Connect with us

ಬಹಿರಂಗ

ಬಡತನಕ್ಕೆ ಬಾಯಿಲ್ಲವಾಗಿ

Published

on

  • ಜಗದೀಶ್ ಕೊಪ್ಪ

ಳೆದ ಮೂವತ್ತು ವರ್ಷಗಳಿಂದ ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆಯಿಂದಾಗಿ ಎಂದೂ ಕೇಳರಿಯದ ರೋಗರುಜಿನಗಳು ಮತ್ತು ವೈರಸ್ ಗಳು ಆಧುನಿಕ ಜಗತ್ತನ್ನು ಕಾಡುತ್ತಿವೆ. ಇದರಿಂದಾಗಿ, ಭೂಮಂಡಲದ ಮನುಕುಲ ಮಾತ್ರವಲ್ಲದೆ, ನಾವು ಬೆಳೆಯುತ್ತಿರುವ ಬೆಳೆಗಳು ಮತ್ತು ಪ್ರಾಣಿ ಪಕ್ಷಿಗಳ ಮೇಲೆ ಅಗಾಧವಾದ ಪರಿಣಾವುಂಟಾಗಿದೆ. ಇದರ ಮೂಲ ಕಾರಣ ಮನುಷ್ಯನ ಅಪರಿತ ಆಸೆ ಮತ್ತು ಭೋಗ ಜಗತ್ತಿನ ಮೋಹ ಎಂಬ ವಾಸ್ತವ ಸತ್ಯವನ್ನು ಅರಿಯಲಾರದ ವಿಸ್ಮೃತಿಗೆ ನಾವು ದೂಡಲ್ಪಟ್ಟಿದ್ದೇವೆ.

ಮಹಾತ್ಮ ಗಾಂಧೀಜಿಯವರು “ಪ್ರಕೃತಿ ಇರುವುದು ಮನುಷ್ಯನ ಮಿತವಾದ ಬೇಡಿಕೆಗಳನ್ನು ಪೂರೈಸುವುದಕ್ಕೆ ಮಾತ್ರ, ದುರಾಸೆಗಳನ್ನು ಈಡೇರಿಸುವುದಕ್ಕೆ ಅಲ್ಲ” ಎಂದು ಶತಮಾನದ ಹಿಂದೆ ಹೇಳಿದ ಮಾತನ್ನು ಮರೆತು ನಾವು ವಿನಾಶದತ್ತ ದಾಪುಗಾಲು ಇಡುತ್ತಿದ್ದೇವೆ.

ಈಗ ಭಾರತವನ್ನು ಮಾತ್ರವಲ್ಲದೆ, ವಿಶ್ವವನ್ನು ಕಾಡುತ್ತಿರುವ ಕೊರನಾ ಅಥವಾ ಕೋವಿಡ್ 19 ಎಂಬ ವೈರಸ್ ನ ಸಮಸ್ಯೆಗೆ ಕಾರಣ ಮನುಷ್ಯನೇ ಹೊರತು ಪ್ರಕೃತಿಯಲ್ಲ. ಇದರ ನಿರ್ಮೂಲನೆ ಸ್ವಯಂ ನಿಯಂತ್ರಣ ಅತ್ಯಗತ್ಯ. ಆದರೆ, ಭಾರತದಲ್ಲಿ ಎತ್ತಿಗೆ ಜ್ವರ ಬಂದರೆ, ಎಮ್ಮೆಗೆ ಬರೆ ಹಾಕಿದರು ಎಂಬಂತೆ ಹೇರಲಾಗುತ್ತಿರುವ ಸರ್ಕಾರಿ ಪ್ರಾಯೋಜಿತ ನಿರ್ಬಂಧಗಳು ಬಡವರನ್ನು, ದೀನ ದಲಿತರನ್ನು ಸಂಕಷ್ಟಕ್ಕೆ ಗುರಿಮಾಡಿವೆ.

ಈ ದೇಶದ ಪ್ರಧಾನಿ, ನಡುರಾತ್ರಿ ಪಾಕಿಸ್ತಾನದ ಮೇಲೆನಡೆಸಿದ ಸರ್ಜಿಕಲ್ ದಾಳಿಯ ಮಾದರಿಯಲ್ಲಿ ಮತ್ತು ರಾತ್ರೋರಾತ್ರಿ ನೋಟು ನಿಷೇಧ ಹೇರಿದ ರೀರಿಯಲ್ಲಿ ಕೊರನಾ ನಿಯಂತ್ರಣಕ್ಕೆ ಹೊಸ ಹೊಸ ನಿಯಮ ಜಾರಿಗೆ ತರುತ್ತಿದ್ದಾರೆ. ಭಾರತದಂತಹ ಪ್ರಜಾಪ್ರಭುತ್ವ ವ್ಯವಸ್ಥೆಯ ರಾಷ್ಟ್ರದಲ್ಲಿ ಗಣ ರಾಜ್ಯಗಳ ಮುಖ್ಯಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಅವರ ಸಲಹೆ ಕೇಳದೆ, ಅವತಾರ ಪುರುಷನ ಹಾಗೆ ದಿಡೀರ್ ಟಿ.ವಿ ಯಲ್ಲಿ ಕಾಣಿಸಿಕೊಂಡು ಉಪದೇಶ ಮತ್ತು ನಿರ್ದೇಶನಗಳನ್ನು ಜಾರಿ ಮಾಡುತ್ತಿದ್ದಾರೆ.

ಯಾವುದೇ ಮುನ್ಸೂಚನೆ ನೀಡದೆ ದೇಶಾದ್ಯಂತ ರೈಲು ಮತ್ತು ವಿಮಾನ ಸಂಚಾರ ರದ್ದುಪಡಿಸಿದ್ದು ಅಲ್ಲದೆ, ರಾಜ್ಯಗಳ ನಡುವಿನ ಗಡಿಗಳನ್ನು ಬಂದ್ ಮಾಡಿ ಸಾರಿಗೆ ಸಂಚಾರವನ್ನು ರದ್ದುಗೊಳಿಸಲಾಯಿತು. ದಕ್ಷಿಣ ಭಾರತದಿಂದ ಉತ್ತರ ಭಾರತಕ್ಕೆ ಮತ್ತು ಉತ್ತರದಿಂದ ದಕ್ಷಿಣ ಭಾರತದ ತೀರ್ಥಕ್ಷೇತ್ರಗಳಿಗೆ ಪ್ರವಾಸ ಹೋದ ಯಾತ್ರಿಕರು, ಪ್ರವಾಸಿಗರು ಇದೀಗ ಊಟ, ವಸತಿ ಇಲ್ಲದೆ ಅತಂತ್ರರಾಗಿ ಹಲವು ನಗರಗಳ ಬಸ್ ಮತ್ತು ರೈಲು ನಿಲ್ದಾಣದಲ್ಲಿ ಅಲೆಮಾರಿಗಳಂತೆ, ನಿರ್ಗತಿಕರಂತೆ ಜೀವಿಸುವಂತಾಗಿದೆ.

ಪ್ರದಾನಿ ನರೇಂದ್ರ ಮೋದಿಯವರು ಕೈ ಚಪ್ಪಾಳೆ ತಟ್ಟಿ ಕೋರನಾ ವೈರಸ್ ನಿರ್ಮೂಲಕ್ಕೆ ಶ್ರಮಿಸುತ್ತರಿವ ವೈದ್ಯರನ್ನು ಮತ್ತು ಸ್ವಯಂ ಸೇವಕರಿಗೆ ಗೌರವ ಸೂಚಿಸಿ ಎಂದು ಕರೆ ನೀಡಿದರೆ, ಈ ದೇಶದ ಪ್ರಜ್ಞಾವಂತ ನಾಗರೀಕರೆನಿಸಿಕೊಂಡ ಜನ ಗಂಟೆ, ಜಾಗಟೆ, ತಟ್ಟೆ, ಲೋಟ ಬಾರಿಸುತ್ತಾ ಬೀದಿಗಳಿದರು.ಇಂತಹ ಅನಾಗರೀಕರ ಭಾರತವನ್ನು ಏನೆಂದು ಕರೆಯೋಣ? ಬಾಯಿ ಬಡಿದುಕೊಳ್ಳಿ ಎಂದರೆ, ತಿಕ ಬಡಿದುಕೊಳ್ಳುವ ನಾಗರೀಕರನ್ನು ತಿದ್ದಲು 21 ನೇ ಶತಮಾನವಲ್ಲ, 71 ನೇ ಶತಮಾನ ಬಂದರೂ ಸಾಧ್ಯವಿಲ್ಲ.

ನಾಗರೀಕರಲ್ಲಿ ಅನಗತ್ಯ ಭಯ ಉಂಟು ಮಾಡಿ, ಬೀದಿಯಲ್ಲಿ ಓಡಾಡಿದರೆ, ಕೇಸ್ ಹಾಕುವುದು, ಲಾಠಿ ಪ್ರಯೋಗ ಮಾಡುವುದು, ಅಗತ್ಯ ವಸ್ತುಗಳು ದೊರೆಯದ ಹಾಗೆ ಮಾಡಿ, ಕಾಳಸಂತೆಯ ದರೋಡೆಕೋರರಿಗೆ ಅನುವು ಮಾಡಿಕೊಡುವುದು ಯಾವ ನ್ಯಾಯ?

ಭಾರತಕ್ಕೆ ಅಥವಾ ಪೂರ್ವ ಜಗತ್ತಿನ ರಾಷ್ಟ್ರಗಳಿಗೆ ಇಂತಹ ಪಿಡುಗುಗಳು ಹೊಸತೇನಲ್ಲ. ಈ ದೇಶದಲ್ಲಿ ರೋಗಕ್ಕೆ ಬಲಿಯಾದವರಿಗಿಂತ ಹಸಿವಿನಿಂದ ಸತ್ತ ಬಡವರ ಸಂಖ್ಯೆ ಅಧಿಕವಾಗಿದೆ. ಆದರೆ, ಬಡವರ ಸಾವು, ನೋವು ಇಲ್ಲಿ ಯಾವುದಕ್ಕೂ ಲೆಕ್ಕವಿಲ್ಲ. ಬಡವರು ಈ ದೇಶದಲ್ಲಿ ಬದುಕಿರುವುದು ಓಟು ಒತ್ತುವ ಮತಯಂತ್ರಗಳಾಗಿ ಮಾತ್ರ. ಇದು ಪ್ರತಿಯೊಂದ ರಾಜಕೀಯ ಪಕ್ಷದ ಅಥವಾ ನೇತಾರನ ದೃಢ ನಂಬಿಕೆಯಾಗಿದೆ.

1943 ರಲ್ಲಿ ಬಂಗಾಳ ಪ್ರಾಂತ್ಯದಲ್ಲಿ ಅಂದರೆ, ಈಗಿನ ಪಶ್ಚಿಮ ಬಂಗಾಳ, ಬಂಗ್ಲಾ ದೇಶ ಮತ್ತು ಬಿಹಾರ ರಾಜ್ಯಗಳನ್ನು ಒಳಗೊಂಡ ಪ್ರದೇಶದ ಒಟ್ಟು ಆರು ಕೋಟಿ ಜನಸಂಖ್ಯೆಯಲ್ಲಿ ಮುವತ್ತು ಲಕ್ಷ ಜನತೆ ಹಸಿವು ಮತ್ತು ಸಾಂಕ್ರಾಮಿಕ ರೋಗದಿಂದ ಸತ್ತರು.

ಎರಡನೆಯ ಮಹಾಯುದ್ಧ ನಡೆಯುತ್ತಿದ್ದ ಆ ಸಂದರ್ಭದಲ್ಲಿ ಜಪಾನ್ ಸೇನೆ ನಮ್ಮ ನೆರೆಯ ಬರ್ಮಾ ದೇಶಕ್ಕೆ ಕಾಲಿಟ್ಟಿತ್ತು. ಬಿಟೀಷ್ ಆಧಿಪತ್ಯಕ್ಕೆ ಒಳಪಟ್ಟಿದ್ದ ಭಾರತದ ಮೇಲೆ ಅಂದಿನ ಬ್ರಿಟನ್ ಪ್ರಧಾನಿ ಚರ್ಚಿ ಕೆಲವು ಅಮಾನವೀಯ ನಿರ್ಧಾರಗಳನ್ನು ಕೈ ಗೊಂಡನು.

ಅವುಗಳಲ್ಲಿ ಪ್ರಮುಖವಾದ ನಿರ್ಧಾರವೆಂದರೆ, ಬರ್ಮಾ ದೇಶಕ್ಕೆ ಯಾವುದೇ ಪಡಿತರ ಹೋಗಭಾರದೆಂದು ಕೊಲ್ಕತ್ತ ನಗರದ ಎಲ್ಲಾ ಸಗಟು ದಿನಿಸಿ ಮಾರಾಟದ ಅಂಗಡಿಗಳನ್ನು ಬಂದ್ ಮಾಡಿಸಿದನು. ಜೊತೆಗೆ ಬಂಗಾಳದ ಗೋದಾಮುಗಳಲ್ಲಿ ದಾಸ್ತಾನು ಇಟ್ಟಿದ್ದ ಅಕ್ಕಿ ಮತ್ತು ಗೋಧಿಯನ್ನು ಬಿಡುಗಡೆ ಮಾಡದೆ, ಬ್ರಿಟಿಷ್ ಸೈನಿಕರಿಗೆ ಮೀಸಲಿಟ್ಟನು. ಅಲ್ಲಿನ ಜನತೆ ಒಣಗಿದ ತರಗೆಲೆಗಳಂತೆ ಭೂಮಿಗೆ ಉದುರಿ ಹೋದರು.

ಇಂತಹ ಅನೇಕ ಸಂಕಷ್ಟಗಳನ್ನು, ಕಾಲರಾ, ಸಿಡುಬು, ಮಲೇರಿಯಾ, ಏಡ್ಸ್ ನಂತಹ ಮಹಾಮಾರಿ ಕಾಯಿಲೆಗಳನ್ನು ಎದುರುಸಿರುವ ಭಾರತದ ಜನತೆಗೆ ಕೋವಿಡ್-19 ವೈರಸ್ ಕುರಿತಂತೆ ಈ ರೀತಿ ಅನಗತ್ಯ ಭಯ ಉಂಟು ಮಾಡುವ ಅಗತ್ಯವಿರಲಿಲ್ಲ.

ಸರ್ಕಾರದ ವತಿಯಿಂದ ಏನು ವ್ಯವಸ್ಥೆಯಾಗಿದೆ ಮತ್ತು ಸರ್ಕಾರ ಸೋಂಕನ್ನು ತಡೆಗಟ್ಟಲು ಯಾವ ರೀತಿ ಸಜ್ಜಾಗಿದೆ ಎಂದು ನೋಡಿದರೆ, ಎಲ್ಲವೂ ಶೂನ್ಯ.ಹೋಬಳಿ ಮಟ್ಟದಲ್ಲಿ ಮತ್ತು ನಗರದ ಬಡಾವಣೆಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಳೆದ ಐದಾರು ವರ್ಷಗಳಿಂದ ವೈದ್ಯರಿಲ್ಲ. ಕೊರನಾ ವೈರಸ್ ಕುರಿತು ಸ್ಪೃಷ್ಟ ಮಾಹಿಯಿಲ್ಲ. ಜನರನ್ನು ಗೃಹ ಬಂಧನದಲ್ಲಿ ಇರಿಸಿದರೆ. ಮಾತ್ರ. ರೋಗ ನಿಯಂತ್ರಿಸಬಹುದು ಎಂಬ ನಂಬಿಕೆ ಇಲ್ಲಿ ಚಾಲ್ತಿಯಲ್ಲಿದೆ.

ಈ ದೇಶದ ಶೇಕಡ 52 ಮಂದಿ ದಿನ ನಿತ್ಯದ ದುಡಿಮೆಯ ಮೇಲೆ ಬೀದಿ ಬದಿಯ ಸೊಪ್ಪು, ತರಕಾರಿ, ಹಣ್ಣು, ಮಾರುವವರು, ಕೃಷಿ ಮತ್ತು ಕೂಲಿ ಕಾರ್ಮಿಕರು, ಸೈಕಲ್ ರಿಕ್ಷಾ, ಆಟೋರಿಕ್ಷಾ, ಕೈಗಾಡಿ ತಳ್ಳುವವರು ಇವರ ಕುರಿತು ನಮ್ಮನ್ನಾಳುವ ಸರ್ಕಾರಗಳು ಯೋಚಿಸಲೇ ಇಲ್ಲ.

ಇಂತಹ ಜ್ವಲಂತ ಸಮಸ್ಯೆಗಳತ್ತ ಗಮನ ಹರಿಸಬೇಕಾದ ನಮ್ಮ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳು ಸಿನಿಮಾ ನಟ, ನಟಿಯರ ಬೆನ್ನು ಹತ್ತಿವೆ. ಯಾವ ನಟ ಅಥವಾ ನಟಿ ಏನು ತಿಂದರು? ಹೇಗೆ ವಿಸರ್ಜಿಸಿದರು. ಮನೆಯಲ್ಲಿ ಹೇಗೆ ವ್ಯಾಯಾಮ ಮಾಡುತ್ತಿದ್ದಾರೆ ಇಂತಹ ಸುದ್ದಿಯನ್ನು ಲದ್ದಿಯ ರೂಪದಲ್ಲಿ ನಮ್ಮ ಮನೆ ಬಾಗಿಲಿಗೆ ತಲುಪಿಸುವಲ್ಲಿ ನಿರತವಾಗಿವೆ.

ರಾಜಕೀಯ ಪಕ್ಷಗಳು ಮತ್ತು ಕಾರ್ಪೋರೇಟ್ ಜಗತ್ತಿನ ಎದುರು ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಬೆತ್ತಲೆಯಾಗಿ ಕುಣಿಯುತ್ತಿರುವ ಮಾಧ್ಯಮ ಸಂಸ್ಥೆಗಳಲ್ಲಿ ದುಡಿಯುವ ಜೀತದಾಳುಗಳಿಗೆ ಕನಿಷ್ಟ ಮಾನವೀಯತೆ ಇದ್ದರೆ, ಬಡವರ ಕೇರಿಗಳಿಗೆ ಮತ್ತು ಬಡಾವಣೆಗಳಿಗೆ ಹೋಗಬಹುದಿತ್ತು. ಆದರೆ, ಸಿನಿಮಾ ನಟ, ನಟಿ ಮತ್ತು ಕ್ರಿಕೇಟ್ ತಾರೆಯರಿಂದ ಈ ಜಗತ್ತು ಬದುಕಿದೆ ಮತ್ತು ಬೆಳಕಾಗುತ್ತಿದೆ ಎಂದು ನಂಬಿರುವ ಬೃಹಸ್ಪತಿಗಳಿಗೆ ಜ್ಞಾನೋದಯವಾಗುವ ಸಂಭವ ತೀರಾ ಕಡಿಮೆ.

ಇನ್ನು ಹೊಟ್ಟೆ ತುಂಬಿದ ನಮ್ಮ ಕೆಲವು ಬುದ್ದಿ ಜೀವಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ದಿನಕ್ಕೊಂದು ಉಪದೇಶ ಹೊರಡಿಸುತ್ತಿದ್ದಾರೆ. ತಣ್ಣನೆಯ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು, ಸ್ಕಾಚ್ ವಿಸ್ಕಿ ಹೀರುತ್ತಾ, ಗೋಡಂಬಿ ಮೆಲ್ಲುತ್ತಾ ಪ್ರಧಾನಿಯವರ ಆದೇಶವನ್ನು ಪಾಲಿಸೋಣ ಎನ್ನುವ ಮಹನೀಯರಿಗೆ ನನ್ನದೊಂದು ಕಿವಿಮಾತು.

ದಯವಿಟ್ಟು ನಿಮ್ಮ ಎ.ಸಿ.ಯನ್ನು ಸ್ವಿಚ್ ಆಫ್ ಮಾಡಿ. ಮನೆಯ ಕಿಟಕಿ, ಬಾಗಿಲು ತೆರೆದು ಹೊರ ಜಗತ್ತನ್ನು ನೋಡಿ, ನಿಮ್ಮ ಮನೆಯಾಚೆಯ ಗುಡಿಸಲಿನಲ್ಲಿ ಹೊಲೆ ಉರಿಯದೆ ಇರುವುದು, ದೀಪ ಬೆಳಗದೆ ಇರುವುದನ್ನು ಗಮನಿಸಿ. ಹಸಿವಿನಿಂದ ಅಳುತ್ತಿರುವ ಕಂದಮ್ಮಗಳ ಆಕ್ರಂದನ ನಿಮಗೆ ಕೇಳಿಸದಿದ್ದರೆ, ಆ ಕ್ಷಣದಲ್ಲಿ ನೀವು ಮನುಷ್ಯರಲ್ಲ ಎಂದು ತೀರ್ಮಾನಿಸಿಕೊಳ್ಳಿ, ಏಕೆಂದರೆ, ನೀವು ನಮ್ಮ ನಡುವಿನ ನಕಲಿ ದೇವ ಮಾನವರಂತೆ ಒಣ ವೇದಾಂತದ ಉಪದೇಶ ಮಾಡುವುದಕ್ಕೆ ಮಾತ್ರ ಲಾಯಕ್ಕು.

ಇದರಾಚೆಗೆ ನಿಮ್ಮಿಂದ ಏನನ್ನು ನಿರೀಕ್ಷಿಸಲಾಗದು. “ನೊಂದವರ ನೋವ ನೋಯದವರೆತ್ತ ಬಲ್ಲರೋ?” ಎಂದು ಅಕ್ಕ ಮಾಹಾದೇವಿ ಹಾಡಿರುವುದು ನಿಮಗಾಗಿ ಎಂದು ಈಗಲಾದರೂ ಅರ್ಥ ಮಾಡಿಕೊಳ್ಳಿ. ನಮಸ್ತೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಬಹಿರಂಗ

ಭಾರತೀಯ ರಿಸರ್ವ್ ಬ್ಯಾಂಕ್(ಆರ್.ಬಿ.ಐ) ಸ್ಥಾಪನೆಗೆ ಕಾರಣರಾದ ಬಾಬಾಸಾಹೇಬ್ ಅಂಬೇಡ್ಕರ್

Published

on

  • ರಘೋತ್ತಮ ಹೊ.ಬ

ಭಾರತೀಯ ರಿಸರ್ವ್ ಬ್ಯಾಂಕ್ ಅಥವಾ ಆರ್ ಬಿ ಐ ಅಕ್ಷರಶಃ ಬಾಬಾಸಾಹೇಬ್ ಅಂಬೇಡ್ಕರರ ಮೆದುಳಿನ ಕೂಸು Brain child of Babasaheb. ಹೇಗೆಂದಿರಾ? ಇಲ್ಲಿ ನೋಡಿ. ರಿಸರ್ವ್ ಬ್ಯಾಂಕ್ ಅಂದರೆ ಅರ್ಥಶಾಸ್ತ್ರ ಅಥವಾ ಎಕನಾಮಿಕ್ಸ್ ತಾನೇ? RBI ನ ಅರ್ಥಶಾಸ್ತ್ರಕ್ಕೂ ಅಥವಾ ಅರ್ಥಶಾಸ್ತ್ರದ ಹಿನ್ನೆಲೆಯ RBIಗೂ ಅಂಬೇಡ್ಕರ್ ಗೂ ಎತ್ತಣದಿಂದೆತ್ತಣ ಸಂಬಂಧ ಎಂದು ಕೇಳುವುದಾದರೆ..

ಓರ್ವ ಸಾಮಾನ್ಯ ವಿದ್ಯಾರ್ಥಿಯಾಗಿ 1913ರಲ್ಲಿ ಅಂಬೇಡ್ಕರರು ಮುಂಬಯಿನ ಎಲ್ಫಿನ್ ಸ್ಟೋನ್ ಕಾಲೇಜ್ ನಲ್ಲಿ ಬಿ.ಎ ಪದವಿ ಪಡೆದರು. ವಿಷಯ: ಅರ್ಥಶಾಸ್ತ್ರ ಮತ್ತು ರಾಜ್ಯಶಾಸ್ತ್ರ. ಮುಂದುವರೆದು ಅರ್ಥಶಾಸ್ತ್ರವನ್ನು ಪ್ರಮುಖ ವಿಷಯವಾಗಿ ತೆಗೆದುಕೊಂಡು ಅದೇ ಎಲ್ಫಿನ್ ಸ್ಟೋನ್ ಕಾಲೇಜಿನಲ್ಲಿ ಎಂ.ಎ ಪದವಿ ಪಡೆದರು. ತದನಂತರ 1917ರಲ್ಲಿ ಅಂಬೇಡ್ಕರರು ಅಮೆರಿಕದ ನ್ಯೂಯಾರ್ಕ್ ನಗರದ ಕೊಲಂಬಿಯಾ ವಿವಿಯಿಂದ ಪಿಹೆಚ್‌ಡಿ ಪದವಿ ಪಡೆದರಾದರೂ ಅರ್ಥಶಾಸ್ತ್ರದ ಮೇಲಿನ ತಮ್ಮ ಅಭಿಮಾನವನ್ನು ಬಿಟ್ಟು ಕೊಡಲಿಲ್ಲ.

ಈ ಹಿನ್ನೆಲೆಯಲ್ಲಿ ಅವರು 1921ರಲ್ಲಿ “ಬ್ರಿಟಿಷ್ ಭಾರತದಲ್ಲಿ ಸಾಮ್ರಾಜ್ಯಶಾಹಿ ಹಣಕಾಸಿನ ಪ್ರಾಂತೀಯ ವಿಕೇಂದ್ರಿಕರಣ” ಎಂಬ ಪ್ರೌಢ ಪ್ರಬಂಧ (thesis) ಮಂಡಿಸಿ ಅರ್ಥಶಾಸ್ತ್ರದಲ್ಲಿ ಎಂಎಸ್ಸಿ ಪದವಿ ಪಡೆದರು. ಗಮನಿಸಿ, ಅಂಬೇಡ್ಕರರ ಪ್ರಬಂಧದ ಈ ವಿಷಯವನ್ನು ಆ ಮೂಲಕ ಭಾರತೀಯ ಹಣಕಾಸು ವ್ಯವಸ್ಥೆಗೆ ಒಂದು ರೂಪ ಕೊಡುವಲ್ಲಿ ಅವರ ಮೆದುಳಿನಲ್ಲಿ ಹುಟ್ಟಿದ ಆ ವಿಷಯವನ್ನು. ಅಂದರೆ “ಹಣಕಾಸಿನ ಪ್ರಾಂತೀಯ ವಿಕೇಂದ್ರಿಕರಣ”, ಅರ್ಥಾತ್ ಹಣಕಾಸಿನ ಚಲಾವಣೆಯನ್ನು ವಿಕೇಂದ್ರೀಕರಿಸುವುದು.

ಮುಂದುವರೆದು ಇದೇ ವಿಷಯದ ಸಂಶೋಧನೆ ಮುಂದುವರೆಸಿದ ಅಂಬೇಡ್ಕರರು 1923ರಲ್ಲಿ ” ರೂಪಾಯಿಯ ಸಮಸ್ಯೆ: ಅದರ ಮೂಲ ಮತ್ತು ಪರಿಹಾರ. ಭಾರತೀಯ ಕರೆನ್ಸಿ ಮತ್ತು ಬ್ಯಾಂಕಿಂಗ್ ನ ಇತಿಹಾಸ ” ಎಂಬ ಮತ್ತೊಂದು ಪ್ರೌಢ ಪ್ರಬಂಧ ಮಂಡಿಸಿದರು. ಅಂದಹಾಗೆ ಇಂಗ್ಲೆಂಡಿನ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಅಂಬೇಡ್ಕರರ ಈ ಅದ್ಭುತ ಕೃತಿಗೆ “ಡಾಕ್ಟರ್ ಆಫ್ ಸೈನ್ಸ್ (D.Sc)” ಪದವಿ ಇತ್ತು ಗೌರವಿಸಿತು ಮತ್ತು ಅಂಬೇಡ್ಕರರ ಈ D.Sc ಪದವಿ ಪುರಸ್ಕೃತ ಈ ಕೃತಿಯನ್ನು ಲಂಡನ್ ನ “ಪಿ.ಎಸ್.ಕಿಂಗ್ ಅಂಡ್ ಕಂಪನಿ” ಪ್ರಕಾಶನ ಸಂಸ್ಥೆಯು “Problem of Rupee” ಎಂಬ ಶೀರ್ಷಿಕೆಯಲ್ಲಿ ಪುಸ್ತಕವಾಗಿ ಅದೇ ವರ್ಷ ಅಂದರೆ 1923 ರಲ್ಲಿ ಪ್ರಕಟಿಸಿತು.

ಹೀಗೆ ಅಂಬೇಡ್ಕರರ ಅರ್ಥಶಾಸ್ತ್ರದ ಚಿಂತನೆ, ಭಾರತದ ಹಣಕಾಸು ವ್ಯವಸ್ಥೆಯ ಸಮಸ್ಯೆ ಕುರಿತ ಈ ಸಂಶೋಧನೆ ಲಂಡನ್ ನಲ್ಲೇ ಬ್ರಿಟಿಷ್ ಆಡಳಿತಗಾರರ ಕೈಸೇರುತ್ತಲೇ ಅಂಬೇಡ್ಕರರು “ರೂಪಾಯಿಯ ಸಮಸ್ಯೆ , ಅದರ ಮೂಲ ಮತ್ತು ಪರಿಹಾರ” ಎಂದು ಹೇಳಿದ್ದರಲ್ಲ, ಅದರ ಪರಿಹಾರಾರ್ಥವಾಗಿ ಬ್ರಿಟಿಷ್ ಸರ್ಕಾರ 1926ರಲ್ಲಿ ಹಿಲ್ಟನ್ ಯಂಗ್ ರವರ ನೇತೃತ್ವದಲ್ಲಿ Royal Commission on Indian Currency and Finance ಎಂಬ ಆಯೋಗ ನೇಮಿಸಿತು. ಈ ವಿಷಯ ದಾಖಲಿಸುತ್ತ ಅಂಬೇಡ್ಕರ್ ವಾದಿ ಲೇಖಕ ಕ್ರಿಸ್ಟೋಫರ್ ಜೆಫರ್ಲೆಟ್ “ಹಾಗೆ ಭೇಟಿಕೊಟ್ಟ ಆಯೋಗದ ಪ್ರತಿಯೊಬ್ಬ ಸದಸ್ಯನ ಕೈಯಲ್ಲೂ ಕೂಡ ಆಕರ ಗ್ರಂಥವಾಗಿ (reference book) ಅಂಬೇಡ್ಕರರು ಪ್ರಕಟಿಸಿದ್ದ “ಪ್ರಾಬ್ಲಂ ಆಫ್ ರುಪೀ” ಎಂಬ ಆ ಕೃತಿ ಇತ್ತು” ಎನ್ನುತ್ತಾರೆ.

ಈ ಹಿನ್ನೆಲೆಯಲ್ಲಿ ಆ ಆಯೋಗ ಅಂಬೇಡ್ಕರರು ಎತ್ತಿದ್ದ ಸಮಸ್ಯೆಯ ಈ ಎಳೆ ಹಿಡಿದು ಭಾರತದಲ್ಲಿ ದೇಶದಾದ್ಯಂತ ಸಂಚರಿಸಿ ಅನೇಕರಿಂದ ಮಾಹಿತಿ ಮತ್ತು ಅಭಿಪ್ರಾಯ ಸಂಗ್ರಹಿಸಿತು. ಸ್ವತಃ ಬಾಬಾಸಾಹೇಬ್ ಅಂಬೇಡ್ಕರರು ಕೂಡ ಆ ಆಯೋಗದ ಮುಂದೆ ಖುದ್ದು ಹಾಜರಾಗಿ ಸಾಕ್ಷಿ ನುಡಿದರು, ತಮ್ಮ ಅಭಿಪ್ರಾಯವನ್ನು ಲಿಖಿತ ರೂಪದಲ್ಲಿ ಮಂಡಿಸಿದರು. (ಅಂಬೇಡ್ಕರರ ಆ ಲಿಖಿತ ಸಾಕ್ಷಿ ಕೂಡ ಭಾರತ ಸರ್ಕಾರ ಪ್ರಕಟಿಸಿರುವ ಅಂಬೇಡ್ಕರರ ಬರಹಗಳು ಭಾಷಣಗಳು ಸಂಪುಟಗಳ ಸರಣಿಯಲ್ಲಿದೆ.)

ಹಾಗಿದ್ದರೆ ಕರೆನ್ಸಿ ಕುರಿತು ಅಂಬೇಡ್ಕರ್
ಏನು ಪ್ರತಿಪಾದಿಸಿದರು? ಈ ಬಗ್ಗೆ ಹೇಳುವ ಅವರ “ಕರೆನ್ಸಿ ನಿಯಂತ್ರಣ ಮಾಡುವ ಅಧಿಕಾರವನ್ನು ಸರ್ಕಾರಕ್ಕೆ ನೀಡುವುದು ಅಪಾಯಕಾರಿ. ಯಾಕೆಂದರೆ ಕರೆನ್ಸಿ ಪೂರೈಕೆಯನ್ನು ವಾಣಿಜ್ಯದ ಅಗತ್ಯಕ್ಕೆ ತಕ್ಕಂತೆ
ಹೆಚ್ಚಿಸಬೇಕು ಅಥವಾ ಕಡಿಮೆಗೊಳಿಸಬೇಕು. ಆದರೆ ಆತಂಕದ ವಿಷಯವೆಂದರೆ ಸರ್ಕಾರ ಕೆಲವೊಮ್ಮೆ ಯಾವುದೇ ಪಶ್ಚಾತ್ತಾಪ ಪಡದೆ ಅನಿಯಂತ್ರಿತವಾಗಿ ಕರೆನ್ಸಿ ಉತ್ಪಾದಿಸಬಹುದು. ಇದು ಇಡೀ ಕರೆನ್ಸಿ ವ್ಯವಸ್ಥೆಯನ್ನೇ ನಾಶಗೊಳಿಸಲಿದೆ. ಈ ನಿಟ್ಟಿನಲ್ಲಿ ಇಂತಹ ಅನೇಕ ಉದಾಹರಣೆಗಳು ಇತಿಹಾಸದಲ್ಲಿ ದಾಖಲಾಗಿವೆ” ಆದ್ದರಿಂದ ಹಿಲ್ಟನ್ ಯಂಗ್ ಆಯೋಗದ ಮುಂದೆ ಅಂಬೇಡ್ಕರರು ಹೇಳುವುದು ಕರೆನ್ಸಿ ಪೂರೈಕೆ ಮತ್ತು ನಿಯಂತ್ರಣವನ್ನು ಸರ್ಕಾರಕ್ಕೆ ವಹಿಸುವ ಬದಲು ಕೇಂದ್ರೀಯ ಬ್ಯಾಂಕ್ ಒಂದನ್ನು ಸ್ಥಾಪಿಸಿ ಅದಕ್ಕೆ ವಹಿಸಬೇಕು ಎಂದು.

ಅಂದಹಾಗೆ ಇಂತಹ ಸಾಕ್ಷಿ ಮತ್ತು ಅಭಿಪ್ರಾಯಗಳ ಆಧಾರದ ಮೇಲೆ ಹಿಲ್ಟನ್ ಯಂಗ್ ಆಯೋಗ ತನ್ನ ಅಂತಿಮ ವರದಿ ಸಲ್ಲಿಸುತ್ತಲೇ ಕೇಂದ್ರೀಯ ಅಸೆಂಬ್ಲಿಯು 1934ರಲ್ಲಿ RBI ಕಾಯಿದೆಯನ್ನು ಅಂಗೀಕರಿಸಿತು. ಪರಿಣಾಮ 1935 ಏಪ್ರಿಲ್ 1 ರಂದು RBI ಅಥವಾ ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆಯಾಯಿತು. ಈ ಕುರಿತು ಮಾಹಿತಿ ದಾಖಲಿಸುವ ವಿಕಿಪೀಡಿಯ RBI was conceptualized as per the guidelines, working style and outlook presented by Bhimrao Ramji Ambedkar ಎನ್ನುತ್ತದೆ.

ಪ್ರಶ್ನೆ ಎಂದರೆ ಈ ಮಾಹಿತಿ ಭಾರತೀಯರಿಗೆ ಎಷ್ಟು ತಿಳಿದಿದೆ? ಎಂಬುದು. ಏಕೆಂದರೆ ಜನಸಾಮಾನ್ಯರು ಸುಮ್ಮನೆ ನೋಟು ಎಣಿಸಿಕೊಳ್ಳುತ್ತಾರೆ, ಅಲ್ಲಿ ಕಾಣುವ Reserve Bank of India ಎಂಬ ಮುದ್ರಣ ಕಣ್ತುಂಬಿಕೊಳ್ಳುತ್ತಾರೆ. ಆದರೆ ಅದರ ಸ್ಥಾಪನೆ ಹಿಂದಿರುವ ಚಿಂತನೆ? ಬಾಬಾಸಾಹೇಬ್ ಅಂಬೇಡ್ಕರ್ ಎಂಬ ಓರ್ವ ವಿದ್ಯಾರ್ಥಿ ತನ್ನ ಬಿಎ ಪದವಿಯಿಂದ ಹಿಡಿದು ಡಿಎಸ್ಸಿ ಪದವಿವರೆಗೆ ಅದನ್ನು ಪ್ರತಿಪಾದಿಸಿದ ರೀತಿ? ಪ್ರತಿಪಾದಿಸಿ ಸ್ವತಃ ಅದರ ಸ್ಥಾಪನೆಗೆ ಸಾಕ್ಷಿ ನುಡಿದ ರೀತಿ? ನಿಜ, ಬಾಬಾಸಾಹೇಬ್ ಅಂಬೇಡ್ಕರರೇನು ತನ್ನನ್ನು RBI ಸ್ಥಾಪಕ ಎಂದು ಹೇಳಲಿ ಅಥವಾ ಜನಸಾಮಾನ್ಯರು ಹಾಗೆ ಗುರುತಿಸಲಿ ಎಂದು ಈ ಸಾಧನೆ ಮಾಡಿರಲಿಕ್ಕಿಲ್ಲ.

ಅರ್ಥಶಾಸ್ತ್ರದ ಓರ್ವ ಸಂಶೋಧನಾರ್ಥಿಯಾಗಿ ತಮ್ಮ ಸಂಶೋಧನೆ ಮೂಲಕ ಆ ಕಾಲದಲ್ಲಿ ರೂಪಾಯಿ ಎದುರಿಸುತ್ತಿದ್ದ ಸಮಸ್ಯೆ ಮತ್ತು ಅದಕ್ಕೆ ಪರಿಹಾರವನ್ನು ಅವರು ಕಂಡುಹಿಡಿದರು. ಈ ನಿಟ್ಟಿನಲ್ಲಿ ಅಂಬೇಡ್ಕರರ ಅಂತಹ RBI ಸ್ಥಾಪನೆಯ ಸಾಧನೆಯನ್ನು ನಾವು ಅಂದರೆ ಜನಸಾಮಾನ್ಯರು ಗುರುತಿಸಬೇಕು, ಇತಿಹಾಸದಲ್ಲಿ ದಾಖಲಿಸುವ ಕೆಲಸ ಮಾಡಬೇಕು. ಇಲ್ಲದಿದ್ದರೆ ನಾವು ಬಳಸುವ ಹಣಕ್ಕೆ ಮೌಲ್ಯ ಇರುವುದಿಲ್ಲ. ಏಕೆಂದರೆ ಅಂಬೇಡ್ಕರರು ಅದಕ್ಕೊಂದು ರೂಪ ಕೊಟ್ಟು ಇಂದು ನಮ್ಮ ಕೈಗೆ ಅದು ಸಿಗುವಂತೆ ಮಾಡದಿದ್ದರೆ ಅದು ಅದ್ಯಾವ ಶ್ರೀಮಂತನ ತಿಜೋರಿ ಸೇರುತ್ತಿತ್ತೋ! ಹಣ ಎಂದರೆ ಹೆಣವಿರಲಿ ನಾವೇ ಬಾಯಿ ಬಾಯಿ ಬಿಡಬೇಕಿತ್ತಷ್ಟೆ..!

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಬಹಿರಂಗ

ಹುತಾತ್ಮ ಭಗತ್ ಸಿಂಗ್ ಮತ್ತು ಪ್ರಸ್ತುತ ಭಾರತ

Published

on

 

  • ಕೆ. ವಾಸುದೇವರೆಡ್ಡಿ
    ಎಸ್ಎಫ್ಐ ರಾಜ್ಯ ಕಾರ್ಯದರ್ಶಿ

ಪ್ಪಟ ದೇಶಪ್ರೇಮಿಗಳಾದ ಭಗತ್ ಸಿಂಗ್, ರಾಜಗುರು,ಸುಖದೇವ್ ರನ್ನು ಬ್ರಿಟಿಷ್ ಸರ್ಕಾರ 1931 ಮಾರ್ಚ್ 23 ನೇಣಿಗೇರಿಸಿತು. ಬ್ರಿಟಿಷ್ ಸಾಮ್ರಾಜ್ಯಶಾಹಿ ದಾಸ್ಯದ ಸಂಕೋಲೆಯಿಂದ ಭಾರತದ ವಿಮೋಚನೆಗಾಗಿ ಚಿರು ಯೌವನದ ಯುವಕರ ಬಲಿದಾನ ಅಸಂಖ್ಯಾತ ಭಾರತೀಯರನ್ನು ಸ್ವಾತಂತ್ರ್ಯ ಚಳುವಳಿಗೆ ಪ್ರಚೋದಿಸಿತು.

ಒಂದು ಉನ್ನತ ಧ್ಯೇಯ ಮತ್ತು ಆದರ್ಶಗಳಿಗಾಗಿ ಹೋರಾಡಿ ಸ್ಥಾಪಿತ ವ್ಯವಸ್ಥೆಯ ವಿರುದ್ಧ ಸೆಟೆದು ನಿಂತು ವ್ಯವಸ್ಥೆಯ ಬದಲಾವಣೆಗಾಗಿ ಅವಿರತ ಶ್ರಮಿಸಿ ಪ್ರಭುತ್ವದ ಧೂರ್ತತನಕ್ಕೆ ಬಲಿಯಾಗುವ ಪ್ರಾಮಾಣಿಕ ಹೋರಾಟಗಾರರನ್ನು ಹುತಾತ್ಮ ಎಂದು ಬಣ್ಣಿಸಬಹುದು. ವ್ಯಕ್ತಿಗತ ಸೈದ್ಧಾಂತಿಕ ನೆಲೆಯಲ್ಲಿ ಹುತಾತ್ಮ ಎಂಬ ಪದಕ್ಕೆ ನಾನಾ ಅರ್ಥಗಳು ಮೂಡುತ್ತವೆ. ಭಾರತದ ಪ್ರಸ್ತುತ ರಾಜಕಾರಣದಲ್ಲಿ ಹುತಾತ್ಮ ಎಂಬ ಪದವೂ ಸಹ ಮಾರುಕಟ್ಟೆಯ ಸರಕಿನಂತಾಗಿದ್ದು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ ಚಿಮ್ಮುಹಲಗೆಯಾಗಿ ಪರಿಣಮಿಸಿದೆ.

23 ವರ್ಷಕ್ಕೆ ಬಲಿಪೀಠ ಮೇಲೆ ಇನ್ ಕ್ವಿಲಾಬ್ ಜಿಂದಾಬಾದ್ ಕ್ರಾಂತಿಯ ಕಹಳೆ ಮೊಳಗಿಸಿದ ಶಾಹೀದ್ ಭಗತ್ ಸಿಂಗ್ ಮತ್ತು ಆತನ ಸಂಗಾತಿಗಳನ್ನು ಭಾರತ ಸರ್ಕಾರ ಹುತಾತ್ಮರೆಂದು ಅಧಿಕೃತವಾಗಿ ಪರಿಗಣಿಸದಿರುವುದು ಮತ್ತು ಚಂಡಿಗಢ ಮತ್ತು ಹರಿಯಾಣ ವಿಮಾನ ನಿಲ್ದಾಣಕ್ಕೆ ಶಾಹೀದ್ ಭಗತ್ ಸಿಂಗ್ ಹೆಸರನ್ನು ನಾಮಕರಣ ಮಾಡಲು ಸಹ ಹೋರಾಟ ನಡೆಸಿದರು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವುದು ಗಣಘೋರ ಅವಮಾನದ ಸಂಗತಿ. ಆದರೆ ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದು ಕೊಟ್ಟು ಹೊರ ಬಂದ ಸಂಘಪರಿವಾರದ ಸ್ವಯಂಘೋಷಿತ ವೀರ ಸಾವರ್ಕರ್ ಗೆ ಭಾರತರತ್ನ ಕೊಡುವ ಬಗ್ಗೆ ಚರ್ಚೆ ನಡೆಯುತ್ತಿದೆ.

ದೇಶ-ದೇಶದ್ರೋಹ-ದೇಶ ಭಕ್ತಿ ಮುಂತಾದ ವಿದ್ಯಮಾನಗಳು ಬಲಪಂಥೀಯ ರಾಜಕಾರಣದ ನೆಲೆಯಲ್ಲಿ ಅನುಕೂಲಸಿಂಧುವಾಗಿ ವ್ಯಾಖ್ಯಾನಿಸಲ್ಪಡುತ್ತಿರುವ ಸಂದರ್ಭದಲ್ಲಿ ಹುತಾತ್ಮ ಎಂಬ ಪದ ತನ್ನ ಅರ್ಥವನ್ನೇ ಕಳೆದುಕೊಳ್ಳುತ್ತಿದೆ.

ಆದರೆ ಹುತಾತ್ಮ ಎನ್ನುವ ಗೌರವ ಪಡೆಯುವ ಹಕ್ಕು ಕೇವಲ ಪ್ರಾಮಾಣಿಕ ದಿಟ್ಟ ಕ್ರಾಂತಿಕಾರಿಗಳಿಗೆ ಮಾತ್ರವೇ ಇರುತ್ತದೆ. ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಸಾವಿರಾರು ಜನ ತಮ್ಮ ಜೀವವನ್ನೇ ಪಣವಿಟ್ಟು ಬ್ರಿಟೀಷರ ವಿರುದ್ಧ ಹೋರಾಡಿ ಮೃತರಾದರೂ ಹುತಾತ್ಮ ಎಂಬ ಪಟ್ಟಕ್ಕೆ ಅರ್ಹನಾದ ವ್ಯಕ್ತಿ ಸಂಗಾತಿ ಭಗತ್ಸಿಂಗ್, ರಾಜಗುರು ಸುಖದೇವ್ ಮತ್ತು ಆತನ ಸಂಗಾತಿಗಳು ಮಾತ್ರ. ಏಕೆಂದರೆ ಭಗತ್ ಸಿಂಗ್ ಕೇವಲ ಬ್ರಿಟೀಷ್ ವಸಾಹತುಶಾಹಿಯ ವಿರುದ್ಧ ಹೋರಾಡಲಿಲ್ಲ.

ಭಾರತದಲ್ಲಿ ಅಮೂಲಾಗ್ರ ಬದಲಾವಣೆ ತರಲು ಅಸಮಾನತೆಯ ಬುನಾದಿ ಮೇಲೆ ನಿರ್ಮಾಣವಾಗಿರುವ ಶ್ರೇಣೀಕೃತ, ಊಳಿಗಮಾನ್ಯ ವ್ಯವಸ್ಥೆಯಲ್ಲಿ ಹಾಸು ಹೊಕ್ಕಾಗಿದ್ದ ಶೋಷಣೆ ಮತ್ತು ಅಸಮಾನತೆಯ ವ್ಯವಸ್ಥೆಯನ್ನು ಬೇರು ಸಮೇತ ಕಿತ್ತು ಹಾಕಿ ನವ ಸಮ ಸಮಾಜದ ಕನಸುಗಳನ್ನು ಭಗತ್ ಸಿಂಗ್ ಮತ್ತು ಅವನ ಸಂಗಾತಿಗಳು ಒಂದು ವೇಳೆ ಸ್ವಾತಂತ್ರ್ಯದ ಕನಸು ಸಾಕಾರಗೊಳ್ಳುವ ಮುನ್ನವೇ ಅಮರರಾದರು.

” ಸ್ವಾತಂತ್ರ್ಯ ಎಂದರೆ ಕೇವಲ ಯಜಮಾನರ ಬದಲಾವಣೆ ಎಂದಾದರೆ ಜನರ ಶೋಷಣೆಯು ಹಾಗೆ ಮುಂದುವರಿಯಲಿದೆ ಆದ್ದರಿಂದ ಈ ಶೋಷಕ ವ್ಯವಸ್ಥೆಯನ್ನು ಬುಡ ಸಮೇತ ಕಿತ್ತು ಹಾಕಬೇಕು, ಹಳೆಯ ಸಂಗತಿಗಳನ್ನು ಕಾಪಾಡಿಕೊಂಡು ನವ ಸಮಾಜ ನಿರ್ಮಾಣ ಅಸಾಧ್ಯ ಅಂದರೆ ಈ ದೇಶದಿಂದ ಬಿಳಿಯ ದೊರೆಗಳು ಹೋಗಿ ಕಂದು ಬಣ್ಣದ (ಇದೇ ದೇಶದ) ಭೂಮಾಲಕ, ಬಂಡವಾಳದಾರರ ಕೈಗೆ ರಾಜಕೀಯ ಅಧಿಕಾರ ಹಸ್ತಾಂತರವಾಗುವುದರಿಂದ ನಿಜವಾದ ಸ್ವಾತಂತ್ರ್ಯ ಬರುವುದಿಲ್ಲ. ಬದಲಿಗೆ ಈ ದೇಶದ ಬಡಜನರ ಶೋಷಣೆ ಮುಂದುವರೆಯಲಿದೆ. ಎಂಬ ಭಗತ್ ಸಿಂಗ್ ರವರು ಮಾತು ದೇಶದ ಪ್ರಸ್ತುತ ಸಮಾಜೋ ರಾಜಕೀಯ ವ್ಯವಸ್ಥೆಯನ್ನು ಗ್ರಹಿಸಿದರೆ ನಮ್ಮ ಅರಿವಿಗೆ ಬರುವುದು ಸಹಜ.

ಹೌದು ಈಸ್ಟ್ ಇಂಡಿಯಾ ಕಂಪನಿಗಳ ಸ್ಥಾನದಲ್ಲಿ ಬಹುರಾಷ್ಟ್ರೀಯ ಕಾರ್ಪೋರೇಟ್ ಕಂಪೆನಿಗಳು, ಬ್ರಿಟಿಷರ ಪಾತ್ರದಲ್ಲಿ ರಾಜಕಾರಣದ ವ್ಯಾಪಾರಿಗಳು ಈ ದೇಶವನ್ನು ಲೂಟಿ ಹೊಡೆದು ಜನರನ್ನು ವಂಚಿಸುತ್ತಿದ್ದಾರೆ. 1947 ರಲ್ಲಿ ಕೇವಲ ಆಳುವ ಯಜಮಾನರು ಮಾತ್ರ ಬದಲಾಗಿರೋದು. ಆದ್ದರಿಂದ ಈಗಲೂ ದೇಶ ಬಡತನ, ಅಸ್ಪೃಶ್ಯತೆ, ಮೌಢ್ಯ, ಧರ್ಮಾಂಧತೆ, ದುಡಿಯುವ ರೈತ ಕಾರ್ಮಿಕರ ಪೋಷಣೆ ಮುಂದುವರೆದಿದೆ.

ಇಂದು ಹುತಾತ್ಮ ಭಗತ್ ಸಿಂಗ್ ನ ರಾಜಕೀಯ, ಆರ್ಥಿಕ, ಸೈದ್ಧಾಂತಿಕ, ವಿಚಾರಗಳು ಆದರ್ಶ ಪ್ರೇರೇಪಣೆಯಾಗಿವೆ. ಎಡಪಂಥೀಯ ಸಂಘಟನೆಗಳಿಗೆ ಭಗತ್ ಸಿಂಗ್ನ ಸಾಮ್ರಾಜ್ಯಶಾಹಿ, ವಸಹಾತುಶಾಹಿ ವಿರೋಧಿ ಧೋರಣೆ ಅಪ್ಯಾಯಮಾನವಾದರೆ ಬಲಪಂಥೀಯರಿಗೆ ಅವರದೇ ಆದ ಸೀಮಿತ ಚೌಕಟ್ಟಿನ “ ದೇಶಪ್ರೇಮ-ದೇಶಭಕ್ತಿ ” ಅವನನ್ನು ಆರಾಧಿಸುವಂತೆ ಮಾಡುತ್ತದೆ. ಭಗತ್ ಸಿಂಗ್ ಗಲ್ಲುಶಿಕ್ಷೆಗೊಳಗಾಗದೆ ಸ್ವತಂತ್ರ ಭಾರತದ ಆಡಳಿತ ವ್ಯವಸ್ಥೆಯಲ್ಲಿ ತಾನು ಬಯಸಿದ ಸಮಾಜವಾದಿ ವ್ಯವಸ್ಥೆಯನ್ನು ತರಲು ಯತ್ನಿಸಿದ್ದಲ್ಲಿ ಬಹುಶಃ ಈಗಿನ ಸ್ವಯಂ ಘೋಷಿತ ದೇಶಭಕ್ತರಿಂದ ಭಾರತದಲ್ಲಿ ಆರಾಧ್ಯ ದೈವದ ಪಟ್ಟ ಅವನಿಗೆ ದೊರೆಯುತ್ತಿಲಿಲ್ಲವೇನೋ..! ಬಹುಶಃ ವಿಶ್ವದ ಇತಿಹಾಸ ಪಠ್ಯಗಳಲ್ಲಿ ಲ್ಯಾಟಿನ್ ಅಮೆರಿಕದ ಕ್ರಾಂತಿಕಾರಿ ಚೆ ಗುವಾರನನ್ನು ಕಡೆಗಣಿಸಿರುವಂತೆಯೇ ಭಗತ್ಸಿಂಗ್ನನ್ನೂ ಕಡೆಗಣಿಸಲಾಗಿದೆ.

ಒಂದು ಅರ್ಥದಲ್ಲಿ ಭಗತ್ ಸಿಂಗ್ ಹುತಾತ್ಮನಾಗಿದ್ದು “ ದೇಶಭಕ್ತಿ ”ಯ ವಕ್ತಾರರಿಗೆ ಒಂದು ವರದಾನವಾಗಿ ಪರಿಣಮಿಸಿದರು. ಕೇಸರಿಪಡೆಗಳಿಗೆ ಭಗತ್ ಸಿಂಗ್ ನಾಸ್ತಿಕವಾದ, ಜ್ಯಾತ್ಯಾತೀತ, ಸಮಾಜವಾದಿ ವಿಚಾರಗಳು ಬಲಪಂಥೀಯ ರಾಜಕಾರಣಕ್ಕೆ ವಿರುದ್ಧವಾಗಿರುವುದರಿಂದ ಭಗತ್ ಸಿಂಗ್ ನನ್ನು ಕೇಸರಿಪಡೆಗಳು ಹೈಜಾಕ್ ಮಾಡಲು ಸಾಧ್ಯವಾಗಿಲ್ಲ. ಇಲ್ಲದಿದ್ದರೆ ಕೆಂಪುಕೋಟೆಯ ತ್ರಿವರ್ಣ ಧ್ವಜದ ನೆರಳಲ್ಲಿ ವಿಜೃಂಭಿಸುವ ಭಗತ್ ಸಿಂಗ್ ನನ್ನು ಕೇಸರಿ ಭಗವಾಧ್ವಜದ ಶೋಭಾಯಾತ್ರೆಯಲ್ಲೂ ವಿಜೃಂಭಿಸುತ್ತಿದ್ದರು.

ಸಮಕಾಲೀನ ಸಂದರ್ಭದಲ್ಲಿ, ಭಗತ್ ಸಿಂಗ್ ಹುತಾತ್ಮನಾಗಿ 89 ವರ್ಷಗಳು ಕಳೆದಿರುವ ಈ ಸಂದರ್ಭದಲ್ಲಿ ಕೇವಲ ಸ್ವಾತಂತ್ರ್ಯ ಸಂಗ್ರಾಮಿ ಎಂಬ ಸೀಮಿತ ಚೌಕಟ್ಟಿನೊಳಗೆ ಬಂಧಿಸುವುದು ಹುತಾತ್ಮನಿಗೆ ಅಪಚಾರ ಎಸಗಿದಂತೆಯೇ ಸರಿ. ಏಕೆಂದರೆ ಬ್ರಿಟೀಷ್ ಆಡಳಿತ ವ್ಯವಸ್ಥೆ ಭಗತ್ ಸಿಂಗ್ ಎಂಬ ಒಬ್ಬ ವ್ಯಕ್ತಿಯನ್ನು ಗಲ್ಲಿಗೇರಿಸಿತ್ತು. ವ್ಯಕ್ತಿಗಳನ್ನು ಕೊಂದು ಹಾಕಬಹುದು ಆದರೆ ಅವರ ವಿಚಾರಗಳು ಅಲ್ಲ, ಉನ್ನತ ಆದರ್ಶಗಳು ಅಂತ್ಯಗೊಳಿಸುವುದಿಲ್ಲ ಎಂಬ ಭಗತ್ಸಿಂಗ್ನ ಮುತ್ತಿನಂತಹ ನುಡಿಗಳು ಎಷ್ಟು ಸತ್ಯ. ಭಗತ್ ಸಿಂಗ್ ಹುತಾತ್ಮನಾದ ನಂತರವೂ ಆತನ ವಿಚಾರ, ತತ್ವ ಸಿದ್ಧಾಂತಗಳು ಜೀವಂತವಾಗಿವೆ. ಇನ್ನೂ ಶತಮಾನಗಳ ಕಾಲ ಜೀವಂತವಾಗಿರುತ್ತವೆ. ಇಂದು ನಾವು ಈ ಯುವ ಕ್ರಾಂತಿಕಾರಿಯನ್ನು ನೆನೆಯುವುದೇ ಆದರೆ ಬೇರೊಂದು ನೆಲೆಗಟ್ಟಿನಲ್ಲೇ ಸ್ಮರಿಸಬೇಕಾಗುತ್ತದೆ.

ಭಗತ್ ಸಿಂಗ್ ಕೇವಲ ತನ್ನ ಒಂದು ಉದ್ದೇಶಕ್ಕಾಗಿ ಅಥವಾ ತನ್ನ ಎಡಪಂಥೀಯ ಧೋರಣೆಗಳ ಅಸ್ತಿತ್ವವನ್ನು ಉಳಿಸಿಲೆಂದೇ ಹುತಾತ್ಮನಾಗಲಿಲ್ಲ. ಅಥವಾ ತನ್ನದೇ ಆದ ರಾಜಕೀಯ ಭೂಮಿಕೆಗಾಗಿ, ಅಧಿಕಾರ ರಾಜಕಾರಣಕ್ಕಾಗಿ ಹುತಾತ್ಮನಾಗಲಿಲ್ಲ. ಇಂದು ನಾವು ಕಾಣುತ್ತಿರುವ ಪಕ್ಷ ರಾಜಕಾರಣ ಮತ್ತು ವಿಭಜನೆಯ ಚಿಂತನೆಗಳನ್ನು ಮೀರಿ ದೇಶದ ಯುವ ಜನತೆಗೆ, ಭವಿಷ್ಯದ ಪೀಳಿಗೆಗೆ ಸಮ ಸಮಾಜದ ಒಂದು ನಿರ್ದಿಷ್ಟ ಆಯಾಮವನ್ನು ತನ್ನ ಹೋರಾಟದ ಮೂಲಕ ಬಿಂಬಿಸಿದ ಭಗತ್ ಸಿಂಗ್ ಸ್ಪೂರ್ತಿದಾಯಕ.

ಆದರೆ ಇಂದು ಆಳುವ ವರ್ಗಗಳ ತಾಳಕ್ಕೆ ತಕ್ಕಂತೆ ಪತನದತ್ತ ಹೆಜ್ಜೆ ಹಾಕುತ್ತಾ ಭ್ರಷ್ಟ ವ್ಯವಸ್ಥೆಯ ಕಬಂಧ ಬಾಹುಗಳಿಗೆ ಸಿಲುಕಿ ನಲುಗುತ್ತಿರುವುದು ದೇಶದ ಯುವಜನತೆ ಭಗತ್ ಸಿಂಗ್ ಪ್ರತಿಪಾದಿಸಿದ ಉನ್ನತ ಆದರ್ಶಗಳು ಯಾವುವೂ ಎಂದು ಗಮನಿಸಬೇಕು. ತ್ಯಾಗ, ಪ್ರಾಮಾಣಿಕತೆ, ಆದರ್ಶ ಮತ್ತು ಸತ್ಯಸಂಧತೆಯನ್ನು ಭೌಗೋಳಿಕ ಚೌಕಟ್ಟಿನಲ್ಲಿ ಬಂಧಿಸುವ ಬದಲು ಸಾಮಾಜಿಕ ನೆಲೆಯಲ್ಲಿ ಗ್ರಹಿಸಿದಾಗ ಸಮಾಜ ಒಂದು ಉನ್ನತ ಧ್ಯೇಯದೆಡೆಗೆ ಸಾಗುವುದು ಸಾಧ್ಯ. ಇಲ್ಲವಾದಲ್ಲಿ ಎಲ್ಲವೂ ಆಳುವವರ ಹಿತಾಸಕ್ತಿ ಕಾಪಾಡುವ ಭೂಪಟದ ಭೌಗೋಳಿಕ ದೇಶಭಕ್ತಿಯ ಸೀಮಿತ ಶರಪಂಜರದೊಳಗೆ ಬಂಧಿಯಾಗುತ್ತವೆ.

ಭಾರತದ ಪ್ರಸ್ತುತ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕøತಿಕ ಸನ್ನಿವೇಶವನ್ನು ಗಮನಿಸಿದಾಗ ಭಗತ್ ಸಿಂಗ್ ಮತ್ತು ಸಂಗಾತಿಗಳು ಪ್ರತಿಪಾದಿಸಿದ ಎಲ್ಲ ಮೌಲ್ಯಗಳೂ ಅಪಮೌಲ್ಯಕ್ಕೊಳಗಾಗುತ್ತಿರುವುದು ಎದ್ದು ಕಾಣುತ್ತದೆ. ತಮ್ಮ ಜಾತ್ಯತೀತ, ವೈಚಾರಿಕತೆ, ಜನಪರ ಹೋರಾಟಗಳಲ್ಲಿ ಪ್ರಾಮಾಣಿಕತೆಯಿಂದ ತೊಡಗಿದರೆ ಹತ್ಯೆಗೀಡಾಗುವ, ಒತ್ತಡಕ್ಕೆ ಸಿಲುಕಿಸಿ ಆತ್ಮಹತ್ಯೆಗೆ ಶರಣಾಗುವಂತೆ ಮಾಡಲಾಗುತ್ತಿದೆ.

ಪಟ್ಟಭದ್ರ ಹಿತಾಸಕ್ತಿಗಳ, ಮತೀಯವಾದಿಗಳ, ಧರ್ಮಾಂಧರ ಕೆಂಗಣ್ಣಿಗೆ ಬಲಿಯಾಗಿ ಬದುಕಿದ್ದೂ ಶವದಂತಾಗುವ ಸಾಹಿತಿ, ವಿಚಾರವಾದಿಗಳು ಈ ವ್ಯವಸ್ಥೆಯ ಲೋಪಗಳನ್ನು ಜನಸಾಮಾನ್ಯರ ಮುಂದಿರಿಸಿದ ಅಪರಾಧಕ್ಕಾಗಿ ಸ್ಥಾಪಿತ ವ್ಯವಸ್ಥೆಯಿಂದಲೇ ದಮನಕ್ಕೊಳಗಾಗುವ ಹೋರಾಟಗಾರರು, ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಿ ಒಂದು ಸ್ವಾಸ್ಥ್ಯ ಸಮಾಜವನ್ನು ನಿರ್ಮಿಸಲು ಶ್ರಮಿಸಿ ಆಡಳಿತ ವ್ಯವಸ್ಥೆಯ, ಪ್ರಭುತ್ವದ ದಮನಕ್ಕೊಳಗಾಗುವ ಪ್ರಜ್ಞಾವಂತರು ಇವರೆಲ್ಲರೂ ತಮ್ಮೊಳಗಿನ ಬೌದ್ಧಿಕ ಶಕ್ತಿ ಮತ್ತು ಉತ್ಸಾಹಗಳು ಹುತಾತ್ಮವಾಗುವುದನ್ನು ಕಣ್ಣೆದುರಿನಲ್ಲೇ ಭಾರತದಲ್ಲಿ ಕಾಣುತ್ತಿದ್ದೇವೆ. ಇದರ ನಡುವೆಯೇ ಭಗತ್ ಸಿಂಗ್ ಬೌದ್ಧಿಕವಾಗಿ ಜೀವಂತವಾಗಿದ್ದರೂ ಭೌತಿಕವಾಗಿ ಕಣ್ಮರೆಯಾಗುತ್ತಿದ್ದಾನೆ.

ಕೇವಲ 23 ವರ್ಷಕ್ಕೆ ನೇಣುಗಂಬಕ್ಕೆ ಏರುವ ಕೊನೆಯ ಗಳಿಗೆಯಲ್ಲೂ ಭಗತ್ ಸಿಂಗ್ ನ ಸ್ಪೂರ್ತಿಯಾಗಿದ್ದ ಕಾಮ್ರೇಡ್ ಲೆನಿನ್ ರವರ ಪುಸ್ತಕ ಓದಿ ಮುಗಿಸುವುದು ಕೊನೆಯುಸಿರೆಳೆಯುವ ಮುನ್ನ ಅಂತಿಮ ಆಸೆ ಎಂದಿದ್ದರು. ಆದರೆ ಇಂದು ದೇಶಭಕ್ತಿಯನ್ನು ಸ್ವಯಂ ಗುತ್ತಿಗೆ ಪಡೆದುಕೊಂಡಿರುವವರು ತ್ರಿಪುರಾದ ಅರ್ಗತಲಾ ದಲ್ಲಿ ಲೆನಿನ್ ಪ್ರತಿಮೆಯನ್ನು ಜೆಸಿಬಿ ಯಂತ್ರದಿಂದ ಉರುಳಿಸಿ ರಣಕೇಕೆ ಹಾಕಿದ್ದು ನೋಡಿದರೆ ಗೊತ್ತಾಗುತ್ತದೆ ಈ ಶಕ್ತಿಗಳು ಭಗತ್ ಸಿಂಗ್ ಕನಸಿನ ಭಾರತವನ್ನು ಛಿದ್ರಗೊಳಿಸುತ್ತಿದ್ದಾರೆ. ಈ ಕೋಮುವಾದಿ, ಮೂಲಭೂತವಾದಿ ಶಕ್ತಿಗಳಿಂದ ದೇಶದ ಐಕ್ಯತೆ ಸಮಗ್ರತೆ ಜಾತ್ಯತೀತತೆಯನ್ನು ಕಾಪಾಡುವುದೇ ನಮ್ಮ ಮುಂದಿರುವ ಮೊದಲ ಕರ್ತವ್ಯ.

ಇದಕ್ಕೆ ಕಾರಣ ಎಂದರೆ ಸಮಕಾಲೀನ ಭಾರತದಲ್ಲಿ ಉನ್ನತ ಸಮಾಜವನ್ನು ನಿರ್ಮಿಸಲು ನೆರವಾಗುವ ಎಲ್ಲ ಮೌಲ್ಯಗಳೂ ಬಿಕರಿಗಿವೆ, ಹಾಗೆಯೇ ಈ ಎಲ್ಲ ಮೌಲ್ಯಗಳೂ ಪ್ರಭುತ್ವದ ಶೋಷಣೆಗೆ ಸಿಲುಕಿ ನಲುಗುತ್ತಿವೆ. ಭೌತಿಕವಾಗಿ ಆತ್ಮ, ದೇಹ ಇಲ್ಲದ ಈ ಮೌಲ್ಯಗಳನ್ನು ಗಲ್ಲಿಗೇರಿಸಲು ವ್ಯವಸ್ಥೆಯ ಸಂರಕ್ಷಕರಿಗೆ ಸಾಧ್ಯವಿಲ್ಲ. ಆದರೆ ಈ ಮೌಲ್ಯಗಳನ್ನು ಪ್ರತಿಪಾದಿಸುವ ವ್ಯಕ್ತಿಗಳನ್ನು ಪಂಜರದೊಳಗೆ ಬಂಧಿಸುವ ಮೂಲಕ ನಿರ್ನಾಮ ಮಾಡುವುದು ಸುಲಭಸಾಧ್ಯ. ರೋಹಿತ್ ವೇಮುಲ, ಕನ್ನಯ್ಯ ಕುಮಾರ್, ಜೆಎನ್ಯು ವಿವಾದ, ದಾದ್ರಿ ಘಟನೆ ಮತ್ತು ಭೀಮ್ ಕೊರೆಂಗಾವ.. ವಿದ್ಯಮಾನಗಳು ರಾಷ್ಟ್ರ ಮತ್ತು ರಾಷ್ಟ್ರೀಯತೆಯ ವ್ಯಾಖ್ಯೆಯನ್ನೇ ವಿಭಿನ್ನ ನೆಲೆಗೆ ಕೊಂಡೊಯ್ದಿದೆ.

ರಾಷ್ಟ್ರ ಭಕ್ತಿ ಎನ್ನುವ ಬೌದ್ಧಿಕ ವಿದ್ಯಮಾನ ಇಂದು ಲೌಕಿಕತೆಯನ್ನು ಪಡೆದುಕೊಂಡಿದ್ದು ಭಾರತದ ಪ್ರತಿಯೊಬ್ಬ ಪ್ರಜೆಯೂ ತನ್ನ ದೇಶಭಕ್ತಿ ಪ್ರದರ್ಶಿಸಲು ಜಯಕಾರ ಕೂಗಬೇಕಾದ ಸಂದರ್ಭ ಒದಗಿಬಂದಿದೆ..! ಹಾಗಾಗಿ ಪ್ರಭುತ್ವ ಮತ್ತು ಪ್ರಜೆಗಳ ನಡುವಿನ ಸಂಘರ್ಷವನ್ನು ದೇಶಭಕ್ತಿ-ದೇಶದ್ರೋಹದ ಚೌಕಟ್ಟಿನಲ್ಲೇ ವ್ಯಾಖ್ಯಾನಿಸಲಾಗುತ್ತಿದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಅಪ್ಪಟ ದೇಶಪ್ರೇಮಿ ಭಗತ್ ಸಿಂಗ್ ಮತ್ತು ಆತನ ಸಂಗಾತಿಗಳನ್ನು ಹುತಾತ್ಮರೆಂದು ನೆನೆಯುತ್ತಿದ್ದೇವೆ. ಭಗತ್ ಸಿಂಗ್ ಇಂದಿಗೂ ಭಾರತದ ಭವಿಷ್ಯ ಕಟ್ಟಲು ಚಿಂತಿಸುವವರೆಲ್ಲರೊಳಗೆ ಅದಮ್ಯ ಚೇತನವಾಗಿದ್ದಾನೆ.

ಭಗತ್ ಸಿಂಗ್ ಮತ್ತು ಆತನ ಸಂಗಾತಿಗಳು ಬಿದ್ದ ಮರಗಳು ಅಲ್ಲ ಬಿತ್ತಿದ ಬೀಜಗಳು.ನಮ್ಮೆಲ್ಲರಲ್ಲೂ ಭಗತ್ ಸಿಂಗ್ ವಿಚಾರಗಳನ್ನು ವಿಚಾರಧಾರೆ ಕ್ರಾಂತಿಯನ್ನುಂಟು ಮಾಡಲಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಬಹಿರಂಗ

ರಾವಣ ದುಷ್ಟನೇ..? ಯಾಕೆ ವೈದಿಕರು ಅವನನ್ನು ದ್ವೇಷಿಸುತ್ತಾರೆ..?

Published

on

  • ವಿ.ಎಸ್.ಬಾಬು

ಒಂದು ಜನಾಂಗವನ್ನು ನಾಶ ಮಾಡಬೇಕಾದರೆ ಮೊದಲು ಆ ಜನಾಂಗದ ಆಹಾರ ಪದ್ಧತಿಗಳನ್ನು ಆಚಾರಗಳನ್ನು, ಅವರಾಡುವ ಭಾಷೆಯನ್ನು ಸಂಪೂರ್ಣವಾಗಿ ನಿರ್ನಾಮ ಮಾಡಬೇಕು. ಇವೆಲ್ಲಕ್ಕೂ ಮೊದಲು ಆ ಜನಾಂಗ ರಾಜಕೀಯ ಅಧಿಕಾರವನ್ನು ಕಳೆದುಕೊಳ್ಳಬೇಕು! ಹೀಗೆ ತಮ್ಮೆಲ್ಲ ವೈಭವ ಅಂತಸ್ತು, ಅಧಿಕಾರವನ್ನು ಕಾಲಕ್ರಮೇಣ ಕಳೆದುಕೊಂಡು ಹೀನಾಯ, ಅಸ್ಪೃಶ್ಯ ಸಮಾಜವಾಗಿ ಮಾರ್ಪಾಡಾಗಿದ್ದು ನಾಗ ಜನಾಂಗ! ಈ ಜನಾಂಗದವರೇ ಅಸುರರು, ರಾಕ್ಷಸರು, ದೈತ್ಯರು ಎಂಬ ಪ್ರಬಲ ಗಣಗಳು! ಇವರ ಪಳೆಯುಳಿಕೆಗಳೇ ಇಂದು ನಾವು ನೋಡುತ್ತಿರುವ ಇಲ್ಲಿನ ಮೂಲನಿವಾಸಿಗಳು; ಅಂದರೆ ಅಸ್ಪೃಶ್ಯರು. ಶೂದ್ರರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರು!

ಇದೇ ನಾಗ ಜನಾಂಗದ ಪ್ರಬಲ ದೊರೆ, ಮಹಾನ್ ಬೌದ್ಧ ಭಿಕ್ಕು, ಅಹಿಂಸಾವಾದಿ, ಮಹಾಜ್ಞಾನಿ, ರಾಕ್ಷಸ ಗಣದ ನಾಯಕ, ಅಮೋಘ ಸಂಗೀತಕಾರ, ಚಕ್ರವರ್ತಿ ರಾವಣನನ್ನು ಪರಿಚಯ ಸದ್ಯದ ಅಗತ್ಯವಾಗಿದೆ. ದುರಂತವೆಂದರೆ ದಸರಾ ಉತ್ಸವದ ಸಮಯದಲ್ಲಿ ಉತ್ತರ ಭಾರತದ ದೆಹಲಿಯಲ್ಲಿ ರಾಮಲೀಲಾ ಹಾಡುವಾಗ ರಾವಣ, ಕುಂಭಕರ್ಣ, ಮೇಘನಾದ ಇವರುಗಳ ಪ್ರತಿಕೃತಿಗಳನ್ನು ಸುಟ್ಟರು. ಇದು ಇನ್ನೂ ಬೇರೆ ಬೇರೆ ರಾಜ್ಯಗಳಲ್ಲೂ ಸಹ ನಡೆಯುತ್ತದೆ! ಇದರಲ್ಲಿ ಖುದ್ದು ಭಾಗವಹಿಸಿ ನೂರಾರು ಮನುವಾದಿಗಳು ಆನಂದ ವ್ಯಕ್ತಪಡಿಸಿದರು. ಏಕೆಂದರೆ ಅವರಿಗೆ ತಮ್ಮ ಇತಿಹಾಸದ ಪ್ರಜ್ಞೆಯಿದೆ! ಆದರೆ ನಮ್ಮ ಪೂರ್ವಿಕನಾದ ರಾವಣನನ್ನು ನಾವೇ ಸುಟ್ಟು ಆನಂದಿಸುತ್ತೇವಲ್ಲ ಇದೇನಿದು ನಮ್ಮ ದುರಂತ? ಯಾರು ಆ ರಾವಣ?

[Dr.K. Jamnandas ರವರ #Ravana_A_Nonvoilent_Gana_Nayaka_Chief_of_Republics_contemporary_with_the_Buddha ಎನ್ನುವ ಲೇಖನದಲ್ಲಿ ಅಧ್ಯಾಯ 6] ರಾವಣನನ್ನು ಗೌತಮ ಬುದ್ಧರ ಸಮಕಾಲೀನ ಎಂದಿದ್ದಾರೆ!

ಆರ್ಯ ಕುಲಪ್ರವರ್ತಕರಿಗೆ ಇತಿಹಾಸ ಪ್ರಜ್ಞೆಯಿದೆ. ಅವರಿಗೆ ರಾವಣನನ್ನು ತಾವು ಏಕೆ ಸುಟ್ಟಿದ್ದು ಎಂಬ ಅರಿವಿದೆ. ಆದರೆ ಅವರ ಜೊತೆ ಸೇರಿ ಇಲ್ಲಿನ ಮೂಲನಿವಾಸಿಗಳು ರಾವಣನನ್ನು ತಮ್ಮ ಕೈಯಾರೆ ತಮ್ಮ ಹಿರಿಯರನ್ನೆ ತಮ್ಮ ಪೂರ್ವಿಕರನ್ನೆ ಸುಡುತ್ತಿದ್ದಾರಲ್ಲ, ಇದನ್ನು ನೋಡಿ ಅಥವಾ ದುಃಖವಾಗುತ್ತಿದೆ. “ರಾವಣ, ಕುಂಭಕರ್ಣರನ್ನು ನಾವು ಯಾಕೆ ಸುಡುತ್ತೇವೆ” ಎಂಬ ಪ್ರಜ್ಞೆಯಿಲ್ಲ ! ಮೇಲುನೋಟಕ್ಕೆ “ರಾವಣ ಕೆಟ್ಟವನು ರಾಮ ಒಳ್ಳೆಯವನು” ಎಂದಷ್ಟೇ ತಿಳಿದಿರುವ ನಮಗೆ “ರಾವಣ ಯಾರು? ಯಾಕೆ ವೈದಿಕರು ಅವನನ್ನು ದ್ವೇಷಿಸುತ್ತಾರೆ?” ಎಂಬುದರ ಅರಿವಿಲ್ಲ ! ಬಂಧುಗಳೇ ಬನ್ನಿ ಮಹಾನ್ ನಾಯಕ ರಾವಣನನ್ನು ಪರಿಚಯ ಮಾಡಿಕೊಳ್ಳೋಣ.

ರಾವಣನು ಪುಲಸ್ತ್ಯ ವಂಶದ ವಿಶ್ರವಸುವಿನ ಮೊಮ್ಮಗ. ಪುಲಸ್ತ್ಯ ವಂಶದ ಅಸುರರು ಜಗತ್ತಿನ ನಾನಾ ಭಾಗಗಳಲ್ಲಿ ಆಳ್ವಿಕೆ ಮಾಡಿದವರು! ಸೋಮಾಲಿಯಾ, ಮಾಲ್ಡೀವ್ಸ್, ಸುಮಾತ್ರ, ಜಾವಾ, ಸಿಂಹಳ, ಕೊಂಕಣ ಮುಂತಾದ ಕಡೆಗಳಲ್ಲಿ ರಾಜ್ಯಭಾರ ಮಾಡಿದ ಇವರನ್ನು “ಅಸುರ ಸಾಮ್ರಾಟರು” ಎಂದು ಕರೆಯುತ್ತಿದ್ದರು. ಆದಿವಾಸಿಗಳ ಕುಲಗಳು ಪ್ರಾಣಿ, ಪಕ್ಷಿ, ಮರ ಇವುಗಳ ಹೆಸರುಗಳನ್ನು ಹೊಂದಿದ್ದವು. ಆದಿವಾಸಿ ಭಾಷೆಯಲ್ಲಿ ‘ಪುಲೈ’ ಎಂದರೆ ‘ಸಿಂಹ’ ಎಂದು ಹೆಸರು. ಪುಲಸ್ತ್ಯ ವಂಶವು ಪುಲೈ ಎಂದು ಹೆಸರು ಪಡೆದಿತ್ತು. ಪ್ರಕೃತಿಯ ಆರಾಧಕನಾದ ರಾವಣನನ್ನು ವಾಲ್ಮೀಕಿಯೇ ಸ್ವತಃ ‘ಮಹಾತ್ಮ’ ಎಂದು ಕರೆದಿದ್ದಾನೆ.

ತೃಣಬಿಂದು ಪುಲಸ್ತ್ಯ ನ ಹೆಂಡತಿ. ವಿಶ್ರವಸುವಿನ ಹೆಂಡತಿ ಕೇಕಯ, ಆಕೆ ರಾವಣನ ತಾಯಿ. ವಿಶ್ರವಸುವಿನ ಇನ್ನೊಂದು ಹೆಸರು ಕುಬೇರ ವಿರೇಂದು. ಇವನ ಮಗನೇ ರಾವಣ! ರಾವಣನ ಪೂರ್ತಿ ಹೆಸರು ಏನು ಎಂಬುದನ್ನು [ರಾಮದೇವ್ ಪಾಸ್ವಾನರ ಪುಸ್ತಕ “ಭಾರತ್ ಸೆ ಆರ್ಯರಲ್ಲಿ ರಾ ಜುನೇರ್ ವ ರೇಂದು ನ ರೇಂದರ್ ಎಂದು ಹೇಳಿದೆ.] ಇದರ ಸಂಕ್ಷಿಪ್ತ ರೂಪ (Ra Va Na) ರಾವಣ!

ಚಂದ್ರಿಕ ಪ್ರಸಾದ್ ಜಿದ್ನಾಸು ಎಂಬ ಪ್ರಸಿದ್ಧ ಇತಿಹಾಸಕಾರರು ‘ರಾವಣನ ಗೋಂಡ ಆದಿವಾಸಿ ಕುಲಕ್ಕೆ ಸೇರಿದವನು ಮತ್ತು ಅವನ ಆಡಳಿತ ಭಾರತ ದೇಶದ ಮಧ್ಯಭಾಗದಿಂದ ಸಿಂಹಳದವರೆಗೂ ಹಬ್ಬಿತ್ತು’ ಎಂದು ಅಭಿಪ್ರಾಯಪಟ್ಟಿದ್ದಾರೆ.

[ಪೂರ್ಣಲಿಂಗಮ್_ಪಿಳ್ಳೆ ಎಂಬ ಇತಿಹಾಸಕಾರರು ತಮ್ಮ ‘ರಾವಣ ದ ಕಿಂಗ್ ಆಫ್ ಲಂಕಾ’ ಎಂಬ ಕೃತಿಯಲ್ಲಿ Ravana is represented as the Titanic. Inotherwords the auntibrahmnical aboriginal fetish worshipping monarch of Lanka of Ceylon’ ಎಂದಿದ್ದಾರೆ.]

ಮೂಲತಃ ರಾವಣ ಪ್ರಕೃತಿ ಆರಾಧಕನಾಗಿದ್ದು ಆರ್ಯರು ನಡೆಸುತ್ತಿದ್ದ ಯಜ್ಞಯಾಗಗಳನ್ನು ಸರ್ವನಾಶ ಮಾಡಿ ಸಾವಿರಾರು ಗಿಡಮರಗಳನ್ನು, ಪ್ರಾಣಿಗಳನ್ನು ರಕ್ಷಿಸುವುದಕ್ಕೆಂದೇ ಪ್ರಬಲ ದೈತ್ಯ ಸೇನೆಯನ್ನು ಹೊಂದಿದ್ದ. ಆರ್ಯರು ತಯಾರಿಸುತ್ತಿದ್ದ ಹೇರಳ, ‘ಮಧುಪರ್ಕ’ವನ್ನು ಭೂಮಿಗೆ ಚೆಲ್ಲಿ ಅವರಿಗೆ ದಕ್ಕದಂತೆ ಮಾಡಿ ಗೋಬ್ರಾಹ್ಮಣರನ್ನು ಕಾಡಿನಿಂದ ಅಟ್ಟಿಸಿಕೊಂಡು ಹೋಗಲೆಂದೇ ಸಾವಿರಾರು ಅಸುರರನ್ನು ನೇಮಿಸಿದ್ದ ! ಸದಾ ಕಾಲವೂ ಎಚ್ಚರವಾಗಿದ್ದು ರಾತ್ರಿ ವೇಳೆ ಬೆಳಗು ಹಸುಗಳನ್ನು, ಕುದುರೆಗಳನ್ನು, ಆಡುಗಳನ್ನು, ಕುರಿಗಳನ್ನು ಈ ಋಷಿ-ಮುನಿಗಳು ಕದ್ದು ತಮ್ಮ ಆಶ್ರಮಗಳಲ್ಲಿ ಕಟ್ಟಿಕೊಳ್ಳುತ್ತಿದ್ದವದನ್ನು ತಪ್ಪಿಸಲು ಅಸುರರು ನಾನಾ ಸಾಹಸಗಳನ್ನು ಮಾಡಬೇಕಾಗಿತ್ತು. ಕಾಡಿನಲ್ಲಿ ಆರ್ಯರು ಅಳೆಯುತ್ತಿದ್ದುದು, ಋಷಿಗಳು ಕಾಡಿನಲ್ಲಿ ವಾಸವಾಗಿದ್ದುದು ಎಲ್ಲವೂ ಆಹಾರಕ್ಕೆ ಹೊರತು ಯಾವ ಧರ್ಮ ರಕ್ಷಣೆಗೂ ಅಲ್ಲ. ಆರ್ಯರಿಗೆ ಉನ್ನತಮಟ್ಟದ ಜೀವನದ ಕಲ್ಪನೆಯೇ ಇರಲಿಲ್ಲ ! ಆ ರೀತಿ ಭವ್ಯ ಬದುಕನ್ನು ಬದುಕಿದವರು ಅಸುರರು; ಇಲ್ಲಿನ ಮೂಲನಿವಾಸಿಗಳು!

ಮರಾಠಿ ವಿಶ್ವಕೋಶ ಪುಟ 781 ರಲ್ಲಿ ವಿಶ್ವಾಮಿತ್ರನ ಯಜ್ಞ ಮಾಡುತ್ತಿದ್ದಾಗ ಇದನ್ನು ನಾಶಪಡಿಸಲು ಮಾರೀಚ ಮತ್ತು ಸುಬಾಹು ಎಂಬ ಅಸುರರು ಬಂದಾಗ ಅವರನ್ನು ಅಟ್ಟಿಸಿಕೊಂಡು ಹೋದವರು ರಾಮ ಲಕ್ಷ್ಮಣರು ಎಂಬ ಉಲ್ಲೇಖವಿದೆ! ರಾಮ ಲಕ್ಷ್ಮಣ ಕಾಡಿಗೆ ಬಂದದ್ದು ಅಸುರರನ್ನು ಹಾಳುಮಾಡಲು ಮತ್ತು ಋಷಿಗಳಿಗೆ ಯಜ್ಞದಲ್ಲಿ ನೆರವಾಗಲೇ ಹೊರತು ಇನ್ಯಾವ ಲೋಕ ಕಲ್ಯಾಣಕ್ಕಾಗಲಿ ಅಲ್ಲ ! ಯಾಗಗಳನ್ನು ನಾಶಮಾಡಿದ ಅಸುರರನ್ನು ಮನಬಂದಂತೆ ಹೀಯಾಳಿಸುವ ಆರ್ಯರು ಜಗತ್ತಿನ ಪ್ರಥಮ ಜೀವವಿರೋಧಿಗಳು! ಮೂಲನಿವಾಸಿಗಳ ಬದುಕು, ಸಂಸ್ಕೃತಿಯನ್ನು ತನ್ನ ಪ್ರಾಣಕ್ಕಿಂತಲೂ ಹೆಚ್ಚು ಪ್ರೀತಿಸುತ್ತಿದ್ದ ರಾವಣ ಆರ್ಯರ ವೈರಿಯಾಗಿದ್ದುದು ಸರಿ! ಇದರಲ್ಲಿ ತಪ್ಪೇನು? [ಚಾತುರ್ಸೇ ನ್ ಎಂಬ ಲೇಖಕರ ಕೃತಿ “Wayam Raksham” ನಲ್ಲಿ ರಾಕ್ಷಸರು Wayam Rakshan ಎನ್ನುವ ರಕ್ಷಕರನ್ನು ಹೊಂದಿದ್ದು, ಅವರು ಯಜ್ಞಗಳನ್ನು ನಾಶಪಡಿಸುವ ಕೆಲಸವೊಂದನ್ನೇ ಮಾಡುತ್ತಿದ್ದರು ಎಂದು ಹೇಳಿದ್ದಾರೆ!]
‘Wayam Raksham’ ಎಂದರೆ ‘We Protect’ ಎಂದು ಅರ್ಥ.

ಮುಂದುವರೆಯುವುದು…..

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ಬಹಿರಂಗ17 hours ago

ಭಾರತೀಯ ರಿಸರ್ವ್ ಬ್ಯಾಂಕ್(ಆರ್.ಬಿ.ಐ) ಸ್ಥಾಪನೆಗೆ ಕಾರಣರಾದ ಬಾಬಾಸಾಹೇಬ್ ಅಂಬೇಡ್ಕರ್

ರಘೋತ್ತಮ ಹೊ.ಬ ಭಾರತೀಯ ರಿಸರ್ವ್ ಬ್ಯಾಂಕ್ ಅಥವಾ ಆರ್ ಬಿ ಐ ಅಕ್ಷರಶಃ ಬಾಬಾಸಾಹೇಬ್ ಅಂಬೇಡ್ಕರರ ಮೆದುಳಿನ ಕೂಸು Brain child of Babasaheb. ಹೇಗೆಂದಿರಾ? ಇಲ್ಲಿ...

ಅಂತರಂಗ20 hours ago

ಅರಿಮೆಯ ಅರಿವಿರಲಿ-4 : ಒಳಗತ್ತಲ ಕಳ್ಳರು

ಯೋಗೇಶ್ ಮಾಸ್ಟರ್ ಅಡ್ಡಗಾಲಾಗುವ ಅರಿಮೆಗಳು ಅದೊಂದು ಮಗು. ಇತರ ಎಲ್ಲಾ ಮಕ್ಕಳು ಸಂತೋಷದಿಂದ ಕುಣಿದುಕೊಂಡು ಆಡುವಾಗ ತಾನೂ ಹಾಗೆಯೇ ಹೋಗಿ ಕುಣಿಯಬೇಕು ಎಂದು ಆಸೆ ಪಡುತ್ತದೆ. ಆದರೆ...

ದಿನದ ಸುದ್ದಿ22 hours ago

ದಾವಣಗೆರೆ | ಗ್ಯಾಸ್ ಸಿಲಿಂಡರ್ ವಿತರಕನ ಮೇಲೆ ಪೊಲೀಸರಿಂದ ಹಲ್ಲೆ ; ಆರೋಪ

ಸುದ್ದಿದಿನ,ದಾವಣಗೆರೆ : ಜಿಲ್ಲೆಯ, ಚನ್ನಗಿರಿ ತಾಲೂಕಿನ ನವಿಲೇಹಾಳು ಗ್ರಾಮದ ಗ್ಯಾಸ್ ಸಿಲಿಂಡರ್ ವಿತರಕ ರಜಾಕ್ ಎಂಬುವವರ ಮೇಲೆ ಮಂಗಳವಾರ ಪೊಲೀಸರು ಥಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ....

ದಿನದ ಸುದ್ದಿ1 day ago

ದಾವಣಗೆರೆ | ನಾಳೆಯಿಂದಲೇ ಹೋಟೆಲ್ ಕಾರ್ಯಾರಂಭಕ್ಕೆ ಸೂಚನೆ ; ತಾವಿರುವಲ್ಲಿಯೇ ಪಡಿತರ ಪಡೆಯಿರಿ: ಜಿಲ್ಲಾಧಿಕಾರಿ

ಸುದ್ದಿದಿನ,ದಾವಣಗೆರೆ : ಕೊರೊನಾ ವೈರಸ್ ಹಿನ್ನೆಲೆಯಲ್ಲಿ ದೇಶದಲ್ಲಿ ಲಾಕ್‍ಡೌನ್‍ನಿಂದ ಸಿಲುಕಿಕೊಂಡಿರುವ ನೆರೆ ಜಿಲ್ಲೆಗಳ ಹಾಗೂ ನೆರೆ ರಾಜ್ಯಗಳ ಸಾರ್ವಜನಿಕರು ತಮ್ಮ ಬಳಿ ಪಡಿತರ ಚೀಟಿ ಇದ್ದಲ್ಲಿ ತಾವಿರುವಲ್ಲಿಯೇ...

ಅಂತರಂಗ2 days ago

ಅರಿಮೆಯ ಅರಿವಿರಲಿ-3 : ಮನೋಬರಹವುಂಟು ಹಣೆಬರಹವಿಲ್ಲ

ಯೋಗೇಶ್ ಮಾಸ್ಟರ್ ಸಹಜವಾಗಿ ಅಥವಾ ಸರಳವಾಗಿ ಇರಬಹುದಾದದ್ದು ತೊಡಕುಗಳನ್ನೋ, ಜಟಿಲತೆಯನ್ನೋ ಅಥವಾ ಸಂಕೀರ್ಣತೆಯನ್ನೋ ಹೊಂದಿರುವಂತಹದ್ದಕ್ಕೆ ಕಾಂಪ್ಲೆಕ್ಸ್ ಅಂತ ಅನ್ನುತ್ತೇವೆ. ನನ್ನ ತಿಳುವಳಿಕೆಯ ಪರಿಮಿತಿಯಲ್ಲಿ ಮನುಷ್ಯನ ಮನಸ್ಸು ಜಗತ್ತಿನಲ್ಲಿರುವ...

ದಿನದ ಸುದ್ದಿ2 days ago

ಉಳ್ಳವರ ಭಾರತದಲ್ಲಿ ನರಳುತ್ತಿರುವ ಬಡ ಭಾರತ

ಜಗದೀಶ್ ಕೊಪ್ಪ ನಮ್ಮ ನಡುವಿನ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಹಾಗೂ ಮಾನವೀಯ ಮುಖದ ಹೃದಯವಂತ ಅಮಾರ್ತ್ಯ ಸೇನ್ ದಶಕದ ಹಿಂದೆ ಭಾರತದ ಅಭಿವೃದ್ಧಿಯನ್ನು ವ್ಯಾಖ್ಯಾನಿಸುತ್ತಾ, “ ಭಾರತದಲ್ಲಿ ಎರಡು...

ದಿನದ ಸುದ್ದಿ3 days ago

ಟಿಕ್ ಟಾಕ್ ಹಾಡಿಗೆ ದಾವಣಗೆರೆ ಕಾರ್ಪೊರೇಟರ್ ಡ್ಯಾನ್ಸ್ ವಿಡಿಯೋ ವೈರಲ್ : ಲಾಕ್ ಡೌನ್ ವೇಳೆ ಇದೆಲ್ಲಾ ಬೇಕಿತ್ತಾ ? ನೆಟ್ಟಿಗರ ಆಕ್ರೋಶ

ಸುದ್ದಿದಿನ,ದಾವಣಗೆರೆ : ಕೊರೊನಾ ವೈರಸ್ ನಿಂದ‌ ಇಡೀ ದೇಶ ಭಯದ ವಾತಾವರಣದಲ್ಲಿದೆ. ಪ್ರಧಾನಿಗಳ ಆದೇಶದಂತೆ ದೇಶವೇ ಲಾಕ್ ಡೌನ್ ಆಗಿದ್ದು, ಕೊರೊನಾ ವೈರಸ್ ಅನ್ನು ಹೇಗೆಲ್ಲಾ ತಡೆಯಬೇಕು...

ಅಂತರಂಗ3 days ago

ಅರಿಮೆಯ ಅರಿವಿರಲಿ – 2 : ಚಿತ್ರಗನ್ನಡಿ ದ್ವಂದ್ವ

ಯೋಗೇಶ್ ಮಾಸ್ಟರ್ ಮುಗ್ಧರು ಮತ್ತು ಮೂರ್ಖರು; ಈ ಇಬ್ಬರೂ ಸಾಮಾನ್ಯವಾಗಿ ದ್ವಂದ್ವದಿಂದ ಬೇಗ ಪಾರಾಗುತ್ತಾರೆ. ಸಾಮಾನ್ಯವಾಗಿ ಅವರಿಗೆ ದ್ವಂದ್ವವೇ ಆಗದು. ಮೊದಲು ಮೊಸರನ್ನ ತಿನ್ನಲಾ ಅಥವಾ ಪುಳಿಯೋಗರೆ...

ದಿನದ ಸುದ್ದಿ3 days ago

ಕೋವಿಡ್-19 ಕೋಲಾಹಲ

ಡಾ.ಎಚ್.ಎಸ್.ಅನುಪಮಾ ಬೆಳಗಾವಿ ಹತ್ತಿರದ ಹಳ್ಳಿಗೆ ಚೀನಾದಿಂದ ಟೆಕ್ಕಿ ದಂಪತಿಗಳು ಬಂದಿಳಿದರು. ಮೊದಲಾಗಿದ್ದರೆ ತಮ್ಮೂರಿಗೆ ವಿದೇಶದಿಂದ ಬಂದವರ ಕಾಣಲು ಹಳ್ಳಿಯ ಅಬಾಲವೃದ್ಧ ಸ್ತ್ರೀಪುರುಷರಾದಿಯಾಗಿ ಎಲ್ಲರೂ ಕುತೂಹಲಿಗಳಾಗಿರುತ್ತಿದ್ದರು. ಕರೆಕರೆದು ಮಾತಾಡಿಸುತ್ತಿದ್ದರು....

ಲೈಫ್ ಸ್ಟೈಲ್3 days ago

ಪಕ್ಷಿ ಪರಿಚಯ | ತೇನೆ ಹಕ್ಕಿ

ಭಗವತಿ ಎಂ.ಆರ್ ಹಕ್ಕಿ ಲೋಕದ ಸೂಕ್ಷ್ಮಗ್ರಾಹಿ ಇದು.ಸಂಸ್ಕೃತದಲ್ಲಿ ಟಿಟ್ಟಿಭ ಅಂತಲೂ ಕರೆಯುತ್ತಾರೆ.ಮನುಷ್ಯರನ್ನು ಕಂಡರೆ ಬೆದರಿ ಮಾರುದೂರ ಓಡುತ್ತವೆ.ಎಷ್ಟೇ ದೂರದಲ್ಲಿದ್ದರೂ, ಅದರ ಸಮೀಪಿಸುತ್ತಿದ್ದೇವೆ ಅನ್ನುವುದು ಅದರ ಗಮನಕ್ಕೆ ಬಂದರೆ...

Trending