Connect with us

ದಿನದ ಸುದ್ದಿ

ಮಾನವೀಯತೆ ಮರೆತು ದಲಿತ ಯುವಕನ ಬೆತ್ತಲೆ ಮೆರವಣಿಗೆ

Published

on

Photo courtesy : Yash Tell TV

ಸುದ್ದಿದಿನ, ಮೈಸೂರು : ಇದೇ ಜೂನ್ 2ರಂದು ಎಸ್. ಪ್ರತಾಪ್ ರವರು ಶ್ಯಾನಾಡ್ರಹಳ್ಳಿ, ಗುಂಡ್ಲುಪೇಟೆ ನಿವಾಸಿಯಾಗಿದ್ದು ಐ.ಎ.ಎಸ್. ಪರೀಕ್ಷೆಯನ್ನು ಬರೆಯಲು ಮೈಸೂರಿನ ಮರಿಮಲ್ಲಪ್ಪ ಹಿರಿಯ ಪ್ರಾಥಮಿಕ ಶಾಲೆಗೆ ಬಂದಿದ್ದು, ಈತ ತಡವಾಗಿ ಹೋದ ಕಾರಣ ಪರೀಕ್ಷೆ ವಂಚಿತನಾಗಿ, ಇದೆ ಬೇಸರದಿಂದ ಮೈಸೂರಿನಲ್ಲಿ ಕಾಲ ಕಳೆದು ವಾಪಸ್ಸು ಗುಂಡ್ಲುಪೇಟೆ ಕಡೆಗೆ ತನ್ನ ಬೈಕಿನಲ್ಲಿ ಬಂದು ಅದೇ ದಿನ ರಾತ್ರಿ ರಾಘವಾಪುರ ಗ್ರಾಮದ ಹತ್ತಿರ ತನ್ನ ಬೈಕ್ ಕೆಟ್ಟುಹೋಗಿದ್ದು, ಅಲ್ಲಿ ಯಾರೋ ದುಷ್ಕರ್ಮಿಗಳು ಬಂದು ಈತನನ್ನು ದರೋಡೆ ಮಾಡಿದ್ದಾರೆ.

ನಂತರ ಮಾನಸಿಕವಾಗಿ ಹೆದರಿಹೋದ ಈತನು ರಾತ್ರಿಯಿಡಿ ಅಲ್ಲೆ ಕಾಲ ಕಳೆದು ಬೆಳಿಗ್ಗೆ ಜೂನ್ 3 ರಂದು ಬೆಳಿಗ್ಗೆ 6-00 ಗಂಟೆಗೆ ಆಶ್ರಯಕ್ಕಾಗಿ ವೀರನಪುರ ಗೇಟ್ ಹತ್ತಿರವಿರುವ ಶನಿಮಹಾತ್ಮ (ಕೆಬ್ಬೆಕಟ್ಟೆ ಹತ್ತಿರ) ದೇವಸ್ಥಾನಕ್ಕೆ ಹೋಗಿದ್ದು, ಈತನನ್ನು ಕಂಡ ಅರ್ಚಕರು ಈತನ ಮೇಲೆ ಅನುಮಾನಸ್ಪದ ವ್ಯಕ್ತಪಡಿಸಿ ವಿಚಾರಿಸಿದಾಗ ಈತನ ಗಾಬರಿಯಾಗಿದ್ದಾನೆ ನಂತರ ಗ್ರಾಮಸ್ಥರ ಗುಂಪು ಈತನ ಬಗ್ಗೆ ವಿಚಾರಿಸಿ ಈತನ ಊರು ಮತ್ತು ಈತ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯೆಂದು ತಿಳಿದ ನಂತರ ಹಲ್ಲೆ ನಡೆಸಿ ಈತನ ಬಟ್ಟೆಯನ್ನೆಲ್ಲ ಬಿಚ್ಚಿ ಕೈಗೆ ಹಗ್ಗದಿಂದ ಕಟ್ಟಿ ಬೆತ್ತಲೆ ಮೆರವಣಿಯನ್ನು ದೇವಸ್ಥಾನದಿಂದ ಊಟಿ ಮೈಸೂರು ರಸ್ತೆಯ ಮುಖ್ಯ ರಸ್ತೆಯವರೆವಿಗೂ ಮೆರವಣಿಗೆ ಮಾಡಿದ್ದಾರೆ.

ಜಾತಿಯ ಕ್ರೂರತೆಯೂ ಎಷ್ಟರ ಮಟ್ಟಿಗೆ ಇದೆ ಎಂಬುದು ಇಲ್ಲಿ ಕಾಣಬಹುದು. ಒಬ್ಬ ವ್ಯಕ್ತಿ ಇನ್ನೊಬ್ಬನ ಎದುರು ಬೆತ್ತಲೆ ಇದ್ದಾಗ ಕನಿಷ್ಠ ಸೌಜನಕ್ಕೂ ಬಟ್ಟೆಕೊಡಬಾರದೇ ಇದು ಮಾನವೀಯತೆಯನ್ನೆ ತಲ್ಲಣಿಸುವ ಸಂಗತಿ ಎಂದರೆ ತಪ್ಪಾಗಲಾರದು! ನಂತರ ಈಗಾಗಲೇ ದಣಿದಿದ್ದ ದೇಹಕ್ಕೆ ಒಂದು ಗುಟುಕು ನೀರು ಕೊಡದೇ ಏಕಾಏಕಿ ಥಳಿಸಿ ಅವನ ತಲೆಯಿಂದ ರಕ್ತಸೋರುತ್ತಿದ್ದರೂ ಮಾನವೀಯನ್ನು ಕಾಣದೇ ವಿಜೃಂಭಿಸಿದ್ದಾರೆ. ಇದು ಇಂದಿನ ಜಾಗತೀಕರಣ ಎಂದು ಕೂಗಾಡುವಾಡುವ ನಮ್ಮ ದೇಶ, ಇಂತಹ ಪೈಶಾಚೀಕ ಕೃತ್ಯಕ್ಕೆ ಹೊಣೆಯಾರು.

ಈ ರೀತಿ ಗುಂಪು ಹಲ್ಲೆ, ಜಾತಿ ನಿಂದನೆ, ಬೆತ್ತಲೆ ಮೆರವಣಿಗೆ ನಡೆದು ಒಂದು ವಾರವಾದರೂ ಪೊಲೀಸ್ ಯಾಕೆ ಯಾವ ಕ್ರಮ ಕೈಗೊಂಡಿಲ್ಲ, ಪೊಲೀಸ್‍ನವರು ಕನಿಷ್ಠ suo-motto ಅಡಿಯಲ್ಲಿ ದಾಖಲಿಸಬಹುದಿತ್ತು. ಇಂತಹ ಪ್ರಕರಣವು ಸಂವಿಧಾನ ಕಲಂ. 17 ರ ಉಲ್ಲಂಘನೆಯಾಗಿದೆ. ಪೊಲೀಸ್ ವ್ಯವಸ್ಥೆ ಇವತ್ತು ತಳಸಮುದಾಯ ಮತ್ತು ಕಟ್ಟಕಡೆಯ ಜನರಿಗೆ ತನ್ನ ಬಾಗಿಲನ್ನು ಮುಚ್ಚಿದೆಯೇ ಎಂಬುವುದು ನಮ್ಮೆಲ್ಲರ ಪ್ರಶ್ನೆಯಾಗಿದೆ! ಜಾತಿಯ ಕ್ರೂರತೆಯ ವಿಜೃಂಭಿಸುವ ಈ ಗುಂಪು ಇಂದು ಇವರ ಪ್ರಬಲಶಕ್ತಿ ತೋಳ್ಬಲ ಮತ್ತು ಇನ್ಯಾವುದೋ ಅಗೋಚರ ಅಧಿಕಾರದ ಶಕ್ತಿಯಿಂದ ಕಾನೂನಿಂದ ತಪ್ಪಿಸಿಕೊಂಡಿದ್ದಾರೆ.

ಸದ್ಯ ನೊಂದ ಪ್ರತಾಪನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇವರ ಯೋಗಕ್ಷೇಮವನ್ನು ಅವರ ತಮ್ಮನಾದ ಕಾಂತರಾಜು ರವರು ನೋಡಿಕೊಳ್ಳುತ್ತಿದ್ದಾರೆ. ಈ ಸ್ಥಿತಿಯನ್ನು ಕಂಡು ಪ್ರತಾಪನ ಪೋಷಕರು ಯಾವ ಮಾರ್ಗವು ತೋಚದೇ ದಿನನಿತ್ಯ ನೋವನ್ನು ನುಂಗಿಕೊಂಡು ಬದುಕುತ್ತಿದ್ದಾರೆ. ಈ ಪ್ರಕರಣವನ್ನು ಸರ್ಕಾರ ಅತ್ಯಂತ ಗಂಭೀರ ಮತ್ತು ನೊಂದ ಪ್ರತಾಪನಿಗೆ ನ್ಯಾಯ ದೊರಕುವಂತಾಗಬೇಕು ಎಂಬುದು ಈತನ ಸಹೋದರ ಕಾಂತರಾಜುರವರ ಅಳಲು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಶಿವಮೊಗ್ಗ | ಆಗಸ್ಟ್ 18ರಂದು ‘ಭಾವ ಸಂಗಮ’ ದಿಂದ ‘ಸಾಹಿತ್ಯ ಸಮಾಗಮ’

Published

on

ಸುದ್ದಿದಿನ,ಶಿವಮೊಗ್ಗ: ಆಗಸ್ಟ್ 18ರಂದು ಬೆಳಿಗ್ಗೆ 9.30 ರಿಂದ ಶಿವಮೊಗ್ಗದ ಕರ್ನಾಟಕ ಸಂಘದ ಸಭಾಂಗಣದಲ್ಲಿ ಭಾವ ಸಂಗಮದ ನಾಲ್ಕನೆಯ ವಾರ್ಷಿಕೋತ್ಸವದ ಅಂಗವಾಗಿ ಸಾಹಿತ್ಯ ಸಾಂಸ್ಕೃತಿಕ ಸಮಾಗಮ ನಡೆಯುತ್ತಿದೆ.

ಶಿವಮೊಗ್ಗ ಮತ್ತು ಸಮೀಪವಿದ್ದವರು, ಮುಖಪುಟ ಸ್ನೇಹಿತರು, ವಾಟ್ಸಾಪ್ ಸ್ನೇಹಿತರು, ಸಾಹಿತ್ಯ, ಕಲೆ, ಸಂಗೀತ,, ನೃತ್ಯಾಸಕ್ತರು ಈ ಸಮಾಗಮಕ್ಕೆ ಆಗಮಿಸಬೇಕೆಂದು ಸಮಾಗಮ ಸಮಿತಿಯ ಸದಸ್ಯರು ಮನವಿ ಮಾಡಿದ್ದಾರೆ. ಹಿರಿಯ ಲೇಖಕ, ಕವಿ ಶ್ರೀ ರಾಜೇಂದ್ರ ಪಾಟೀಲ ಅವರು ಭಾವ ಸಂಗಮ ಎಂಬ ಹೆಸರಿನಲ್ಲಿ ವಾಟ್ಸಪ್‍ ಗ್ರುಪ್‍‍ನ್ನು ತೆರೆದಿದ್ದು, ಇದರಲ್ಲಿ ಸುಮಾರು 250ಕ್ಕೂ ಹೆಚ್ಚು ಚಿಂತಕರು, ಕವಿಗಳು, ಕಲಾವಿದರು, ನೃತ್ಯ ಕಲಾವಿದರು, ಸಂಗೀತಗಾರರು, ಬರಹಗಾರರು ಇರುತ್ತಾರೆ.

ಪ್ರತಿ ವರ್ಷ ಒಂದೊಂದು ಸ್ಥಳದಲ್ಲಿ ಈ ಕಾರ್ಯಕ್ರಮವಿರುತ್ತದೆ. ಈ ಸಲ ಶಿವಮೊಗ್ಗದಲ್ಲಿ 18 ರಂದು ರವಿವಾರ ಇರುತ್ತದೆ. ಕಾರ್ಯಕ್ರಮದ ಉದ್ದಗಲಕ್ಕೂ ಮನರಂಜನೆ, ಡಾ.ಪ್ರಕಾಶ ಖಾಡೆ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ, ಯಶವಂತ ವಾಜಂತ್ರಿಯವರ ನಗೆಲಾಸ್ಯ ಇತರೆ ಗೋಷ್ಠಿಗಳು ಇರುತ್ತವೆ.

ಶ್ರೀಮತಿ ವಿಜಯಾ ಬಾಯರಿ, ಶೀಲಾ ಸುರೇಶ, ಬೇದ್ರೆ ಹರೀಶ, ಸರೋಜಾ, ರಾ.ಸು ವೆಂಕಟೇಶ, ಶಂಕರ ಹೂಗಾರ, ಶ್ರೀಮತಿ ಸರಸ್ವತಿ ಟಿ.ಎನ್, ಸಹನಾ ಚೇತನ, ರಮೇಶ ಗುಬ್ಬಿ, ಶ್ರೀರಂಜಿನಿ ದತ್ತಾತ್ರಿ, ಪಿ.ಎಸ್. ಶ್ರೀಕಾಂತ ಮತ್ತಿತರ ಸಹಕಾರದಿಂದ ಹಾಗೂ ರಾಜೇಂದ್ರ ಪಾಟೀಲ ಅವರ ನೇತೃತ್ವದಲ್ಲಿ ಈ ಸಮಾ-ಘಮವು ಜರುಗುತ್ತಲಿದೆ. ಎಲ್ಲರೂ ಆಗಮಿಸಿ ಯಶಸ್ವಿಗೊಳಿಸಲು ಸಮಾಗಮ ಸಮಿತಿ ಕೋರಿದೆ.

ಈ ಸಮಾಘಮದಲ್ಲಿ ವೆಂಕಟೇಶ ಇನಾಮದಾರ ಹಾಗೂ ಏಕನಾಥ ಬೊಂಗಾಳೆ ಯವರಿಂದ ವ್ಯಂಗ್ಯಚಿತ್ರಗಳ ಪ್ರದರ್ಶನ ಮತ್ತು ವಿಜಯಾ ನಾಡಿಗೇರ ಇವರಿಂದ ಪೇಂಟಿಂಗ್ಸ್‍ ಪ್ರದರ್ಶನವಿರುತ್ತದೆ.ಪುಸ್ತಕ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಮಾಡಲಾಗಿದೆ.

ಹಿರಿಯ ಲೇಖಕಿ ವಿಜಯಾ ಶ್ರೀಧರ ಸಮಾಗಮ ಉದ್ಘಾಟಿಸಲಿದ್ದಾರೆ. ಸುಮಾ ಕಳಸಾಪುರ ಮತ್ತು ನೂರ್ ಸಮದ್ ಅಬ್ಬಲಗೆರೆ ಮುಖ್ಯ ಅತಿಥಿಗಳಾಗಿರುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಮಾಹಿತಿಗಾಗಿ 9591323453 ಗೆ ಸಂಪರ್ಕಿಸಲು ಕೋರಲಾಗಿದೆ‌.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಶಾಸಕರಿಗೆ ಖರೀದಿಗೆ ಹಣವಿದೆ,‌ಸಂತ್ರಸ್ತರ ನೆರವಿಗೆ ಹಣವಿಲ್ಲ : ಯಡಿಯೂರಪ್ಪ ಗೆ ಸಿದ್ದರಾಮಯ್ಯ ಟಾಂಗ್

Published

on

ಸುದ್ದಿದಿನ,ಬೆಂಗಳೂರು: ಸಂತ್ರಸ್ತರ ಪರಿಹಾರಕ್ಕೆ ಹಣ ನೀಡಲು ನೋಟ್ ಪ್ರಿಂಟಿಂಗ್ ಮೆಷಿನ್ ಇಲ್ಲ ಎನ್ನುವ ಮುಖ್ಯಮಂತ್ರಿಗಳಿಗೆ, ಅತೃಪ್ತ ಶಾಸಕರಿಗೆ ಕೊಡಲು ಅಕ್ಷಯಪಾತ್ರೆ ಫಂಡ್ ಇದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಬೆಳೆ ಹಾನಿ ಅಂದಾಜು ಮಾಡಲು ಆತುರ ಬೇಡ, ಕೇಳಿದಷ್ಟು ಹಣ ನೀಡಲು ಸರ್ಕಾರದ ಬಳಿ ನೋಟು ಮುದ್ರಿಸುವ ಯಂತ್ರಗಳಿಲ್ಲ. 8-10 ದಿನ ಸಮಯ ತೆಗೆದುಕೊಂಡು, ನಿಖರ ವರದಿ ನೀಡಿ ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ಶಿವಮೊಗ್ಗದಲ್ಲಿ ಕೃಷಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ಈ ಕುರಿತು ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸುದ್ದಿದಿನ. ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ವರದಾ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಪೇದೆಯನ್ನು ರಕ್ಷಿಸಿದ ಅಗ್ನಿ ಶ್ಯಾಮಕ ದಳ

Published

on

ಸುದ್ದಿದಿನ,ಹಾವೇರಿ: ಬ್ಯಾಡಗಿ ತಾಲೂಕು ಕಾಗಿನೆಲೆಯಲ್ಲಿ ಕರ್ತವ್ಯ ಮುಗಿಸಿ ಕಡಕೋಳಕ್ಕೆ ಹಿಂದಿರುಗುತ್ತಿದ್ದ ಪೊಲೀಸ್ ಪೇದೆ ಯಲ್ಲಪ್ಪ ಕೊರವಿ ವರದಾ ನದಿಯಲ್ಲಿ ಕೊಚ್ಚಿಹೋಗುತ್ತಿದ್ದವನನ್ನು ಅಗ್ನಿಶ್ಯಾಮಕದಳ ರಕ್ಷಿಸಿ ಸುರಕ್ಷಿತವಾಗಿ ಮನೆ ಸೇರಿಸಿದೆ.

ಮಂಗಳವಾರ ತಡರಾತ್ರಿ ಕಾಗಿನೆಲೆ ಠಾಣೆಯಿಂದ ಮನೆಗೆ ಬರುತ್ತಿರುವಾಗ ಕರ್ಜಗಿ- ಕಲಕೋಟಿ ವರದಾ ಸೇತುವೆ ಮೇಲೆ ಬೈಕ್‍ನಲ್ಲಿ ತೆರಳುವಾಗ ನೀರಿನ ಸೆಳೆವಿಗೆ ಸಿಕ್ಕು ನದಿಯಲ್ಲಿ ಕೊಚ್ಚಿಹೋಗಿ ಸೇತುವೆಯಿಂದ 500 ಮೀಟರ್ ಅಂತರದಲ್ಲಿ ಗಿಡವೊಂದರ ಆಶ್ರಯಪಡೆದು ನೆರವಿಗಾಗಿ ಕೂಗಾಡುತ್ತಿದ್ದ ಎನ್ನಲಾಗಿದೆ.

ಸ್ಥಳೀಯ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ಅಪರ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾ ಅಗ್ನಿಶ್ಯಾಮಕ ಅಧಿಕಾರಿ ಸೋಮಶೇಖರ ಅಗಡಿ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸ್ಥಳಕ್ಕೆ ಆಗಮಿಸಿ ತಂಡದೊಂದಿಗೆ ಪೇದೆಯನ್ನು ರಕ್ಷಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

#Karnataka #Rain #Belagavi #NorthKarnataka #Monsoon #Maharashtra #Flood

Continue Reading
Advertisement

Trending