Connect with us

ಭಾವ ಭೈರಾಗಿ

ಕವಿತೆ | ರಕ್ತ ನಮ್ಮದಾದರೇನು? ಅವರದಾದರೇನು?

Published

on

 

ರಕ್ತ ನಮ್ಮದಾದರೇನು? ಅವರದಾದರೇನು?
ಒಟ್ಟಿನಲ್ಲದು ಮನುಷ್ಯರದ್ದೇ.
ಯುದ್ಧ ಪೂರ್ವದಲ್ಲಾದರೇನು? ಪಶ್ಚಿಮದಲ್ಲಾದರೇನು?
ಒಟ್ಟಿನಲ್ಲಿ ಕುಸಿಯುವುದು ಶಾಂತಿನಿಕೇತನವೇ.

ಬಾಂಬುಗಳು ಮನೆಯ ಮೇಲೆ ಬಿದ್ದರೇನು?
ದೂರದ ಗಡಿಯಲ್ಲಾದರೇನು?
ಭೂಮಿಯ ಹೊಲಿಗೆಗಳು ಘಾಸಿಗೊಳ್ಳುತ್ತವೆ
ಬೆಂಕಿಬಿದ್ದ ಹೊಲ ನಮ್ಮದಾದರೇನು? ಅವರದಾದರೇನು?
ಸುಡುಬೆಂಕಿಗೆ ಸಕಲ ಜೀವಗಳು ತತ್ತರಿಸುತ್ತವೆ.

ಟ್ಯಾಂಕುಗಳು ಮುನ್ನುಗ್ಗಿದರೇನು?
ಹಿಂದೆ ಸರಿದರೇನು?
ಭೂತಾಯಿ ಒಡಲು ಬರಿದಾಗುತ್ತದೆ
ವಿಜಯದ ಸಂಭ್ರಮವಾದರೇನು? ಸೋಲಿನ ಸೂತಕವಾದರೇನು?
ಬದುಕು ಗೋರಿಯಲ್ಲಿ ಅವಿತು ಕಣ್ಣೀರಿಡುತ್ತದೆ.

ಯುದ್ಧವೇ ಸಮಸ್ಯೆಯಾಗಿರುವಾಗ
ಯುದ್ಧ ಹೇಗೆ ಸಮಸ್ಯೆಗಳ ಬಗೆಹರಿಸೀತು
ಇಂದು ರಕ್ತ ಮತ್ತು ಬೆಂಕಿಗಳ ಮಳೆ ಸುರಿಸುತ್ತವೆ
ನಾಳೆ ಹಸಿವು ಮತ್ತು ಕ್ಷಾಮಗಳು ಬೆಳೆಯುತ್ತವೆ
ಆದ್ದರಿಂದ ಸಜ್ಜನರೇ
ಯುದ್ಧವು ಹಿಂದೆ ಸರಿದು ಇಲ್ಲವಾದರೆ ಚಂದ
ನಮ್ಮ ನಿಮ್ಮ ಅಂಗಳದಲ್ಲಿ ದೀಪ ಬೆಳಗಿದರೆ ಚಂದ.

ಹಿಂದಿ ಮೂಲ : ಸಾಹಿರ್ ಲೂಧಿಯಾನ್ವಿ
ಅನುವಾದ : ಶಿವಸುಂದರ್

ಸುದ್ದಿದಿನ.ಕಾಂ|ವಾಟ್ಸಾಪ್|9986715401

ಭಾವ ಭೈರಾಗಿ

ಕವಿತೆ | ಒಡಲ ಕಿಚ್ಚು

Published

on

  • ಜರೀನಾ.ಬಿ.ಎನ್ ನವಿಲೇಹಾಳ್

ರ್ಮ ಯಾವುದಾದರೇನು
ತಾಯಿ ಮಡಿಲು ಮೊದಲಿಲ್ಲಿ
ಕರ್ಮಧಾತ ಕೊಟ್ಟ ಜನನಿ
ಒಡಲ ಕಿಚ್ಚು ಸುಡದೆ ಬಿಡದು

ರಾಜಕೀಯ ಕುತಂತ್ರದಲ್ಲಿ
ಅತಂತ್ರ ತುಂಬಿ ಕುಣಿದಿದೆ
ಮುಸ್ಲೀಮ್ ಉಗ್ರ ಧರ್ಮವೆಂದು
ಹಗೆತನವು ಹರಡಿದೆ

ಯಾರದೊಬ್ಬರ ತಪ್ಪಿಗಾಗಿ
ಸರ್ವರೊಬ್ಬರ ಕುಣಿಕೆಯಿಲ್ಲಿ
ಕಾಣದಿರುವ ಕೈಗಳಿಂದ
ಜನರ ಮರಣ ಹೋಮವಿಲ್ಲಿ

ಮುಂಬೈ,ಆಗ್ರ,ಅಯೋಧ್ಯೆಯೆಲ್ಲ
ತಾಯಿ ದೇಹದಂಗಗಳು
ಸುಟ್ಟೊಡನೆ ಛಿದ್ರ-ಛಿದ್ರ
ಹೆತ್ತ ತಾಯಿ ಪ್ರೇಮದೊಡಲು

ಓ ನನ್ನ ಬಾಂಧವ ಕೈಯ ಮುಗಿದು ಬೇಡುವೆ
ಬೇಡ ರಕ್ತಧೋಕುಳಿ
ಗೂಡಿನಲ್ಲೇ ಬೀಡು ಬಿಟ್ಟು
ನಾಡ ಕಟ್ಟ ಬಯಸುವ
ನನ್ನದೊಂದು ಕಳಕಳಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಭಾವ ಭೈರಾಗಿ

ಕವಿತೆ | ನಾನು ಬಡವಿ

Published

on

  • ದ.ರಾ. ಬೇಂದ್ರೆ

ನಾನು ಬಡವಿ ಆತ ಬಡವ
ಒಲವೆ ನಮ್ಮ ಬದುಕು
ಬಳಸಿಕೊಂಡೆವದನೆ ನಾವು
ಅದಕು ಇದಕು ಎದಕು.

ಹತ್ತಿರಿರಲಿ ದೂರವಿರಲಿ
ಅವನೆ ರಂಗಸಾಲೆ
ಕಣ್ಣುಕಟ್ಟುವಂಥ ಮೂರ್ತಿ
ಕಿವಿಗೆ ಮೆಚ್ಚಿನೋಲೆ

ಚಳಿಗೆ ಬಿಸಿಲಿಗೊಂದೆ ಹದನ
ಅವನ ಮೈಯ ಮುಟ್ಟೆ
ಅದೇ ಗಳಿಗೆ ಮೈಯ ತುಂಬ
ನನಗೆ ನವಿರುಬಟ್ಟೆ

ಆತ ಕೊಟ್ಟ ವಸ್ತು ಒಡವೆ
ನನಗೆ ಅವಗೆ ಗೊತ್ತು
ತೋಳುಗಳಿಗೆ ತೋಳಬಂದಿ
ಕೆನ್ನೆ ತುಂಬ ಮುತ್ತು.

ಕುಂದು ಕೊರತೆ ತೋರಲಿಲ್ಲ
ಬೇಕು ಹೆಚ್ಚಿಗೇನು ?
ಹೊಟ್ಟೆಗಿತ್ತ ಜೀವ ಫಲವ
ತುಟಿಗೆ ಹಾಲು ಜೇನು

Continue Reading

ಭಾವ ಭೈರಾಗಿ

ಕವಿತೆ | ನೀ ಬಿರುಸಾಗಿ ಬಾರದಿರು

Published

on

  • ನಾಗವೇಣಿ.ಈ

ಬಿರುಸಾಗಿ ನೀ ಬಾರದಿರು
ನಿನ್ನ ಪ್ರೀತಿಸುವವರು ನಾವೆಲ್ಲ
ನೀನು ತೋರಿದ ರೌದ್ರ ನಾಟ್ಯಕ್ಕೆ
ನಲುಗುತ್ತಿದೆ ಜಗವೆಲ್ಲ

ನೀ ಬರದೆ ನಿಲ್ಲಬೇಡ
ಬರುವ ಮುನ್ನ ನಿನ್ನ ಕರುಣೆ ತೋರ
ನೀ ಬಾರದಿದ್ದರು ನಲುಗುತ್ತವೆ
ಸಕಲ ಜೀವರಾಶಿ ಚರಾಚರ

ನೀ ಬಂದಾಗ ತೋರ ಬೇಡ
ನಿನ್ನೊಳಗಿನ ಅತಿತನವ
ನಿನ್ನ ನರ್ತನದ ಆವೇಶಕ್ಕೆ
ಭೂ ತಾಯಿಯು ಕಂಪಿಸಿದ್ದಾಳೆ

ನೀ ಬರುವ ಮುನ್ನ ಕಣ್ತೆರುದು ನೋಡ
ಇಲ್ಲಿ ತುತ್ತು ಅನ್ನಕ್ಕೂ ದಿನವಿಡಿ
ದಣಿವ ಹಸಿದೊಡಲುಗಳಿವೆ
ಮುರುಕಲು ಜೋಪಡಿಗಳಿವೆ

ಗೊತ್ತು ನಿನ್ನ ಕೋಪದ ಕಾರಣ
ಪ್ರಕೃತಿಯ ಕೊಂದವರ ಮೇಲಿನ
ನಿನ್ನೊಡಲ ಆರ್ತನಾದನ
ಆದರೆ ನಿನ್ನ ಕೋಪದ ಫಲವುಂಡವರವರಲ್ಲ

ಮತ್ತೇ ನೀ ಬರುವ ಮುನ್ನ
ಶಾಂತನಾಗಿ ಬಾರ
ಮನುಕುಲವ ಕ್ಷಮಿಸಿ
ನೀ ಮಳೆಯಾಗಿ ಬಾರ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending