Connect with us

ಬಹಿರಂಗ

ಜಾತಿಗ್ರಸ್ತ ಮನಸ್ಸುಳ್ಳ ಭಾರತದಲ್ಲಿ : ಡಾ. ಬಿ.ಆರ್. ಅಂಬೇಡ್ಕರ್ ಅವರ ಈ ಬರಹ ಮಿಸ್ ಮಾಡ್ದೆ ಓದಿ….!

Published

on

ಭಾರತದಂಥ ಜಾತಿಗ್ರಸ್ತ ಮನಸ್ಸಳ್ಳ ಒಂದು ಪರಿಸರದಲ್ಲಿ ಅಧಿಕಾರದಲ್ಲಿರುವವರು ತಮ್ಮ ಜಾತಿಯವರಲ್ಲದವರ ಬಗ್ಗೆ ತಾರತಮ್ಯ ಮಾಡುವುದಿಲ್ಲವೆಂದು ಭಾವಿಸುವುದು ಕಷ್ಟ. ಈ ಪರಿಸರದಲ್ಲಿ ಅಸ ಶರನು ನಡೆಸಿಕೊಳುವುದಂತೂ ಅತಿನಿಕಷವಾಗಿ, ಹಿಂದೂ ಅಧಿಕಾರಿಗಳು ಅಸಶ್ರರನ್ನು ನಡೆಸಿಕೊಳ್ಳುವ ಬಗ್ಗೆ 5ನೇ ನವೆಂಬರ್ 1892ನೇ, ಸಂಖ್ಯೆ 723 ಮದ್ರಾಸ್ ಸರ್ಕಾರದ ಕಂದಾಯ ಮಂಡಳಿಯ ನಡಾವಳಿ ಒಂದು ಸ್ಪಷ್ಟ ಚಿತ್ರಣ ನೀಡುತ್ತದೆ. ಆ ವರದಿ ಹೇಳುತ್ತದೆ. 134ಇಲ್ಲಿಯವರೆಗೆ ಅಸ್ಪಶ್ಯರ ಮೇಲೆ ನಡೆಯುತ್ತಿದ್ದ ವಿವಿಧ ರೀತಿಯ ದಬ್ಬಾಳಿಕೆಗಳ ಸ್ವರೂಪ ಮಾತ್ರ ತಿಳಿದಿತ್ತು. ಅದನ್ನು ಸ್ವಲ್ಪ ವಿವರಿಸುವ ಅಗತ್ಯ ಇದೆ.

  • ಪಾರಯ್ಯ ( ಮದ್ರಾಸ್ ಪ್ರಾಂತದ ಒಂದು ಅಸ್ಪಶ್ಯಶಾತಿ ) ಜನರನ್ನು ಶಿಕ್ಷಿಸಲು ಅವರ ಯಜಮಾನರು – ಅವರ ಮೇಲೆ ಗ್ರಾಮ ಪಂಚಾಯಿತಿ ಅಥವಾ ಕ್ರಿಮಿನಲ್ ಕೋರ್ಟುಗಳಲ್ಲಿ ಸುಳ್ಳು ಕೇಸುಗಳನ್ನು ಹಾಕುತ್ತಾರೆ.
  • ಸರ್ಕಾರಕ್ಕೆ ಅರ್ಜಿಸಲ್ಲಿಸಿ ಪಾರಯ್ಯ ಕೇರಿಗಳ ಸುತ್ತ ಇರುವ ಹಾಲಿ ಜಮೀನನ್ನು ಮಂಜೂರು ಮಾಡಿಸಿಕೊಂಡು ಅವರ ದನಕರುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು, ಅಥವಾ ಅವರು ದೇವಸ್ಥಾನಕ್ಕೆ ಹೋಗುವ ದಾರಿಗೆ ಅಡ್ಡಬಂದು ತೊಂದರೆ ಕೊಡುವುದು.
  • ಪಾರಯ್ಯ ಕೇರಿಗಳಿರುವ ಪ್ರದೇಶವನ್ನು ಮಿರಾಸಿದಾರರು ತಮ್ಮ ಹೆಸರಿನಲ್ಲಿರುವಂತೆ ತಪ್ಪಾಗಿ ಸೇರಿಸಿಕೊಂಡು ತಗಾದೆ ಮಾಡುವುದು.
  • ಪಾರಯ್ಯಗಳ ಗುಡಿಸಿಲುಗಳನ್ನು ಕೆಡವಿ ಅವರ ಮನೆಯ ಅಕ್ಕಪಕ್ಕ ಇರುವ ಬೆಳೆಯನ್ನು ನಾಶಮಾಡುವುದು.
  • ಲಾಗಾಯು ಮಾಡುತ್ತಿದ್ದ ಭೂಮಿಯ ಮೇಲಿನ ಅವರ ಹಕ್ಕು ನಿರಾಕರಿಸುವುದು. ಪಾರಯ್ಯಗಳ ಜಮೀನುಗಳಲ್ಲಿನ ಫಸಲನ್ನು ಬಲಾತ್ಕಾರವಾಗಿ ಕಟಾವು ಮಾಡಿ, ಅವರು ಅದನ್ನು ವಿರೋಧಿಸಿದಾಗ ಅವರ ಮೇಲೆ ಕಳ್ಳತನ ಮತ್ತು ದೊಂಬಿಯ ಆಪಾದನೆ ಮಾಡುವುದು.
  • ಅವರಿಗೆ ಮೋಸಮಾಡಿ ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ, ಅವರ ನಾಶಕ್ಕೆ ಕಾರಣರಾಗುವುದು.
  • ಪಾರಯ್ಯ ಭೂಮಿಗಳಿಗಿರುವ ನೀರಿನ ಆಸರೆಯನ್ನು ತಪ್ಪಿಸುವುದು.
  • ಉಪಗೇಣಿದಾರರ ಭೂಮಿಯನ್ನು ‘ ಗೇಣಿ ಬಾಕಿಯಿದೆ ” ಎಂಬ ನೆಪದಲ್ಲಿ ಕಾನೂನಿನ ಯಾವ ನಿಯಮವನ್ನೂ ಪಾಲಿಸದೆ ವಶಕ್ಕೆ ತೆಗೆದುಕೊಳ್ಳುವುದು .

“ 135, ಈ ಅನ್ಯಾಯಗಳ ವಿರುದ್ದ ದೂರು ಕೊಡಲು ಸಿವಿಲ್ ಮತ್ತು ಕ್ರಿಮಿನಲ್ ನ್ಯಾಯಾಲಯಗಳಿವೆ. ಎಂದು ಹೇಳಲಾಗುತ್ತದೆ. ಕೋರ್ಟುಗಳಿವೆ ನಿಜ. ಆದರೆ ಭಾರತ ದೇಶ ಕೋರ್ಟು ಮೆಟ್ಟಿಲು ಹತ್ತಬಲ್ಲ ಛಾತಿ ಉಳ್ಳವರನ್ನು ಸೃಷ್ಟಿಸುತ್ತಿಲ್ಲ. ನ್ಯಾಯಾಲಯಕ್ಕೆ ಹೋಗಲು ಬೇಕಾದ ಹಣ, ಖಟ್ಟೆ ನಡೆಯುವಷ್ಟು ಕಾಲ ಜೀವಿಸಲು ಬೇಕಾದ ಸಂಪತ್ತು ಬೇಕಲ್ಲವೇ ? ಮೇಲಾಗಿ ಈ ರೀತಿಯ ಬಹಳಷ್ಟು ಕೇಸುಗಳ ಮೊದಲನೆ ಕೋರ್ಟಿನ ಹಂತದಲ್ಲೇ ತೀರ್ಮಾನವಾಗಿಬಿಡುತ್ತದೆ. ಈ ಕೋರ್ಟುಗಳು ಅನೇಕವೇಳೆ ಮಹಾಭ್ರಷ್ಟ ಅಧಿಕಾರಿಗಳ ಕೈಯಲ್ಲಿರುತ್ತವೆ. ಹಾಗೂ ಹಲವಾರು ಕಾರಣಗಳಿಗಾಗಿ ಇವರು ತಮ್ಮ ವರ್ಗಕ್ಕೆ ಸೇರಿದವರಾದ ಭೂಮಾಲಿಕರ ಪರವಾಗಿರುತ್ತಾರೆ.

“ 136, ಈ ಅಧಿಕಾರಿವರ್ಗ ಬೇರೆ ಅಧಿಕಾರಿಗಳ ಮೇಲೆ ಬೀರುವ ಪ್ರಭಾವದ ಬಗ್ಗೆ ಹೆಚ್ಚು ಹೇಳಬೇಕಾದದ್ದೇನೂ ಇಲ್ಲ. ಭಾರತೀಯ ಅಧಿಕಾರಗಳ ಮೇಲಿನ ಅವರ ಪ್ರಭಾವ ವಿಪರೀತವಾದದ್ದಾದರೆ, ಯೂರೋಪಿಯನ್ನರ ಮೇಲಿನ ಪ್ರಭಾವವಂತೂ ಹೇಳಲಸದಳ. ಮೇಲಿನಿಂದ – ಕೆಳಗಿನವರೆಗಿನ ಎಲ್ಲ ಆಫೀಸುಗಳನ್ನೂ ಈ ಅಧಿಕಾರಗಳ ಪ್ರತಿನಿಧಿಗಳು ತುಂಬಿರುತ್ತಾರೆ. ಅವರ ಹಿತಕ್ಕೆ ಧಕ್ಕೆ ತರುವಂಥದ್ದೇನೂ ಆಗಲು ಸಾಧ್ಯವಿಲ್ಲ. ಆದರೂ ಒಂದು ಕೇಸಿನ ದಾಖಲಾತಿಯಿಂದ ಹಿಡಿದು ಅದರ ತೀರ್ಮಾನವಾಗುವ ಎಲ್ಲ ಹಂತಗಳಲ್ಲೂ ಅಧಿಕಾರಗಳ ಪ್ರಭಾವ ಎಡೆಬಿಡದೆ ನಡೆದೇ ಇರುತ್ತದೆ.

” ಪಂಜಾಬ್ ಭೂ ವರ್ಗಾವಣೆಗೆ ಕಾಯ್ದೆಯ ಶಾಸಕಾಂಗವೊಂದು ಅಸ್ಪಶ್ಯರ ಮೇಲೆ ದಬ್ಬಾಳಿಕೆ ನಡೆಸುವುದಕ್ಕೊಂದು ನಿದರ್ಶನ. ಬಹುಸಂಖ್ಯಾತರ ದಬ್ಬಾಳಿಕೆಯಿಂದ ಹಲವಾರು ಅಲಸಂಖ್ಯಾತರು ನರಳುತ್ತಿರಬಹುದು. ಆದ್ದರಿಂದಲೇ ಭಾರತದ ಎಲ್ಲ ಪ್ರಜೆಗಳಿಗೂ ಕಾನೂನಿನ ರಕ್ಷಣೆ ಮತ್ತು ಪ್ರಯೋಜನ ಸಿಗಬೇಕೆಂಬ ನಿಯಮ ಇರತಕ್ಕದ್ದು. ಅಮೆರಿಕಾ ಸಂಯುಕ್ತ ಸಂಸ್ಥಾನದ ಕಾಂಗ್ರೆಸ್ಸು ಇದೇ ರೀತಿಯ ನೀಗಳ ವಿರುದ್ದದ ದಬ್ಬಾಳಿಕೆಯ ವಿರುದ್ದ 1899ಮತ್ತು 1ಮಾರ್ಚ್ 1875 ರಲ್ಲಿ ಪಾಸು ಮಾಡಿದ ನಾಗರಿಕ ಹಕ್ಕುಗಳ ರಕ್ಷಣಾ ವಿಧಿಯಿಂದ ಈ ಕಲಮು 2 ರ ವಿವರಗಳನ್ನು ತೆಗೆದುಕೊಳ್ಳಲಾಗಿದೆ .

ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಬರೆಹಗಳು – ಭಾಷಣಗಳು : ಸಂಪುಟ – 1
ಖಂಡ 2

ಸುದ್ದಿದಿನ.ಕಾಂ|ವಾಟ್ಸಾಪ್|9986715401

ಬಹಿರಂಗ

ಹಿಂದೂ ಧರ್ಮದ ಪ್ರಗತಿಪರ ಮನಸ್ಸುಗಳ ಬೆಳವಣಿಗೆಯನ್ನು ಜಾತಿಮೀರಿ ಬೆಂಬಲಿಸೋಣ

Published

on

  • ರಘೋತ್ತಮ ಹೊ.ಬ

ನ್ನಯ್ಯಕುಮಾರನ ಭಾಷಣ ಮತ್ತು ಬೆಳವಣಿಗೆ ಬಗ್ಗೆ ಒಂದು ಸಣ್ಣ ಚರ್ಚೆ ನಡೆಯುತ್ತಿದೆ. ಮುಖ್ಯವಾಗಿ ಆತನ ಜಾತಿ ಭೂಮಿಹಾರ ಜಾತಿ ಬಗ್ಗೆ ಕೆಲವು ದಲಿತ ಯುವಕರು ಚರ್ಚೆ ನಡೆಸುತ್ತಿದ್ದಾರೆ. ಖಂಡಿತ, ಸದರಿ ಜಾತಿ ದೌರ್ಜನ್ಯ ಮಾಡಿರಬಹುದು. ಆದರೆ ಆ ಜಾತಿಯ ಎಲ್ಲಾ ಗುಣಗಳನ್ನು ಕನ್ನಯ್ಯರಂತಹವರಿಗೆ ಆರೋಪಿಸುವುದು ಥರವಲ್ಲ. ನಿಜ, ದಿ.ಗೌರಿ ಲಂಕೇಶ್ ರವರೊಡನೆ ಇಂತಹದ್ದೆ ಮಾದರಿಯ ಚರ್ಚೆಗಳಲ್ಲಿ ಹಿಂದೆ ನಾನೂ ಕೂಡ ಪಾಲ್ಗೊಂಡಿದ್ದೆ. ಆದರೆ ಬಾಬಾಸಾಹೇಬ್ ಅಂಬೇಡ್ಕರರ ಬರಹಗಳನ್ನು ಓದಿದ ನಂತರ ನನ್ನ ಆ ನಿಲುವಿನಲ್ಲಿ ಬದಲಾವಣೆ ಮಾಡಿಕೊಂಡೆ. ಯಾಕೆಂದರೆ ತಮ್ಮ ‘ರಾನಡೆ, ಗಾಂಧಿ, ಜಿನ್ನಾ’ ಎಂಬ ಕೃತಿಯಲ್ಲಿ ಅಂಬೇಡ್ಕರರು ಸಮಸ್ಯೆಗಳ ನಡುವೆಯೂ ಹಿಂದೂ ಧರ್ಮ ಬದುಕಲಿಕ್ಕೆ ಒಂದಷ್ಟು ಸಹನೀಯವಾಗಿದೆ ಎಂದರೆ ಅದಕ್ಕೆ ಎಂ.ಜಿ.ರಾನಡೆಯವರಂತಹ ಮನಸ್ಸುಗಳೇ ಕಾರಣ ಎನ್ನುತ್ತಾರೆ. ಆದ್ದರಿಂದ ಅಂಬೇಡ್ಕರರ ಈ ಅಭಿಪ್ರಾಯದ ಪ್ರಕಾರ ನಾವು ಪ್ರಗತಿಪರ, ಬುದ್ಧಿಜೀವಿ ಒಂದಷ್ಟು ವ್ಯಕ್ತಿಗಳ ಬೆಳವಣಿಗೆಯನ್ನು, ಚಿಂತನೆಗಳನ್ನು ಒಪ್ಪಿಕೊಳ್ಳಬೇಕಿದೆ.

ಯಾಕೆಂದರೆ ಕೋಮುವಾದದ ವಿಜೃಂಭಣೆಯ, ಅಸಮಾನತೆಯನ್ನೂ ಸಾಮರಸ್ಯದ ಹಿನ್ನೆಲೆಯಲ್ಲಿ ಸಮರ್ಥಿಸಿಕೊಳ್ಳುವಂತಹ ಇಂತಹ ಕೆಟ್ಟ ವಾತಾವರಣದಲ್ಲಿ ನಾವು ಸಮಾನತೆಯನ್ನು ಪ್ರತಿಪಾದಿಸುವ ಒಂದಷ್ಟು ಮನಸ್ಸುಗಳನ್ನು ದೇಶದ ಹಿತದೃಷ್ಟಿಯ ಹಿನ್ನೆಲೆಯಲ್ಲಿ ಬೆಂಬಲಿಸದೆಹೋದರೆ ಜನತೆ ತೊಂದರೆಗೆ ಸಿಲುಕಲಿದ್ದಾರೆ. ಹಾಗೆಯೇ ಭಾರತ ವೈವಿದ್ಯಮಯ ಜಾತಿ-ಪಂಥ- ವರ್ಗ-ಸಿದ್ಧಾಂತಗಳ ನಾಡು. ಈ ನಿಟ್ಟಿನಲ್ಲಿ ಇಲ್ಲಿ ಒಂದು ಜಾತಿಯ ಒಬ್ಬ ಪ್ರತಿಗಾಮಿಯಾದರೆ ಅದೇ ಜಾತಿಯ ಮತ್ತೊಬ್ಬ ಪ್ರಗತಿಪರ ಆಗಬಾರದು ಎಂಬ ನಿಯಮವೇನು ಇಲ್ಲ. ಯಾಕೆಂದರೆ ಚಿಂತನೆ ಅದು ವಯಕ್ತಿಕ. ವ್ಯಕ್ತಿ ವೈಭಿನ್ಯತೆಯನ್ನು ಅದು ಅವಲಂಬಿಸಿರುತ್ತದೆ, ಆತ ಕಲಿಯುವ ಓದುವ ಪುಸ್ತಕಗಳನ್ನು ಅವಲಂಬಿಸಿರುತ್ತದೆ. ಈ ಹಿನ್ನೆಲೆಯಲ್ಲಿ ವ್ಯಕ್ತಿ ಸಂಬಂಧಿತ ಜಾತಿಯನ್ನು ಆತನ ವ್ಯಕ್ತಿತ್ವಕ್ಕೆ ಆರೋಪಿಸುವುದು ತಪ್ಪು. ಹೀಗೆ ಆರೋಪಿಸುವುದರ ಮೂಲಕ ನಾವೇ ಪ್ರತಿಗಾಮಿಗಳನ್ನು ಒಂದೆಡೆ ಹೆಚ್ಚಿಸುವ ಕ್ರಿಯೆಯಲ್ಲಿ ತೊಡಗಿದಂತಾಗುತ್ತದೆಯೇ ಹೊರತು ಇದರಿಂದ ಮತ್ತೇನು ಪ್ರಯೋಜನವಾಗದು.

ಹಾಗೆಯೇ ಬಾಬಾಸಾಹೇಬ್ ಅಂಬೇಡ್ಕರರ ಚಿಂತನೆಗಳನ್ನು ಅಷ್ಟೆ. ಒಂದು ದ್ವೀಪದ ರೀತಿ ನಾವು ಅದನ್ನು ಮಾಡಬಾರದು. ಏಕೆಂದರೆ ಬಾಬಾಸಾಹೇಬ್ ಅಂಬೇಡ್ಕರ್ ಅದು ಒಂದು ವ್ಯಕ್ತಿಯಲ್ಲ, ಅದೊಂದು ಮಾನವ ಪರ ಚಿಂತನೆ, ಜೀವಪರ ಬೋಧನೆ. ಎಲ್ಲಾ ಶೋಷಿತರ ವಿಮೋಚನೆಗೂ ಅದು ಮದ್ದಾಗಲಿದೆ. ಈ ನಿಟ್ಟಿನಲ್ಲಿ ಅದನ್ನು ಹೀಗೆಯೇ ಇರಬೇಕು, ಅದನ್ನು ದಲಿತರೇ ಅಥವಾ ಅವರ ಬೆಂಬಲದ ಒಂದು ಪಕ್ಷವೇ ಮಾತಾಡಬೇಕು ಇತರರು ಮಾತಾಡಬಾರದು ಎಂಬ ಹಟ ತಪ್ಪು. ಬದಲಿಗೆ ಮಾನವಪರ ಚಿಂತನೆಗಳನ್ನು ಎಲ್ಲರೂ ವಿಶೇಷವಾಗಿ ಪ್ರಗತಿಪರರು ಬಳಸಿಕೊಳ್ಳಲು, ಮಾತಾಡಲು ಮುಕ್ತ ಅವಕಾಶ ಹೊಂದಿದ್ದಾರೆ ಎಂಬುದನ್ನು ಅವರ ಅನುಯಾಯಿಗಳು ಅರಿಯಬೇಕು. ಆಗಷ್ಟೆ ಬಾಬಾಸಾಹೇಬ್ ಅಂಬೇಡ್ಕರರ ಚಿಂತನೆಗಳು ಜಾತಿ ಮೀರಿ ಬೆಳೆಯುತ್ತದೆ. ಹಾಗೆಯೇ ಪ್ರಗತಿಪರ ಮನಸ್ಸುಗಳು ಹೆಚ್ಚು ಹೆಚ್ಚು ಬೆಳೆಯಲಿವೆ ಭಾರತ ಜಾತಿ ಮುಕ್ತ ವಾತಾವರಣದಲ್ಲಿ ಮಿಂದು ಏಳಲಿದೆ.

ಈ ನಿಟ್ಟಿನಲ್ಲಿ ಕನ್ನಯ್ಯಕುಮಾರ್ ಇರಲಿ ಮತ್ಯಾರೇ ಇರಲಿ ಅವರು ಬಾಬಾಸಾಹೇಬ್ ಅಂಬೇಡ್ಕರರ ವಿಚಾರಗಳನ್ನು ಮಾತಾಡಿದರೆ ದಲಿತರು ಅವರನ್ನು ಬೆಂಬಲಿಸಲಿ. ಪ್ರಗತಿಪರ ಎಲ್ಲರನ್ನೂ ಅಂತಹ ಮನಸ್ಸುಗಳನ್ನೂ ಮಾತಾಡುವವರನ್ನು ಬರೆಯುವವರನ್ನು ದಲಿತರು ಬೆಂಬಲಿಸಲಿ. ಆ ಮೂಲಕ ಎಲ್ಲರಿಗೂ ಜಾತಿಮೀರಿ ವೈಚಾರಿಕ ಚಿಂತನೆಗಳನ್ನು ಮಾಡುವ ಹಕ್ಕು ಎಲ್ಲರಿಗೂ ಇದೆ ಎಂಬುದನ್ನು ಎಲ್ಲರೂ ವಿಶೇಷವಾಗಿ ಕೆಲ ದಲಿತ ಯುವಕರು ಅರಿಯಲಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಬಹಿರಂಗ

ಪತ್ರಿಕಾ ಸ್ವಾತಂತ್ರ್ಯ ಎಷ್ಟು ಮುಖ್ಯ..?

Published

on

  • ವಿವೇಕಾನಂದ ಹೆಚ್.ಕೆ

ನಾವು ಪತ್ರಿಕೆ ಟಿವಿ ಮಾಧ್ಯಮಗಳ ತಿಕ್ಕಲುತನ, ವಿವೇಚನಾರಹಿತ ವರದಿಗಳು, ವೈಯಕ್ತಿಕ ನಿಂದನೆ, ವಿಕೃತ ಸುದ್ದಿಗಳು, ಸಮಾಜ ವಿರೋಧಿ ಚಟುವಟಿಕೆಗಳು, ಮೌಡ್ಯ ಬಿತ್ತನೆ, ಬ್ರೇಕಿಂಗ್ ನ್ಯೂಸ್ ಎಂಬ ಭ್ರಮೆಗಳು ಎಲ್ಲವನ್ನೂ ಕಠಿಣ ಶಬ್ದಗಳಲ್ಲಿ ಟೀಕಿಸೋಣ, ಸಾಧ್ಯವಾದರೆ ಪ್ರತಿಭಟಿಸೋಣ, ಬಹಿಷ್ಕರಿಸೋಣ, ಮಾನನಷ್ಟ ಮೊಕದ್ದಮೆ ಹೂಡೋಣ ಆದರೆ ಪತ್ರಿಕಾ ಸ್ವಾತಂತ್ರ್ಯಕ್ಕೆ ಯಾವುದೇ ಧಕ್ಕೆ ಬಾರದಂತೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ ಮತ್ತು ಜವಾಬ್ದಾರಿ.

ಪೋಲೀಸರು ಭ್ರಷ್ಟರಾಗಿದ್ದಾರೆ ಎಂದ ಮಾತ್ರಕ್ಕೆ ಪೋಲೀಸ್ ವ್ಯವಸ್ಥೆಯನ್ನು ನಿಷೇಧಿಸಲು ಸಾಧ್ಯವೇ ? ಹಾಗೆಯೇ ಆಸ್ಪತ್ರೆ, ಶಿಕ್ಷಣ, ಚುನಾವಣೆ ನ್ಯಾಯಾಲಯ ಸರಿಯಿಲ್ಲ ಅದರಿಂದ ತೊಂದರೆಯಾಗುತ್ತಿದೆ ಎಂದು ಆ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಲು ಸಾಧ್ಯವೇ ? ಆ ವ್ಯವಸ್ಥೆ ಅದರ ಲೋಪಗಳನ್ನು ಸರಿ ಪಡಿಸಬೇಕೆ ಹೊರತು ನಿಷೇಧ ನಮ್ಮ ಇಡೀ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತದೆ. ಅದರಲ್ಲೂ ವಿಶೇಷವಾಗಿ ದುರ್ಬಲರ ಶೋಷಣೆ ಮತ್ತಷ್ಟು ಹೆಚ್ಚುತ್ತದೆ.

ಕರ್ನಾಟಕ ಸರ್ಕಾರದ ಶಕ್ತಿ ಕೇಂದ್ರ ವಿಧಾನಸೌಧಕ್ಕೆ ಛಾಯಾಚಿತ್ರ ಪತ್ರಕರ್ತರ ನಿಷೇಧ ಮತ್ತು ವಿಧಾನಸಭಾ ಕಾರ್ಯಕಲಾಪಗಳ ನೇರ ಪ್ರಸಾರದ ದೃಶ್ಯಗಳನ್ನು ಚಿತ್ರೀಕರಿಸಲು ಖಾಸಗಿ ವಾಹಿನಿಯವರಿಗೆ ನಿಷೇಧ ಅಥವಾ ಈ ರೀತಿಯ ಇನ್ಯಾವುದೇ ರೂಪದ ನಿಷೇಧ ಅತ್ಯಂತ ಕೆಟ್ಟ ಮತ್ತು ದುರಹಂಕಾರಿ ಕ್ರಮವಾಗುತ್ತದೆ. ಈ ರೀತಿಯ ಕ್ರಮವನ್ನು ಹಿಂದಿನ ಸರ್ಕಾರಗಳು ಕೂಡ ತರಲು ಪ್ರಯತ್ನಿಸಿದ್ದವು. ಆದರೆ ಈಗ ಅದು ಜಾರಿಗೆ ಬಂದಿದೆ.

ಕಾರಣಗಳು ಏನೇ ಇರಲಿ ವಿಧಾನಸೌಧ ಮತ್ತು ಸರ್ಕಾರಿ ಆಡಳಿತ ಯಾರದೇ ಖಾಸಗಿ ಆಸ್ತಿಯಲ್ಲ ಅಥವಾ ಯಾವುದೇ ಮುಚ್ಚುಮರೆಯಿಂದ ಕಾರ್ಯನಿರ್ವಹಿಸುವ ಸಂಸ್ಥೆಯಲ್ಲ. ಯಾವುದೇ ಕೋನದಿಂದ ನೋಡಿದರು ಅಲ್ಲಿನ ವ್ಯವಹಾರಗಳು ಬಹುತೇಕ ಜನರಿಂದ ಮರೆಮಾಚುವ ಕೆಲಸಗಳು ನಡೆಯಬಾರದು. ರಕ್ಷಣೆಗೆ ಸಂಬಂಧಿಸಿದ ಸರ್ಕಾರದ ಗೌಪ್ಯ ಮಾಹಿತಿ ಹೊರತುಪಡಿಸಿ ಎಲ್ಲವೂ ಪಾರದರ್ಶಕವಾಗಿಯೇ ನಡೆಯಬೇಕು.

ಅಂತಹ ಸ್ಥಳದಲ್ಲಿ ಗೌಪ್ಯತೆ ಕಾಪಾಡಬೇಕು ಎಂದು ಪ್ರಯತ್ನಿಸಿದರೆ ಏನೋ ಅವ್ಯವಹಾರ ನಡೆಯುತ್ತದೆ ಎಂದೇ ಭಾವಿಸಬೇಕಾಗುತ್ತದೆ.ಯಾವುದೇ ಆಡಳಿತ ವ್ಯವಸ್ಥೆ ಇರಲಿ ಮಾಧ್ಯಮ ಸ್ವಾತಂತ್ರ್ಯ ಇಲ್ಲದಿದ್ದರೆ ಅದೊಂದು ಭೀಕರ ದುರಾಡಳಿತ ಮುನ್ಸೂಚನೆ ಎಂಬುದನ್ನು ಮರೆಯದಿರೋಣ. ಎಷ್ಟೋ ಅನ್ಯಾಯಗಳು ಮಾಧ್ಯಮ ಇದೆ,
ಅದರ ಮುಖಾಂತರ ಸಾರ್ವಜನಿಕರಿಗೆ ತಿಳಿಯುತ್ತದೆ ಎಂಬ ಕಾರಣದಿಂದ ಕಡಿಮೆಯಾಗಿದೆ. ಆದ್ದರಿಂದ ಮಾಧ್ಯಮ ಸ್ವಾತಂತ್ರ್ಯವನ್ನು ಎಲ್ಲರೂ ಬೆಂಬಲಿಸಬೇಕು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಬಹಿರಂಗ

ಬಾಬಾಸಾಹೇಬ್ ಅಂಬೇಡ್ಕರರ ಹೇಳಿಕೆಯನ್ನೇ ದುರುಪಯೋಗ ಪಡಿಸಿಕೊಳ್ಳುತ್ತಿರುವ ಅವರ ಅನುಯಾಯಿಗಳು..!

Published

on

  • ರಘೋತ್ತಮ ಹೊ.ಬ

ಬಾಬಾಸಾಹೇಬ್ ಅಂಬೇಡ್ಕರ್ ರವರು ರಾಜಕೀಯ ಪಕ್ಷವೊಂದನ್ನು ಉರಿಯುವ ಮನೆ ಎಂದರು. ಆ ಕಾಲಘಟ್ಟದಲ್ಲಿ ಅಂಬೇಡ್ಕರ್ ರವರು ಹಾಗೆ ಹೇಳಲು ಕಾರಣ ಆ ಸಮಯದಲ್ಲಿ ಸದರಿ ಆ ರಾಜಕೀಯ ಪಕ್ಷವು ಭಿನ್ನಮತದ ಬೇಗೆಯಲ್ಲಿ ಬೇಯುತ್ತಿತ್ತು. ಇದನ್ನು ಉಲ್ಲೇಖಿಸುತ್ತ ಅಂಬೇಡ್ಕರ್ ರವರು ಆ ಪಕ್ಷವೇ ಹೀಗೆ ಭಿನ್ನಮತದಿಂದ ಒತ್ತಿ ಉರಿಯುತ್ತಿದೆ ಇನ್ನು ದಲಿತರು ಅಲ್ಲಿ ಹೋದರೆ ನಿಮಗೇನು ಸಿಗುತ್ತದೆ ಎಂಬ ಅರ್ಥದಲ್ಲಿ ಆ ಹೇಳಿಕೆ ಹೇಳಿದ್ದರು. ಬದಲಿಗೆ ತಾವೇ ಸ್ಥಾಪಿಸಿರುವ ನಮ್ಮ ಸ್ವಂತ ಪಕ್ಷ “ಪರಿಶಿಷ್ಟ ಜಾತಿಗಳ ಒಕ್ಕೂಟ”ಕ್ಕೆ ಬನ್ನಿ ಎಂದು ಅಂಬೇಡ್ಕರ್ ರವರು ಶೋಷಿತ ಸಮುದಾಯಗಳವರಿಗೆ ಕರೆ ನೀಡಿದ್ದರು.

ದುರಂತವೆಂದರೆ ಇತಿಹಾಸದಲ್ಲಿ ದಾಖಲಾಗಿರುವ ಬಾಬಾಸಾಹೇಬ್ ಅಂಬೇಡ್ಕರ್ ರವರ ಈ ಹೇಳಿಕೆಯನ್ನು ಬಹುತೇಕ ದಲಿತ ರಾಜಕಾರಣಿಗಳು ಈಗಿನ ಕಾಲಕ್ಕೆ ದುರುಪಯೋಗಪಡಿಸಿಕೊಳ್ಳುತ್ತಿರುವುದು, ಇತರೆ ಪಕ್ಷಗಳನ್ನು ಸೇರಲು ಲೈಸೆನ್ಸ್ ರೀತಿ ಬಳಸಿಕೊಳ್ಳುತ್ತಿರುವುದು! ಹಾಗಿದ್ದರೆ ಅಂಬೇಡ್ಕರ್ ರವರು ಹೇಳಿರುವ ಆ ರಾಜಕೀಯ ಹೇಳಿಕೆಯ ಒಟ್ಟಾರೆ ತಾತ್ಪರ್ಯವೇ ಅಪ್ರಸ್ತುತವೇ? ಖಂಡಿತ ಇಲ್ಲ. ಅವರು ಹೇಳಿದ ಶೋಷಿತ ಸಮುದಾಯಗಳ ಸ್ವತಂತ್ರ ರಾಜಕಾರಣ ಈಗಲೂ ಬೇರೆ ಬೇರೆ ರೂಪದಲ್ಲಿ ಅಸ್ತಿತ್ವದಲ್ಲಿ ಇದೆ. ಅವರು ಜೀವನದುದ್ದಕ್ಕೂ ವಿರೋಧಿಸಿದ ಮೇಲ್ಜಾತಿ ಹಿಂದೂ ರಾಜಕೀಯ ಪಕ್ಷಗಳೂ ಬೇರೆ ಬೇರೆ ಹೆಸರಿನಲ್ಲಿ ಅಸ್ತಿತ್ವದಲ್ಲಿ ಇವೆ!

ನಿಜ, ಇಂತಹ ರಾಜಕೀಯ ಸೂಕ್ಷ್ಮತೆಗಳನ್ನು ಸಾರ್ವಜನಿಕವಾಗಿ ಹೇಳುವುದು ತಪ್ಪು ಎಂದು ವಯಕ್ತಿಕವಾಗಿ ನನಗೆ ಗೊತ್ತಿದೆ ಆದರೆ ಬಾಬಾಸಾಹೇಬ್ ಅಂಬೇಡ್ಕರರ ಹೇಳಿಕೆಗಳ, ಬರಹಗಳ, ಚಿಂತನೆಗಳ ಮಹತ್ವವನ್ನು ಉಳಿಸುವ ದೃಷ್ಟಿಯಲ್ಲಿ ನನ್ನಂತಹವರು ಇಂತಹ ವಿಚಾರಗಳನ್ನು ಮುಕ್ತವಾಗಿ ಬಾಯಿಬಿಟ್ಟು ಹೇಳಲೇಬೇಕಿದೆ. ಅವರ ಬರಹಗಳ ಪ್ರಸ್ತುತತೆಯನ್ನು ನೈಜ ಅರ್ಥದಲ್ಲಿ ವಿಶ್ಲೇಷಿಸಿ ಸದಾ ಕಾಲ ಕಾಪಿಟ್ಟುಕೊಳ್ಳಬೇಕಿದೆ. ಜೈಭೀಮ್.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending