Connect with us

ಭಾವ ಭೈರಾಗಿ

ಕವಿತೆ | ಮಣ್ಣು- ಬಿತ್ತ

Published

on

  • ಹೆಚ್. ಆರ್. ಸುಜಾತಾ

ಟ್ಟಿಟ್ಟಿದ್ದ ಬಿತ್ತಕೆ ಉಸಿರಾಗಲು
ಮಣ್ಣ ಮೈ ಹುಡಿಹುಡಿ ಆಗುತ್ತಾ ಕೂಡುತ್ತ
ಗಾಳಿನೀರು ಬಿಸಿಲುಗಳ ಒಳಸೆಳೆಯುತ್ತ
ಬಿಸಿಲುಬೆಳದಿಂಗಳೊಡಗೂಡಿ
ಕೂಡುಣ್ಣುವ ಸುಖವನ್ನು ಎದೆಗಿಳಿಸಿಕೊಳ್ಳುತ್ತಾ
ಬಿತ್ತದ ಬೇರನ್ನು ಒತ್ತಿಕೊಳ್ಳುತ್ತಾ
ಹೊರಬಿಟ್ಟ ಚಿಗರುಗಣ್ಣಿಗೆ ಕೈಯೂರಲು ಹೆಗಲಾಗುತ್ತಾ
ಒಳಗಣ್ಣಲಿ ಬೇರುಗಣ್ಣಿನ ಬೆರಗನ್ನು ಸಿಂಬೆಸುತ್ತುತ್ತ ಮುತ್ತುತ್ತ ಇರುವಾಗ..,
ತನ್ನ ಮೈ ಸುತ್ತಿಕೊಂಡು
ಅಗಲದ
ಮಣ್ಣಕಣಕಣವನು ಹರಿದು ಮರೆತು
ಜಿಗಿದು ಆಗಸಕೆ ನೆಗೆಯುವಾಸೆ!
ಎತ್ತರದ ನೆಟ್ಟನೆಯ ಮರಕೆ!!
ಅರಿಯದದು ನೆಲಕುರುಳುವ ಕಾಲದಲ್ಲೂ
ಮಣ್ಣು ಆತು ತನ್ನ ಕರಗಿಸಿಕೊಳ್ಳುವ ಪರಿಯನ್ನು
ಮಣ್ಣು ತಾನು ತಾನಾಗುಳಿವುದೇ
ಮಣ್ಣಿನ ತಿಳುವಳಿಕೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಭಾವ ಭೈರಾಗಿ

ಕವಿತೆ | ಇತಿ‌ ನಿನ್ನ ಬೆಂಗಳೂರು

Published

on

ಸೂರಿ
  • ದುನಿಯಾ ಸೂರಿ, ಚಿತ್ರ ನಿರ್ದೇಶಕ

ರಕಾರಿ ಗಾಡಿಯ ಮೇಲೆ
6 1/2 ವರ್ಷದ ಕೂಸು, ಬೆಳಗಿನ ಜಾವ
ಕತ್ತಲೆಯನ್ನು ನುಂಗುವಾಗ,
ಎಷ್ಟು ಮುಷ್ಟಿ ಬಿಗಿ ಹಿಡಿದರೂ ಮೈಯೆಲ್ಲಾ ಚಳಿ.
ಬೆಳಗಿನ ಮೂರುವರೆ ಸಮಯ
ಎದ್ದು ಕೂತಾಗ, ಕಿವಿಗೆ ನುಗ್ಗಿದ ಗಾಳಿಗೆ
ದೂರದಲ್ಲಿ ಬರುವ ದೀಪಗಳು ಮಬ್ಬು ಮಬ್ಬು
ಇದು ಕನಸೋ ಎಚ್ಚರವೋ ಗೊತ್ತಿಲ್ಲ.

ಅಪ್ಪಗಾಡಿ ತಳ್ಳುವಾಗ ನಾನು ಪ್ರಯತ್ನ ಪಡದೇ
ಮುನ್ನಡೆದಂತೆ ಏನೋ ಹಗುರ
ಇವತ್ತಿಗೂ ಆ ಅನುಭವಕ್ಕೆ ಹೆಸರಿಟ್ಟು
ಹೀಗೆ ಎಂದು ವಿವರಿಸಲು ಇನ್ನೊಂದು
ಅದೇ ರೀತಿಯ ಅನುಭವ ಇಲ್ಲ

ಹಾಗೇ ಈ ನಗರವನ್ನು ನನ್ನ ದೃಷ್ಟಿಕೋನದಿಂದ
ನೋಡುತ್ತಿದ್ದೇನೆ… ನಿರಂತರವಾಗಿ
ಅದೇ ಅದೇ ರಸ್ತೆಗಳು ಸೋತು ಕೂತು
ಗೆದ್ದು ಕಾರಿನಲ್ಲಿ ಅಲೆಯುವಾಗ
ಮತ್ತೆ ಮತ್ತೆ ನೆನಪಾಗುವ ನನ್ನೊಳಗಿನ
ನೆನಪುಗಳು, ಆ ನೆನಪುಗಳನ್ನೇ
ಮತ್ತೆ ಮತ್ತೆ ಸಿನೆಮಾ ಮಾಡುತ್ತೇನೆ
ಇದು ಮಾತ್ರ ಕ್ಷಣ ಕ್ಷಣದ ಮಧ್ಯೆ ಇರುವ
ಖಾಲಿತನ, ಇನ್ನೊಂದು ಶುರುವಾಗುವ
ಮೊದಲು ಇದ್ದ ಸೈಲೆನ್ಸ್,

ನಗರ ಎಂದರೆ ನನ್ನ ದೇಹ ಎಚ್ಚರವಾಗಿ
ಆಕಾಶ ನೋಡಿ ಭೂಮಿಯ ಮೇಲೆ ಕಾಲಿಟ್ಟು
ಸಂಜೆ ಕತ್ತಲಿಗೆ ಬೆಂಕಿ ಬೆಳಕಾಗಿ ಮಲಗಿ,
ಮತ್ತೆ ಎಚ್ಚರ ಬೇರೊಂದು ನಗರ
ನೆನಪುಗಳು ಪೋಟೋ ರೀತಿ
ವಿಡಿಯೋ ರೀತಿ ನೆನಪಾಗುವುದು.

ಅಲ್ಲೆಲ್ಲಾ ಭೂಮಿ-ಭಾನು ಇದ್ದಲ್ಲೆಲ್ಲಾನಗರ-ರಸ್ತೆ.
ನಮ್ಮ ಯೋಚನೆಯಲ್ಲಿ ಬರುವ ಎಲ್ಲಾ
ನೆನಪಿನಲ್ಲೂ ನಗರ ರಸ್ತೆ, ಊರು,
ನಿನಗೊಂದು ಹೆಸರಿಟ್ಟರೆ ಅದು ನೀನು ಬೆಂಗಳೂರು.
ನೀನು ನಿನ್ನ ನಗು ಇರೋ ಕಡೆ,
ಸಾವು ಬರಲ್ಲ ಅಕಸ್ಮಾತ್ ಸಾವು
ಬಂದರೂ, ಒಂದು ಕ್ಷಣ ನಿನ್ನ ನೋಡುತಾ…
ಬಂದ ಕೆಲಸ ಮರೆಯುವಂತೆ,
ಸದಾ ನಗು ಜೀವಂತವಾಗಿ ರಾಕ್ಷಸಿ.
ಸದಾ ನಿರಂತರವಾಗಿ,

ಇತಿ ನಿನ್ನ ಬೆಂಗಳೂರು
-ಸೂರಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಭಾವ ಭೈರಾಗಿ

ಕವಿತೆ | ಮಾಯಾಲೋಕ

Published

on

  • ವಿಜಯ್ ನವಿಲೇಹಾಳ್

ಮಾಯಾಲೋಕದಲ್ಲಿ
ಮನಸಿಗೆ ಬಣ್ಣ ಹಚ್ಚಿ
ನಟಿಸುವವರು
ನಂಬಿದವರ ಮನೆಗೆ
ಬೆಂಕಿಹಚ್ಚಿ ತಮ್ಮ ಮನೆಯಲ್ಲಿ
ಅನ್ನ ಬೇಯಿಸಿಕೊಂಡು
ಆರಾಮಾಗಿ ಉಂಡು ಮಲಗುತ್ತಿದ್ದಾರೆ.

ಮುಖಕ್ಕೆ ಬಣ್ಣ ಹಚ್ಚಿ‌ ನಟಿಸುವವರು
ತುತ್ತು ಅನ್ನಕ್ಕಾಗಿ;
ಕೊಂಚ ಮಲಗುವ ಜಾಗಕ್ಕಾಗಿ
ಬೀದಿ‌ಬೀದಿ ಸುತ್ತುತ್ತಿದ್ದಾರೆ.

ಇಲ್ಲಿ‌ಹಚ್ಚಿ‌ಕೊಳ್ಳುವ ಬಣ್ಣಕ್ಕಿಂತ
ಬಣ್ಣ ಹಚ್ಚಿಕೊಳ್ಳುವ ಮನುಷ್ಯರು
ತುಂಬಾ ವಿಭಿನ್ನವಾಗಿ ಕಾಣಿಸುತ್ತಾರೆ.

ಬಣ್ಣಗಳಲಿ ಬಂಧಿಯಾಗಿರುವ
ಮನಸು ಮುಖಗಳ ಭಾವನೆಗಳಿಗೆ
ಸ್ಪಂದಿಸುವ ನಾವುಗಳು ಬದಲಾಗಬೇಕು
ಆಗ ತಾನೆ ಈ ಸಮಾಜ ಬದಲಾಗಲು ಸಾಧ್ಯ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಭಾವ ಭೈರಾಗಿ

ಕನಸಿನ ಈಡಿಯಟ್‍ಗೊಂದು ಪ್ರೇಮ ಪತ್ರ

Published

on

ಪ್ರೇಮಿಗಳ ದಿನಾಚರಣೆಗೆ ಬೆರಳೆಣಿಕೆಯಷ್ಟು ದಿನಗಳು ಉಳಿದಿವೆ ಅಷ್ಟೇ.. ಫೆಬ್ರವರಿ ಬಂತೆಂದರೆ ಸಾಕು ಪ್ರೀತಿ ಮಾಡೋ ಪ್ರತಿ ಒಬ್ಬ ಯುವಕ ಯುವತಿಯರಿಗಂತು ಹಬ್ಬವೋ ಹಬ್ಬ. ಇವಾಗ ಆಗಲೇ ಪ್ರೀತಿ ಅಲ್ಲಿ ಮುಳುಗಿದವರಿಗೆ ಅಂದಿನ ದಿನ ಎಲ್ಲಿಗೆ ಹೋಗಬೇಕು ಅಂತ ಪ್ಲ್ಯಾನ್ ಮಾಡ್ತಿದ್ರೆ, ಪ್ರೀತಿನಾ ಕಳೆದುಕೊಂಡವರು ದುಃಖದಲ್ಲಿರುತ್ತಾರೆ, ಅದರಲ್ಲಿ ಕೆಲವರು ಅವರನ್ನು ಸಮಾಧಾನ ಮಾಡುವಲ್ಲಿ ಹರಸಾಹಸ ಮಾಡುತ್ತಿರುತ್ತಾರೆ. ಇನ್ನೂ ಈ ಪ್ರೀತಿಯೆಂಬ ಸಮುದ್ರಕ್ಕೆ ಈಜದವರು ಬೆಟ್ಟದಷ್ಟು ಕನಸುಗಳನ್ನು ಹೊತ್ತು ನಿಮಗಾಗಿ ಕಾಯ್ತಿರುತ್ತಾರೆ. ಒಟ್ಟಾರೆಯಾಗಿ ಈ ಜಗತ್ತಲ್ಲಿ ಪ್ರೀತಿ ಮಾಡದ ಮನುಜನೇ ಇಲ್ಲ ಅಲ್ವಾ?

ನಾನು ಈ ಮೇಲೆ ಹೇಳಿದ ಕೆಟಗರಿಯಲ್ಲಿ ಕೋಟಿ ಕೋಟಿ ಕನಸುಗಳನ್ನೆತ್ತಿಕೊಂಡು ಮುದ್ದಾದ ಜೀವಕ್ಕಾಗಿ ಕಾಯುತ್ತಿರುವವಳು. ಈ ಯೌವನ ಎಂಬುದು ಬಂದಾಕ್ಷಣ ಪ್ರತೀ ಹುಡುಗಿಯು ಸಹ ತನ್ನ ಜೀವನದಲ್ಲಿ ಬರೋ ತನ್ನ ಹುಡುಗನ ಬಗೆಗೆ ಬೆಟ್ಟದಷ್ಟು ಆಸೆ, ಕನಸುಗಳನ್ನು ಹೊತ್ತು ಆತ ಹೇಗಿರಬೇಕು? ಅವನಲ್ಲಿ ಯಾವ ಗುಣಗಳಿರಬೇಕು? ಸದಾ ನನ್ನನ್ನ ಮುದ್ದಿಸುತ್ತಾನ? ನನ್ನ ತಂದೆ ತಾಯಿಯ ನೆನಪುಗಳನ್ನ ಮರೆಸಿ ಮಗುವಿನ ಹಾಗೆ ನೋಡ್ಕೊತ್ತಾನ? ಹೀಗೆ ಸಾವಿರಾರು ಪ್ರಶ್ನೆಗಳನ್ನ ಹಾಕೊಂಡು ತಾವು ನೋಡೋ ಮೂವೀಗಳಲ್ಲಿ ಬರೋ ಪಾತ್ರಧಾರಿಗಳಲ್ಲಿ ತನ್ನ ರಾಜಕುಮಾರನ ಬಗೆಗಿನ ಕನಸುಗಳನ್ನ ಕಾಣ್ತಿರುತ್ತಾರೆ. ಹೀಗೆಯೇ ನಾನು ಕೂಡ ನನ್ನವನ ಕುರಿತಾಗಿ ಸಾವಿರಾರು ಆಸೆಗಳನ್ನು ಹೊತ್ತು ಕಾಯುತ್ತಲ್ಲಿದ್ದೇನೆ. ಹೇ ಮುದ್ದು ನೀನೆಲ್ಲಿದ್ದಿಯೋ ನನಗಂತು ಗೊತ್ತಿಲ್ಲ…. ಆದ್ರೆ ನಿನ್ನ ನೆನಪಲ್ಲೇ ಹೀಗೊಂದು ಪತ್ರ ನಿನಗಾಗಿ ಕಣೋ….

ಕನಸಿನ ಈಡಿಯಟ್‍ಗೊಂದು ಪತ್ರ,

ಹೇ ಪ್ರಿಯಕರನೆ.. ನೀನು ನನ್ನ ಬೆನ್ನುಡಿಯೂ ಅಲ್ಲ, ನನ್ನ ಮುನ್ನುಡಿಯೂ ಅಲ್ಲ. ನನ್ನ ಕವನದ ಪ್ರತಿ ಸಾಲು ನಿನದೆ ನೆನಪು ಕಣೋ. ನೀನು ನೋಡೋದಕ್ಕೆ ಹೇಗಿದ್ದಿಯಾ? ನಿನ್ನ ಮುಂದೆ ನನ್ನನ್ನ ಜರೀತಾರ? ನನ್ನ ಹಾಗೆ ನೀನು ನನಗಾಗಿ ಕಾಯ್ತಿದ್ದಿಯಾ? ಹೀಗೆ ನಿನ್ನ ಬಗೆಗೆ ನಾನು ಯೋಚಿಸುವಾಗಲೆಲ್ಲಾ ನನಗೆ ನೆನಪಾಗುವುದು ಪ್ರೀತ್ಸೆ ಅಂತ ಪ್ರಾಣ ತಿನ್ನೋ ಪ್ರೇಮಿ ನೀನು ಯರು? ಅನ್ನೋ ಹಾಡೆ ಕಣೋ.

ಈ ಮೂವೀ ಸಾಂಗ್‍ಗಳು ಕುಡಾ ನಮ್ಮನ್ನ ಎಂತೆಂತಹ ಲೋಕಕ್ಕೊಮ್ಮೆ ಕರೆದೋಗಿ ಬಿಡುತ್ತದ್ದಲ್ಲ!ಲೋ ಅಪ್ಪು.. ನಿನಗಾಗಿ ನಾನು ಅದೆಷ್ಟು ಕಾಯ್ತಿದ್ದಿನಿ ಅಂದ್ರೆ, ಸುಮಾರು ಜನ ಬಂದು ಚಮಕ್ ಕೊಟ್ಟು ಚಲೋ ಅಂದ್ರು ಅಲ್ಲಾಡ್ದೆ ಕಲ್ಲುಗುಂಡ್ ಇದ್ದಂಗೆ ಇದ್ದ ಗುಂಡಿಗೆ ಕಣೋ ನನ್ದು. ಅಂತ ಗುಂಡ್ಗಿಗೆನು ಗೊತ್ತಾಗ್ದಂಗೆ ಸೋಲಿಸೋ ನೀನು ಎಲ್ಲೋ ಇದೀಯಾ? ಈ ಲವ್ ಅನ್ನೋ ಮಾಯಲೋಕದಲ್ಲಿ ಅದೆಷ್ಟೋ ಮಾಟಗಾರರು ಆತ್ಮಬಂಧನ ಮಾಡಿದ್ರೆ, ನೀನೊಂತರ ವಿಭಿನ್ನವಾಗಿ ನನ್ನ ಊeಚಿಡಿಣ ನೇ ದಿಗ್ಬಂಧನ ಮಾಡೋ ಚೆನ್ನಿಗರಾಯ ಯಾರೋ ನೀನು..?

ಕನಸುಗಳ ತುಂಬೆಲ್ಲಾ ಕಾಡೋ ಪೆದ್ದು ಜೀವ ನೀನು. ಕಮಲದ ಹಾಗಿರೋ ಕಣ್ಣು, ಮಿಂಚುಳ್ಳಿ ತರ ಇರುವ ನಿನ್ನ ರೆಪ್ಪೆ, ಮುಂಗುರುಳು ದುಂಬಿಯ ಹಾಗೇ, ಕೆನ್ನೆ ತಾವರೆಯ ಎಲೆಯ ಹಾಗೇ ಇದಿಯೋ ಇಲ್ವೋ ಗೊತ್ತಿಲ್ಲ. ಆದ್ರೆ ನಿನ್ನ ನೆನಪಾದಾಗಲೆಲ್ಲಾ ನನ್ನ ಬಳಿ ಇರುವ ಆ ಬೇಬಿ ಡಾಲ್‍ನೊಮ್ಮೆ ಮುದ್ದಿಸುವೇ, ಆ ಬೇಬಿ ಡಾಲ್ ತರ ಖಂಡಿತ ಇರ್ತಿಯಾ ಅಲ್ವಾ?
ಕಾಯುತ್ತಲಿರುವೆ ನಿನಗಾಗಿ.. ನೀ ಬರುವೆಯಾ ನನಗಾಗಿ…
ಇಂತಿ ನಿನ್ನ ಬರುವಿಕೆಯನ್ನ ಎದುರುನೋಡುತ್ತಿರುವ ನಿನ್ನ ಮನದರಸಿ…

ಪ್ರೀತಿ.ಟಿ.ಎಸ್.
ಪತ್ರಿಕೋದ್ಯಮ ವಿಭಾಗ
ದಾವಣಗೆರೆ ವಿಶ್ವವಿದ್ಯಾಲಯ
ಮೊ.ನಂ: 8310521904

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending