Connect with us

ಬಹಿರಂಗ

‘ಧರ್ಮದ ಬಗೆಗಿನ ತಪ್ಪು ಕಲ್ಪನೆಗಳು’ : ಡಾ. ಬಿ.ಆರ್.‌ ಅಂಬೇಡ್ಕರ್ ಈ ಬರಹ ನಿಮಗಾಗಿ

Published

on

ರ್ಮನಾಶವೆಂದರೆ ಅದಕ್ಕೆ ನನ್ನ ಅರ್ಥವೇನೆಂದು ಕೆಲವರಿಗೆ ತಿಳಿಯಲಿಕ್ಕಿಲ್ಲ. ನನ್ನ ಈ ವಿಚಾರವೇ ಕೆಲವರಿಗೆ ಜಿಗುಪ್ಪೆ ಉಂಟುಮಾಡಿರಬಹುದು. ಕೆಲವರಿಗೆ ಅದು ಕ್ರಾಂತಿಕಾರಿಯೆಂದೂ ಅನ್ನಿಸೀತು. ಆದುದರಿಂದ ನನ್ನ ಅಭಿಪ್ರಾಯವನ್ನು ಇಲ್ಲಿ ತಿಳಿಸಿ ಸ್ಪಷ್ಟಪಡಿಸುತ್ತೇನೆ. ತತ್ವಗಳು ಬೇರೆ , ನಿಯಮಗಳು ಬೇರೆ. ಇದನ್ನು ನೀವು ಒಪ್ಪುತ್ತೀರೋ ಇಲ್ಲವೋ ನಾನಂತೂ ಒಪ್ಪುತ್ತೇನೆ. ನಿಯಮಗಳು ವ್ಯಾವಹಾರಿಕ ; ವಿಧಿಸಿದ ರೀತಿಯಲ್ಲಿ ನಡೆದುಕೊಳ್ಳುವ ರೂಢಿಯ ಕ್ರಮಗಳು. ಆದರೆ ತತ್ವಗಳು ಬೌದ್ಧಿಕವಾಗಿರುತ್ತವೆ. ಸಾರಾಸಾರ ವಿವೇಚನೆಯಿಂದ ನಿರ್ಣಯಿಸುವ ಸಾಧನಗಳವು. ಈ ಕ್ರಮದಲ್ಲಿ ಹೋಗೆಂದು ತಿಳಿಸುವುದು ನಿಯಮಗಳ ರೀತಿ, ತತ್ವಗಳು ನಿರ್ದಿಷ್ಟ ಕ್ರಮವನ್ನು ಹೇಳುವುದಿಲ್ಲ .

ನಿಯಮಗಳು ಪಾಕಶಾಸ್ತ್ರದ ಕ್ರಮಸೂಚನೆಯಂತೆ ಏನನ್ನು ಮಾಡಬೇಕು ಹೇಗೆ ಮಾಡಬೇಕು ಎಂದು ಹೇಳುತ್ತವೆ. ನ್ಯಾಯದಂತಹ ಒಂದು ತತ್ವ ಬೌದ್ಧಿಕ ಹಾಗೂ ಭಾವನಾತ್ಮಕ ಗುಣವನ್ನು ಒದಗಿಸುತ್ತದೆ. ಅದರಿಂದ ವ್ಯಕ್ತಿ ತನ್ನ ಬಯಕೆಗಳನ್ನೂ ಉದ್ದೇಶಗಳನ್ನೂ ವಿವೇಚಿಸುತ್ತಾನೆ. ಯಾವುದನ್ನು ಮುಖ್ಯವಾಗಿ ಗಮನಿಸಬೇಕೆಂಬುದಕ್ಕೆ ಅವನಿಗೆ ಅದು ಮಾರ್ಗದರ್ಶಿಯಾಗುತ್ತದೆ. ನಿಯಮಗಳು ಹಾಗೂ ತತ್ವಗಳಿಗೆ ಇರುವ ಈ ಭೇದದ ಮೂಲಕ ಅವುಗಳನ್ನು ಅನುಸರಿಸಿ ಮಾಡುವ ಕಾರ್ಯಗಳೂ ಭಿನ್ನವಾಗುತ್ತವೆ. ನಿಯಮಗಳು ಒಳ್ಳೆಯದೆಂದು ಹೇಳಿದ್ದನ್ನು ಮಾಡುವುದು ಬೇರೆ, ತತ್ವದೃಷ್ಟಿಯಿಂದ ಒಳ್ಳೆಯದೆಂದು ತಿಳಿದಿದ್ದನ್ನು ಮಾಡುವುದು ಬೇರೆ. ತತ್ವ ತಪ್ಪಿರಬಹುದು. ಆದರೆ ಕೃತಿ ಪ್ರಜ್ಞಾಪೂರ್ವಕವಾಗಿದ್ದು ಹೊಣೆಗಾರಿಕೆಯನ್ನು ಹೊಂದಿರುತ್ತದೆ. ನಿಯಮ ಸರಿಯಾಗಿರಬಹುದು ಅದನ್ನನುಸರಿಸಿ ಕೃತಿ ಯಾಂತ್ರಿಕವಾಗಿರುತ್ತದೆ. ಧಾರ್ಮಿಕ ಕ್ರಿಯೆ ಕೆಲವೊಮ್ಮೆ ಸರಿಯಾದ ಕ್ರಿಯೆಯಾಗದಿರಬಹುದು, ಆದರೆ ಹೊಣೆಗಾರಿಕೆಯ ಧರ್ಮ ಮುಖ್ಯವಾಗಿ ತತ್ವಗಳ ಮಾತೇ ಆಗತಕ್ಕದ್ದು. ಅದು ನಿಯಮಗಳ ಮಾತಲ್ಲ. ಧರ್ಮ ಕೇವಲ ನಿಯಮಗಳೆಂಬ ಅವಸ್ಥೆಗೆ ಇಳಿದಾಕ್ಷಣ ಅದು ಧರ್ಮವಾಗಿ ಉಳಿಯದು. ಏಕೆಂದರೆ ಧರ್ಮದ ಸಾರವಾದ ಹೊಣೆಗಾರಿಕೆಯು ಆಗ ನಾಶವಾಗುತ್ತದೆ.

ಈ ಹಿಂದೂ ಧರ್ಮವೆಂದರೇನು ? ಅದೊಂದು ತತ್ವಗಳ ಕಟ್ಟೋ ಅಥವಾ ನಿಯಮಾವಳಿಯೋ ? ವೇದ, ಸ್ಮೃತಿಗಳಲ್ಲಿ ಉಕ್ತವಾದ ಹಿಂದೂ ಧರ್ಮವೆಂದರೆ ಯಾಜಿಕ, ಸಾಮಾಜಿಕ, ರಾಜಕೀಯ ಮತ್ತು ಆರೋಗ್ಯ ರಕ್ಷಣಾತ್ಮಕ ನಿಯಮಗಳ ಒಂದು ಕಲಸುಮೇಲೋಗರವಾಗಿದೆ. ಹಿಂದೂಗಳು ಧರ್ಮವೆಂದು ಯಾವುದನ್ನು ಕರೆಯುತ್ತಾರೋ ಅದು ವಿಧಿನಿಷೇಧಗಳ ಒಂದು ಸಂಚಯವೇ ಹೊರತು ಬೇರೇನೂ ಅಲ್ಲ. ನಿಜವಾಗಿಯೂ ವಿಶ್ವಾಸಾತ್ಮಕವಾದ ಎಲ್ಲ ದೇಶಗಳಿಗೂ ಎಲ್ಲ ಜನಾಂಗಗಳಿಗೂ ಎಲ್ಲ ಕಾಲಕ್ಕೂ ಅನ್ವಯಿಸುವಂತಹ ತತ್ವಗಳನ್ನುಳ್ಳದ್ದು ಎಂಬರ್ಥದಲ್ಲಿ ಅದು ಧರ್ಮವೇ ಅಲ್ಲ, ವಿಧಿನಿಷೇಧಗಳೇ ಧರ್ಮವೆಂಬರ್ಥ ಬರುವಂತೆ ವೇದ, ಸತಿಗಳಲ್ಲೂ ಧರ್ಮ ಎಂಬ ಪದವನ್ನು ಬಳಸಲಾಗಿದೆ. ವೇದದಲ್ಲಿ ಧರ್ಮವೆಂಬ ಪದವನ್ನು ಆಚಾರ ಶಾಸನಗಳೆಂಬರ್ಥದಲ್ಲಿ ಅನೇಕ ಸಲ ಬಳಸಲಾಗಿದೆ. ಜೈಮಿನಿ ತನ್ನ ಪೂರ್ವ ಮೀಮಾಂಸೆಯಲ್ಲಿ ಆಗಮಗಳಲ್ಲಿ ಉಕ್ತವಾದ ಶ್ರೇಯವೇ ಧರ್ಮವೆಂದು ವ್ಯಾಖ್ಯಾನಿಸಿದ್ದಾನೆ. ಸರಳವಾದ ಮಾತುಗಳಲ್ಲಿ ಹೇಳುವುದಾದರೆ ಹಿಂದೂಗಳು ಹೇಳುವ ಧರ್ಮವೆಂದರೆ ಕಾನೂನು ಅಥವಾ ಕಾನೂನಿನ ಕ್ರಮಕ್ಕೆ ಒಳಪಡಿಸಿದ ವರ್ಗನೀತಿ. ಇದು ಧರ್ಮವೆಂದು ನಾನು ಒಪಲಾರೆ, ಕಟ್ಟುನಿಟ್ಟಾದ ನಿಯಮಾವಳಿಗಳೇ ಧರ್ಮವೆಂದು ಬಳಸಲಡುವುದರಿಂದ ನೈತಿಕ ಸ್ವಾತಂತ್ರ್ಯ ನಾಶವಾಗುತ್ತದೆ.

ಮನಃಪೂರ್ವಕವಾದ ನಡವಳಿಕೆಗೆ ಬದಲಾಗಿ ಹೊರಗಿನಿಂದ ಹೇರಿದ ನಿಯಮಗಳನ್ನು ಗುಲಾಮರಾಗಿ ಜನ ಪಾಲಿಸಬೇಕಾಗುತ್ತದೆ. ಈ ವಿಧಿನಿಷೇಧಗಳ ಅತ್ಯಂತ ದುಷ ಅಂಶವೆಂದರೆ ಅವು ಸರ್ವ ಕಾಲಕ್ಕೂ ಇದ್ದಂತೆಯೇ ಪಾಲಿಸಲಡಬೇಕೆಂಬುದು. ಎಲ್ಲಾ ವರ್ಗಗಳಿಗೆ ಅವು ಸಮಾನವಾಗಿಯೂ ಇಲ್ಲ. ಒಂದೊಂದಕ್ಕೆ ಒಂದೊಂದು ಬಗೆಯಾಗಿವೆ. ಅವು ಸಾರ್ವಕಾಲಿಕವೆಂದು ಹೇಳಿರುವುದರಿಂದ ಈ ಅಸಮಾನತೆಯೂ ಶಾಶ್ವತವಾಗಿದೆ. ಈ ಶಾಸನಗಳನ್ನು ವಿಧಿಸಿದವರು ಇಂತಿಂತಹ ದ್ರಷ್ಟಾರರೆಂದು ನಾವು ಅವುಗಳನ್ನು ವಿರೋಧಿಸುವುದಲ್ಲ, ಇವು ಸಿದ್ದಾಂತವೆಂಬಂತೆ ಸ್ಥಿರೀಕೃತವಾಗಿರುವುದಕ್ಕೆ ಮಾತ್ರ ನಮ್ಮ ಆಕ್ಷೇಪವಿದೆ. ಮನುಷ್ಯ ಸುಖ ಆತನ ಪರಿಸ್ಥಿತಿಗೆ ಅನುಸಾರವಾಗಿ ಬದಲಾಗುತ್ತದೆ. ಹೀಗಿರುವಾಗ ಈ ಬಗೆಯ ಶಾಶ್ವತವಾದ ನಿಯಮ ಅಥವಾ ಶಾಸನಗಳನ್ನು ಜನತೆ ಅವ್ಯಾಹತ ಹೇಗೆ ಸಹಿಸಿಕೊಳ್ಳಬಲ್ಲದು ? ಆದುದರಿಂದ ಇಂತಹ ಧರ್ಮವನ್ನು ನಾಶಪಡಿಸಿದರೆ ಅದು ಯಾವ ರೀತಿಯಿಂದಲೂ ಅಧರ್ಮವಲ್ಲವೆಂದು ಹೇಳುತ್ತೇನೆ. ಆ ಧರ್ಮದ ಮುಖಕ್ಕೆ ತೊಡಿಸಿದ ಈ ಮುಸುಕನ್ನು ಕಿತ್ತುಹಾಕಿ ಶಾಸನವನ್ನು ಧರ್ಮವೆಂದು ರೂಢಿಗೊಳಿಸಿದ ಅನ್ಯಾಯವನ್ನು ದೂರಗೊಳಿಸುವುದು ನಿಮ್ಮ ಅನಿವಾರ್ಯ ಕರ್ತವ್ಯ. ಇದು ನನ್ನ ಅಭಿಪ್ರಾಯ.

ಧರ್ಮದ ಬಗೆಗೆ ಉಂಟಾಗಿರುವ ಈ ತಪ್ಪು ಕಲ್ಪನೆಯನ್ನು ಜನರ ಮನಸ್ಸಿನಿಂದ ಹೊರಗೆ ತಳ್ಳಿಬಿಡಿ. ಅವರು ಪಾಲಿಸುತ್ತಿರುವುದು ಧರ್ಮವಲ್ಲ, ಒಂದು ಶಾಸನ ಎಂದು ಮನವರಿಕೆ ಮಾಡಿಬಿಡಿ. ಹಾಗೆ ಮಾಡುವಲ್ಲಿ ನೀವು ಜಯಶಾಲಿಗಳಾದ ಪಕ್ಷದಲ್ಲಿ ಆ ಧರ್ಮವನ್ನು ತಿದ್ದುವುದಕ್ಕೆ ಅಥವಾ ನಾಶಗೊಳಿಸುವುದಕ್ಕೆ ನಿಮಗೆ ಸಾಧ್ಯವಾಗುವುದು, ಎಲ್ಲಿಯವರೆಗೆ ಜನರು ಅದನ್ನು ಧರ್ಮವೆಂದು ಪರಿಗಣಿಸುವುರೋ ಅಲ್ಲಿಯವರೆಗೆ ಅವರು ಅದರ ಬದಲಾವಣೆಗೆ ಸಿದ್ದರಾಗುವುದಿಲ್ಲ. ಯಾಕೆಂದರೆ ಧರ್ಮದಲ್ಲಿ ಬದಲಾವಣೆಯ ಕಲ್ಪನೆಯಿಲ್ಲ. ಆದರೆ ಶಾಸನ ಅಥವಾ ಕಾನೂನು ತಿದ್ದುವಿಕೆಗೆ ಒಳಗಾಗಬಲ್ಲದೆಂದು ಅವರು ಒಪ್ಪುತ್ತಾರೆ. ತಾವು ಧರ್ಮವೆಂದು ಭ್ರಮಿಸಿದ್ದು ನಿಜವಾಗಿಯೂ ಪ್ರಾಚೀನ ಕಾಲದ ಶಾಸನ ಅಥವಾ ಕಾನೂನು ಎಂದು ಅರಿತಾಗ ಅದನ್ನು ಬದಲಿಸಲು ಅವರು ಸಿದ್ದರಾಗುವರು. ಕಾನೂನನ್ನು ಬದಲಿಸಬಹುದೆಂದು ಜನ ಆಗ ಒಪ್ಪುತ್ತಾರೆ.

ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಬರಹಗಳು – ಭಾಷಣಗಳು : ಸಂಪುಟ -1

ಸುದ್ದಿದಿನ.ಕಾಂ|ವಾಟ್ಸಾಪ್|9986715401

ಬಹಿರಂಗ

CAB ಮತ್ತು NRC ಯನ್ನು ಏಕೆ ವಿರೋಧಿಸಬೇಕು?

Published

on

ಇಂತಹದೊಂದು ಪ್ರಶ್ನೆ ಈ ದೇಶದ ಬಹುದೊಡ್ಡ ಜನಸಂಖ್ಯೆಯ ತಲೆಯಲ್ಲಿ ಗಿರಗಿರ ತಿರುಗುತ್ತಿದೆ. ಆದರೆ ನಿಜವಾಗಿಯೂ CAB ಯಾಕಾಗಿ ಜಾರಿ ಮಾಡಲಾಗಿದೆ ಎಂದು ಈವರೆಗೂ ಬಹುತೇಕರಿಗೆ ತಿಳಿದಿಲ್ಲ.

ಬನ್ನಿ ಈ ಬಗ್ಗೆ ಸವಿವರವಾಗಿ ತಿಳಿಯೋಣ…

CAB ಯ ಉದ್ದೇಶ ಅರಿಯಬೇಕಾದರೆ ಮೊದಲು NRC ಯನ್ನು ಸಂಕ್ಷಿಪ್ತವಾಗಿ ಅರಿಯೋಣ
CAB ಜಾರಿಗೊಳಿಸುವ ಮೊದಲು ಅಸ್ಸಾಂ ರಾಜ್ಯದಲ್ಲಿ NRC ಯನ್ನು ಜಾರಿಗೊಳಿಸಲಾಯಿತು. ಇದರ ಪ್ರಕಾರ 24 March 1971 ರ ನಂತರ ಭಾರತ ದೇಶದಲ್ಲಿ ಇರುವ/ ಇದ್ದ ಜನರು ತಾನು ಭಾರತೀಯ ಪ್ರಜೆ ಎಂಬುದನ್ನು ಸಾಬೀತು ಪಡಿಸಬೇಕಿದೆ. ಅದಕ್ಕೆ ಬೇಕಾದ ದಾಖಲೆಗಳನ್ನು ಪ್ರಸ್ತುತ ಪಡಿಸಬೇಕಿದೆ. ಸಧ್ಯ ಭಾರತದಲ್ಲಿ ಇರುವ ಜನರು ತಾನು ಭಾರತೀಯ ಎಂದು ಸಾಬೀತು ಪಡಿಸಲು ತಮ್ಮ ಅಜ್ಜ, ಮುತ್ತಜ್ಜರು 24 March 1971 ರ ಮೊದಲೇ ಈ ದೇಶದಲ್ಲಿ ಇದ್ದರು ಎಂಬುದನ್ನು ದಾಖಲೆ ಸಮೇತ ತೋರಿಸಬೇಕು. ಇದರಲ್ಲಿ ಇಂದು ಇರುವವರು ತಮ್ಮ ಮುತ್ತಜ್ಜರ ತನಕದ ದಾಖಲೆಗಳಲ್ಲಿ ಒಂದಕ್ಷರವೂ ಏರುಪೇರಾಗದೆ ಇದ್ದಲ್ಲಿ ಮಾತ್ರ, ಅಂತಹವರನ್ನು ಭಾರತೀಯ ನಾಗರೀಕರು ಎಂದು ಪರಿಗಣಿಸಲಾಗುವುದು.

ಆ ಕಾಲದಲ್ಲಿ ಓದು ಬರಹ ಬಾರದ ಸಮಯದಲ್ಲಿ ಹಾಗೂ ತಮ್ಮ ದಾಖಲೆಗಳ ಬಗ್ಗೆ ತಲೆಕೆಡಿಸಿಕೊಂಡಿರದ ನಮ್ಮ ಮುತ್ತಜ್ಜರ ದಾಖಲೆಗಳನ್ನು ಈಗ ಕಲೆ ಹಾಕಲು ಸಾಧ್ಯವಿದೆಯೇ? ಯುದ್ಧ ವಿಮಾನಗಳ ದಾಖಲೆಗಳೇ ಕೇಂದ್ರ ಸರಕಾರದ ಸುಪರ್ಧಿಯಿಂದ ನಾಪತ್ತೆಯಾಗುವ ಈ ಕಾಲದಲ್ಲಿ ನಮ್ಮ ತಾತ, ಮುತ್ತಾತರ ದಾಖಲೆಗಳು ಕೇಳುವುದು ಹಾಸ್ಯಾಸ್ಪದವೋ ಅಥವ ಉದ್ದೇಶಿತ ಬಾಲಿಶತನವೋ ನೀವೇ ನಿರ್ಧರಿಸಿ.

ಇನ್ನು ಅಸ್ಸಾಂ ಬಗ್ಗೆ ಹೇಳುವುದಾದರೆ, ಅಲ್ಲಿನ ಜನರು ದಶಕಗಳಿಂದ ಇಂತಹ ಬೆದರಿಕೆಗಳೊಂದಿಗೆ ಜೀವಿಸುತ್ತಿದ್ದರು. ಇದೇ ಕಾರಣಕ್ಕಾಗಿ ದಶಕಗಳಿಂದ ತಮ್ಮ ದಾಖಲೆಗಳನ್ನು ಜೋಪಾನವಾಗಿ ಸಾಕಷ್ಟು ಸಂಖ್ಯೆಯಲ್ಲಿ ಇಟ್ಟು ಕೊಂಡಿದ್ದೂ ಕೂಡಾ 40 ಲಕ್ಷ ಮಂದಿ NRC ಪಟ್ಟಿಯಿಂದ ಹೊರಗುಳಿದರು. ತದ ನಂತರ ತಿದ್ದುಪಡಿಯೊಂದಿಗೆ, ಈ ಅಂಕೆಯು 19 ಲಕ್ಷಕ್ಕೆ ಇಳಿಯಿತು. ಈ 19 ಲಕ್ಷ ಮಂದಿಯಲ್ಲಿ ಅರ್ಧದಷ್ಟು ಮುಸ್ಲಿಮರಾಗಿದ್ದರೆ, ಇನ್ನರ್ಧ ಮಂದಿಯಲ್ಲಿ ಹಿಂದೂಗಳೂ ಸೇರಿದ್ದಾರೆ. ಇನ್ನಷ್ಟು ವಿಶೇಷತೆ ಎಂದರೆ, ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಹೋರಾಡಿದ್ದ ಹಾಗೂ ಭಾರತೀಯ ಸೇನೆಯಲ್ಲಿ 30 ವರ್ಷ ಸೇವೆ ಸಲ್ಲಿಸಿದ್ದ ಮುಸ್ಲಿಂ ಆರ್ಮಿ ಜನರಲ್ ಸನಾವುಲ್ಲಾ ಎಂಬವರನ್ನೂ NRC ಪಟ್ಟಿಯಿಂದ ಹೊರಗೆ ಇಡಲಾಗಿತ್ತು. ಅಲ್ಲದೆ ಈ ಈ ಪಟ್ಟಿಯಲ್ಲಿ ಅರ್ಧದಷ್ಟು ಮಂದಿ ಮುಸ್ಲಿಮೇತರರು ಇರುವುದು ಮತ್ತು ಸಂಘ ಪರಿವಾರದ ವಿದ್ಯಾರ್ಥಿ ಅಂಗವಾಗಿರುವ ABVP ಕೂಡಾ ಈ ಬಗ್ಗೆ ಬೃಹತ್ ಪ್ರತಿಭಟನೆ ನಡೆಸಿರುವುದು ಕೇಂದ್ರ ಸರಕಾರಕ್ಕೆ ನುಂಗಲಾರದ ತುತ್ತಾಗಿತ್ತು.

ಬನ್ನಿ CAB ಯ ಉದ್ದೇಶ ಅರಿಯೋಣ…
ಇದೇ ಕಾರಣಕ್ಕಾಗಿ ಕೇವಲ ಮುಸ್ಲಿಮರನ್ನು ಗುರಿಯಾಗಿಸುವ ಕಾರಣಕ್ಕಾಗಿ CAB ಯನ್ನು ಜಾರಿಗೊಳಿಸಲಾಯಿತು. ಇದನ್ನು ಜಾರಿಗೊಳಿಸುವ ಸಮಯದಲ್ಲಿ ದೇಶದ ಗೃಹ ಮಂತ್ರಿ ಅಮಿತ್ ಶಾ ರವರು ಸಂಸತ್ ನಲ್ಲಿ ಈ ಬಿಲ್ ನ ಒಂದು ಮಗ್ಗುಲನ್ನು ಮಾತ್ರ ತೋರಿಸಿ ದೇಶದ ಜನರ ದಿಕ್ಕು ತಪ್ಪಿಸುವ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ. ಇದೇ ಕಾರಣಕ್ಕಾಗಿ ಬಹುತೇಕ ಜನರು CAB ಯನ್ನು ಯಾಕಾಗಿ ವಿರೋಧಿಸಬೇಕು ಎಂದು ಪ್ರಶ್ನಿಸುತ್ತಿದ್ದಾರೆ.

ಅಸ್ಸಾಂ ನಲ್ಲಿ ಲಕ್ಷಾಂತರ ಮಂದಿ ಹಿಂದೂಗಳು ತಮ್ಮ ಭಾರತೀಯ ನಾಗರೀಕತೆಯನ್ನು ದಾಖಲೆಗಳ ಮೂಲಕ ಸಾಬೀತು ಪಡಿಸಲು ವಿಫಲರಾಗಿರುವ ಕಾರಣ, ಇನ್ನು ದೇಶಾದ್ಯಂತ ಕೋಟ್ಯಾಂತರ ಹಿಂದೂಗಳು ಮತ್ತೆ NRC ಪಟ್ಟಿಯಿಂದ ಹೊರಗುಳಿಯುತ್ತಾರೆ ಎಂದು ಅರಿತ ಕಾರಣ, ಕೇಂದ್ರ ಸರಕಾರವು CAB ಯನ್ನು ಪರಿಚಯಿಸಿದೆ. ಇದರ ಪ್ರಕಾರ ಮುಸ್ಲಿಮರ ಹೊರತು ಇನ್ಯಾವುದೇ ಧರ್ಮದವರು ಯಾವುದೇ ದಾಖಲೆಗಳಿಲ್ಲದೆ ಭಾರತೀಯ ಪೌರತ್ವಕ್ಕೆ ಅರ್ಹರಾಗುತ್ತಾರೆ. ಆದರೆ ಗೃಹಮಂತ್ರಿ ಅಮಿತ್ ಶಾ ಹೇಳಿರುವಂತೆ ಇದು ಕೇವಲ ಬಾಂಗ್ಲಾ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಶರಣಾರ್ಥಿಗಳಿಗೆ ಭಾರತೀಯ ಪೌರತ್ವ ನೀಡುವುದು ಇದರ ಮುಖ್ಯ ಉದ್ದೇಶವಲ್ಲ. ಬದಲಾಗಿ ಆ ಶರಣಾರ್ಥಿಗಳನ್ನು ತೋರಿಸಿ ದೇಶದ ಒಳಗೆ ಸಧ್ಯ ಇರುವ ಹಿಂದೂಗಳನ್ನು ಯಾವುದೇ ದಾಖಲೆಗಳಿದ್ದರೂ ಕೂಡಾ ಯಾವುದೇ ಅಡ್ಡಿ ಆತಂಕಗಳಿಲ್ಲದೆ NRC ಪಟ್ಟಿಯಿಂದ ಹೊರಗುಳಿಯುವುದನ್ನು ತಪ್ಪಿಸುವ ಸಲುವಾಗಿ ಈ CAB ಮಸೂದೆ ಜಾರಿಗೊಳಿಸಲಾಗಿದೆ.

ಅಮಿತ್ ಶಾ ರವರು ಈ ಕಾಯ್ದೆಯು ದೇಶದ ಹೊರಗಿನವರಿಗೆ ಮಾತ್ರ, ದೇಶದ ಒಳಗಿರುವವರಿಗೆ ಯಾವುದೇ ಆತಂಕ ಬೇಡ ಎಂದು ಹೇಳುತ್ತಾರೆ. ಈ ಮಾತನ್ನು ಸ್ವಲ್ಪ ಗಮನವಿಟ್ಟು ಆಲೋಚಿಸಿ. ಇದರ ಅರ್ಥ ಇದು ಭಾರತದ ಒಳಗಿನವರು ತಮ್ಮ ಮುತ್ತಜ್ಜರ ಸಹಿತ ಎಲ್ಲಾ ದಾಖಲೆಗಳನ್ನು ಸಾಬೀತು ಪಡಿಸಿದರೆ ನೀವು ಭಾರತೀಯರು ಹಾಗೂ ನಿಮಗೆ ಯಾವುದೇ ತೊಂದರೆ ಇಲ್ಲ. ಒಂದು ವೇಳೆ ನೀವು ದಾಖಲೆಗಳನ್ನು ತೋರಿಸಲು ವಿಫಲರಾದರೆ ನೀವು ಪರದೇಸಿಗಳು ಎಂದರ್ಥ. ಆವಾಗ ಕೇವಲ ಮುಸ್ಲಿಮರು ಮಾತ್ರ ಪರದೇಸಿಗಳಾಗುತಾರೆ ವಿನಃ ಇತರ ಧರ್ಮೀಯರಲ್ಲ. ಏಕೆಂದರೆ ಯಾವುದೇ ದಾಖಲೆಗಳಿಲ್ಲದ ಇತರ ಧರ್ಮೀಯರು ಅದಾಗಲೇ CAB ಮಸೂದೆಯ ಪ್ರಕಾರ ಭಾರತೀಯ ಪೌರತ್ವ ಪಡೆದಿರುತ್ತಾರೆ. ಹಾಗಾಗಿ ಈ ಕರಾಳ ಕಾನೂನು ಕೇವಲ, ಇನ್ನೊಮ್ಮೆ ಹೇಳುತ್ತೇನೆ ಕೇವಲ ದೇಶದ ಒಳಗಿರುವ ಹಾಗೂ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹುತಾತ್ಮರಾಗಿರುವವರ ಮುಸ್ಲಿಮರ ಮೊಮ್ಮಕ್ಕಳು ಮತ್ತು ಮರಿ ಮೊಮ್ಮಕ್ಕಳಿಗಾಗಿ ಮಾತ್ರವಾಗಿದೆ.

ಹಿಂದೂಗಳಿಗೆ ಯಾವುದೇ ದೇಶ ಇಲ್ಲ, ಮುಸ್ಲಿಮರಿಗೆ ಹಲವು ದೇಶಗಳಿವೆ ಎಂದು ಹೇಳುತ್ತಾರೆ. ಆದರೆ ನಿಜಾಂಶ ಎಂದರೆ ಯಾವುದೇ ಭಾರತೀಯ ಮುಸ್ಲಿಮನು ಭಾರತ ಬಿಟ್ಟು ಹೋಗಲು ಯಾವ ಕಾರಣಕ್ಕೂ ಸಿದ್ಧನಿಲ್ಲ. ಜೀವಿಸುವುದಾದರೆ ಭಾರತದಲ್ಲೆ, ಇಲ್ಲವಾದರೆ ಭಾರತದ ಮಣ್ಣಲ್ಲೇ ಮಣ್ಣಾಗಿ ಹೋಗುತ್ತೇವೆ ಎಂದು ಹೇಳುತ್ತಾರೆ. NRC ಪಟ್ಟಿಯಿಂದ ಹೊರಗುಳಿಯುವವರನ್ನು ಪಾಕಿಸ್ತಾನಕ್ಕೋ, ಬಾಂಗ್ಲಾದೇಶಕ್ಕೋ ಕಳುಹಿಸಲಾಗುವುದು ವೈಭವೀಕರಿಸಲಾಗುತ್ತಿದೆ. ಆದರೆ ಅಂತಹವರನ್ನು ಎಲ್ಲೂ ಕಳುಹಿಸುವುದಿಲ್ಲ ಬದಲಾಗಿ Detantion Camp ಗಳಲ್ಲಿ ಹಾಕಲಾಗುತ್ತದೆ. ಅವರ ಜೀವನ ಪೂರ್ತಿ ಖರ್ಚುಗಳನ್ನು ಸರಕಾರ ನೋಡಿಕೊಳ್ಳುತ್ತದೆ. ಇಂದಿನ ವರದಿ ಪ್ರಕಾರ ಭಾರತದ GDP 4.5 ರಿಂದ ಕುಸಿದು 4.3 ಇಳಿದಿದೆ. ಮತ್ತೆ ಈ ಖರ್ಚುಗಳು ತಲೆ ಮೇಲೆ ಬಿದ್ದರೆ ಭಾರತದ ಆರ್ಥಿಕತೆ ಊಹಿಸಲೂ ಅಸಾಧ್ಯವಾಗಿದೆ. ಇಂದು CAB & NRC ಯನ್ನು ಸಂಭ್ರಮಿಸುವವರು ನಾಳೆ ಸ್ವತಃ NRC ಪಟ್ಟಿಯಲ್ಲಿದ್ದುಕೊಂಡೇ (ಎಲ್ಲಾ ಧರ್ಮೀಯರು) ನಿಮ್ಮ ಮಕ್ಕಳ ಒಪ್ಪೊತ್ತಿನ ಊಟಕ್ಕಾಗಿ ಪರದಾಡುವಿರಿ. ಇನ್ನು ದಾಖಲೆಗಳನ್ನು ಸಂಗ್ರಹಿಸುವಲ್ಲಿ ಯಾರಾದರೂ ಬೆರಳೆಣಿಕೆಯ ಮುಸ್ಲಿಮರು ಸಫಲಾರದೂ ಕೂಡಾ, ನಿಮ್ಮನ್ನು ಯಾವುದೇ ಹಕ್ಕುಗಳಿಲ್ಲದೆ ಎರಡನೇ ದರ್ಜೆಯ ಪ್ರಜೆಗಳಂತೆ (ಗುಲಾಮರಂತೆ) ನಡೆಸಿಕೊಳ್ಳುವರು.

ಇನ್ನೊಂದು ವಿಚಾರ…
ಇವತ್ತು ಇದು ಮುಸ್ಲಿಮರಿಗೆ ಮಾತ್ರ, ನನಗೆ ಯಾವುದೇ ತೊಂದರೆ ಇಲ್ಲ ಎಂದು ಭಾವಿಸುವವರು ತಿಳಿಯಿರಿ…
ಭಾರತದಲ್ಲಿ ಹಿಂದೂಗಳ ನಂತರ ಎರಡನೇ ದೊಡ್ಡ ಸಂಖ್ಯೆಯಲ್ಲಿ ಇರುವುದು ಮುಸ್ಲಿಮರು. ಅವರನ್ನು ಬೇರ್ಪಡಿಸಲು ಪ್ರಯತ್ನಿಸುವಾಗ ಇತರ ಹಿಂದೂಯೇತರರು ತಿರುಗಿ ಬೀಳಬಾರದು ಎಂಬ ಏಕೈಕ ಕಾರಣಕ್ಕಾಗಿ, ದಲಿತರು, ಕ್ರಿಶ್ಚಿಯನ್ನರು, ಜೈನರು ಇತ್ಯಾದಿ ಸಮುದಾಯಕ್ಕೆ ಸುರಕ್ಷತೆಯ ಪೊಳ್ಳು ಭರವಸೆ ನೀಡುತ್ತಿದ್ದಾರೆ. ನಾಳೆ ನಿಮ್ಮನ್ನೂ ಕೂಡಾ ಇದೇ ರೀತಿ ನಿರ್ಗತಿಕರನ್ನಾಗಿಸುವುದು ಬೆಳಕಿನಷ್ಟೇ ಸತ್ಯ. ಆ ಸಮಯದಲ್ಲಿ ಕಣ್ಣೀರು ಸುರಿಸಿ ಯಾವುದೇ ಫಲವಿಲ್ಲ. ರೈಲು ಹೊರಟ ಮೇಲೆ ಟಿಕೇಟು ಪಡೆದು ಪ್ರಯೋಜನವಿಲ್ಲ.

ವಿ.ಸೂ: ಈ ವಿಷಯ ಬರೆಯಲು ಕಾರಣ, ಬಹಳಷ್ಟು ನನ್ನ ಮುಗ್ದ ಹಿಂದೂ ಗೆಳೆಯರು ನನ್ನಲ್ಲಿ ಪ್ರಶ್ನಿಸಿದ್ದರು. ಅಲ್ಲದೆ ಚಿಂತೆ ಮಾಡಬೇಡ ಮಾರಾಯ ಎಂದು ಧೈರ್ಯ ತುಂಬುವ ಪ್ರಯತ್ನ ಮಾಡುತ್ತಿದ್ದಾರೆ. ಪಾಪ ಅವರಿಗೇನು ಗೊತ್ತು ಈ ಷಡ್ಯಂತ್ರ ಹಿಂದಿರುವ ಭಯಾನಕತೆ…

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಬಹಿರಂಗ

ಖುಷಿ ಇದೆ ನಂಗೆ, ನಾನು ಇಂಥ ದೇಶ’ಭಕ್ತ’ ನಲ್ಲ : ಡಾ. ಬಿ.ಆರ್.ಅಂಬೇಡ್ಕರ್

Published

on

ಇಂಡಿಯಾ ಒಂದು ವಿಶಿಷ್ಟ ದೇಶ. ಇಲ್ಲಿಯ ರಾಷ್ಟ್ರೀಯವಾದಿ, ದೇಶಭಕ್ತರೂ ಒಂದು ನಮೂನಿ ಜೀವಿಗಳೇ ಸರಿ. ಈ ದೇಶದ ಒಬ್ಬ ರಾಷ್ಟ್ರೀಯವಾದಿ ಹಾಗೂ ದೇಶಭಕ್ತ ಇಲ್ಲಿ ತನ್ನಂತೆಯೇ ಇರುವ ಜನರನ್ನು ಕೀಳಾಗಿ ನಡೆಸಿಕೊಳ್ಳುತ್ತಿರುವುದನ್ನು ಬಿಟ್ಟ ಕಣ್ಣುಗಳಿಂದ ನೋಡಬಲ್ಲ. ಆದರೆ, ಹಾಗೆ ಮಾಡುವುದು ತಪ್ಪು ಎಂದು ಅವನೊಳಗಿನ ಮಾನವೀಯತೆ ಪ್ರತಿಭಟಿಸುವುದೇ ಇಲ್ಲ.

ಅವನಿಗೆ ಗೊತ್ತು ಈ ನೆಲದಲ್ಲಿ ವಿನಾಕಾರಣ ಹಲವರಿಗೆ, ಮುಖ್ಯವಾಗಿ ಮಹಿಳೆಯರಿಗೆ ಹಕ್ಕುಗಳನ್ನು ನಿರಾಕರಿಸಲಾಗಿದೆ. ಆದರೆ, ಈ ಬಗ್ಗೆ ಏನಾದರೂ ಮಾಡಬೇಕೆಂದು ಆತನ ನಾಗರಿಕ ಪ್ರಜ್ಞೆಗೆ ಅನ್ನಿಸುವುದೇ ಇಲ್ಲ. ಸಾರ್ವಜನಿಕ ಉದ್ಯೋಗ ಅವಕಾಶಗಳಿಂದ ಒಂದು ವರ್ಗ ಸಂಪೂರ್ಣವಾಗಿ ಹೊರಗುಳಿದಿದೆ ಎಂದು ಅವನಿಗೆ ಗೊತ್ತು. ಆದರೆ ಆ ಕಟು ವಾಸ್ತವ, ಆತನಲ್ಲಿನ ನ್ಯಾಯಪರ ಪ್ರಜ್ಞೆಯನ್ನು ಎಚ್ಚರಿಸುವುದಿಲ್ಲ.

ವ್ಯಕ್ತಿ ಹಾಗೂ ಸಮಾಜಕ್ಕೆ ನೋವುಂಟು ಮಾಡಬಲ್ಲ ನೂರಾರು ಪದ್ಧತಿಗಳಲ್ಲಿ ಈ ದೇಶಭಕ್ತ ಅನುಸರಿಸುತ್ತಾನೆ. ಅಂತಹ ಆಚರಣೆಗಳು ಅವನಲ್ಲಿ ಅಸಹ್ಯ ಹುಟ್ಟಿಸುವುದೇ ಇಲ್ಲ. ಹಾಗೂ ಅವನ ಏಕೈಕ ಒತ್ತಾಯ ಅಧಿಕಾರ – ತನಗೆ ಹಾಗೂ ತನ್ನವರಿಗೆ.

ನನಗೆ ಖುಷಿ ಇದೆ, ಅಂತಹ ದೇಶಭಕ್ತರ ಪೈಕಿ ನಾನಿಲ್ಲ. ಪ್ರಜಾಪ್ರಭುತ್ವದ ಮೌಲ್ಯಗಳ ಆಧಾರದ ಮೇಲೆ ತನ್ನ ನಿಲುವು ತಾಳುವ ಹಾಗೂ ಎಲ್ಲಾ ತೆರನ ಏಕಾಧಿಪತ್ಯವನ್ನು ನಿರ್ನಾಮ ಮಾಡಲು ಬಯಸುವ ವರ್ಗಕ್ಕೆ ಸೇರಿದವನು ನಾನು. ರಾಜಕೀಯವಾಗಿ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಎಲ್ಲರೂ ಸಮಾನರು ಎಂಬ ಆದರ್ಶವನ್ನು ಜಾರಿಗೆ ತರುವುದೇ ನಮ್ಮ ಗುರಿ.

ಡಾ. ಬಿ.ಆರ್. ಅಂಬೇಡ್ಕರ್
(ಕನ್ನಡಕ್ಕೆ Sathish GT)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಬಹಿರಂಗ

ಜಾತಿಯಲ್ಲಿ ಕರಗಿಹೋದ ಮತ್ತೊಬ್ಬಳು ‘ಪ್ರಿಯಾಂಕ’

Published

on

  • ಸಿ.ಎಸ್.ದ್ವಾರಕಾನಾಥ್

ಹೈದರಾಬಾದಿನ ಪ್ರಿಯಾಂಕರೆಡ್ಡಿ ರೇಪ್ ಪ್ರಕರಣ ಬೆಳಕಿಗೆ ಬಂದ ದಿನವೇ ಮತ್ತೊಬ್ಬ ಪ್ರಿಯಾಂಕ(ಪಕ್ಕದಲ್ಲಿ ‘ರೆಡ್ಡಿ’ ಇರಲಿಲ್ಲ) ಎಂಬ ಹೆಸರಿನ ಹೆಣ್ಣು ಮಗಳೊಬ್ಬಳ ರೇಪ್ ಮತ್ತು ಕೊಲೆ ಕೇಸಿನಲ್ಲಿ ವಿವರ ಕಲೆಹಾಕಿ ಪೋಲಿಸ್ ಮಹಾ ನಿರ್ದೇಶಕರೇ ಮುಂತಾದವರಿಗೆ ಮನವಿಯೊಂದನ್ನು ನೀಡಲು ನಮ್ಮ ಕಛೇರಿಯಲ್ಲಿ ಕುಳಿತು ಡ್ರಾಪ್ಟ್ ಮಾಡುತಿದ್ದೆವು!?

ಈ ಪ್ರಿಯಾಂಕ ಪ್ರಕರಣ ನಡೆದದ್ದು ಜಮಖಂಡಿಯಲ್ಲಿ, ಈಕೆಯ ಅಪ್ಪ ಒಬ್ಬ ದೇವದಾಸಿಯ ಮಗ! ಈಕೆಯ ತಾಯಿ ಮಾದರ ಕುಲದ ಹೆಣ್ಣುಮಗಳು. ಹೈದರಾಬಾದಿನ ಪ್ರಿಯಾಂಕ ರೆಡ್ಡಿ ಪ್ರಕರಣದಲ್ಲಿ ಆರೋಪಿಗಳು ಸಣ್ಣಪುಟ್ಟ ಪೊರಕಿಗಳಾದರೆ, ನಮ್ಮ ಜಮಖಂಡಿಯ ಪ್ರಿಯಾಂಕ ಕೇಸಿನಲ್ಲಿ ಆರೋಪಿಗಳು ಪ್ರತಿಷ್ಟಿತರು, ಬಿಜೆಪಿ ಶಾಸಕರ ಸಂಭಂದಿಗಳು ಮತ್ತು ಒಂದು ದೊಡ್ಡ ವಿದ್ಯಾಸಂಸ್ಥೆಯ ಮುಖ್ಯಸ್ಥರು!!

ಆ ದಿನ ಇದ್ದಕ್ಕಿದ್ದಂತೆ ನಮ್ಮ ಬಾಸ್ಕರ್ ಪ್ರಸಾದ್ ಏಳೆಂಟು ಮಂದಿ ಉತ್ತರ ಕರ್ನಾಟಕದ ಗ್ರಾಮಸ್ಥರನ್ನು ಕರೆದುಕೊಂಡು ನಮ್ಮ ಕಛೇರಿಗೆ ಬಂದರು. “ಸರ್ ಇವರ ಮಗಳ ರೇಪ್ ಮತ್ತು ಕೊಲೆಯಾಗಿ ನಾಲ್ಕು ತಿಂಗಳಾಗಿದೆ.. ಈವರೆಗೂ ಯಾರನ್ನೂ ಅರೆಸ್ಟ್ ಮಾಡಿಲ್ಲ.. ವಿಚಾರಣೆ ಕೂಡ ನಡೆಸಿಲ್ಲ.. ಮಗಳನ್ನು‌ ಕಳಕೊಂಡ ಈ ನತದೃಷ್ಟರು ನ್ಯಾಯಕ್ಕಾಗಿ ಕಂಬಕಂಬ ಅಲೆಯುತಿದ್ದಾರೆ.. ಇವರನ್ನು ಕೇಳುವವರಿಲ್ಲ.. ಅದಕ್ಕೇ ಇಲ್ಲಿಗೆ ಕರೆತಂದೆ..” ಎಂದರು.‌ ನನಗೆ ತಕ್ಷಣ ಅನಿಸಿದ್ದು “ಬಾಸ್ಕರ್ ಪ್ರಸಾದ್ ಜಮಖಂಡಿಗೆ ಹೋಗಿ ಪ್ರತಿಭಟಿಸದೆ ಇಲ್ಲಿಗೇಕೆ ಬಂದರು..?” ಎಂಬುದು! ಮತ್ತೇ ಮರುಕ್ಷಣದಲ್ಲೇ ಅರ್ಥವಾಯಿತು!?

ವಿಜಾಪುರದ ದಾನಮ್ಮ ಎಂಬ ದಲಿತ ಹೆಣ್ಣುಮಗಳ ರೇಪ್ ಮತ್ತು ಕೊಲೆ ಪ್ರಕರಣದಲ್ಲಿ ಬಾಸ್ಕರ್ ಪ್ರಸಾದ್ ವಿಜಾಪುರಕ್ಕೇ ಹೋಗಿ ಆಗಿನ‌ ಆರೋಪಿಗಳಾದ ಪ್ರತಿಷ್ಟಿತರ ವಿರುದ್ದ ಪ್ರತಿಭಟಿಸಿ ಜೈಲು ಸೇರಿದ್ದು! ಇಂದಿಗೂ ಆ ಕೇಸಿಗಾಗಿ ವಿಜಾಪುರಕ್ಕೆ ಅಲೆದಾಡುತ್ತಿರುವುದು ನೆನಪಾಯಿತು. ಕಡೆಗೆ ತಾನು ಒಬ್ಬಂಟಿಯಾಗಿಯೂ ಮತ್ತು ಲೇಖಕ ಕಾರ್ಪೆಂಟರ್ ಅವರೊಂದಿಗೆ‌ ಜತೆಗೂಡಿಯೂ ಅನುಭವಿಸುತ್ತಿರುವ ಕಷ್ಟಕೋಟಲೆಗಳ ನೆನಪಾಯಿತು!

ಈಗಲೂ ರೇಪಿಗೆ ಒಳಗಾಗಿ ಸತ್ತಿರುವುದು ದಲಿತ ಹೆಣ್ಣುಮಗಳೇ ಈಗಲೂ ಆರೋಪಿ ಸ್ಥಾನದಲ್ಲಿರುವವರು ವಿಜಾಪುರದ ಆರೋಪಿಗಳಿಗಿಂತಲೂ ಪ್ರಭಾವಿತರೇ! ಈ ಕಾರಣಕ್ಕೆ ಈ ಪ್ರಕರಣದಲ್ಲಿ ಹಿಂದೆ ದುಡುಕಿದಂತೆ ದುಡುಕದೆ ಒಂದಷ್ಟು ಬುದ್ದವಂತಿಕೆಯಿಂದ ನಿಭಾಯಿಸಲು ಮತ್ತು‌ ಕಾನೂನಾತ್ಮಕವಾಗಿ ಯೋಚಿಸಲು ನಮ್ಮ ಕಛೇರಿಗೆ ಬಂದಿದ್ದರು ಎನಿಸುತ್ತದೆ.

ಇಡೀ ಪ್ರಕರಣದ ವಿವರ ರೇಪ್ ಮತ್ತು ಕೊಲೆಯಾದ ಸಂತ್ರಸ್ಥೆಯ ಹೆತ್ತವರು ಹೇಳುವಂತೆ ಯತಾವತ್ತಾಗಿ, ಸಂಕ್ಷಿಪ್ತವಾಗಿ ಹೀಗಿದೆ…

ಪ್ರಿಯಾಂಕ, ಶಾಲಾ ದಿನಗಳಿಂದಲೂ ಚೂಟಿಯಿಂದಿದ್ದ ಹೆಣ್ಣುಮಗಳು, ಓದಿನಲ್ಲಿ ಸದಾ ಮೊದಲ ಸ್ಥಾನ. ಈಕೆ ಎಸ್.ಎಸ್.ಎಲ್.ಸಿ ಯಲ್ಲಿ ತೆಗೆದ ಉತ್ತಮ ಅಂಕ ನೋಡಿ ಇವಳ ತಾಯಿತಂದೆ ಇವಳ ಓದಿಗೆ ಇನ್ನಷ್ಟು ಪ್ರೋತ್ಸಾಹ ಕೊಡಲು ಚಿಮ್ಮಡ ಎಂಬ ಕುಗ್ರಾಮದಿಂದ ಜಮಖಂಡಿ ಎಂಬ ‘ಷಹರ’ಕ್ಕೆ ಕರೆತಂದು, ಕೂಲಿನಾಲಿ ಮಾಡಿ ಒಂದು ಲಕ್ಷ ರೂಗಳನ್ನು ಹೊಂದಿಸಿ “ರಾಯಲ್ ಪ್ಯಾಲೆಸ್ ಪಿ.ಯು.ಕಾಲೇಜು ಮತ್ತು ಹಾಸ್ಟೆಲ್, ಜಮಖಂಡಿ” ಗೆ ಸೇರಿಸಿದರು! ಈ ಪ್ರತಿಷ್ಟಿತ ವಿದ್ಯಾಸಂಸ್ಥೆ ಸ್ಥಳೀಯ ಬಿಜೆಪಿ ಶಾಸಕರಾದ ಆನಂದ ಸಿದ್ದು ನ್ಯಾಮಗೌಡರದು! ಇದರ ಛೇರ್ಮನ್ ಶಾಸಕರ ಸಹೋದರ ಬಸವರಾಜ ಸಿದ್ದು ನ್ಯಾಮಗೌಡರು.

ಪ್ರಿಯಾಂಕ ಹೊಸ ಕಲಿಕೆಯ ವಾತಾವರಣದಲ್ಲಿ ಕಲಿಯುತ್ತಾ ಅತ್ಯಂತ ಖುಷಿಯಿಂದಿದ್ದಳು, ಒಂದು ದಿನ ಅಪ್ಪನಿಗೆ ಪೋನ್ ಮಾಡಿ ತನಗೆ ಬಟ್ಟೆ ಕೊಂಡುಬರುವಂತೆ ಕೇಳಿದಳು. ಅಪ್ಪ ಅಮ್ಮ ಮಗಳಿಗೆ ಬಟ್ಟೆ ಕೊಡಲು ಹಾಸ್ಟೆಲ್ಲಿಗೆ ಬಂದರೆ ಹಾಸ್ಟೆಲ್ಲಿನ ದೊಡ್ಡ ಗೇಟ್ ತೆರೆಯಲು ವಾಚಮೆನ್ ಒಪ್ಪಲಿಲ್ಲ.

ಅಪ್ಪ ಅಮ್ಮ ಇಬ್ಬರೂ ವಾಚಮೆನ್ ಬಳಿ ಅಂಗಲಾಚುತಿದ್ದದ್ದನ್ನು ನೋಡಿ ಮಗಳು ಪ್ರಿಯಾಂಕ ಗೇಟಿನ ಬಳಿ‌ ಓಡಿ ಬಂದು ಹೆತ್ತವರಿಂದ ಬಟ್ಟೆ ತೆಗೆದುಕೊಳ್ಳುತಿದ್ದಾಗ ಅದ್ಯಾಪಕರೊಬ್ಬರು ಗೇಟಿನ ಬಳಿ ಬಂದು ಅನಾವಶ್ಯಕವಾಗಿ ಕ್ಯಾತೆ ತೆಗೆದು ಪ್ರಿಯಾಂಕಳ ಅಪ್ಪ ಅಮ್ಮನೊಂದಿಗೆ ಪ್ರಿಯಾಂಕಳನ್ನೂ ಜಾತಿ ನಿಂದನೆಯ ಅವಾಚ್ಯ ಶಬ್ದಗಳಿಂದ ನಿಂದಿಸತೊಡಗಿದರು!

ಈ ಮದ್ಯೆ ಸದರಿ ಅದ್ಯಾಪಕ ಮತ್ತು ಪ್ರಿಯಾಂಕಳ ಪೋಷಕರ ನಡುವೆ ಒಂದಷ್ಟು ಮಾತಿನ ಚಕಮಖಿ ಕೂಡ ಲಘುವಾಗಿ ನಡೆದು ಹೋಯಿತು. ಕಡೆಗೆ ಪ್ರಿಯಾಂಕ ಅದ್ಯಾಪಕರ ಕ್ಷಮೆ ಕೇಳಿ ಅದ್ಯಾಪಕರೊಂದಿಗೇ ಒಳ ನಡೆದಳು, ಅಪ್ಪ ಅಮ್ಮ ಊರಿಗೆ ಹಿಂದಿರುಗಿದರು.

ಅದೇ ದಿನ ಸಂಜೆ ಪ್ರಿಯಾಂಕಳ ಅಪ್ಪನಿಗೆ ಹಾಸ್ಟೆಲ್ಲಿನ ವಾಚಮೆನ್ ಪೋನ್ ಮಾಡಿ ” ನಿಮ್ಮ ಮಗಳು ಆಸ್ಪತ್ರೆಗೆ ದಾಖಲಾಗಿದ್ದಾಳೆ ಹೊರಟು ಬನ್ನಿ..” ಎಂದಿದ್ದ! ಪ್ರಿಯಾಂಕಳ ಹೆತ್ತವರು ಗಾಬರಿಗೊಂಡು ಓಡಿಬಂದು ಆಸ್ಪತ್ರೆ ತಲುಪವಷ್ಟರಲ್ಲಿ ಪ್ರಿಯಾಂಕಳನ್ನು ಡಿಸಾರ್ಜ್ ಮಾಡಿಸಿಕೊಂಡು ಆಸ್ಪತ್ರೆಯಿಂದ ಹಾಸ್ಟೆಲ್ಲಿಗೆ ಕರೆದುಕೊಂಡು ಹೊರಟುಹೋಗಿದ್ದರು!?

ಪ್ರಿಯಾಂಕಾಳ ಪೋಷಕರು ಹಾಸ್ಟೆಲ್ಲಿಗೆ ಹೋದಾಗ ತಿಳಿದ ವಿಷಯವೇನೆಂದರೆ ತಮ್ಮ ಜತೆ ಅಂದು ಬೆಳಿಗ್ಗೆ ಜಗಳವಾಡಿದ್ದ ಆದ್ಯಾಪಕ ಪ್ರಿಯಾಂಕಳ ಕಪಾಳಕ್ಕೆ ಬಲವಾಗಿ ಹೊಡೆದ ಪರಿಣಾಮ ಪ್ರಿಯಾಂಕ ಪ್ರಜ್ನೆ ತಪ್ಪಿ ಬಿದ್ದಿದ್ದಳು! ನಂತರ ಆಸ್ಪತ್ರೆ ಸೇರಿಸಿ ಚಿಕಿತ್ಸೆ ಕೊಡಿಸಿ ಹಾಸ್ಟೆಲ್ಲಿಗೆ ವಾಪಸ್ಸು ಕರೆದೊಯ್ದಿದ್ದರು.

ಈ ವಿಷಯ ತಿಳಿದಾಕ್ಷಣ ಪ್ರಿಯಾಂಕಳನ್ನು ಹಾಸ್ಟೆಲ್ಲಿನಿಂದ ಕರೆದೊಯ್ಯಲು ಅವಳ ಪೋಷಕರು ತೀರ್ಮಾನಿಸಿದರು. ಅಷ್ಟರಲ್ಲಿ ರೀತಾ ಜೈನರ್ ಎಂಬ ಪ್ರಿನ್ಸಿಪಾಲರು ಇವರನ್ನು ಸಮಾದಾನಪಡಿಸಿ ಮುಂದೆ ಈ ರೀತಿಯ ಅನಾಹುತ ಆಗದಂತೆ ಎಚ್ಚರವಹಿಸುವುದಾಗಿ ದೈರ್ಯ ಹೇಳಿ ಕಳಿಸಿದರು.

ಈ ಘಟನೆಯ ನಂತರ ದಿನಾಂಕ 9ನೇ ಜುಲೈ 2019 ರಂದು ರಾತ್ರಿ 11 ಗಂಟೆಗೆ ಹಾಸ್ಟೆಲ್ಲಿನಿಂದ ಪ್ರಿಯಾಂಕ ತಂದೆಗೆ ಪೋನ್ ಮಾಡಿ “ನಿಮ್ಮ ಮಗಳು ಪ್ರಿಯಾಂಕ ಕಾಲೇಜು ಕಟ್ಟಡದ ನಾಲ್ಕನೇ ಮಹಡಿಯಿಂದ ಬಿದ್ದು ಸತ್ತಿದ್ದಾಳೆ..” ಎಂದರು! ಪ್ರಿಯಾಂಕಳ ಹೆತ್ತವರು ಎದೆಎದೆ ಬಡಕೊಂಡು ಗೋಳಾಡುತ್ತಾ ಅಲ್ಲಿಗೆ ಹೋದರೆ, ಹದಿನೇಳು ವಯಸ್ಸಿನ ಮಗು ಪ್ರಿಯಾಂಕಳನ್ನು ಪಕ್ಕಕ್ಕೆ ತಿರುಗಿಸಿ ಮಲಗಿಸಿದಂತೆ ವ್ಯವಸ್ಥೆ ಮಾಡಿದ್ದರು!

ಆಕೆಯ ಚಪ್ಪಲಿಗಳನ್ನು ಟೆರೇಸಿನ ಮೇಲೆ ಜೋಡಿಸಿ ಇಡಲಾಗಿತ್ತು!! ಅಲ್ಲಿಂದ ಆಚೆ ಜಮಖಂಡಿಯ ಗ್ರಾಮಾಂತರ ಠಾಣೆಯ ಪಿ.ಎಸ್.ಐ, ಸಿ.ಐ.ಪಿ ಮತ್ತು ಡಿ.ವೈ.ಎಸ್.ಪಿ ಗಳು ಈ ಕೇಸನ್ನು ಮುಚ್ಚಲು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಎಲ್ಲಾ ರೀತಿಯ ಕೆಲಸಗಳನ್ನೂ ಮಾಡತೊಡಗಿದರು! ಅಂದು ಪ್ರಿಯಾಂಕಳನ್ನು ಹೊಡೆದ ಅದ್ಯಾಪಕನಾದಿಯಾಗಿ ಆ ವಿದ್ಯಾಸಂಸ್ಥೆಯಲ್ಲಿನ ಯಾರ ಹೆಸರುಗಳನ್ನೂ ಹೊರಬಾರದಂತೆ ಎಚ್ಚರ ವಹಿಸಿದರು! ದೇಹವನ್ನು ಬೇಗ ಸುಡುವಂತೆ ಹೆತ್ತವರನ್ನು ಒತ್ತಾಯಿಸಿದರು!

ತಮಗೆ ಬೇಕಾದಂತೆ ಪೋಸ್ಟ್ ಮಾರ್ಟಂ ಮಾಡಿಸಿಕೊಂಡರು! ಮೊದಲಿಗೆ ಹೆತ್ತವರು ಕೊಟ್ಟ ‘ರೇಪ್ ಅಂಡ್ ಮರ್ಡರ್’ ದೂರನ್ನು ಕೂಡ ದಾಖಲಿಸಲಿಲ್ಲ! ಆ ಸಂಧರ್ಭದಲ್ಲಿ ಒಂದಷ್ಟು ದಲಿತ ಸಂಘಟನೆಗಳು ಬಂದಿದ್ದರಿಂದ ನಂತರ ದಾಖಲಿಸಿಕೊಂಡರು! ಅದರ ನಂತರ ದಲಿತ ಸಂಘಟನೆಗಳು ‘ಕಾರಣಾಂತರ’ದಿಂದ ನಿಷ್ಕ್ರಿಯವಾದವು!? ಪ್ರಿಯಾಂಕಳ ಹೆತ್ತವರು ದಿಕ್ಕಿಲ್ಲದವರಾದರು!

ಆಶ್ಚರ್ಯವೆಂದರೆ ಪೋಲಿಸರೇನೋ F.I.R (0102/2019)ದಾಖಲಿಸಿಕೊಂಡಿದ್ದಾರೆ. I.P.C ಸೆಕ್ಷನ್ 376, 302, 34 (ರೇಪ್ ಮತ್ತು ಕೊಲೆ) ಮತ್ತು ‘ಪೋಕ್ಸೊ ಕಾಯಿದೆ’ಯಲ್ಲೂ ದೂರು ದಾಖಲಿಸಿದ್ದಾರೆ! ಆದರೆ ಅಪಾದಿತರು ಮಾತ್ರ ವ್ಯಕ್ತಿಗಳಲ್ಲ ಬದಲಿಗೆ ‘ಜಮಖಂಡಿ ರಾಯಲ್ ಪ್ಯಾಲೆಸ್ ಕಾಲೇಜ್ ಅಡ್ಮಿನಿಸ್ಟ್ರೇಶನ್’ ಎಂಬ ಸಂಸ್ಥೆ!! ಈ ದೇಶದಲ್ಲಿ ಒಂದು ಸಂಸ್ಥೆ ಕೂಡ ರೇಪ್ ಅಂಡ್ ಮರ್ಡರ್ ಮಾಡುತ್ತದೆ!!

ಈ ಘಟನೆ ಆಗಿ ನಾಲ್ಕು ತಿಂಗಳಾದರೂ ಯಾರನ್ನೂ ಈವರೆಗೆ ಅರೆಸ್ಟ್ ಮಾಡುವುದಿರಲಿ ವಿವಾರಣೆಯನ್ನೂ ಮಾಡಿಲ್ಲ! ಪ್ರಿಯಾಂಕರೆಡ್ಡಿಯ ಪ್ರಕರಣ ದೇಶಾದ್ಯಂತ ಪ್ರತಿಭಟನೆಗೆ ಕಾರಣವಾದಂತೆ ಪ್ರಿಯಾಂಕ ಪ್ರಕರಣ ಆಗಲಿಲ್ಲ. ಪ್ರಿಯಾಂಕರೆಡ್ಡಿ ಕೇಸಿನ ತಪ್ಪಿತಸ್ಥರನ್ನು ಬೀದಿಯಲ್ಲೇ ಸುಡಬೇಕು, ನಡುಬೀದಿಯಲ್ಲಿ ನೇಣುಹಾಕಬೇಕು ಎಂಬಂತೆ ಯಾವ ಮಾದ್ಯಮವೂ ಜಮಖಂಡಿ ಪ್ರಿಯಾಂಕ ಕೇಸಿನಲ್ಲಿ ಒತ್ತಡ ತರಲಿಲ್ಲ!

ಯಾರೂ ಮೇಣದ ಬತ್ತಿ ಹಚ್ಚಲಿಲ್ಲ, ಪಾರ್ಲಿಮೆಂಟಿನಲ್ಲೂ ಚರ್ಚೆಯಾಗಲಿಲ್ಲ!! ಯಾಕೆಂದರೆ ಇವೆಲ್ಲಾ ಆಗುವಷ್ಟು ಪ್ರಿಯಾಂಕ ಪ್ರತಿಷ್ಟಿತ ಜಾತಿಗೆ ಸೇರಿದವಳಲ್ಲ, ಇವೆಲ್ಲಾ ಬೇಡ ಬಿಡಿ.. ಪ್ರಿಯಾಂಕಳನ್ನು ಹೆತ್ತವರು ಅಂಗಲಾಚಿ ಬೇಡುತಿದ್ದಾರೆ.. ಅವರ ಮಗಳಿನ ಅನ್ಯಾಯದ ಸಾವಿಗೆ ಕನಿಷ್ಟ ನ್ಯಾಯಕೊಡಿಸಿ, ಅಷ್ಟು ಸಾಕು…?

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending