Connect with us

ಬಹಿರಂಗ

‘ಪೂನ ಒಪ್ಪಂದ’ದಿಂದ ಕೇವಲ ಎಸ್ಸಿ,ಎಸ್ಟಿ ಗಳಿಗೆ ಮಾತ್ರವಲ್ಲ, ಒಬಿಸಿ ಮತ್ತು ಧಾರ್ಮಿಕ ಅಲ್ಪಸಂಖ್ಯಾತರಿಗೂ ಮಹಾದ್ರೋಹವಾಯಿತು..!

Published

on

  • ಹ.ರಾ.ಮಹಿಶ

ಇಂದಿನ ಭಾರತದ ಸರ್ವಶೋಚನೀಯ ಸ್ಥಿತಿಗೆ ಗಾಂಧಿಮಹಾತ್ಮನ ಅಂದಿನ ಪೂನ ಒಪ್ಪಂದವೇ ಕಾರಣ. ಹೌದು ಇಂದಿನ ರಾಜಕೀಯ ಭ್ರಷ್ಟತೆ ಅರಾಜಕತೆ, ಸ್ವೇಚ್ಛಾಚಾರದ ಸರ್ವಾಧಿಕಾರಿ ಆಡಳಿತ, ಪರಧರ್ಮ ಅಸಹಿಷ್ಣುತೆ, ಸಂವಿಧಾನ ವಿರೋಧೀ ಚಟುವಟಿಕೆ ಭಯೋತ್ಪಾದನೆ,ಪ್ರಜಾಪ್ರಭುತ್ವದ ನಾಶ, ಕೋಮುವಾದದ ಆಟಾಟೋಪ, ಅಘೋಷಿತ ತುರ್ತುಪರಿಸ್ಥಿತಿ ಹೇರಿಕೆ, ಆರ್ಥಿಕ ಹಿಂಜರಿತ, ಇತ್ಯಾದಿ ಇತ್ಯಾದಿಗಳಿಗೂ ಅಂದಿನ ಮೋ.ಕ.ಚ.ಗಾಂಧಿಯವರ ಕುತಂತ್ರದ ಜಾತೀಗ್ರಸ್ತ ಮನಸ್ಥಿತಿಯಿಂದ ಹುಟ್ಟಿ ಅಂತ್ಯಕಂಡ ಪೂನ ಒಪ್ಪಂದಕ್ಕೂ ನೇರವಾದ ಸಂಬಂಧವಿದೆ..!!

ಪೂನ ಒಪ್ಪಂದ” ಎಂದರೆ ಶೋಷಿತರ ಮಹಾನಾಯಕರಾದ ಬಾಬಾಸಾಹೇಬರನ್ನು ಇಕ್ಕಟ್ಟಿನ ಹಿಂಸೆಗೆ ಸಿಲುಕಿಸಿ ಅವರು ಹೋರಾಡಿ ಗಳಿಸಿದ ಹಕ್ಕುಅಧಿಕಾರಗಳನ್ನು ಅವರಿಂದ ಕಿತ್ತುಕೊಂಡು‌‌‌ ಶತಮಾನಗಳ ದಾಸ್ಯದಿಂದ ವಿಮೋಚನೆಗೊಳ್ಳಲು ಇನ್ನೇನು ಒಂದೇ ಗೇಣು ದೂರದಲ್ಲಿದ್ದ ಶೋಷಿತ ಬಹುಜನ ಸಮುದಾಯವನ್ನು ಮತ್ತೆ ಶಾಶ್ವತ ಗುಲಾಮಗಿರಿಯ ಕೂಪದೊಳಗೆ ತಳ್ಳಿದ ಬ್ಲಾಕ್ ಮೇಲ್ ಬಲವಂತದ ಒಪ್ಪಂದ.‌! ಇದರ ಹಿಂದಿನ ಮಾಸ್ಟರ್ ಮೈಂಡ್ ಮುಗ್ಧಜನರಿಂದ ಈಗಲೂ ಬಾಪೂ ಅಹಿಂಸಾವಾದೀ ಮಹಾತ್ಮನೆಂದು ಕೊಂಡಾಡಿಸಿಕೊಳ್ಳುತ್ತಿರುವ ಮಾನ್ಯ ಮೋಹನದಾಸ ಕರಮಚಂದ ಗಾಂಧಿ..!!

1930-35 ಕ್ಕೂ ಮುನ್ನ ಇಂಡಿಯನ್-ಬ್ರಿಟಿಷ್ ಕೌನ್ಸಿಲ್ ಪಾರ್ಲಿಮೆಂಟಿನೊಳಗೆ ಇಡೀ ಭಾರತೀಯ ಜನತೆಯನ್ನು ಪ್ರತಿನಿಧಿಸುತ್ತಿದ್ದದ್ದು ಎರಡೇ ಜಾತಿಯ ನಾಯಕರು. ಒಂದು ನೆಹರೂ ಜನಾಂಗದ ಬ್ರಾಹ್ಮಣ ಪುರುಷರು ಇನ್ನೊಂದು ಗಾಂಧೀ ಜನಾಂಗದ ಬನಿಯಾ ಪುರುಷರು (ವೈಶ್ಯರು) ಯಾಕೆಂದರೆ ಆಗ ಚುನಾವಣೆಗೆ ಸ್ಪರ್ಧಿಸಲು ಮತ್ತು ಮತಚಲಾಯಿಸಲು ಶಿಕ್ಷಣದ ಮಟ್ಟ ಮತ್ತು ತೆರಿಗೆ ಪಾವತಿಯೇ ಮಾನದಂಡವಾಗಿತ್ತು.‌.! ಸಹಜವಾಗಿ ಸ್ವಲ್ಪಸಂಖ್ಯಾತರಾದರೂ ವಿದ್ಯೆಯ ವಾರಸುದಾರರಾದ ಬ್ರಾಹ್ಮಣಪುರುಷರು ಸಂಪತ್ತಿನ ವಾರಸುದಾರರಾದ ವೈಶ್ಯಪುರುಷರೇ ಯಾವಾಗಲೂ ಪಾರ್ಲಿಮಿಂಟಿನೊಳಗೆ ಇರುತ್ತಿದ್ದರು. ಅಲ್ಲಿದ್ದುಕೊಂಡು ಸಹಜವಾಗಿ ಅವರವರ ಜನಾಂಗವನ್ನು ಮಾತ್ರವೇ ಸರ್ವರೀತಿಯಲ್ಲಿಯೂ ಮತ್ತಷ್ಟು ಬಲಿಷ್ಟಗೊಳಿಸುತ್ತಿದ್ದರು..!

ಈ ಅನ್ಯಾಯದಿಂದ ಹಿಂದೂಗಳಲ್ಲದ ಅರ್ಥಾತ್ ಬ್ರಾಹ್ಮಣ ಬನಿಯಾಗಳಲ್ಲದ ಮುಸಲ್ಮಾನರು ಕ್ರೈಸ್ತರು ಮತ್ತು ಸಿಖ್ಖರು ತಮ್ಮ ತಮ್ಮ ಸಮಸ್ಯೆಗಳನ್ನೂ ಪರಿಹರಿಸಲು ತಮ್ಮ ಜನಾಂಗವನ್ನು ಪ್ರತಿನಿಧಿಸುವ ನಮ್ಮ ಜನರೂ ಪಾರ್ಲಿಮೆಂಟ್ ಪ್ರವೇಶಿಸುವಂಥ ಪ್ರತ್ಯೇಕ ಮತದಾನ ಪದ್ಧತಿಯನ್ನು ಜಾರಿಗೊಳಿಸಬೇಕೆಂದು ಒಗ್ಗಟ್ಟಿನಿಂದ ಹೋರಾಡಿ ಕೆಲ ಆಯ್ದ ಮೀಸಲು ಕ್ಷೇತ್ರಗಳಲ್ಲಿ ತಮ್ಮವರು ಮಾತ್ರವೇ ಸ್ಪರ್ಧಿಸುವ ಮತ್ತು ಅವರಿಗೇ ತಮ್ಮ ಜನಾಂಗವೇ ಮತ ಚಲಾಯಿಸುವ ಹೊಸ ಹಕ್ಕು ಅವಕಾಶವನ್ನು ಪಡೆಯುವಲ್ಲಿ ಯಶಸ್ವಿಯಾದರು…!

ಆದರೆ ಹೆಸರಿಗೆ ಮತ್ತು ಲೆಕ್ಕಕ್ಕೆ ಮಾತ್ರಹಿಂದೂಧರ್ಮದೊಳಗೆ ಸೇರಿಸಿಕೊಂಡು ಅವರ ಯಾವ ಅಭಿವೃದ್ಧಿಗೂ ಶ್ರಮಿಸದೆ ಕಡೆಗಣಿಸಿದ್ದ ವಂಚಿತ ಸಮುದಾಯಗಳು ತಮಗೂ ಮುಸಲ್ಮಾನ ಕ್ರೈಸ್ತರಂತೆ ಪ್ರತ್ಯೇಕ ಮತದಾನ ಪದ್ಧತಿ ನೀಡಬೇಕೆಂದೂ ತಮ್ಮ ಜನರೂ ಪಾರ್ಲಿಮೆಂಟಿನೊಳಗೆ ನಮ್ಮನ್ನು ಪ್ರತಿನಿಧಿಸಿ ನಮ್ಮ ಸಮಸ್ಯೆಗಳನ್ನು ಹೋಗಲಾಡಿಸಿಕೊಳ್ಳಬೇಕೇಂದೂ ಹೋರಾಟ ಆರಂಭಿಸಿದರು. ಅದರ ನೇತೃತ್ವವನ್ನು ಸ್ವತಃ ಬಾಬಾಸಾಹೇಬರು ವಹಿಸಿಕೊಂಡಿದ್ದರು. ಮೊದಲಿಗೆ ಬ್ರಿಟಿಷರೇ 1911ರ ಜಾತಿಜನಗಣತಿಯ ಸಂದರ್ಭದಲ್ಲಿ ಹಿಂದೂಗಳಲ್ಲದ 429 ಜಾತಿಗಳನ್ನು (Sc/st) ಗುರುತಿಸಿದ್ದರಿಂದ ಹಿಂದೂಗಳಲ್ಲದ‌ ನಮಗೂ ಪ್ರತ್ಯೇಕ ಮತದಾನ ವ್ಯವಸ್ಥೆ ಮಾಡಿ ಎಂದು ಬಾಬಾಸಾಹೇಬರು ಪಟ್ಟುಹಿಡಿದರು.

ಬಾಬಾಸಾಹೇಬ್-ಮತ್ತು OBC ಹಿಂದುಳಿದ ವರ್ಗದ ಶಾಹುಮಹರಾಜರ ದೂರದೃಷ್ಟಿಯ ಪ್ಲಾನ್ ಏನಿತ್ತೆಂದರೆ ಮೊದಲು Scst ಗಳಿಗೆ ಈ ವಿಶೇಷಹಕ್ಕು ದೊರೆತ ಕೂಡಲೆ ಅದೇ ಆಧಾರದ ಮೇಲೆ ಇತರೆ ಹಿಂದುಳಿದ OBC ಜನಾಂಗಗಳಿಗೂ ಇದನ್ನು ನೀಡುವಂತೆ ಒತ್ತಡ ಹೇರಿ ಸರ್ವಜನಾಂಗದವರಿಗೂ ಸರಿಸಮವಾಗಿ ಹಕ್ಕು-ಅಧಿಕಾರವನ್ನು ಜಾತಿಜನಸಂಖ್ಯಾವಾರು ಹಂಚುವುದೇ ಆಗಿತ್ತು…!! ಗಾಂಧಿಯವರು SCst ಗಳಿಗೆ ಬಾಬಾಸಾಹೇಬರು ಕೇಳಿದ ಈ ವಿಶೇಷ ರಾಜಕೀಯಹಕ್ಕನ್ನು ಖಂಡಾತುಂಡವಾಗಿ ಉಗ್ರವಾಗಿ ವಿರೋಧಿಸಿದರು.

ಆದರೆ ಬಾಬಾಸಾಹೇಬರ ಕರಾರುವಕ್ಕಾದ ವಿಷಯಮಂಡನೆಯ ಹೋರಾಟಕ್ಕೆ ಮಣಿದು ಬ್ರಿಟಿಷ್ ಸರ್ಕಾರ ಒಂದು ಹೆಜ್ಜೆ ಮುಂದೆ ಹೋಗಿ ಎರಡು ಓಟುಗಳ ವಿಶೇಷ ಚುನಾಯಕಗಳನ್ನೇ ನೀಡಿದರು ಆದರೆ ಮಹಾತ್ಮರು ಬಾಬಾಸಾಹೇಬ್-ಶಾಹುಜೀ ಮಹಾರಾಜರ ದೂರದೃಷ್ಟಿಯನ್ನು ಛಿದ್ರಮಾಡಿ ಮೊದಲಿಗೆ ಇದು SCST ಗಳಿಗೇ ಈ ಹಕ್ಕು ಸಿಗದಿರುವಂತೆ ಉಪವಾಸ ಸತ್ಯಾಗ್ರಹ ಮಾಡಿ ಬಾಬಾಸಾಹೇಬರನ್ನು ಹೆದರಿಸಿ ಬೆದರಿಸಿ ಕಣ್ಣೀರು ಹಾಕಿಸಿ ಅವರು ಹೋರಾಡಿ ಬ್ರಿಟಿಷರಿಂದ ತಂದಿದ್ದ ವಿಶೇಷ ಹಕ್ಕು ಅಧಿಕಾರಗಳನ್ನು ಕಸಿದುಕೊಂಡರು. ಇದೇ
“ಪೂನ ಒಪ್ಪಂದ” ಶತಶತಮಾನಗಳಿಂದಲೂ ದಾಸ್ಯದಲ್ಲಿದ್ದ ಬಹುಜನ ಸಮಾಜವು ವಿಮೋಚನೆಯಾಗುವ ಹೊತ್ತಿಗೆ ಸನ್ಮಾನ್ಯ ಗಾಂಧಿಯವರ ಜಾತಿಪ್ರೇಮ ಶೋಷಿತ ಸಮುದಾಯವನ್ನು ಮತ್ತೆ ಗುಲಾಮಗಿರಿಗೆ ತಳ್ಳಿತು…!

ಬಂಧುಗಳೇ, ಹೇಗೂ ಭಾರತದಲ್ಲಿ “ಜಾತಿ” ಯೇ ಸತ್ಯವಾಗಿರುವಾಗ ಆಯಾ ಜಾತಿಯ ಪ್ರತಿನಿಧಿಗಳನ್ನು ಆಯಾ ಜಾತಿಯವರೇ ಆರಿಸುವ ಅವಕಾಶ ಇದ್ದಿದ್ದರೆ ಎಲ್ಲಾ ಜಾತಿಯ ಜನರಿಗೂ ಅವರವರ ಜಾತಿಜನಸಂಖ್ಯಾವಾರು ಮೀಸಲು ಕ್ಷೇತ್ರಗಳಿದ್ದು ಆರಿಸಿ ಹೋಗುವಂತಿದ್ದಿದ್ದರೆ ಎಲ್ಲರಿಗೂ ಸಮಾನ ಅವಕಾಶಗಳಿರುತ್ತಿತ್ತು. ಯಾವ ಜನಾಂಗಕ್ಕೂ ಯಾವುದೇ ವಿಶೇಷ ಮೀಸಲಾತಿ ಸವಲತ್ತಿನ ಭಿಕ್ಷೆಗಳೂ ಬೇಕಾಗುತ್ತಿರಲಿಲ್ಲ.

ಎಲ್ಲರೂ ಸಮಾನಗೌರವದ ಸಮಾನ ಅಂತಸ್ತಿನ ಘನತೆಯ ಜೀವನವನ್ನು ನಡೆಸಬಹುದಿತ್ತು. ಬಾಬಾಸಾಹೇಬರು ಮತ್ತು ಶಾಹುಮಹಾರಾಜರು ಬಯಸಿದ್ದಂತೆಯೇ ಆಗಿದ್ದರೆ ಈಗಿರುವಂತೆ ಮೂರವರೆ ಪರ್ಸೆಂಟ್ ಜನ 96ವರೆ ಪರ್ಸೆಂಟ್ ಜನರನ್ನು ಆಳುವ ದುಸ್ಥಿತಿ ಬರುತ್ತಿರಲಿಲ್ಲ.‌.! ಈ ಬಗೆಯ ರಾಜಕೀಯ ಅರಾಜಕತೆ ಕೋಮುವಾದ ಭ್ರಷ್ಟಾಚಾರ ಸ್ವೇಚ್ಛಾಚಾರ ಸರ್ವಾಧಿಕಾರ ತಲೆಯೆತ್ತುತ್ತಿರಲಿಲ್ಲ ಯಾರ ಮೇಲೆಯೂ ಯಾವುದರ ಹೇರಿಕೆಯೂ ಸಾಧ್ಯಗುತ್ತಿರಲಿಲ್ಲ ದೇಶದ ಸಂವಿಧಾನ ಪ್ರಜಾಪ್ರಭುತ್ವ ಅಪಾಯಕ್ಕೆ ಸಿಲುಕುತ್ತಿರಲಿಲ್ಲ. ದೇಶದಲ್ಲಿ ಈ ಮಟ್ಟದ ಆರ್ಥಿಕ ಹಿಂಜರಿತ ಆಗುತ್ತಿರಲಿಲ್ಲ…!!

So, ಇಂದಿನ ಕೆಟ್ಟ ಈ ವ್ಯವಸ್ಥೆಯ ಕೊಡುಗೆ ಮಾನ್ಯ ಗಾಂಧಿಯವರದ್ದು..! ನಾವು ಅವರ ವಿರೋಧಿಯಲ್ಲ ಇದು ವಯಕ್ತಿಕ ದ್ವೇಷವೂ ಇಲ್ಲ. ಸತ್ಯವನ್ನು ಸತ್ಯವೆಂದೂ ಸುಳ್ಳನ್ನು ಸುಳ್ಳೆಂದು ಧೈರ್ಯವಾಗಿ ಹೇಳಲು ಕಲಿಸಿಕೊಟ್ಟ ಬುದ್ಧ-ಬಾಬಾಸಾಹೇಬರ ಅನುಯಾಯಿಗಳು.

ತನ್ನ ಜನಾಂಗವಾದ ಸ್ವಲ್ಪ ಸಂಖ್ಯಾತರಾದ ಬ್ರಾಹ್ಮಣ-ಬನಿಯಾಗಳು ಶಾಶ್ವತವಾಗಿ ಈ ದೇಶದ ಬಹುಸಂಖ್ಯಾತರನ್ನು ಆಳಲು ಅವಕಾಶ ಮಾಡಿಕೊಡಲು ಬಹುಜನಸಮಾಜವನ್ನು ಶಾಶ್ವತ ಗುಲಾಮಗಿರಿಗೆ ತಳ್ಳಲು ಭಾರತದ ಬಹುಸಂಖ್ಯಾತ SC/ST/OBC/RMರ ಪಾಲಿಗೆ ತಣ್ಣಗೆ ಕೊಳ್ಳಿ ಇಟ್ಟುಹೋದ ಮಹಾತ್ಮ ಅಂದು ಹಚ್ಚಿದ ಆ ಬೆಂಕಿಯಿಂದ ಇಂದಿಗೂ ಭಾರತ ಒಳಗೊಳಗೇ ಸುಟ್ಟುಹೋಗುತ್ತಿದೆ..!

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಬಹಿರಂಗ

ಸಂವಿಧಾನ ರಚನೆಗೆ ಅವಕಾಶ ದೊರೆತಾಗ..!

Published

on

  • ರಘೋತ್ತಮ ಹೊ.ಬ

1946 ಡಿಸೆಂಬರ್ 9 ರಂದು ಈ ದೇಶದ ಸಂವಿಧಾನ ಸಭೆ ಪ್ರಪ್ರಥಮವಾಗಿ ಸಮಾವೇಶಗೊಂಡಾಗ ಸ್ವಾತಂತ್ರ್ಯ ಇನ್ನೂ ಸಿಗದಿದ್ದ ಆ ದಿನಗಳಲ್ಲಿ ಅಂದಿನ ಮಧ್ಯಂತರ ಸರ್ಕಾರದ ನೇತೃತ್ವ ವಹಿಸಿದ್ದ ಪ್ರಧಾನಿ ಜವಾಹರಲಾಲ್ ನೆಹರೂರವರು ಮೊದಲ ದಿನ ಸಂವಿಧಾನದ ಗುರಿ ಮತ್ತು ಉದ್ದೇಶಗಳನ್ನು ಒಳಗೊಂಡ ಒಂದು ನಿರ್ಣಯವನ್ನು ಮಂಡಿಸಿದರು.

ಆ ನಿರ್ಣಯದ ಮೇಲೆ ಚರ್ಚೆಯೂ ಪ್ರಾರಂಭವಾಯಿತು. ಹಾಗೆ ಚರ್ಚೆಯು ನಡೆಯುತ್ತಿರಬೇಕಾದರೆ ಡಿಸೆಂಬರ್ 16 ರಂದು ಸದಸ್ಯರಾದ ಎಂ.ಆರ್.ಜಯಕರ್ ಎಂಬುವವರು ಸಂವಿಧಾನದ ಈ ನಿರ್ಣಯದ ಮೇಲಿನ ಚರ್ಚೆಯನ್ನು ಸಭೆಯನ್ನು ಬಹಿಷ್ಕರಿಸಿದ್ದ ಮುಸ್ಲಿಂ ಲೀಗ್ ಪಾಲ್ಗೊಳ್ಳುವವರೆಗೆ ಅನಿರ್ದಿಷ್ಟಾವಧಿಗೆ ಮುಂದೂಡಬೇಕು ಎಂದು ಆಗ್ರಹಿಸಿದರು ಮತ್ತು ಜಯಕರ್ ರವರು ಹೀಗೆ ಹೇಳುತ್ತಲೇ ಇಡೀ ಸಂವಿಧಾನ ಸಭೆಯೇ ಗೊಂದಲಕ್ಕೆ ದೂಡಲ್ಪಟ್ಟಿತು. ಒಂದರ್ಥದಲ್ಲಿ ಕೋಲಾಹಲವುಂಟಾಗಿ ಒಟ್ಟಾರೆ ಸಂವಿಧಾನ ರಚನಾ ಪ್ರಕ್ರಿಯೆಯೇ ನೆನೆಗುದಿಗೆ ಬೀಳುತ್ತದೆಯೇನೋ ಎಂಬ ಆತಂಕ ಸದಸ್ಯರನ್ನು ಕಾಡಿತು.

ಆದರೆ ಮಾರನೇ ದಿನ ಅಂದರೆ ಡಿಸೆಂಬರ್ 17 ರಂದು ಸಭೆ ಸೇರುತ್ತಲೇ ಸಭೆಯ ಅಧ್ಯಕ್ಷತೆ ವಹಿಸಿದ್ದ ಡಾ.ಬಾಬು ರಾಜೇಂದ್ರ ಪ್ರಸಾದ್ ರವರು ಅಂಬೇಡ್ಕರರನ್ನು ಮಾತನಾಡಲು ಆಹ್ವಾನಿಸಿದರು. ಈ ನಿಟ್ಟಿನಲ್ಲಿ ರಾಜೇಂದ್ರ ಪ್ರಸಾದ್ ರ ಈ ಆಹ್ವಾನ ಸ್ವತಃ ಅಂಬೇಡ್ಕರರಿಗೂ ಅಚ್ಚರಿ ತಂದಿತ್ತು.

ಏಕೆಂದರೆ ಸಭೆಯಲ್ಲಿ ಅವರಿಗಿಂತಲೂ ಹಿರಿಯ ಇನ್ನೂ 20 ರಿಂದ 22 ಮಂದಿ ಸರದಿಯಲ್ಲಿ ಬಹಳ ಮುಂದಿದ್ದರು. ಅವರ ನಂತರವೇ ನನಗೆ ಅವಕಾಶ ಬರುವುದೆಂದು ಅಂಬೇಡ್ಕರರು ಅಂದುಕೊಂಡಿದ್ದರು. ಆದರೆ ಹೀಗೆ ದಿಢೀರನೆ ಮಾತನಾಡಲು ಕರೆದಾಗ, ಸಂವಿಧಾನ ರಚನಾ ಪ್ರಕ್ರಿಯೆಯಲ್ಲಿ ಪಾತ್ರವಹಿಸಲು ಆಹ್ವಾನವಿತ್ತಾಗ ಅಂಬೇಡ್ಕರರು ಜಯಕರ್ ರಿಂದ ಉಂಟಾಗಿದ್ದ ಗೊಂದಲವನ್ನು ತಮ್ಮ ಅದ್ಭುತ ವಾಗ್ಝರಿಯ ಮೂಲಕ ತಹಬಂದಿಗೆ ತಂದರು. ಒಂದು ಸ್ಪಷ್ಟ ದಿಕ್ಕಿನಲ್ಲಿ ಇಡೀ ಸಂವಿಧಾನ ರಚನೆ ಸಾಗುವಂತೆ ಮಾರ್ಗ ತೋರಿದರು. In fact ತಾವೇ ಆ ಸಂವಿಧಾನದ ಶಿಲ್ಪಿಯೂ ಆದರು!

ಯಾಕೆ ಈ ಘಟನೆಯನ್ನು ಉಲ್ಲೇಖಿಸಬೇಕಾಯಿತೆಂದರೆ ಅವಕಾಶಗಳು ನಮಗೆ ದಿಢೀರ್ ಎಂದು ದೊರೆಯಬಹುದು, ಹೇಗಾದರೂ ಸಿಗಬಹುದು. ಆದರೆ ಅದನ್ನು ಅಂಬೇಡ್ಕರರಂತೆ ಬಳಸಿಕೊಳ್ಳುವುದಿದೆಯಲ್ಲ ಅದು ಟ್ಯಾಲೆಂಟ್‌. ಈ ನಿಟ್ಟಿನಲ್ಲಿ ಅಂಬೇಡ್ಕರರ ಬದುಕಿನ ಅವಕಾಶದ ಈ ಘಟನೆ ಮತ್ತು ಅದನ್ನು ಅವರು ಉಪಯೋಗಿಸಿಕೊಂಡ ರೀತಿ ಆದರ್ಶನೀಯ, ಪ್ರತಿಯೊಬ್ಬರೂ ಅರಿಯಬೇಕಾದುದು ನೋಡಿ ಕಲಿಯಬೇಕಾದುದಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಬಹಿರಂಗ

ಯಾರು ನೀನು? ನಿನ್ನ ಜಾತಿ ಯಾವುದು? : ಡಾ. ಬಿ.ಆರ್.ಅಂಬೇಡ್ಕರ್

Published

on

  • ಡಾ.ಬಿ.ಆರ್.ಅಂಬೇಡ್ಕರ್

ಭಾರತದಲ್ಲಿ ಒಬ್ಬ ಮುಸ್ಲಿಮನನ್ನೋ, ಸಿಖ್ಖನನ್ನೋ ನೀನು ಯಾರು? ಎಂದು ಕೇಳಿನೋಡಿ. ತಕ್ಷಣವೇ ಅವರು ತಾನು ಮುಸ್ಲಿಮನೆಂದೂ, ಸಿಖ್ಖನೆಂದೂ ಹೇಳುತ್ತಾರೆ. ಅಲ್ಲಿಗದು ಮುಗಿದು ಹೋಗುತ್ತದೆ. ತನಗೆ ಒಳಜಾತಿಯೊಂದಿದ್ದರೂ ಯಾವ ಮುಸಲ್ಮಾನನು ಅದನ್ನು ತಿಳಿಸುವುದಿಲ್ಲ.

ತಾನು ಮುಸ್ಲಿಮನೆಂದು ಅವನು ಹೇಳಿದರೆ, “ನೀನು ಶಿಯಾ ಅಥವಾ ಸುನ್ನಿ, ಶೇಖ್ ಅಥವಾ ಸೈಯದ್, ಖಟಕ್ ಅಥವಾ ಪಿಂಜಾರ…. ಇವುಗಳಲ್ಲಿ ಯಾವುದಕ್ಕೆ ಸೇರಿದವನು?” ಎಂದು ಯಾರೊಬ್ಬರು ಯಾವ ಮುಸಲ್ಮಾನನಿಗೂ ಕೇಳುವುದಿಲ್ಲ. ಅದೇ ರೀತಿ ಒಬ್ಬ ಸಿಖ್ಖನಿಗೆ “ಜಾಟ್, ರೋಡ್, ಮಜಬಿ, ರಾಮದಾಸಿ… ಇವುಗಳಲ್ಲಿ ನೀನು ಯಾವ ಪಂಗಡಕ್ಕೆ ಸೇರಿದವನು?” ಎಂದು ಯಾರೊಬ್ಬರೂ ಕೇಳುವುದಿಲ್ಲ.

ಆದರೆ…
ಒಬ್ಬನು ತಾನು ‘ಹಿಂದೂ’ ಧರ್ಮಕ್ಕೆ ಸೇರಿದವನು ಎಂದು ಹೇಳಿದ ಮಾತ್ರಕ್ಕೆ ಯಾವ ಹಿಂದೂವು ಸುಮ್ಮನಾಗುವುದಿಲ್ಲ. ಅವನ ಎರಡನೇ ಪ್ರಶ್ನೆ ಸಿದ್ಧಗೊಂಡಿರುತ್ತದೆ: “ನಿನ್ನ ಜಾತಿ ಯಾವುದು?” ಹಾಗೇ ನೋಡಿದರೆ ಈ ಎರಡನೇ ಪ್ರಶ್ನೆಯೇ ಹಿಂದೂ ಒಬ್ಬನ ನಿಜವಾದ ಪ್ರಶ್ನೆ. ನೀವು ‘ಹಿಂದೂ’ ಧರ್ಮಕ್ಕೆ ಸೇರಿದವರು ಎಂದಷ್ಟೇ ಹೇಳಿದರೆ ಸಾಲದು, ಜಾತಿ ಉಪಜಾತಿಗಳೆಲ್ಲ ತಿಳಿಸಲೇಬೇಕು. ಈ ಜಾತಿ ಉಪಜಾತಿಗಳೇ ಹಿಂದೂ ಧರ್ಮದಲ್ಲಿ ನಿಮ್ಮ ಸ್ಥಾನ ಏನು ಎಂಬುದನ್ನು ನಿರ್ಧರಿಸುವುದು.

ಮುಸ್ಲಿಮರಲ್ಲಿಲ್ಲದ, ಸಿಖ್ಖರಲ್ಲಿಲ್ಲದ, ಕ್ರೈಸ್ತರಲ್ಲಿಲ್ಲದ ಈ ಜಾತಿ ಹಿಂದೂಗಳಿಗೇಕೆ ಇಷ್ಟು ಮುಖ್ಯವಾಯಿತು?

(ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಬರಹಗಳು ಮತ್ತು ಭಾಷಣಗಳು, ಸಂಪುಟ-1, ಭಾರತದಲ್ಲಿ ಜಾತಿಗಳು, ಜಾತಿ ಪದ್ಧತಿಯ ಒಂದು ಸಮರ್ಥನೆ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಬಹಿರಂಗ

ಪಾರ್ಲಿಮೆಂಟ್ ಮೇಲೆ ಭಯೋತ್ಪಾದಕ ದಾಳಿ : ನಮ್ಮ ಸೈನಿಕರು ಕೊಂದು ಹಾಕಿದ ಐವರು ಉಗ್ರರಲ್ಲಿ ‘ದೇವಿಂದರ್ ಸಿಂಗ್’ ಕಳಿಸಿದ ಆ ವ್ಯಕ್ತಿಯೂ ಇದ್ದ..!

Published

on

Kashmir DSP Devindar singh
  • ಹರ್ಷಕುಮಾರ ಕುಗ್ವೆ

2001 ರಲ್ಲಿ ಸಂಸತ್ ಭವನದ ಮೇಲೆ ನಡೆಸಿದ ಭಯೋತ್ಪಾದಕ ದಾಳಿಯ ನಿಜವಾದ ಮಾಸ್ಟರ್ ಮೈಂಡ್ ಒಬ್ಬ ಶನಿವಾರ ಜಮ್ಮು ಪೊಲೀಸರಿಗೆ ಇನ್ನೂ ಮೂವರು ಹಿಜ್ಬುಲ್ ಭಯೋತ್ಪಾದಕರ ಜೊತೆಯಲ್ಲಿ ಸಿಕ್ಕಿಬಿದ್ದಿದ್ದಾ‌ನೆ.‌ ಅವನ ಹೆಸರು ದೇವಿಂದರ್ ಸಿಂಗ್. ಈತ ಜಮ್ಮು ಕಾಶ್ಮೀರ ಪೊಲೀಸ್ ಇಲಾಖೆಯಲ್ಲಿ ಹಾಲಿ DYSPಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಹಿರಿಯ ಪೊಲೀಸ್ ಅಧಿಕಾರಿ.

ಪಾರ್ಲಿಮೆಂಟ್ ಮೇಲಿನ ದಾಳಿ ಪ್ರಕರಣದಲ್ಲಿ ಗಲ್ಲಿಗೆ ಏರಿಸಲಾಗಿರುವ ಅಫ್ಜಲ್ ಗುರು 2004 ರಲ್ಲಿ ತಿಹಾರ್ ಜೈಲಿನಿಂದ ತನ್ನ ವಕೀಲರಿಗೆ ಬರೆದ ಪತ್ರದಲ್ಲಿ ಈ ದೇವಿಂದರ್ ಸಿಂಗ್ ಕುರಿತು ವಿವರವಾಗಿ ತಿಳಿಸಿದ್ದ. ಅಫ್ಜಲ್ ಗುರು ಪ್ರಕಾರ 2001ರಲ್ಲಿ ಸಂಸತ್ತಿನ ಮೇಲೆ ನಡೆಸಿದ ದಾಳಿಗೆ ಮೊದಲು ಅಫ್ಜಲ್ ಗುರುವನ್ನು ಬಂಧಿಸಿ ಕ್ರೂರವಾಗಿ ಚಿತ್ರಹಿಂಸೆ ನೀಡಿಲಾಗಿತ್ತು.

ಹಾಗೆ ಚಿತ್ರಹಿಂಸೆ ನೀಡಿದ ಪೊಲೀಸ್ ಆಫೀಸರುಗಳಲ್ಲಿ ದೇವಿಂದರ್ ಸಿಂಗ್ ಕೂಡಾ ಇದ್ದ. ಮಾತ್ರವಲ್ಲ ಅಫ್ಜಲ್ ಗುರುವನ್ನು ಬಿಡುವುದಾದರೆ 10 ಲಕ್ಷ ರೂಪಾಯಿ ಕೊಡಬೇಕು ಎಂದು ತಾಕೀತು ಮಾಡಿದ್ದರು. ತನ್ನ ಹೆಂಡತಿಯ ಬಂಗಾರವನ್ನು ಮಾರಿ ಅಫ್ಜಲ್ ಗುರು 8 ಲಕ್ಷ ರೂಪಾಯಿ ಹೊಂದಿಸಿ ಕೊಟ್ಟಿದ್ದ. ಕೆಲವೇ ದಿನಗಳ ಹಿಂದೆ ಕೊಂಡಿದ್ದ 24 ಸಾವಿರ ರೂಪಾಯಿಯ ಬೈಕನ್ನುವಶಪಡಿಸಿಕೊಂಡಿದ್ದರು.

ಕೊನೆಗೆ ಮತ್ತೊಬ್ಬ ಪೊಲೀಸ್ ಅಫೀಸರನ ಬಾವನಾದ ಅಲ್ತಾಫ್ ಹುಸೇನನ ಮಕ್ಕಳಿಗೆ ಟ್ಯೂಶನ್ ಹೇಳಿಕೊಡುವಂತೆ ಅಫ್ಜಲ್ ಗುರುವಿಗೆ ಹೇಳಲಾಗಿತ್ತು. ಕೊನೆಗೆ 2001 ರಲ್ಲಿ ಅದೇ ಅಲ್ತಾಫನೇ ಅಫ್ಜಲ್ ಗುರುವನ್ನು ದೇವಿಂದರ್ ಸಿಂಗ್ ಬಳಿಗೆ ಕೊಂಡೊಯ್ದಿದ್ದ. ಅಗ ದೇವಿಂದರ್ ಸಿಂಗ್ ಅಫ್ಜಲ್ ಗುರುವಿಗೆ ತನಗೆ ಒಂದು ಸಣ್ಣ ಸಹಾಯ ಮಾಡಲು ಕೇಳಿಕೊಂಡ.

ಒಬ್ಬ ವ್ಯಕ್ತಿಯನ್ನು ದೆಹಲಿಗೆ ಕರೆದುಕೊಂಡು ಹೋಗಿ ಅವನಿಗೆ ಕೆಲ ದಿನಗಳ ಕಾಲ ಊಟ, ವಸತಿ ವ್ಯವಸ್ಥೆ ಮಾಡಲು ಹೇಳಿದ್ದ. ಅಫ್ಜಲ್ ಗುರು ಅದೇ ರೀತಿ ಮಾಡಿದ್ದ. ಆದರೆ ಆತ ಯಾರು, ದೇವಿಂದರ್ ಸಿಂಗ್ ಅವನನ್ನು ಯಾಕೆ ತನ್ನ ಬಳಿ ಬಿಟ್ಟಿದ್ದಾನೆ ಎಂದು ಅಫ್ಜಲ್ ಗುರುಗೆ ಗೊತ್ತಿರಲಿಲ್ಲ. ಅವನಾಡುವ ಭಾಷೆ ನೋಡಿದಾಗ ಅವನು ಕಾಶ್ಮೀರಿಯೂ ಆಗಿರಲಿಲ್ಲ.‌ 2001 ರ ಡಿಸೆಂಬರ್ 13 ರಂದು ಪಾರ್ಲಿಮೆಂಟ್ ಮೇಲೆ ಭಯೋತ್ಪಾದಕ ದಾಳಿ ನಡೆದು ನಮ್ಮ ಸೈನಿಕರು ಕೊಂದು ಹಾಕಿದ ಐವರು ಉಗ್ರರಲ್ಲಿ ದೇವಿಂದರ್ ಸಿಂಗ್ ಕಳಿಸಿದ ಆ ವ್ಯಕ್ತಿಯೂ ಇದ್ದ..!

ಅಫ್ಜಲ್ ಗುರು ಹೇಳಿದ್ದ ವಿಷಯಗಳ ಕುರಿತಾಗಿ 2006 ರಲ್ಲಿ ದೇವಿಂದರ್ ಸಿಂಗ್ ನನ್ನು ಪರ್ವೆಝ್ ಬುಕಾರಿ ಎಂಬ ಪತ್ರಕರ್ತ ಪ್ರಶ್ನಿಸಿದಾಗ ದೇವಿಂದರ್ ಸಿಂಗ್ ತಾನು ಅಫ್ಜಲ್ ಗುರುನನ್ನು ಹಿಂಸಿಸಿದ್ದು ನಿಜ ಎಂದು ಒಪ್ಪಿಕೊಂಡಿದ್ದ.

ಈಗ ಅದೇ ದೇವಿಂದರ್ ಸಿಂಗ್ ಹಿಜ್ಬುಲ್ ಮುಜಾಹಿದೀನ್ ನ ಮೂವರು ಉಗ್ರರನ್ನು ತನ್ನದೇ ಪೊಲೀಸ್ ಇಲಾಖೆಯ ಕಣ್ತಪ್ಪಿಸಿ ವೇಗವಾಗಿ ಕಾರಿನಲ್ಲಿ‌ ಸಾಗಿಸುತ್ತಿರುವಾಗ ಡೆಪ್ಯುಟಿ ಇನ್ಸ್ ಪೆಕ್ಟರ್ ಆಫ್ ಪೊಲೀಸ್ ಜನರಲ್ ಅತುಲ್ ಗೋಯೆಲ್ ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ.‌ ಉಗ್ರರು ಹೋಗುತ್ತಿರುವ ಖಚಿತ ಮಾಹಿತಿಯ ಮೇರೆಗೆ ಬಂಧಿಸಿದ್ದಾರೆ. ಉಗ್ರರನ್ನು ಸಾಗಿಸುತ್ತಿದ್ದ DySP ದೇವಿಂದರ್ ಸಿಂಗ್ ನನ್ನು ನೋಡಿದ್ದೇ ಅತುಲ್ ಗೋಯೆಲ್ ಅವನ ಕಪಾಳಕ್ಕೆ ಎರಡು ಬಿಟ್ಟಿದ್ದಾರೆ…‌

ಈಗ RAW, CIBಸೇರಿದಂತೆ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಮೊನ್ನೆ ಭಾನುವಾರ ಈ ಕುರಿತು ಸುದ್ದಿಗೋಷ್ಠಿ ನಡೆಸಿರುವ ಪೊಲೀಸ್ ಅಧಿಕಾರಿಗಳು ದೇವಿಂದರ್ ಸಿಂಗ್ ನನ್ನು ಉಗ್ರರಲ್ಲಿ ಒಬ್ಬ ಎಂದು ಪರಿಗಣಿಸಿಯೇ ತನಿಖೆ ನಡೆಸಲಾಗುವುದು ಎಂದಿದ್ದಾರೆ.

1990ರ ದಶಕದಿಂದ ಜಮ್ಮು ಕಾಶ್ಮೀರ ಪೊಲೀಸ್ ಇಲಾಖೆಯಲ್ಲಿ ಇರುವ ದೇವಿಂದರ್ ಸಿಂಗ್ ಗೂ ಸಂಸತ್ ಮೇಲಿನ ದಾಳಿಗೂ ಏನು ಸಂಬಂಧ?

ಚುನಾವಣಾ ಸಮಯದಲ್ಲಿ ನಡೆದ ಪುಲ್ವಾಮಾ ದಾಳಿಗೂ ದೇವಿಂದರ್ ಸಿಂಗ್‌ಗೂ ಏನಾದರೂ ಸಂಬಂಧ ಇತ್ತೇ?

ಕಳೆದ ವರ್ಷ ಅಕ್ಟೋಬರ್ ನಲ್ಲಿ ಅನಾರೋಗ್ಯದಿಂದ ತೀರಿಕೊಂಡ ದೆಹಲಿಯ ಪ್ರಾಧ್ಯಾಪಕ ಎಸ್ ಎ ಆರ್ ಗಿಲಾನಿಯವರನ್ನು ಸಂಸತ್ ಮೇಲಿನ ದಾಳಿಯ ಮಾಸ್ಟರ್ ಮೈಂಡ್ ಎಂದು ಆರೋಪಿಸಿ ಪೊಲೀಸರು ಬಂಧಿಸಿ ಚಿತ್ರಹಿಂಸೆ ನೀಡಿ ವರ್ಷಗಳ ಕಾಲ ಜೈಲಿನಲ್ಲಿ ಇಟ್ಟಿದ್ದರು. ಆದರೆ ಕೊನೆಗೆ ನ್ಯಾಯಾಲಯದ ವಿಚಾರಣೆ ನಂತರದಲ್ಲಿ ಗಿಲಾನಿಯವರು ನಿರಪರಾಧಿ ಎಂದು ಸಾಬೀತಾಗಿ ಬಿಡುಗಡೆಯಾಗಿದ್ದರು.

ಅವರು ಅಫ್ಜಲ್ ಗುರುವಿನ ಮುಗ್ಧತೆ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದರು. ಸಂಸತ್ ದಾಳಿ ಪ್ರಕರಣದಲ್ಲಿ ಅಫ್ಜಲ್ ಗುರುನನ್ನು ಸಿಕ್ಕಿಸಲಾಗಿದೆ ಎಂದು ಗಿಲಾನಿ ಹೇಳಿದ್ದರು. ಈಗ ದೇವಿಂದರ್ ಸಿಂಗ್ ಬಂಧನದ ಹಿನ್ನೆಲೆಯಲ್ಲಿ ಗಿಲಾನಿಯವರ ಮಾತು ಮಹತ್ವ ಪಡೆಯುತ್ತಿದೆ.

2013 ರಲ್ಲಿ ಅಫ್ಜಲ್ ಗುರುಗೆ ಗಲ್ಲು ಶಿಕ್ಷೆ ನೀಡುವಾಗ ಸುಪ್ರೀಂ ಕೋರ್ಟು “Public Conscience” ತೃಪ್ತಿಪಡಿಸುವ ದೃಷ್ಟಿಯಿಂದ ಅಫ್ಜಲ್ ಗುರು ಗೆ ಮರಣ ದಂಡನೆ ನೀಡಬೇಕು ಎಂದು ತೀರ್ಪು ನೀಡಿತ್ತೇ ವಿನಃ ತನಿಖಾ ಸಂಸ್ಥೆಗಳು ಸೂಕ್ತ ಸಾಕ್ಷಾಧಾರ ನೀಡಲು ವಿಫಲವಾಗಿದ್ದವು. ಈಗ ದೇವಿಂದರ್ ಸಿಂಗ್ ಬಂಧನದ ಹಿನ್ನೆಲೆಯಲ್ಲಿ ಅಫ್ಜಲ್ ಗುರು ಎಸಗಿದ್ದ ಅಪರಾಧವನ್ನು ಸಾಬೀತು ಮಾಡುವ ಸೂಕ್ತ ಸಾಕ್ಷ್ಯ ದೊರೆಯಬಹುದು. ಸಿಗಲಿ ಎಂದು ಆಶಿಸೋಣ.

ದೇವಿಂದರ್ ಸಿಂಗ್ ನಂತಹ ಹಿರಿಯ ಪೊಲೀಸ್ ಅಧಿಕಾರಿಯೇ ಭಯೋತ್ಪಾದಕ ಸಂಘಟನೆಗಳ ಜೊತೆಗೆ ಕೈಗೂಡಿಸಿಕೊಂಡು ದೇಶದ್ರೋಹದ ಕೆಲಸ ಮಾಡುತ್ತಿರುವಾಗ ನಮ್ಮ ದೇಶ ಎಷ್ಟು ಸುರಕ್ಷಿತವಾಗಿರಲು ಸಾಧ್ಯ?

ಗಡಿಯಲ್ಲಿ ನಿಂತು ಪ್ರಾಣ ಕೊಡುತ್ತಿರುವ ನಮ್ಮ ಸಹೋದರರಿಗೆ ದ್ರೋಹ ಎಸಗುತ್ತಿರುವ ಇಂತಹ ಅಧಿಕಾರಿಗಳ ಹಿಂದೆ ಇನ್ನೂ ಯಾರಿದ್ದಾರೆ ಎಂಬುದು ಇಂಚಿಂಚೂ ತನಿಖೆಯಾಗಲಿ… ಸತ್ಯ ಹೊರಬರಲಿ.

ಲಿಂಕ್ ಮೇಲೆ ಕ್ಲಿಕ್ ಮಾಡಿ ಓದಿ

https://www.indiatimes.com/amp/news/india/what-is-parliament-attack-convict-afzal-gurus-connection-with-kashmir-dsp-davinder-singh-504265.html

https://thewire.in/security/ajit-doval-davinder-singh-terrorism/amp/

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending