖೆ ಹೊರಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಒಬ್ಬರೆ ಸಂವಿಧಾನ ರಚಿಸಲಿಲ್ಲ ಎಂಬ ಆದೇಶಕ್ಕೆ ರಾಜ್ಯಾದ್ಯಂತ ತೀವ್ರ ಸ್ವರೂಪದ ಪ್ರತಿಭಟನೆಗಳು ನಡೆಯುತ್ತಿದ್ದರೆ ಇಂದು ಪಾಂಡವಪುರದ ಉಪ ವಿಭಾಗಾಧಿಕಾರಿ ಕಛೇರಿಯ ಶಾಸಕ ಪುಟ್ಟರಾಜು ಕೊಠಡಿಯಲ್ಲಿ ಇದ್ದ ಅಂಬೇಡ್ಕರ್ ಅವರ ಪೋಟೋವನ್ನು ನವೀಕರಣದ ಹಿನ್ನಲೆಯಲ್ಲಿ ಕಸದ ಮೂಲೆಗೆ ಬಿಸಾಡಿ ಅವಮಾನ ಮಾಡಿರುವ ಘಟನೆ ನಡೆದಿದೆ.

ಭಾವಚಿತ್ರಕ್ಕೆ ಗೌರವ ಕೊಡ ಬೇಕಾದ ಅಧಿಕಾರಿಗಳು ಈ ರೀತಿ ಬಿಸಾಡಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಈಗ ಚರ್ಚೆ ಗೆ ಗ್ರಾಸವಾಗಿದೆ ಈ ಸಮಯದಲ್ಲಿ ಯಾವ ಅಧಿಕಾರಿಗಳು ಗಮನಿಸದೇ ಇರೋದು ಶೋಚನಿಯವಾಗಿದ್ದು ಈ ಕೃತ್ಯವನ್ನು ಬೇಕು ಅಂತಲೇ ಅಧಿಕಾರಿಗಳು , ಶಾಸಕರು ಅಂಬೇಡ್ಕರ್ ಗೆ ಅಪಮಾನ ಮಾಡಿದ್ದಾರೆ ಎಂದು ದಲಿತ ಸಂಘಟನೆಗಳು ಆರೋಪಿಸಿದ್ದು ಈ ಕೃತ್ಯವನ್ನು ಎಸಗಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕೆಂದು ಮುಖಂಡರು, ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ವಿಡಿಯೋ ನೋಡಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಬೈಕ್ ಅಪಘಾತ : ಪತ್ರಕರ್ತ ಎಂ.ಸಿ. ಮಂಜುನಾಥ್ ಸಾವು

Published

on

ಸುದ್ದಿದಿನ,ದಾವಣಗೆರೆ : ಹಾವೇರಿ ಜಿಲ್ಲೆ ಪ್ರಜಾವಾಣಿ ವರದಿಗಾರ ಎಂ.ಸಿ. ಮಂಜುನಾಥ್ ಅವರು ದಾವಣಗೆರೆ ತಾಲೂಕಿನ ಕೊಡಗನೂರು ಬಳಿ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಮೃತ ಪತ್ರಕರ್ತ ಮಂಜುನಾಥ್ ಮೂಲತಃ ಶಿವಮೊಗ್ಗ ಜಿಲ್ಲೆಯವರು.‌ ಮಾಯಕೊಂಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending