Connect with us

ಬಹಿರಂಗ

ಬುಲೆಟ್ straight hit….!

Published

on

*ಹೆಂಗಸರು* ಕುಕ್ಕರ್ ಗೆ , ಗಂಡಸರು ಲಿಕ್ಕರ್ ಗೆ ಆಸೆ ಪಟ್ಟು ತಮ್ಮ ಅಮೂಲ್ಯವಾದ ಮತವನ್ನು ಮಾರಿಕೊಂಡರೆ ಮುಂದಿನ ದಿನಗಳಲ್ಲಿ ನಿಕ್ಕರೂ ಇಲ್ಲದಂತಾಗುತ್ತದೆ ಯೋಚಿಸಿ ಮತ ಚಲಾಯಿಸಿ…

ನಾನ್ ‌ಈ ಮಾತನ್ನು ಯಾಕೆ ಹೇಳ್ತಿದ್ದೀನಿ ಅಂದ್ರೆ, ಇಂದಿನ ನಮ್ಮಗಳ ಸ್ಥಿತಿ ಧಾರುಣವಾಗಿದೆ…

ಈ ಪ್ರಜಾಪ್ರಭುತ್ವ ದಲ್ಲಿ ಯಾರನ್ನೋ ಪ್ರಜಾಪಾಲಕ ಅಂತ ಆಯ್ಕೆ ಮಾಡಿರ್ತೀವಿ, ಅವ್ರು ನಮ್ಮನ್ ಪಾಲನೆ, ಪೋಷಣೆ ಮಾಡ್ತನೆ ಅಂತ ಆಸೆ‌ ಇಟ್ಕೊಂಡಿರ್ತೀವಿ, ಆದ್ರೆ ಮುಂದಿನ ದಿನಗಳಲ್ಲಿ ಅವರ ಹೇಳ್ದಂಗೆ ಕೇಳೋ ಪರಿಸ್ಥಿತಿ ನಲ್ಲಿ ನಾವ್ ಇರ್ತೀವಿ.. ಇಂಥ ಧಾರುಣ ಸ್ಥಿತಿ ಯಾರಿಗೂ ಬೇಡ…

ಈ ಹಾಳಾದ್ ರಾಜಕೀಯನೇ‌ ಹಂಗೆ ರೀ… ಮೊದ್ಲು ಬಂದು ಕಾಲಿಗ್ ಬೀಳದೇನ್ ಕೇಳ್ತಿರಿ, ಅಮೇಲ್‌ ಕಾಲಿಗೆಲ್ಲಿ , ಹುಡಿಕೊಂಡ್ ಹೋದ್ರು ಕೈಗೆ ಸಿಗಕಿಲ್ಲ ಅವ್ರು….

ನಂಗು ಒಂದು ಕನಸಿತ್ತು ರೀ..
ಆ ಕನಸಲ್ಲಿ ಬರೀ ಪ್ರಶ್ನೆ ಗಳೇ…
ಆ‌ ಪ್ರಶ್ನೆಗಳನ್ನು ಹುಡಿಕೊಂಡು ಹೋದ್ರೆ ಉತ್ತರಗಳೆ ಪ್ರಶ್ನಾರ್ಥಕ??
ಈ ರಾಜಕೀಯ ಅಂದ್ರೆ ಏನು, ರಾಜಕೀಯ ಅಂತ ಹೆಸರಿಟ್ಟೋರ್ ಯಾರು … ರಾಜಕೀಯ ಅನ್ನದ್ ನಮ್ ಗೆ ಬೇಕಾ…!???!!
ನಾನ್ ಸ್ಲೂಲ್ ನಲ್ಲಿ ಓದೋ ಟೈಮ್ ನಲ್ಲಿ ಪ್ರಜೆಗಳಿಂದ , ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ , ನಮ್ ಪ್ರಜಾಪ್ರಭುತ್ವ ಅಂತ ಏನೋ ಓದಿದ್ ನೆನಪು ಆದ್ರೆ ಈಗಿನ್ ಕಾಲದಲ್ಲಿ ಇದೆಲ್ಲ ಎಲ್ಲಿದೆ ಅನ್ನದೆ ನಂಗೆ ಗೊತ್ತಿಲ್ಲ… ಯಾಕಂದ್ರೆ ಅಲ್ಲಿ ಪ್ರಜೆಗಳಿಗೋಸ್ಕರ ಏನು ನಡಿತ್ತಿಲ್ಲ ಎಲ್ಲ ಅವರವರ ಪರಿವಾರದವರಿಗೆನೆ ನಡಿತ್ತಿರದು. ಅದೆ‌‌ ಪ್ರಜೆಗಳಿಂದನೆ ಅಧಿಕಾರ ಇಡಿದೋರೆಲ್ಲ ಇವತ್ ಏನ್ ಮಾಡ್ತಿದ್ದಾರೆ…
ಒಂದ್ ಕ್ಷಣ ಯೋಚನೆ ಮಾಡಿ???
ಇದೇನಪ್ಪ ಇವ್ನು ಹುಚ್ಚನ್ ಥರ ಹೇಳ್ತಾವ್ನೆ ಅಂತ ಅನ್ಕೋ ಬೇಡಿ, ನನ್ನ ಹುಚ್ಚಾ ಅನ್ಕೊಂಡ್ರು ಪರ್ವಾಗಿಲ್ಲ.. ಜಸ್ಟ್ ಥಿಂಕ್ ಮಾಡಿ..!!!
ಪ್ರಜಾಪ್ರಭುತ್ವ ದಲ್ಲಿ ನಮ್ಮ ನಿಮ್ಮಂತ ಪ್ರಜೆಗಳ ಸ್ಥಿತಿ ಹೆಂಗಿದೆ,ನಮ್ ಹೆಂಡತಿ ಮಕ್ಕಳ ಸ್ಥಿತಿ ಹೆಂಗಿದೆ !! ಅದೇ !!! so called ರಾಜಕಾರಣಿಗಳು , ನಮ್ ನಾಯಕರುಗಳು ಅಂತ ನಾವೇನ್ ಅಟ್ಟಕ್ ಹೇರಿಸಿ, ಉಪ್ಪರಿಗೆ ಮೇಲೆ ಕೂರ್ಸಿದವಲ್ಲಾ ??? ಅವರೆಲ್ಲ ಹೆಂಗ್ ಇದಾರೆ,ಅವರ ಹೆಂಡತಿ ,‌ಮಕ್ಕಳೆಲ್ಲ ಹೆಂಗ್ ಇದಾರೆ ಯೋಚನೆ ಮಾಡಿ ??? ನಾವು ನೀವು
ಅದೇ ಕಿತ್ತೋಗಿರೋ ಮನೆಗಳು , ೧ರುಪಾಯಿ ಕೆಜೆ ಅಕ್ಕಿ ಅನ್ನ, ಬೇಳೆ ಸಾರು, ಅದೇ ಹಳೆ ಮೋಟರ್ ಸೈಕಲ್ ಗಳು , ನೇತಾಕ್ಕೊಂಡ್ ಹೋಗ್ತಿರೋ ಬಸ್ ಗಳು, ಕಿತ್ತೋಗಿರೋ ರೋಡುಗಳು, ಗುಂಡಿ ಬಿದ್ದಿರೋ ೋಡುಗಳು, ತುಕ್ಕಿಡಿದಿರುವ ಬೋರ್ಡುಗಳು, ಕಸ ಕಟ್ಕೊಂಡಿರುವ ಮೋರಿಗಳು, ದುರ್ನಾಥ ಹೊಡಿತಿರೋ ಸುಲಭ ಶೌಚಾಲಯಗಳು , ‌ಅದೇ ಸರ್ಕಾರದ ಹಳೆ ಹರಕು ಮುರುಕ ಕಾಲೇಜುಗಳು , ಬಿದ್ದೋಗ್ತಿರೋ ಶಾಲೆಗಳು ,ತೂಕಡ್ಸೋ ಮೇಷ್ಟ್ರು ಗಳು , ಚೀಟಿ ವ್ಯಾಪಾರ ಮಾಡೋ ಮೇಡಂಗಳು… ಇವು ನಮ್ ಗಳ ಗಾಂಧಿ ಲೋಕ ,ಇವತ್ತು ಎಷ್ಟೋ‌ಜನಕ್ಕೆ ಮಲಗಕ್ಕೆ ಸೂರಿಲ್ಲ , ತಿನ್ನಕ್ಕೆ ಅನ್ನ ಇಲ್ಲಾ …ಅದೆ ಎಂ.ಎಲ್‌ಎ,‌ ಎಂಪಿ ,‌ಮಂತ್ರಿಗಳ ಹೆಂಡತಿ ಮಕ್ಕಳಿಗೆ ಗಾದ್ರೆ ಏಸಿ ಕಾರಲ್ಲಿ ಓಡಾಟ, ಏಸಿ ಮನೆ , ಬಾಸುಮತಿ ಅಕ್ಕಿ , ಹೈಟೆಕ್ ಸ್ಕೂಲ್ಗಳು, ಫಾರಿನ್ ಹೈಯರ್ ಎಜುಕೇಶನ್, ಫಾರಿನ್ ಟ್ರಿಪ್ಗಳು …ಇನ್ನೂ ಬೇಜಾನು .

ನಮ್ ಅಣ್ತಂದಿರೆಲ್ಕ ಅದೆ‌ ಕೂಲಿನಾಲಿ ಜೀವನ, ಆದ್ರೆ ಅವರ್ ಅಣ್ಣ ತಮ್ಮಂದಿರೆಲ್ಕಾ ತಾಲ್ಲೂಕು ಬೋರ್ಡ್ ಮೆಂಬರ್ಗಳು ,ಜಿಲ್ಲಾ ಪಂಚಾಯತ, ಎಲೆಕ್ಟೆಡ್ ಗಳು ಇನ್ನು ಹೇಳ್ತಾ ಹೋದ್ರೆ ಹೇಳಕ್ಕೆ ಸಾಲಲ್ಲ ನೀವೆ ಯೋಚನೆ ಮಾಡಿ ನಮ್ಗು ಅವರಿಗೂ ಇರೂ ಡಿಫರೆನ್ಸ್‌‌‌ … ಏನು ಅಂತ…??

ಇನ್ನು ಎಲೆಕ್ಷನ್ ಟೈಮ್ ಅತ್ರ ಬಂತು ಅಂದ್ರೆ ಮನೆ ಮನೆಗೆ ಬರದು, ಕಂಡ್‌ಕಂಡೋರ್ ಕಾಲಿಗೆಲ್ಲ ಬಿಳೋದು , ಸುಳ್ಳು ಸುಳ್ಳು ಆಶ್ವಾಸನೆ ಕೊಡದು, ಏನೆ ಸಮಸ್ಯೆ ಗಳಿದ್ರು ಚುನಾವಣಾ ‌ಟೈಮ್ ನಲ್ಲೇ ಕೈ ಆಕದು, ಗರಿ ಗರಿ ನೋಟಗಳನ್ನು ಅಂಚದು, ಹೆಂಡ ಸಾರಾಯಿ ಕುಡ್ಸದು, ಸೀರೆ ಕುಕ್ಕರ್ ತರ್ಸದು, ಕೋಳಿ ಕೋಡದು , ಬಿರ್ಯಾನಿ ಊಟ ಆಕ್ಸದು , ಕಂಪನಿಗಳಲ್ಲಿ ಕೆಲಸ ಕೊಡ್ತೀನಿ ಅನ್ನದು, ಇನ್ನು ಮುಂತಾದವು ನೀವೆ ಯೋಚನೆ ಮಾಡಿ ಇರ್ಲಿ ಇವೆಲ್ಲ ಕತ್ತಲೆ ರಾತ್ರಿಯ ಕನಸುಗಳು.‌‌‌…

ಅಲ್ಲ ರೀ ನೀವೆ ಯೋಚನೆ ಮಾಡಿ , ನಮ್ಮನ್ ಸೇವೆ ಮಾಡ್ತೀನಿ ಅಂತ ಬಂದೋರ್ಗೆ ಇವೆಲ್ಲಾ ಬೇಕ… ಅವರ್ ಅವರು ಮಾಡೋ ಕೆಲಸ,‌ಅಭಿವೃದ್ದಿ ಕಾರ್ಯಗಳೆ ಅವರನ್ನ ಮತ್ತೆ ಆಯ್ಕೆ ಮಾಡ್ಬೇಕು , ಅಂತ ಕೆಲಸ ಮಾಡಿಲ್ಲ ಅಂದೋರೆ ತಾನೆ , ಪದೆ ಪದೆ ಪ್ರಚಾರ ಮಾಡದು, ಇಂತ ‌ಪ್ರಚಾರಕ್ಕೆ ನಾವೆಲ್ಲರೂ ಬಲಿ ಆಗ್ಬೇಕ , ಬೇಡ ರೀ ಬೇಡ …
ನಿಮ್ಮ ಮತವನ್ನ ನೀವು ಮಾರ್ಕೊತಿರ ಅಂದ್ರೆ ನಿಮ್ ನಿಮ್ ನಿಯತ್ತನ್ನೆ ಮಾರ್ಕೋತಿರ ಅಂತ, ಇಂತ ನಿಯತ್ತಿಲ್ಲದೋರು ಬೆಜಾನ್ ಇದಾರೆ ಬಿಡಿ …

ನಮ್‌ ಜನ ಎಷ್ಟೇಳುದ್ರು ಉದ್ದಾರ ಆಗಲ್ಲ, ಯಾಕಂದ್ರೆ ಅವರಿಗೂ ಗೊತ್ತಿಲ್ಲ ನಾವ್ ಎಂತೋರ್ಗೆ ನಮ್ ಓಟ್ನಾ‌ ಕೊಡ್ತಿದ್ದೀವಿ , ಅವರ್ ಏನೆನ್ ದಬ್ಬಾಕಿದ್ದಾರೆ ಅಂತಾ ನೀವೆ ಕೇಳ್ಕೊಳ್ಳಿ…. ಒಂದು ಕಟು ಸತ್ಯ ನಿಮ್ಗೆ ಹೇಳ್ತಿನಿ‌ ಕೇಳಿ… ನಾವೆಲ್ಲ ಒಂದು ಸ್ಕೂಲಿಗೆ ನಮ್ ಮಕ್ಕಳನ್ನ ಜಸ್ಟ್ ಅಡ್ಮಿಷನ್‌ ಮಾಡ್ಸಬೇಕು ಅಂದ್ರೆ ತಂದೆ ತಾಯಿಯರು ಡಿಗ್ರಿ ಹೋಲ್ಡರ್ಸ್ ಆಗಿರ್ಬೇಕು ಅಂತರೆ, ಇನ್ನೂ ಈ ಸರ್ಕಾರ ದ A, B ,C ಗ್ರೇಡ್ ಕೆಲಸ ಮಾಡಕ್ಕೆ ಅಂದ್ರೆ SDA, FDA ,PDO , IAS ,IPS ಇಂತ ಜನಸಂಪರ್ಕ ಸೇವ‌ ಕೆಲಸಕ್ಕೆ ಸೆಲೆಕ್ಟ್ ಆಗ್ಬೇಕು ಅಂದ್ರೆ ಅದಕ್ಕೂ ಒಂದು ರಿಟನ್ ಎಗ್ಸಾಂ ಅಮೇಲೆ ಮುಖಾಮುಖಿ ಇಂಟರ್ವ್ಯೂ ಆಗ್ಬೇಕು,
ಏನೆ ಆದರೂ ಯಾವುದೇ ಒಂದು ಉದ್ಯೋಗ ಮಾಡ್ಬೇಕು ಅಂದ್ರು ಅದಕ್ಕೆ ಇಂತ‌ದೆ ವಿದ್ಯಾರ್ಹತೆ ಬೇಕು, ಇಷ್ಟೇ ಮಾರ್ಕ್ಸ್ ತೆಗೆದು ಪಾಸ್ ಆಗ್ಬೇಕು , ದೈಹಿಕವಾಗಿ ಫಿಟ್ ಆಗಿರ್ಬೇಕು ಅಂತೆಲ್ಲಾ ಹತ್ತಾರು ಪರೀಕ್ಷೆ ಗಳು ನಮಗೆ ಇದೆ, ಆದ್ರೆ ನಮ್ಮನ್ನು ಉದ್ದಾರ ಮಾಡೋ so called ನಮ್ ನಾಯಕರು ಅಂತ ಹೇಳ್ತಿರಲ್ಲ ಅಂತ ಜನಪ್ರತಿನಿಧಿಗಳಿಗೆ ಯಾಕೆ, ಒಂದು ಮಾನಧಂಡ ಮಾಡಿ ಅವರಿಗೂ ಒಂದು ಪರೀಕ್ಷೆ ಮಾಡ್ಬಾರ್ದು.. !! ಅದ್ರಲ್ಲಿ ಅವರಿಗೂ ಕೂಡ ಸಾಮಾನ್ಯ ‌ ಜ್ಞಾನ, ಜನ ಸಾಮಾನ್ಯರ , ರೈತರ ಬಗ್ಗೆ ಮಾಹಿತಿ , ರಾಜನೀತಿ, ಇತಿಹಾಸ, ಪ್ರಾದೇಶಿಕ ಜ್ಞಾನ, ವಸ್ತುಸ್ಥಿತಿಯ ಅರಿವಿನ ಬಗ್ಗೆ ಅವರಿಗೂ ಒಂದು ಪರೀಕ್ಷೆ ಇಡ್ಲಿ , ಅವಾಗ ಗೊತ್ತಾಗುತ್ತೆ ಇವತ್ ಸಾಮನ್ಯ ಶ್ರೀ ಸಾಮನ್ಯನ ಕಷ್ಟ ಏನು , ಮಾರ್ಕೆಟ್ ನಲ್ಲಿ ತರಕಾರಿ ಬೆಲೆ ,ಡೈರಿಯಲ್ಲಿ ಲೀಟರ್ ಹಾಲಿನ ಬೆಲೆ, ಆಟೋ ಚಾರ್ಜ ಏನಾಗಿದೆ, ಇದೆಲ್ಲಾ ಗೊತ್ತಿದ್ರೆ ತಾನೆ ತಿಳಿಯದು , ಇವತ್ತು ಡಿಗ್ರಿ ವರೆಗು ಓದ್ಬೇಕು ಅನ್ನೋ ಎಷ್ಟೋ ಮಕ್ಕಳ ಕನಸು‌ ಹಾಳಾಗೋಗಿದೆ, ಯಾಕಂದ್ರೆ ಅವರಲ್ಲಿ ಕಿತ್ತು ತಿನ್ನೋ ಬಡತನ ಇದ್ನೆಲ್ಲಾ ಹೊಗಲಾಡ್ಸದ ಯಾವಾಗ. ಇಂತ‌ ಕಷ್ಟ ಸುಖ ಗೊತ್ತಿರ್ಬೇಕು ತಾನೆ , ಅದ್ರಲ್ಲಿ ಪಾಸ್ ಆಗಿ ಅರ್ಹರಾದವರಿಗೆ ಅಂತ ಸ್ಥಾನ ಕಲ್ಪಿಸಬೇಕು… ಹಿಂಗಾದಾಗಲ್ಲೆ ಗೊತ್ತಾಗದು ಇವತ್ ನಮ್ ಜನ ಏನೇನ್ ಪಡು ಪಡ್ತಿದ್ದಾರೆ ಅಂತ. ದುಡ್ಡಿನ ಮದದಿಂದ ಮೆರಿತ್ತಿದವ್ರು, ಅಪ್ಪನ್ ಕಾಲದಿಂದಲೂ ಆಲದ ಮರ ಆಕಿದು ನಾವೇ ಅನ್ಕೊಂಡು ಮೆರಿತ್ತಿದ್ದವರ ಯೋಗ್ಯತೆ ಕೂಡ ಗೊತ್ತಾಗದು…
ನಾವು ಜಸ್ಟ್ ಒಂದು ಜವಾನನ ಕೆಲಸಕ್ಕೆ ಅಪ್ಲೈ ಮಾಡುದ್ರು ಅದಕ್ಕೂ ಇಷ್ಟು ಅಂತ ಅಪ್ಲಿಕೇಷನ್ ಫೀಸ್ ಕಟ್ಬೇಕು, ಪೋಲಿಸ್ ಧೃಡಿಕರಣ ಆಗ್ಬೇಕು , ನಮ್ ಮೇಲೆ ‌ಒಂದು ಕಂಪ್ಲೆಂಟ್ ಇರ್ಬಾರ್ದು ಅಂತೆಲ್ಲಾ ಹೇಳ್ತಾರೆ ಆದ್ರೆ ಕ್ರಿಮಿನಲ್ ಕೇಸ್ ಇದ್ದು, ರೌಡಿ ಶೀಟರ್ ಗಳಾಗಿ, ಆದೋರ್ನೆಲ್ಲ ಚುನಾವಣಾ ಅಭ್ಯರ್ಥಿ ಅಂತ ಹೇಳ್ತಾರೆ ಇದ್ನೆಲ್ಲ ನಿಲ್ಸದು ಯಾವಾಗ ??? .ಅವರಿಗೆ ಒಂದು ನ್ಯಾಯ ನಮಗೆ ಒಂದು ‌ನ್ಯಾಯನ .

ಒಬ್ಬ ಕಿರಾತಕನ‌ಕೈಗೆ ಆಡಳಿತ ಕೊಟ್ರೆ ಏನ್ ‌ತಾನೆ ಮಾಡ್ತಾನೆ!! ಇರದ್ ಬರೋದ್ನೆಲ್ಲಾ ಕೊಳ್ಳೆ ಹೊಡ್ಕೊಂಡ್ ಹೋಗ್ತಾನೆ…
ಇವತ್ತು ಒಬ್ಬ ರೈತ 50ಸಾವಿರ ಬ್ಯಾಂಕಲ್ಲಿ ಸಾಲ ತಗೋತಾನೆ , ಬ್ಯಾಂಕನವರು ಕೋಡೋ ಹಿಂಸೆಯಿಂದ ನೇಣಾಕೊಂಡು ಕೊನೆಗೊಮ್ಮೆ ಸಾಯ್ತಾನೆ.. ಆದ್ರೆ ಇವತ್ತು ಸಾವಿರಾರು ಕೋಟಿ ಸಾಲ ಮಾಡಿದ್ರು ಫಾರಿನ್ ‌ನಲ್ಲಿ ಜುಮ್ ಅಂತಾ ಹೋಡಾಡ್ಕೊಂಡಿ ಇದ್ದಾರೆ. ಇಂತೋರ್ನೆಲ್ಕ ಒದ್ದು ಬುದ್ದಿ ಕಲಿಸೋ ಒಬ್ಬ ಸಾಮನ್ಯರಿಗೆ ನಿಮ್ ಅಧಿಕಾರ ನೀಡಿ.
ಯಾರೆ ಆಗ್ಲಿ ಯಾರಿಗೆ ಅರ್ಹತೆ ಇರುತ್ತೋ ಅಂತವರಿಗೆ ವಿಧಾನಸೌದದ ಎಂಟ್ರಿ ನೀಡ್ಬೇಕು…

ಅದೇ ಥರ ಗ್ರಾಮ‌ ಪಂಚಾಯತ ಸದಸ್ಯನಿಗೂ ಕೂಡ ಒಂದ್ ಅರ್ಹತೆ ಬೇಕು , ಡಿಗ್ರಿ ಮಾಡಿರ್ಬೇಕು… ಆ ಊರಿನ ಹಾಗು ಹೋಗು ಗೊತ್ತಿರ್ಬೇಕು.. ಅಟ್ ಲಿಸ್ಟ್ ವಾರಕ್ಕೆ ಒಂದ್ ಟೈಮ್ ಜನಸಭೆ ಮಾಡ್ಬೇಕು ಆ‌ ಊರಲ್ಲಿ‌ ಏನೇನ ಅವಸ್ಯಕತೆ‌ ಇದೆ ಅನ್ನದ್ನ ಅವನು ತಿಳಿಬೇಕು… ಒಳ್ಳೆ ಕುಡಿಯೋ ನೀರು, ವಿದ್ಯುತ್ ದೀಪದ ಕಂಬ ಸರಿಯಾಗಿದ್ಯ, ಮೋರಿ‌ನಲ್ಲಿ‌ ನೀರು ಸರಿಯಾಗ‌ ಹೋಗ್ತಿದ್ಯ ಅನ್ನೋ ಕಾಮನ್ ಸೆನ್ಸ್ ಅವನಿಗೆ ಇರ್ಬೇಕು.. ಅದೆ‌ ಥರ ತಾಲ್ಲೂಕು ‌ಪಂಚಾಯ್ತಿ, ಜಿಲ್ಲಾ ಪಂಚಾಯತ, ಶಾಸಕ, ‌ಸಂಸದ ಕೂಡ‌ ಪ್ರತಿ‌ ಹಳ್ಳಿ ಹಳ್ಳಿಗೂ ಬಂದು ಆ ಗ್ರಾಮದ ಕನಿಷ್ಟ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡ್ಬೇಕು… ಇನ್ನು ಡಿಗ್ರಿ ಮಾಡಿ‌ ನಿರುದ್ಯೋಗಿ ಗಳಿಗೆ ಒಂದೊಳ್ಳೆ ಕೆಲಸ ಕಲ್ಪಿಸಿಕೊಡಬೇಕು. ಆಯ ತಾಲ್ಲೂಕಿನಲ್ಲಿ ಆದಷ್ಟು ಉದ್ಯೋಗ ‌ಸೃಷ್ಟಿ ಮಾಡ್ಬೇಕು… ಇಂತ‌ ಕೆಪಾಸಿಟರ್ ಯಾರಿದರೋ ಅವರಿಗೆ ಪಟ್ಟ ಕಟ್ಬೇಕು…

ಇನ್ನು ಮಂತ್ರಿ ಮಂಡಲದ ಬಗ್ಗೆ ಹೇಳದೆ ಆದ್ರೆ ಒಂದೊಂದು ಮಂತ್ರಿ ಪದವಿಗೂ ಇಂತಿಷ್ಟೇ ಅರ್ಹತೆ ಇರ್ಬೇಕು, ಉದಾಹರಣೆಗೆ ಆರೋಗ್ಯ ಮಂತ್ರಿ ಆಗ್ಬೇಕು ಅಂದ್ರೆ ಮೆಡಿಕಲ್ ಓದಿರ್ಬೇಕು, ಕ್ರೀಡಾ ಸಚಿವ ಸ್ಪೋರ್ಟ್ಸ್ ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಪದಕವನ್ನು ಗೆದ್ದಿರ್ಬೇಕು. ಕಾನೂನು ಸಚಿವ ಆಗೋನು ಕಾನೂನು ಪದವಿ‌ ಪಡೆದಿರ್ಬೇಕು. ಲೋಕೋಪಯೋಗಿ ಸಚಿವ‌ ಸಿವಿಲ್ ಇಂಜಿನಿಯರಿಂಗ್ ಮಾಡಿರ್ಬೇಕು. ಶಿಕ್ಷಣ ಸಚಿವ ಡಬಲ್‌ ಡಿಗ್ರಿ ಪಡೆದಿರಬೇಕು, ಮುಖ್ಯ ಮಂತ್ರಿ ಆಗೋನು ಎಲ್ಲಾ ವಿಷ್ಯದಲ್ಲೂ ಆಲ್ ರೌಂಡರ್ ಆಗಿರ್ಬೇಕು. ಇಂಗಿದಾಗ್ಲೆ ತಾನೆ ನಮ್‌ಗಳ ಕಷ್ಟ ನು ತಿಳಿಯದು .

ಇಂಗೆ ನೀವೆ ಯೋಚನೆ ಮಾಡಿ‌ ಯಾವ್ ಯಾವ್ ಮಂತ್ರಿ ಗಳಿಗೆ ಏನೇನ್ ಅರ್ಹತೆ ಇರ್ಬೇಕು ಅಂತ…
ಆದ್ರೆ ಇವಗಿನ‌ ಪರಿಸ್ಥಿತಿ ಏನಾಗಿದೆ ಗೊತ್ತಾ ??
ಒಬ್ಬ ಕೊಲೆಗಡುಕ ನಮ್ಮನ್ ಆಳೋ ಮಂತ್ರಿ, ಒಬ್ಬ ಕಳ್ಳ ಸರ್ಕಾರದ ಖಜಾನೆಯ ಕಾಯೋ ಸೇವಕ, ಒಬ್ಬ ರೇಪಿಷ್ಟ್ , ದರೋಡೆಕೋರರ ಕೈಗೆ ನಮ್ಮ ಆಡಳಿತ ಕೊಡ್ತಿದ್ತೀವಿ ಅಂದ್ರೆ ಏನಾಗ್ಬೋದು… ನೀವೆ ಯೋಚನೆ ಮಾಡಿ . ಇವೆಲ್ಲಕ್ಕೂ ಅರ್ಹರು ಅನ್ಸುದ್ರೆ ಅಂತವರಿಗೆ ನಿಮ್ ಮತಗಳನ್ನು ನೀಡಿ.. ಗೆಲ್ಲವರಿಗೂ ಕಾಲಿಗೆ ಬಿದ್ದು ಅಮೇಲ್ ಕೈಗೂ ಸಿಗದೆ ಹೋಡಾಡೋರ್ನಾ ನಂಬಕ್‌ ಹೋಗ್ಬೇಡಿ , ಕೆಲಸ ಮಾಡಿ‌ ಜನತೆನ ರಕ್ಷಣೆ ಮಾಡಿ ಸಾಮನ್ಯರ ಕಷ್ಟ ನಷ್ಟ ಗಳಿಗೆ ಸ್ಪಂದನೆ ಮಾಡುವವರು
ಸಾಮನ್ಯರ ಸಾಮಾಜಿಕ ಬದುಕಿಗೆ, ಹೋರಾಟ ಮಾಡೋರು, ಅವರ ಎಲ್ಲಾ ಮೂಲಭೂತ ಸೌಕರ್ಯಗಳನ್ನು ನೀಡೋರ್ನ, ಆಯ್ಕೆ ಮಾಡಿ.

ಅದೇ ಜಾತಿ ಹೆಸರಲ್ಲಿ ರಾಜಕೀಯ ಮಾಡಿ, ಜಾತಿ ಮೇಲೆ ಜಾತಿ ಎತ್ಕಟ್ಟಿ ಧರ್ಮದ ‌‌ಮೇಲೆ ಧರ್ಮನ ಹೊಡ್ಯೋ ಚೀಪ್ ಪೊಲಿಟಿಕಲ್ ನಾ ನೀವೆ ತುಳಿದು ಸಾಯಿಸಿ… ರೀ ಇದ್ದಿದ್ ಒಂದೆ ಜಾಗ ಅನ್ಸುತ್ತೆ ಜಾತಿ ಧರ್ಮ ಗೊತ್ತಿಲ್ದೆ ಅಣ್ಣ ತಂಗಿ, ಅಕ್ಕ ತಮ್ಮನಂತೆ‌ ಒಟ್ಟಾಗಿ ಇರ್ತಿದ್ದ ಜಾಗ ಶಾಲೆ, ಕಾಲೇಜು ಆದ್ರೆ ಇದೆ ಪಾಪಿಗಳ‌ ಕಣ್ಣಿಗ್ ಬಿದ್ದು ಕಲಿತು ಒಂದಾಗಿ ಆಡೋ ಜಾಗದಲ್ಲೂ ಜಾತಿ ಅನ್ನೋ ವಿಷ ಬೀಜವನ್ನು ಬಿತ್ತಿದ್ದಾರೆ.. ಅಂತೋರ್ನೆಲ್ಲಾ ಹತ್ರಕ್ಕೆ ಸೇರ್ಸಕ್ಕೆ ಹೋಗ್ಬೇಡಿ…

ಇವಾಗಂತು ಸರ್ಕಾರದ ಕಚೇರಿಗಳಲ್ಲಿ‌ ಭ್ರಷ್ಟಾಚಾರ ತಾಂಡವ ಆಡ್ತಿದೆ..ಪಂಚಾಯತ ಆಫೀಸ್ ನಿಂದ‌, ಡಿಸಿ ಆಫೀಸ್ ನವರೆಗೂ ಲಂಚಾವತಾರ ಹೆಗ್ಗಿಲ್ದೆ ನಡಿತಿದೆ. ಲಂಚಾ ಇಲ್ದಲೆ ಇವಗ ಮಂಚಕ್ಕೂ ಸೇರ್ಸಲ್ಲ‌ ಅಂತಾರೆ… ಇನ್ಕ್ಲೂಡಿಂಗ್ ಪೊಲೀಸ್ ಠಾಣೆ ಕೂಡ, ಎಲ್ಲೋ‌ ಕೂತ್ಕೊಂಡು ಇಲ್ಲಿನ‌‌ ಆರಕ್ಷಕರನ್ನ ಕಂಟ್ರೋಲ್ ಮಾಡ್ತವ್ರೆ… ಅದ್ನೆಲ್ಲಾ ಮೆಟ್ಟೋ ಒಬ್ಬ ಧಕ್ಷ ಪ್ರತಿನಿಧಿಯನ್ನ‌ ನಾವು ಆಯ್ಕೆ ಮಾಡ್ಬೇಕು , ಪಾರದರ್ಶಕವಾಗಿ ಆಡಳಿತ ಮಾಡ್ಬೇಕು. ಅದ್ಬಿಟ್ಟು ತಿಂಗಳು ತಿಂಗಳು ರೋಲ್ ಕಾಲ್ ತಗೋಳೊ ಕಂತ್ರಿಗಳನಲ್ಲಾ…

ಒಬ್ಬ ಲೋಕೋಪಯೋಗಿ ಸಚಿವನಿಗೆ ಗೊತ್ತಿರ್ಬೇಕು ಒಂದು ರಸ್ತೆ ನಿರ್ಮಾಣ ಮಾಡ್ಬೇಕು ಅಂದ್ರೆ ಎಷ್ಟು ಮೂಟೆ ಸಿಮೆಂಟು ಆಕ್ಬೇಕು, ಎಷ್ಟು ಮರಳು ಆಕ್ಬೇಕು , ಎಂತ‌ ಮರಳು ಬೇಕು, ಅದ್ಬಿಟ್ಟು ರಾತ್ರೋ ರಾತ್ರಿ ಕದ್ದು ಮರಳು ಸಾಗಿಸೋದಲ್ಲ … ಒಂದು ರೋಡ್ ಕ್ಯೂರಿಂಗ್ ಆಗಕ್ಕೆ ಎಷ್ಟು ದಿನ‌ ನೀರಾಕ್ಬೇಕು., ಗುಣಮಟ್ಟದ ಡಾಂಬರಿಕರಣನ‌ ಚೆಕ್ ಮಾಡಕ್ ಗೊತ್ತಿರ್ಬೇಕು ಇಲ್ಲಾ ಅಂದ್ರೆ ಕೋಟಿ ಕೋಟಿ ಲೂಟಿನೆ. ಕೆಲಸ ಆಗ್ದಲ್ಲೆ ಇರೋ ರೋಡ್ನಲ್ಲಿ ಬಿಲ್ ಮಾಡ್ಕೊಂಡು ಮೂರು ನಾಮ ಹಾಕ್ತರೆ… ಇದು ಯಾರಪ್ಪನ ದುಡ್ಡಲ್ಲಾ ನಾವು ನೀವು ಕಷ್ಟ ಪಟ್ಟು ನೀಡಿರೋ ಕಂದಾಯದ‌ ದುಡ್ಡು…

ಯಾರಿಂದನೂ ನೀವು ಬದುಕು ಬೇಕಿಲ್ಲ ಯಾರೀಂದಲೋ ಅನ್ನ ತಿನ್ನಬೇಕಿಲ್ಲ ಆಗಾಗಿ ಯೋಚನೆ ಮಾಡಿ ಮತ ನೀಡಿ… ನಿನ್ನ ಮನೆ, ನಿನ್ನ ಊರು, ನಿನ್ನ ರಾಜ್ಯದ ‌ಅಭಿವೃದ್ದಿ ನಿನ್ನ ಕೈಯಲ್ಲಿ. ನೀನು ಹಾಕುವ ಒಂದು ಮತದಲ್ಲಿದೆ‌‌..

.. ಸಾಮಾನ್ಯರಲ್ಲೇ ಸಾಮಾನ್ಯ ನಾಗಿ ಇರೋ ಒಬ್ಬ ಸಾಮಾನ್ಯನನ್ನು ಆಯ್ಕೆ ಮಾಡಿ
,ಒಬ್ಬ ಆಟೋ ಓಡ್ಸಿ ಬದುಕೋನ್ ಜೀವನ‌ದ ಕಷ್ಟ‌ಸುಖದ ಬಗ್ಗೆ ಗೊತ್ತಿರ್ಬೇಕು
ಅಂತೋನ್ ಆಯ್ಕೆ‌ಮಾಡಿ.
ಕನ್ನಡ ನೆಲ , ಜಲ, ಭಾಷೆ ಗಾಗಿ ಹಗಲು ರಾತ್ರಿ ಎನ್ನದೆ ಕೆಲಸ ಮಾಡಿ, ಹೋರಾಡೋ ಒಬ್ಬ ಕನ್ನಾಡಾಭಿನಾನಿನ‌ ಗದ್ದುಗೆಗೆ ಹೇರಿಸಿ ಕನ್ನಡದ ಪರ ನಿಲ್ಲಿಸಿ…ಇಲ್ಲಾಂದ್ರೆ‌ ಕನ್ನಡ ನಮ್ದಲ್ಲ. ಈಗ್ಲೆ ನಮ್ ಕೈನಲ್ಲಿಲ್ಲ ,ನಮ್‌ ಮನೆ ಮಠ‌ ಹೆಂಡತಿ ಮಕ್ಕಳೊಂದಿಗೆ ಅವರಿಗೆ ಮಾರ್ಕೋಬಿಡ್ತಾರೆ. ಫಾರೀನ್ ನಲ್ಲಿ ಹೋಡಾಡೋರ್ಗೆಲ್ಲಾ ಅಧಿಕಾರ ಕೊಟ್ಟು ಇರೋ ಬರೋ ಸರ್ಕಾರಿ ಜಮೀನನ್ನು ತಮ್ ಹೆಂಡತಿ, ಮಕ್ಕಳ ಹೆಸರಿಗೆ ಬರ್ಸಕೊಳ್ಳೋ ಕಳ್ ನನ್ ಮಕ್ಳಿಗೆ ನಿಮ್‌ ಅಧಿಕಾರ ನೀಡ್ಬೇಡಿ‌‌‌…
ಮತದಾನ‌ ನಿಮ್ಮ ಹಕ್ಕು ,‌ನಿಮ್ಮ ಹಕ್ಕನ್ನು‌ ನೀವು ಯಾರಿಗೂ ಮೂರು ಕಾಸಿಗೆ ಮಾರ್ಕೊಬೇಡಿ… ಬೇರೆ ಬೇರೆ ನೆರೆ ರಾಜ್ಯದಲ್ಲಿ, ದೇಶಗಳನ್ನು ನೋಡಿ ನಾವು ಅವರ ಸರಿ ಸಮಾನ‌ ನಿಲ್ಬೇಕು ಅನ್ನುವ ಪರಿಕಲ್ಪನೆ ಇಟ್ಕೊಂಡು ಮತ ನೀಡಿ….‌

ನೋಡ್ರಪ್ಪ‌ ಜಾಸ್ತಿ ಕೊರಿತ್ತಿದ್ದಾನೆ ಅಂತ ಮಾತ್ರ ಅನ್ಕೊಬೇಡಿ. ಇನ್ನು ಇದೆ ಆದ್ರೆ ಇಷ್ಟೆ ಸಾಕು ಇದು‌ ನನ್ ಒಬ್ಬನ ಮಾತಲ್ಲ ನಿಮ್ಮೆಲ್ಲರ ಮಾತು .. ನೀವೇನ್ ಹೇಳಕ್ ಆಗಲ್ಲ ಅಂತ ಇದ್ರೋ ಅದನ್ನೇ ನಾನು ಇವತ್ ನಿಮ್ ಮುಂದೆ ಹೇಳ್ತಿರೋದು‌.‌…. ನಾನೇನಾದ್ರು ಹೇಳಿದ ಸರಿ ಅನ್ಸುದ್ರೆ ಇನ್ನು ನಾಲ್ಕು ‌ಜನಕ್ಕೆ ಕಳ್ಸಿ, ಏನಾದ್ರು ತಪ್ಪಿದ್ರೆ ನಿಮ್ ಮನೆ ಮಗ ಅನ್ಕೊಂಡು ನನ್ ತಪ್ಪೇನು ಅಂತ ಹೇಳಿ ತಿದ್ದಿ…

                                    ಇಂತಿ‌ ನಿಮ್‌ ಪ್ರೀತಿಯ
                                  -ವಿದ್ಯಾರ್ಥಿ ಮಿತ್ರ ಕಿರಣ್

ಬಹಿರಂಗ

ಬಾಬಾಸಾಹೇಬ್ ಅಂಬೇಡ್ಕರರ ಹೇಳಿಕೆಯನ್ನೇ ದುರುಪಯೋಗ ಪಡಿಸಿಕೊಳ್ಳುತ್ತಿರುವ ಅವರ ಅನುಯಾಯಿಗಳು..!

Published

on

  • ರಘೋತ್ತಮ ಹೊ.ಬ

ಬಾಬಾಸಾಹೇಬ್ ಅಂಬೇಡ್ಕರ್ ರವರು ರಾಜಕೀಯ ಪಕ್ಷವೊಂದನ್ನು ಉರಿಯುವ ಮನೆ ಎಂದರು. ಆ ಕಾಲಘಟ್ಟದಲ್ಲಿ ಅಂಬೇಡ್ಕರ್ ರವರು ಹಾಗೆ ಹೇಳಲು ಕಾರಣ ಆ ಸಮಯದಲ್ಲಿ ಸದರಿ ಆ ರಾಜಕೀಯ ಪಕ್ಷವು ಭಿನ್ನಮತದ ಬೇಗೆಯಲ್ಲಿ ಬೇಯುತ್ತಿತ್ತು. ಇದನ್ನು ಉಲ್ಲೇಖಿಸುತ್ತ ಅಂಬೇಡ್ಕರ್ ರವರು ಆ ಪಕ್ಷವೇ ಹೀಗೆ ಭಿನ್ನಮತದಿಂದ ಒತ್ತಿ ಉರಿಯುತ್ತಿದೆ ಇನ್ನು ದಲಿತರು ಅಲ್ಲಿ ಹೋದರೆ ನಿಮಗೇನು ಸಿಗುತ್ತದೆ ಎಂಬ ಅರ್ಥದಲ್ಲಿ ಆ ಹೇಳಿಕೆ ಹೇಳಿದ್ದರು. ಬದಲಿಗೆ ತಾವೇ ಸ್ಥಾಪಿಸಿರುವ ನಮ್ಮ ಸ್ವಂತ ಪಕ್ಷ “ಪರಿಶಿಷ್ಟ ಜಾತಿಗಳ ಒಕ್ಕೂಟ”ಕ್ಕೆ ಬನ್ನಿ ಎಂದು ಅಂಬೇಡ್ಕರ್ ರವರು ಶೋಷಿತ ಸಮುದಾಯಗಳವರಿಗೆ ಕರೆ ನೀಡಿದ್ದರು.

ದುರಂತವೆಂದರೆ ಇತಿಹಾಸದಲ್ಲಿ ದಾಖಲಾಗಿರುವ ಬಾಬಾಸಾಹೇಬ್ ಅಂಬೇಡ್ಕರ್ ರವರ ಈ ಹೇಳಿಕೆಯನ್ನು ಬಹುತೇಕ ದಲಿತ ರಾಜಕಾರಣಿಗಳು ಈಗಿನ ಕಾಲಕ್ಕೆ ದುರುಪಯೋಗಪಡಿಸಿಕೊಳ್ಳುತ್ತಿರುವುದು, ಇತರೆ ಪಕ್ಷಗಳನ್ನು ಸೇರಲು ಲೈಸೆನ್ಸ್ ರೀತಿ ಬಳಸಿಕೊಳ್ಳುತ್ತಿರುವುದು! ಹಾಗಿದ್ದರೆ ಅಂಬೇಡ್ಕರ್ ರವರು ಹೇಳಿರುವ ಆ ರಾಜಕೀಯ ಹೇಳಿಕೆಯ ಒಟ್ಟಾರೆ ತಾತ್ಪರ್ಯವೇ ಅಪ್ರಸ್ತುತವೇ? ಖಂಡಿತ ಇಲ್ಲ. ಅವರು ಹೇಳಿದ ಶೋಷಿತ ಸಮುದಾಯಗಳ ಸ್ವತಂತ್ರ ರಾಜಕಾರಣ ಈಗಲೂ ಬೇರೆ ಬೇರೆ ರೂಪದಲ್ಲಿ ಅಸ್ತಿತ್ವದಲ್ಲಿ ಇದೆ. ಅವರು ಜೀವನದುದ್ದಕ್ಕೂ ವಿರೋಧಿಸಿದ ಮೇಲ್ಜಾತಿ ಹಿಂದೂ ರಾಜಕೀಯ ಪಕ್ಷಗಳೂ ಬೇರೆ ಬೇರೆ ಹೆಸರಿನಲ್ಲಿ ಅಸ್ತಿತ್ವದಲ್ಲಿ ಇವೆ!

ನಿಜ, ಇಂತಹ ರಾಜಕೀಯ ಸೂಕ್ಷ್ಮತೆಗಳನ್ನು ಸಾರ್ವಜನಿಕವಾಗಿ ಹೇಳುವುದು ತಪ್ಪು ಎಂದು ವಯಕ್ತಿಕವಾಗಿ ನನಗೆ ಗೊತ್ತಿದೆ ಆದರೆ ಬಾಬಾಸಾಹೇಬ್ ಅಂಬೇಡ್ಕರರ ಹೇಳಿಕೆಗಳ, ಬರಹಗಳ, ಚಿಂತನೆಗಳ ಮಹತ್ವವನ್ನು ಉಳಿಸುವ ದೃಷ್ಟಿಯಲ್ಲಿ ನನ್ನಂತಹವರು ಇಂತಹ ವಿಚಾರಗಳನ್ನು ಮುಕ್ತವಾಗಿ ಬಾಯಿಬಿಟ್ಟು ಹೇಳಲೇಬೇಕಿದೆ. ಅವರ ಬರಹಗಳ ಪ್ರಸ್ತುತತೆಯನ್ನು ನೈಜ ಅರ್ಥದಲ್ಲಿ ವಿಶ್ಲೇಷಿಸಿ ಸದಾ ಕಾಲ ಕಾಪಿಟ್ಟುಕೊಳ್ಳಬೇಕಿದೆ. ಜೈಭೀಮ್.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಬಹಿರಂಗ

“ಸುರರು ಮತ್ತು ಅಸುರರು ಇಬ್ಬರೂ ಒಂದೇ ತಂದೆಯ ಮಕ್ಕಳು” : ಬಾಬಾಸಾಹೇಬ್ ಅಂಬೇಡ್ಕರ್

Published

on

  • ರಘೋತ್ತಮ ಹೊ.ಬ

ಬಾಬಾಸಾಹೇಬ್ ಅಂಬೇಡ್ಕರರು ಅಸುರರ ಬಗ್ಗೆ ಏನು ಹೇಳುತ್ತಾರೆ? ಇದನ್ನು ಉಲ್ಲೇಖಿಸುವುದಾದರೆ, ಅಂಬೇಡ್ಕರರು ಹೇಳುತ್ತಾರೆ, “ಅಸುರರು ಮತ್ತು ಸುರರು ಇಬ್ಬರೂ ಆರ್ಯನ್ನರ ರೀತಿಯೇ ಮಾನವ ಜೀವಿಗಳ ಸಮುದಾಯಗಳು. ಹಾಗೆಯೇ ಅಸುರರು ಮತ್ತು ಸುರರು ಇಬ್ಬರೂ ಕಶ್ಯಪ ಎಂಬ ಒಬ್ಬನೇ ಸಾಮಾನ್ಯ ತಂದೆಯ ವಂಶಜರು. ಇದರ ಹಿಂದಿರುವ ಕತೆ ಎಂದರೆ, ದಕ್ಷ ಪ್ರಜಾಪತಿಗೆ 60 ಮಂದಿ ಹೆಣ್ಣು ಮಕ್ಕಳಿದ್ದರು. ಅವರಲ್ಲಿ 13 ಮಂದಿಯನ್ನು ಕಷ್ಯಪನಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಕಷ್ಯಪನ ಆ 13 ಮಂದಿ ಹೆಂಡತಿಯರಲ್ಲಿ ದಿತಿ ಮತ್ತು ಅದಿತಿ ಕೂಡ ಇಬ್ಬರಾಗಿದ್ದರು. ದಿತಿಗೆ ಹುಟ್ಟಿದ ಮಕ್ಕಳನ್ನು ಅಸುರರು ಎಂದು ಕರೆಯಲಾಗುತ್ತಿತ್ತು. ಅದಿತಿಗೆ ಹುಟ್ಟಿದ ಮಕ್ಕಳನ್ನು ಸುರರು ಅಥವಾ ದೇವಾ(Devas)ರುಗಳು ಎಂದು ಕರೆಯಲಾಗುತ್ತಿತ್ತು. ಅಂದಹಾಗೆ ಈ ಇಬ್ಬರೂ (ಸುರರು ಮತ್ತು ಅಸುರರು) ಈ ಪ್ರಪಂಚದ ಸಾರ್ವಭೌಮತ್ವಕ್ಕಾಗಿ ಬಹಳ ದೀರ್ಘ ಮತ್ತು ರಕ್ತಪಾತದ ಯುದ್ಧ ನಡೆಸಿದರು. ಅನುಮಾನವೇ ಬೇಡ ಇದು ಪುರಾಣ. ಈ ಪುರಾಣವನ್ನು ಇತಿಹಾಸ ಎನ್ನುವುದು ಅತಿಶಯೋಕ್ತಿಯೆನಿಸಿದರೂ ಆಗಲೂ ಇದು ಇತಿಹಾಸವಾಗಿದೆ”. (ಬಾಾಬಾಸಾಹೇಬ್ ಡಾ.ಅಂಬೇಡ್ಕರ್ ಬರಹಗಳು, ಇಂಗ್ಲಿಷ್ ಸಂ.3, ಪು.419)

ಅಂಬೇಡ್ಕರರು ಪ್ರಸ್ತಾಪಿಸುವ ಈ ಪುರಾಣ ಕಂ ಇತಿಹಾಸದ ಪ್ರಕಾರ ಅಸುರರು ಮತ್ತು ಸುರರು ಇಬ್ಬರೂ ಒಂದೇ ತಂದೆಯ ಆದರೆ ಇಬ್ಬರು ಬೇರೆ ಬೇರೆ ತಾಯಿಯ ಮಕ್ಕಳು. ಅರ್ಥಾತ್‌ ಇಬ್ಬರೂ ಅಣ್ಣ ತಮ್ಮಂದಿರು. ಹೀಗಿರುವಾಗ ಇಲ್ಲಿ ಸುರರ ಸ್ವಂತ ಸೋದರರಾದ ಅಸುರರನ್ನು ಶೋಷಿತ ಸಮುದಾಯಗಳು ಆದರ್ಶವಾಗಿ ತೆಗೆದುಕೊಳ್ಳುವುದು ಹೇಗೆ? ಈ ಕಾರಣಕ್ಕಾಗಿ ಈ ಅಸುರರು ಮತ್ತು ಸುರರ ಗೋಜಲಾದರೂ ನಮಗೆ ಏಕೆ? ಸುಮ್ಮನೆ ಗೌತಮ ಬುದ್ಧರ ಬಳಿ ತೆರಳಿದರೆ ಸಾಕಲ್ಲವೇ?

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಬಹಿರಂಗ

ಗಾಂಧಿಯನ್ನು ಎದೆಗಿಳಿಸಿಕೊಂಡವರಾರೂ ಬುದ್ಧನನ್ನ ಮುಟ್ಟಲಾರರು, ಬಾಬಾಸಾಹೇಬರ ಕಣ್ಣೀರ ಅರಿಯಲಾರರು

Published

on

  • ಹ.ರಾ.ಮಹಿಶ

ಸೇಫ್ ಝೋನ್ ನಲ್ಲಿ ದೂರದಿಂದ ನಿಂತು‌ ನೋಡುವ ನಿಮಗೆ ಮೈಪೂರ ವಿಷತುಂಬಿಕೊಂಡ ಆ “ಹಾವಿನ” ನುಣ್ಣನೆಯ ಮೆತ್ತನೆಯ ಬೆತ್ತಲೆಯ ಸಪೂರ ಶರೀರ, ಬಿಚ್ಚಿದ ಕಲಾತ್ಮಕ ಹೆಡೆ, ಆಕರ್ಷಕ‌ ಮೈ ಹೊಳಪು, ಮತ್ತು‌ ಸದ್ದಿಲ್ಲದೆ ಸರಸರ ಹರಿಯುವ ಅದರ ಚಮತ್ಕಾರ ಇವುಗಳು ಬಲು ಪ್ರಿಯವಾಗಿ ಕಂಡಿರಬೇಕು..!

ನಮಗೆ ಅದರ ಒಳಗಿನ ವಿಷದ ಕ್ರೂರ ಹಲ್ಲಿನ ದರ್ಶನವಾಗಿದೆ..!
ಮತ್ತು‌ ಅದರಿಂದ ಕಚ್ಚಿಸಿಕೊಂಡು ಈಗಲೂ ಸಾಯುತ್ತಿದ್ದೇವೆ..!!!

ಗಾಂಧಿವಾದದಿಂದ ಅನ್ನ ಅಧಿಕಾರ ಪಡೆದ ಸ್ವಾರ್ಥಿಗಳು ಮತ್ತು , ಅವರಿಂದ ಏನೂ ಪಡೆಯದ ಏನೂ ಕಳೆದುಕೊಳ್ಳದ ಮುಗ್ಧ-ಮೂರ್ಖರು, ಈ ಎರಡೂ ಕೆಟಗರಿಯ “ಗಾಂಧೀ ಸಮರ್ಥಕರಿಗೆ” ಮತ್ತು ಅಡ್ಡಗೋಡೆ ಮೇಲೆ ದೀಪ ಇಟ್ಟು ಎಲ್ಲರಿಂದಲೂ ಭೇಷ್ ಎನಿಸಿಕೊಳ್ಳುವ ತೆವಲುಳ್ಳ ಮೂರನೇ ಕೆಟಗರಿಯ ಜನರಿಗೆ ಗಾಂಧಿಯಿಂದ ಅನ್ಯಾಯಕ್ಕೊಳಗಾಗಿ ಇನ್ನಿನ್ನೂ ಅದರಿಂದ ನೋವುಣ್ಣುತ್ತಿರುವ ನಮ್ಮ ಸಂಕಟ ಅರ್ಥವಾಗದು..!!!

“ನೊಂದವರ ನೋವ ನೋಯದವರೆತ್ತ ಬಲ್ಲರು” ಎಂಬ
ನಾಡಿನ ಪ್ರಜ್ಞೆಯಾದ ಮಹಾತಾಯಿ ಅಕ್ಕ ಮಹಾದೇವಿಯವರ ಮಾತನ್ನಾದರೂ ಅರ್ಥ ಮಾಡಿಕೊಳ್ಳದ ಮೂಢರು ಅತಿಬುದ್ಧಿವಂತರಂತೆ ವರ್ತಿಸುತ್ತಿರುವುದಂತೂ ನಿಜಕ್ಕೂ ಅಸಹ್ಯವೆನಿಸುತ್ತಿದೆ…!

ಛೆ…

ಗಾಂಧಿ ಮತ್ತು ಅಂಬೇಡ್ಕರರ ಬಗ್ಗೆ ಯಾರೋ‌ ಮೂರನೆಯವರು ಬರೆದ ಪುಸ್ತಕ ಓದಿಕೊಂಡು ಯಾರೋ ಹೇಳಿದ್ದನ್ನು ಕೇಳಿಕೊಂಡು ಶಾಂತಿಸೌಹಾರ್ಧಪ್ರಿಯರಂತೆ ಪೋಸು ಕೊಟ್ಟು ಆಧಾರ ಸಮೇತ ವಿಮರ್ಶಿಸುವುದನ್ನೇ “ದ್ವೇಷ” ಎಂದು ತೀರ್ಪುಕೊಟ್ಟು‌ ಅಂಬೇಡ್ಕರ್ ವಾದಿಗಳನ್ನು ಅವರಿಗೆ ಒಗ್ಗದ ಹೆಸರುಗಳಿಂದ ಕರೆದು ಗಾಂಧಿಯನ್ನೇ ಉಸಿರಾಡುತ್ತಾ ಆಗಿಂದಲೂ ಬಡಬಡಿಸುತ್ತಿರುವ ಧೀರರೇ ಧೀರೆಯರೆ ಶೂರರೇ….

ಗಾಂಧಿಯವರನ್ನು ಕುರಿತು
ಗಾಂಧೀಯವರ ಇಬ್ಬಂದಿತನ ಕುರಿತು
ಗಾಂಧೀಯವರ ನಯವಂಚಕತನವನ್ನು ಕುರಿತು ಗಾಂಧಿಯವರಿಂದ ಸ್ವತಃ ಹಿಂಸೆ ನೋವು ಮೋಸಕ್ಕೆ ಒಳಗಾದ ಬಾಬಾಸಾಹೇಬರೇ ಬರೆದಿರುವ
“GANDHI AND GANDHIISM”
ಮತ್ತು ಬಾಬಾಸಾಹೇಬರ‌ ಬರಹ ಭಾಷಣಗಳ ಸಂಪುಟ ೯
“WHAT GANDHI AND CONGRESS HAVE DONE TO UNTOUCHABLES” ಅನ್ನು ಓದಿದ್ದೀರಾ…?

ಮತ್ತು 1955 ರಲ್ಲಿ‌ ಬಾಬಾಸಾಹೇಬರು BBC ಗಾಗಿ ನೀಡಿರುವ ಸಂದರ್ಶನದಲ್ಲಿ ಗಾಂಧಿಯವರ ಕುರಿತ 21 ನಿಮಿಷಗಳ ಖುದ್ದು ಬಾಬಾಸಾಹೇಬರ ಮಾತುಗಳನ್ನಾದರೂ ಕೇಳಿದ್ದೀರಾ…?

ಅವುಗಳನ್ನು ಓದಿಲ್ಲ ಕೇಳಿಲ್ಲವೆಂದರೆ ದಯಮಾಡಿ ಒಮ್ಮೆ ಓದಿ ಕೇಳಿ ನಂತರ ಬರೆಯಿರಿ…

ಅಕಸ್ಮಾತ್ ‌ಓದಿಯೂ ಕೇಳಿಯೂ ನಿಮ್ಮ ಅಭಿಪ್ರಾಯ ಇದೇ ಆಗಿದ್ದರೆ ನನ್ನದೇನೂ ತಕರಾರಿಲ್ಲ… ನಿಮ್ಮ ಅರೆಜ್ಞಾನಕ್ಕೆ ಪೂರ್ವಗ್ರಹಪೀಡಿತ ರೋಗಕ್ಕೆ ಕೃತಘ್ನತೆಗೆ ವಿಚಾರಹೀನ ಸಂವೇದನಾಹೀನ ಸ್ವತಂತ್ರ ಚಿಂತನಾಹೀನತೆಗೆ ಮರುಕ ಪಡುತ್ತೇನೆ.

ಗಾಂಧಿಯವರ ಇಬ್ಬಂದಿತನವನ್ನು ವಿರೋಧಿಸುತ್ತಲೇ ಅವರ ಬಗೆಗಿನ ನಿಮ್ಮ ಅಭಿಪ್ರಾಯ ಭಿನ್ನಾಭಿಪ್ರಾಯಗಳನ್ನು ಮತ್ತು ನಿಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುತ್ತೇನೆ.
ಅಷ್ಟೇ ಇನ್ನೇನೂ ಹೇಳಲಾಗದು..‌

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending