Connect with us

ದಿನದ ಸುದ್ದಿ

ಬೌದ್ಧ ಕ್ರಾಂತಿಗೆ ಮುನ್ನುಡಿ ಬರೆದ ಮಹಾಪುರುಷ ‘ಪಂಡಿತ ಅಯೋತಿ ಥಾಸ್’..! ಮಿಸ್ ಮಾಡ್ದೆ ಓದಿ

Published

on

  • ವಿಶ್ವನಾಥ ಎಸ್ ಕರಡಿ

ರಡು ಪ್ರತ್ಯೇಕ ಸಮಯ ಮತ್ತು ಸ್ಥಳಗಳಲ್ಲಿ ವಾಸಿಸುತ್ತಿದ್ದ ಇಬ್ಬರು ಮಹಾಪುರುಷರು ಒಂದೇ ಸಮಸ್ಯೆಯ ಬಗ್ಗೆ ಒಂದೇ ತೀರ್ಮಾನಕ್ಕೆ ಬಂದಿರುವ ಆ ಮಹಾ ಮನಸ್ಸುಗಳ ತೀರ್ಮಾನಕ್ಕೆ ನಾವಿನ್ನು ಬದ್ಧರಾಗಿಲ್ಲದೆ ಇರುವುದು ದುರಂತವೇ ಅನಿಸುತ್ತದೆ.

19ನೇ ಶತಮಾನದ ತಮಿಳು ವಿದ್ವಾಂಸ ಪಂಡಿತ ಅಯೋತಿ ಥಾಸ್ ಮತ್ತು 20 ನೇ ಶತಮಾನದ ಪಾಶ್ಚಿಮಾತ್ಯ ವಿದ್ಯಾ ಪಂಡಿತ ಡಾ. ಬಾಬಾಸಾಹೇಬ ಅಂಬೇಡ್ಕರ್ ಈ ಇಬ್ಬರು ಮಹಾಪುರುಷರು ಜಾತಿ ವ್ಯವಸ್ಥೆಯನ್ನು ಸರ್ವನಾಶ ಮಾಡಲು ಏಕೈಕ ಮಾರ್ಗವನ್ನು ಕಂಡುಕೊಂಡರು ಮತ್ತು ತಾವು ಬೌದ್ದ ಧಮ್ಮವನ್ನು ಸ್ವೀಕರಿ ತಮ್ಮ ಅನುಯಾಯಿಗಳು ಸ್ವೀಕರಿಸಲು ಮಾದರಿಯಾದರು.

ಬೌದ್ದ ಧಮ್ಮದ ಪತನದಿಂದ ಹುಟ್ಟಿದ ಜಾತಿಯತೆಯನ್ನು ಬೌದ್ದ ಧಮ್ಮ ಸ್ಥಾಪನೆಯ ಮೂಲಕವೇ ನಿರ್ಮೂಲನೆ ಮಾಡಬೇಕು ಎಂದು ನಂಬಿದ್ದರು ಆದರೆ ನಾವಿಂದು ಆ ಮಹಾಪುರುಷರ ಸೂಚನೆ ಪಾಲಿಸದೇ ಜಾತೀಯತೆಯ ವಿರುದ್ದ ಸುಖಾಸುಮ್ಮನೆ ಹೋರಾಟ ಮಾಡಿ ತೌಡು ಕುಟ್ಟುತ್ತಿದ್ದೇವೆ.

ನಾವು ಬಾಬಾಸಾಹೇಬ ಅಂಬೇಡ್ಕರ್ ಅವರ ಧಮ್ಮ ಕ್ರಾಂತಿಯ ಬಗ್ಗೆ ಕೇಳಿದ್ದೇವೆ ಕೆಲವರು ಅವರಂತೆ ನಾವು ಬೌದ್ಧರಾಗಿದ್ದೇವೆ. ಆದರೆ ಬಾಬಾಸಾಹೇಬರ ಕಿಂತ ಮೊದಲೇ ಪಂಡಿತ ಅಯೋತಿ ಥಾಸ್ ರು ಈ ನೆಲದಲ್ಲಿ ಬೌದ್ದ ಕ್ರಾಂತಿಗೆ ಮುನ್ನುಡಿ ಬರೆದಿದ್ದರು ಬನ್ನಿ ಆ ಮಹಾ ಪುರುಷನ ಬಗ್ಗೆ ತಿಳಿದುಕೊಳ್ಳೋಣ.

ಪಂಡಿತ ಅಯೋತಿ ಥಾಸ್ ರು 1845 ಮೇ 20 ರಂದು ಚೆನೈನ ರಾಯಪೆಟ್ಟಾದ ದಲಿತ ಕುಟುಂಬದಲ್ಲಿ ಜನಿಸಿದರು ಅವರು ಸಿದ್ದ ಔಷದಿ ಕಲೆಯಲ್ಲಿ ಪ್ರಾವೀಣ್ಯತೆ ಪಡೆದಿದ್ದರು ಮತ್ತು ತಮಿಳು ವಿದ್ವಾಂಸರಾಗಿದ್ದರು.

ಅವರು 1870 ರಲ್ಲಿ ಉದಗಮಂಡಲಂ ನಲ್ಲಿ ಅದ್ವೈದಾನಂದ ಸಭೆಯನ್ನು(ಅವರ ಜೀವನದ ಮೊದಲ ಸಂಸ್ಥೆ ಎಂದು ಪರಿಗಣಿಸಲಾಗುತ್ತದೆ) ಸ್ಥಾಪಿಸಿದರು. 1891ರಲ್ಲಿ ಅವರು ದ್ರಾವಿಡ ಮಹಾಜನ ಸಭೆ ಎಂಬ ಸಂಘಟನೆಯನ್ನು ಸ್ಥಾಪಿಸಿದರು. 1891 ಸೆಪ್ಟೆಂಬರ 1 ರಂದು ನೀಲಗಿರಿ ಜಿಲ್ಲೆಯಲ್ಲಿ ಸಭೆಯ ಪರವಾಗಿ ಸಮ್ಮೇಳನವನ್ನು ಆಯೋಜಿಸಿದರು.

ಆ ಸಮ್ಮೇಳನದಲ್ಲಿ…

ಅಸ್ಪೃಶ್ಯರನ್ನು ಅವಮಾನಿಸುವವರನ್ನು ಪರಿಯಾ ಎಂದು ಕರೆಯುವ ಮೂಲಕ ಶಿಕ್ಷಿಸಲು ಅಪರಾಧ ಕಾನೂನು ಜಾರಿಗೆ ತರುವುದು.

  1. ಪ್ರತ್ಯೇಕ ಶಾಲೆಗಳನ್ನು ತೆರೆಯುವುದು.
  2. ಅಸ್ಪೃಶ್ಯ ಮಕ್ಕಳಿಗೆ ಮೆಟ್ರಿಕ್ಯುಲೇಶನ್ ಶಿಕ್ಷಣಕ್ಕಾಗಿ ವಿದ್ಯಾರ್ಥಿ ವೇತನವನ್ನು ನೀಡುವುದು.
  3. ವಿದ್ಯಾವಂತ ಅಸ್ಪೃಶ್ಯರಿಗೆ ಉದ್ಯೋಗ ನೀಡುವುದು.
  4. ಜಿಲ್ಲಾ ಮಂಡಲ ಮತ್ತು ಮುನ್ಸಿಪಲ್ ಮಂಡಲಾಗಳಲ್ಲಿ ಪ್ರಾತಿನಿಧ್ಯ ನೀಡುವುದು.

ಹೀಗೆ ಹಲವು ಬೇಡಿಕೆಗಳ ನಿರ್ಣಯ ತೆಗೆದುಕೊಳ್ಳಲಾಯಿತು(ತಮಿಳನ, ಆಕ್ಟೊಬರ್ 1908) ಈ ನಿರ್ಣಯಗಳನ್ನು 1891 ರ 8 ಡಿಸೆಂಬರ್ 21 ರಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಮಹ್ಮದಿಯರ ಸಂಘಕ್ಕೆ ಕಳುಹಿಸಲಾಯಿತು.

1896 ರಲ್ಲಿ ರೇವರೆಂಡ್ ಜಾನ್ ರತ್ನಂ ಮತ್ತು ಅಯೋತಿ ಥಾಸ್ ಜಂಟಿಯಾಗಿ ದ್ರಾವಿಡ್ ಪಾಂಡಿಯನ್ ಎಂಬ ಜರ್ನಲ್ ನ್ನು ಪ್ರಾರಂಭಿಸಿದರು. ಮತ್ತೊಂದು ಕುತೊಹಲಕಾರಿ ಸಂಗತಿ ಎಂದರೇ1882 ರಲ್ಲಿ ರೇವರೆಂಡ್ ಜಾನ್ ರತ್ನಂ ಮತ್ತು ಅಯೋತಿ ಥಾಸರು ದ್ರಾವಿಡ ಕಜಗಂ ಎಂಬ ಹೆಸರಿನ ಒಂದು ಚಳುವಳಿ ಸ್ಥಾಪಿಸಿದರು ( ದಿ ಅಲೋಶಿಯಸ್ ನ್ಯಾಶನಲಿಸಂ ವಿತ್ಹೌಟ್ ಎ ನೇಷನ್ ಇನ್ ಇಂಡಿಯಾ, ಆಕ್ಸಪರ್ಡ್ 2000) ಈ ಸಂಗತಿಯನ್ನು ಮರೆಮಾಡಲಾಗಿದೆ. ದ್ರಾವಿಡ ಚಳುವಳಿಯ ಅಥವಾ ಬ್ರಾಹ್ಮಣ ವಿರೋಧಿ ಚಳುವಳಿಯ ಪ್ರವರ್ತಕನಾಗಿ ಅಯೋತಿ ಥಾಸ್ ಅವರನ್ನು ಈಗ ಯಾರು ನೆನಪಿಸಿಕೊಳ್ಳುವುದಿಲ್ಲ.

ಬೌದ್ದ ಧಮ್ಮಕ್ಕೆ ಮರಳುವುದು

ಜಾತಿ ವ್ಯವಸ್ಥೆಯನ್ನು ಸರ್ವನಾಶ ಮಾಡುವುದಕ್ಕಾಗಿ ದಲಿತರು ಬೌದ್ದ ಧಮ್ಮ ಸ್ವೀಕರಿಸಲು ಕರೆ ನೀಡಿದರು. ಈ ಉದ್ದೇಶಕ್ಕಾಗಿ ಅವರು ತಮಿಳು ಜಾನಪದ ಸಂಪ್ರದಾಯಗಳ ಸಹಾಯದಿಂದ ಪರ್ಯಾಯ ಇತಿಹಾಸವನ್ನು ನಿರ್ಮಿಸಿದರು ಮೂಲ ಬೌದ್ಧರ ಮೇಲೆ ಅಸ್ಪೃಶ್ಯತೆಯನ್ನು ಹೇರಿ ಆಚರಣೆಗೆ ತಂದಿರುವ ಪದ್ಧತಿಗಳನ್ನು ವಿರೋಧಿಸಿದರು. ಭಾರತದ ಇತಿಹಾಸದಲ್ಲಿ ಬೌದ್ದ ಧಮ್ಮವು ಮೊದಲ ಬ್ರಾಹ್ಮಣ ವಿರೋಧಿ ಚಳುವಳಿ ಎಂದು ಅವರು ಪ್ರತಿಪಾದಿಸಿದರು.

1898ರಲ್ಲಿ ಅಯೋತಿ ಥಾಸ್ ಪಂಚಮಾ ಶಾಲೆಯ ಮುಖ್ಯ ಶಿಕ್ಷಕರಾದ ಕೃಷ್ಣಸ್ವಾಮಿ ಅವರೊಂದಿಗೆ ಶ್ರೀಲಂಕಾಕ್ಕೆ ಭೇಟಿ ನೀಡಿದರು ಅಲ್ಲಿ ಅವರು ಬೌದ್ದ ಧಮ್ಮ ಸ್ವೀಕರಿಸಿದರು. ಥಿಯೋಸೋಪಿಸ್ಟ(ಚೆನೈ ಅಡ್ಯಾಕ್ ಮೂಲದ ಥಿಯೊಸೋಪಿಕಲ್ ಸೊಸೈಟಿಯ ಮಾಸಿಕ ಜರ್ನಲ್) ಈ ರೀತಿಯಾಗಿ ಧಾಖಲಿಸಿದೆ.

1898 ರಲ್ಲಿ ಸಿಲೊನ್ ಗೇ ಮದ್ರಾಸನ ಪಂಚಮ ಸಮುದಾಯದ ನಾಯಕರನ್ನು ಬಂತೆ ಸುಮಂಗಲ ಮಹಾ ಥೇರ್ ಅವರು ಬೌದ್ದ ಧಮ್ಮಕ್ಕೆ ಸೇರಿಸಿಕೊಂಡರು. ಮತ್ತು ದಕ್ಷಿಣ ಭಾರತದ ಪಂಚಮರು (ದಲಿತರು) ಇತಿಹಾಸದಲ್ಲಿ ಹೊಸ ಯುಗವನ್ನು ಪ್ರಾರಂಭಿಸಿದರು. ಅವರು ಬೌದ್ದ ಧಮ್ಮವನ್ನು ಸ್ವೀಕರಿಸಿದ ನಂತರ 1898 ರಲ್ಲಿ ಮದ್ರಾಸನ್ ರಾಯಪೆಟ್ಟಾದಲ್ಲಿ “ದಿ ಸಾಕ್ಯ ಬೌದ್ದ ಸಮಾಜ” ಎಂಬ ಸಂಸ್ಥೆಯನ್ನು ಸ್ಥಾಪಿಸಿದರು1907 ರಲ್ಲಿ ಸಂಸ್ಥೆಯಡಿಯಲ್ಲಿ ಒರು ಪೈಸಾ ತಮಿಲನ್ ಎಂಬ ಜರ್ನಲ್ ಅನ್ನು ಪ್ರಾರಂಭಿಸಿದರು.

1907 ರಿಂದ 5 ಮೇ 1914 ರ ವರೆಗೆ ಅವರ ಎಲ್ಲ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳನ್ನು ಜರ್ನಲ್ ನಲ್ಲಿ ದಾಖಲಿಸಲಾಗಿದೆ. ಅಯೋತಿ ಥಾಸ್ ರವರು ಕರ್ನಲ್ ಹೆನ್ರಿ ಸ್ಟಿಲ್ ಓಲ್ಕಾಟ (ಥಿಯೊಸೋಪಿಕಲ್ ಸೊಸೈಟಿಯನ್ನು ಸ್ಥಾಪಿಸಿದ ಅಮೆರಿಕದ ಮಿಲಿಟರಿ ಅಧಿಕಾರಿ) ಮತ್ತು ಅಡ್ಯಾರನಲ್ಲಿನ ಥಿಯೊಸೋಪಿಕಲ್ ಮೂವಮೆಂಟ ನೊಂದಿಗೆ ನಿಕಟ ಒಡನಾಟವನ್ನು ಹೊಂದಿದ್ದರು ಎಂದು ಕರ್ನಲ್ ಓಲ್ಕಾಟ್ ಬರೆದುಕೊಳ್ಳುತ್ತಾರೆ.

ಸಾಕ್ಯ ಬೌದ್ದ ಸಮಾಜವನ್ನು ತಿರುಪುತ್ತೂರ ಮತ್ತು ವೆಲ್ಲೂರಗಳಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಸ್ಥಾಪಿಸಲಾಯಿತು ಉದಾಹರಣೆಗೆ: ದಕ್ಷಿಣ ಆಫ್ರಿಕಾದ ನಟಾಲ್, ರಂಗೂನ ಮತ್ತು ಶ್ರೀಲಂಕಾದಲ್ಲಿ ಅದೇರೀತಿ ಚಾಂಪಿಯನ್ ರೀಪ್ಸ್, ಮಾರಿಕುಪ್ಪಂ, ಕೋಲಾರ ಗೋಲ್ಡ್ ಫೀಲ್ಡ್, ಹಾಗೂ ಹುಬ್ಬಳ್ಳಿಯ ರೇಲ್ವೆ ನಿಲ್ದಾಣದ ಹತ್ತಿರ ಶಾಖೆಗಳನ್ನು ಸ್ಥಾಪಿಸಿದರು.

ಸಾಕ್ಯ ಬೌದ್ದ ಸಮಾಜವು ಬುದ್ದ ಧಮ್ಮದ ಬಗ್ಗೆ ಬುದ್ದ ಧಮ್ಮ ಪಿರಸಂಗಮ(ಬೌದ್ದ ಧಮ್ಮದ ಉಪದೇಶ) ಆಯೋಜಿಸಲು ಪ್ರಾರಂಭಿಸಿತು ಈ ಉಪನ್ಯಾಸಗಳು ಮಧ್ಯರಾತ್ರಿಯ ವರೆಗೂ ನಡೆದವು. ಸಾಕ್ಯ ಬೌದ್ದ ಸಮಾಜದ ಕಾರ್ಯಕರ್ತರು ಪ್ರತಿಯೊಬ್ಬರು ತಮ್ಮ ಚಟುವಟಿಕೆಗಳ ಬಗ್ಗೆ ಪ್ರತಿನಿತ್ಯ ತಮಿಲನ್ ನಲ್ಲಿ ವರದಿ ಮಾಡುತ್ತಿದ್ದರು. ಅನೇಕರು ಅಯೋತಿ ದಾಸರ ನೇತೃತ್ವದಲ್ಲಿ ಬುದ್ದ ಧಮ್ಮ ಪ್ರಚಾರ ಮಾಡಲು ತಮ್ಮನ್ನು ತಾವು ತೊಡಗಿಸಿಕೊಂಡರು.

ಹೆಚ್ಚು ಹೆಚ್ಚು ಜನರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸ ತೊಡಗಿದರು. ದಲಿತರ ಸಾಂಸ್ಕೃತಿಕ ಜೀವನವು ಬೌದ್ಧಮಯವಾಯಿತು. ಜನನ, ಮರಣ, ಮದುವೆ ಮುಂತಾದ ಧಾರ್ಮಿಕ ವಿಧಿಗಳು ಬೌದ್ದ ಧಮ್ಮದ ಅಡಿಯಲ್ಲಿ ನಡೆಯತೊಡಗಿದವು. ಬೌದ್ದ ಧಮ್ಮಕ್ಕೆ ಧರ್ಮಾಂತರ ಗೊಂಡವರ ಹೆಸರುಗಳನ್ನು ತಮಿಳನ ನಲ್ಲಿ ಪ್ರಕಟಿಸಲಾಯಿತು. (24 ಆಗಸ್ಟ್ 1912) 1911ರಲ್ಲಿ ಮೈಸೂರಿನ ದಶಕದ ಜನಗಣತಿಯಲ್ಲಿ ಬೌದ್ಧರ ಪ್ರತ್ಯೇಕ ವರ್ಗವನ್ನು ವರ್ಗಿಕರಿಸಲಾಯಿತು.

1881ರಲ್ಲಿ ಸರ್ಕಾರವು ಎರಡನೇ ಜನಗಣತಿಯನ್ನು ನಡೆಸಲು ಯೋಜಿಸಿತು, ನೋಂದಣಿ ಅಧಿಕಾರಿಗಳು ಶೋಷಿತರನ್ನು ಹಿಂದೂ ಧರ್ಮದ ಭಾಗವೆಂದು ವರ್ಗಿಕರಿಸಲು ಪ್ರಯತ್ನಿಸಿದರು. ಆದರೆ ಅಯೋತಿ ಥಾಸರು ಬ್ರಿಟಿಷ್ ಸರ್ಕಾರಕ್ಕೆ ಒಂದು ಜ್ಞಾಪಕ ಪತ್ರವನ್ನು ನೀಡಿ ತಮಿಳು ಮಾತನಾಡುವ ಶೋಷಿತರನ್ನು ಆದಿ ತಮಿಳರು ಎಂದು ಪರಿಗಣಿಸಿ ಹಿಂದೂಗಳಂತೆ ಪರಿಗಣಿಸದಿರಲು ಹೇಳಿದರು.

ಅಯೋತಿ ಥಾಸರು ಬೌದ್ದ ಧಮ್ಮವನ್ನು ಅನುಸರಿಸಿದ ಮೂಲನಿವಾಸಿಗಳನ್ನ ಯಥಾರ್ಥ ಬ್ರಾಹ್ಮಣರು(ನಿಜವಾದ ಬ್ರಾಹ್ಮಣರು) ಎಂದು ಕರೆದರು. ಆದರೆ ಆರ್ಯರು ಬೌದ್ಧರ ಆಚರಣೆಗಳನ್ನು ನಕಲಿಸಿದ್ದರು ಮತ್ತು ಸ್ವಾರ್ಥ ಉದ್ದೇಶದಿಂದ ಮೋಸ ಮಾಡಲು ಪ್ರಾರಂಭಿಸಿದರು ಅವರನ್ನು ಅಯೋತಿ ಥಾಸರು ವೇಶಾ ಬ್ರಾಹ್ಮಣರು(ಹುಸಿ ಬ್ರಾಹ್ಮಣರು) ಎಂದು ಕರೆದರು.

‘ಒರು ಪೈಸಾ ತಮಿಳನ’ 3 ಜುಲೈ 1907

1907 ರ ಜೂನ 19 ರಂದು ಒರು ಪೈಸಾ ತಮಿಳನ ಎಂಬ ಹೆಸರನ್ನು ಹೊಂದಿರುವ ತಮಿಳು ವಾರಪತ್ರಿಕೆಯನ್ನು ಪ್ರಾರಂಭಿಸಲಾಯಿತು(ಒಂದು ವರ್ಷದ ನಂತರ ಈ ಹೆಸರನ್ನು ತಮಿಲನ ಎಂದು ಬದಲಿಸಲಾಯಿತು).

ದಲಿತ ಮುದ್ರಣ ಇತಿಹಾಸದಲ್ಲಿ ಅಯೋತಿ ಥಾಸರ ತಮಿಲನ್ ಪತ್ರಿಕೆ ಬಹುಮುಖ್ಯ ಪಾತ್ರ ವಹಿಸಿತ್ತು. ಈ ಪತ್ರಿಕೆಯಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ವಿಷಯಗಳ ಕುರಿತು ಸರಣಿ ಲೇಖನಗಳು ಪ್ರಕಟವಾಗಿವೆ. ಈ ಪತ್ರಿಕೆಯು ಬೌದ್ದ ಧಮ್ಮವನ್ನು ಪುನರುಜ್ಜೀವನ ಗೊಳಿಸಿ ಪುನರನಿರ್ಮಿಸುವತ್ತ ಗಮನಹರಿಸಿತ್ತು.

ದಲಿತ ವಿಮೋಚಕರ ಸಾಲಿನಲ್ಲಿ ಅಯೋತಿ ಥಾಸರು ಬಹುಮುಖ್ಯರು ಅವರು ಜಾತಿ ರಹಿತ ಸಮಾಜದ ಕನಸು ಕಂಡವರು ಮತ್ತು ಬೌದ್ದ ಧಮ್ಮ ಸರಿಯಾದ ಆಯ್ಕೆ ಎಂದು ಸೈದ್ಧಾಂತಿಕ ತೀರ್ಮಾನಕ್ಕೆ ಬಂದವರು. ಅವರು ಭಾರತದ ಇತಿಹಾಸವನ್ನು ಇಥಿರಾರಡೆಸ್ ಸಾರಿಥಿರಾಮನಲ್ಲಿ ಹೀಗೆ ಬರೆಯುತ್ತಾರೆ ಆರ್ಯರ ಆಕ್ರಮಣಕ್ಕೆ ಮುಂಚಿತವಾಗಿ ಬೌದ್ದ ಧಮ್ಮದ ಸಿದ್ಧಾಂತಗಳನ್ನು ಅನುಸರಿಸಿ ಭಾರತೀಯರು ಶಾಂತಿಯುತವಾಗಿ ಬದುಕಿದ್ದರು ಎಂದು ವಾದಿಸಿದ್ದಾರೆ.

ಕೇವಲ ವೃತ್ತಿ ಆಧಾರದ ಮೇಲೆ ವಿಭಾಗವಿದ್ದವು ಯಾವುದೇ ಶ್ರೇಣೀಕೃತ ಸ್ಥಾನಮಾನವಿರಲಿಲ್ಲ. ಅನಾಗರಿಕ ಆರ್ಯರು ಕೇವಲ ತಮ್ಮ ಹಿತಕ್ಕಾಗಿ ಜಾತಿ ವಿಭಾಗವಾಗಿ ಬದಲಾಯಿಸಿದರು. ಬೌದ್ದ ಧಮ್ಮದ ಅನೇಕ ಆಚರಣೆಗಳು ಮತ್ತು ಸಂಪ್ರದಾಯಗಳನ್ನು ಮರು ವ್ಯಾಖಾನಿಸಿದರು.

ಅಯೋತಿ ಥಾಸ ಅವರನ್ನು ಇಂದು ನೆನಪಿಸಿಕೊಳ್ಳುವುದು ಅವಶ್ಯವೆನಿಡುತ್ತದೆ ಭಾರತೀಯ ಸಮಾಜದ ಆಧುನೀಕರಣದ ನಿರ್ಣಾಯಕ ಸಮಯದಲ್ಲಿ ಪಂಡಿತ ಅಯೋತಿ ಥಾಸ್ ಆಧುನಿಕತೆಯ ಸಾಧನಗಳಲ್ಲಿ ಒಂದಾದ ಮುದ್ರಣ ಮಾದ್ಯಮವನ್ನು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ವ್ಯವಸ್ಥಿತವಾಗಿ ಬಳಸಿಕೊಂಡರು ಹಾಗೂ ಬೌದ್ದ ಧಮ್ಮದ ಪುನರುಂಜೀವನಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡು ಜಾತಿ ನಿರ್ಮೂಲನೆಗೆ ಬೌದ್ದ ಧಮ್ಮಕ್ಕೆ ಮರಳುವ ಉಪಾಯವನ್ನು ಕೊಟ್ಟು ದಲಿತರನ್ನು ಉದ್ದಾರ ಮಾಡಲು ಶ್ರಮಿಸಿದ ಅವರ ಕಾರ್ಯ ಇಂದಿನ ನಮ್ಮಂತಹ ಯುವಕರಿಗೆ ಸ್ಫೂರ್ತಿಯಾಗಿ ಅವರಂತೆ ನಾವು ಕೂಡ ನಮ್ಮ ಜನರನ್ನು ಬುದ್ದನ ಕಡೆಗೆ ಕರೆದೊಯ್ಯದು ಜಾತಿ ರಹಿತ ಸಮಾಜಕ್ಕಾಗಿ ದುಡಿಯೋಣ.

ದಲಿತರನ್ನು ಜಾಗೃತಗೊಳಿಸಲು ಮುದ್ರಣ ಸಾಧನವನ್ನು ಬಳಸಿಕೊಂಡು ರಾಜಕೀಯ ಪರಿವರ್ತನೆಗಿಂತ ಸಾಮಾಜಿಕ ಮತ್ತು ಧಾರ್ಮಿಕ ಪರಿವರ್ತನೆಗೆ ಒತ್ತು ಕೊಟ್ಟ ಅಯೋತಿ ಥಾಸ್ ಅವರ ವಿಚಾರವನ್ನು ತಮ್ಮ ಮುಂದೆ ಇಟ್ಟು ಅವರಂತೆ ನಾವು ಕೂಡ ಮೊದಲು ಧಮ್ಮ ಕ್ರಾಂತಿ ಮತ್ತು ಸಾಮಾಜಿಕ ಕ್ರಾಂತಿ ಮಾಡೋಣ ಎಂದು ಹೇಳುತ್ತಾ 20 ಮೇ ದಂದು ಅಯೋತಿ ಥಾಸ್ ರವರ ಜನ್ಮ ದಿನಾಚರಣೆ ಇದ್ದು ಆ ಮಹಾಪುರುಷನನ್ನು ನೆನೆಯುತ್ತಾ ತ್ರಿವಾರ ನಮಿಸುವೆ.

ಬುದ್ದ, ಧಮ್ಮ, ಸಂಘದ ಶ್ರೇಷ್ಠ ಸದ್ಗುಣಗಳು ಎಲ್ಲರಿಗೂ ಶಾಂತಿ ನೀಡಲಿ ಎಂದು ಹಾರೈಸುತ್ತಾ ಪಂಡಿತ ಅಯೋತಿ ಥಾಸ್ ರವರ ಜಯಂತಿ ನಿಮಿತ್ಯ ಹಾರ್ಧಿಕ ಶುಭಾಶಯಗಳು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಬಾಯಿ ಬಿಟ್ಟರೆ ಬಣ್ಣಗೇಡಿನಂತಾಗಿದೆ ಮೋದಿ ಭಾಷಣಗಳು : ಸಿದ್ದರಾಮಯ್ಯ

Published

on

ಸುದ್ದಿದಿನ, ಬೆಂಗಳೂರು:ಬಾಯಿ ಬಿಟ್ಟರೆ ಬಣ್ಣಗೇಡು ಎಂಬಂತಾಗಿದೆ ಪ್ರಧಾನಿ ನರೇಂದ್ರ ಮೋದಿಯವರ ಭಾಷಣಗಳು. ನಿಯಂತ್ರಣ ಮೀರಿ ಹರಡುತ್ತಿರುವ ಕೊರೊನಾ ಸೋಂಕಿನಿಂದ ತತ್ತರಿಸಿರುವ ಜನರಲ್ಲಿ ಆತ್ಮವಿಶ್ವಾಸ ತುಂಬುವ ಯಾವ ನಿರ್ಧಿಷ್ಟ ಯೋಜನೆಗಳ ಪ್ರಸ್ತಾವಗಳೇ ಇಲ್ಲದ ಪ್ರಧಾನಿ ಭಾಷಣ ಅಸಹಾಯಕ ನಾಯಕನ ಗೋಳಾಟದಂತಿತ್ತು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.

ಬೆಂಗಳೂರಿನಲ್ಲಿ ಮಾತನಾಡಿದ ಅವರು ಬಡವರಿಗೆ ಉಚಿತ ಆಹಾರ ಧಾನ್ಯ ನೀಡುವ ಗರೀಬ್ ಕಲ್ಯಾಣ ಯೋಜನೆಯನ್ನು ನವಂಬರ್ ತಿಂಗಳ ವರೆಗೆ ಮುಂದುವರಿಸಿರುವುದು ಸ್ವಾಗತಾರ್ಹ. ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಸೋನಿಯಾ ಗಾಂಧಿಯವರು ತಿಂಗಳ ಹಿಂದೆಯೇ ಈ ಬೇಡಿಕೆ ಇಟ್ಟಿದ್ದರು. ಅದನ್ನು ಒಪ್ಪಿಕೊಂಡದ್ದಕ್ಕೆ ಧನ್ಯವಾದಗಳು.

ಕೊರೊನಾ ಸೋಂಕಿನ ತೀವ್ರತೆಯನ್ನು ಅವಲೋಕಿಸಿದರೆ ಇದು ಮುಂದಿನ 2-3 ತಿಂಗಳೊಳಗೆ ಕೊನೆಗೊಳ್ಳುವಂತಹದ್ದಲ್ಲ. ಮುಂದಿನ ದಿನಗಳಲ್ಲಿ ದೇಶದಲ್ಲಿ ಹಸಿವಿನ ಸಮಸ್ಯೆ ಭೀಕರವಾಗಲಿದೆ. ಆದ್ದರಿಂದ ನಮ್ಮ ಸರ್ಕಾರ ರಾಜ್ಯದಲ್ಲಿ ಜಾರಿಗೊಳಿಸಿದ್ದ ಅನ್ನಭಾಗ್ಯದ ಮಾದರಿಯಲ್ಲಿ ಇಡೀ ರಾಷ್ಟ್ರದಲ್ಲಿ ಬಡವರಿಗೆ ಉಚಿತ ಆಹಾರಧಾನ್ಯ ಪೂರೈಸುವ ಶಾಶ್ವತ ಯೋಜನೆಯನ್ನು ಜಾರಿಗೆ ತರಬೇಕೆಂದು ಪ್ರಧಾನಿಯವರನ್ನು ಒತ್ತಾಯಿಸುತ್ತೇನೆ ಎಂದರು.

ದೇಶದ ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ, ಆಮ್ಲಜನಕ ಪೂರೈಕೆ ವ್ಯವಸ್ಥೆ, ವೆಂಟಿಲೇಟರ್ ಗಳ ತೀವ್ರ ಕೊರತೆ ಇದೆ. ವೈದ್ಯರು,ದಾದಿಯರ ಕೊರತೆ ಇದೆ. ದುಬಾರಿ ಚಿಕಿತ್ಸೆ ವೆಚ್ಚದಿಂದ ಜನ ಕೊರೊನಾ ಸೋಂಕಿಗಿಂತ ಕೊರೊನಾ ಚಿಕಿತ್ಸೆಗೆ ಜನ ಹೆದರುವಂತಾಗಿದೆ. ಈ ಬಗ್ಗೆ ರಾಜ್ಯಗಳಿಗೆ ಕೇಂದ್ರ ನೆರವು ಘೋಷಿಸಬಹುದೆಂಬ ನಿರೀಕ್ಷೆ ಹುಸಿಯಾಗಿದೆ.

ಪಿಎಂ ಕೇರ್ಸ್ ನಿಧಿಗೆ ನೆರವಾಗಲು ದೇಶದ ಜನರನ್ನು ವಿನಂತಿಸಿದ್ದ ಪ್ರಧಾನಿಗಳು ಅದರ ಖರ್ಚು-ವೆಚ್ಚದ ಸಂಪೂರ್ಣ ವಿವರವನ್ನು ದೇಶದ ಮುಂದಿಟ್ಟು ಪಾರದರ್ಶಕವಾಗಿ ನಡೆದುಕೊಳ್ಳಬಹುದೆಂಬ ನಿರೀಕ್ಷೆಯೂ ಹುಸಿಯಾಗಿದೆ. ಇದಕ್ಕೆ ಚೀನಾದಿಂದಲೂ ದೇಣಿಗೆ ಪಡೆಯಲಾಗಿದೆ ಎಂಬ ಆರೋಪಗಳಿವೆ. ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕಿತ್ತು ಎಂದು ಹೇಳಿದರು.

ಸತತ 23ನೇ ದಿನ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗಿದೆ. ಇದರಿಂದ ಆಹಾರಧಾನ್ಯ, ತರಕಾರಿ, ಹಣ್ಣು ಸೇರಿದಂತೆ ದಿನಬಳಕೆಯ ವಸ್ತುಗಳ ಬೆಲೆಯೂ ಏರುತ್ತಿದೆ. ಈ ತೈಲಬೆಲೆ ಏರಿಕೆ ಇನ್ನೆಷ್ಟು ದಿನಗಳ ಕಾಲ ಏರಲಿದೆ ಎಂದಾದರೂ ಹೇಳಿಬಿಟ್ಟಿದ್ದರೆ ಜನ ಕೆಟ್ಟ ದಿನಗಳಿಗೆ ಹೊಂದಿಕೊಳ್ಳಲು ಸಿದ್ದವಾಗುತ್ತಿದ್ದರು.

ಹುತಾತ್ಮ 20 ವೀರಯೋಧರ ಬಲಿದಾನ ವ್ಯರ್ಥವಾಗುವುದಿಲ್ಲ ಎಂದು ಘೋಷಿಸಿದ್ದ ಪ್ರಧಾನಿ ಮೋದಿಯವರು, ಇದಕ್ಕಾಗಿ ಏನು ಮಾಡಿದ್ದಾರೆ ಎನ್ನುವುದನ್ನು ತಿಳಿಸಿದ್ದರೆ ನೊಂದ ದೇಶದ ಜನತೆ ಮತ್ತು ವೀರಯೋಧರ ಕುಟುಂಬಕ್ಕೆ ಸಾಂತ್ವನ ಮಾಡಿದ ಹಾಗಾಗುತ್ತಿತ್ತು. ಈ ಘಟನೆಯ ಪ್ರಸ್ತಾವವನ್ನೇ ಮಾಡದೆ ನಿರ್ಲಕ್ಷಿಸಿರುವುದು ವಿಷಾದನೀಯ ಎಂದು ಕಿಡಿಕಾರಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ರಾಜ್ಯದಲ್ಲಿ ಒಟ್ಟು 18016 ಕೊರೋನಾ ಸೋಂಕಿತರು, ಗುರುವಾರ 1502 ಕೇಸ್ ಪತ್ತೆ..!

Published

on

ಸುದ್ದಿದಿನ, ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ದಿನೇ ದಿನೇ ಶರವೇಗದಲ್ಲಿ ಹೆಚ್ಚುತ್ತಿದೆ. ನಾಡಿನ ಜನತೆಯಂತೂ ಭಯದಲ್ಲಿ ಬದುಕು ಸಾಗಿಸುವ ಅನಿವಾರ್ಯತೆ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮಗಳಿಗೂ ಕೊರೋನಾ ಸೋಂಕು ಹರಡಿದ್ದು ಸೋಂಕು ಹರಡದಂತೆ ತಡೆಹಿಡಿಯಲು ಇನ್ನು ಎಷ್ಟು ದಿನಗಳಾಗುತ್ತದೋ‌ ಎಂಬ ಪ್ರಶ್ನೆ ಜನ ಸಾಮಾನ್ಯನ್ನು ಕಾಡುತ್ತಿದೆ.

ಕೋವಿಡ್19 ಮಾಹಿತಿ: 2ನೇ ಜುಲೈ 2020

  • ಒಟ್ಟು ಪ್ರಕರಣಗಳು: 18016
  • ಮೃತಪಟ್ಟವರು: 272
  • ಗುಣಮುಖರಾದವರು: 8334
  • ಹೊಸ ಪ್ರಕರಣಗಳು: 1502

ಇತರೆ ಮಾಹಿತಿ

ಜಿಲ್ಲಾವಾರು ಸೋಂಕಿತರು, ಟೆಲಿಮೆಡಿಸಿನ್ ಸೌಲಭ್ಯದ ಮಾಹಿತಿ, ಕೊರೊನ ನಿಗಾ ಅಪ್ಲಿಕೇಶನ್ ಹಾಗೂ ಸಹಾಯವಾಣಿ ವಿವರಗಳಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಪರಿಸರಪ್ರೇಮಿ ಕಾಮೇಗೌಡರಿಗೆ ಜೀವತಾವಧಿ ಉಚಿತ ಬಸ್ ಪಾಸ್ : ಯಡಿಯೂರಪ್ಪ

Published

on

ಸುದ್ದಿದಿನ, ಬೆಂಗಳೂರು: ಅಪರೂಪದ ಪರಿಸರ ಕಾಳಜಿಯ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ದಾಸನದೊಡ್ಡಿಯ ಕಾಮೇಗೌಡ ಅವರಿಗೆ, ಮುಖ್ಯಮಂತ್ರಿಯವರ ಸೂಚನೆ ಮೇರೆಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಜೀವಿತಾವಧಿ ಉಚಿತ ಬಸ್ ಪಾಸ್ ನೀಡಿದೆ.

ಮಾಧ್ಯಮವೊಂದರಲ್ಲಿ ಈ ಬಗ್ಗೆ ತಮ್ಮ ಆಸೆ ವ್ಯಕ್ತಪಡಿಸಿದ್ದ ಕಾಮೇಗೌಡರ ಅಭಿಲಾಷೆಯಂತೆ, ಉಚಿತ ಪಾಸ್ ವಿತರಿಸಲು ಮಾನ್ಯ ಮುಖ್ಯಮಂತ್ರಿಗಳು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೂಚನೆ ನೀಡಿದ್ದರು.

ಗೌಡರ ಪರಿಸರ ಕಾಳಜಿಗೆ ಮತ್ತೊಮ್ಮೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿರುವ ಮುಖ್ಯಮಂತ್ರಿಗಳು, ಕಾಮೇಗೌಡರ ಪರಿಸರ ಸೇವೆ ಬಗ್ಗೆ ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ತಮ್ಮ ‘ಮನ್ ಕಿ ಬಾತ್ ‘ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ್ದನ್ನು ಸ್ಮರಿಸಿಕೊಂಡಿದ್ದಾರೆ.

ಕಾಮೇಗೌಡ ಅವರಂತಹ, ಬೆಲೆ ಕಟ್ಟಲಾಗದ ಪರಿಸರ ಕಾಳಜಿಯುಳ್ಳವರ ಸಂತತಿ ಇನ್ನೂ ಹೆಚ್ಚಾಗಲಿ ಎಂದು ಅಶಿಸುವುದಾಗಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending