Connect with us

ಬಹಿರಂಗ

ಕಿಂಗ್ v/s ಕಿಂಗ್ ಮೇಕರ್

Published

on

ಚಿತ್ರ ಕೃಪೆ: ಎಕಾನಾಮಿಕ್ ಟೈಮ್ಸ್

ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು………..ಅಂತಾ ಹಿಂದೆ ಈ ಸಾಂಗ್ ನ ನೀವೆಲ್ಲಾ ಕೇಳಿದ್ರ ಅಲ್ವಾ??? ಇವಗಾ ಇದೆ ತರ ಇನ್ನೊಂದು ಸಾಂಗ್ ನಾನೆ ಹೇಳ್ತೀನಿ‌ ಕೇಳಿ.., *ತೆನೆ ಹೊತ್ತ ಹೆಂಗಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು* ‌‌ಹೌದು ಈ‌ ಮಾತ್ನಾ ಇವ್ನು ಯಾಕೇಳ್ತಾವ್ನೆ ಅಂತಾ ಅನ್ಕೊಂಡ್ರ ಅದ್ಕೂ ಒಂದು reason ಅಯ್ತೆ … ತಿಂಗಳಾರ ಗಟ್ಲೆ ಹೋಡಾಡ್ಕೊಂಡು ಪ್ರಚಾರ ಮಾಡ್ಕೊಂಡು, ಸಿಕ್ ಸಿಕ್ಕೋರ್ ಕಾಲಿಗೆಲ್ಲಾ ಬಿದ್ಕೊಂಡು ಎಲೆಕ್ಷನ್ ನ ಮಾಡಿದ್ರು . ಇವತ್ತು ಆ world ವಾರ್ ಗೆ seal ಒತ್ತಿದಾಯ್ತು… Certificate ಕೊಟ್ಟಿದಾಯ್ತು. ಅಂದ್ರೆ final ರಿಸಲ್ಟ್ ಬಂದಿದಾಯ್ತು… ನೀವೇನು ತುಂಬಾ ದಿನಗಳಿಂದ ಕಾತುರದಿಂದ ಕಾಯ್ತಿದ್ರ ಕರ್ನಾಟಕದ ಕುರುಕ್ಷೇತ್ರ ಕ್ಕೆ ತೆರೆ ಬಿದ್ದಾಯ್ತು.. ಕೆಲವರು ಗೆದ್ದಾಯ್ತು , ಮೆರಿತ್ತಿದವ್ರು ಸೋತಾಯ್ತು… ಎಲ್ಲಾರ ಲೆಕ್ಕಾಚಾರನು ಉಲ್ಟಾ ಹೊಡೆದಾಯ್ತು…

ದೊಡ್ಡ ದೊಡ್ದ minister ಗಳನ್ನ‌ಮನೆಗ್ ಕಳ್ಸಿದ್ದು ಆಯ್ತು.‌.‌ ಹೊಸ ‌ಹುಡುಗ್ರುನ್ನ 3 ನೇ ಮಹಡಿಗೆ ತಳ್ಳಿದ್ದು ಆಯ್ತು… ಅವ್ರೇನ ಕಿತ್ ದಬ್ಬಾಕ್ತರೋ ನೋಡ್ಬೇಕು??

ಬಿಡಿ ಎಲ್ಲರ್ಗೂ ಗೊತ್ತಾಯ್ತು… ಇನ್ನೇನಿದ್ರು ಚದುರಂಗದಾಟ ಶುರು ಮಾಡೋ ಸಮಯ…

ನಂಗೆ ಒನ್ ಚಿಕ್ಕ flashback ಕಥೆ ನೆನ್ಪಾಯ್ತು , ನನ್ನ ಕನ್ನಡ‌ madium ಇಂದ 8ನೇ‌ಕ್ಲಾಸ್ ಗೆ ಇಂಗ್ಲಿಷ್ medium ಗೆ ಸೇರ್ಸುದ್ರು ಅವಾಗ 8ನೇ‌ಕ್ಲಾಸಿನ‌್‌ result ಬಂತು ಆ ಟೈಮ್ ‌ನಲ್ಲಿ ನಮ್ ಊರಿನ್ ಹುಡ್ಗಿ ಬೆಂಗಳೂರಲ್ಲಿ ಓದ್ತಿದ್ಲು 95% ಏನೋ ತಗೊಂಡಿದ್ಲಂತೆ ಆದ್ರೆ results ಬಂದಿದ್ ದಿನ‌ ಮಾರ್ಕ್ ‌ಕಡಿಮೆ ಆಯ್ತು ಅಂತಾ ಸಿಕ್ಕಾ ಪಟ್ಡೆ ಅಳ್ತಿದ್ಲು … ಇನ್ನೊಂದ್ ಕಡೆ ನಾನು ನಮ್ ದೋಸ್ತಿ ಸ್ಕೂಲ್ ಕಾಂಪೌಂಡ್ ಮೇಲೆ ಕೂತ್ಕೊಂಡು ಜಯಮ್ಮನ್ ಅಂಗಡಿ ಕಾರಸೇವೆ ಇನ್ಕೊಂಡು ಅರಾಮಾಗ್ ಇದ್ದೋ … ಆಗ ನಂದು 48 % ಮಾರ್ಕ್ಸ್ ..ಅಮೇಕ್ ‌ಮುಂದುಕ್‌ ಏನೆ ಬೇಕು ಅಂದ್ರು ನನ್ನತ್ರನೆ ಕೇಳಕ್ ಬರ್ತಿದ್ಲೂ… ಎಲ್ಲೆ ಹೊಗ್ಬೇಕು ಅಂದ್ರು ನನ್ನೆ ಕರ್ಕೊಂಡು ಹೋಗ್ತಿದ್ಲು… ಅವಳು 95 ತಗ್ದಿದ್ರು ನನ್ ಬಿಟ್ ಏನು ಮಾಡಂಗ್ ಇರ್ಲಿಲ್ಲ…

ಇವನ್ಯಾರ ಇದನ್ಯಾಕ್ ಹೇಳ್ತಾವ್ನೇ ಅನ್ಕೋಬೋದು ಅಲ್ಲೆ ನೋಡಿ ಇರದು…

ಇವತ್ತಿನ ಫಲಿತಾಂಶ ಎಲ್ಲಾರು ನೋಡಿದ್ದೀರ , ಏನಾಯ್ತು… ನೆನ್ನೆನೆ ದಾವಣಗೆರೆಯಲ್ಲಿ ರಾತ್ರೋ ರಾತ್ರಿನೆ ಮಳೆ ಬಂದಾಗ್ಲೆ ಹೇಳ್ದೆ ನಾಳೆ ಬೆಳಗ್ಗೆ ಬೆರಕೆ ಕಟ್ಟಿದ್ ಸಾಂಬಾರೆ ಗತಿ ಅಂತ!!! ಹಂಗೆ ಆಯ್ತಾಲ…!!!

ಇಷ್ಟ್ ದಿನ‌ ಅಲ್ಲಾಡ್ಸಿದ್ ಕೈ ಬಿದ್ದೋಯ್ತು… ಕೆರೆ ಹೂವ ದೊಡ್ಡದಾಯ್ತು… ಗದ್ದೆ ಭತ್ತ ಎಳ್ಸಾಗೇ ಹೋಯ್ತು , ಈಗ ಕೈಗೆ ಉಸಿರಾಯ್ತು…

ಜೈಲ್ಗೋಗ್ ಬಂದವ , ಜೈಲ್ಗೋಗ್ ಬಂದವ ಅಂತಾ ಹೋಗಿದ್ ಕಡೆ ಎಲ್ಲಾ ಜರಿತಿದ್ ಸಿದ್ರಾಮಣ್ಣ , ಜೈಲ್ಗೋಗ್ ಬಂದೋರ್ಗೆ ಜಾಸ್ತಿ ಕೊಟ್ ಬಂದಾವ್ರೆ….

ನಮ್ ಸೂಟು ಬೂಟು ತಾತ ರಾಜ್ಯ ಸುತ್ತಿ ಸುತ್ತಿ ಕೊನೆಗು ತಮ್ ಬುಟ್ಟಿಗೆ 104 ಹಾಕೋಬಿಟ್ರು. ಇನ್ನು ಒನ್ ಮ್ಯಾನ್ ಆರ್ಮಿ ಸಿದ್ರಾಮಣ್ಣನ ಮೈಸೂರ ಬಿಡ್ಸಿ ಬಾದಾಮಿನಲ್ಲಿ ಎಬ್ಸಿ 78 ಹಿಡ್ಸುದ್ರು… ಇನ್ನಾ ಹೋಂ ಟೀಂ ಕುಮಾರಣ್ಣ ಒಂದ್ ಸರಿ ಮಾಡಿದ್ mistakes ಇಂದಾ ಇನ್ನು ಸುದಾರ್ಸ್ಕೋತಾವ್ರೆ.. ಒಂದ್ ಚಾನ್ಸ್ ಕೊಟ್ ನೋಡಿ ಅಂತಾ ಕೇಳ್ಕೊಂಡ್ರು .. ಆದ್ರೇನ ಪ್ರಯೋಜನ ಮನೆ ಒಂದು ಮೂರು ಬಾಗಿಲು ಅಂದಾಂಗೆ ಮನೆ ಜಗಳ ಊರ್ನೊರ್ಗೆ ಗೊತ್ತಾದ್ರೆ ಹೆಂಗೆ…? ಹಿಂಗೆನೆ..!! ಹಂಗೋ ಹಿಂಗೋ , ಅಲ್ಲಲ್ಲಿ ಕೈ ಕಟ್ ಮಾಡಿ , ಕೆರೆಲಿ ತಾವರೆ ಹೂವ ಕಿತ್ತಾಕಿ 38 ಮಾಡ್ಕೋ‌ಬಿಟ್ರು… ಈಗಾ ಅಲ್ಲೆ ಇರದು ನೋಡಿ ಆಟ…ಬಗುಣಿ ಗೂಟ…!!!

ಮ್ಯಾಜಿಕ್ ನಂಬರ್ ಆಡ್ಬೇಕು ಅಂದ್ರೆ , ಯಡ್ಯೂರ್ ಗೆ ಇನ್ನೂ ಲಕ್ಕಿ ನಂಬರ್ 9 ಬೇಕೆ ಬೇಕು… Distinction ತಗೊಂಡ್ರು grace ಮಾರ್ಕ್ಸ್ ಇಲ್ದಲೆ ಪಾಸ್ ಆಗಲ್ಲ…‌
ಮ್ಯಾಜಿಕ್ ಮಾಡ್ದಲೆ ಆಟ ಆಡಕ್ ಆಗಲ್ಲ.. ಇನ್ನಾ
ಆಪರೇಷನ್ ಮಾಡಕ್ ಟೈಮ್ ಇಲ್ಲಾ ..!! ಕಾಳ್ ಹಾಕಕ್ ನೋಡ್ತಾವ್ರೆ ಇನ್ನೂ ಯಾವ್ ಕುರಿನು ಸಿಕ್ಕಿಲ್ಲ.. ಅಲ್ದೆ ಹೋಂ ಟೀಂ ಅಂತು ಸೇರಲ್ಲ ‌ಅನ್ಕೊಂಡು , ಕೋರ್ಟು ಕಛೇರಿ ಅಂತಾವ್ರೆ….

ಆದ್ರೆ ನಮ್ ಸಿದ್ರಾಮಣ್ಣ ಸುಮ್ನೀರ್ತಾರ?? ಇರಲ್ಲಾ..???
ಅವರ್ ಅಪ್ಪನಾಣೆ‌ ಅವನು ಸಿಎಂ ಆಗಲ್ಲ ಅಂತಿದ್ ಸಿದ್ದಣ್ಣ ಅವರ್ ಅಪ್ಪನೆ‌ ಬೇಕು ಅಂತಾವ್ರೆ..

ಹಳೆ ಹೆಂಡ್ರು ಪಾದವೇ ಗತಿ ಅಂದಂಗೆ ಇರೋ ಬರೋರ್ ನೆಲ್ಲಾ ಎತ್ತಾಕೊಂಡು, ‌ಪವರ್ ಸಪ್ಲೈ ಇಟ್ಕೊಂಡು ದೊಡ್ ಗೌಡ್ರು ಕಡೆ ಮುಖ ಮಾಡ್ಕೊಂಟು, ಹೆಗ್ಲು ಮೇಲೆ ಟವಲ್ ಹಾಕೊಂಡು ಓಡ್ ಬಂದವ್ರೆ…

ಹಿಂದೆ ಫುಲ್ ಇನ್ನಿಂಗ್ಸ್ ಆಟ ಆಡಿದ್ ‌‌ಕ್ಯಾಪ್ಟನ್ ಕೂಲ್‌ ಸಿದ್ರಾಮಣ್ಣನು 78 ತಗೊಂಡ್ರು . ಇರೋ 38ನ ಬಿಡಕ್ ಹಾಗ್ತಿಲ್ಲ… ಅವರ್ನ ಬಿಟ್ರೆ ಕೆಟ್ವಿ ಅನ್ಕೊಂಡು ಕೈ ಕಟ್ ಕುಂತವ್ರೆ…

ಇಬ್ರು ಸೇರುದ್ರೆ 116 ಆಯ್ತಿವಿ, ಅಂಗೋ ಇಂಗೋ 3 ನಾಮ ಆಕುದ್ರು 113 , ಸಾಕಲ್ಲ ಆಡಕ್ಕೆ ಗೇಮ್ ಅಂತಾ ರಾಜ್ಯಪಾಲರ ಕಡೇ ಹೊಂಟವ್ರೆ…

ಇನ್ನಾ ಇರೋ ಕುದುರೆ ಗಳನ್ನ ಹಾರಿಸ್ಕೊಂಡ್ ಹೋದ್ರೆ ಕಷ್ಟ ಅನ್ಕೊಂಡು ರೆಸಾರ್ಟ್ ಗೆ ಅಟ್ಟಕ್ಕೆ ಪ್ಲಾನ್ ಹಾಕವ್ರೆ… ಮಲ್ಲು ಆಂಟಿ ಊರಿಗೋ , ಭಲ್ಲೇ ಭಲ್ಲೇ ಬಾರ್ಗೋ ಗಾಡಿ ಬಿಡ್ತಾವೆ…

ನೋಡ್ಬೇಕು ಎಷ್ಟೆಷ್ಟ್ ಕುದುರೆಗಳು ಸೇಲ್ ಆಯ್ತವೋ ,ಇಲ್ಲಾ ಹೈಜಾಕ್ ಆಯ್ತವೋ !! ಇಲ್ಲಾ ಸೂಟ್ ಆಸೆಗೆ ಅವೇ ಬಿಟ್ ಓಡೋಯ್ತವೋ !!! ನಿಯತ್ತಾಗಿ ಟಿಕೆಟ್ ಕೊಟ್ಟು ಗೆಲ್ಸಿದ್ಕೆ ಬಾಲ ಹಿಡಿತವೋ ??? ಏನೆ ಆದ್ರೂ ಕುದುರೆ ಬಾಲಕ್ ಈ ಟೈಮ್ ನಲ್ಲಿ ಕಟ್ಟೋ ಬೆಲೆ ಎಲ್ಲೂ ಕಟ್ಟಲ್ಲ… ಹಂಗಾಗಿ ಇರೋ 38ರ ಮೇಲೆ ಕಣ್ಣಾಂಕ್ತಂಗೆ ಸೇಪ್ ಮಾಡ್ತವ್ರೆ… ಯಾಕಂದ್ರೆ ಈ ರೆಸಾರ್ಟ್ ರಾಜಕೀಯ ಹೊಸದಲ್ಲ ಇವ್ರಗೆ .. ಹೋದ್ ರಾಜ್ಯ ‌ಸಭೆ ಎಲೆಕ್ಷನ್ ‌ನಲ್ಲಿ 8 ಕುದುರೆ ಹೋಡೋದೋ ಅದ್ರಲ್ಲಿ ಕೆಲವೂ ಬದಿಕೊಂಡೋ, ಇನ್‌ ಕೆಲವೋ ಮನಿಕೊಂಡೋ…

ಇನ್ನೂ ಕೆಲವರ
ಸ್ಥಿತಿ ಹೇಗಾಯ್ತು ಅಂದ್ರೆ ಮ್ಯಾನೇಜರ್ ಹತ್ತಿರ ಜಗಳ ಆಡ್ಕೊಂಡು ಬೇರೆ ಕಂಪನಿ ಸೇರಿದ್ರೆ, ಸೇರ್ಕೊಂಡ ಕಂಪನಿನಲ್ಲೂ ಹಳೆ ಮ್ಯಾನೇಜರ್ ಬಂದು ಬಾಸ್ ಆಗಿದ್ದಾನೆ ಅನ್ನಂಗೆ …

ಏನೆ ಆದ್ರೂ ಹಿಂದೆ ರಾಜ್ಯಭಾರ ಮಾಡಿದ್ ಯಾವ ರಾಜನೂ ಕೂಡ , ಪಟ್ಟ ಹಿಡಿಲಿಲ್ಲ , ಇವಾಗ ಅವರ್ ಅವರ್ ಮುಖ ಅವರ್ ಅವ್ರೆ ನೋಡ್ಕೊಂಡು ಹಿತ್ತಲೂ ಮನೆ ದಾರಿ ಹಿಡಿತಾವ್ರೆ…

ಲಾಸ್ಟ್ ಗೋವಾ , ಮಣಿಪುರಿ ಎಲೆಕ್ಷನ್ ನಲ್ಲೂ ಕೂಡ ನಮ್ ಮೋದಿ ತಾತ ಸಕ್ಕತ್ ಕಿಕ್ ಕೊಟ್ಟಿದ್ರು, ಬಹುಮತ ಇಲ್ಲಾ ಅಂದ್ರು ಗೋವಾ ಬೀಚಲ್ಲಿ ಬಾವುಟ ಹಾರ್ಸಿದ್ರು… ಅಮೇಲೆ‌ ಗೆದ್ದಿದ್ ಎರಡೇ ಸೀಟ್ ಇಡ್ಕೊಂಡು ಮಣಿಪುರಿ ‌ನಲ್ಲಿ ಮಾವಿನ ಹಣ್ಣು ತಿನ್ಸಿದ್ರು… ಈಗ್ಲೂ ಏನಾದ್ರು ಗೇಮ್ ಪ್ಲಾನ್ ಮಾಡ್ದಲೇ ಇರಲ್ಲಾ … ಯಾಕಂದ್ರೆ ನಮ್ ರಂಗಣ್ಣನ್ ಚಾಣಾಕ್ಷ ಬೇರೆ ಸುಮ್ನಿರಲ್ಲಾ.‌.‌

ಈ ಹಿಂದೆ ಆಗಿದ್ ತಪ್ಪ್ಗೆ ನಮ್ ಪಪ್ಪು ಈಗ್ಲಾದ್ರು ಅವರ ಬಾಣನೇ‌ ಅವ್ರಗೆ ತಿರ್ಗಿಸ್ ಬಿಡ್ತರಾ ನೀವೆ ನೋಡ್ಬೇಕು…

ಇಷ್ಟೆಲ್ಲಾ‌ ಆದ್ಮೇಲು ನಮ್ಮನ್ನು ಕಾಡುವ ಕಟ್ಟ ಕಡೆಯ ಪ್ರಶ್ನೆ… ಈ ಸಾರಿ ಸಿಎಂ ಯಾರು… ???

ಏನಾದ್ರು ಆಗ್ಲಿ ರೀ , ಯಾರದ್ರೂ ಬರ್ಲಿ ರೀ ಕನ್ನಡನ , ಕರ್ನಾಟಕನ ಉದ್ದಾರ ಮಾಡ್ಲಿ, down to earth ಅನ್ನಂಗೆ ಬಗ್ಗಿ ನಡಿಲಿ… ನಮ್ಮಂಥ ಓದ್ ದಬ್ಬಾಕಿದ್ ಎಷ್ಟೋ ಹುಡುಗರ್ಗೆ ಒಳ್ಳೆ ಕೆಲಸ ಕೊಡ್ಲಿ..

ನಂಗೂ freedom of speech ಇದೆ…

ನಿಮ್ಮನೆ ಹುಡ್ಗ
                                       ವಿದ್ಯಾರ್ಥಿ ಮಿತ್ರ ಕಿರಣ್

ಬಹಿರಂಗ

ಬಾಬಾಸಾಹೇಬ್ ಅಂಬೇಡ್ಕರರ ಹೇಳಿಕೆಯನ್ನೇ ದುರುಪಯೋಗ ಪಡಿಸಿಕೊಳ್ಳುತ್ತಿರುವ ಅವರ ಅನುಯಾಯಿಗಳು..!

Published

on

  • ರಘೋತ್ತಮ ಹೊ.ಬ

ಬಾಬಾಸಾಹೇಬ್ ಅಂಬೇಡ್ಕರ್ ರವರು ರಾಜಕೀಯ ಪಕ್ಷವೊಂದನ್ನು ಉರಿಯುವ ಮನೆ ಎಂದರು. ಆ ಕಾಲಘಟ್ಟದಲ್ಲಿ ಅಂಬೇಡ್ಕರ್ ರವರು ಹಾಗೆ ಹೇಳಲು ಕಾರಣ ಆ ಸಮಯದಲ್ಲಿ ಸದರಿ ಆ ರಾಜಕೀಯ ಪಕ್ಷವು ಭಿನ್ನಮತದ ಬೇಗೆಯಲ್ಲಿ ಬೇಯುತ್ತಿತ್ತು. ಇದನ್ನು ಉಲ್ಲೇಖಿಸುತ್ತ ಅಂಬೇಡ್ಕರ್ ರವರು ಆ ಪಕ್ಷವೇ ಹೀಗೆ ಭಿನ್ನಮತದಿಂದ ಒತ್ತಿ ಉರಿಯುತ್ತಿದೆ ಇನ್ನು ದಲಿತರು ಅಲ್ಲಿ ಹೋದರೆ ನಿಮಗೇನು ಸಿಗುತ್ತದೆ ಎಂಬ ಅರ್ಥದಲ್ಲಿ ಆ ಹೇಳಿಕೆ ಹೇಳಿದ್ದರು. ಬದಲಿಗೆ ತಾವೇ ಸ್ಥಾಪಿಸಿರುವ ನಮ್ಮ ಸ್ವಂತ ಪಕ್ಷ “ಪರಿಶಿಷ್ಟ ಜಾತಿಗಳ ಒಕ್ಕೂಟ”ಕ್ಕೆ ಬನ್ನಿ ಎಂದು ಅಂಬೇಡ್ಕರ್ ರವರು ಶೋಷಿತ ಸಮುದಾಯಗಳವರಿಗೆ ಕರೆ ನೀಡಿದ್ದರು.

ದುರಂತವೆಂದರೆ ಇತಿಹಾಸದಲ್ಲಿ ದಾಖಲಾಗಿರುವ ಬಾಬಾಸಾಹೇಬ್ ಅಂಬೇಡ್ಕರ್ ರವರ ಈ ಹೇಳಿಕೆಯನ್ನು ಬಹುತೇಕ ದಲಿತ ರಾಜಕಾರಣಿಗಳು ಈಗಿನ ಕಾಲಕ್ಕೆ ದುರುಪಯೋಗಪಡಿಸಿಕೊಳ್ಳುತ್ತಿರುವುದು, ಇತರೆ ಪಕ್ಷಗಳನ್ನು ಸೇರಲು ಲೈಸೆನ್ಸ್ ರೀತಿ ಬಳಸಿಕೊಳ್ಳುತ್ತಿರುವುದು! ಹಾಗಿದ್ದರೆ ಅಂಬೇಡ್ಕರ್ ರವರು ಹೇಳಿರುವ ಆ ರಾಜಕೀಯ ಹೇಳಿಕೆಯ ಒಟ್ಟಾರೆ ತಾತ್ಪರ್ಯವೇ ಅಪ್ರಸ್ತುತವೇ? ಖಂಡಿತ ಇಲ್ಲ. ಅವರು ಹೇಳಿದ ಶೋಷಿತ ಸಮುದಾಯಗಳ ಸ್ವತಂತ್ರ ರಾಜಕಾರಣ ಈಗಲೂ ಬೇರೆ ಬೇರೆ ರೂಪದಲ್ಲಿ ಅಸ್ತಿತ್ವದಲ್ಲಿ ಇದೆ. ಅವರು ಜೀವನದುದ್ದಕ್ಕೂ ವಿರೋಧಿಸಿದ ಮೇಲ್ಜಾತಿ ಹಿಂದೂ ರಾಜಕೀಯ ಪಕ್ಷಗಳೂ ಬೇರೆ ಬೇರೆ ಹೆಸರಿನಲ್ಲಿ ಅಸ್ತಿತ್ವದಲ್ಲಿ ಇವೆ!

ನಿಜ, ಇಂತಹ ರಾಜಕೀಯ ಸೂಕ್ಷ್ಮತೆಗಳನ್ನು ಸಾರ್ವಜನಿಕವಾಗಿ ಹೇಳುವುದು ತಪ್ಪು ಎಂದು ವಯಕ್ತಿಕವಾಗಿ ನನಗೆ ಗೊತ್ತಿದೆ ಆದರೆ ಬಾಬಾಸಾಹೇಬ್ ಅಂಬೇಡ್ಕರರ ಹೇಳಿಕೆಗಳ, ಬರಹಗಳ, ಚಿಂತನೆಗಳ ಮಹತ್ವವನ್ನು ಉಳಿಸುವ ದೃಷ್ಟಿಯಲ್ಲಿ ನನ್ನಂತಹವರು ಇಂತಹ ವಿಚಾರಗಳನ್ನು ಮುಕ್ತವಾಗಿ ಬಾಯಿಬಿಟ್ಟು ಹೇಳಲೇಬೇಕಿದೆ. ಅವರ ಬರಹಗಳ ಪ್ರಸ್ತುತತೆಯನ್ನು ನೈಜ ಅರ್ಥದಲ್ಲಿ ವಿಶ್ಲೇಷಿಸಿ ಸದಾ ಕಾಲ ಕಾಪಿಟ್ಟುಕೊಳ್ಳಬೇಕಿದೆ. ಜೈಭೀಮ್.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಬಹಿರಂಗ

“ಸುರರು ಮತ್ತು ಅಸುರರು ಇಬ್ಬರೂ ಒಂದೇ ತಂದೆಯ ಮಕ್ಕಳು” : ಬಾಬಾಸಾಹೇಬ್ ಅಂಬೇಡ್ಕರ್

Published

on

  • ರಘೋತ್ತಮ ಹೊ.ಬ

ಬಾಬಾಸಾಹೇಬ್ ಅಂಬೇಡ್ಕರರು ಅಸುರರ ಬಗ್ಗೆ ಏನು ಹೇಳುತ್ತಾರೆ? ಇದನ್ನು ಉಲ್ಲೇಖಿಸುವುದಾದರೆ, ಅಂಬೇಡ್ಕರರು ಹೇಳುತ್ತಾರೆ, “ಅಸುರರು ಮತ್ತು ಸುರರು ಇಬ್ಬರೂ ಆರ್ಯನ್ನರ ರೀತಿಯೇ ಮಾನವ ಜೀವಿಗಳ ಸಮುದಾಯಗಳು. ಹಾಗೆಯೇ ಅಸುರರು ಮತ್ತು ಸುರರು ಇಬ್ಬರೂ ಕಶ್ಯಪ ಎಂಬ ಒಬ್ಬನೇ ಸಾಮಾನ್ಯ ತಂದೆಯ ವಂಶಜರು. ಇದರ ಹಿಂದಿರುವ ಕತೆ ಎಂದರೆ, ದಕ್ಷ ಪ್ರಜಾಪತಿಗೆ 60 ಮಂದಿ ಹೆಣ್ಣು ಮಕ್ಕಳಿದ್ದರು. ಅವರಲ್ಲಿ 13 ಮಂದಿಯನ್ನು ಕಷ್ಯಪನಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಕಷ್ಯಪನ ಆ 13 ಮಂದಿ ಹೆಂಡತಿಯರಲ್ಲಿ ದಿತಿ ಮತ್ತು ಅದಿತಿ ಕೂಡ ಇಬ್ಬರಾಗಿದ್ದರು. ದಿತಿಗೆ ಹುಟ್ಟಿದ ಮಕ್ಕಳನ್ನು ಅಸುರರು ಎಂದು ಕರೆಯಲಾಗುತ್ತಿತ್ತು. ಅದಿತಿಗೆ ಹುಟ್ಟಿದ ಮಕ್ಕಳನ್ನು ಸುರರು ಅಥವಾ ದೇವಾ(Devas)ರುಗಳು ಎಂದು ಕರೆಯಲಾಗುತ್ತಿತ್ತು. ಅಂದಹಾಗೆ ಈ ಇಬ್ಬರೂ (ಸುರರು ಮತ್ತು ಅಸುರರು) ಈ ಪ್ರಪಂಚದ ಸಾರ್ವಭೌಮತ್ವಕ್ಕಾಗಿ ಬಹಳ ದೀರ್ಘ ಮತ್ತು ರಕ್ತಪಾತದ ಯುದ್ಧ ನಡೆಸಿದರು. ಅನುಮಾನವೇ ಬೇಡ ಇದು ಪುರಾಣ. ಈ ಪುರಾಣವನ್ನು ಇತಿಹಾಸ ಎನ್ನುವುದು ಅತಿಶಯೋಕ್ತಿಯೆನಿಸಿದರೂ ಆಗಲೂ ಇದು ಇತಿಹಾಸವಾಗಿದೆ”. (ಬಾಾಬಾಸಾಹೇಬ್ ಡಾ.ಅಂಬೇಡ್ಕರ್ ಬರಹಗಳು, ಇಂಗ್ಲಿಷ್ ಸಂ.3, ಪು.419)

ಅಂಬೇಡ್ಕರರು ಪ್ರಸ್ತಾಪಿಸುವ ಈ ಪುರಾಣ ಕಂ ಇತಿಹಾಸದ ಪ್ರಕಾರ ಅಸುರರು ಮತ್ತು ಸುರರು ಇಬ್ಬರೂ ಒಂದೇ ತಂದೆಯ ಆದರೆ ಇಬ್ಬರು ಬೇರೆ ಬೇರೆ ತಾಯಿಯ ಮಕ್ಕಳು. ಅರ್ಥಾತ್‌ ಇಬ್ಬರೂ ಅಣ್ಣ ತಮ್ಮಂದಿರು. ಹೀಗಿರುವಾಗ ಇಲ್ಲಿ ಸುರರ ಸ್ವಂತ ಸೋದರರಾದ ಅಸುರರನ್ನು ಶೋಷಿತ ಸಮುದಾಯಗಳು ಆದರ್ಶವಾಗಿ ತೆಗೆದುಕೊಳ್ಳುವುದು ಹೇಗೆ? ಈ ಕಾರಣಕ್ಕಾಗಿ ಈ ಅಸುರರು ಮತ್ತು ಸುರರ ಗೋಜಲಾದರೂ ನಮಗೆ ಏಕೆ? ಸುಮ್ಮನೆ ಗೌತಮ ಬುದ್ಧರ ಬಳಿ ತೆರಳಿದರೆ ಸಾಕಲ್ಲವೇ?

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಬಹಿರಂಗ

ಗಾಂಧಿಯನ್ನು ಎದೆಗಿಳಿಸಿಕೊಂಡವರಾರೂ ಬುದ್ಧನನ್ನ ಮುಟ್ಟಲಾರರು, ಬಾಬಾಸಾಹೇಬರ ಕಣ್ಣೀರ ಅರಿಯಲಾರರು

Published

on

  • ಹ.ರಾ.ಮಹಿಶ

ಸೇಫ್ ಝೋನ್ ನಲ್ಲಿ ದೂರದಿಂದ ನಿಂತು‌ ನೋಡುವ ನಿಮಗೆ ಮೈಪೂರ ವಿಷತುಂಬಿಕೊಂಡ ಆ “ಹಾವಿನ” ನುಣ್ಣನೆಯ ಮೆತ್ತನೆಯ ಬೆತ್ತಲೆಯ ಸಪೂರ ಶರೀರ, ಬಿಚ್ಚಿದ ಕಲಾತ್ಮಕ ಹೆಡೆ, ಆಕರ್ಷಕ‌ ಮೈ ಹೊಳಪು, ಮತ್ತು‌ ಸದ್ದಿಲ್ಲದೆ ಸರಸರ ಹರಿಯುವ ಅದರ ಚಮತ್ಕಾರ ಇವುಗಳು ಬಲು ಪ್ರಿಯವಾಗಿ ಕಂಡಿರಬೇಕು..!

ನಮಗೆ ಅದರ ಒಳಗಿನ ವಿಷದ ಕ್ರೂರ ಹಲ್ಲಿನ ದರ್ಶನವಾಗಿದೆ..!
ಮತ್ತು‌ ಅದರಿಂದ ಕಚ್ಚಿಸಿಕೊಂಡು ಈಗಲೂ ಸಾಯುತ್ತಿದ್ದೇವೆ..!!!

ಗಾಂಧಿವಾದದಿಂದ ಅನ್ನ ಅಧಿಕಾರ ಪಡೆದ ಸ್ವಾರ್ಥಿಗಳು ಮತ್ತು , ಅವರಿಂದ ಏನೂ ಪಡೆಯದ ಏನೂ ಕಳೆದುಕೊಳ್ಳದ ಮುಗ್ಧ-ಮೂರ್ಖರು, ಈ ಎರಡೂ ಕೆಟಗರಿಯ “ಗಾಂಧೀ ಸಮರ್ಥಕರಿಗೆ” ಮತ್ತು ಅಡ್ಡಗೋಡೆ ಮೇಲೆ ದೀಪ ಇಟ್ಟು ಎಲ್ಲರಿಂದಲೂ ಭೇಷ್ ಎನಿಸಿಕೊಳ್ಳುವ ತೆವಲುಳ್ಳ ಮೂರನೇ ಕೆಟಗರಿಯ ಜನರಿಗೆ ಗಾಂಧಿಯಿಂದ ಅನ್ಯಾಯಕ್ಕೊಳಗಾಗಿ ಇನ್ನಿನ್ನೂ ಅದರಿಂದ ನೋವುಣ್ಣುತ್ತಿರುವ ನಮ್ಮ ಸಂಕಟ ಅರ್ಥವಾಗದು..!!!

“ನೊಂದವರ ನೋವ ನೋಯದವರೆತ್ತ ಬಲ್ಲರು” ಎಂಬ
ನಾಡಿನ ಪ್ರಜ್ಞೆಯಾದ ಮಹಾತಾಯಿ ಅಕ್ಕ ಮಹಾದೇವಿಯವರ ಮಾತನ್ನಾದರೂ ಅರ್ಥ ಮಾಡಿಕೊಳ್ಳದ ಮೂಢರು ಅತಿಬುದ್ಧಿವಂತರಂತೆ ವರ್ತಿಸುತ್ತಿರುವುದಂತೂ ನಿಜಕ್ಕೂ ಅಸಹ್ಯವೆನಿಸುತ್ತಿದೆ…!

ಛೆ…

ಗಾಂಧಿ ಮತ್ತು ಅಂಬೇಡ್ಕರರ ಬಗ್ಗೆ ಯಾರೋ‌ ಮೂರನೆಯವರು ಬರೆದ ಪುಸ್ತಕ ಓದಿಕೊಂಡು ಯಾರೋ ಹೇಳಿದ್ದನ್ನು ಕೇಳಿಕೊಂಡು ಶಾಂತಿಸೌಹಾರ್ಧಪ್ರಿಯರಂತೆ ಪೋಸು ಕೊಟ್ಟು ಆಧಾರ ಸಮೇತ ವಿಮರ್ಶಿಸುವುದನ್ನೇ “ದ್ವೇಷ” ಎಂದು ತೀರ್ಪುಕೊಟ್ಟು‌ ಅಂಬೇಡ್ಕರ್ ವಾದಿಗಳನ್ನು ಅವರಿಗೆ ಒಗ್ಗದ ಹೆಸರುಗಳಿಂದ ಕರೆದು ಗಾಂಧಿಯನ್ನೇ ಉಸಿರಾಡುತ್ತಾ ಆಗಿಂದಲೂ ಬಡಬಡಿಸುತ್ತಿರುವ ಧೀರರೇ ಧೀರೆಯರೆ ಶೂರರೇ….

ಗಾಂಧಿಯವರನ್ನು ಕುರಿತು
ಗಾಂಧೀಯವರ ಇಬ್ಬಂದಿತನ ಕುರಿತು
ಗಾಂಧೀಯವರ ನಯವಂಚಕತನವನ್ನು ಕುರಿತು ಗಾಂಧಿಯವರಿಂದ ಸ್ವತಃ ಹಿಂಸೆ ನೋವು ಮೋಸಕ್ಕೆ ಒಳಗಾದ ಬಾಬಾಸಾಹೇಬರೇ ಬರೆದಿರುವ
“GANDHI AND GANDHIISM”
ಮತ್ತು ಬಾಬಾಸಾಹೇಬರ‌ ಬರಹ ಭಾಷಣಗಳ ಸಂಪುಟ ೯
“WHAT GANDHI AND CONGRESS HAVE DONE TO UNTOUCHABLES” ಅನ್ನು ಓದಿದ್ದೀರಾ…?

ಮತ್ತು 1955 ರಲ್ಲಿ‌ ಬಾಬಾಸಾಹೇಬರು BBC ಗಾಗಿ ನೀಡಿರುವ ಸಂದರ್ಶನದಲ್ಲಿ ಗಾಂಧಿಯವರ ಕುರಿತ 21 ನಿಮಿಷಗಳ ಖುದ್ದು ಬಾಬಾಸಾಹೇಬರ ಮಾತುಗಳನ್ನಾದರೂ ಕೇಳಿದ್ದೀರಾ…?

ಅವುಗಳನ್ನು ಓದಿಲ್ಲ ಕೇಳಿಲ್ಲವೆಂದರೆ ದಯಮಾಡಿ ಒಮ್ಮೆ ಓದಿ ಕೇಳಿ ನಂತರ ಬರೆಯಿರಿ…

ಅಕಸ್ಮಾತ್ ‌ಓದಿಯೂ ಕೇಳಿಯೂ ನಿಮ್ಮ ಅಭಿಪ್ರಾಯ ಇದೇ ಆಗಿದ್ದರೆ ನನ್ನದೇನೂ ತಕರಾರಿಲ್ಲ… ನಿಮ್ಮ ಅರೆಜ್ಞಾನಕ್ಕೆ ಪೂರ್ವಗ್ರಹಪೀಡಿತ ರೋಗಕ್ಕೆ ಕೃತಘ್ನತೆಗೆ ವಿಚಾರಹೀನ ಸಂವೇದನಾಹೀನ ಸ್ವತಂತ್ರ ಚಿಂತನಾಹೀನತೆಗೆ ಮರುಕ ಪಡುತ್ತೇನೆ.

ಗಾಂಧಿಯವರ ಇಬ್ಬಂದಿತನವನ್ನು ವಿರೋಧಿಸುತ್ತಲೇ ಅವರ ಬಗೆಗಿನ ನಿಮ್ಮ ಅಭಿಪ್ರಾಯ ಭಿನ್ನಾಭಿಪ್ರಾಯಗಳನ್ನು ಮತ್ತು ನಿಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುತ್ತೇನೆ.
ಅಷ್ಟೇ ಇನ್ನೇನೂ ಹೇಳಲಾಗದು..‌

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending