ಬಹಿರಂಗ
ನೀನಿಲ್ಲದ ಈ ಬದುಕು ಘೋರವೆಂದು ನಡೆದವನು ನಾಯಿಭೈರ

ತಾಯಿಯ ರುಣ ಬಿಟ್ಟರೆ ನಾಯಿಯ ರುಣ ಅಂತಾರಲ್ಲ ಹಾಗೆ ನನ್ನನ್ನು ಪೂಜ್ಯರ ಜೊತೆ ಬೆಸೆದದ್ದು ನಾಯಿಯ ರುಣವೆ. ಹಿರಿಯ ಸಂಶೋಧಕ ಡಾ॥ ಚಿದಾನಂದಮೂರ್ತಿಯವರು ನನ್ನನ್ನು ಪರಿಚಯಿಸಿ ಸ್ವಾಮೀಜಿಗೆ ಕೊಟ್ಟ ಪತ್ರ ಹಿಡಿದು ಮಠಕ್ಕೆ ಹೋದಾಗ ಅಲ್ಲಿ ನಾನು ಕ್ಲಿಕ್ಕಿಸಿದ ಕೆಲ ಫೋಟೋಗಳಿವು . ಪೂಜ್ಯರ ಜೀವಕ್ಕೆ ಜೀವವಾಗಿದ್ದ ಈ ನಾಯಿಯ ಹೆಸರು ಭೈರ.
ಮಠದ ಕೆಲ ಭಕ್ತರಲ್ಲಿ ಸಾಕ್ಷಾತ್ ಕಾಲಭೈರವನೇ ನಾಯಿಯಾಗಿ ಬಂದು ಸ್ವಾಮೀಜಿಗೆ ಕಾವಲಿದ್ದಾನೆಂದೂ ಆದು ಅವರ ಜೊತೆ ಇರುವುದರಿಂದಲೇ ಭೂತ ಪ್ರೇತಾತ್ಮಗಳು ಇತ್ತ ಸುಳಿಯುತ್ತಿಲ್ಲವೆಂಬ ಪ್ರತೀತಿಯಿತ್ತು. ನಾನು ಮಠಕ್ಕೆ ಹೋದಾಗಲೆಲ್ಲ ವಿಶೇಷವಾಗಿ ಅದನ್ನು ಮಾತಾಡಿಸಿ ಬರುತ್ತಿದ್ದೆ.
ಅದೊಂದು ವಿಶಿಷ್ಟ ಬುಧ್ಧಿಮತ್ತೆಯ ನಾಟಿ ತಳಿಯ ನಾಯಿ. ಅದು ಮಠಕ್ಕೆ ಬಂದು ಸೇರಿಕೊಂಡ ಬಗ್ಗೆಯೇ ಥರೇವಾರಿ ಕತೆಗಳಿವೆ.ಈ ಪೈಕಿ ಒಂದು – ಬುಧ್ಧಿಯವರು ಯಾವುದೋ ಕಾರ್ಯಕ್ರಮ ಮುಗಿಸಿ ವಾಪಸ್ಸಾಗುವಾಗ ಮಾರ್ಗಮಧ್ಯೆ ಕುಡುಕರು ನಾಯಿ ಮರಿಯೊಂಧರ ಮೇಲೆ ಕಾರುಹತ್ತಿಸಿ ಅದರ ಒದ್ಥಾಟವನ್ನು ನೋಡಲಾರದೇ ಮರುಗಿದ ಬುಧ್ದೀಯವರು ಅದನ್ನು ತಮ್ಮ ಮಡಿಲಲ್ಲಿಟ್ಟು ಮಠಕ್ಕೆ ತಂದರೆಂಬುದು. ಬುಧ್ಧಿಯವರು ತಮ್ಮ ಪೂಜೆ ಮುಗಿಸಿ ಮಠ ಸುತ್ತಲು ಹೊರಟಿದ್ದೇ ತಡ ಅವರ ನೆರಳಲ್ಲಿ ನೆರಳಾಗಿ ಹಿಂಬಾಲಿಸುತ್ತಿತ್ತು. ಕುಂಟುತ್ತಲೇ ನಡೆಯುತ್ತಿತ್ತು. ಯಾವುದೇ ಕೊಠಡಿ ಹೂಕ್ಕರೂ ಅವರು ಹೊರಬರುವ ತನಕ ಕದಲುತ್ತಿರಲಿಲ್ಲ.
ಪ್ರತಿನಿತ್ಯ ಮಕ್ಕಳ ಊಟ ಕ್ಷೇಮ ಹೇಗೆ ವಿಚಾರಿಸುತ್ತಿದ್ದರೋ ಹಾಗೆಯೇ ಈ ಭೈರನ ಬಗ್ಗೆಯೂ ತಪ್ಪದೇ ಬುಧ್ಧಿಯವರ ಮಾತಿರುತ್ತಿತ್ತು. ಬುಧ್ಧಿಯವಗೆ ವಯಸ್ಸಾದಂತೆಯೇ ಇದಕ್ಕೂ ಮುಪ್ಪಾಗಿ ತೀರ ಇತ್ತೀಚಿಗೆ ಸ್ವಾಮಿ ಇನ್ನೇನು ಹಾಸಿಗೆ ಹಿಡಿದೇ ಬಿಟ್ಟರಲ್ಲˌಭೈರ ಬುಧ್ಧಿಯವರನ್ನು ಕಾಣದೇ ಅಳುತ್ತಾ ಊಳಿಡಲಾರಂಭಿಸಿತು. ಆಸ್ಪತ್ರೆಯಲ್ಲಿದ್ದಾಗಲೂ ಬುಧ್ಧಿ ಭೈರನ ಬಗ್ಗೆ ಕಿರಿಯ ಶ್ರೀಗಳಲ್ಲಿ ವಿಚಾರಿಸುತ್ತಿದ್ದರಂತೆ. ಆಸ್ಪತ್ರೆಯಿಂದ ಮತ್ತೆ ಮಠಕ್ಕೆ ತಂದಾಗ ಅವರನ್ನು ಕಾಣದ ದುಃಖಕ್ಕೆ ಬಿದ್ದ ಭೈರ ಬುಧ್ಧಿಯವರ ದೇಹಾಂತ್ಯಕ್ಕೂ ಮೂರು ದಿನದಿಂದಲೇ ನೀರು ಆಹಾರ ತ್ಯಜಿಸಿದನಂತೆ. ನಾನು ಬುಧ್ಧಿಯವರ ಆರೋಗ್ಯ ವಿಚಾರಿಸಿ ಮಠಕ್ಕೆ ಫೋನ್ ಮಾಡಿದಾಗೆಲ್ಲ ಈ ನಾಯಿಯ ಬಗ್ಗೆಯೂ ವಿಚಾರಿಸುತ್ತಿದ್ದೆ. ಒಂದೆಡೆ ಬುಧ್ಧಿಯವರ ಅಗಲಿಕೆಯ ನೋವು ಮತ್ತೊಂದೆಡೆ ಈ ಭೈರನ ಗತಿಯೇನೆಂದು ಇವತ್ತು ಕೇಳ ಹೊರಟರೆ ಅತ್ತಲಿಂದ ಬಂದ ಮಾಹಿತಿ ನನ್ನ ಎದೆಬಾರ ಮತಷ್ಟು ಹೆಚ್ಚಿಸಿ ಕಣ್ಣು ಮಂಜಾಗಿಸಿತು. ಕಳೆದ ಮೂರು ದಿನಗಳಿಂದ ಅನ್ನ ನೀರು ತ್ಯಜಿಸಿ ರೋಧಿಸುತ್ತಾ ಮಲಗಿದ್ದ ಭೈರ ನಿನ್ನೆ ರಾತ್ರಿಯಿಂದ ಕಾಣಿಸುತ್ತಿಲ್ಲ !
‘ ಬಹುಷಃ ಇನ್ನೆಂದಿಗೂ ಅವನು ನಿಮ್ಮ ಕಣ್ಣಿಗೆ ಕಾಣಿಸಲಾರ ‘ ಎಂದಿದ್ದೇ ಇತ್ತಲಿಂದ ನಾನೂ ಫೋನ್ ಇಟ್ಟುಬಿಟ್ಟೆ. ಸಾಮಾನ್ಯವಾಗಿ ನಾಯಿಗಳು ತಮ್ಮ ಸಾವು ಸಮೀಪಿಸುತ್ತಿದ್ದ ಹಾಗೆಯೇ ಅಜ್ಞಾತವಾಗಿ ಕಣ್ಮರೆಯಾಗುತ್ತವೆ. ಪೂಜ್ಯರೇ ಇಲ್ಲವೆಂದ ಮೇಲೆ ಈ ಲೋಕದ ಹಂಗೇಕೆಂದು ನಾಯಿ ಭೈರನೂ ಅವರೊಂದಿಗೆ ನಡೆದು ಬಿಟ್ಟನೆ ?
ಲೋಕವೆಲ್ಲ ಪುಜ್ಯರ ಫಾರ್ಥೀವವನ್ನು ಸುತ್ತುತ್ತಿದ್ದರೆ ನನ್ನ ಮನಸ್ಸೇಕೋ ಅವರನ್ನೇ ತನ್ನ ಉಸಿರಾಗಿ ಬದುಕಿದ್ದ ˌಅವರ ಜೊತೆಗೇ ಸದ್ದಿಲ್ಲದೇ ನಡೆದು ಹೋದ ಆ ಜೀವಾತ್ಮಕ್ಕಾಗಿ ಮಿಡಿಯುತ್ತಿದೆ.
-ರಾ. ಸೋಮನಾಥ್
ಸುದ್ದಿದಿನ.ಕಾಂ|ವಾಟ್ಸಾಪ್|9986715401
ಬಹಿರಂಗ
‘ಉಪೇಕ್ಷಾ ಮನೋವೃತ್ತಿ’, ಹಿಂದೂಗಳಿಗಿರುವ ಮಹಾರೋಗ : ಡಾ.ಬಿ.ಆರ್. ಅಂಬೇಡ್ಕರ್ ಈ ಲೇಖನ ಓದಿ

ಶುದ್ದಿ ಎನ್ನುವುದು ಹಿಂದೂ ಸಮಾಜದ ಸಂಘಟನೆಗೆ ವಿರುದ್ಧವಾಗಿ ಕೆಲಸ ಮಾಡುತ್ತದೆ. ಮಹಮ್ಮದೀಯರಿಂದ ಹಾಗೂ ಸಿಬ್ಬರಿಂದ ಒಂದೂವು ಭಿನ್ನವಾಗಿರುವುದು ತನ್ನ ಅಂಜುಗುಳಿತನ ಅಥವಾ ಹೇಡಿತನದಿಂದ, ಅವನ ಮನಸ್ಸಿನಿಂದ ಈ ಭಾವನೆಯನ್ನು ನಿವಾರಿಸುವುದೇ ಸಂಘಟನೆಯ ಮುಖ್ಯ ತತ್ತವಾಗಿದೆ. ಹಿಂದೂವು ಆತ್ಮರಕ್ಷಣೆಗಾಗಿ ಠಕ್ಕುತನವನ್ನೂ, ದ್ರೋಹವನ್ನೂ ಮಾಡುತ್ತಾನೆ. ಸಿಬ್ಬನಿಗಾಗಲಿ ಮಹಮ್ಮದೀಯನಿಗಾಗಲಿ ನಿರ್ಭಯತೆಯನ್ನು ತಂದುಕೊಟ್ಟ ಬಲ ಯಾವುದು ? ಶಾರೀರಕ ಬಲ, ಆಹಾರ , ವ್ಯಾಯಾಮ ಮುಂತಾದವುಗಳಿಂದ ಅವರಿಗೆ ಆ ಅಧಿಕ ಧೈರ್ಯ ಬಂದಿರಲಾರದೆಂಬುದು ನಿಶ್ಚಿತ .
ಈ ವಿಷಯಗಳಲ್ಲಿ ಹಿಂದೂವಿಗೂ ಅವರಿಗೂ ಭೇದವಿಲ್ಲ. ಈ ಬಲ ಬಂದಿರುವುದು ಅವರ ಸಹಧರ್ಮಿಗಳ ಬೆಂಬಲ ವಿಶ್ವಾಸದಿಂದ, ಒಬ್ಬ ಸಿಬ್ಬನು ಅಪಾಯಕ್ಕೆ ಸಿಲುಕಿದರೆ ಎಲ್ಲ ಸಿಬ್ಬರೂ ತನ್ನ ಬೆಂಬಲಕ್ಕೆ ಬರುವರೆಂಬ ನಂಬಿಕೆ ಅವನಿಗಿದೆ. ಒಬ್ಬ ಮಹಮ್ಮದೀಯನು ದಾಳಿಗೆ ಒಳಗಾದಾಗ ಎಲ್ಲ ಮಹಮ್ಮದೀಯರು, ಪಾರುಮಾಡಲು ಬರುವರೆಂಬ ವಿಶ್ವಾಸ ಅವನಿಗಿದೆ. ಹಿಂದೂವಿಗೆ ಇಂತಹ ಯಾವ ಬಲವೂ. ತನವರು ನೆರವಿಗೆ ಬಂದಾರೆಂಬ ನಂಬಿಕೆ ಹಿಂದೂವಿಗೆ ಎಲ್ಲಿದೆ ? ಹೀಗೆ ಹಿಂದೂವು ಏಕಾಕಿತನದಿಂದ ಅನನಾಗಿ ಅಂಜುಬುರುಕನಾಗುತ್ತಾನೆ. ಹೊಡೆದಾಟವಾದರೆ ಎದುರಾಳಿಗೆ ಶರಣಾಗುತ್ತಾನೆ, ಇಲ್ಲವೆ ಹೋಗುತ್ತಾನೆ.
ಸಿಖ್ಖಯನಾಗಲಿ, ಮಹಮ್ಮದೀಯನಾಗಲಿ ಇಂತಹ ಪ್ರಸಂಗ ಬಂದರೆ ನಿರ್ಭಯನಾಗಿ ಹೋರಾಡುತ್ತಾನೆ. ಯಾಕೆಂದರೆ ತನ್ನ ಹಿಂದೆ ಅನೇಕರ ಬಲವಿದೆಯೆಂದು ಅವನು ಅರಿತಿರುತ್ತಾನೆ. ಹಿಂದೂವಿಗೆ ತನ್ನವರು ಬೆಂಬಲವಾದಾರೆಂಬ ನಂಬಿಕೆಯೇ ಇಲ್ಲ. ಸಿಬ್ಬನಿಗೆ ಹಾಗೂ ಮಹಮ್ಮದೀಯನಿಗೆ ಆ ನಂಬಿಕೆ ಏಕೆ ಉಂಟು ? ಇದಕ್ಕೆ ಕಾರಣ ಅವರು ಇಟ್ಟುಕೊಂಡಿರುವ ಸಾಮಾಜಿಕ ಸಂಬಂಧದ ರೀತಿಗಳು, ಸಿಖ್ಖರಾಗಲಿ , ಮಹಮ್ಮದೀಯರಾಗಲಿ ತಮ್ಮ ತಮ್ಮಲ್ಲಿ ಭ್ರಾತೃತ್ವಭಾವನೆಯಿಂದ ನಡೆದುಕೊಳ್ಳುತ್ತಾರೆ. ಹಿಂದೂಗಳು ಪರಸ್ಪರವಾಗಿ ಆ ಭಾವನೆಯಿಟ್ಟುಕೊಂಡು ಬಾಳುವುದಿಲ್ಲ . ಒಬ್ಬ ಹಿಂದೂ ಇನ್ನೊಬ್ಬ ಹಿಂದೂವನ್ನು ಭಾಯಿ ಎಂದು ಪರಿಗಣಿಸುವುದಿಲ್ಲ. ಸಿಖ್ಖರು ಭಾವಿಸುವುದು ತಮ್ಮಲ್ಲಿರುವ ಸೋದರತೆಯ ವಿಶ್ವಾಸದಿಂದ ಹಿಂದೂಗಳಲ್ಲಿ ಈ ಭಾವನೆ ಬಾರದೆ ಇರುವುದಕ್ಕೆ ಅವರ ಜಾತಿ ಕಾರಣವಾಗಿದೆ . ಜಾತಿ ಇರುವವರೆಗೆ ಸಂಘಟನೆ ಸಾಧ್ಯವಿಲ್ಲ . ಸಂಘಟನೆಯಾಗುವವರೆಗೆ ಹಿಂದೂ ಕೈಸಾಗದವನಾಗಿ ಕುಗ್ಗಿಯೇ ನಡೆಯಬೇಕಾಗುವುದು. ಹಿಂದೂಗಳು ತಾವು ತುಂಬ ತಾಳ್ಮೆಯುಳ್ಳವರೆಂದು ಹೇಳಿಕೊಳ್ಳುತ್ತಾರೆ. ಇದು ನಿಜವಲ್ಲವೆಂದು ನಾನು ತಿಳಿಯುತ್ತೇನೆ. ಅನೇಕ ಪ್ರಸಂಗಗಲ್ಲಿ ಅವರು ತಾಳ್ಮೆಗೆಡಬಲ್ಲರು. ಕೆಲ ಪ್ರಸಂಗಗಳಲ್ಲಿ ಅವರು ತಾಳೆ ತೋರಿದರೆ ಆಗ ವಿರೋಧಿಸುವ ಬಲ ಅವರಲ್ಲಿ ಇರುವುದಿಲ್ಲ. ಅಥವಾ ವಿರೋಧಿಸುವುದಾದರೂ ಏನೆಂದು ಉಪೇಕ್ಷೆಯಿರಬೇಕು.
ಈ ಉಪೇಕ್ಷೆ ಹಿಂದೂಗಳ ಸ್ವಭಾವದಲ್ಲಿ ಒಂದಂಶವಾಗಿಹೋಗಿದೆ. ಎಷ್ಟರ ಮಟ್ಟಿಗೆ ಎಂದರೆ ಅಪಮಾನವಾಗಲಿ, ಅನ್ಯಾಯವೇ ಆಗಲಿ ಅದನ್ನು ಕೂಡ ಅವರು ತೆಪ್ಪಗೆ ನುಂಗಿಕೊಳ್ಳುತ್ತಾರೆ. ಹಿಂದೂಗಳು, ಮಾರಿಸ್ ಕವಿಯ ಕಾವ್ಯದ ಭಾವದಂತೆ, ದೊಡ್ಡವರು ಚಿಕ್ಕವರನ್ನು ಕೆಳಗಟ್ಟುವರು. ಬಲಿಷ್ಟರು ಬಲಹೀನರನ್ನು ಸದೆಬಡಿಯುವರು, ಕ್ರೂರರಿಗೆ ನಿರ್ಭೀತಿ, ದಯಾವಂತರಿಗೆ ಧೈರ್ಯಹೀನತೆ , ಬುದ್ದಿವಂತರಿಗೆ ಇದೆಲ್ಲದರ ಉಪೇಕ್ಷೆ . ಯಾರಿಗೆ ಏನಾದರೇನು, ನಮಗೇಕೆ ಅದರ ಗೋಜು ಎಂಬ ಉಪೇಕ್ಷಾ ಮನೋವೃತ್ತಿ ಒಂದು ಮಹಾರೋಗ, ಹಿಂದೂಗಳಿಗೆ ಈ ರೋಗ ಏಕೆ ಬಡಿದುಕೊಂಡಿತು ? ಸಂಘಟನೆಗೂ ಸಹಕಾರಕ್ಕೂ ಬಾಧಕವಾಗಿ ನಿಂತ ಜಾತೀಯತೆಯೇ ಈ ರೋಗದ ಮೂಲ.
-ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಬರಹಗಳು – ಭಾಷಣಗಳು : ಸಂಪುಟ – 1
ಸುದ್ದಿದಿನ.ಕಾಂ|ವಾಟ್ಸಾಪ್|9986715401
ದಿನದ ಸುದ್ದಿ
‘ಕಾಶ್ಮೀರ ಸಮಸ್ಯೆ’ ಇತ್ಯರ್ಥಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಿದವರು ‘ಇಂದಿರಾಗಾಂಧಿ ಮತ್ತು ವಾಜಪೇಯಿ’..!

ನಿರಂತರವಾಗಿ ರಕ್ತ ಹರಿಯಲು ಕಾರಣವಾಗಿರುವ ಕಾಶ್ಮೀರ ಸಮಸ್ಯೆಯನ್ನು ಇತ್ಯರ್ಥಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದವರು ಇಬ್ಬರು ಪ್ರಧಾನಿಗಳು. ಮೊದಲನೆಯವರು ಇಂದಿರಾಗಾಂಧಿ, ಎರಡನೆಯವರು ಅಟಲಬಿಹಾರಿ ವಾಜಪೇಯಿ.
ಇಂದಿರಾಗಾಂಧಿ ಮತ್ತು ಝುಲ್ಪಿಕರ್ ಅಲಿ ಭುಟ್ಟೋ ನಡುವೆ ನಡೆದಿದ್ದ ಶಿಮ್ಲಾ ಮಾತುಕತೆ ಬಹುತೇಕ ಯಶಸ್ವಿಯಾಗಿತ್ತು. ಬಾಂಗ್ಲಾದೇಶಕ್ಕೆ ಮಾನ್ಯತೆ, ಮೂರನೆಯವರ (ಯುಎನ್) ಮಧ್ಯಪ್ರವೇಶಕ್ಕೆ ನಿರಾಕರಣೆ ಮತ್ತು ಯುದ್ಧ ವಿರಾಮದ ಗಡಿರೇಖೆಯನ್ನು ಎಲ್ ಓ ಸಿಯಾಗಿ ಪರಿವರ್ತಿಸಲು ಒಪ್ಪಿಗೆ.. ಹೀಗೆ ಬಹುತೇಕ ವಿಷಯಗಳನ್ನು ಭುಟ್ಟೋ ಒಪ್ಪಿಕೊಂಡಿದ್ದರು. ಆ ಸಂಬಂಧ ಮತ್ತೆ ಹದಗೆಟ್ಟಿದ್ದು ಕಾರ್ಗಿಲ್ ಯುದ್ಧದಿಂದಾಗಿ.
ಅದೇ ರೀತಿ ವಾಜಪೇಯಿ ಮತ್ತು ಪರ್ವೇಜ್ ಮುಷರಪ್ ಅವರ ನಡುವೆ ಆಗ್ರಾ ಶೃಂಗ ಸಭೆಯ ಕೊನೆಯಲ್ಲಿ ಇನ್ನೇನು ಪರಸ್ಪರ ಸಮ್ಮತಿಯ ಒಪ್ಪಂದಕ್ಕೆ ಸಹಿ ಬೀಳುತ್ತದೆ ಎನ್ನುವಾಗ ಮುರಿದು ಬಿತ್ತು. ಅದಕ್ಕೆ ಕಾರಣವಾಗಿದ್ದು ಆಗಿನ ಉಕ್ಕಿನ ಮನುಷ್ಯ ಅಡ್ವಾಣಿ -ಸುಷ್ಮಾ ಜೋಡಿ. ಈ ಎರಡನೇ ಘಟನೆಗೆ ಪತ್ರಕರ್ತನಾಗಿ ನಾನು ಕೂಡಾ ಸಾಕ್ಷಿ. ಆಗ್ರಾ ಶೃಂಗ ಸಭೆಯ ಪ್ರತ್ಯಕ್ಷ ವರದಿ ಮಾಡಲು ಅಲ್ಲಿಗೆ ಹೋಗಿದ್ದೆ.
ಅಟಲಬಿಹಾರಿ ವಾಜಪೇಯಿ ಅವರಿಗೆ ತನ್ನ ಸಂಪುಟದ ಸದಸ್ಯರ ಹೆಸರುಗಳೇ ಒಮ್ಮೊಮ್ಮೆ ನೆನಪಾಗದೆ ಇದ್ದರೂ ವಿದೇಶಾಂಗ ವ್ಯವಹಾರದ ಬಗ್ಗೆ ಅಗಾಧವಾದ ತಿಳುವಳಿಕೆ ಇತ್ತು. ಅವರ ಸಮೀಪವರ್ತಿಗಳ ಪ್ರಕಾರ ಏನಾದರೂ ಮಾಡಿ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆಯಬೇಕೆಂಬ ಆಸೆ ಇತ್ತಂತೆ ಅವರಿಗೆ. ಅಂತಹ 2001ರ ಜುಲೈ ನಲ್ಲಿ ನಡೆದ ಆಗ್ರಾ ಶೃಂಗ ಸಭೆಯ ಬಗ್ಗೆ ವಾಜಪೇಯಿ ಅವರಲ್ಲಿ ಅಂತಹದ್ದೊಂದು ನಿರೀಕ್ಷೆಯೂ ಇತ್ತು.
ಕಾರ್ಗಿಲ್ ಯುದ್ದದ ವೈರತ್ವವನ್ನು ಮನಸ್ಸಲ್ಲಿಟ್ಟುಕೊಳ್ಳದೆ ಅದೇ ಯುದ್ಧದ ಖಳನಾಯಕ ಪರ್ವೇಜ್ ಮುಷರಫ್ ಕಡೆ ಸ್ನೇಹದ ಹಸ್ತ ಚಾಚಿದ್ದ ವಾಜಪೇಯಿ ಆಗ್ರಾಕ್ಕೆ ಬಂದಿದ್ದರು. ಜುಲೈ 15ರ ಸಂಜೆ ಪತ್ನಿ ಜತೆ ತಾಜಮಹಲ್ ವೀಕ್ಷಿಸಿ ಬಂದಿದ್ದ ಸೈನಿಕ ಮುಷರಫ್ ಹರ್ಷಚಿತ್ತರಾಗಿದ್ದರು.
ಅದೇ ರಾತ್ರಿ ವಾಜಪೇಯಿ ಜತೆ ಮಾತುಕತೆಗೆ ಕೂತಿದ್ದಾಗ ಬಾಗಿಲಿನೆಡೆಯಿಂದ ‘’ಗುಪ್ತ ಹಸ್ತ’’ವೊಂದು ಒಳಚಾಚಿತ್ತು. ಆ ಕೈಯಲ್ಲಿ ಒಂದು ಚೀಟಿ ಇತ್ತು. ಅದನ್ನು ಕಳಿಸಿದವರು ಐಎಸ್ ಐ ಮಾಜಿ ಮುಖ್ಯಸ್ಥ ಹಮೀದ್ ಗುಲ್ ಅನುಯಾಯಿಯಾಗಿದ್ದ ವಿದೇಶಾಂಗ ವ್ಯವಹಾರ ಖಾತೆ ಸಚಿವ ಅಬ್ದುಲ್ ಸತ್ತಾರ್. ಆ ಚೀಟಿ ನೋಡಿದೊಡನೆ ಮುಷರಫ್ ಮುಖಗಂಟಿಕ್ಕಿದ್ದರಂತೆ.
ಆಗ್ರಾ ಶೃಂಗ ಸಭೆಯಲ್ಲಿ ‘’ಕಾಶ್ಮೀರ ವಿಷಯವೇ ಪ್ರಧಾನ’’ ಎಂದು ಪಾಕಿಸ್ತಾನ ಹಠ ಮಾಡಿ ಕೂತಿದ್ದರೆ ‘’ಉಳಿದೆಲ್ಲವುಗಳ ಜತೆ ಕಾಶ್ಮೀರ ವಿಷಯವೂ ಇರಲಿ’’ ಎನ್ನುವುದು ಭಾರತದ ವಾದವಾಗಿತ್ತು. ಮುಷರಫ್ ಇದನ್ನು ಒಪ್ಪಿಕೊಂಡಿದ್ದರಂತೆ. ಆದರೆ ಅಷ್ಟರಲ್ಲಿ ಆಗ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಅನಿರೀಕ್ಷಿತವಾಗಿ ಪತ್ರಕರ್ತರ ಕೊಠಡಿಗೆ ಬಂದು ಆಫ್ ದಿ ರೆಕಾರ್ಡ್ ಮಾತನಾಡುತ್ತಾ ‘’ ಭಾರತ ಅಂದುಕೊಂಡಂತೆಯೇ ಎಲ್ಲ ನಡೆಯುತ್ತಿದೆ’’ ಎಂಬ ಸುದ್ದಿಯನ್ನು ತೂರಿಬಿಟ್ಟು ಹೊರಟುಹೋದರು. ಟಿವಿ ಚಾನೆಲ್ ಗಳಲ್ಲಿ ಸುದ್ದಿ ಬ್ರೇಕ್ ಆಯಿತು.
ಇದನ್ನು ನೋಡಿದೊಡನೆಯೆ ಪಾಕಿಸ್ತಾನದ ಐಎಸ್ ಐ ಪಡೆ ಕೆರಳಿ ಹೋಗಿತ್ತು. ಆಗಲೇ ಚೀಟಿ ರವಾನೆಯಾಗಿದ್ದು. ಅದರ ನಂತರ ಮುಷರಫ್ ಇನ್ನಷ್ಟು ಬಿಗಿಯಾಗಿ ಹೋದರು. ಕೊನೆಗೆ ತೇಪೆ ಹಚ್ಚುವ ರೀತಿಯಲ್ಲಿ ಆಗ್ರಾ ಘೋಷಣೆಗೆ ಸಹಿ ಹಾಕಿ ಸಂಪಾದಕರ ಸಭೆಯಲ್ಲಿ ಭಾರತದ ವಿರುದ್ಧ ಗುಡುಗಿ ಪಾಕಿಸ್ತಾನಕ್ಕೆ ಹಾರಿಹೋದರು.
ಸುಷ್ಮಾ ಸ್ವರಾಜ್ ಸ್ವಯಂ ಪ್ರೇರಣೆಯಿಂದ ಪತ್ರಕರ್ತರ ಕೊಠಡಿಗೆ ಖಂಡಿತ ಬಂದಿರಲಿಲ್ಲ, ಅವರಿಗೆ ಕೀ ಕೊಟ್ಟು ಕಲಿಸಿದವರು ಲಾಲ್ ಕೃಷ್ಣ ಅಡ್ವಾಣಿಯವರಂತೆ. ಅವರಿಗೆ ನಾಗಪುರದ ಕಡೆಯಿಂದ ಸಂದೇಶ ಬಂದಿರಬಹುದು. ಪರಿವಾರದಲ್ಲಿರುವ ಯಾರಿಗೂ ಪಾಕಿಸ್ತಾನದ ಜತೆ ಅಟಲಬಿಹಾರಿ ವಾಜಪೇಯಿ ಅವರು ಮಾತುಕತೆ ನಡೆಸುವುದು ಬೇಡವಾಗಿತ್ತು. ನಂತರದ ದಿನಗಳಲ್ಲಿ ವಾಜಪೇಯಿಯವರ ರಾಜಧರ್ಮ ಪಾಲನೆಯ ಆದೇಶ ಕೂಡಾ ಜಾರಿಯಾಗದಂತೆ ನೋಡಿಕೊಂಡವರು ಕೂಡಾ ಈಗಿನ ಮೂಕ ನಾಯಕ ಲಾಲ್ ಕೃಷ್ಣ ಅಡ್ವಾಣಿ.
-ದಿನೇಶ್ ಅಮಿನ್ ಮಟ್ಟು
ಸುದ್ದಿದಿನ.ಕಾಂ|ವಾಟ್ಸಾಪ್|9986715401
ಅಂತರಂಗ
ಹಿಂದೂ ಧರ್ಮ, ಜಾತಿ, ಮತಾಂತರ ಮತ್ತು ಪ್ರಚಾರ : ಡಾ.ಬಿ.ಆರ್.ಅಂಬೇಡ್ಕರ್ ಹೇಳಿರೋ ವಿಚಾರವಿಷ್ಟು ; ಒಮ್ಮೆ ಓದಿ

ಹಿಂದೂ ಧರ್ಮವು ಪ್ರಚಾರಕ ಧರ್ಮವಾಗಿತ್ತೇ ಅಥವಾ ಇಲ್ಲವೆ ಎಂಬುದು ವಾದಗ್ರಸ್ತ ವಿಷಯ ಅದು ಎಂದೂ ಪ್ರಚಾರಕ ಧರ್ಮವಾಗಿರಲಿಲ್ಲವೆಂದು ಕೆಲವರೂ, ಪ್ರಚಾರಕವಾಗಿತ್ತೆಂದು ಇತರರು ವಾದಿಸುತ್ತಾರೆ . ಒಂದು ಕಾಲಕ್ಕೆ ಹಿಂದೂಧರ್ಮ ಪ್ರಚಾರಕವಾಗಿತ್ತೆಂದು ಒಪ್ಪಬೇಕಾಗುತ್ತದೆ . ಪ್ರಚಾರಕ ಧರ್ಮವಾಗಿಲ್ಲದಿದ್ದರೆ ಅದು ಭಾರತದಲ್ಲೆಲ್ಲ ಹಬ್ಬುತ್ತಿರಲಿಲ್ಲ. ಈಗಿನ ಕಾಲದಲ್ಲಿ ಅದು ಪ್ರಚಾರಕ ಧರ್ಮವಾಗಿಲ್ಲ ಎಂದುದೂ ಅಷ್ಟೇ ಸತ್ಯವಾದ ವಿಷಯ .
ಆದುದರಿಂದ ಹಿಂದೂಧರ್ಮ ಪ್ರಚಾರಕವಾಗಿತ್ತೆ ಇಲ್ಲವೇ ಎಂಬುದಕ್ಕಿಂತ ನಿಜವಾದ ಪ್ರಶ್ನೆಯೆಂದರೆ ಹಿಂದೂಧರ್ಮ ಪ್ರಚಾರಕವಾಗಿ ಏಕೆ ಮುಂದುವರಿಯಲಿಲ್ಲ ಎಂಬುದಾಗಿದೆ . ಇದಕ್ಕೆ ನನ್ನ ಉತ್ತರ ಹೀಗಿದೆ : ಹಿಂದೂಗಳಲ್ಲಿ ಜಾತಿಪದ್ಧತಿ ಬೆಳೆದುದರಿಂದ ಹಿಂದೂಧರ್ಮದ ಪ್ರಚಾರ ನಿಂತುಹೋಯಿತು. ಮತಾಂತರವನ್ನು ಜಾತಿ ಒಪ್ಪುವುದಿಲ್ಲ. ಮತಾಂತರದಲ್ಲಿ ನಂಬಿಕೆಗಳನ್ನೂ ತತ್ವಗಳನ್ನೂ ಬೋಧಿಸುವುದಷ್ಟೇ ಸಮಸ್ಯೆಯಲ್ಲ . ಧರ್ಮಾಂತರಗೊಂಡು ಒಳಸೇರುವ ವ್ಯಕ್ತಿಗೆ ಜಾತಿಯ ಸಾಮಾಜಿಕ ಜೀವನದಲ್ಲಿ ಸ್ಥಾನ ನೀಡಬೇಕಲ್ಲವೆ ? ಇದರಿಂದ ತುಂಬ ಕಠಿಣವಾದ ಸಮಸ್ಯೆ ಹುಟ್ಟಿಕೊಳ್ಳುತ್ತದೆ. ಈ ಹೊಸಬನನ್ನು ಯಾವ ಜಾತಿಗೆ ಸೇರಿಸಿಕೊಳ್ಳಬೇಕು ? ಪರಕೀಯರನ್ನು ಮತಾಂತರಗೊಳಿಸಿ ತಮ್ಮೊಳಗೆ ಸೇರಿಸಿಕೊಳ್ಳಬೇಕೆಂಬ ಹಿಂದೂಗಳಿಗೆ ಇದು ತಲೆ ತಿನ್ನುವ ಸಮಸ್ಯೆಯೇ ಸರಿ.
ಕಬ್ಬಿನ ಸದಸ್ಯತ್ವದಂತೆ ಜಾತಿಯ ಸದಸ್ಯತ್ವವನ್ನು ಯಾರಿಗೆ ಬೇಕಾದರೂ ಕೊಡುವಂತಹುದಲ್ಲ . ಜಾತಿಯಲ್ಲಿ ಹುಟ್ಟಿದವರಿಗೆ ಮಾತ್ರ ಜಾತಿಯ ಸದಸ್ಯತ್ವ ಸಿಕ್ಕುತ್ತದೆ. ಜಾತಿಗಳು ಸ್ವಾಯತ್ತಾಧಿಕಾರಿಗಳುಳ್ಳ ಸಂಸ್ಥೆಗಳು , ಹೊಸಬರನ್ನು ಸೇರಿಸಿಕೊಳ್ಳಿ ಎಂದು ಒತ್ತಾಯ ಮಾಡುವ ಅಧಿಕಾರ ಯಾರಿಗೂ ಇಲ್ಲ. ಹಿಂದೂ ಸಮಾಜ ಜಾತಿಗಳ ಒಂದು ಸಮುದಾಯವಾಗಿಬಹುದು, ಪ್ರತಿಯೊಂದು ಜಾತಿಯೂ ಸ್ವಾಯತ್ತ ಸಂಸ್ಥೆಯಂತೆ ಇರುವುದರಿಂದ ಮತಾಂತರ ಹೊಂದಿ ಬರಬೇಕೆನ್ನುವವರಿಗೆ ಅದರಲ್ಲಿ ಸ್ಥಾನವಿಲ್ಲ . ಹಿಂದುಗಳು ತಮ್ಮ ಧರ್ಮವನ್ನು ವಿಸ್ತರಿಸುವುದಕ್ಕೂ ಇತರ ಧರ್ಮದವರನ್ನು ತಮ್ಮಲ್ಲಿ ಸೇರಿಸಿಕೊಳ್ಳುವುದಕ್ಕೂ ಅವರ ಜಾತಿಯೇ ಅಡ್ಡ ಬಂದಿದೆ . ಜಾತಿಗಳು ಇರುವವರೆಗೆ ಹಿಂದೂಧರ್ಮ ಪ್ರಚಾರಕ ಧರ್ಮವಾಗಲಾರದು ಮತ್ತು ‘ ಶುದ್ಧಿ ‘ ಎನ್ನುವುದು ಕೇವಲ ಅವಿವೇಕದ ಹಾಗೂ ನಿರರ್ಥಕ ಪರಿಕಲ್ಪನೆಯಾಗುತ್ತದೆ.
-ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಬರಹಗಳು – ಭಾಷಣಗಳು : ಸಂಪುಟ – 1
ಸುದ್ದಿದಿನ.ಕಾಂ|ವಾಟ್ಸಾಪ್|9986715401
-
ಬಹಿರಂಗ5 days ago
ಜಾತಿ ಪದ್ದತಿ : ಎಲ್ಲರೂ ಓದಲೇ ಬೇಕಾದ ಡಾ. ಅಂಬೇಡ್ಕರ್ ಅವರ ಬರಹ..!
-
ಲೈಫ್ ಸ್ಟೈಲ್5 days ago
ವೀರ್ಯಾಣು ವೃದ್ಧಿಸೋ ‘ಮಾವಿನ ಹಣ್ಣಿನ’ ಉಪಯೋಗಗಳಿಷ್ಟು..!
-
ಬಹಿರಂಗ4 days ago
‘ಹಿಂದೂ ಸಮಾಜ’ ವೆಂಬುದು ‘ಮಿಥ್ಯ ಪದ’ : ಡಾ.ಬಿ.ಆರ್.ಅಂಬೇಡ್ಕರ್ ಅವರ ಈ ಬರಹ ನಿಮಗಾಗಿ..!
-
ದಿನದ ಸುದ್ದಿ5 days ago
’42 ಪಿಡಿಓ’ಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ‘ದಲಿತ ಸೇನೆ’ಯಿಂದ ಪ್ರತಿಭಟನೆ
-
ಬಹಿರಂಗ4 days ago
‘ಧ್ರುವ್’ ಎಂಬ ಮಾಧ್ಯಮದ ‘ಧ್ರುವ ತಾರೆ’..!
-
ದಿನದ ಸುದ್ದಿ3 days ago
30 ಸಿ ಆರ್ ಪಿ ಎಫ್ ಯೋಧರ ಬಲಿಪಡೆದ ಉಗ್ರ
-
ದಿನದ ಸುದ್ದಿ7 days ago
ಯಡಿಯೂರಪ್ಪ ನುಡಿದಂತೆ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ : ಸಿದ್ದರಾಮಯ್ಯ
-
ಬಹಿರಂಗ3 days ago
ಆದಿವಾಸಿ ಬುಡಕಟ್ಟು ಜನಾಂಗ ಅಪರಾಧಿಗಳಾಗಿ ಬದುಕುತ್ತಿವೆ ; ಇದನ್ನು ಕಂಡು ಹಿಂದೂ ಜನಾಂಗ ನಾಚಿಕೆಯಿಲ್ಲದೆ ಬದುಕುತ್ತಿದೆ : ಡಾ.ಬಿ.ಆರ್.ಅಂಬೇಡ್ಕರ್ ರ ಈ ಬರಹ ಓದಿ