Connect with us

ಲೋಕಾರೂಢಿ

ತಪ್ಪದ ರೈತರ ‘ಸರದಿ ಸಾಲಿನ’ ನರಳಾಟ

Published

on

ಸಾಂದರ್ಭಿಕ ಚಿತ್ರ

ರೈತರ ಅಭಿವೃದ್ಧಿಯೇ ದೇಶದ ಅಭಿವೃದ್ಧಿ”ಯೆಂದು ಪ್ರಧಾನಿ ನರೇಂದ್ರ ಮೋದಿಯವರು ಅರಿತುಕೊಂಡಿದ್ದಾರೆ. ರೈತರಿಗೆ ಸಹಾಯವಾಗಲೆಂದು ಪ್ರಧಾನಮಂತ್ರಿ ಕಿಸಾನ ಸನ್ಮಾನ ಯೋಜನೆಯನ್ನು ಜಾರಿಗೊಳಿಸಿದರು.

ಅದೇ ರೀತಿಯಲ್ಲಿ ಗ್ರಾಮಗಳಲ್ಲಿ ಇಂಟರ್ನೆಟ್ ಸಮಸ್ಯೆಯಾಗ ಬಾರದೆಂದು ಡಿಜಿಟಲ್ ಗ್ರಾಮಕ್ಕೆ ಅಡಿಗಲ್ಲು ಹಾಕಿ, ಗ್ರಾಮಗಳಲ್ಲಿ ಉಚಿತ ವೈಫೈನ ವ್ಯವಸ್ಥೆಯನ್ನು ಕಲ್ಪಿಸಿದರು. ಆದರು ಸಹ ಕೇಂದ್ರದಲ್ಲಿ ಜಾರಿಯಾದ ಯೋಜನೆಗಳು ರಾಜ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಯಶಸ್ವೀಯಾಗಿ ಜಾರಿಗೊಳುತ್ತಿಲ್ಲ.

ಕೇಂದ್ರ ಹಾಗೂ ರಾಜ್ಯ ಸರ್ಕಾರ ಎರಡು ಸೇರಿಕೊಂಡು ರೈತರ ಅಭಿವೃದ್ಧಿಗೆ ಶ್ರಮಿಸುತ್ತೆವೆ ಎಂದು ಬರಿ ಬಾಯಿಮಾತಿನ ಆಶ್ವಾಸನೆಯನ್ನು ನೀಡುತ್ತಿದ್ದಾರೆ ವಿನಃ ಕಾರ್ಯರೂಪದಲ್ಲಿ ಬರುತ್ತಿಲ್ಲ. ಬಿ.ಎಸ್.ಎನ್.ಎಲ್ ಕಂಪನಿಯನ್ನು ಮೊದಲ ಸ್ವದೇಶಿಯ ಇಂಟರ್ನೆಟ್ ನ ಸಂಸ್ಥೆಯೆಂದು ಕರೆಯಲ್ಪಡುತ್ತದೆ.

ದೇಶದ ಎಲ್ಲಾ ಗ್ರಾಮಗಳಲ್ಲಿ ಬಿ.ಎಸ್.ಎನ್.ಎಲ್ ಕಂಪನಿಯ ಇಂಟರ್ ನೆಟ್ ಬಳಕೆಯನ್ನು ಆರಂಬಿಸಿದೆ. ಆದರೂ ಸಹ ರೈತರು ಪರದಾಡುವುದು ತಪ್ಪಿಲ್ಲ. ಪ್ರತಿದಿವು ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯತಿ, ತಾಲೂಕು ಪಂಚಾಯತಿ, ಹಾಗೂ ಜಿಲ್ಲಾ ಪಂಚಾಯತಿಗಳಲ್ಲಿ ರೈತರ ಪಾಣೆಗಳನ್ನು ಪಡೆಯಲು ಸರದಿಸಾಲಿನಲ್ಲಿ ನಿಂತು ಕಾಯಬೇಕು.

ಏಕೆಂದರೆ ಪ್ರತಿದಿನವು ಒಂದಲ್ಲ ಒಂದು ಸಮಸ್ಯೆ, ಇಂಟರ್‍ನೆಟ್ ವ್ಯವಸ್ಥೆ ಇಲ್ಲ, ಸರ್ವರ್ ಬಿಜಿ ಹೀಗೆ ಅನೇಕ ಕಾರಗಳನ್ನು ನೀಡುತ್ತಾರೆ. ಪ್ರತಿದಿನವು ಈ ಕಾರಣಗಳನ್ನು ಕೇಳುತ್ತಾ ರೈತರು ರೋಸಿಹೊಗಿದ್ದಾರೆ. ಸರ್ಕಾರ ಹಾಗೂ ಅಧಿಕಾರಿಗಳು ಇಬ್ಬರು ಸೇರಿ ಇದಕ್ಕೊಂದು ಪರ್ಯಾಯ ಉಪಾಯ ಹುಡುಕಿ ರೈತರಿಗೆ ಅನುಕೂಲ ಮಾಡಿಕೊಡಬೇಕಾಗಿದೆ.

ಕಾಂಚನಾ. ಬಸವರಾಜ. ಪೂಜಾರಿ
ಪ್ರಥಮ ವರ್ಷದ ವಿದ್ಯಾರ್ಥಿನಿ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ
ತೋರವಿ. ವಿಜಯಪುರ

ಸುದ್ದಿದಿನ.ಕಾಂ|ವಾಟ್ಸಾಪ್|9986715401

ಲೋಕಾರೂಢಿ

ಕಸಾಪಕ್ಕೆ ಗ್ರಹಣ ಹಿಡಿದಿರುವ ‘ಮನು ಬಳೆಗಾರ’ ಬಗ್ಗೆ ನೀವು ಏನು ಹೇಳ್ತೀರಾ ?

Published

on

ಬಿಡಿಗಾಸಿನ ಬೆಲೆಯೂ ಇಲ್ಲದ ಮನುಬಳೆಗಾರ್ ಅವರು ಉನ್ನತ ಹುದ್ದೆಯಲ್ಲಿದ್ದುಕೊಂಡೇ ಬಹುತೇಕ ಎಲ್ಲಾ ರಾಜಕಾರಣಿಗಳ ನಾಡಿ ಹೃದಯ ಬಡಿತ ಡೊಂಕ-ಡಸ್ಕು ತಿಳಿದು ತಿಂದುಂಡುಕೊಂಡೇ ಬೆಳೆದುಕೊಂಡು ಬಂದಿರೋ ಮಹಾನುಭಾವರು.

ಹಣ ಅಧಿಕಾರದ ದುರಾಸೆಗೆ ಯಾರ ಬೂಟನ್ನೂ ನೆಕ್ಕಲೂ ಹೇಸದ ನೀಚ ಆಧಿಕಾರಿಗಳ ಸಾಲಿಗೆ ಸೇರಲು ಅರ್ಹತೆ ಇರುವವರು ಈ ಮಹಾಪುರುಷರು.

ನಮ್ಮ ಹಿರಿಕಿರಿ ಕನ್ನಡ ಸಾಹಿತಿಗಳಿಗೆ ಏನೆಲ್ಲಾ ಆಮಿಷ ತೋರಿಸಿ ಎಲ್ಲರ ಬಾಯಿ ಮುಚ್ಚಿಸಿ ಕಸಾಪ ಅಧ್ಯಕ್ಷರ ಅಧಿಕಾರಾವಧಿ 3 ವರ್ಷ ಇದ್ದದ್ದ ತಿದ್ದಿ 5 ವರ್ಷಗಳ ಮಾಡಿಕೊಂಡು ಸಾಗುತ್ತಿರುವ ಅತ್ಯಂತ ಚಾಲಾಕೀ ಮನುಷ್ಯ.

ವರ್ಷದಿಂದಲೂ ನಾನು ಮತ್ತು ಒಂದಷ್ಟು ಗೆಳೆಯರು ದಾವಣಗೆರೆಯಲ್ಲಿ ‘ಕಸಾಪ ಆಜೀವ ಸದಸ್ಯರ ಸಮಾನ ಮನಸ್ಕ ವೇದಿಕೆ’ ಕಟ್ಟಿಕೊಂಡು ಈತನ ವಿರುದ್ಧ ಜಿಲ್ಲಾ ಕೋರ್ಟ್, ಹೈಕೋರ್ಟ್ ಮೆಟ್ಟಿಲೇರಿ, ಕಾಲ ಕಾಸು ಕಳೆದುಕೊಂಡು ಎಷ್ಟೆಲ್ಲಾ ಹೋರಾಡುತ್ತಲೇ ಬರುತ್ತಿದ್ದೇವೆ. ಆದರೆ ಈ ಮತ್ತೇರಿದ ಸಲಗನಿಗೆ ಅಂಕುಶ ಹಾಕಲಾಗುತ್ತಿಲ್ಲ.

ನಮ್ಮನ್ನು ಯಾವ ಹಿರಿಕಿರಿ ಬರಹಗಾರನೂ ಬೆಂಬಲಿಸಲಿಲ್ಲ. ಕನಿಷ್ಟ ನೈತಿಕ ಬೆಂಬಲ ಸಹ ನೀಡಲಿಲ್ಲ. ಇವರೆಲ್ಲರಿಗೂ ಬಳೆಗಾರ್ ಅದೇನೇನು ಆಮಿಷ ಒಡ್ಡಿದ್ದರೋ ಏನೋ ಆ ಭುವನೇಶ್ವರಿಯೇ ಬಲ್ಲಳು. ನಮ್ಮೊಡನಿದ್ದವರೂ ಮೆಲ್ಲಗೆ ಜಾರಿಕೊಂಡು ಈತನ ಪಟಾಲಂ ತೋರುವ ಆಮಿಷಗಳಿಗೆ ಬಲಿಯಾಗಿ ಹೋದರು.

ಈಗ ಶತಭಂಡತನದಿಂದ ಕಲ್ಬುರ್ಗಿಯಲ್ಲಿ 85 ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಮಾಡಹೊರಟಿರುವ ಈ ಮನು ವ್ಯಾದಿ ಸರ್ವಾಧಿಕಾರಿಗೆ ಸರಕಾರವು ಕೋಟಿಗಟ್ಟಳೆ ನೀಡುವ ಇಡುಗಂಟ ಮೇಲೇ ಕಣ್ಣಿದೆ.

ಈ 85 ಪುಸ್ತಕಗಳ ಪ್ರಕಟಿಸಿದರೆ ತನ್ನ ಬೊಕ್ಕಸಕ್ಕೆ ಕನಿಷ್ಟ ಒಂದು ಕೋಟಿಯಷ್ಟು ನಿಧಿ ಕಡಿಮೆಯಾಗುತ್ತದೆ ಎಂಬ ಸತ್ಯ ತಿಳಿದು ಪುಸ್ತಕ ಪ್ರಕಟಣೆಗೇ ಎಳ್ಳು ನೀರು ಬಿಟ್ಟಿದ್ದಾರೆ.

ಈತನ ಹಿಂದೆ 30 ಜಿಲ್ಲೆಗಳ ಅಧ್ಯಕ್ಷರುಗಳು ತಾಳ ಗೋಣು ಹಾಕುತ್ತ ಸಾಲುಗಟ್ಟಿ ನಿಂತಿದ್ದಾರೆ. ಪಾಪ ಅವರಿಗೆ ಈತ ಅದೇನು ಆಮಿಷ ಒಡ್ಡಿ ಬಾಯಿ ಮುಚ್ಚಿಸಿದ್ದಾರೊ ಏನೋ ಯಾರುಬಲ್ಲರು?! ಅವಧಿ ಮುಗಿದ ಮೇಲೆ ತಿಳಿಯುತ್ತದೆ ನಿಜಬಣ್ಣ.

ಈ ಸರ್ವಾಧಿಕಾರಿ ಮನುವನ್ನು ಹಿಡಿದು ನಿಲ್ಲಿಸಿ ಕೇಳುವವರು ಯಾರೂ ಇಲ್ಲದಾಗಿದೆ. ಬಹುತೇಕ ಎಲ್ಲ ರಾಜಕಾರಣಿಗಳ ಹುಳುಕನ್ನೂ ಬಲ್ಲ ಈತ ಯಾರಿಗೆ ಹೇಗೆ ಚಳ್ಳೆ ಹಣ್ಣು ತಿನ್ನಿಸಬೇಕೆಂಬುದ ಚೆನ್ನಾಗಿ ಬಲ್ಲ ನಿಸ್ಸೀಮ.

ನಮ್ಮ ಕನ್ನಡ ಸಾಹಿತ್ಯಲೋಕದ ವಾರಸುದಾರರಿಗೆ ಇದೀಗ ಜ್ಣಾನೋದಯವಾದಂತಿದೆ. ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಪ್ರಕಟಣೆ ಮಾಡುವುದಿಲ್ಲ ಎಂಬ ಹೇ(ಸಿ)ಳಿಕೆ ಹೊರಬೀಳುತ್ತಿದ್ದಂತೆಯೇ ಬಳೆಗಾರ ತಮ್ಮ ಮೂಗಿಗೆ ಹಚ್ಚಿದ್ದ ತುಪ್ಪ ವಾಸನೆ ಬರತೊಡಗಿದೆ.

ಯಾವುದೇ ಪ್ರಶಸ್ತಿ ಸನ್ಮಾನ ಮಾಡದೆ, ಕವಿಗೋಷ್ಠಿ ಅಧ್ತಕ್ಷ, ಸಮ್ಮೇಳನ ಅಧ್ಯಕ್ಷರನ್ನಾಗಿ ಮಾಡದೇ ಇರುವ ಕಾರಣ ಕೆಲವು ಸಾಹಿತಿಗಳು ತಮ್ಮ ಜಾಣ ನಿದ್ದೆಯಿಂದೆದ್ದು ಆಕಳಿಸುತ್ತ ಮನುವಿನ ಬೊಗಳೆತನದ ವಿರುದ್ಧ ಬಾಯಿ ಬಿಡುತ್ತಿದ್ದಾರೆ. ತಮಗೆ ಲಾಭವಾಗಿದ್ದರೆ ತೆಪ್ಪಗೆ ಅನುಭವಿಸಿ ಹೊಗಳುತ್ತಿದ್ದರು ಅನಿಸುತ್ತೆ.

ವೈಯಕ್ತಿಕ ಲಾಭಕ್ಕಾಗಿ ಕಸಾಪ ಮರ್ಯಾದೆ ತೆಗೆಯಲು ಮೂಖಸಾಕ್ಷಿಗಳಾಗಿ ನಿಂತ ಎಲ್ಲಾ ಸಾಹಿತ್ಯ ವೃಂದಕ್ಕೆ ಹಾಗೂ ಕಸಾಪ ಆಜೀವ ಸದಸ್ಯರಿಗೆ ಎನೆನ್ನಬೇಕು? ಕನ್ನಡ ಸಾಹಿತ್ಯ ಅಭಿಮಾನಿಗಳೆನ್ನೋಣವೋ ? ಅವಕಾಶವಾದಿಗಳೆನ್ನೋಣವೋ? ನಿರಭಿಮಾನಿಗಳೆನ್ನೋಣವೋ? ವೈಯಕ್ತಿಕ ಲಾಭ, ಸ್ವಾರ್ಥಸಾಧನೆಯ ಸಮಯಸಾಧಕತನವೆನ್ನೋಣವೋ?! ಕನ್ನಡ ನಾಡುನುಡಿಯ ಶಾರದಾ ಮಂದಿರ ಕಸಾಪಕ್ಕೆ ಗ್ರಹಣದಂತೆ ಹಿಡಿದಿರುವ ಮನು ಬಳೆಗಾರ ಬಗ್ಗೆ ನೀವು ಏನು ಹೇಳ್ತೀರಾ ?

ಆರ್. ಶಿವಕುಮಾರಸ್ವಾಮಿ ಕುರ್ಕಿ
ಮೊ: 8970948221

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಲೋಕಾರೂಢಿ

ಸಿಎಎ – ಎನ್ ಆರ್ ಸಿ ಗೊಂದಲ ಮತ್ತು ಪಾಕಿಸ್ತಾನ – ಭಾರತ ವಿಭಜನೆ

Published

on

  • ರಘೋತ್ತಮ ಹೊ.ಬ

ಪ್ರಸ್ತುತದ ಸಮಸ್ಯೆಗೆ ಕನ್ನಡಿ ಹಿಡಿಯುವ ಬಾಬಾಸಾಹೇಬ್ ಅಂಬೇಡ್ಕರ್ ರ ಈ ಕೃತಿ “Pakistan or The Partition of India” (ಪಾಕಿಸ್ತಾನ ಅಥವಾ ಭಾರತದ ವಿಭಜನೆ) ಪ್ರತಿಯೊಬ್ಬರೂ ಓದಬೇಕು. ಒಬ್ಬ ನ್ಯಾಯಾಧೀಶರ ಮಾದರಿಯಲ್ಲಿ ಒಂದು ಕಡೆ ಮುಸ್ಲಿಮರು ಮತ್ತೊಂದು ಕಡೆ ಹಿಂದೂಗಳು ಇಬ್ಬರನ್ನೂ ಕಕ್ಷಿದಾರರ ರೀತಿ ಇರಿಸಿ ಅಂಬೇಡ್ಕರ್ ಈ ಕೃತಿ ಬರೆಯುತ್ತಾ ಹೋಗುತ್ತಾರೆ.

ಸಮಚಿತ್ತದ ನ್ಯಾಯ. ಹೇಗೆಂದರೆ ಅಂಬೇಡ್ಕರರ ಈ ಕೃತಿಯನ್ನು ಹಿಂದೂಗಳು ಒಪ್ಪಲಿಲ್ಲ ಮುಸ್ಲಿಮರು ಕೂಡ ಒಪ್ಪಲಿಲ್ಲ. ಇಬ್ಬರೂ ಒಪ್ಪದ ಈ ಕೃತಿಯನ್ನು ಅಂಬೇಡ್ಕರರು ತನ್ನ ಬರಹದ ದಿಗ್ವಿಜಯ ಎನ್ನುತ್ತಾರೆ. 80 ವರ್ಷಗಳ ಹಿಂದೆ ಅವರು ಬರೆದ ಈ ಕೃತಿ ಒಂದು ರೀತಿಯ ಬಾಬಾಸಾಹೇಬರ ದೇಶಪ್ರೇಮದ ಕೊಡುಗೆಯಾಗಿದೆ.

ಆ ಮೂಲಕ ಈ ದೇಶದ ಬಗ್ಗೆ, ಇದರ ಒಳಿತಿನ ಬಗ್ಗೆ ಅಂಬೇಡ್ಕರರಿಗೆಷ್ಟು ಕಾಳಜಿ ಇತ್ತು, ಇದೆ ಎಂಬುದು ಈ ಕೃತಿಯಿಂದ ಸಾಬೀತಾಗುತ್ತದೆ. ಅದರಲ್ಲೂ CAA ಮತ್ತು NCR ಗೊಂದಲದ ಈ ದಿನಗಳಲ್ಲಿ ಪರಿಹಾರ ಪರಿಣಾಮ ಏನಾಗಬಹುದು ಎಂಬ ಬಗ್ಗೆ ತಿಳಿಯಲು ಪ್ರತಿಯೊಬ್ಬರೂ ಈ ಕೃತಿ ಓದಲೇಬೇಕು.

ಗೆಳೆಯರೊಬ್ಬರು “ಅಂಬೇಡ್ಕರ್ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಬೇಕು ಎಂದಿದ್ದರು” ಎಂದು ಜನಸಾಮಾನ್ಯರಿಗೆ ತಪ್ಪು ಸಂದೇಶ ನೀಡಲು ಯತ್ನಿಸಿದ್ದಾರೆ. ಆ ಮೂಲಕ ಬಾಬಾಸಾಹೇಬರಿಗೆ ಕೆಟ್ಟ ಹೆಸರು ತರುವ ಕೆಲಸವನ್ನು ಸದರಿಯವರು ಮಾಡಲೆತ್ನಿಸಿದ್ದಾರೆ.

ಈ ನಿಟ್ಟಿನಲ್ಲಿ ಸದರಿಯವರ ಬೌದ್ಧಿಕ ದಿವಾಳಿತನಕ್ಕೆ ಏನನ್ನಬೇಕೋ ತಿಳಿಯುತ್ತಿಲ್ಲ. ಆದ್ದರಿಂದ ವಾಸ್ತವದ ಉತ್ತರ ತಿಳಿಯಲು ಪ್ರತಿಯೊಬ್ಬರೂ ಈ ಕೃತಿ ಓದಿ. ಆ ಮೂಲಕ ಒಂದು ದೇಶ ಧರ್ಮದ ಆಧಾರದ ಮೇಲೆ ಕಚ್ಚಾಡುತ್ತ ಕುಳಿತರೆ ಆ ದೇಶದ ಕತೆ ಏನಾಗಬಹುದು? ಈ ಹಿನ್ನೆಲೆಯಲ್ಲಿ ದೇಶಪ್ರೇಮಿಗಳೆಲ್ಲರೂ ಅಂಬೇಡ್ಕರ್ ರ ಅಪ್ರತಿಮ ದೇಶ ಪ್ರೇಮದ ಅಪರೂಪದ ಈ ಕಾಣ್ಕೆಯ ದರ್ಶನ ಪಡೆಯಿರಿ. ಆ ಮೂಲಕ ನಿಮ್ಮ ದೇಶಪ್ರೇಮವನ್ನೂ ಹೆಚ್ಚಿಸಿಕೊಳ್ಳಿ ಎಂಬುದು ಕಳಕಳಿಯ ಮನವಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಲೋಕಾರೂಢಿ

ದುಬಾರಿಯಾದ ಈರುಳ್ಳಿ, ಮಾಂಸದ ಬೆಲೆಗಳು ಮತ್ತು ಸಿಎಎ-ಎನ್ ಆರ್ ಸಿ ಹೋರಾಟ

Published

on

  • ರಂಗನಾಥ ಕಂಟನಕುಂಟೆ

ಮಾಂಸ ತರಲು ಇಂದು ಅಂಗಡಿಗೆ ಹೋಗಿದ್ದೆ. ಒಂದು ಕೆ.ಜಿ. ಮಾಂಸ ಕೊಂಡುಕೊಂಡು 500ರೂ ಕೊಟ್ಟೆ. ಅಂಗಡಿಯವರು 560 ರೂ ಎಂದರು! ಒಂದು ತಿಂಗಳ ಹಿಂದೆ ಕೆ.ಜಿ. ಮಾಂಸಕ್ಕೆ 480 ರೂ ಕೊಟ್ಟಿದ್ದೆ. ಅದರ ಆಧಾರದ ಮೇಲೆ 500 ರೂ ಕೊಟ್ಟೆ. ಅವರು 560 ಎಂದ ಮೇಲೆ ಮತ್ತೆ ನೂರು ಕೊಟ್ಟಿದ್ದಕ್ಕೆ ಚಿಲ್ಲರೆ ಇಲ್ಲದ ಕಾರಣ ಒಂದು ತುಂಡು ಮಾಂಸ ಹಾಕಿ 600 ರೂ ಸರಿಯಾಯಿತು ಎಂದರು. ಮನದಲ್ಲೇ ಚಿಂತಿಸುತ್ತ ಮನಗೆ ಬಂದು ಬೇಯಿಸಿ ತಿಂದೂ ಆಯಿತು. ನಾಲ್ಕು ಜನರಿಗೆ ಅದು ಸಾಲಲಿಲ್ಲ!

ಇಲ್ಲಿನ ಮುಖ್ಯ ವಿಚಾರ ಇದಲ್ಲ. ಸದ್ಯಕ್ಕೆ ಇಷ್ಟು ಹಣವನ್ನು ಕೊಟ್ಟು ಖರೀದಿಸಿ ತಿನ್ನುವ ಸಾಮಥ್ರ್ಯ ಇರುವವರು ತಿನ್ನುತ್ತಾರೆ. ಈ ಬೆಲೆ ಮತ್ತೂ ಏರಲಿದೆ. ಇದರಲ್ಲಿ ಯಾವ ಅನುಮಾನವೂ ಇಲ್ಲ.

ಆದರೆ ದಿನಕ್ಕೆ ಇನ್ನೂರು ಮುನ್ನೂರು ನಾನ್ನೂರು ಐನೂರು ಇದಕ್ಕಿಂತ ಕೊಂಚ ಹೆಚ್ಚು ಕಡಿಮೆ ಆದಾಯವನ್ನು ಪ್ರತಿದಿನ ಗಳಿಸುವ ಜನರು ಇಷ್ಟೊಂದು ಬೆಲೆ ನೀಡಿ ಕುರಿ ಮೇಕೆ ಮಾಂಸವನ್ನು ಖರೀದಿಸಿ ತಿನ್ನಲು ಸಾಧ್ಯವೇ? ಎಂಬ ಪ್ರಶ್ನೆ ಇಲ್ಲಿ ಮುಖ್ಯವಾಗಿದೆ.

ಇದು ದುಬಾರಿ ಎನ್ನಿಸಿ ಸಹಜವಾಗಿ ಮಾಂಸಾಹಾರಿಗಳು ಹೈಬ್ರಿಡ್ ಕೋಳಿ ಮಾಂಸದತ್ತ ಚಲಿಸುತ್ತಾರೆ. ಇದು 120ರ ಆಸುಪಾಸಿನಲ್ಲಿ ಸಿಗುತ್ತದೆ. ಆದರೆ ಈ ಹೈಬ್ರಿಡ್ ಕೋಳಿ ಮಾಂಸ ದೇಹದ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದನ್ನು ಅನೇಕ ಆಹಾರ ತಜ್ಞರು ಎಚ್ಚರಿಸಿದ್ದಾರೆ. ನಿರಂತರವಾಗಿ ಇದನ್ನು ಸೇವಿಸುವವರ ಆರೋಗ್ಯದ ಮೇಲೆ ಮಾರಕ ಪರಿಣಾಮಗಳು ಬೀರುವುದರಲ್ಲಿ ಅನುಮಾನವೇ ಇಲ್ಲ.

ಅಂದರೆ ಕಡಿಮೆ ಆದಾಯ ಇರುವವರು ಕುರಿ ಮೇಕೆ ಮಾಂಸವನ್ನು ಖರೀದಿಸಲು ಸಾಧ್ಯವಾಗದೆ ಅನಿವಾರ್ಯವಾಗಿ ಹೈಬ್ರಿಡ್ ಚಿಕನ್ ಆಯ್ಕೆಮಾಡಿಕೊಳ್ಳುತ್ತಾರೆ. ಅಂದರೆ ಬೆಲೆಗಳು ವಿಪರೀತ ಹೆಚ್ಚಿದಾಗ ಅದು ಕಡಿಮೆ ಆದಾಯ ಇರುವ ಜನರ ಆಹಾರ ಕ್ರಮದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅದು ಸಹಜವಾಗಿ ಅವರ ಆರೋಗ್ಯದ ಮೇಲೆ ¯ ಪರಿಣಾಮ ಬೀರುತ್ತದೆ ಎಂಬುದನ್ನೂ ಇದು ತೋರಿಸಿಕೊಡುತ್ತದೆ.

ಅಲ್ಲದೆ ಹೆಚ್ಚು ದುಡಿಮೆ ಇರುವವರ ಮತ್ತು ಕಡಿಮೆ ಆದಾಯ ಇರುವವರ ನಡುವೆ ಆಹಾರ ಕ್ರಮದಲ್ಲಿ ವ್ಯತ್ಯಾಸ ಉಂಟಾಗುವುದನ್ನು ಇದು ತೋರಿಸಿಕೊಡುತ್ತದೆ. ಕುರಿ ಮೇಕೆ ಮಾಂಸವು ಉಳ್ಳವರ ಆಹಾರವಾಗಿ ಹೈಬ್ರಿಡ್ ಕೋಳಿ ಮಾಂಸವು ಬಡವರ, ಕಾರ್ಮಿಕರ, ಕಡಿಮೆ ಆದಾಯ ಇರುವವರ ಆಹಾರವಾಗಿ ಬದಲಾಗುತ್ತದೆ.

ಇದು ಹೊಸ ಬಗೆಯ ತರತಮ ಸೃಷ್ಟಿಸುತ್ತದೆ. ಇದೇ ಹೊತ್ತಿನಲ್ಲಿ ಮೀನಿನ ಬೆಲೆಗಳು ವಿಪರೀತ ಹೆಚ್ಚಿವೆ. ಕರಾವಳಿಯವರಿಗೂ ಇದರ ಬಿಸಿ ತಟ್ಟಿದೆ. ಮೀನೂ ಕೂಡ ಬಡವರಿಗೆ ಎಟುಕದ ಮಟ್ಟಕ್ಕೆ ಅದರ ಬೆಲೆಗಳು ಏರುತ್ತಿವೆ. ಮಾಂಸಾಹಾರಿಗಳ ನಡುವೆ ಇದು ಹೊಸದೇ ಬಿಕ್ಕಟ್ಟನ್ನು ಸೃಷ್ಟಿಸುತ್ತಿದೆ.

ಇದೇ ಹೊತ್ತಿನಲ್ಲಿ ಒಂದು ಕೆ.ಜಿ. ಈರುಳ್ಳಿ 120ರಿಂದ180 ರೂ ಇದೆ. ಇದೇ ರೀತಿಯಾಗಿ ಹಣ್ಣುಗಳು, ಅನೇಕ ಪದಾರ್ಥಗಳ ಬೆಲೆಗಳು ವಿಪರೀತ ಹೆಚ್ಚಿವೆ. ಈ ಸಮಸ್ಯೆಗಳ ಬಗೆಗೆ ಯೋಚಿಸುವುದು ಅತ್ಯಂತ ಜರೂರಾಗಿದೆ.

ಆದರೆ ಈಗ ಮನೆ ಬಾಗಿಲಿಗೆ ಬಂದಿರುವ ಮಹಾಮಾರಿ ಸಿಎಎ ಕಾಯ್ದೆ-ಎನ್‍ಆರ್‍ಸಿಗಳು ಇಂತಹ ದುಡಿಮೆಗಾರರನ್ನು ಬಡವರನ್ನು ಕಾರ್ಮಿಕರನ್ನು ದುಡಿಮೆಗಾರರನ್ನು ಬೀದಿಗಳಿಗೆ ಎಳೆದಿದೆ. ಇಂತಹ ಮಹಾಮಾರಿಯ ವಿರುದ್ಧ ಹೋರಾಡುವುದೋ ತಿನ್ನುವ ಆಹಾರದ ಬಿಕ್ಕಟ್ಟುಗಳನ್ನು ಬಗೆಹರಿಸಿಕೊಳ್ಳಲು ಹೋರಾಡುವುದೋ? ಎಂಬ ಸಂದಿಗ್ಧತೆ ಸೃಷ್ಟಿಯಾಗಿದೆ.

ಒಂದೆಡೆ ಬದುಕುವ ಪರದಾಟ; ಮತ್ತೊಂದೆಡೆ ನೀವು ಈ ದೇಶದ ಪ್ರಜೆಗಳು ಎಂಬುದನ್ನು ಸರ್ಕಾರಿ ದಾಖಲೆ ಕೊಟ್ಟು ನಿಮ್ಮ ಪೌರತ್ವವನ್ನು ಸಾಬೀತು ಪಡಿಸಿ ಎಂಬ ಒತ್ತಡ. ಈ ಪೌರತ್ವವನ್ನು ಸಮರ್ಥಿಸಿಕೊಳ್ಳದೇ ಹೋದರೆ ಅಸ್ಸಾಂನಲ್ಲಿ ಸಂಭವಿಸಿರುಂತೆ ಡಿಟೆಂಶನ್ ಕ್ಯಾಂಪ್ ಸೇರಬೇಕಾದ ಆತಂಕ. ಈ ದೇಶದ ಪ್ರಜೆಗಳ ಸಾಮಾನ್ಯ ಜನರ ಬದುಕು ದಿವಾಳಿಯೇಳಲು ಇನ್ನೇನು ಬೇಕು?

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending