Connect with us

ಭಾವ ಭೈರಾಗಿ

ಕವಿತೆ | ಗರ್ಭದೊಳಗೆ

Published

on

ಟಿಪ್ಪಣಿ : ಶಬರಿಮಲೆಯಿಂದ 3 ಗಂಟೆ ಪ್ರಯಾಣದ ದೂರದಲ್ಲಿ ಮೊಲೆಚಿಪರಂಬು ಎಂಬ ಗ್ರಾಮವಿದೆ. ಮೊಲೆಚಿಪರಂಬು ಅಂದರೆ ‘ಮೊಲೆಗಳ ಭೂಮಿ’ ಎಂದರ್ಥ. 19ನೇ ಶತಮಾನದಲ್ಲಿ ಮೊಲೆ ತೆರಿಗೆ ಕಾಯ್ದೆ ಜಾರಿಯಲ್ಲಿತ್ತು. ಬ್ರಾಹ್ಮಣರಲ್ಲದ ಮಹಿಳೆಯರು ಮೊಲೆ ತೋರಿಸಿ ತೆರಿಗೆ ಕಟ್ಟಬೇಕಾಗಿತ್ತು. ಇದನ್ನು ವಿರೋಧಿಸಿ ಈಳವ ಮಹಿಳೆ ನಂಗೆಲಿ ತನ್ನ ಮೊಲೆ ಕತ್ತರಿಸಿ ತೆರಿಗೆಯಾಗಿ ಕೊಟ್ಟಳು. ಮಹಿಳೆಯರ ಸ್ವಾಭಿಮಾನಕ್ಕಾಗಿ ಪ್ರಾಣಾರ್ಪಣೆ ಮಾಡಿದ ಅವಳ ನೆನಪಿಗಾಗಿ ಆ ಊರಿಗೆ ಮೊಲೆಚಿಪರಂಬು ಎಂಬ ಹೆಸರಿಡಲಾಗಿದೆ. ಶಬರಿಮಲೆ ಸುದ್ದಿಯಲ್ಲಿ ಇರುವ ಹಿನ್ನೆಲೆಯಲ್ಲಿ ಸಂಧ್ಯಾ ದೇವಿ ಅವರ ಈ ಹೊಸ ಕವಿತೆ ನಿಮ್ಮ ಓದಿಗಾಗಿ.

  • ಸಂದ್ಯಾದೇವಿ

ಲ್ಲಿಂದ ಸ್ವಲ್ಪ ಮುಂದೆ
ಮೊಲೆಗಳ ಭೂಮಿ ಇದೆ.
ಎಲ್ಲೆಲ್ಲೂ ಸೊಕ್ಕಿ ನಿಂತ ಪರ್ವತಗಳು ಬೆಟ್ಟ ಗುಡ್ಡಗಳು ಮಲೆಗಳು
ಅವುಗಳೆಡೆಯಿಂದ ಹುಟ್ಟುವ ನದಿಗಳು
ಅಲ್ಲೆಲ್ಲ ಹರಿವ ನೀರು ನೀರಲ್ಲ .

ಬ್ರಾಹ್ಮಣ ರಲ್ಲದ ಹೆಂಗಸರು ಮೊಲೆ ತೋರಿಸಿ
ಗಾತ್ರಕ್ಕೆ ತಕ್ಕ ತೆರಿಗೆ
ಕಟ್ಟಬೇಕಾಗಿದ್ದ ಕಾಲ.

ಈಳವ ಮಹಿಳೆ ನಂಗೆಲಿ
ಮೊಲೆಗಳ ತೋರಿಸಿದಳು ಅವರಿಗೆ
ತೆರಿಗೆ ಕೊಟ್ಟಳು
ಕತ್ತ ರಿಸಿ ಮೊಲೆಗಳ
ಮೂಲೆಗಳಿಂದ ಚಿಮ್ಮಿದ್ದು ರಕ್ತವಲ್ಲ.

ನಂಗೆಲಿಯ ಮಕ್ಕಳ ಮಕ್ಕಳ ಮಕ್ಕಳು
ಮೊಮ್ಮಕ್ಕಳು ಮರಿಮಕ್ಕಳಿಗೆ ನಮಗೆ
ನಾಚಿಕೆಯಾಗಬೇಕು.

ಅಲ್ಲಿ ಪವಿತ್ರ ದೇವರ ನಾಡಿನಲ್ಲಿ
ಒಳಗೆ ಹೋಗದಂತೆ ಹೊರಗೆ
ಸಾವಿರಾರು ಮೊಲೆಗಳು
ಅಡ್ಡಡ್ಡ ಮಲಗಿದ್ದಾವೆ.

ದೇವರು ಅವುಗಳನ್ನು ನೋಡಬಾರದಂತೆ !
ದೇವರೇ…ಮೊಲೆಗಳನ್ನೇನು ಎಲ್ಲವನ್ನೂ ಎಲ್ಲೆಲ್ಲಿಯೂ ನೋಡುವವನು ನೀನು !

ನಂಗೆಲಿಯ ಸ್ವಾಭಿಮಾನಕ್ಕೆ ತಲೆಬಾಗಿ
ಯಾರು ಯಾರೊಬ್ಬ ಹೆಂಗಸರೂ
ಹೋಗಬಾರದು ನಾವು
ಕಳಿಸಬಾರದು ನಮ್ಮ ಮಕ್ಕಳನು
ಮುಟ್ಟಬಾರದು ಹತ್ತಬಾರದು ಮೆಟ್ಟಬಾರದು ಗುಡಿಯ
ಹದಿನೆಂಟು ಮೆಟ್ಟಿಲನು.

ಬೇಕಾಗಿಲ್ಲ ನಮಗೆ ನಿಮ್ಮ ದೇವರು
ನೀವೇ ಇಟ್ಟುಕೊಳ್ಳಿ ಬರಿಯ ಕಲ್ಲು
ನಮ್ಮ ಗರ್ಭದೊಳಗೆ ಜೀವಂತ ಶಿಶು
ಹುಟ್ಟಿದರೆ ಹುಟ್ಟಬೇಕು ದೇವರು
ಮಗುವಾಗಿ ನಮ್ಮ
ಮೊಲೆ ಉಣ್ಣಲು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಭಾವ ಭೈರಾಗಿ

ಕವಿತೆ | ಮಾಯಾಲೋಕ

Published

on

  • ವಿಜಯ್ ನವಿಲೇಹಾಳ್

ಮಾಯಾಲೋಕದಲ್ಲಿ
ಮನಸಿಗೆ ಬಣ್ಣ ಹಚ್ಚಿ
ನಟಿಸುವವರು
ನಂಬಿದವರ ಮನೆಗೆ
ಬೆಂಕಿಹಚ್ಚಿ ತಮ್ಮ ಮನೆಯಲ್ಲಿ
ಅನ್ನ ಬೇಯಿಸಿಕೊಂಡು
ಆರಾಮಾಗಿ ಉಂಡು ಮಲಗುತ್ತಿದ್ದಾರೆ.

ಮುಖಕ್ಕೆ ಬಣ್ಣ ಹಚ್ಚಿ‌ ನಟಿಸುವವರು
ತುತ್ತು ಅನ್ನಕ್ಕಾಗಿ;
ಕೊಂಚ ಮಲಗುವ ಜಾಗಕ್ಕಾಗಿ
ಬೀದಿ‌ಬೀದಿ ಸುತ್ತುತ್ತಿದ್ದಾರೆ.

ಇಲ್ಲಿ‌ಹಚ್ಚಿ‌ಕೊಳ್ಳುವ ಬಣ್ಣಕ್ಕಿಂತ
ಬಣ್ಣ ಹಚ್ಚಿಕೊಳ್ಳುವ ಮನುಷ್ಯರು
ತುಂಬಾ ವಿಭಿನ್ನವಾಗಿ ಕಾಣಿಸುತ್ತಾರೆ.

ಬಣ್ಣಗಳಲಿ ಬಂಧಿಯಾಗಿರುವ
ಮನಸು ಮುಖಗಳ ಭಾವನೆಗಳಿಗೆ
ಸ್ಪಂದಿಸುವ ನಾವುಗಳು ಬದಲಾಗಬೇಕು
ಆಗ ತಾನೆ ಈ ಸಮಾಜ ಬದಲಾಗಲು ಸಾಧ್ಯ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಭಾವ ಭೈರಾಗಿ

ಕನಸಿನ ಈಡಿಯಟ್‍ಗೊಂದು ಪ್ರೇಮ ಪತ್ರ

Published

on

ಪ್ರೇಮಿಗಳ ದಿನಾಚರಣೆಗೆ ಬೆರಳೆಣಿಕೆಯಷ್ಟು ದಿನಗಳು ಉಳಿದಿವೆ ಅಷ್ಟೇ.. ಫೆಬ್ರವರಿ ಬಂತೆಂದರೆ ಸಾಕು ಪ್ರೀತಿ ಮಾಡೋ ಪ್ರತಿ ಒಬ್ಬ ಯುವಕ ಯುವತಿಯರಿಗಂತು ಹಬ್ಬವೋ ಹಬ್ಬ. ಇವಾಗ ಆಗಲೇ ಪ್ರೀತಿ ಅಲ್ಲಿ ಮುಳುಗಿದವರಿಗೆ ಅಂದಿನ ದಿನ ಎಲ್ಲಿಗೆ ಹೋಗಬೇಕು ಅಂತ ಪ್ಲ್ಯಾನ್ ಮಾಡ್ತಿದ್ರೆ, ಪ್ರೀತಿನಾ ಕಳೆದುಕೊಂಡವರು ದುಃಖದಲ್ಲಿರುತ್ತಾರೆ, ಅದರಲ್ಲಿ ಕೆಲವರು ಅವರನ್ನು ಸಮಾಧಾನ ಮಾಡುವಲ್ಲಿ ಹರಸಾಹಸ ಮಾಡುತ್ತಿರುತ್ತಾರೆ. ಇನ್ನೂ ಈ ಪ್ರೀತಿಯೆಂಬ ಸಮುದ್ರಕ್ಕೆ ಈಜದವರು ಬೆಟ್ಟದಷ್ಟು ಕನಸುಗಳನ್ನು ಹೊತ್ತು ನಿಮಗಾಗಿ ಕಾಯ್ತಿರುತ್ತಾರೆ. ಒಟ್ಟಾರೆಯಾಗಿ ಈ ಜಗತ್ತಲ್ಲಿ ಪ್ರೀತಿ ಮಾಡದ ಮನುಜನೇ ಇಲ್ಲ ಅಲ್ವಾ?

ನಾನು ಈ ಮೇಲೆ ಹೇಳಿದ ಕೆಟಗರಿಯಲ್ಲಿ ಕೋಟಿ ಕೋಟಿ ಕನಸುಗಳನ್ನೆತ್ತಿಕೊಂಡು ಮುದ್ದಾದ ಜೀವಕ್ಕಾಗಿ ಕಾಯುತ್ತಿರುವವಳು. ಈ ಯೌವನ ಎಂಬುದು ಬಂದಾಕ್ಷಣ ಪ್ರತೀ ಹುಡುಗಿಯು ಸಹ ತನ್ನ ಜೀವನದಲ್ಲಿ ಬರೋ ತನ್ನ ಹುಡುಗನ ಬಗೆಗೆ ಬೆಟ್ಟದಷ್ಟು ಆಸೆ, ಕನಸುಗಳನ್ನು ಹೊತ್ತು ಆತ ಹೇಗಿರಬೇಕು? ಅವನಲ್ಲಿ ಯಾವ ಗುಣಗಳಿರಬೇಕು? ಸದಾ ನನ್ನನ್ನ ಮುದ್ದಿಸುತ್ತಾನ? ನನ್ನ ತಂದೆ ತಾಯಿಯ ನೆನಪುಗಳನ್ನ ಮರೆಸಿ ಮಗುವಿನ ಹಾಗೆ ನೋಡ್ಕೊತ್ತಾನ? ಹೀಗೆ ಸಾವಿರಾರು ಪ್ರಶ್ನೆಗಳನ್ನ ಹಾಕೊಂಡು ತಾವು ನೋಡೋ ಮೂವೀಗಳಲ್ಲಿ ಬರೋ ಪಾತ್ರಧಾರಿಗಳಲ್ಲಿ ತನ್ನ ರಾಜಕುಮಾರನ ಬಗೆಗಿನ ಕನಸುಗಳನ್ನ ಕಾಣ್ತಿರುತ್ತಾರೆ. ಹೀಗೆಯೇ ನಾನು ಕೂಡ ನನ್ನವನ ಕುರಿತಾಗಿ ಸಾವಿರಾರು ಆಸೆಗಳನ್ನು ಹೊತ್ತು ಕಾಯುತ್ತಲ್ಲಿದ್ದೇನೆ. ಹೇ ಮುದ್ದು ನೀನೆಲ್ಲಿದ್ದಿಯೋ ನನಗಂತು ಗೊತ್ತಿಲ್ಲ…. ಆದ್ರೆ ನಿನ್ನ ನೆನಪಲ್ಲೇ ಹೀಗೊಂದು ಪತ್ರ ನಿನಗಾಗಿ ಕಣೋ….

ಕನಸಿನ ಈಡಿಯಟ್‍ಗೊಂದು ಪತ್ರ,

ಹೇ ಪ್ರಿಯಕರನೆ.. ನೀನು ನನ್ನ ಬೆನ್ನುಡಿಯೂ ಅಲ್ಲ, ನನ್ನ ಮುನ್ನುಡಿಯೂ ಅಲ್ಲ. ನನ್ನ ಕವನದ ಪ್ರತಿ ಸಾಲು ನಿನದೆ ನೆನಪು ಕಣೋ. ನೀನು ನೋಡೋದಕ್ಕೆ ಹೇಗಿದ್ದಿಯಾ? ನಿನ್ನ ಮುಂದೆ ನನ್ನನ್ನ ಜರೀತಾರ? ನನ್ನ ಹಾಗೆ ನೀನು ನನಗಾಗಿ ಕಾಯ್ತಿದ್ದಿಯಾ? ಹೀಗೆ ನಿನ್ನ ಬಗೆಗೆ ನಾನು ಯೋಚಿಸುವಾಗಲೆಲ್ಲಾ ನನಗೆ ನೆನಪಾಗುವುದು ಪ್ರೀತ್ಸೆ ಅಂತ ಪ್ರಾಣ ತಿನ್ನೋ ಪ್ರೇಮಿ ನೀನು ಯರು? ಅನ್ನೋ ಹಾಡೆ ಕಣೋ.

ಈ ಮೂವೀ ಸಾಂಗ್‍ಗಳು ಕುಡಾ ನಮ್ಮನ್ನ ಎಂತೆಂತಹ ಲೋಕಕ್ಕೊಮ್ಮೆ ಕರೆದೋಗಿ ಬಿಡುತ್ತದ್ದಲ್ಲ!ಲೋ ಅಪ್ಪು.. ನಿನಗಾಗಿ ನಾನು ಅದೆಷ್ಟು ಕಾಯ್ತಿದ್ದಿನಿ ಅಂದ್ರೆ, ಸುಮಾರು ಜನ ಬಂದು ಚಮಕ್ ಕೊಟ್ಟು ಚಲೋ ಅಂದ್ರು ಅಲ್ಲಾಡ್ದೆ ಕಲ್ಲುಗುಂಡ್ ಇದ್ದಂಗೆ ಇದ್ದ ಗುಂಡಿಗೆ ಕಣೋ ನನ್ದು. ಅಂತ ಗುಂಡ್ಗಿಗೆನು ಗೊತ್ತಾಗ್ದಂಗೆ ಸೋಲಿಸೋ ನೀನು ಎಲ್ಲೋ ಇದೀಯಾ? ಈ ಲವ್ ಅನ್ನೋ ಮಾಯಲೋಕದಲ್ಲಿ ಅದೆಷ್ಟೋ ಮಾಟಗಾರರು ಆತ್ಮಬಂಧನ ಮಾಡಿದ್ರೆ, ನೀನೊಂತರ ವಿಭಿನ್ನವಾಗಿ ನನ್ನ ಊeಚಿಡಿಣ ನೇ ದಿಗ್ಬಂಧನ ಮಾಡೋ ಚೆನ್ನಿಗರಾಯ ಯಾರೋ ನೀನು..?

ಕನಸುಗಳ ತುಂಬೆಲ್ಲಾ ಕಾಡೋ ಪೆದ್ದು ಜೀವ ನೀನು. ಕಮಲದ ಹಾಗಿರೋ ಕಣ್ಣು, ಮಿಂಚುಳ್ಳಿ ತರ ಇರುವ ನಿನ್ನ ರೆಪ್ಪೆ, ಮುಂಗುರುಳು ದುಂಬಿಯ ಹಾಗೇ, ಕೆನ್ನೆ ತಾವರೆಯ ಎಲೆಯ ಹಾಗೇ ಇದಿಯೋ ಇಲ್ವೋ ಗೊತ್ತಿಲ್ಲ. ಆದ್ರೆ ನಿನ್ನ ನೆನಪಾದಾಗಲೆಲ್ಲಾ ನನ್ನ ಬಳಿ ಇರುವ ಆ ಬೇಬಿ ಡಾಲ್‍ನೊಮ್ಮೆ ಮುದ್ದಿಸುವೇ, ಆ ಬೇಬಿ ಡಾಲ್ ತರ ಖಂಡಿತ ಇರ್ತಿಯಾ ಅಲ್ವಾ?
ಕಾಯುತ್ತಲಿರುವೆ ನಿನಗಾಗಿ.. ನೀ ಬರುವೆಯಾ ನನಗಾಗಿ…
ಇಂತಿ ನಿನ್ನ ಬರುವಿಕೆಯನ್ನ ಎದುರುನೋಡುತ್ತಿರುವ ನಿನ್ನ ಮನದರಸಿ…

ಪ್ರೀತಿ.ಟಿ.ಎಸ್.
ಪತ್ರಿಕೋದ್ಯಮ ವಿಭಾಗ
ದಾವಣಗೆರೆ ವಿಶ್ವವಿದ್ಯಾಲಯ
ಮೊ.ನಂ: 8310521904

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಭಾವ ಭೈರಾಗಿ

ಕವಿತೆ | ಪ್ರೇಮಕ್ಕೆ ದಿನದ ಹಂಗೇಕೆ?

Published

on

  • ಡಾ.ಎನ್.ಕೆ.ಪದ್ಮನಾಭ

ಪ್ರೇಮಿಗಳಿಗೆ ಆ ಒಂದೇ ಒಂದು ದಿನವೇ?
ಒಪ್ಪಲಾಗದು
ಕಟ್ಟುನಿಟ್ಟಿನ ಬಂಧ ಸಹಿಸಲಾಗದು
ನಿಯಮಗಳ ಭಾರ ಹೊರಲಾಗದು
ಧಿಕ್ಕರಿಸಲೂ ಆಗದು
ಜಗದ ಜಿಪುಣತನದ ಸಣ್ಣತನಕೆ
ಪ್ರೇಮದ ಮೃದು ಮಧುರ ಮೌನ ಸವಾಲು

ಅದೊಂದೇ ಒಂದು ದಿನವೇ?
ಇಷ್ಟಪಡುವ ಒಡಲಾಳದ ಆಂತರ್ಯ
ಸಾಬೀತುಪಡಿಸಲಾಗದು
ಕೊಡುಗೆಗಳ ಆಡಂಬರ ತೋರಿಕೆಗಳೊಳಗೆ
ಮಿಂದೇಳಿಸಿ ಮೆಚ್ಚಿಸಲೂ ಆಗದು
ಜಗದ ಜಡ್ಡುಗಟ್ಟಿದ ಮನಕೆ
ಪ್ರೇಮದ ಹೃದಯಪೂರ್ವಕ ತಕರಾರು

ಒಂದೇ ಒಂದು ದಿನದ ಆಚರಣೆಯ ಶಿಕ್ಷೆಯೇ?
ಧರ್ಮದ ಅಂಗಿ ತೊಟ್ಟು ಬೆನ್ನು ಹತ್ತುವ
ಬೇತಾಳಗಳ ಭಯ
ಜಾತಿಯ ವಿಷದ ನಶೆಯೇರಿಸಿಕೊಂಡ
ಕೊಲೆಗಡುಕ ‘ಮರ್ಯಾದಾ’ ಪುರುಷೋತ್ತಮರ ಉಗ್ರ ಪ್ರತಾಪ
ಜಗದೋನ್ಮಾದ ಅನ್ಯಾಯ ಪರಾಕ್ರಮಕೆ
ಪ್ರೇಮದ ಹೂಭಾಷೆಯ ದೂರು

ಪ್ರೇಮಕ್ಕೆ
ದಿನದ ಕ್ಷಣದ ವರುಷಗಳ ಹಂಗಿನರಮನೆಯ ಖಯ್ಯಾಲಿಯಿಲ್ಲ
ಜಗದ ಯುಗದ ಜನ್ಮಾಂತರದ
ನದಿಯ ನಡಿಗೆಯ ಹಾಗೆ
ಎಲ್ಲ ಮಿತಿಗಳ ಮೀರುವಾಸೆಯ ಹಂಬಲ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending