Connect with us

ಭಾವ ಭೈರಾಗಿ

ಕವಿತೆ | ನೀನು

Published

on

 

ಸೆಯ ತನಕ
ಮುಪ್ಪಿನ ಲ್ಲಿ ಮುಗಿಯದ ತೂಕ
ಕನಸಿನಲ್ಲಿ ಕರೆಯದೆ ಬರುವುದು
ಕಾಯುತ್ತಲಿ‌ ಇರುವುದು
ಪ್ರೀತಿಯಲ್ಲಿ ಕೊಗುವುದು
ಬಡಿತದಲ್ಲಿ ತಿಳಿಸುವುದು
ಭಾವನೆಗಳ ಪಾತ್ರವನ್ನು

ಸಾಹಿತ್ಯದ ಸಂದೇಶದಲ್ಲಿ
ನಿನ್ನ ‌ಹುಡುಕಿ ಕೊಂಡು ಬರುವ
ಸಂಗಾತಿ ಮನದ ಶಾಂತಿ
ಪದ ಒಂದು ಧಮನಿ
ಕವಿತೆ ಮೌನ ನೀನು
‌‌ಬರೆಯುವ ಹೊಸ ರೀತಿ ನೀನು
ಬಿಳಿಯ ಹಾಳೆಯಲ್ಲಿ
ಸುಂದರ ಲೇಖನಿ ಬರೆಯುವ
ಸಾಹಿತ್ಯದ ಹೂವು ಕೊಂಚ ನೀನು

ಬದುಕಿನಲ್ಲಿ ನಾವಿಕ
ಕೆಲಸದಲ್ಲಿ ಸೇವಕ
ಪ್ರೀತಿ ಪ್ರೇಮದ ಮಾಲಿಕ
ಒಗ್ಗೂಡಿಸಿ ಬಾಳುವ ಸೈನಿಕ
ಎಷ್ಟೇ ಕಷ್ಟ ಬಂದರು ಹೊಳಪು ‌
ಬರುವ ನಕ್ಷತ್ರ ನೀನು

ಬೆಳಕಾಗಿ ಬರುವ
ಬಯಕೆಯ ತರುವ‌
ನಿನಗಾಗಿ ಕಾಯುವ
ಮನದಲ್ಲಿ ಕರಗುವ
‌‌ಬೆಳಕಿನ ಹುಳು‌ನೀನು
ಪ್ರಜ್ವಲಿಸುವ ದೀಪ ವಾಗಿ ಬಾ
ಭೂಮಿ ತಾಯಿಯ ಮಣ್ಣಿನ
ಮಗನಾಗಿ ಹುಟ್ಟು
ಅಸಿದು ಬಂದವರಿಗೆ
ಅನ್ನ ಹಾಕುವ ವ್ಯಕ್ತಿ ‌ಯಾಗು ನೀನು

ನಿನ್ನ ಗೆ ನೀನೇ ‌ಸಾಟಿ
ಬದುಕಿನಲ್ಲಿ ಚಾಟಿ
ನಿನ್ನ ಮಾತು ಬಲು‌ಗಾಟಿ
ಖಾಲಿಯಾಗುವುದು ಕವಿತೆ ಸಾಲಿನ‌‌ ಪದಗಳು
ಕಾಯುವುದು ನಿನ್ನ ಕೊಂಚ ಉತ್ತರಕ್ಕೆ
‌‌ಬೇಗ ಶರಣಗಿ
ಬದುಕಿನ ‌ದಿಕ್ಕನ್ನೇ ಬದಲಾಯಿಸು ನೀನು
ಬದಲಾಯಿಸು ನೀನು

ಚೈತ್ರ ಕುಮಾರಿ ಕೆ. ಎಂ
‌‌ಗೊಲ್ಲರಹಳ್ಳಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಭಾವ ಭೈರಾಗಿ

ಕವಿತೆ | ಒಡಲ ಕಿಚ್ಚು

Published

on

  • ಜರೀನಾ.ಬಿ.ಎನ್ ನವಿಲೇಹಾಳ್

ರ್ಮ ಯಾವುದಾದರೇನು
ತಾಯಿ ಮಡಿಲು ಮೊದಲಿಲ್ಲಿ
ಕರ್ಮಧಾತ ಕೊಟ್ಟ ಜನನಿ
ಒಡಲ ಕಿಚ್ಚು ಸುಡದೆ ಬಿಡದು

ರಾಜಕೀಯ ಕುತಂತ್ರದಲ್ಲಿ
ಅತಂತ್ರ ತುಂಬಿ ಕುಣಿದಿದೆ
ಮುಸ್ಲೀಮ್ ಉಗ್ರ ಧರ್ಮವೆಂದು
ಹಗೆತನವು ಹರಡಿದೆ

ಯಾರದೊಬ್ಬರ ತಪ್ಪಿಗಾಗಿ
ಸರ್ವರೊಬ್ಬರ ಕುಣಿಕೆಯಿಲ್ಲಿ
ಕಾಣದಿರುವ ಕೈಗಳಿಂದ
ಜನರ ಮರಣ ಹೋಮವಿಲ್ಲಿ

ಮುಂಬೈ,ಆಗ್ರ,ಅಯೋಧ್ಯೆಯೆಲ್ಲ
ತಾಯಿ ದೇಹದಂಗಗಳು
ಸುಟ್ಟೊಡನೆ ಛಿದ್ರ-ಛಿದ್ರ
ಹೆತ್ತ ತಾಯಿ ಪ್ರೇಮದೊಡಲು

ಓ ನನ್ನ ಬಾಂಧವ ಕೈಯ ಮುಗಿದು ಬೇಡುವೆ
ಬೇಡ ರಕ್ತಧೋಕುಳಿ
ಗೂಡಿನಲ್ಲೇ ಬೀಡು ಬಿಟ್ಟು
ನಾಡ ಕಟ್ಟ ಬಯಸುವ
ನನ್ನದೊಂದು ಕಳಕಳಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಭಾವ ಭೈರಾಗಿ

ಕವಿತೆ | ನಾನು ಬಡವಿ

Published

on

  • ದ.ರಾ. ಬೇಂದ್ರೆ

ನಾನು ಬಡವಿ ಆತ ಬಡವ
ಒಲವೆ ನಮ್ಮ ಬದುಕು
ಬಳಸಿಕೊಂಡೆವದನೆ ನಾವು
ಅದಕು ಇದಕು ಎದಕು.

ಹತ್ತಿರಿರಲಿ ದೂರವಿರಲಿ
ಅವನೆ ರಂಗಸಾಲೆ
ಕಣ್ಣುಕಟ್ಟುವಂಥ ಮೂರ್ತಿ
ಕಿವಿಗೆ ಮೆಚ್ಚಿನೋಲೆ

ಚಳಿಗೆ ಬಿಸಿಲಿಗೊಂದೆ ಹದನ
ಅವನ ಮೈಯ ಮುಟ್ಟೆ
ಅದೇ ಗಳಿಗೆ ಮೈಯ ತುಂಬ
ನನಗೆ ನವಿರುಬಟ್ಟೆ

ಆತ ಕೊಟ್ಟ ವಸ್ತು ಒಡವೆ
ನನಗೆ ಅವಗೆ ಗೊತ್ತು
ತೋಳುಗಳಿಗೆ ತೋಳಬಂದಿ
ಕೆನ್ನೆ ತುಂಬ ಮುತ್ತು.

ಕುಂದು ಕೊರತೆ ತೋರಲಿಲ್ಲ
ಬೇಕು ಹೆಚ್ಚಿಗೇನು ?
ಹೊಟ್ಟೆಗಿತ್ತ ಜೀವ ಫಲವ
ತುಟಿಗೆ ಹಾಲು ಜೇನು

Continue Reading

ಭಾವ ಭೈರಾಗಿ

ಕವಿತೆ | ನೀ ಬಿರುಸಾಗಿ ಬಾರದಿರು

Published

on

  • ನಾಗವೇಣಿ.ಈ

ಬಿರುಸಾಗಿ ನೀ ಬಾರದಿರು
ನಿನ್ನ ಪ್ರೀತಿಸುವವರು ನಾವೆಲ್ಲ
ನೀನು ತೋರಿದ ರೌದ್ರ ನಾಟ್ಯಕ್ಕೆ
ನಲುಗುತ್ತಿದೆ ಜಗವೆಲ್ಲ

ನೀ ಬರದೆ ನಿಲ್ಲಬೇಡ
ಬರುವ ಮುನ್ನ ನಿನ್ನ ಕರುಣೆ ತೋರ
ನೀ ಬಾರದಿದ್ದರು ನಲುಗುತ್ತವೆ
ಸಕಲ ಜೀವರಾಶಿ ಚರಾಚರ

ನೀ ಬಂದಾಗ ತೋರ ಬೇಡ
ನಿನ್ನೊಳಗಿನ ಅತಿತನವ
ನಿನ್ನ ನರ್ತನದ ಆವೇಶಕ್ಕೆ
ಭೂ ತಾಯಿಯು ಕಂಪಿಸಿದ್ದಾಳೆ

ನೀ ಬರುವ ಮುನ್ನ ಕಣ್ತೆರುದು ನೋಡ
ಇಲ್ಲಿ ತುತ್ತು ಅನ್ನಕ್ಕೂ ದಿನವಿಡಿ
ದಣಿವ ಹಸಿದೊಡಲುಗಳಿವೆ
ಮುರುಕಲು ಜೋಪಡಿಗಳಿವೆ

ಗೊತ್ತು ನಿನ್ನ ಕೋಪದ ಕಾರಣ
ಪ್ರಕೃತಿಯ ಕೊಂದವರ ಮೇಲಿನ
ನಿನ್ನೊಡಲ ಆರ್ತನಾದನ
ಆದರೆ ನಿನ್ನ ಕೋಪದ ಫಲವುಂಡವರವರಲ್ಲ

ಮತ್ತೇ ನೀ ಬರುವ ಮುನ್ನ
ಶಾಂತನಾಗಿ ಬಾರ
ಮನುಕುಲವ ಕ್ಷಮಿಸಿ
ನೀ ಮಳೆಯಾಗಿ ಬಾರ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending