Connect with us

ಬಹಿರಂಗ

ಅಮ್ಮ ನಡೆದಾಡುವ ದೇವರು

Published

on

ಆ ಟ್ರೈನು ಬಂದಿದ್ದೇ ಅರ್ಧ ಗಂಟೆ ಲೇಟು..

ನಂಗು ನಿಂತು ನಿಂತು ಸಾಕಾಗಿತ್ತು , ವಿಶ್ವಮಾನವ ಎಕ್ಸ್‌ಪ್ರೆಸ್‌ ಹುಬ್ಬಳ್ಳಿ ಯಿಂದ ಮೈಸೂರ್ ಕಡೆಗೆ ಹೊರಟಿದ್ ಟ್ರೈನ್ . ಪ್ಲಾಟ್ ಫಾರ್ಮ್ ಬಂದ್ ಕೂಡ್ಲೆ ಹಂಗೆನೆ ಚಂಗ್ ಅಂತಾ ಜಂಪ್ ಮಾಡಿ , ಕಿಟಕಿ ಪಕ್ಕನೇ ಸೀಟ್ ನೋಡ್ದೇ ಎಲ್ಲಾ ಕಡೆನು ಫುಲ್ ಆಗಿತ್ತು . ಆ ಸೀಟಲ್ಲಿ ಮಲಗಿದವರ್ನ ಮನವಿ ಮಾಡ್ಕೊಂಡೆ . ಪಾಪ ಜಾಗ ಬಿಟ್ರು.

ನಂಗೆ ಈ ಕಿಟಕಿ ಸೈಡಲ್ಲಿ ಕೂತ್ಕೊಳ್ಳೋದು ಅಂದ್ರೆ ಸಿಕ್ಕಾ ಪಟ್ಟೇ ಮಜಾ.. ಅಂಡ್ ಖುಷಿ.. ಟ್ರೈನು ಅದ್ಮೇಲ್ ಕೇಳ್ಬೇಕಾ ! ಸಿಕ್ಕಾಪಟ್ಟೆ ಜನಗಳ‌ ಗೊಣಗೊಣ.. ಅದ್ರಲೂ ಎಲ್ಲಾ ಥರದ ಮನಸ್ಥಿಯ ಜನಗಳ ಒಂದು ಸಮಾಗಮ ಈ ರೈಲು ಪ್ರಯಾಣ… ನಂಗೆ ವಿಮಾನದಲ್ಲಿ ಹಾರಾಟಮಾಡದ್ಕಿಂತ ಟ್ರೈನ್ ನಲ್ಲಿ ಟ್ರಾವೆಲ್ ಮಾಡದು ಅಂದ್ರು ಒಂಥರ ಕ್ರೇಜ್ ಅಂಡ್ ಸಮ್ ಥಿಂಗ್ ‌ಇಷ್ಟ… ಓಹೋ ಬುರುಡೆ ಬಿಡ್ತಾವ್ನೇ ಅಂನ್ಕೋತಿದಿರಾ… ?
ಇಲ್ಲ ಬಸ್ಸು ಚಿಕ್ಕದು ಅದ್ರಲ್ಲಿ ಹಾಡೇಳ್ಬೇಕು ಅಂತ ಏನಾದ್ರು ಅರ್ಜೆಂಟ್ ಆದ್ರೆ ಮುಗೀತು, ಡ್ರೈವರ್ ನಿಲ್ಲಿಸ್ತಾನ ಇಲ್ಲ. ಜಪ್ಪಯ್ಯ ಅಂದ್ರು ನಿಲ್ಸಲ್ಲ… ಅಮೇಲೆ ಈ ರೋಡ್ ಆಕ್ಸಿಡೆಂಟ್ ಗಳನ್ನ‌ ನೋಡಿದ್ಮೇಲೆ ನಂಗೆ ಸಿಕ್ಕಾಪಟ್ಟೆ ಭಯ ಅದ್ಕೆ , ಲಾಂಗ್ ರೂಟ್ ಏನಿದ್ರು ರೈಲ‌ನಲ್ಲೆ ನನ್ ಜರ್ನಿ.‌.ಇದ್ರಲ್ಲಿ ಎಲ್ಲಾ ರೀತಿ ಫೆಸಿಲಿಟಿ ಲಭ್ಯವಿದೆ. ಇನ್ನು ನಾವ್ ಕೂರೋ ಕ್ಯಾಬಿನ್ ನಲ್ಲಿ ಕಲರ್ ಕಲರ್ ಹುಡುಗಿರೇನಾದ್ರು ಕೂತಿದ್ರಂತು ಸ್ವರ್ಗಕ್ಕೆ ಮೂರೇ ಗೇಣು… ನಮ್ ಕಣ್ಣಿನ‌ ಮಿಣ ಮಿಣ … ( ಬಟ್ ಕಂಡಿಷನ್ಸ್ ಅಪ್ಲೈ ಅದು ನಾನಲ್ಲ‌) . ಆ ಕಡೆನೆ ಸೈಟು , ವಿಸಿಟ್ಟು ಎಲ್ಲಾನು… ಎಲ್ಲಾ ಹೇಳಕ್ ಆಗಲ್ಲ , ನೀವೆ ಕನಸ್ ಕಾಣ್ಕೊಳಿ…

ಈ ರೈಲಲ್ಲಿ ಜಾತಿ, ಧರ್ಮ ಏನು ಇಲ್ದಲೆ ಎಲ್ಲಾ ರೀತಿಯ ನಾನಾ ಮನಸುಗಳು ಜರ್ನಿ ಮಾಡ್ತವೆ….ಯಾರ್ಗೆ ಯಾರು ಅಂತ ಗೊತ್ತಿರಲ್ಲ, ಪಕ್ಕದಲ್ಲಿ ಕೂತಾಗ ಏನಾದ್ರು ಮನೆ ಇಂದ ತಂದು ತಿಂತಿದಾಗ ತಗೋಳಪ್ಪ ಅಂತ ಒಂದು ಭಾವನೆ ಇರುತ್ತಲ್ಲ ಅದ್ಕೆ ಎರಡು ಮಾತು ಸಿಗಲ್ಲ… ಎಲ್ಲಿಂದಲೋ ಬಂದೋವ್ರು… ಇಳಿಯೋ ಅಷ್ಟರಲ್ಲಿ ಫ್ರೆಂಡ್ಸಿಪ್ ಅನ್ನೋ ಸಂಬಂಧನ ಬೆಳೆಸಿ ಹೋಗಿರ್ತೀವಿ…

ಚೆನ್ನಾಗಿರೋ ಹುಡುಗೀರ್ ಏನಾದ್ರು ಸಿಕ್ಕಿದ್ರು ಅಂದ್ರೆ ಮುಗಿತು. ಏನು ಮಾತಿಲ್ಲ ಅಂದ್ರು ಕೊರ್ಕೊಂಡು ಕೂತಿರ್ತಿವಿ.. ಅವಳೇನಾದ್ರು ನಮ್ ಮಾತ್ ಕೇಳಕ್ಕೆ ಇಂಟರೆಸ್ಟ್ ತೋರ್ಸಿದಾಳೆ ಅಂತಂದ್ರೆ ಇಲ್ದಲೆ ಇರೋ ಬಿಲ್ಡಪ್ನೆಲ್ಲಾ ನಮಗ್ ನಾವೆ ಕೊಟ್ಕೊತಿರ್ತಿವಿ… ಇನ್ನು ಒಂಚೂರು ಮುಂದಕ್ ಹೋಗಿ , ಫೇಸ್ ಬುಕ್ , ಇನ್ಸ್ಟಾ ಐಡಿ ಕೇಳಿರ್ತಿವಿ. ಇನ್ನೂ ಮೀಟರ್ ಜಾಸ್ತಿ ಇದ್ರೆ ಮೊಬೈಲ್ ನಂಬರ್ ಗಳು ಗೊತ್ತಿಲ್ದಲೆನೆ ಎಕ್ಸೇಂಜ್ ಆಗಿರ್ತವೆ.. ಅಮೇಲ್‌ ಮಿಕ್ಕಿದ್ ಏನ್ ಅನ್ಕೋತಿರೋ ನೀವೆ ಅನ್ಕೊಳ್ಳಿ…

ಹಿಂಗೆ ಎಲ್ಲಾ ಸೀನ್ ಗಳು ನಮ್ ಸುತ್ತ ಮುತ್ತ ನಡೆದ್ರು ಮನಸ್ ಮುಟ್ಟಿದ್ ಮಾತ್ರ ಈ ಸ್ಟೋರಿನೇ … ನಿಮ್ಗೂ ನೆನಪಾಗ್ಬೊದೇನೋ
ಓದ್ನೋಡಿ…

ತನ್ನ ಎರಡು ಮಕ್ಕಳು ಟ್ರೈನ್ ನಲ್ಲಿ ಏನೆ ಕೇಳುದ್ರು ಅದ್ನೆಲ್ಲ ಕೇಳಿದ್ನೆಲ್ಲ ಕೊಡಿಸಿದ್ರು, ಯಾರಾದ್ರು ಚರ್ಮುರಿ ತರ್ಲಿ, ವಡೆ ತರ್ಲಿ ಅವರ್ ಬಾಯಲ್ಲಿ ಒಂದೇ ಸೌಂಡು ಅಮ್ಮಾ… ಅಮ್ಮಾ‌‌.. ಅಷ್ಟೆ ಕೇಳಿದೆಲ್ಲ ಗ್ರಾಂಟೆಡ್ .. ಅವಳ್ ಅತ್ರ ದುಡ್ಡಿದ್ಯೋ ಇಲ್ವೋ ಆ ಮಕ್ಕಳಿಗೇನ್ ಗೊತ್ತು ,ಆದ್ರೆ ಎಷ್ಟೆ ಕಷ್ಟ ಇದ್ರು ಕೂಡ ಕೇಳಿದ್ನ ಇಲ್ಲ ಅಂದಲೆ ಕೊಡಿಸ್ತಿದ್ಲು…‌ ಅರಸಿಕೆರೆ ಜಂಕ್ಷನ್ ನಲ್ಲಿ ಟ್ರೈನ್ ಸ್ಟಾಪ್ ಕೊಟ್ಟಾಗ . ಇಡ್ಲಿ ಇಡ್ಲಿ ಅಂತಾ ಪಕ್ಕದಲ್ಲಿ ತಳ್ಳೋ ಗಾಡೀಲ್ ಕೂಗ್ತಾ ಬರ್ತಿದ್ನಾ ,‌ಆ ಮಕ್ಕಳು ಆ ಮಕ್ಕಳು ನೋಡಿದ್ ಕೂಡ್ಲೆನೆ . ಕರುಳಿನ‌ ಹಸಿವು ಗೊತ್ತಾಗಿ ಅವ್ರಿಗೆ ಹೊಟ್ಟೆಗೆ ಊಟ ಕೊಡ್ಸಿದ್ಲು… ಮಕ್ಕಳಿಗೆ ಇಡ್ಲಿ ಕೊಡಿಸಿದ್ಲು , ನೀರಮ್ಮ ಅಂದ್ಕೋಡ್ಲೆ ಕಾಲಿ ಬಾಟಲ್ ನೊಡ್ತಿದ್ಲು ಅವಾಗ ನಾನು ದಾವಣಗೆರೆ ಸ್ಟೇಷನ್ ‌ನಲ್ಲಿ 12ರುಪಾಯಿಗೆ 2 ಲೀಟರ್ ವಾಟರ್ ಬಾಟಲ್ ತಗೊಂಡಿದ್ದೆ ಅದ್ನೆ ಕೊಟ್ಟೆ.. ಕೊನೆಗೆ ಅದೇ ಚಿಕ್ಕ ಪೇಪರ್ ತಟ್ಟೆನಲ್ಲಿ ಕೈ ತೊಳೆಸಿದ್ಲು ,ಆ ಕೈ ನೀರು ಮೈಮೇಲೆ ಬಿದ್ದು , ಪಕ್ಕದಲ್ಲಿ ಕೂತಿರೋರ್ ಮೇಲ್ ಬಿದ್ದಾಗ ಸಾರಿ‌ಕಣವ್ವ. ಅಂದ್ರು..ಅಮೇಲ್ ತನ್ನ ಸೆರಗಿನಲ್ಲಿ ಕೈ ಹೊರೆಸಿದಳು. ಮಕ್ಕಳು ಖಷ್ ಖುಷಿಯಿಂದ ಆಟಾಡ್ಕೊಂಡು ಸುಮ್ನಾದ್ರು…

ಅದರೆ…

ತಾನು‌ ಮಾತ್ರ ಹಸಿವಿದ್ದರು‌ ಕೂಡ ಸುಮ್ಮನೇ ಕುಳಿತಳು, ತನ್ನ ಹಸಿವನ್ನು ಲೆಕ್ಕಿಸದೆ ತನ್ನ ಕರುಳ ‌ಬಳ್ಳಿಯ ನಲಿವಲ್ಲಿ ತನ್ನ ನೋವನ್ನು ನುಂಗಿದಳು…ಕೊನೆಗೆ ನೀರನ್ನು ಕೂಡ ಆ ತಾಯಿ ನೀರು ಕುಡಿಲಿಲ್ಲ ಆ ಮಕ್ಳಿಗೆ ಬಾಟಲ್‌ ಕೊಟ್ಳು…. !!!!

ಇದೆ ಅಲ್ವಾ ತಾಯಿ ಪ್ರೀತಿ ,ಆ ದೇವರು ನಮಗೆ ಕಾಣಿಸ್ತನೋ ಇಲ್ವೋ ಗೊತ್ತಿಲ್ಲ ,ಹಸಿವು ಅಂದಾಗ ಪ್ರತ್ಯಕ್ಷ ಆಗಿ ಅನ್ನ ಕೊಡ್ತಾನೋ ಇಲ್ವೋ ,ಬಟ್ ತಾಯಿ ಮಾತ್ರ ಬೇಡಿದ್ನೆಲ್ಲ ನೀಡೋ ಅನ್ನಪೂರ್ಣೇಶ್ವರಿ, ವರಲಕ್ಷ್ಮಿ ,ಅಮ್ಮನ ಬಗ್ಗೆ ಹೇಳಕ್ಕೆ ಈ ಸಾಲುಗಳು ಸಾಲಲ್ಲ..

(ಆಗ ನೆನಪಾಗಿದ್ದು ನನ್
ನನ್ ಅಮ್ಮ…
ಅಮ್ಮ … ಅಮ್ಮ‌ ಐ ಲವ್ ಯೂ )

ಕೃಷ್ಣ ನ್ ಹೆತ್ತ ತಾಯಿ‌ ದೇವಕಿ ಅದ್ರೆ ಸಾಕಿದ್ ಮಾತ್ರ ಯಶೋದೆ… ಹಂಗೆ ನನ್ ಹೆತ್ತಿದ್ ರತ್ನಮ್ಮ ಅನ್ನೋ ದೇವಕಿ ಆದ್ರೂ , ಸಾಕಿದ್ ಮಾತ್ರ ನಂಜಮ್ಮ, ಶಾರದಮ್ಮ , ಅಕರ್ಸಮ್ಮ‌ನಂತಹ ಯಶೋ ಮಾತೆಯರು …

ನನ್ ತಾಯಿನು ಕೂಡ ಏನು ಇಲ್ದಲೆ ಇದ್ದಾಗ ಕೂಲಿ ಮಾಡಿ ನನ್ ಸಾಕಿದ್ದಾಳೆ.. ನಂಗೆ ಅನ್ನ ಹಾಕಿ ಸಾಕಿದ್ ಎಲ್ಲಾ ನನ್ ತಾಯಂದಿರ್ಗೂ ನನ್ ಸಾಷ್ಟಾಂಗ ಪ್ರಣಾಮಗಳು..

ನಾವ್ ಹುಟ್ಟೋ ಟೈಮಲ್ಲಿ ಅವಳಿಗಾಗೋ ವೇದನೆ ಇದ್ಯಲ್ಲ.. ತಾಯಿ…
ನೀವ್ ನೆನ್ಸ್ಕೋಳಕ್ಕು ಆಗಲ್ಲ . ನಮ್ಮ ಬಾಡಿಲಿರೋ ಒಟ್ಟು ಮೂಳೆಗಳನ್ನ ಒಟ್ಟಿಗೆ ಮುರುದ್ರೆ ಎಷ್ಟು ನೋವಾಗುತ್ತೋ ! ಅಷ್ಟ್ ನೋವ್ ಪಡ್ತಾಳಂತೆ ನಮ್ ಅಮ್ಮ… !!!
ಅದೇ ಇರ್ಬೇಕು‌ ನೋಡಿ ತಾಯಿಯೊಬ್ಬಳು ಅತ್ತು ನಮ್ ಜನನದಿಂದ ಖುಷಿ ಪಡೋ ಸನ್ನಿವೇಶ…
ಇನ್ನು ಹೇಳ್ಬೇಕ ???
ಅಮ್ಮ ಅಂದ್ರೆ ಏನು ಅಂತಾ , ಅವಳು ದೇವರಿಗಿಂತ ನೂರು ಪಟ್ಟು ಜಾಸ್ತಿನೆ…
ಅದಕ್ಕೆ ನಾನ್ ಹೇಳೋದು ಏನೆ ಮಾಡ್ರಿ ತಾಯಿಗೆ ನೋವು ಮಾತ್ರ ಕೊಡ್ಬೇಡಿ… ಬೆಳೆಗ್ಗೆ ಎದ್ದು ದೇವರ್ನ ನೆನಿತಿರೋ ಇಲ್ವೋ , ತಾಯಿನ ನೆನಪು ಮಾಡ್ಕೊಳಿ ಸಾಕು… ಅವತ್ತೆಲ್ಲ ಅರಾಮಾಗಿರ್ತಿರ..

ಇನ್ನೂ ಒಂದ್ ಕಥೆ ನೆನಪಾಯ್ತು ನಾನು 8ನೇ‌ ಕ್ಲಾಸ್ ಓದ್ವಾಗ 9ನೆ‌ಕ್ಲಾಸ್ ಕನ್ನಡ ಬುಕ್ಕಲ್ಲಿ ಅವ್ವ ಅಂತ ಏನೋ ಒಂದು ಪಾಠ ಇತ್ತು ರೀ .. ಅತ್ತ್ ಬಿಟ್ಟಿದಿನಿ.‌ ಆ ತಾಯಿ ತನ್ ಮಗುಗೆ ಹುಷಾರಿಲ್ಲ ಅಂತಾ ಆಸ್ಪತ್ರೆಗೆ ಕರ್ಕೊಂಡು ಹೋಗ್ತಾಳೆ ಆದ್ರೆ ಮೆಡಿಷನ್ ತರಕ್ ದುಡ್ಡು ಇಲ್ಲ ಅಂದಾಗ ಕೊನೆಗೆ ತನ್ನನ್ನೇ ತಾನು‌ ಮಾರಿಕೊಂಡು ಔಷಧಿ ತರ್ತಾಳೆ…

ಎಷ್ಟೋ ಜನ ತಂದೆ ಇಲ್ಲ ಅಂದ್ರು ಅಮ್ಮನ‌ ಆರೈಕೆನಲ್ಲಿ ಬೆಳಿತಾರೆ, ತಾಯಿ‌ ಕೂಲಿನೋ‌,ನಾಲಿನೊ ಭಿಕ್ಷೆಯೊನೋ ಬೇಡಿ ತಂದು ನಿಮ್ಮನ್ ಸಾಕ್ತಾಳೆ, ಓದಿಸ್ತಾಳೆ , ಬೆಳುಸ್ತಾಳೆ… ಇದೆ ನಿಮ್ ತಾಯಿ ಮಮತೆ ಯಿಂದ ವಿದೇಶದಲ್ಲೋ ಓದಿಸ್ತಳೆ, ಒಳ್ಳೆ ಕೆಲಸನು ಕೊಡ್ಸಿರ್ತಾಳೆ. ಅದೂ ಅಲ್ದಲೆ ನಿಮ್ ಮದ್ವೇನು ಮಾಡಿರ್ತಾಳೆ…
ನೀವ್ ಇಷ್ಟ ಪಟ್ಟಿರೋ ಹುಡುಗಿ ಇದ್ರು ಅದಕ್ಕೆ ಇಲ್ಲ ಅಂದಲೆ , ಹಿಂದೆ‌ಮುಂದೆ ಯೋಚನೆ ಮಾಡ್ದಲೆ , ಅವಳ ಜೊತೆಲೆ ಮದ್ವೆ ಮಾಡಿ , ನನ್ ಮಗಳು ಅಂತಾ ಅರೈಸ್ತಾಳೆ. ಅದ್ರೆ ಹೆಂಡತಿ ಅನ್ನೋಳು ಬಂದ್ಕೂಡ್ಲೆ…ಅವಳ್ ಭಿನ್ನಾಣದ ಮಾತಿಂದ ಕೆಲವರು ತಾಯಿನ ಲಘುವಾಗಿ ನೋಡ್ತೀರ , ಕೊನೆಗೆ ವೃದ್ದಾಶ್ರಮ ಅನ್ನೋ ಕಾಡಿಗ್ ಕಳಿಸ್ತೀರ ..
ಇನ್ನೂ ಕೆಲವರು ಇದಾರೆ ಕಣ್ರಿ ನಮ್ ಸೋದರ ಮಾವನ್ ಥರ ಶ್ರವಣ ಕುಮಾರನಂಗೆ ತಂದೆ ತಾಯಿನ‌ ಯಾವಾಗ್ಲೂ ಕಾವಲು ಕಾಯ್ತ ಆರೈಕೆ ಮಾಡಿತಿರ್ತರೆ… ಏನೆ ಆಗ್ಲಿ ರೀ ಯಾರ್ ಬರ್ಲಿ ಯಾರ್ ಹೋಗ್ಲಿ ..
ತಾಯಿನೆ ದೇವರು… ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ದೇವರಿಲ್ಲ..
ಹಿಂಗಿದ್ರೆ ಯಾವ್ ಯಮನೆ ಬಂದ್ರು ನಿಮ್ನ ಏನು ಮಾಡಕ್ ಆಗಲ್ಲ…‌

ಮಾತೃ ದೇವೋ ಭವ

ನೋಡ್ರಪ್ಪ ಜಾಸ್ತಿ ಏನಾದ್ರು‌ ಕುಯ್ಯ್ ತಾವ್ನೆ ಅಂತ ಅನ್ಸಿದ್ರೆ ಈ ಕಣ್ಣಲ್ ‌ನೋಡಿ , ಆ ಕಣ್ಲಲ್ ಬಿಟ್ ಬಿಡಿ , ಬಯ್ಕೊಳೊ ಹಾಗಿದ್ರೆ ನಾನೆ ನೀನು ಅನ್ಕೊಂಡು ನೀವೆ ಬೈಯ್ಕೋ ಬಿಡಿ… ಇಷ್ಟ ಆದ್ರೆ ಶೇರ ಮಾಡಿ ಬೇರೆ ಅವರು ಓದ್ಲೀ ,ಮರೆತಿದ್ರೆ ಅವರ್ ತಾಯಿನ ನೆನ್ಸ್ಕೊಳ್ಳಿ…

ಇಂತಿ ನಿಮ್ಮ ಪ್ರೀತಿಯ
ತಾಯಿಗೊಬ್ಬ ತರ್ಲೆ ಮಗ
ವಿದ್ಯಾರ್ಥಿ ಮಿತ್ರ ಕಿರಣ್

ಬಹಿರಂಗ

ಬಾಬಾಸಾಹೇಬ್ ಅಂಬೇಡ್ಕರರ ಹೇಳಿಕೆಯನ್ನೇ ದುರುಪಯೋಗ ಪಡಿಸಿಕೊಳ್ಳುತ್ತಿರುವ ಅವರ ಅನುಯಾಯಿಗಳು..!

Published

on

  • ರಘೋತ್ತಮ ಹೊ.ಬ

ಬಾಬಾಸಾಹೇಬ್ ಅಂಬೇಡ್ಕರ್ ರವರು ರಾಜಕೀಯ ಪಕ್ಷವೊಂದನ್ನು ಉರಿಯುವ ಮನೆ ಎಂದರು. ಆ ಕಾಲಘಟ್ಟದಲ್ಲಿ ಅಂಬೇಡ್ಕರ್ ರವರು ಹಾಗೆ ಹೇಳಲು ಕಾರಣ ಆ ಸಮಯದಲ್ಲಿ ಸದರಿ ಆ ರಾಜಕೀಯ ಪಕ್ಷವು ಭಿನ್ನಮತದ ಬೇಗೆಯಲ್ಲಿ ಬೇಯುತ್ತಿತ್ತು. ಇದನ್ನು ಉಲ್ಲೇಖಿಸುತ್ತ ಅಂಬೇಡ್ಕರ್ ರವರು ಆ ಪಕ್ಷವೇ ಹೀಗೆ ಭಿನ್ನಮತದಿಂದ ಒತ್ತಿ ಉರಿಯುತ್ತಿದೆ ಇನ್ನು ದಲಿತರು ಅಲ್ಲಿ ಹೋದರೆ ನಿಮಗೇನು ಸಿಗುತ್ತದೆ ಎಂಬ ಅರ್ಥದಲ್ಲಿ ಆ ಹೇಳಿಕೆ ಹೇಳಿದ್ದರು. ಬದಲಿಗೆ ತಾವೇ ಸ್ಥಾಪಿಸಿರುವ ನಮ್ಮ ಸ್ವಂತ ಪಕ್ಷ “ಪರಿಶಿಷ್ಟ ಜಾತಿಗಳ ಒಕ್ಕೂಟ”ಕ್ಕೆ ಬನ್ನಿ ಎಂದು ಅಂಬೇಡ್ಕರ್ ರವರು ಶೋಷಿತ ಸಮುದಾಯಗಳವರಿಗೆ ಕರೆ ನೀಡಿದ್ದರು.

ದುರಂತವೆಂದರೆ ಇತಿಹಾಸದಲ್ಲಿ ದಾಖಲಾಗಿರುವ ಬಾಬಾಸಾಹೇಬ್ ಅಂಬೇಡ್ಕರ್ ರವರ ಈ ಹೇಳಿಕೆಯನ್ನು ಬಹುತೇಕ ದಲಿತ ರಾಜಕಾರಣಿಗಳು ಈಗಿನ ಕಾಲಕ್ಕೆ ದುರುಪಯೋಗಪಡಿಸಿಕೊಳ್ಳುತ್ತಿರುವುದು, ಇತರೆ ಪಕ್ಷಗಳನ್ನು ಸೇರಲು ಲೈಸೆನ್ಸ್ ರೀತಿ ಬಳಸಿಕೊಳ್ಳುತ್ತಿರುವುದು! ಹಾಗಿದ್ದರೆ ಅಂಬೇಡ್ಕರ್ ರವರು ಹೇಳಿರುವ ಆ ರಾಜಕೀಯ ಹೇಳಿಕೆಯ ಒಟ್ಟಾರೆ ತಾತ್ಪರ್ಯವೇ ಅಪ್ರಸ್ತುತವೇ? ಖಂಡಿತ ಇಲ್ಲ. ಅವರು ಹೇಳಿದ ಶೋಷಿತ ಸಮುದಾಯಗಳ ಸ್ವತಂತ್ರ ರಾಜಕಾರಣ ಈಗಲೂ ಬೇರೆ ಬೇರೆ ರೂಪದಲ್ಲಿ ಅಸ್ತಿತ್ವದಲ್ಲಿ ಇದೆ. ಅವರು ಜೀವನದುದ್ದಕ್ಕೂ ವಿರೋಧಿಸಿದ ಮೇಲ್ಜಾತಿ ಹಿಂದೂ ರಾಜಕೀಯ ಪಕ್ಷಗಳೂ ಬೇರೆ ಬೇರೆ ಹೆಸರಿನಲ್ಲಿ ಅಸ್ತಿತ್ವದಲ್ಲಿ ಇವೆ!

ನಿಜ, ಇಂತಹ ರಾಜಕೀಯ ಸೂಕ್ಷ್ಮತೆಗಳನ್ನು ಸಾರ್ವಜನಿಕವಾಗಿ ಹೇಳುವುದು ತಪ್ಪು ಎಂದು ವಯಕ್ತಿಕವಾಗಿ ನನಗೆ ಗೊತ್ತಿದೆ ಆದರೆ ಬಾಬಾಸಾಹೇಬ್ ಅಂಬೇಡ್ಕರರ ಹೇಳಿಕೆಗಳ, ಬರಹಗಳ, ಚಿಂತನೆಗಳ ಮಹತ್ವವನ್ನು ಉಳಿಸುವ ದೃಷ್ಟಿಯಲ್ಲಿ ನನ್ನಂತಹವರು ಇಂತಹ ವಿಚಾರಗಳನ್ನು ಮುಕ್ತವಾಗಿ ಬಾಯಿಬಿಟ್ಟು ಹೇಳಲೇಬೇಕಿದೆ. ಅವರ ಬರಹಗಳ ಪ್ರಸ್ತುತತೆಯನ್ನು ನೈಜ ಅರ್ಥದಲ್ಲಿ ವಿಶ್ಲೇಷಿಸಿ ಸದಾ ಕಾಲ ಕಾಪಿಟ್ಟುಕೊಳ್ಳಬೇಕಿದೆ. ಜೈಭೀಮ್.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಬಹಿರಂಗ

“ಸುರರು ಮತ್ತು ಅಸುರರು ಇಬ್ಬರೂ ಒಂದೇ ತಂದೆಯ ಮಕ್ಕಳು” : ಬಾಬಾಸಾಹೇಬ್ ಅಂಬೇಡ್ಕರ್

Published

on

  • ರಘೋತ್ತಮ ಹೊ.ಬ

ಬಾಬಾಸಾಹೇಬ್ ಅಂಬೇಡ್ಕರರು ಅಸುರರ ಬಗ್ಗೆ ಏನು ಹೇಳುತ್ತಾರೆ? ಇದನ್ನು ಉಲ್ಲೇಖಿಸುವುದಾದರೆ, ಅಂಬೇಡ್ಕರರು ಹೇಳುತ್ತಾರೆ, “ಅಸುರರು ಮತ್ತು ಸುರರು ಇಬ್ಬರೂ ಆರ್ಯನ್ನರ ರೀತಿಯೇ ಮಾನವ ಜೀವಿಗಳ ಸಮುದಾಯಗಳು. ಹಾಗೆಯೇ ಅಸುರರು ಮತ್ತು ಸುರರು ಇಬ್ಬರೂ ಕಶ್ಯಪ ಎಂಬ ಒಬ್ಬನೇ ಸಾಮಾನ್ಯ ತಂದೆಯ ವಂಶಜರು. ಇದರ ಹಿಂದಿರುವ ಕತೆ ಎಂದರೆ, ದಕ್ಷ ಪ್ರಜಾಪತಿಗೆ 60 ಮಂದಿ ಹೆಣ್ಣು ಮಕ್ಕಳಿದ್ದರು. ಅವರಲ್ಲಿ 13 ಮಂದಿಯನ್ನು ಕಷ್ಯಪನಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಕಷ್ಯಪನ ಆ 13 ಮಂದಿ ಹೆಂಡತಿಯರಲ್ಲಿ ದಿತಿ ಮತ್ತು ಅದಿತಿ ಕೂಡ ಇಬ್ಬರಾಗಿದ್ದರು. ದಿತಿಗೆ ಹುಟ್ಟಿದ ಮಕ್ಕಳನ್ನು ಅಸುರರು ಎಂದು ಕರೆಯಲಾಗುತ್ತಿತ್ತು. ಅದಿತಿಗೆ ಹುಟ್ಟಿದ ಮಕ್ಕಳನ್ನು ಸುರರು ಅಥವಾ ದೇವಾ(Devas)ರುಗಳು ಎಂದು ಕರೆಯಲಾಗುತ್ತಿತ್ತು. ಅಂದಹಾಗೆ ಈ ಇಬ್ಬರೂ (ಸುರರು ಮತ್ತು ಅಸುರರು) ಈ ಪ್ರಪಂಚದ ಸಾರ್ವಭೌಮತ್ವಕ್ಕಾಗಿ ಬಹಳ ದೀರ್ಘ ಮತ್ತು ರಕ್ತಪಾತದ ಯುದ್ಧ ನಡೆಸಿದರು. ಅನುಮಾನವೇ ಬೇಡ ಇದು ಪುರಾಣ. ಈ ಪುರಾಣವನ್ನು ಇತಿಹಾಸ ಎನ್ನುವುದು ಅತಿಶಯೋಕ್ತಿಯೆನಿಸಿದರೂ ಆಗಲೂ ಇದು ಇತಿಹಾಸವಾಗಿದೆ”. (ಬಾಾಬಾಸಾಹೇಬ್ ಡಾ.ಅಂಬೇಡ್ಕರ್ ಬರಹಗಳು, ಇಂಗ್ಲಿಷ್ ಸಂ.3, ಪು.419)

ಅಂಬೇಡ್ಕರರು ಪ್ರಸ್ತಾಪಿಸುವ ಈ ಪುರಾಣ ಕಂ ಇತಿಹಾಸದ ಪ್ರಕಾರ ಅಸುರರು ಮತ್ತು ಸುರರು ಇಬ್ಬರೂ ಒಂದೇ ತಂದೆಯ ಆದರೆ ಇಬ್ಬರು ಬೇರೆ ಬೇರೆ ತಾಯಿಯ ಮಕ್ಕಳು. ಅರ್ಥಾತ್‌ ಇಬ್ಬರೂ ಅಣ್ಣ ತಮ್ಮಂದಿರು. ಹೀಗಿರುವಾಗ ಇಲ್ಲಿ ಸುರರ ಸ್ವಂತ ಸೋದರರಾದ ಅಸುರರನ್ನು ಶೋಷಿತ ಸಮುದಾಯಗಳು ಆದರ್ಶವಾಗಿ ತೆಗೆದುಕೊಳ್ಳುವುದು ಹೇಗೆ? ಈ ಕಾರಣಕ್ಕಾಗಿ ಈ ಅಸುರರು ಮತ್ತು ಸುರರ ಗೋಜಲಾದರೂ ನಮಗೆ ಏಕೆ? ಸುಮ್ಮನೆ ಗೌತಮ ಬುದ್ಧರ ಬಳಿ ತೆರಳಿದರೆ ಸಾಕಲ್ಲವೇ?

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಬಹಿರಂಗ

ಗಾಂಧಿಯನ್ನು ಎದೆಗಿಳಿಸಿಕೊಂಡವರಾರೂ ಬುದ್ಧನನ್ನ ಮುಟ್ಟಲಾರರು, ಬಾಬಾಸಾಹೇಬರ ಕಣ್ಣೀರ ಅರಿಯಲಾರರು

Published

on

  • ಹ.ರಾ.ಮಹಿಶ

ಸೇಫ್ ಝೋನ್ ನಲ್ಲಿ ದೂರದಿಂದ ನಿಂತು‌ ನೋಡುವ ನಿಮಗೆ ಮೈಪೂರ ವಿಷತುಂಬಿಕೊಂಡ ಆ “ಹಾವಿನ” ನುಣ್ಣನೆಯ ಮೆತ್ತನೆಯ ಬೆತ್ತಲೆಯ ಸಪೂರ ಶರೀರ, ಬಿಚ್ಚಿದ ಕಲಾತ್ಮಕ ಹೆಡೆ, ಆಕರ್ಷಕ‌ ಮೈ ಹೊಳಪು, ಮತ್ತು‌ ಸದ್ದಿಲ್ಲದೆ ಸರಸರ ಹರಿಯುವ ಅದರ ಚಮತ್ಕಾರ ಇವುಗಳು ಬಲು ಪ್ರಿಯವಾಗಿ ಕಂಡಿರಬೇಕು..!

ನಮಗೆ ಅದರ ಒಳಗಿನ ವಿಷದ ಕ್ರೂರ ಹಲ್ಲಿನ ದರ್ಶನವಾಗಿದೆ..!
ಮತ್ತು‌ ಅದರಿಂದ ಕಚ್ಚಿಸಿಕೊಂಡು ಈಗಲೂ ಸಾಯುತ್ತಿದ್ದೇವೆ..!!!

ಗಾಂಧಿವಾದದಿಂದ ಅನ್ನ ಅಧಿಕಾರ ಪಡೆದ ಸ್ವಾರ್ಥಿಗಳು ಮತ್ತು , ಅವರಿಂದ ಏನೂ ಪಡೆಯದ ಏನೂ ಕಳೆದುಕೊಳ್ಳದ ಮುಗ್ಧ-ಮೂರ್ಖರು, ಈ ಎರಡೂ ಕೆಟಗರಿಯ “ಗಾಂಧೀ ಸಮರ್ಥಕರಿಗೆ” ಮತ್ತು ಅಡ್ಡಗೋಡೆ ಮೇಲೆ ದೀಪ ಇಟ್ಟು ಎಲ್ಲರಿಂದಲೂ ಭೇಷ್ ಎನಿಸಿಕೊಳ್ಳುವ ತೆವಲುಳ್ಳ ಮೂರನೇ ಕೆಟಗರಿಯ ಜನರಿಗೆ ಗಾಂಧಿಯಿಂದ ಅನ್ಯಾಯಕ್ಕೊಳಗಾಗಿ ಇನ್ನಿನ್ನೂ ಅದರಿಂದ ನೋವುಣ್ಣುತ್ತಿರುವ ನಮ್ಮ ಸಂಕಟ ಅರ್ಥವಾಗದು..!!!

“ನೊಂದವರ ನೋವ ನೋಯದವರೆತ್ತ ಬಲ್ಲರು” ಎಂಬ
ನಾಡಿನ ಪ್ರಜ್ಞೆಯಾದ ಮಹಾತಾಯಿ ಅಕ್ಕ ಮಹಾದೇವಿಯವರ ಮಾತನ್ನಾದರೂ ಅರ್ಥ ಮಾಡಿಕೊಳ್ಳದ ಮೂಢರು ಅತಿಬುದ್ಧಿವಂತರಂತೆ ವರ್ತಿಸುತ್ತಿರುವುದಂತೂ ನಿಜಕ್ಕೂ ಅಸಹ್ಯವೆನಿಸುತ್ತಿದೆ…!

ಛೆ…

ಗಾಂಧಿ ಮತ್ತು ಅಂಬೇಡ್ಕರರ ಬಗ್ಗೆ ಯಾರೋ‌ ಮೂರನೆಯವರು ಬರೆದ ಪುಸ್ತಕ ಓದಿಕೊಂಡು ಯಾರೋ ಹೇಳಿದ್ದನ್ನು ಕೇಳಿಕೊಂಡು ಶಾಂತಿಸೌಹಾರ್ಧಪ್ರಿಯರಂತೆ ಪೋಸು ಕೊಟ್ಟು ಆಧಾರ ಸಮೇತ ವಿಮರ್ಶಿಸುವುದನ್ನೇ “ದ್ವೇಷ” ಎಂದು ತೀರ್ಪುಕೊಟ್ಟು‌ ಅಂಬೇಡ್ಕರ್ ವಾದಿಗಳನ್ನು ಅವರಿಗೆ ಒಗ್ಗದ ಹೆಸರುಗಳಿಂದ ಕರೆದು ಗಾಂಧಿಯನ್ನೇ ಉಸಿರಾಡುತ್ತಾ ಆಗಿಂದಲೂ ಬಡಬಡಿಸುತ್ತಿರುವ ಧೀರರೇ ಧೀರೆಯರೆ ಶೂರರೇ….

ಗಾಂಧಿಯವರನ್ನು ಕುರಿತು
ಗಾಂಧೀಯವರ ಇಬ್ಬಂದಿತನ ಕುರಿತು
ಗಾಂಧೀಯವರ ನಯವಂಚಕತನವನ್ನು ಕುರಿತು ಗಾಂಧಿಯವರಿಂದ ಸ್ವತಃ ಹಿಂಸೆ ನೋವು ಮೋಸಕ್ಕೆ ಒಳಗಾದ ಬಾಬಾಸಾಹೇಬರೇ ಬರೆದಿರುವ
“GANDHI AND GANDHIISM”
ಮತ್ತು ಬಾಬಾಸಾಹೇಬರ‌ ಬರಹ ಭಾಷಣಗಳ ಸಂಪುಟ ೯
“WHAT GANDHI AND CONGRESS HAVE DONE TO UNTOUCHABLES” ಅನ್ನು ಓದಿದ್ದೀರಾ…?

ಮತ್ತು 1955 ರಲ್ಲಿ‌ ಬಾಬಾಸಾಹೇಬರು BBC ಗಾಗಿ ನೀಡಿರುವ ಸಂದರ್ಶನದಲ್ಲಿ ಗಾಂಧಿಯವರ ಕುರಿತ 21 ನಿಮಿಷಗಳ ಖುದ್ದು ಬಾಬಾಸಾಹೇಬರ ಮಾತುಗಳನ್ನಾದರೂ ಕೇಳಿದ್ದೀರಾ…?

ಅವುಗಳನ್ನು ಓದಿಲ್ಲ ಕೇಳಿಲ್ಲವೆಂದರೆ ದಯಮಾಡಿ ಒಮ್ಮೆ ಓದಿ ಕೇಳಿ ನಂತರ ಬರೆಯಿರಿ…

ಅಕಸ್ಮಾತ್ ‌ಓದಿಯೂ ಕೇಳಿಯೂ ನಿಮ್ಮ ಅಭಿಪ್ರಾಯ ಇದೇ ಆಗಿದ್ದರೆ ನನ್ನದೇನೂ ತಕರಾರಿಲ್ಲ… ನಿಮ್ಮ ಅರೆಜ್ಞಾನಕ್ಕೆ ಪೂರ್ವಗ್ರಹಪೀಡಿತ ರೋಗಕ್ಕೆ ಕೃತಘ್ನತೆಗೆ ವಿಚಾರಹೀನ ಸಂವೇದನಾಹೀನ ಸ್ವತಂತ್ರ ಚಿಂತನಾಹೀನತೆಗೆ ಮರುಕ ಪಡುತ್ತೇನೆ.

ಗಾಂಧಿಯವರ ಇಬ್ಬಂದಿತನವನ್ನು ವಿರೋಧಿಸುತ್ತಲೇ ಅವರ ಬಗೆಗಿನ ನಿಮ್ಮ ಅಭಿಪ್ರಾಯ ಭಿನ್ನಾಭಿಪ್ರಾಯಗಳನ್ನು ಮತ್ತು ನಿಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುತ್ತೇನೆ.
ಅಷ್ಟೇ ಇನ್ನೇನೂ ಹೇಳಲಾಗದು..‌

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending