Connect with us

ದಿನದ ಸುದ್ದಿ

ಹತ್ತಿ ಬೆಳೆಗಾರರಿಗೆ ಮಹತ್ವದ ಸಲಹೆಗಳು : ಮಿಸ್ ಮಾಡ್ದೆ ಓದಿ

Published

on

ಮ್ಮ ರಾಜ್ಯದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಹತ್ತಿಯು ಒಂದಾಗಿದ್ದು, 2020ನೇ ಮುಂಗಾರು ಹಂಗಾಮಿನಲ್ಲಿ ದಾವಣಗೆರೆ ಜಿಲ್ಲೆಯಲ್ಲಿ 10,427 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆಯುವ ಗುರಿ ಹೊಂದಲಾಗಿದೆ.

ಸುಧಾರಿತ ಕ್ರಮಗಳಾದ ಸುಧಾರಿತ ತಳಿಗಳು, ಬೇಸಾಯ ಪದ್ಧತಿಗಳು, ಕೀಟ ಹಾಗೂ ರೋಗಗಳ ಸಮಗ್ರ ನಿರ್ವಹಣಾ ಕ್ರಮಗಳನ್ನು ಅನುಸರಿಸುವುದರಿಂದ ನಿರೀಕ್ಷಿತ ಗುಣಮಟ್ಟದ ಇಳುವರಿಯ ಜೊತೆಗೆ ಉತ್ತಮ ಆದಾಯ ಗಳಿಸಬಹುದಾಗಿದೆ.

ಬಿತ್ತನೆ ಕಾಲ

ವಿಜಾತಿ ಶಕ್ತಿಮಾನ್ ತಳಿಗಳನ್ನು ಮೇ ತಿಂಗಳಿನಿಂದ ಜೂನ್ ತಿಂಗಳ ವರೆಗೆ (ಡಿ.ಹೆಚ್.ಬಿ-105, ಡಿ.ಸಿ.ಹೆಚ್ 32 ಮತ್ತು ವರಲಕ್ಷ್ಮಿ ತಳಿಗಳು) ಹಾಗೂ ಸ್ವಜಾತಿ ಶಕ್ತಿಮಾನ್ ತಳಿಗಳನ್ನು ಮೇ ತಿಂಗಳಿನಿಂದ ಜುಲೈ (ಎನ್.ಹೆಚ್.ಹೆಚ್44 ಮತ್ತು ಡಿ.ಹೆಚ್.ಹೆಚ್11 ತಳಿಗಳು) ತಿಂಗಳವರೆಗೆ ಬೆಳೆಯಬಹುದಾಗಿದೆ.

ಬೀಜ ಪ್ರಮಾಣ ಮತ್ತು ಅಂತರ

ಪ್ರತಿ ಎಕರೆಗೆ 0.5 ಕಿ.ಗ್ರಾಂ. ಗುಂಜು ರಹಿತ ಹತ್ತಿಯ ಬೀಜಗಳನ್ನು ಸಾಲಿನಿಂದ ಸಾಲಿಗೆ 3 ಅಡಿ ಅಂತರದಲಿ ಹಾಗೂ ಗಿಡದಿಂದ ಗಿಡಕ್ಕೆ 2 ಅಡಿ ಅಂತರ ನೀಡಿ ಬಿತ್ತನೆ ಮಾಡುವುದು. ಪ್ರಮಾಣಿತ ಬಿಟಿ ಹತ್ತಿ ಬೀಜಗಳನ್ನು ಅಧಿಕೃತ ಮಾರಾಟಗಾರರಿಂದ ಖರೀದಿಸಿ ಬೆಳೆಯಬಹುದಾಗಿದೆ.

 • ಬಿಟಿ ಹತ್ತಿಯ ಜೊತೆಗೆ ಬಿಟಿ ಹತ್ತಿರಹಿತ ಹತ್ತಿಯನ್ನುಅಥವಾ ಬಿಟಿ ಹತ್ತಿ ಪ್ಯಾಕ್‍ನೊಂದಿಗೆ ನೀಡುವ ರೆಫ್ಯೂಜಿ ಬೀಜಗಳನ್ನು ರೈತರು ತಪ್ಪದೆ ಆಶ್ರಯ ಬೆಳೆಗಳಾಗಿ ಬೆಳೆಯುವುದು.
 • ಹೆಚ್ಚು ಗುಲಾಬಿ ಕಾಯಿ ಕೊರಕದ ಭಾಧೆಯಿದ್ಧಲ್ಲಿ ಅಲ್ಪ ಕಾಲಾವಧಿ ಬಿಟಿ ಹತ್ತಿ ಹೈಬ್ರಿಡನ್ನು ಬೆಳೆಯುವುದು.

ಬೀಜೋಪಚಾರ

ಪ್ರಾರಂಭದಲ್ಲಿ ಬರುವ ಹತ್ತಿ ರಸ ಹೀರುವ ಕೀಟಗಳನ್ನು ಹತೋಟಿಯಲ್ಲಿಡಲು ಪ್ರತಿ ಕಿ.ಗ್ರಾಂ. ಹತ್ತಿ ಬೀಜವನ್ನು 10 ಗ್ರಾಂ ಇಮಿಡಾಕ್ಲೋಪ್ರಿಡ್-70 ಡಬ್ಲ್ಯೂ.ಎಸ್. ನಿಂದ ಉಪಚಾರ ಮಾಡಿ ಬಿತ್ತನೆ ಮಾಡುವುದು.

ಪೋಷಕಾಂಶಗಳ ನಿರ್ವಹಣೆ

ಬಿತ್ತನೆಗೆ 2-3 ವಾರಗಳ ಮೊದಲು 5 ಟನ್ ಕೊಟ್ಟಿಗೆ ಗೊಬ್ಬರ / ಸಾವಯವ ಗೊಬ್ಬರವನ್ನು ಪ್ರತಿ ಎಕರೆಗೆ ಬಳಸಬೇಕು. ಹಾಗೂ ಪ್ರತಿ ಎಕರೆಗೆ 60ಕಿ.ಗ್ರಾಂ. ಸಾರಜನಕ, 30 ಕಿ.ಗ್ರಾಂ. ರಂಜಕ, 30 ಕಿ.ಗ್ರಾಂ. ಪೊಟ್ಯಾಷ್ ರಾಸಾಯನಿಕ ಗೊಬ್ಬರಗಳ ಶಿಪಾರಸಿದ್ದು, ಬಿತ್ತನೆ ಸಮಯದಲ್ಲಿ ಅರ್ಧದಷ್ಟು ಸಾರಜನಕ, ಪೂರ್ತಿ ಪ್ರಮಾಣದ ರಂಜಕ & ಪೊಟ್ಯಾಶ್ ಗೊಬ್ಬರಗಳನ್ನು ಹಾಕಬೇಕು.

ಉಳಿದ ಶೇ.50ರ ಸಾರಜನಕವನ್ನು ಬಿತ್ತನೆಯಾದ 60 ದಿನಗಳ ನಂತರ ಮೇಲುಗೊಬ್ಬರವಾಗಿ ನೀಡುವುದು. ಬಿತ್ತನೆ ಸಮಯದಲ್ಲಿ 10ಕಿ.ಗ್ರಾಂ. ಮೆಗ್ನಿಷಿಯಂ ಸಲ್ಫೇಟ್ ಪ್ರತಿ ಎಕರೆಗೆ ಬಳಸುವುದು.
ಹತ್ತಿಯಲ್ಲಿ ಸಮತೋಲನ ಗೊಬ್ಬರಗಳ ಬಳಕೆ ಅತೀ ಅಗತ್ಯವಾಗಿದ್ದು, ಕೆಲವೊಂದು ರೈತರು ಪೊಟ್ಯಾಷ್ ಗೊಬ್ಬರಗಳನ್ನು ಬಳಸುತ್ತಿರುವುದಿಲ್ಲ.

ಇದರಿಂದಾಗಿ ಕಾಯಿಯ ಗಾತ್ರ ಕಡಿಮೆಯಾಗುವುದಲ್ಲದೆ ಇಳುವರಿಯು ಕಡಿಮೆಯಾಗುವುದು. ಪೊಟ್ಯಾಷ್ ಗೊಬ್ಬರದ ಬಳಕೆಯಿಂದಾಗಿ ಕಾಂಡ ಮತ್ತು ಕಾಯಿಯ ತೊಗಟೆ ದಪ್ಪನಾಗಿ ರೋಗ ಹಾಗೂ ಕೀಟದ ಹಾವಳಿ ಕಡಿಮೆಯಾಗುವುದು.

ಕಳೆ ನಿರ್ವಹಣೆ

ಬಿತ್ತನೆಯಾದ ದಿವಸ/ಮಾರನೆ ದಿವಸ ಎಕರೆಗೆ 400 ಗ್ರಾಂಡೈಯುರಾನ್ ಶೇ.80 ಅಥವಾ 800 ಮಿ.ಲೀ. ಫ್ಲೋಕ್ಲೋರಾಲಿನ್ 45ಇ.ಸಿ. ಅಥವಾ 1.3ಲೀ. ಪೆಂಡಿಮೆಥಾಲಿನ್ ಶೇ.30ಇ.ಸಿ. ಅಥವಾ 800ಮಿ.ಲೀ. ಬ್ಯೂಟಾಕ್ಲೋರ್ 50 ಇ.ಸಿ.ನ್ನು 300 ಲೀಟರ್ ನೀರಿನಲ್ಲಿ ಬೆರಸಿ ಸಿಂಪಡಿಸುವುದು. ಸಿಂಪರಣೆ ಸಮಯದಲ್ಲಿ ಮಣ್ಣಿನಲ್ಲಿ ಸಾಕಷ್ಟು ತೇವಾಂಶವಿರಬೇಕು. ಬಿತ್ತಿದ 30 ದಿವಸಗಳ ನಂತರ 3 ರಿಂದ 4 ಬಾರಿ ಅಳವಾಗಿ ಎಡೆಕುಂಟೆ ಹೊಡೆಯುವುದು.

ಅಂತರ ಬೆಳೆ

ಹತ್ತಿಯಜೊತೆಗೆ ಮೆಣಸಿನಕಾಯಿ, ಸೊಯಾ ಆವರೆ, ಬೀನ್ಸ್, ಅಲಸಂದೆ, ಉದ್ದು ಬೆಳೆಗಳನ್ನು 1:1 ಅನುಪಾತದಲ್ಲಿ ಬೆಳೆಯಬಹುದಾಗಿದೆ.

ಜೋಡಿ ಸಾಲು ಪದ್ಧತಿ

ಹತ್ತಿಯನ್ನು 120 ಸೆಂ.ಮೀ-60 ಸೆಂ.ಮೀ-120 ಸೆಂ.ಮೀ ಅಂತರz ಜೋಡಿ ಸಾಲುಗಳಲ್ಲಿ, ಗಿಡದಿಂದ ಗಿಡಕ್ಕೆ 60 ಸೆಂ.ಮೀ ಅಂತರ ನೀಡಿ ಬೆಳೆಯುವುದರಿಂದ ವಿವಿಧ ಅಂತರ ಬೆಳೆಗಳನ್ನು ಬೆಳೆಯಬಹುದಾಗಿದೆ.

ಪ್ರಮುಖ ಸಲಹೆಗಳು

 1. ಪ್ರತಿ ವರ್ಷ ಒಂದೇ ಜಮೀನಿನಲ್ಲಿ ಹತ್ತಿಯು ನಂತರ ಹತ್ತಿ ಬೆಳೆಯದೆ ಬೆಳೆ ಪರಿವರ್ತನೆ ಮಾಡುವುದು.
 2. ಪ್ರಮಾಣಿತ ಹಾಗೂ ಶಿಫಾರಸ್ಸು ಮಾಡಿದ ಬಿತ್ತನೆ ಬೀಜಗಳನ್ನು ಬಳಸುವುದು.
 3. ಬಿ.ಟಿ. ಹತ್ತಿಯ ಜೊತೆಗೆ ಬಿ.ಟಿ. ಹತ್ತಿ ರಹಿತ ಹತ್ತಿಯನ್ನು ಅಥವಾ ಬಿ.ಟಿ. ಹತ್ತಿ ಪ್ಯಾಕ್‍ನೊಂದಿಗೆ ನೀಡುವ ರೆಫ್ಯೂಜಿ ಬೀಜಗಳನ್ನು ರೈತರು ತಪ್ಪದೆ ಆಶ್ರಯ ಬೆಳೆಗಳಾಗಿ ಬೆಳೆಯುವುದು.
 4. ಹೊಲದ ಸುತ್ತಲೂ ಪ್ರತಿ 20 ಸಾಲು ಹತ್ತಿಗೆ 1 ಸಾಲಿನಲ್ಲಿ ಬೆಂಡೆ ಬೀಜ ಹಾಕುವುದರಿಂದ ಕೀಟಗಳ ಹಾವಳಿ ಕಡಿಮೆಯಾಗುವುದು.
 5. ಶಿಫಾರಸ್ಸಿನ ರಸಾಯನಿಕ ಗೊಬ್ಬರಗಳ ಜೊತೆಗೆ ಸಾವಯವ ಗೊಬ್ಬರಗಳನ್ನು ಬಳಸುವುದರಿಂದ ಅಧಿಕ ಇಳುವರಿಯೊಂದಿಗೆ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಲು ಸಾಧ್ಯ.
 • ಹೆಸರು ಬೆಳೆಯ ಬೇಸಾಯ ಕ್ರಮಗಳು: ತಳಿಗಳು: ಪಿ.ಎಸ್.16

ಬೀಜ ಪ್ರಮಾಣ ಮತ್ತು ಅಂತರ

ಎಕರೆಗೆ 6-8 ಕಿ.ಗ್ರಾಂ ಬಿತ್ತನೆ ಬೀಜ ಬಳಸುವುದು. ಸಾಲಿನಿಂದ ಸಾಲಿಗೆ 12 ಅಂಗುಲ ಹಾಗೂ ಗಿಡದಿಂದಗಿಡಕ್ಕೆ 4 ಅಂಗುಲ ಅಂತರ ನೀಡಿ ಬಿತ್ತನೆ ಮಾಡುವುದು.

ಬೀಜೋಪಚಾರ

ಎಕರೆಗೆ ಬೇಕಾಗುವ ಬೀಜಕ್ಕೆ 200 ಗ್ರಾಂ. ರೈಜೋಬಿಯಂ ಹಾಗೂ 200 ಗ್ರಾಂ ಪಿ.ಎಸ್.ಬಿ.ಯನ್ನು ಅಂಟುದ್ರಾವಣ ಬಳಸಿ ಉಪಚರಿಸುವುದು.

ಪೋಷಕಾಂಶ ನಿರ್ವಹಣೆ

 • ಎಕರೆಗೆ 3 ಟನ್ ಸಾವಯವ ಗೊಬ್ಬರವನ್ನು ಬಿತ್ತನೆ 2-3 ವಾರಗಳ ಮುನ್ನ ಬಳಸುವುದು.
 • ಎಕರೆಗೆ 5 ಕೆ.ಜಿ. ಸಾರಜನಕ, 10 ಕೆ.ಜಿ. ರಂಜಕ ಹಾಗೂ 10 ಕೆ.ಜಿ. ಪೊಟ್ಯಾಷ್‍ನ್ನು ಬಿತ್ತನೆ ಸಮಯದಲ್ಲಿ ನೀಡುವುದು.

ಕಳೆ ನಿರ್ವಹಣೆ

ಬಿತ್ತಿದ ದಿವಸ/ ಮಾರನೆಯ ದಿವಸ ಪ್ರತಿ ಎಕರೆಗೆ 1.3 ಲೀ ಪೆಂಡಿಮಿಥಲಿನ್ 30ಇ.ಸಿ ಕಳೆನಾಶಕವನ್ನು 300 ಲೀ ನೀರಿನಲ್ಲಿ ಬೆರೆಸಿ ಸಿಂಪಡಿಸುವುದು.

ಸಸ್ಯ ಸಂರಕ್ಷಣೆ

 • ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೀಟ ಮತ್ತು ರೋಗಬಾಧೆ ಕಂಡಾಗ ಮಾತ್ರ ತೆಗೆದುಕೊಳ್ಳಬೇಕು.
 • ಎಲೆ ಜಿಗಿ ಹುಳು, ಸಸ್ಯ ಹೇನು ಹತೋಟಿಗಾಗಿ 1.7ಮಿ.ಲೀ. ಡೈಮಿಥೋಯೇಟ್-30 ಇ.ಸಿ.ನ್ನು 250 ಲೀ. ಸಿಂಪರಣಾ ದ್ರಾವಣದೊಂದಿಗೆ ಸಿಂಪಡಿಸುವುದು.
 • ಬೂದಿ ರೋಗದ ಹತೋಟಿಗೆ ಕಾರ್ಬೆನ್‍ಡೈಜಿಂ. 50 ಡಬ್ಲ್ಯೂಪಿನ್ನು ಒಂದು ಗ್ರಾಂ.ನಂತೆ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವುದು.

ಉದ್ದು ಬೆಳೆಯ ಬೇಸಾಯ ಕ್ರಮಗಳು

 • ತಳಿ:- ಕರಂಗಾವ್-3, ಟಿ-9, ರಶ್ಮಿ (ಎಲ್.ಬಿ.ಜಿ.625) ಬೀಜಗಳ ಪ್ರಮಾಣ 8-10 ಕೆ.ಜಿ. ಪ್ರತಿ ಎಕರೆಗೆ.
 • ಬೀಜ ಪ್ರಮಾಣ ಮತ್ತು ಅಂತರ
 • ಎಕರೆಗೆ 6-8 ಕಿ.ಗ್ರಾಂ ಬಿತ್ತನೆ ಬೀಜ ಬಳಸುವುದು. ಸಾಲಿನಿಂದ ಸಾಲಿಗೆ 12 ಅಂಗುಲ ಹಾಗೂ ಗಿಡದಿಂದ ಗಿಡಕ್ಕೆ 4 ಅಂಗುಲ ಅಂತರ ನೀಡಿ ಬಿತ್ತನೆ ಮಾಡುವುದು.

ಬೀಜೋಪಚಾರ

ಬಿತ್ತನೆಗೆ ಮುಂಚಿತವಾಗಿ ಬರ ನಿರೋಧಕ ಗುಣ ಹೆಚ್ಚಿಸಲು ಶೇ.2 ರಕ್ಯಾಲ್ಸಿಯಂಕ್ಲೋರೈಡ್ ದ್ರಾವಣದಲ್ಲಿ ಅರ್ಧತಾಸು ನೆನೆಸಿ, ನಂತರ ನೆರಳಿನಲ್ಲಿ ಕನಿಷ್ಠ 7 ತಾಸು ಒಣಗಿಸಬೇಕು ನಂತರ ಎಕರೆಗೆ ಬೇಕಾಗುವ ಬೀಜಕ್ಕೆ 200 ಗ್ರಾಂ. ರೈಜೋಬಿಯಂ ಹಾಗೂ 200 ಗ್ರಾಂ ಪಿ.ಎಸ್.ಬಿ.ಯನ್ನು ಅಂಟು ದ್ರಾವಣ ಬಳಸಿ ಉಪಚರಿಸುವುದು.

ಪೋಷಕಾಂಶ ನಿರ್ವಹಣೆ

 • ಎಕರೆಗೆ 3 ಟನ್ ಸಾವಯವಗೊಬ್ಬರವನ್ನು ಬಿತ್ತನೆ 2-3 ವಾರಗಳ ಮುನ್ನ ಬಳಸುವುದು.
 • ಎಕರೆಗೆ 5 ಕೆ.ಜಿ. ಸಾರಜಕನ, 10 ಕೆ.ಜಿ.ರಂಜಕ ಹಾಗೂ 10 ಕೆ.ಜಿ. ಪೊಟ್ಯಾಷ್‍ನ್ನು ಬಿತ್ತನೆ ಸಮಯದಲ್ಲಿ ನೀಡುವುದು.

ಕಳೆ ನಿರ್ವಹಣೆ

ಬಿತ್ತಿದ 2 ದಿನಗಳೊಳಗಾಗಿ ಪ್ರತಿ ಎಕರೆಗೆ 0.8 ಲೀ ಫ್ಲುಕ್ಲೋರಾಲಿನ್ 45ಇ.ಸಿ ಅಥವಾ 1.2 ಲೀ. ಅಲಾಕ್ಲೋರ್ 50 ಇ.ಸಿ ಕಳೆನಾಶಕಗಳನ್ನು 300 ಲೀ. ನೀರಿನಲ್ಲಿ ಬೆರೆಸಿ ಸಿಂಪಡಿಸುವುದು.

ಸಸ್ಯ ಸಂರಕ್ಷಣೆ

 • ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೀಟ ಮತ್ತು ರೋಗ ಬಾಧೆ ಕಂಡಾಗ ಮಾತ್ರ ತೆಗೆದುಕೊಳ್ಳಬೇಕು.
 • ಎಲೆ ಜಿಗಿ ಹುಳು, ಸಸ್ಯ ಹೇನು ಹತೋಟಿಗಾಗಿ 1.7 ಮಿ.ಲೀ. ಡೈಮಿಥೋಯೇಟ್-30 ಇ.ಸಿ.ನ್ನು 250 ಲೀ. ಸಿಂಪರಣಾ ದ್ರಾವಣದೊಂದಿಗೆ ಸಿಂಪಡಿಸುವುದು.
 • ಬೂದಿ ರೋಗದ ಹತೋಟಿಗೆ ಕಾರ್ಬನ್‍ಡೈಜಿಂ. 50 ಡಬ್ಲ್ಯೂಪಿ ನ್ನು ಒಂದು ಗ್ರಾಂ.ನಂತೆ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವುದು ಎಂದು ಕೃಷಿ ಇಲಾಖೆ ಪ್ರಕಟಣೆ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Advertisement

ದಿನದ ಸುದ್ದಿ

ಬಾಯಿ ಬಿಟ್ಟರೆ ಬಣ್ಣಗೇಡಿನಂತಾಗಿದೆ ಮೋದಿ ಭಾಷಣಗಳು : ಸಿದ್ದರಾಮಯ್ಯ

Published

on

ಸುದ್ದಿದಿನ, ಬೆಂಗಳೂರು:ಬಾಯಿ ಬಿಟ್ಟರೆ ಬಣ್ಣಗೇಡು ಎಂಬಂತಾಗಿದೆ ಪ್ರಧಾನಿ ನರೇಂದ್ರ ಮೋದಿಯವರ ಭಾಷಣಗಳು. ನಿಯಂತ್ರಣ ಮೀರಿ ಹರಡುತ್ತಿರುವ ಕೊರೊನಾ ಸೋಂಕಿನಿಂದ ತತ್ತರಿಸಿರುವ ಜನರಲ್ಲಿ ಆತ್ಮವಿಶ್ವಾಸ ತುಂಬುವ ಯಾವ ನಿರ್ಧಿಷ್ಟ ಯೋಜನೆಗಳ ಪ್ರಸ್ತಾವಗಳೇ ಇಲ್ಲದ ಪ್ರಧಾನಿ ಭಾಷಣ ಅಸಹಾಯಕ ನಾಯಕನ ಗೋಳಾಟದಂತಿತ್ತು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.

ಬೆಂಗಳೂರಿನಲ್ಲಿ ಮಾತನಾಡಿದ ಅವರು ಬಡವರಿಗೆ ಉಚಿತ ಆಹಾರ ಧಾನ್ಯ ನೀಡುವ ಗರೀಬ್ ಕಲ್ಯಾಣ ಯೋಜನೆಯನ್ನು ನವಂಬರ್ ತಿಂಗಳ ವರೆಗೆ ಮುಂದುವರಿಸಿರುವುದು ಸ್ವಾಗತಾರ್ಹ. ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಸೋನಿಯಾ ಗಾಂಧಿಯವರು ತಿಂಗಳ ಹಿಂದೆಯೇ ಈ ಬೇಡಿಕೆ ಇಟ್ಟಿದ್ದರು. ಅದನ್ನು ಒಪ್ಪಿಕೊಂಡದ್ದಕ್ಕೆ ಧನ್ಯವಾದಗಳು.

ಕೊರೊನಾ ಸೋಂಕಿನ ತೀವ್ರತೆಯನ್ನು ಅವಲೋಕಿಸಿದರೆ ಇದು ಮುಂದಿನ 2-3 ತಿಂಗಳೊಳಗೆ ಕೊನೆಗೊಳ್ಳುವಂತಹದ್ದಲ್ಲ. ಮುಂದಿನ ದಿನಗಳಲ್ಲಿ ದೇಶದಲ್ಲಿ ಹಸಿವಿನ ಸಮಸ್ಯೆ ಭೀಕರವಾಗಲಿದೆ. ಆದ್ದರಿಂದ ನಮ್ಮ ಸರ್ಕಾರ ರಾಜ್ಯದಲ್ಲಿ ಜಾರಿಗೊಳಿಸಿದ್ದ ಅನ್ನಭಾಗ್ಯದ ಮಾದರಿಯಲ್ಲಿ ಇಡೀ ರಾಷ್ಟ್ರದಲ್ಲಿ ಬಡವರಿಗೆ ಉಚಿತ ಆಹಾರಧಾನ್ಯ ಪೂರೈಸುವ ಶಾಶ್ವತ ಯೋಜನೆಯನ್ನು ಜಾರಿಗೆ ತರಬೇಕೆಂದು ಪ್ರಧಾನಿಯವರನ್ನು ಒತ್ತಾಯಿಸುತ್ತೇನೆ ಎಂದರು.

ದೇಶದ ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ, ಆಮ್ಲಜನಕ ಪೂರೈಕೆ ವ್ಯವಸ್ಥೆ, ವೆಂಟಿಲೇಟರ್ ಗಳ ತೀವ್ರ ಕೊರತೆ ಇದೆ. ವೈದ್ಯರು,ದಾದಿಯರ ಕೊರತೆ ಇದೆ. ದುಬಾರಿ ಚಿಕಿತ್ಸೆ ವೆಚ್ಚದಿಂದ ಜನ ಕೊರೊನಾ ಸೋಂಕಿಗಿಂತ ಕೊರೊನಾ ಚಿಕಿತ್ಸೆಗೆ ಜನ ಹೆದರುವಂತಾಗಿದೆ. ಈ ಬಗ್ಗೆ ರಾಜ್ಯಗಳಿಗೆ ಕೇಂದ್ರ ನೆರವು ಘೋಷಿಸಬಹುದೆಂಬ ನಿರೀಕ್ಷೆ ಹುಸಿಯಾಗಿದೆ.

ಪಿಎಂ ಕೇರ್ಸ್ ನಿಧಿಗೆ ನೆರವಾಗಲು ದೇಶದ ಜನರನ್ನು ವಿನಂತಿಸಿದ್ದ ಪ್ರಧಾನಿಗಳು ಅದರ ಖರ್ಚು-ವೆಚ್ಚದ ಸಂಪೂರ್ಣ ವಿವರವನ್ನು ದೇಶದ ಮುಂದಿಟ್ಟು ಪಾರದರ್ಶಕವಾಗಿ ನಡೆದುಕೊಳ್ಳಬಹುದೆಂಬ ನಿರೀಕ್ಷೆಯೂ ಹುಸಿಯಾಗಿದೆ. ಇದಕ್ಕೆ ಚೀನಾದಿಂದಲೂ ದೇಣಿಗೆ ಪಡೆಯಲಾಗಿದೆ ಎಂಬ ಆರೋಪಗಳಿವೆ. ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕಿತ್ತು ಎಂದು ಹೇಳಿದರು.

ಸತತ 23ನೇ ದಿನ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗಿದೆ. ಇದರಿಂದ ಆಹಾರಧಾನ್ಯ, ತರಕಾರಿ, ಹಣ್ಣು ಸೇರಿದಂತೆ ದಿನಬಳಕೆಯ ವಸ್ತುಗಳ ಬೆಲೆಯೂ ಏರುತ್ತಿದೆ. ಈ ತೈಲಬೆಲೆ ಏರಿಕೆ ಇನ್ನೆಷ್ಟು ದಿನಗಳ ಕಾಲ ಏರಲಿದೆ ಎಂದಾದರೂ ಹೇಳಿಬಿಟ್ಟಿದ್ದರೆ ಜನ ಕೆಟ್ಟ ದಿನಗಳಿಗೆ ಹೊಂದಿಕೊಳ್ಳಲು ಸಿದ್ದವಾಗುತ್ತಿದ್ದರು.

ಹುತಾತ್ಮ 20 ವೀರಯೋಧರ ಬಲಿದಾನ ವ್ಯರ್ಥವಾಗುವುದಿಲ್ಲ ಎಂದು ಘೋಷಿಸಿದ್ದ ಪ್ರಧಾನಿ ಮೋದಿಯವರು, ಇದಕ್ಕಾಗಿ ಏನು ಮಾಡಿದ್ದಾರೆ ಎನ್ನುವುದನ್ನು ತಿಳಿಸಿದ್ದರೆ ನೊಂದ ದೇಶದ ಜನತೆ ಮತ್ತು ವೀರಯೋಧರ ಕುಟುಂಬಕ್ಕೆ ಸಾಂತ್ವನ ಮಾಡಿದ ಹಾಗಾಗುತ್ತಿತ್ತು. ಈ ಘಟನೆಯ ಪ್ರಸ್ತಾವವನ್ನೇ ಮಾಡದೆ ನಿರ್ಲಕ್ಷಿಸಿರುವುದು ವಿಷಾದನೀಯ ಎಂದು ಕಿಡಿಕಾರಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ರಾಜ್ಯದಲ್ಲಿ ಒಟ್ಟು 18016 ಕೊರೋನಾ ಸೋಂಕಿತರು, ಗುರುವಾರ 1502 ಕೇಸ್ ಪತ್ತೆ..!

Published

on

ಸುದ್ದಿದಿನ, ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ದಿನೇ ದಿನೇ ಶರವೇಗದಲ್ಲಿ ಹೆಚ್ಚುತ್ತಿದೆ. ನಾಡಿನ ಜನತೆಯಂತೂ ಭಯದಲ್ಲಿ ಬದುಕು ಸಾಗಿಸುವ ಅನಿವಾರ್ಯತೆ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮಗಳಿಗೂ ಕೊರೋನಾ ಸೋಂಕು ಹರಡಿದ್ದು ಸೋಂಕು ಹರಡದಂತೆ ತಡೆಹಿಡಿಯಲು ಇನ್ನು ಎಷ್ಟು ದಿನಗಳಾಗುತ್ತದೋ‌ ಎಂಬ ಪ್ರಶ್ನೆ ಜನ ಸಾಮಾನ್ಯನ್ನು ಕಾಡುತ್ತಿದೆ.

ಕೋವಿಡ್19 ಮಾಹಿತಿ: 2ನೇ ಜುಲೈ 2020

 • ಒಟ್ಟು ಪ್ರಕರಣಗಳು: 18016
 • ಮೃತಪಟ್ಟವರು: 272
 • ಗುಣಮುಖರಾದವರು: 8334
 • ಹೊಸ ಪ್ರಕರಣಗಳು: 1502

ಇತರೆ ಮಾಹಿತಿ

ಜಿಲ್ಲಾವಾರು ಸೋಂಕಿತರು, ಟೆಲಿಮೆಡಿಸಿನ್ ಸೌಲಭ್ಯದ ಮಾಹಿತಿ, ಕೊರೊನ ನಿಗಾ ಅಪ್ಲಿಕೇಶನ್ ಹಾಗೂ ಸಹಾಯವಾಣಿ ವಿವರಗಳಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಪರಿಸರಪ್ರೇಮಿ ಕಾಮೇಗೌಡರಿಗೆ ಜೀವತಾವಧಿ ಉಚಿತ ಬಸ್ ಪಾಸ್ : ಯಡಿಯೂರಪ್ಪ

Published

on

ಸುದ್ದಿದಿನ, ಬೆಂಗಳೂರು: ಅಪರೂಪದ ಪರಿಸರ ಕಾಳಜಿಯ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ದಾಸನದೊಡ್ಡಿಯ ಕಾಮೇಗೌಡ ಅವರಿಗೆ, ಮುಖ್ಯಮಂತ್ರಿಯವರ ಸೂಚನೆ ಮೇರೆಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಜೀವಿತಾವಧಿ ಉಚಿತ ಬಸ್ ಪಾಸ್ ನೀಡಿದೆ.

ಮಾಧ್ಯಮವೊಂದರಲ್ಲಿ ಈ ಬಗ್ಗೆ ತಮ್ಮ ಆಸೆ ವ್ಯಕ್ತಪಡಿಸಿದ್ದ ಕಾಮೇಗೌಡರ ಅಭಿಲಾಷೆಯಂತೆ, ಉಚಿತ ಪಾಸ್ ವಿತರಿಸಲು ಮಾನ್ಯ ಮುಖ್ಯಮಂತ್ರಿಗಳು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೂಚನೆ ನೀಡಿದ್ದರು.

ಗೌಡರ ಪರಿಸರ ಕಾಳಜಿಗೆ ಮತ್ತೊಮ್ಮೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿರುವ ಮುಖ್ಯಮಂತ್ರಿಗಳು, ಕಾಮೇಗೌಡರ ಪರಿಸರ ಸೇವೆ ಬಗ್ಗೆ ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ತಮ್ಮ ‘ಮನ್ ಕಿ ಬಾತ್ ‘ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ್ದನ್ನು ಸ್ಮರಿಸಿಕೊಂಡಿದ್ದಾರೆ.

ಕಾಮೇಗೌಡ ಅವರಂತಹ, ಬೆಲೆ ಕಟ್ಟಲಾಗದ ಪರಿಸರ ಕಾಳಜಿಯುಳ್ಳವರ ಸಂತತಿ ಇನ್ನೂ ಹೆಚ್ಚಾಗಲಿ ಎಂದು ಅಶಿಸುವುದಾಗಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending