Connect with us

ಲೋಕಾರೂಢಿ

ನಂಗೂ ಹಿಂಗೆ ಆಗಿತ್ತು..! ಗೌಡ್ರು ಮತ್ತು ಈಶನ ಮೀ ಟೂ ವೃತ್ತಾಂತ

Published

on

ಹೊಟ್ಟೆ ಬಹಳ ಹಸಿದಿತ್ತು. ಅದೇ ಸಂದರ್ಭ ನಮ್ಮ ಗೌಡ್ರು, ಹೇ ಬಾರೋ ಈಶ ಊಟ ಮಾಡೋ ಅಂತಾ ಕರೆದ್ರು.
ಹೊಟ್ಟೆ ಹಸಿದಿದ್ದರಿಂದ ತಡ ಮಾಡದೇ ಸೌಕಾರ್ ಮನೆ ಅಂಗಳದ ಅಂಚಿಗೆ ಬಡ ಬಡಾನೆ ಹೋಗಿ ಕುಳಿತೆ. ಗೌಡ್ರು ತನ್ನ ಹೆಂಡತಿಗೆ ಕೂಗಿ, ಹೇ ಈಶ ಬಂದವ್ನೆ ಕಣೇ ಏನಾದ್ರೂ ಊಟ ಉಳಿದಿದ್ರೆ ಕೊಡು ಅಂತಾ. ಅತ್ತ ಕಡೆಯಿಂದ ಸ್ವಲ್ಪ ತಡೀರಿ ಕೊಡ್ತೀನಿ ಅಂತಾ ಧ್ವನಿ ಕೇಳಿಬಂತು.
ಏ ಈಶ… ಊಟ ಕೊಡುವರೆಗೂ ಏನ್ ಮಾಡ್ತೀ, ಮನೆ ಸುತ್ತಮುತ್ತ ಸ್ವಲ್ಪ ಕಸ ಹೆಚ್ಚಾಗೈತೆ ಸ್ವಚ್ಛಗೊಳಿಸು, ಸ್ವಲ್ಪ ಕಟ್ಟಿಗೆ ಕಡಿ… ಅಷ್ಟರಲ್ಲಿ ಊಟ ಬರುತ್ತೆ ಅಂದ್ರು ನಮ್ಮ ಗೊಂಚಗಾರ್ರ‌್‌. ಇದು ನಮ್ ಹಳ್ಳೀಲಿ ಸರ್ವೇ ಸಾಮಾನ್ಯ. ಕೆಲಸ ಮಾಡಲ್ಲ ಅಂತ ಹೇಳಿದ್ರೆ ಹೊಟ್ಟೆಗೆ ಹಿಟ್ಟು ಸಿಗಕ್ಕಿಲ್ಲ. ಬಿಸಿಲ ಝಳ ಲೆಕ್ಕಿಸದೇ ತಕ್ಷಣ ಮನೆ ಸುತ್ತಮುತ್ತ ಸೌಕಾರ್ ಮೆಚ್ಚೋ ರೀತಿ ಸ್ವಚ್ಛಗೊಳಿಸಿದೆ. ಅಷ್ಟರಲ್ಲಿ ಮನೆಯೊಡತಿ ಏನ್ರಿ ಈಶನಿಗೆ ಕರೀರ‌್ರಿ ಊಟ ಕೊಡ್ತೀನಿ ಅಂತಾ ಕೂಗಿ ಹೇಳಿದ ಧ್ವನಿ ನನ್ ಕಿವಿಗೆ ಬಿತ್ತು.
ಅಷ್ಟ್ರಲ್ಲಿ ಎಲ್ಲ ಕೆಲಸ ಮುಗಿಸಿದ್ದೇ. ಕೈ ಕಾಲನ್ನು ಅರೆಬರೆ ತೊಳ್ಕೊಂಡು ತಡಕೆಗೆ ಸಿಗಿಸಿದ್ದ ತಟ್ಟೆ ತಗೊಂಡು ತಂಗಳು ಮುದ್ದೆಗೆ ಕೈವೊಡ್ಡಿದೆ. ಆ ಮಹಾತಾಯಿ ಕೊಟ್ಟ ಊಟವನ್ನ ಬಗಾಬಗನೇ ತಿಂದು ಕೈಮುಗಿದು ಮನೆಯತ್ತ ಹೆಜ್ಜೆ ಹಾಕಿದೆ. ಈ ರೀತಿ ಬಹಳಷ್ಟು ಬಾರಿ ನನ್ನ ಹಸಿದ ಹೊಟ್ಟೆಗೆ ನನ್ ಗೌಡ್ರು ಅನ್ನ ಹಾಕಿದ್ದಾರೆ. ಜತೆಗೆ ದೇಹ ದಂಡಿಸೋಕೆ ಕೆಲಸ ಕೊಟ್ಟೋರೆ.
ನನ್ನ ಹೈಕ್ಳು, ನನ್ನ ಸುತ್ತಲಿನ ಹುಡುಗರ ಮುಂದೆ ಗೌಡ್ರು ಮುದ್ದೆ ಕೊಡ್ತಾ ಇದ್ದ ವಿಷಯ ಎಷ್ಟೋ ವರ್ಷದ ನಂತರವೂ ಪದೇ ಪದೆ ಸ್ಮರಿಸುತ್ತಲೇ ಇದ್ದೆ… ಅವರು ದೊಡ್ಡವಾರದಾಗ್ಲೂ ಹೇಳ್ತಾ ಇದ್ದೆ… ಒಂದ್ ಸಾರಿ ಆ ಹುಡುಗ್ರು ಏ ನಿನಗೆ ಮೆದುಳು ಇರಕ್ಕಿಲ್ಲ. ನೀನು ಅವರ ಮನೆಯಲ್ಲಿ ನಿನಗೆ ಗೊತ್ತಿಲ್ದೆ ಮೈಮುರಿದು ಕೆಲಸ ಮಾಡಿದ್ದೀಯಾ, ಆಗ ಹಸಿವಿನಲ್ಲಿ ನಿನಗೆ ಕಂಡಿರಕ್ಕಿಲ್ಲ. ಕಂಡಿದ್ರೂ ಊಟ ಸಿಗಕ್ಕಿಲ್ಲ ಅಂತಾ ಭಯದಲ್ಲಿ ಮಾಡಿದ್ದೀಯಾ. ಅದನ್ನು ಆ ಗೌಡ ಬಳಸಿಕೊಂಡಿದ್ದಾನೆ. ಅದು ಒಂದು ರೀತಿ ಶೋಷಣೆ ಅಂದ್ರು, ನನ್ನ ಪಕ್ಕ ಇದ್ದ ನನ್ನ ವಾರಿಗೆಯವ ರಂಗ ಕೂಡ ಬೀಡಿ ಸೇತ್ತಾ ಅಯ್ಯೋ ನಮ್ಮ ಗೌಡ್ರು ಮನೆಯಲ್ಲಿ ‘‘ನಂಗೂ ಹಿಂಗೆ ಆಗಿತ್ತು’’ ಅಂತಾ ಹೇಳ್ದಾ.
ಈ ಸುದ್ದಿ ಊರೆಲ್ಲ ಹಬ್ಬಿ ಬಿಡ್ತು. ಸುತ್ತಮುತ್ತಲ ಹತ್ತಾರು ಹಳ್ಳಿಗಳಲ್ಲೂ ಕೆಲ ಮಂದಿ ಹೌದು ‘‘ನಂಗೂ ಆಗಿತ್ತು’’ ಅಂತಾ ಜಗಳಿಕಟ್ಟೆ ಮೇಲೆ ಚೌಕಾಬಾರ ಆಡ್ತಾ ಹೇಳಿಕೊಂಡ್ರು. ಒಂದಿಷ್ಟು ಜನ ನಾವು ಹೇಳಿದ್ದು ಸರಿ ಐತೆ, ಇನ್ಮುಂದೆ ಯಾರಿಗೂ ಹಿಂಗಾಗ್ಬಾರ‌್ದು ಅಂದ್ರು. ಬಹಳಷ್ಟು ಜನ ಇಷ್ಟು ವರ್ಷ ಆದ್ಮೇಲೆ ಇದನ್ಯಾಕೆ ಹೇಳ್ತಾವ್ನೇ, ಅವಾಗ ಬಾಯಿಗೆ ಏನ್ ಬಟ್ಟೆ ತುರ‌್ಕೊಂಡಿದ್ನಾ ಅಂತಾ ಧಮ್ಕಿ ಹಾಕಿದ್ರು. ಅವರಿಗೇನು ಗೊತ್ತು ಅಂದಿನ ನಮ್ಮ ಹಸಿವು, ಭಯದ ಪರಿಸ್ಥಿತಿ.
ನಾನೇನೂ ಉದ್ದೇಶಪೂರ್ವಕವಾಗಿ ಹೇಳಿಲ್ಲ. ಮುಂದೆ ಈ ರೀತಿ ಯಾರಿಗೂ ಆಗ್ದೀರಲಿ ಅಂತಾ ಹೇಳಿದ್ದೀನಿ ಅಂತಾ ನಾನು ಬಾಯಿ ಬಡಕೊಂಡ್ರೂ… ಗೌಡ್ರು ಪರ ಗುಂಪು ನನ್ನ ವಿರುದ್ಧ ಮಚ್ ಮಸಿತಲೇ ಇತ್ತು. ಜತೆಗೆ ‘‘ನನಗೂ ಹಿಂಗೆ ಆಗಿತ್ತು’’ ಅಂತ ಹೇಳಿದ ರಂಗನಂತ ಅನೇಕರ ವಿರುದ್ಧ ಜನ ಸಿಟ್ಟಿಗೆದ್ದಿದ್ದರು.
ಇದರಿಂದ ನನ್ನಂತೆ ಗೊತ್ತಿಲ್ಲದೆ ತಂಗಳು ಮುದ್ದೆಗೆ ಮೈಮುರಿದು ಅವರವರ ಗೊಂಚಗಾರ್ ಮನೆಯಲ್ಲಿ ಕೆಲಸ ಮಾಡಿ ಶೋಷಣೆಗೆ ಒಳಗಾಗಿದ್ದ ಜನ ‘‘ನಂಗೂ ಆಗಿತ್ತು’’ ಅಂತಾ ಹೇಳುವ ಧೈರ್ಯವನ್ನೇ ಮಾಡ್ಲಿಲ್ಲ. ಜತೆಗೆ ಇವರು ಕೂಡ ನನ್ಗೇನೆ ಬೈಯೋಕೆ ನಿಂತ್ರು.
ದೇವರಂತ ಗೌಡ್ರು ವಿರುದ್ಧ ಶೋಷಣೆ ಆರೋಪ ಹೊರಿಸ್ತಾನಲ್ಲ ಅಂತಾ ಎಲ್ರೂ ಸೇರಿ ಧಬಾಯಿಸಿದ್ರು.
ಇದನ್ನೆಲ್ಲ ಕಂಡು ಇಪ್ಪತ್ತೈದು ವರ್ಷದ ಹಿಂದೆ ಆಗಿದ್ದ ‘‘ಪರೋಕ್ಷ ಶೋಷಣೆ’’ ಬಗ್ಗೆ ಈಗ ಯಾಕಾದ್ರೂ ಹೇಳಿದ್ನಾ ಅಪ್ಪಾ ಅಂತಾ ನೊಂದುಕೊಂಡೇ. ನಮ್ ಜನಕ್ಕೆ ಸತ್ಯ ಹೇಳಿದ್ರೆ ಸಹಿಸಿಕೊಳ್ಳಕ್ಕೆ ಯಾಕ್ ಆಗಕ್ಕಿಲ್ಲ. ನಮ್ಮನ್ನೇ ಕಳ್ಳನ ರೀತಿ ನೋಡ್ತಾರಲ್ಲ. ಸದ್ಯ ನನ್ನ ಹೈಕ್ಳ ಮಾತು ಕೇಳಿ ಈಗ ಹೇಳಿದ್ದೇನೆ. ಗೌಡ್ರು ಮನೆಯಂಗಳದಲ್ಲಿ ತಂಗಳು ಮುದ್ದೆ ತಿಂದ ಸಂದರ್ಭ ಹೇಳಿದ್ರೆ… ಅಬ್ಬಾ ನೆನಸ್ಕೊಂಡ್ರೆ ಭಯನೇ ಆಗ್ತಾತೆ. ಆಗ ಹೇಳಿದ್ರೆ ಇಷ್ಟೋತ್ತಿಗೆ ನಾನು ಸತ್ ಇಪ್ಪತ್ತೈದು ವರ್ಷ ಆಗ್ತಾ ಇತ್ತೇನಪ್ಪಾ.
ಈ.ಮಹೇಶ್‌ಬಾಬು, ಜಿಲ್ಲಾಧ್ಯಕ್ಷರು, ಪತ್ರಕರ್ತರ ಸಂಘ, ಚಿತ್ರದುರ್ಗ
(ಮೊ.ನಂ: 9900882955)
ಕೃಪೆ : whatsapp

ಲೋಕಾರೂಢಿ

ಮೊದಲದಿನ ಸೈಲೆಂಟ್ ಆಗಿದ್ದ ಮುಷ್ಕರ, ಎರಡನೆ ದಿನ ವೈಲೆಂಟ್!

Published

on

ಚುಮು-ಚುಮು ಚಳಿಗೆ ಮೊದಲ ದಿನ ಕಾರ್ಮಿಕರ ಮುಷ್ಕರದ ಅಷ್ಟೋಂದು ಬಿಸಿ ತಟ್ಟಲಿಲ್ಲ!!ಆದರೆ ಎರಡೆ ದಿನದ ಬಿಸಿ ಜೋರಿತ್ತು?!!

ದೇಶದಲ್ಲಿ ಎರಡು ದಿನಗಳಿಂದ ನಡೆಯುತ್ತಿರುವ ಕಾರ್ಮಿಕರ ಮುಷ್ಕರಕ್ಕೆ ಕೆಲವೆಡೆ ಸಂಪುರ್ಣ ಬೆಂಬಲ ತೊರಿಸಿದರೆ, ದೇಶದ ಹಲವೆಡೆ ಮಿಶ್ರ ಮತ್ತು ನಿರಸ ಪ್ರತಿಕ್ರಿಯೆಯನ್ನು ಮೊನ್ನೆ ನಿನ್ನಯಿಂದ ನೋಡಿದ್ದೇವೆ. ಎರಡು ದಿನದ ಮುಷ್ಕರದಿಂದ ಮೊನ್ನೆ ಆಯಾ ಜಿಲ್ಲೆಯ ಜಿಲ್ಲಾದಿಕಾರಿಗಳು ಒಂದು ದಿನದ ಮಟ್ಟಿಗೆ ಮಾತ್ರ ಶಾಲಾ ಕಾಲೆಜುಗಳಿಗೆ ರಜೆಯನ್ನು ಘೋಷಣೆ ಮಾಡಿದ್ದರು.

ಮೊನ್ನೆಯ ದಿನ ನಡೆದ ಮುಷ್ಕರದಿಂದ ಯಾವುದೆರೀತಿಯಲ್ಲಿ ಪೂರ್ಣ ಪ್ರಮಾಣದ ಬೆಂಬಲ ಸಿಕಿಲ್ಲ ಅದು ಯಾವ ರೀತಿಯಲ್ಲಿ ಅಂದರೆ ರಾಜ್ಯದ ಆಸ್ಪತ್ರೆಗಳು ಹಾಗೂ ಕ್ಲಿನಿಕ್ಗಲು ಎಂದಿನಂತೆ ತಮ್ಮ ಕಾರ್ಯವನ್ನು ನಿರ್ವಹಿದವು, ವಾಯುವ್ಯ ಹಾಗೂ ಈಶಾನ್ಯ ರಾಜ್ಯ ರಸ್ತೆ ಸಾರಿಗೆ ನಿಗಮ ಎರಡು ಸೇರಿ ರಾಜ್ಯದಲ್ಲಿ 5,760 ಬಸ್‍ಗಳಲ್ಲಿ ಕೆವಲ 370 ಬಸ್‍ಗಳು ಮಾತ್ರ ರಸ್ತೆಗಳಿದಿದ್ದವು. ಇದರಿಂದ ಜನರಸಂಚಾರಕ್ಕೆ ಅಸ್ಥವ್ಯಸ್ಥವಾಯಿತು. ಸಂಗೋಳ್ಳಿಯಲ್ಲಿ ಅಂಗಡಿ ಮುಚ್ಚಲು ಬಲವಂತಮಾಡಿದ ಸಿಪಿಎಂ ಕಾರ್ಯಾಕರ್ತರಿಗೆ ಅಂಗಡಿ ಮಾಲಿಕರು ಹಿಗ್ಗಾ-ಮುಗ್ಗಾ ತರಾಟೆಗೆ ತೆಗೆದುಕೊಂಡರು. ಇದರಿಂದಾಗಿ ಅಸಮಧಾನಗೊಂಡ ಕಾರ್ಯಕರ್ತರು ನಿನ್ನೆ ಹಲವೆಡೆ ಬಿಎಮ್‍ಟಿಸಿ ಹಾಗೂ ಕೆಎಸ್‍ಆರ್‍ಟಿಸಿ ಬಸ್‍ಗಳ ಮೇಲೆ ಕಲ್ಲುಎಸೆತ ನಡೆಯಿತು. ಒಟ್ಟಾರೆಯಾಗಿ ರಾಜ್ಯದಲ್ಲಿ 42ಬಸ್‍ಗಳ ಮೇಲೆ ಕಲ್ಲು ತುರಾಟ ನಡೆದಿದೆ. ಎರಡನೆದಿನದಂದು ಶಾಲಾ-ಕಾಲೇಜು ವಿದ್ಯಾರ್ಥಿಗಳಿಲ್ಲಿ ಗೊಂದಲಗಳು ಕಾಡಿದವು.

ಮೊನ್ನೆ ನಡೆದ ಮುಷ್ಕರದಿಂದ ಹುಬ್ಬಳ್ಳಿಯಲ್ಲಿ ಕೆಎಸ್‍ಆರ್‍ಟಿಸಿ ಕಜಾನೆಗೆ 60ಲಕ್ಷ ರೂಪಾಯಿ ನಷ್ಟವಾಗಿದೆಯೆಂದು ಹುಬ್ಬಳ್ಳಿಯ ಡೀಪೊದ ಮೇಲ್ವಿಚಾರಕರು ಮಾಧ್ಯದವರೋಂದಿ ಮಾಹಿತಿಯನ್ನು ಹಂಚಿಕೊಂಡರು. ಈ ಪ್ರತಿಭಟನೆಯಲ್ಲಿ ಮಹಿಳಾ ಕಾರ್ಯಕರ್ತರು ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸಿದ್ದಾರೆ. ಇದರಲ್ಲಿ ಮಹಿಳಾ ಕಾರ್ಯಕರ್ತೆಯೊಬ್ಬರು ಅಸ್ವಸ್ಥರಾಗಿ ಮೃತಪಟ್ಟರು. ನಿನ್ನೆಯು ಸಹ ಮತ್ತೊಬ್ಬ ಮಹಿಳಾ ಕಾರ್ಯಕರ್ತೆ ಅಸ್ವಸ್ಥಗೊಂಡಿದ್ದಾರೆ. ಇಷ್ಟೆಲ್ಲ ಮುಷ್ಕರ ಗೊಂದಲ ಯ್ಯಾತಕ್ಕಾಗಿ ಬೇಕು?. ಎಲ್ಲಾ ನೌಕರರು, ಮಾಲಿಕರು, ಮತ್ತು ಕೇಂದ್ರ ಹಾಗೂ ರಾಜ್ಯದ ಆಡಳಿತ ಸರ್ಕಾರಗಳು ಕುಳಿತು ಮಾತನಾಡಿ ಸಮಸ್ಯಗಲನ್ನು ಬಗೆಸರಿಸಿಕೊಂಡರೆ ಒಳೆಯದು. ಕೆಲಸ ಮಾಡುವ ಕಾರ್ಮಿಕರೆ ಹಿಂದೆ ಸರಿದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಖಜಾನೆ ಬರಿದಾಗಬಹುದು. ಇದರಿಂದಾಗಿ ಅಭಿವೃದ್ದಿ ಹೊಂದಿದ ದೇಶ ಭಾರತ ಎನ್ನುವ ಪಟ್ಟಪಡೆಯ ಬೇಕು ಎನ್ನು ಕನಸು ಕನಸಾಗಿಯೆ ಉಳಿಯುದರಲ್ಲಿ ಎರಡು ಮಾತ್ತಿಲ್ಲ.

-ಕಾಂಚನಾ. ಬಸವರಾಜ. ಪೂಜಾರಿ
ಪತ್ರಿಕೋದ್ಯಮ ಮತ್ತು ಸಮುಹ ಸಂವಹನ ವಿಭಾಗ
ಪ್ರಥಮ ವರ್ಷದ ವಿದ್ಯಾರ್ಥಿನಿ
ಅಕ್ಕ ಮಹಾದೇವಿ ವಿಶ್ವವಿದ್ಯಾನಿಲಯ ತೋರವಿ
ವಿಜಯಪುರ

Continue Reading

ಲೋಕಾರೂಢಿ

ಮೀಸಲಾತಿಯು ಮೀಸಲಾಗುತ್ತಿದೆಯೇ?

Published

on

ರ್ಕಾರಿ ಕ್ಷೇತ್ರದಲ್ಲಿ ಮೇಲ್ಜಾತಿ ಬಡವರಿಗೂ ಕೂಡ ಮೀಸಲಾತಿಯನ್ನು ಮಾನ್ಯ ನರೇಂದ್ರ ಮೋದಿಯವರ ಸರ್ಕಾರ ಘೋಷಣೆ ಮಾಡುತ್ತಿದ್ದ ಹಾಗೆ ಅದರ ಪರ ಮತ್ತು ವಿರೋಧದ ಚರ್ಚೆಗಳು ಶುರುವಾಗಿವೆ ಕೆಲವರು ಇದು ಸರಿ ಇಲ್ಲ ಎಂದರೆ ಮತ್ತಷ್ಟು ಜನ ಸರಿ ಎಂದು ಹೇಳುತ್ತಿದ್ದಾರೆ. ಸಂವಿಧಾನ ಜಾರಿಯಾದಗಿಂದಲೂ ಮೀಸಲಾತಿಯನ್ನು ವಿರೋಧಿಸುತ್ತಾ ಬರುತ್ತಿರುವ ಜನರು ಕೂಡ ಇಂದು ಈ ತೀರ್ಮಾನವನ್ನು ಒಪ್ಪಿದ್ದಾರೆ, ಆದರೆ ಇಲ್ಲಿ ಕೆಲವು ಸೂಕ್ಷ್ಮ ವಿಚಾರಗಳನ್ನು ನಾವು ಗಮನಿಸಬೇಕಿದೆ, ಉತ್ತರಪ್ರದೇಶದಲ್ಲಿ ಅಕ್ಕ ಮಾಯಾವತಿಯವರು ಮೇಲ್ಜಾತಿ ಬಡವರಿಗೆ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿಯನ್ನು ನೀಡಿದಾಗ ಅದರ ಬಗ್ಗೆ ಮಾತನಾಡದ ಮಾಧ್ಯಮದವರು ಇಂದು ಕೇಂದ್ರ ಸರ್ಕಾರದ ಈ ತೀರ್ಮಾನವನ್ನು ದೊಡ್ಡ ಪ್ರಮಾಣದಲ್ಲಿ ಚರ್ಚೆ ಮಾಡುತ್ತಿದ್ದಾರೆ, ಇದರ ಹಿಂದಿನ ಉದ್ದೇಶ ಬಿಜೆಪಿಯನ್ನು ಸದಾ ಬೆಂಬಲಿಸುತ್ತಾ ಬಂದಿರುವ ಮೇಲ್ಜಾತಿಯ ಜನರು ಕೂಡ ಅದರಲ್ಲೂ ಮೇಲ್ಜಾತಿಯ ಬಡವರು ಮೋದಿಯ ಮೇಲೆ ಬಹಳಷ್ಟು ನಂಬಿಕೆಯನ್ನು ಇಟ್ಟು ಹಿಂದಿನ ಚುನಾವಣೆಯಲ್ಲಿ ಗೆಲ್ಲಿಸಿದ್ದರು ಆದರೆ ಕಳೆದ ನಾಲ್ಕುವರೆ ವರ್ಷಗಳಲ್ಲಿ ಬಿಜೆಪಿ ಮತ್ತು ಮೋದಿ ಅವರು ನೀಡಿದ ಆಶ್ವಾಸನೆ ಮತ್ತು ಭರವಸೆಗಳನ್ನು ಶೇಕಡ ಒಂದರಷ್ಟು ಕೂಡ ಈಡೇರಿಸದೆ ಇಡೀ ದೇಶದ ಜನರಿಗೆ ಮೋಸ ಮಾಡಿ , ಜನರ ನಂಬಿಕೆಯನ್ನು ಕಳೆದುಕೊಂಡಿದ್ದಾರೆ , ಹಿಂದುಳಿದ ವರ್ಗ,ದಲಿತರು ಹಾಗೂ ಅಲ್ಪಸಂಖ್ಯಾತರು ಮೋದಿಯ ಆಡಳಿತದಿಂದ ರೋಸಿ ಹೋಗಿದ್ದಾರೆ ಹಾಗೆಯೇ ಮೇಲ್ಜಾತಿಯ ಬಡವರು ಕೂಡ ರೋಸಿ ಹೋಗಿದ್ದಾರೆ ಇದರ ಕಾರಣ ಇಂದು ಮೋದಿ ಅವರು ಉದ್ಯೋಗವೇ ಸೃಷ್ಟಿಯಾಗದ ಯಾವುದೇ ಭವಿಷ್ಯವಿಲ್ಲದ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ನೀಡುತ್ತೇನೆ ಎಂದು ಹೊಸ ಜುಮ್ಲಾ ಶುರು ಮಾಡಿದ್ದಾರೆ.

ಬಿಜೆಪಿಯ ಮಂತ್ರಿಗಳು ಹಾಗೂ ವಿವಿಧ ಇಲಾಖೆಗಳೆ ಹೇಳುತ್ತಿವೆ! ಇಂದು ಸರ್ಕಾರಿ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ ಎಂದು, ಆದರೆ ಸೃಷ್ಟಿಯಾಗದ ಉದ್ಯೋಗವನ್ನು ನೀಡುತ್ತೇನೆ ಎಂದು ಮೇಲ್ಜಾತಿಯವರಿಗೂ ಕೂಡ ಕಿವಿಯಲ್ಲಿ ಕಮಲವನ್ನು ಇಡುವಂತ ಕೆಲಸ ಮಾಡುತ್ತಿದ್ದಾರೆ ಮಾನ್ಯ ನರೇಂದ್ರ ಮೋದಿಯವರು. ಇಂದು ನಿಜವಾಗಲೂ ಮೀಸಲಾತಿ ನೀಡಬೇಕಾಗಿರುವುದು ಖಾಸಗಿ ಕ್ಷೇತ್ರದಲ್ಲಿ ಅದರಲ್ಲೂ ಈ ಕ್ಷೇತ್ರದಲ್ಲಿ ತಮ್ಮ ಜನಸಂಖ್ಯೆಗನುಗುಣವಾಗಿ ಪ್ರಾತಿನಿಧ್ಯ ಸಿಗದ ಹಿಂದುಳಿದ ವರ್ಗಗಳು ದಲಿತರು ಹಾಗೂ ಅಲ್ಪಸಂಖ್ಯಾತರಿಗೆ, ಖಾಸಗಿ ಕ್ಷೇತ್ರದಲ್ಲಿ ಶೇಕಡ 95 ಕ್ಕಿಂತ ಹೆಚ್ಚು ಒಂದೇ ಸಮುದಾಯದ ಪ್ರತಿನಿತ್ಯವಿದೆ, ಖಾಸಗಿ ಕ್ಷೇತ್ರವು ಸಂಪೂರ್ಣವಾಗಿ ಒಂದೇ ಒಂದು ಸಮುದಾಯದ ಕೈಯಲ್ಲಿ ಸಿಕ್ಕಿಹಾಕಿಕೊಂಡಿದೆ, ಅದರ ಮಾಲೀಕತ್ವ ಹಾಗೂ ಉದ್ಯೋಗದ ಜೊತೆಗೆ ಆ ಕ್ಷೇತ್ರಕ್ಕೆ ಸಿಗುತ್ತಿರುವ ಎಲ್ಲಾ ಲಾಭಗಳು ಒಂದೇ ಸಮುದಾಯಕ್ಕೆ ಸೇರುತ್ತಿವೆ ಹಾಗಾಗಿ ಇಂದು ಜರೂರಾಗಿ ಮಾನ್ಯ ನರೇಂದ್ರ ಮೋದಿಯವರು ಮಾಡಬೇಕಿರುವುದು ಈ ಎಲ್ಲಾ ಸಮುದಾಯಗಳಿಗೂ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿಯನ್ನು ನೀಡುವುದು, ಆದರೆ ಈಗಾಗಲೇ ಅತಿ ಹೆಚ್ಚು ಪ್ರಾತಿನಿಧ್ಯವನ್ನು ಹೊಂದಿರುವ ಮೇಲ್ಜಾತಿಗಳಿಗೆ ಸರ್ಕಾರಿ ಕ್ಷೇತ್ರದಲ್ಲಿ ಮೀಸಲಾತಿಯನ್ನು ಕೊಡುವುದರ ಮುಖಾಂತರ ಮೇಲ್ಜಾತಿ ಮತ್ತು ಬಹುಜನ ಸಮಾಜದ ನಡುವೆ ಸಂಘರ್ಷವನ್ನು ಸೃಷ್ಟಿ ಮಾಡಲು ಪ್ರಯತ್ನಿಸುತ್ತಿದ್ದಾರೆ.

ಇಂದು ಕೇಂದ್ರ ಸರ್ಕಾರ ತೆಗೆದುಕೊಂಡಿರುವ ನಿಲುವು ಸಂವಿಧಾನದ ವಿರೋಧವಾದದ್ದು ಏಕೆಂದರೆ ಮೀಸಲಾತಿಯು ಬಡತನ ನಿರ್ಮೂಲನ ಕಾರ್ಯಕ್ರಮವಲ್ಲ ಅದು ಪ್ರಾತಿನಿಧ್ಯವನ್ನು ನೀಡುವ ಸಲುವಾಗಿ ಸೃಷ್ಟಿಯಾಗಿರುವ ಸಾಂವಿಧಾನಿಕ ಹಕ್ಕು, ಸಂವಿಧಾನದ ಅನುಚ್ಛೇದ 16(4)ಪ್ರಕಾರ ಯಾವ ಸಮುದಾಯಗಳಿಗೆ ಸರ್ಕಾರಿ ಉದ್ಯೋಗದಲ್ಲಿ ಜನಸಂಖ್ಯೆಗನುಗುಣವಾಗಿ ಪ್ರಾತಿನಿಧ್ಯ ದೊರೆತಿಲ್ಲವೋ ಆ ಸಮುದಾಯಗಳಿಗೆ ವಿಶೇಷ ಸೌಲಭ್ಯವನ್ನು ಸರ್ಕಾರ ಒದಗಿಸಬಹುದು ಎಂದು ಹೇಳಿದ ಹಾಗೆಯೇ ಅನುಚ್ಛೇದ 340 ರ ಪ್ರಕಾರ ಯಾವ ಸಮುದಾಯಗಳು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದಾವೋ ಆ ಸಮುದಾಯಗಳನ್ನು ಗುರುತಿಸಿ ಆ ಸಮುದಾಯಗಳಿಗೂ ಕೂಡ ಮೀಸಲಾತಿ ನೀಡಬಹುದು ಎಂದು ಹೇಳಿದೆ ಆದರೆ ಇಂದು ನರೇಂದ್ರ ಮೋದಿ ಅವರು ಹೇಳಿರುವ ಮೇಲ್ಜಾತಿಯ ಬಡವರು ಸಂವಿಧಾನದ ಮೇಲಿನ ಯಾವುದೇ ಡೆಫಿನೇಶನ್ ನಲ್ಲಿ ಬರುವುದಿಲ್ಲ ಹಾಗಾಗಿ ಅವರಿಗೆ ನೀಡಿರುವುದು ಸಂವಿಧಾನಬಾಹಿರ ಅದನ್ನು ಮಾಡಬೇಕಾದರೆ ಸಂವಿಧಾನವನ್ನು ತಿದ್ದುಪಡಿ ಮಾಡಬೇಕಾಗುತ್ತದೆ. ಮೀಸಲಾತಿಯನ್ನು ಕೇಳದೆ ಇರುವ ಸಮುದಾಯಗಳಿಗೆ ಮೀಸಲಾತಿಯನ್ನು ನೀಡುತ್ತಿರುವ ಮೋದಿಯವರಿಗೆ ಸುಮಾರು ದಶಕಗಳಿಂದ ಒಳ ಮೀಸಲಾತಿಯನ್ನು ಕೇಳುತ್ತಿರುವ ಸಮುದಾಯಗಳ ಕೂಗು ಏಕೆ ಕೇಳುತ್ತಿಲ್ಲ? ನಿಜವಾದ ಹಿಂದುಳಿದ ಸಮಾಜಕ್ಕೆ ಮತ್ತು ತುಳಿತಕ್ಕೊಳಗಾದ ಸಮಾಜಕ್ಕೆ ಆಸರೆಯಾಗಬೇಕಿದ್ದ ಮೀಸಲಾತಿ ಸೌಲಭ್ಯಗಳು ಇಂದು ಎಲ್ಲವೂ ಇರುವವರ ಪಾಲಾಗುತ್ತಿರುವುದು ದುರಂತ.

ಜೊತೆಗೆ ಇವರಿಗೆ ನಿಜವಾಗಲೂ ಮೇಲ್ಜಾತಿ ಬಡವರ ಬಗ್ಗೆ ಕಾಳಜಿ ಇದ್ದಿದ್ದೇ ಆಗಿದ್ದರೆ ಕಳೆದ ನಾಲ್ಕುವರೆ ವರ್ಷಗಳಲ್ಲಿ ಯಾಕೆ ಈ ತೀರ್ಮಾನವನ್ನು ತೆಗೆದು ಕೊಂಡಿಲ್ಲ? ಕುಸಿಯುತ್ತಿರುವ ಅವರ ವ್ಯಕ್ತಿತ್ವ ಮತ್ತು ಪ್ರಭಾವವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಈ ರೀತಿಯಾದ ತೀರ್ಮಾನವನ್ನು ತೆಗೆದುಕೊಂಡಿದ್ದಾರೆಯೆ ಎಂಬ ಅನುಮಾನಗಳು ಸೃಷ್ಟಿಯಾಗುತ್ತವೆ. ಅದರ ಜೊತೆಗೆ ಈ ವಿಚಾರದಲ್ಲಿ ಅವರು ಹಾಕಿರುವ ಶರತ್ತುಗಳನ್ನು ನೋಡಿದಾಗ ಮತ್ತಷ್ಟು ಅನುಮಾನಗಳು ಸೃಷ್ಟಿಯಾಗುತ್ತದೆ ಏಕೆಂದರೆ ಆದಾಯದ ಮಿತಿಯನ್ನು ನೋಡಿದಾಗ ವಾರ್ಷಿಕ 8 ಲಕ್ಷ ಎಂದರೆ ತಿಂಗಳಿಗೆ ಸುಮಾರು 60 ಸಾವಿರ ರೂಪಾಯಿಗಳು,ಅರವತ್ತು ಸಾವಿರ ರೂಪಾಯಿ ತೆಗೆದುಕೊಳ್ಳುವವನು ಬಡವನೇ? ಜೊತೆಗೆ ಈಗಾಗಲೇ ಜನರಲ್ ಮೇರಿಟ್ ನಲ್ಲಿ ಸ್ಪರ್ಧೆಗಿಳಿದು ಅಲ್ಲಿನ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿರುವ ಹಿಂದುಳಿದ ವರ್ಗಗಳು ದಲಿತರು ಹಾಗೂ ಅಲ್ಪಸಂಖ್ಯಾತರ ಪಾಲನ್ನು ಕಿತ್ತುಕೊಳ್ಳುವ ಹುನ್ನಾರವೆ ? ಎಂಬ ಅನುಮಾನವೂ ಸೃಷ್ಟಿಯಾಗುತ್ತದೆ ಏಕೆಂದರೆ ಜನರಲ್ ಮೇರಿಟ್ ಎಂದರೆ ಅದು ಎಲ್ಲರಿಗೂ ಮುಕ್ತವಾಗಿರುವ ಅವಕಾಶ ಅಲ್ಲಿ ಯಾರು ಬೇಕಾದರೂ ಪೈಪೋಟಿಯಲ್ಲಿ ತೊಡಗಬಹುದು ಹಾಗಾಗಿ ಕಳೆದ 70 ವರ್ಷಗಳಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಂಡು ಇಂದು ಒಂದಿಷ್ಟು ಹಿಂದುಳಿದ ವರ್ಗದವರು ಹಾಗೂ ದಲಿತರು ಸಾಮಾನ್ಯ ವರ್ಗದಲ್ಲಿ ಕೂಡ ಆಯ್ಕೆಯಾಗುತ್ತಿದ್ದಾರೆ, ಹಾಗಾಗಿ ಈ ಸಮುದಾಯಗಳ ಏಳಿಗೆಯನ್ನು ಸಹಿಸದೆ ಅವರನ್ನು ಹತ್ತಿಕ್ಕುವ ಹುನ್ನಾರವು ಇದಾಗಿರಬಹುದೇ? ಎಂಬ ಹತ್ತಾರು ಅನುಮಾನಗಳು ಶುರುವಾಗುತ್ತವೆ. ದೇಶದ ಎಲ್ಲಾ ಶೈಕ್ಷಣಿಕ ಸಂಸ್ಥೆಗಳನ್ನು ಸರ್ಕಾರಿ ಸಂಸ್ಥೆಗಳನ್ನು ನಾಶ ಮಾಡಿದ್ದಾಯಿತು ಈಗ ಶೇಕಡ ಒಂದರಷ್ಟು ಇರುವ ಸರ್ಕಾರಿ ನೌಕರಿಯನ್ನು ಕೂಡ ಸಂಪೂರ್ಣವಾಗಿ ನಾಶ ಮಾಡುವಂಥ ಕೆಲಸವೇ ಇದು? ಇಡೀ ದೇಶದ ಸಂಪತ್ತು ಮತ್ತು ಉದ್ಯೋಗ ಸೃಷ್ಟಿ ಯಾಗುವುದು ಕೃಷಿ, ಕೈಗಾರಿಕೆ, ಮತ್ತು ಸೇವಾ ವಲಯ ಅದರಲ್ಲಿ ಸರ್ಕಾರಿ ವಲಯವು ಒಳಗೊಂಡಿದೆ ಇಡೀ ಕೃಷಿ ಕ್ಷೇತ್ರದಲ್ಲಿ ಹಿಂದುಳಿದ ವರ್ಗಗಳು ದಲಿತರು ಹಾಗೂ ಅಲ್ಪಸಂಖ್ಯಾತರ ಪಾಲು ಎಷ್ಟು ಎಂದು ನೋಡಿದರೆ 85 ಶೇಕಡ ಜನಸಂಖ್ಯೆ ಇರುವ ಈ ಸಮುದಾಯಗಳ ಪಾಲು ಕೇವಲ 20 ಶೇಕಡ ಆದರೆ 15 ಶೇಕಡ ರಷ್ಟಿರುವ ಮೇಲ್ಜಾತಿಗಳ ಪಾಲು ಶೇಕಡ 80 ಹಾಗೆಯೇ ಕೈಗಾರಿಕಾ ಕ್ಷೇತ್ರದಲ್ಲೂ ಕೂಡ ಹಿಂದುಳಿದ ದಲಿತ ಮತ್ತು ಅಲ್ಪಸಂಖ್ಯಾತರ ಪಾಲು ಶೇಕಡ 5ರಷ್ಟು ಮೀರಿಲ್ಲ ಹಾಗೆಯೇ ಸೇವಾ ವಲಯ ವಿಚಾರಕ್ಕೆ ಬಂದಾಗ ಅಲ್ಲೂ ಕೂಡ ಇವರ ಮಾಲೀಕತ್ವ ವಾಗಲಿ ಹೆಚ್ಚು ಆದಾಯವನ್ನು ಕೊಡುವಂತ ಉದ್ಯೋಗದಲ್ಲಿ ಆಗಲಿ ಕೇವಲ 5ರಿಂದ 10ರಷ್ಟು ಮಾತ್ರ ಇದೆ ಇನ್ನು ಉಳಿದಂತೆ ಶೇಕಡ ಎರಡರಷ್ಟು ಪಾಲು ಇರುವ ಸರ್ಕಾರಿ ಉದ್ಯೋಗದಲ್ಲಿ ಶೇಕಡ 50ರಷ್ಟು ಮೀಸಲಾತಿ ಇದ್ದರೂ , ಅಂದರೆ ಒಂದು ಪರ್ಸೆಂಟ್ ಉದ್ಯೋಗದ ಅವಕಾಶ ವಿದ್ದರೂ ಅಲ್ಲಿಯೂ ಕೂಡ ಇವರಿಗೆ ಮೋಸವಾಗಿದೆ, ಆದರೆ ಎಲ್ಲಾ ಕ್ಷೇತ್ರದಲ್ಲೂ ತಮ್ಮ ಶೇಕಡವಾರು ಗಿಂತ ಹೆಚ್ಚು ಪ್ರಾತಿನಿಧ್ಯ ಮತ್ತು ಲಾಭವನ್ನು ಗಳಿಸಿರುವ ಸಮುದಾಯಗಳಿಗೆ ಮತ್ತಷ್ಟು ಅವಕಾಶವನ್ನು ಕೊಡುವುದು ಯಾವ ನ್ಯಾಯ? ಈ ವಿಚಾರವನ್ನು ನಾವು ಬಹಳಷ್ಟು ಗಂಭೀರವಾಗಿ ಯೋಚನೆ ಮಾಡಬೇಕಿದೆ, ಖಂಡಿತವಾಗಲೂ ಕೂಡ ನಾವು ಮೇಲ್ಜಾತಿ ಬಡವರ ವಿರೋಧವಲ್ಲ ಆದರೆ ವಂಚನೆಗೊಳಗಾಗಿರುವ ಅವಕಾಶ ಸಿಗದೇ ಪರದಾಡುತ್ತಿರುವ ಸಮುದಾಯಗಳ ಪರವಾದ ಧ್ವನಿ ಮಾತ್ರ ನಾವು! ಜೊತೆಗೆ ಇನ್ನು ಕೆಲವೇ ತಿಂಗಳುಗಳಲ್ಲಿ ಪಾರ್ಲಿಮೆಂಟ್ ಚುನಾವಣೆ ನಡೆಯಲಿದೆ ಎಂಬುದು ನಮಗೂ ಗೊತ್ತು! ಆ ಚುನಾವಣೆಯಲ್ಲಿ ನಿಮ್ಮನ್ನು ಸೋಲಿಸುವುದು ನಮಗೆ ಗೊತ್ತು ಎಚ್ಚರವಿರಲಿ ಮಿಸ್ಟರ್ ಮೋದಿ & ಬಿಜೆಪಿ.

ಸಾಮಾನ್ಯ ವರ್ಗ ಎಂದರೆ ಯಾರು?

ಕರ್ನಾಟಕದಲ್ಲಿ ಲಿಂಗಾಯತರು ಒಕ್ಕಲಿಗರು ಹಾಗೂ ಕಸುಬು ಆಧಾರಿತ ಎಲ್ಲಾ ಜಾತಿಗಳು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಇವೆ, ಅಂದರೆ ಎರಡು 2ಬಿ 3ಎ ಮತ್ತು 3ಬಿ ಪಟ್ಟಿಯಲ್ಲಿ ಇವರಿಗೆ ರಾಜ್ಯದಲ್ಲಿ ಸಂವಿಧಾನದ ಪ್ರಕಾರ 32 ಶೇಕಡ ಮೀಸಲಾತಿಯನ್ನು ನೀಡಲಾಗಿದೆ ಹಾಗೆ ರಾಷ್ಟ್ರಮಟ್ಟದಲ್ಲಿ 27% ಮೀಸಲಾತಿಯನ್ನು ನೀಡಲಾಗಿದೆ ಹಾಗೆಯೇ ವಿವಿಧ ರಾಜ್ಯಗಳಲ್ಲಿ ಈ ಜಾತಿಗಳ ಸಮಾನಂತರ ಜಾತಿಗಳು ಕೂಡ ಮೀಸಲಾತಿಯನ್ನು ಅನುಭವಿಸುತ್ತಿದ್ದಾರೆ. ಹಾಗಾದರೆ ಸಾಮಾನ್ಯ ವರ್ಗ ಎಂದರೆ ಯಾರು? ಎಂಬ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ.

ಸಾಮಾನ್ಯ ವರ್ಗವೆಂದರೆ ಅದು ಯಾವುದೇ ಜಾತಿ ಅಲ್ಲ, ಅಲ್ಲಿ ಯಾರು ಬೇಕಾದರೂ ಸ್ಪರ್ಧಿಸಬಹುದು ಎಂಬುದು. ಎಸ್ ಸಿ ಎಸ್ ಟಿ ಗಳನ್ನು ಬಿಟ್ಟು ಮಿಕ್ಕವರೆಲ್ಲ ಸಾಮಾನ್ಯ ವರ್ಗದವರು ಎಂಬ ಪರಿಕಲ್ಪನೆಯನ್ನು ಹುಟ್ಟಿ ಹಾಕಿದ್ದು ಹಿಂದುಳಿದ ವರ್ಗಗಳನ್ನು ಎಸ್ಸಿ , ಎಸ್ಟಿ ಗಳಿಂದ ದೂರ ಮಾಡಲು, ಏಕೆಂದರೆ ಮೀಸಲಾತಿಯು ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯರನ್ನು ಬಿಟ್ಟು ಎಲ್ಲಾ ಜಾತಿಗಳು ಪಡೆಯುತ್ತಾ ಬಂದಿವೆ, ಹಾಗಾಗಿ ಮೀಸಲಾತಿಯ ವಿರುದ್ಧವಾಗಿ ಇರುವ ಸಮುದಾಯಗಳು ಮೀಸಲಾತಿಯ ವಿರೋಧಿ ಭಾವನೆಯನ್ನು ಸೃಷ್ಟಿ ಮಾಡಲು ಹಿಂದುಳಿದ ವರ್ಗದವರು ಮೀಸಲಾತಿ ಪಡೆಯುತ್ತಿಲ್ಲ ಎನ್ನುವಂಥ Mythನ್ನು ಸೃಷ್ಟಿ ಮಾಡಿ ಮೀಸಲಾತಿ ವಿರುದ್ಧ ಧೋರಣೆಯನ್ನು ಸೃಷ್ಟಿ ಮಾಡಿದರು ಹಾಗಾಗಿ 1991-92 ರಲ್ಲಿ ಮಂಡಲ್ ವರದಿಯನ್ನು ಜಾರಿ ಮಾಡುವ ಸಂದರ್ಭ ಸೃಷ್ಟಿಯಾದಾಗ ಅದನ್ನು ವಿರೋಧ ಮಾಡಿದವರು ಇದೇ ಹಿಂದುಳಿದ ವರ್ಗದವರು ಹಾಗಾಗಿ ಇಂದು ಭಾರತ ದೇಶದಲ್ಲಿ ಬಹುಜನ ಚಳುವಳಿಯ ಪ್ರಭಾವದಿಂದ ಎಲ್ಲಾ ಹಿಂದುಳಿದ ವರ್ಗಗಳು ಹಾಗೂ ದಲಿತರು ಒಂದಾಗುತ್ತಿರುವ ಸಂದರ್ಭದಲ್ಲಿ ಅವರನ್ನು ಬೇರ್ಪಡಿಸಲು ಬಿಜೆಪಿ ಮತ್ತು ಮೋದಿ ಯವರು ಈ ಸಾಮಾನ್ಯ ವರ್ಗ ಎನ್ನುವ most confused notion ಅನ್ನು ಸೃಷ್ಟಿ ಮಾಡಿ ಸಾಮಾನ್ಯ ವರ್ಗದವರಿಗೆ ಮೀಸಲಾತಿ ಎಂಬ ಜುಮ್ಲಾದ ಮುಖಾಂತರ ಮತ್ತೆ ಹಿಂದುಳಿದ ವರ್ಗಗಳು ಮತ್ತು ಎಸ್ಸಿ ಎಸ್ಟಿ ಗಳ ನಡುವೆ ಕಂದಕವನ್ನು ಸೃಷ್ಟಿ ಮಾಡಲು ಹೊರಟಿದ್ದಾರೆ.

ಸಾಮಾನ್ಯ ವರ್ಗದ ಬಡವರು ಎಂದರೆ ಯಾರು? ಮೇಲ್ಜಾತಿ ಬಡವರು ಎಂದರೆ ಯಾರು? ಎಂಬುದನ್ನು ಸ್ಪಷ್ಟಪಡಿಸಬೇಕಿದೆ ಯಾಕೆಂದರೆ ಈಗಾಗಲೇ ಮೀಸಲಾತಿಯ ಬಗ್ಗೆ ಮತ್ತು ದಲಿತ ಹಿಂದುಳಿದ ವರ್ಗಗಳ ಬಗ್ಗೆ ಇರುವ ಗೊಂದಲವನ್ನು ಮತ್ತಷ್ಟು ಗೊಂದಲಮಯವಾಗಿಸುವುದು ಬೇಡ? ಮೇಲ್ಜಾತಿ ಬಡವರಿಗೆ ಮೀಸಲಾತಿ ನೀಡುವುದರ ವಿರುದ್ಧವೂ ನಾವಿಲ್ಲ, ಜೊತೆಗೆ ನಾವು ಮೇಲ್ಜಾತಿಗಳ ವಿರೋಧಿಗಳು ಅಲ್ಲ, ಇಲ್ಲಿ ನಾವು ಕೇಳುತ್ತಿರುವುದು ಮೇಲ್ಜಾತಿಗಳು ಎಂದರೆ ಯಾರು ಎಂಬುದನ್ನು ಮಾತ್ರ, ಈಗ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ನಿರ್ಧಾರದಿಂದ ದೊರಕುವ ಸೌಲಭ್ಯಗಳು ಕೇವಲ ಬ್ರಾಹ್ಮಣ ಬನಿಯಾ ಗಳಿಗೆ ಮಾತ್ರ! ಹಾಗಾಗಿ ಮಾನ್ಯ ಮೋದಿಯವರು ನಾವು ನೀಡುತ್ತಿರುವ ಮೀಸಲಾತಿಯು ಕೇವಲ ಬ್ರಾಹ್ಮಣ ಬನಿಯಾ ಗಳಲ್ಲಿರುವ ಬಡವರಿಗೆ ಎಂದು ಘೋಷಿಸಲಿ, ಏಕೆಂದರೆ ಈ ವಿಚಾರದಲ್ಲಿ ಯಾವುದೇ confusion ಬೇಡ.

ಜೈ ಭೀಮ್,ಜೈ ಭಾರತ್

-ಪ್ರೊ. ಹರಿರಾಮ್
ರಾಜ್ಯಾಧ್ಯಕ್ಷರು
ಬಹುಜನ ಸಮಾಜ ಪಾರ್ಟಿ
ಕರ್ನಾಟಕ

ಸುದ್ದಿದಿನ.ಕಾಂ|ವಾಟ್ಸಾಪ್|9986715401

Continue Reading

ಲೋಕಾರೂಢಿ

ಗ್ರಾಮಗಳಿಗೆ ಬಂತು ‘ಸರ್ಕಾರಿ ಶಾಲೆಗಳ ದುರ್ಗತಿ’..!

Published

on

ಸಾಂದರ್ಭಿಕ ಚಿತ್ರ

ಗ್ರಾಮಾಂತರ ಪ್ರದೇಶಗಳಲ್ಲಿ ಮಕ್ಕಳನ್ನು ಕೃಷಿಯಲ್ಲಿ ತೋಡಗಿಸಿಕೊಳುವುದೆ ಹೆಚ್ಚು. ಅಂತಹ ಸಂದರ್ಭದಲ್ಲಿ ಯಾವುದೆ ಸೌಲಭ್ಯವಿಲ್ಲದೆ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಕನಸಿನ ಮಾತು. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ ಮಾಧ್ಯಮ ಪರಿಚಯಿಸಲು ಉತ್ಸುಕರಾಗಿದ್ದಾರೆ. ಆದರೆ, ಸಾವಿರಾರು ಮಕ್ಕಳು ಕನ್ನಡ ಮಾಧ್ಯಮ ಶಿಕ್ಷಣಕ್ಕಾಗಿ ಬೇರೆ ಊರುಗಳಿಗೆ ಅಲೆದಾಡುತ್ತಿದ್ದಾರೆ.

ಅಲ್ಲದೆ 5,272 ಗ್ರಾಮಗಳಲ್ಲಿ ಶಾಲೆಗಳೆ ಇಲ್ಲ. ಇಂತಹ ಸಂದರ್ಭದಲ್ಲಿ ಇಂಗ್ಲೀಷ ಮಾಧ್ಯಮ ಪರಿಚಯಿಸುವ ಅವಶ್ಯಕತೆ ಇದೆಯೇ? ಇಷ್ಟು ವರ್ಷಗಳಾದರು ಸರ್ಕಾರ ಯಾಕೆ ಈ ಹಳ್ಳಿಗಳಿಗೆ ಶಾಲೆಗಳ ಸೌಲಭ್ಯ ನೀಡಿಲ್ಲ. ಇಷ್ಟುದಿನ ಸರ್ಕಾರ ಏನು ಮಾಡುತ್ತಿತ್ತು ಎಂಬ ಪ್ರಶ್ನೆ ಉದ್ಭವಿಸುತ್ತಿದೆ. ಇನ್ನಾದರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಇಂಗ್ಲೀಷ ಮಾಧ್ಯಮ ಪರಿಚಯಿಸುವ ಬದಲು ಮೊದಲು ಈ ಪ್ರದೇಶಗಳಿಗೆ ಕನ್ನಡ ಶಾಲೆಗಳನ್ನು ನಿರ್ಮಾಣ ಮಾಡುವ ಕಾರ್ಯವನ್ನು ಕೈಗೊಳ್ಳಬೇಕು.

ಸಂಗೀತಾ.ಗ.ಗೊಂಧಳೆ
ಪತ್ರೀಕೊದ್ಯಮ ಮತ್ತು ಸಮೂಹ ಸಂವಹನ ವಿಭಾಗ,
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರ

Continue Reading
Advertisement

Trending