Connect with us

ಭಾವ ಭೈರಾಗಿ

ಕವಿತೆ | ರಿವಾಯತ (ಮೊಹರಂ ಪದ)

Published

on

 

ಶರಣರು ಶಹೀದರಾದರು
ಯಝೀದ ಕುತಂತ್ರಕೆ
ಕರ್ಬಲ ಕಂಪಿಸಿತು
ಹಜರತ ಹುಸೇನರ ಬಲಿದಾನಕೆ

ನೆತ್ತರು ಹರಿಸಿದರು ನೆಲಕೆ
ಹಸುಗೂಸು ಅಸ್ಗರ ನೆತ್ತಿಹಾರಿದ್ದಿಲ್ಲ
ಮಮ್ಮಲ ಮರುಗಿತು ಭೂಮಿ ರಕ್ತ ಹೀರಲಿಲ್ಲ
ಕಿರುಚಿದರೂ ಗಂಟಲಿಗೆ ನೀರು ಸಿಗಲಿಲ್ಲ
ತಾಯಿಕರುಳಕಂಡು ಸೂರ್ಯಸ್ಥವಾಗಿತಲ್ಲ

ಹರಿಶಿಣ ಮೈಯ ಕಾಸೀಮ ನಡೆದ
ಕರ್ಬಲಕೆ ಜೀವ -ಜೀವದಾಕೆ ಕಬರಿಲ್ಲ
ಹಡೆದಾಕೆ ಅಪ್ಪಣೆ -ಕೈಹಿಡಿದಾಕೆ ಗಪ್ಪನೆ
ಧರ್ಮಯುದ್ಧಕೆ ಪ್ರಾಣ ಬಾಣಕೆ ನೆಟ್ಟು
ಮೈಯ ಹರಿಶಿಣ ಕೆಂಪಾತು ಮದುಮಗನ
ಬಿಟ್ಟ ಕಣ್ಣು ಬಿಟ್ಟಂಗ

ದೋ ರಕಾತ ನಮಾಜ ಯಝೀದ ಅವಾಜ
ಸಿಜದದಾಗ ಕತ್ತಿ ಹಿರಿದನು ಹಜರತ ಹುಸೇನರಿಗೆ
ಪ್ರಾಣ ಬಿಟ್ಟನು ಯಝೀದ ಜನರ ಕೈಯಾಗ
ಶರಣರು ಜೀವಂತ ಜನರ ಮನಸಿನಾಗ.

 -ಸನಾವುಲ್ಲ ನವಿಲೇಹಾಳ್

ಸುದ್ದಿದಿನ.ಕಾಂ|ವಾಟ್ಸಾಪ್|9986715401

ಭಾವ ಭೈರಾಗಿ

ಕವಿತೆ | ಬೆವರು ಸುರಿಸುವುದರಿಂದ ಮಾತ್ರ ಚರಿತ್ರೆ

Published

on

ನಡೆದಾಡುವ ದೇವರು’ ಎಂದು ಹೆಸರಾದ ಸಿದ್ದಗಂಗ ಶ್ರೀಗಳು ಬರೆದಿದ್ದಾರೆ ಎಂದು ವೈರಲ್ ಆದ ತೆಲುಗು ಕ್ರಾಂತಿಕಾರಿ ಕವಿ ಶ್ರೀಶ್ರೀ ಅವರ ಒಂದು ಪ್ರಸಿದ್ಧ ಕವಿತೆ.ಶ್ರೀಗಳು ಶಿವೈಕ್ಯರಾದರು ಎಂಬ ಸುದ್ದಿ ತಿಳಿಯುತ್ತಿದ್ದಂತೆ ಶ್ರೀಗಳ ಹಿರಿಮೆಯನ್ನು ಸಾರುವ ಸುದ್ದಿಗಳು ಸಾಮಾಜಿಕ ಮಾಧ್ಯಮದಲ್ಲಿ ಹರಡತೊಡಗಿವೆ. ಇದೇ ಸಂದರ್ಭದಲ್ಲಿ ಶ್ರೀ ಸಿದ್ದಗಂಗಾ ಶ್ರೀಗಳು ಬರೆದಿರುವ ಕವಿತೆ ಎಂಬ ಶೀರ್ಷಿಕೆಯಲ್ಲಿ ಕವಿತೆಯೊಂದು ವೈರಲ್ ಆಯಿತು. ಆದರೆ ಆ ಕವಿತೆಯು ಆಂಧ್ರದ ಕ್ರಾಂತಿಕಾರಿ ದಿಗಂಬರ ಕವಿಗಳಲ್ಲಿ ಒಬ್ಬರಾದ ಶ್ರೀ ಶ್ರೀ ಅವರು ಬರೆದಿರುವ ಕವಿತೆ ಎಂದು ತಿಳಿದು ಬಂದಿದೆ. ಈ ಕವಿತೆಯನ್ನು ಸಾಮಾಜಿಕ ಕಾರ್ಯಕರ್ತರಾದ ಪದ್ಮಾ ಕೆ ರಾಜ್ ಎಂಬುವವರು ಕೆಲವು ತಿಂಗಳುಗಳ ಹಿಂದೆ ಕನ್ನಡಕ್ಕೆ ಅನುವಾದಿಸಿದ್ದರು.

ಸಾಧ್ಯವಾದರೆ ಓಡು
ಆಗಲಿಲ್ಲವಾದರೆ ನಡೆ
ಅದೂ ಸಾಧ್ಯವಾಗದಿರೆ
ಉರುಳಿ ಕೊಂಡು ಹೋಗು ಅಷ್ಟೇ!

ಆದರೆ ಕದಲದೇ
ಬಿದ್ದಿರಬೇಡ ಒಂದೇ ಕಡೆ

ಕೆಲಸ ಸಿಗಲಿಲ್ಲವೆಂದು,
ವ್ಯಾಪಾರ ನಷ್ಟವಾಯಿತೆಂದು
ಗೆಳೆಯನೊಬ್ಬ ಮೋಸಮಾಡಿದನೆಂದು,
ಪ್ರೀತಿಸಿದವಳು
ಕೈಬಿಟ್ಟಳೆಂದು!!

ಹಾಗೆ ಇದ್ದರೆ ಹೇಗೆ..?
ದಾಹಕ್ಕೆ ಬಾರದ
ಸಮುದ್ರದ ಅಲೆಗಳು ಕೂಡಾ
ಕುಣಿದು ಕುಪ್ಪಳಿಸುತ್ತವೆ ನೋಡು!

ಮನಸು ಮಾಡಿದರೇ…
ನಿನ್ನ ಹಣೆಬರಹ ಇಷ್ಟೇ
ಅಂದವರೂ ಸಹ…
ನಿನ್ನ ಮುಂದೆ ತಲೆ ತಗ್ಗಿಸುವ
ತಾಕತ್ತು ನಿನ್ನಲ್ಲಿದೆ

ಅಂತದ್ದರಲ್ಲಿ ಈ ಪುಟ್ಟ ಕಷ್ಟ ಕೋಟಲೆಗೆ ತಲೆ ಬಾಗಿದರೆ ಹೇಗೆ?

ಸೃಷ್ಟಿ ಚಲನಶೀಲ
ಯಾವುದೂ ನಿಲ್ಲಬಾರದು

ಹರಿಯುವ ನದಿ
ಬೀಸುವ ಗಾಳಿ
ತೂಗುವ ಮರ
ಹುಟ್ಟೋ ಸೂರ್ಯ
ಅಂದುಕೊಂಡಿದ್ದನ್ನು ಸಾಧಿಸಬೇಕೆಂದು
ನಿನ್ನಲ್ಲಿ ಛಲದಿಂದ ಹರಿಯುವ ರುಧಿರ ಸಹ

ಯಾವುದೂ ನಿಲ್ಲಬಾರದು.
ಏಳು… ಎದ್ದೇಳು
ಹೊರಡು…
ನಿನ್ನನ್ನು ಅಲಗಾಡದಂತೆ
ಮಾಡಿದ ಆ ಮಾನಸಿಕ ‌ಸಂಕೋಲೆಗಳನ್ನು ಬೇಧಿಸು,
ಬಿದ್ದ ಜಾಗದಿಂದಲೇ
ಓಟ ಶುರು ಮಾಡು

ನೀನು ಮಲಗಿದ ಹಾಸಿಗೆ
ನಿನ್ನನ್ನು ಅಹಸ್ಯಪಡುವ ಮುನ್ನ
ಅಲಸ್ಯವನ್ನು ಬಿಡು

ಕನ್ನಡಿ ನಿನ್ನನ್ನು ಪ್ರಶ್ನಿಸುವ
ಮುನ್ನ ಉತ್ತರ ಹುಡುಕು

ನೆರಳು ನಿನ್ನನ್ನು ಬಿಡುವ
ಮುನ್ನ ಬೆಳಕಿಗೆ ಬಾ

ಮತ್ತೆ ಹೇಳುತ್ತಿದ್ದೇನೆ…
ಕಣ್ಣೀರು ಸುರಿಸುವುದರಿಂದ
ಅದು ಸಾಧ್ಯವಿಲ್ಲ!
ಬೆವರು ಸುರಿಸುವುದರಿಂದ
ಮಾತ್ರ ಚರಿತ್ರೆ
ಸೃಷ್ಟಿಸಬಹುದೆಂದು
ತಿಳಿದುಕೋ…

ಓದಿದರೆ ಇವು ಪದಗಳಷ್ಟೇ…
ಆದರೆ ಆಚರಿಸಿದಾಗ
ಅಸ್ತ್ರಗಳು..!!!!!
ಮಹಾ ಶಸ್ತ್ರಗಳು!!!!!!!

-ತೆಲುಗು ಮೂಲ: ಶ್ರೀಶ್ರೀ
-ಕನ್ನಡಕ್ಕೆ : ಪದ್ಮಾ ಕೆ ರಾಜ್

ಸುದ್ದಿದಿನ.ಕಾಂ|ವಾಟ್ಸಾಪ್|9986715401

Continue Reading

ಭಾವ ಭೈರಾಗಿ

ಕವಿತೆ | ಮೌನದ ಪಯಣ

Published

on

 

ಮೌನಿಸು ಧ್ಯಾನಿಸು
ಮತ್ತೊಮ್ಮೆ
ದಯಮಾಡಿ ಮೌನಿಸು
ಹಿಂತಿರುಗಿ ನೋಡಿದಾಗ
ನಿನ್ನ ‌‌ಹೆಜ್ಜೆಯ.

ಮತ್ತೆಂದೂ ಹಿಂದಿರುಗಿ ಹೋಗಲಾರದು
ನೆನಹುಗಳ ಸರಮಾಲೆಯಲ್ಲಿ
ಪೊಡಮೂಡುವ ನೀ ಪಾದಕಮಲಕ್ಕೆ
ನುಡಿಮುತ್ತ ನೀಡುವೆ.

ಮನದಲ್ಲಿ ಮೂಡುವ
ಭಾವದಲೆಗಳನ್ನೇರಿ ಬರಲು
ಸನಿಹಕ್ಕೆ ಸೆಳೆದಿದೆ ನಿನ್ನ
ಒಬ್ಬಳೆ ಕೂರಲಾರೆ
ಯಾರನೂ ಕೇಳಲಾರೆ
ನಿನ್ನಾತ್ಮದಾಲಿಂಗನಕ್ಕೆ
ಕಾದಿಹೆನು ಸಮ್ಮಿತಿಸು ಒಮ್ಮೆ.

ಮಗದೊಮ್ಮೆ ಮೌನಿಸು ಧ್ಯಾನಿಸುವೆಯಾ?
ನಿನ್ನಾತ್ಮದಾಲಿಂಗನಕ್ಕೆ ಕಾದಿಹೆನು
ನೇಹದ ಕರೆಗೋಗಟ್ಟು
ಮೂದಲಿಸದೆ ಪ್ರೇಮಿಸು ನೀನು
ಒಬ್ಬಳೆ ಕೂರಲಾರೆ
ಯಾರನೂ ಕೇಳಲಾರೆ.

ಸಾಗರಿ (ಪುಷ್ಪಲತ)

ಸುದ್ದಿದಿನ.ಕಾಂ|ವಾಟ್ಸಾಪ್|9986715401

Continue Reading

ಭಾವ ಭೈರಾಗಿ

ಕವಿತೆ | ಯಯಾತಿಗಳು

Published

on

 

ಸಣದ ದಾರಿಯಲ್ಲಿನ ಮನೆ
ಒಂಟಿ-ಶೂನ್ಯ ಆಕಾರ ನಿರಾಕಾರ
ಭವ ಬಂಧನಗಳ ಕಳಚದ
ಕೊಂಡಿ,ಬೆಳಕು ಹಾಯದ ಕಿಂಡಿ.

ಹಗಲ ಮೆರವಣಿಗೆ ಮಸಣದತ್ತ
ಸಾಲು ಸಾಲು ಅಳು ಕಿರಿಚಾಟ;
ಉಸಿರಾಟ ಮರೆತ ಗಾಳಿ
ಸ್ತಬ್ದ,ನಿಶ್ಶಬ್ದ,ಸಶಬ್ದ!

ಇರುಳು ತಮ್ಮ ಹೆಣಗಳ ತಾವೆ
ಹೊತ್ತವರ ಆರ್ತನಾದ
ನರನರಗಳಲ್ಲೂ ನರಳಾಟ
ಉಸಿರ ತಿತ್ತಿಗಳ ಕಿತ್ತು ಬರಿಗೈ.

ಒಳಗೂ ಹೊರಗೂ ಕುಣಿತ,ಮೊರೆತ
ನಿಸ್ಸಹಾಯಕ ಆಕ್ರಂದನ
ನಿಲುಗಡೆ ಇಲ್ಲದ ಯಾನ
ಅಗಮ್ಯ ಅಗೋಚರ.

ಪುರುವನ್ನು ಕಾದ ಯಯಾತಿಗಳು
ಉಂಡ ಸುಖದ ನೆನಪ
ನೆಕ್ಕುವ ನಾಲಗೆಯ ಮುಲುಕು
ಮೈತುಂಬ ಅಕಾಲ ಮರಣ!

       – ಜಿ. ಮುದ್ದುವೀರಸ್ವಾಮಿ ಹಿರೇಮಳಲಿ

ಸುದ್ದಿದಿನ.ಕಾಂ|ವಾಟ್ಸಾಪ್|9986715401

Continue Reading
Advertisement

Trending