Connect with us

ಬಹಿರಂಗ

ಭೂಪೇನ್ ಹಝಾರಿಕಾ ಮತ್ತು ಭಾರತರತ್ನ

Published

on

ಭೂಪೇನ್ ಹಝಾರಿಕಾ ಅವರ ಗಾಯನದ ಒಂದು ಶೈಲಿ

ನೆನ್ನೆ ಭಾರತ ರತ್ನ ಪಡೆದಿರುವ ದೇಶದ ಅದ್ಭುತ ಸಂಗೀತಗಾರ, ಅಸ್ಸಾಂ ರಾಜ್ಯದ ಭುಪೇನ್ ಹಜಾರಿಕಾ ನನ್ನ ಇಷ್ಟದ ವ್ಯಕ್ತಿಗಳಲ್ಲಿ ಒಬ್ರು. ಬದುಕಿನುದ್ದಕ್ಕೂ ಆದರ್ಶಗಳನ್ನು ತುಂಬಿಕೊಂಡು ದೇಶದಲ್ಲಿ ಜನಪರ ಸಂಸ್ಕೃತಿಯನ್ನು ಕಟ್ಟಲು ಹೆಸಗಿದವರು.ನೀವು ರುಡಾಲಿ ಸಿನಿಮಾದ ಅವರ ಹಾಡುಗಳು ಕೇಳಿದರೆ ಅವರೆಂತಹ ಅದ್ಭುತ ಸಂಗೀತ ಮಾಂತ್ರಿಕರಾಗಿದ್ದರು ಎಂಬುದು ತಿಳಿಯುತ್ತದೆ.

ಅವು ನಿಜಕ್ಕೂ ಒಂದು ಬಗೆಯ ಕಂಪನ ಮೂಡಿಸುತ್ತವೆ. ಅದರಲ್ಲೂ ‘ದಿಲ್ ಹೂಂ ಹೂಂ ಕರೇ….’ ಎಂಬ ಹಾಡಂತೂ ಕೇಳಿಯೇ ಅನುಭವಿಸಬೇಕು. ‘ನಿನ್ನ ಎರಡೂ ಬದಿಗಳಲ್ಲಿ ಬಡಜನರ ಹಾಹಾಕಾರವೇ ತುಂಬಿರುವಾಗ, ಓ ಗಂಗಾ ಅದು ಹೇಗೆ ನೀನು ಇಷ್ಟು ಪ್ರಶಾಂತವಾಗಿ ಹರಿಯುತ್ತಿದ್ದೀಯ?’ ಎಂದು ಕೇಳುವ ಅವರ ಪ್ರಸಿದ್ಧ ‘ಗಂಗಾ ಬೆಹತಿ ಹೇ ಕ್ಯೂಂ’ ಎಂಬ ಅತ್ಯಂತ ಅರ್ಥಗರ್ಭಿತವಾದ ಹಾಡನ್ನು ನಾನು ಸಾವಿರ ಸಲ ಕೇಳಿರಬಹುದು. ಅದರ ಭಾವ ತೀವ್ರತೆಯನ್ನು ಗಾಢವಾಗಿ ಅನುಭವಿಸಿರಬಹುದು. ಭೂಪೇನ್ ಅವರ ನೂರಾರು ಹಾಡುಗಳನ್ನು ಸಂಗ್ರಹಿಸಿದ್ದೇನೆ. ಕೇಳಿ ಮನತಣಿಸಿಕೊಂಡಿದ್ದೇನೆ.

60-70ರ ದಶಕದಲ್ಲಿ ಭೂಪೇನ್ ಹಜಾರಿಕಾ ಒಬ್ಬ ಜನರ ನಡುವಿನ ಕಲಾವಿದರಾಗಿದ್ದವರು. ಇಪ್ಟಾದಂತಹ ಸಾಂಸ್ಕೃತಿಕ ಚಳುವಳಿಯೊಂದಿಗೆ ನಿಕಟವಾಗಿದ್ದವರು. ತಮ್ಮ ಜನಪ್ರಿಯತೆಯ ಉತ್ತುಂಗದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಶಾಸಕರಾಗಿಯೂ ಆಯ್ಕೆಯಾಗಿದ್ದವರು.

ಆದರೆ ಅವರು ತಮ್ಮ ಬದುಕಿನ ಕಡೆಗಾಲದಲ್ಲಿ ತಾವು ಬದುಕಿನುದ್ದಕ್ಕು ನಂಬಿದ ಆದರ್ಶಗಳಿಗೆ ಬೆನ್ನು ತಿರುಗಿಸಿ, ಅದೇನೋ ಅರುಳು ಮರುಳು ಕವಿದು 2004ರಲ್ಲಿ ಬಿಜೆಪಿಯಿಂದ ಚುನಾವಣೆಗೆ ಸ್ಪರ್ಧಿಸಿದರು. ಆದರೆ ಕಾಂಗ್ರೆಸ್ ಅಭ್ಯರ್ಥಿ ಕೃಪ್ ಚಲಿಹಾ ಎದುರು ಸೋಲನುಭವಿಸಿದರೆನ್ನುವುದು ಬೇರೆ ಮಾತು.

ಈಗ ಅವರಿಗೆ ಮರಣೋತ್ತರ ‘ಭಾರತ ರತ್ನ’ ಲಭಿಸಿರುವುದು ಅವರು ತಮ್ಮ ಜೀವನವಿಡೀ ಬದುಕಿದ ಗಟ್ಟಿ ಆದರ್ಶಗಳಿಗಿಂತಲೂ ಅವರು ಕಡೆಗಾಲದಲ್ಲಿ ಎಡವಿ ಬಿದ್ದ ಕಾರಣಕ್ಕೆ ಎಂಬುದು ಅವರೊಂದಿಗೆ ಭಾರತ ರತ್ನ ಪಡೆದ ಇನ್ನಿಬ್ಬರನ್ನು ನೋಡಿದಾಗ ಸ್ಪಷ್ಟವಾಗುವ ಸಂಗತಿ.ಸಂಭ್ರಮಿಸೋಣ ಎಂದರೂ ಸಂಕಟ ಸಂಭ್ರಮಿಸದೇ ಇರೋಣ ಎಂದರೂ ಸಂಕಟ.

ಹರ್ಷಕುಮಾರ್ ಕುಗ್ವೆ

ಸುದ್ದಿದಿನ.ಕಾಂ|ವಾಟ್ಸಾಪ್|9986715401

ನೆಲದನಿ

ವೇದಗಳ ಹುಟ್ಟು – ಬ್ರಾಹ್ಮಣರ ಸ್ಪಷ್ಟಿಕರಣ ಅಥವಾ ಲಂಬೋಕ್ತಿ ಕಲೆಯ ಕಸರತ್ತು

Published

on

 • ವಿ.ಎಸ್. ಬಾಬು

ವೇದಗಳನ್ನು ತನ್ನ ಧರ್ಮದ ಅತ್ಯಂತ ಪವಿತ್ರಗ್ರಂಥಗಳೆಂದು ಪರಿಗಣಿಸದ ಹಿಂದೂ ಪ್ರಾಯಶಃ ಎಲ್ಲೂ ಇರಲಾರ. ಆದರೂ, ಯಾವ ಹಿಂದೂವನ್ನಾದರೂ ವೇದಗಳ ಮೂಲವೆಲ್ಲಿ ಎಂದು ಕೇಳಿದರೆ, ಈ ಸರಳ ಪ್ರಶ್ನೆಗೆ ಒಂದು ಸ್ಪಷ್ಟ ಹಾಗೂ ಖಚಿತವಾದ ಉತ್ತರ ಹೇಳುವವನನ್ನು ಹುಡುಕುವುದು ಕಷ್ಟವಾಗುತ್ತದೆ. ಇದೇ ಪ್ರಶ್ನೆಯನ್ನು ಒಬ್ಬ ವೈದಿಕ ಬ್ರಾಹ್ಮಣನಿಗೆ ಕೇಳಿದರೆ, ಅವನು ವೇದಗಳು ಸನಾತನವೆನ್ನುತ್ತಾನೆ. ಆದರೆ ಆ ಪ್ರಶ್ನೆಗೆ ಇದು ಉತ್ತರವಲ್ಲ. ಏಕೆಂದರೆ,“ಸನಾತನ” ಎಂಬ ಪದದ ಅರ್ಥವೇನು?

ಅಧ್ಯಯನ ಗ್ರಂಥ : [ರಿಡ್ಲ್ ಆಫ್ ದಿ ವೇದಾಸ್]

ಸನಾತನ ಎಂಬ ಪದದ ಉತ್ತಮ ವಿವರಣೆಯು ಮನುಸ್ಮೃತಿ ಅಧ್ಯಾಯ ಒಂದು, ಶ್ಲೋಕ 22 ಮತ್ತು 23ರ ಮೇಲೆ ಕಲ್ಲೂಕ ಭಟ್ಟ ಬರೆದಿರುವ ವ್ಯಾಖ್ಯಾನದಲ್ಲಿ ಸಿಕ್ಕುತ್ತದೆ. “ಸನಾತನ” ಪದಕ್ಕೆ ಕಲ್ಲೂಕ ಭಟ್ಟನ ವ್ಯಾಖ್ಯೆ ಹೀಗಿದೆ:

‘ಸನಾತನ’ಎಂಬ ಶಬ್ದಕ್ಕೆ ಮೊದಲಿನಿಂದಲೂ ನಿತ್ಯವಾಗಿರುವುದು ಎಂದರ್ಥ, ವೇದಗಳು ಅಪೌರುಷೇಯ ಎಂಬ ಸಿದ್ಧಾಂತವನ್ನು ಮನು ಅನುಮೋದಿಸುತ್ತಾನೆ. ಈಗಿರುವ ವೇದಗಳೇ ಮೊದಲಿನ ಕಲ್ಪದಲ್ಲಿ ಸರ್ವಜ್ಞನಾದ ಬ್ರಹ್ಮನ ಸ್ಮೃತಿಯಲ್ಲಿದ್ದವು. ಆಗ ಬ್ರಹ್ಮನು ಪರಮಾತ್ಮನೊಂದಿಗೆ ಐಕ್ಯನಾಗಿದ್ದನು. ಈ ವೇದಗಳನ್ನೆ ಬ್ರಹ್ಮನು ಈ ಕಲ್ಪದ ಆದಿಯಲ್ಲಿ ಅಗ್ನಿ, ವಾಯು ಮತ್ತು ಸೂರ್ಯರಿಂದ ಹೊರತೆಗೆದನು. ವೇದಗಳ ಮೇಲೆ ನಿಂತಿರುವ ಈ ನಂಬಿಕೆಯನ್ನು ನಾವು ಪ್ರಶ್ನಿಸುವಂತಿಲ್ಲ. ಏಕೆಂದರೆ, ವೇದವು “ಋಗೇದವು ಅಗ್ನಿಯಿಂದಲೂ ಯಜುರ್ವೇದವು ವಾಯುವಿನಿಂದಲೂ ಸಾಮವೇದವು ಸೂರ್ಯನಿಂದಲೂ ಬರುತ್ತವೆ’ ಎಂದು ಹೇಳುತ್ತದೆ.

ಕಲ್ಲೂಕ ಭಟ್ಟನ ವಿವರಣೆಯನ್ನು ತಿಳಿದುಕೊಳ್ಳಬೇಕಾದರೆ, ಕಲ್ಪವೆಂದರೇನೆಂಬುದನ್ನು ತಿಳಿದುಕೊಳ್ಳುವುದು ಅವಶ್ಯಕ. ಕಲ್ಪವೆಂದರೆ ವೈದಿಕ ಬ್ರಾಹ್ಮಣರು ಕಾಲವನ್ನು ಅಳೆಯುವ ರೀತಿ. ಬ್ರಾಹ್ಮಣರು ಕಾಲವನ್ನು ಅಳೆಯಲು

 1. ವರ್ಷ
 2. ಯುಗ
 3. ಮಹಾಯುಗ
 4. ಮನ್ವಂತರ
 5. ಕಲ್ಪ

ಎಂದು ವಿಂಗಡಿಸುತ್ತಾರೆ.

ವರ್ಷವೆಂದರೇನೆಂಬುದನ್ನು ತಿಳಿದುಕೊಳ್ಳುವುದು ಸುಲಭ. ಯುಗವು ಎಷ್ಟು ಕಾಲವನ್ನು ಒಳಗೊಳ್ಳುತ್ತದೆ ಎಂಬುದರಲ್ಲಿ ಏಕಾಭಿಪ್ರಾಯವಿಲ್ಲ.

ಮಹಾಯುಗವೆಂದರೆ ನಾಲ್ಕು ಯುಗಗಳು ಕೃತಯುಗ

 1. ತ್ರೇತಾಯುಗ
 2. ದ್ವಾಪರಯುಗ
 3. ಕಲಿಯುಗ

ಈ ಯುಗಗಳು ಚಕ್ರಾಕಾರದಲ್ಲಿ ಒಂದನ್ನೊಂದು ಅನುಸರಿಸುತ್ತವೆ. ಮೊದಲನೆ ಯುಗ ಮುಗಿದ ಕೂಡಲ ಎರಡನೆ ಯುಗ ಬರುತ್ತದೆ, ಇತ್ಯಾದಿ. ಹೀಗೆ ನಾಲ್ಕು ಯುಗಗಳ ಚಕ್ರ ಒಂದು ಸುತ್ತು ತಿರುಗಿದಾಗ, ಒಂದು ಮಹಾಯುಗ ಮುಗಿಯುತ್ತದೆ. ಮತ್ತೊಂದು ಪ್ರಾರಂಭವಾಗುತ್ತದೆ. ಪ್ರತಿಯೊಂದು ಮಹಾಯುಗವು ಕೃತಯುಗದಿಂದ ಪ್ರಾರಂಭವಾಗಿ ಕಲಿಯುಗದೊಂದಿಗೆ ಮುಗಿಯುತ್ತದೆ.[ಅರ್ಥವೇಧ ಮ್ಯೂರ್ ಸ್ಯಾನ್ಸ್ಕ್ರಿಟ್ ಟೆಕ್ಸ್ಟ್ಸ್ ಸಂ.3 ಪು.6 ]

ಕಲ್ಪಕ್ಕೂ ಮಹಾಯುಗಕ್ಕೂ ಇರುವ ಸಂಬಂಧದ ಬಗೆಗೆ ನಮಗೆ ಯಾವುದೇ ಸಂದೇಹವಿಲ್ಲ. 71 ಮಹಾಯುಗಗಳು ಒಂದು ಕಲ್ಪಕ್ಕೆ ಸಮ. ಆದರೆ ಮಹಾಯುಗ ಮತ್ತು ಮನ್ವಂತರಗಳ ನಡುವಿನ ಕಾಲಿಕ ಸಂಬಂಧದ ಬಗ್ಗೆ ಸ್ವಲ್ಪ ಅಸ್ಪಷ್ಟತೆ ಇದೆ. ಮನ್ವಂತರವೆಂದರೆ 71 ಮಹಾಯುಗಗಳಿಗಿಂತ “ಸ್ವಲ್ಪ ಹೆಚ್ಚು”. “ಸ್ವಲ್ಪ ಹೆಚ್ಚು” ಎಷ್ಟು ಕಾಲವನ್ನು ಒಳಗೊಳ್ಳುತ್ತದೆ ಎಂಬುದಕ್ಕೆ ಖಂಡಿತವಾದ ಉತ್ತರವನ್ನು ಕೊಡಲು ಬ್ರಾಹ್ಮಣರು ಶಕ್ತರಾಗಿಲ್ಲ. ಇದರಿಂದಾಗಿ ಮನ್ವಂತರಕ್ಕೂ ಕಲ್ಪಕ್ಕೂ ಇರುವ ಕಾಲಿಕ ಸಂಬಂಧವು ಅಸ್ಪಷ್ಟವಾಗಿಯೇ ಉಳಿದಿದೆ.

ಆದರೆ ನಮ್ಮ ಪ್ರಸ್ತುತ ಉದ್ದೇಶಕ್ಕೆ ಇದರಿಂದೇನೂ ಆಗುವುದಿಲ್ಲ. ಸದ್ಯಕ್ಕೆ ನಾವು ಕಲ್ಪದ ಅರ್ಥದ ಮೇಲೆ ನಮ್ಮ ಗಮನವನ್ನು ಕೇಂದ್ರೀಕರಿಸೋಣ.ಕಲ್ಪದ ವಿಚಾರವು ವಿಶ್ವಸೃಷ್ಟಿ ಮತ್ತು ಸಂಹಾರಗಳಿಗೆ ನಿಕಟವಾಗಿ ಸಂಬಂಧಿಸಿದೆ. ಜಗತ್ತನ್ನು ರಚಿಸುವ ಕಾರ್ಯಕ್ಕೆ ಸೃಷ್ಟಿ ಎಂದು ಹೆಸರು. ಜಗತ್ತಿನ ನಾಶಕ್ಕೆ ಪ್ರಳಯ ಎಂದು ಹೆಸರು. ಸೃಷ್ಟಿ ಮತ್ತು ಪ್ರಳಯಗಳ ಮಧ್ಯದ ಕಾಲವೇ ಕಲ್ಪ. ಹೀಗೆ, ವೇದಗಳ ಮೂಲವು ಕಲ್ಪದ ವಿಚಾರದ ಕೂಡ ನಿಕಟ ಸಂಬಂಧ ಹೊಂದಿದೆ.

ಪೂರ್ವನಿರ್ಧಾರದ ಮೇರೆಗೆ, ಕಲ್ಪ ಪ್ರಾರಂಭವಾದಾಗ, ಸೃಷ್ಟಿ ಪ್ರಾರಂಭವಾಗಬೇಕು. ಸೃಷ್ಟಿಯ ಪ್ರಾರಂಭದಲ್ಲಿ ಹೊಸ ವೇದಗಳ ಸರಣಿಯು ಅಸ್ತಿತ್ವಕ್ಕೆ ಬರುತ್ತದೆ. ಕಲ್ಲೂಕ ಭಟ್ಟ, ನಮಗೆ ತಿಳಿಸಲು ಇಚ್ಛಿಸುವುದೇನೆಂದರೆ ಒಂದರ್ಥದಲ್ಲಿ ಪ್ರತಿಯೊಂದು ಹೊಸ ಕಲ್ಪದಲ್ಲಿ ಹೊಸ ವೇದಗಳು ಇದ್ದರೂ, ಬ್ರಹ್ಮನು ತನ್ನ ಸ್ಮೃತಿಯಿಂದ ಅದೇ ಹಳೆಯ ವೇದಗಳನ್ನೇ ವ್ಯಕ್ತಪಡಿಸುತ್ತಾನೆ. ಈ ಕಾರಣಕ್ಕಾಗಿಯೇ ಅವನು ವೇದಗಳನ್ನು ಸನಾತನ, ಅಂದರೆ ಮೊದಲಿನಿಂದಲೂ ನಿತ್ಯವಾದುವು ಎಂದು ಕರೆಯುತ್ತಾನೆ.

ಕಲ್ಲೂಕ ಭಟ್ಟ ಹೇಳುವುದೇನೆಂದರೆ, ವೇದಗಳನ್ನು ಸ್ಮತಿಯಿಂದ ಪುನಾರಚಿಸಲಾಗುತ್ತದೆ. ಇಲ್ಲಿ ನಿಜವಾದ ಪ್ರಶ್ನೆ ಎಂದು ಅವುಗಳನ್ನು ಪುನಾರಚಿಸಿದರು ಎಂಬುದಲ್ಲ, ಯಾರು ರಚಿಸಿದರು ಎಂಬುದು ? ಪ್ರತಿ ಕಲ್ಪದ ಆದಿಯಲ್ಲೂ ವೇದಗಳನ್ನು ಪುನರುತ್ಪಾದಿಸಲಾಗುತ್ತದೆ ಎಂಬ ಸಿದ್ದಾಂತವನ್ನು ಒಪ್ಪಿಕೊಂಡರೂ, ಮೊದಲನೆ ಕಲ್ಪ ಪ್ರಾರಂಭವಾದಾಗ ವೇದಗಳನ್ನು ರಚಿಸಿದವರು ಯಾರು? ಎಂಬ ಪ್ರಶ್ನೆ ಹಾಗೇ ಉಳಿಯುತ್ತದೆ. ಏನೂ ಇಲ್ಲದೇ (ಶೂನ್ಯದಿಂದ) ವೇದಗಳು ಅಸ್ತಿತ್ವಕ್ಕೆ ಬಂದಿರಲಾರವು. ಅವುಗಳಿಗೆ ಅಂತ್ಯವಿಲ್ಲದಿದ್ದರೂ, ಆದಿಯಂತೂ ಇರಲೇಬೇಕು. ಹಾಗೆಂದು ಬ್ರಾಹ್ಮಣರು ಬಹಿರಂಗವಾಗಿ ಏಕೆ ಹೇಳಬಾರದು? ಈ ಸುತ್ತುಬಳಸಿನ ಮಾತೇಕೆ?

ಆಧಾರ : [ಡಾ. ಬಾಬಾ ಸಾಹೇಬ್ ಅಂಬೇಡ್ಕರ್: ಹಿಂದೂ ಧರ್ಮದ ಒಗಟುಗಳು]

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕೋವಿಡ್ ಶವಗಳಿಗೆ ಮಿಡಿಯುವ ಕವಿ ಹೃದಯ..!

Published

on

 • ಪಂಜು ಗಂಗೊಳ್ಳಿ, ವ್ಯಂಗ್ಯಚಿತ್ರಕಾರ

ತ್ತರಪ್ರದೇಶ ಲಕ್ನೋದ 45 ವರ್ಷ ಪ್ರಾಯದ ವರ್ಷಾ ವರ್ಮಾ ಒಬ್ಬ ಕವಯಿತ್ರಿ. ಆದರೆ, ಇವರ ಕವಿ ಹೃದಯ ಇತರರ ನೋವು ನಲಿವುಗಳಿಗೆ ಸ್ಪಂಧಿಸಿ ಕವನಗಳನ್ನು ಬರೆದು ಸುಮ್ಮನಾಗುವಂತಹ ಸಾಮಾನ್ಯ ಹೃದಯವಲ್ಲ! ಇವರು ದೀಪಕ್ ಮಹಾಜನ್ ಎಂಬ 60 ವರ್ಷ ಪ್ರಾಯದ ಸರ್ಕಾರಿ ನೌಕರ ಮತ್ತು ಮಹಮ್ಮದ್ ಅಝರ್ ಹುಸೇನ್ ಎಂಬ 26 ವರ್ಷದ ಒಬ್ಬ ಸಾಮಾಜಿಕ ಕಾರ್ಯಕರ್ತರ ಜೊತೆ ಸೇರಿ ಲಕ್ನೋ ನಗರದಲ್ಲಿ ಕೋವಿಡ್ ಸೋಂಕು ತಗಲಿ ಸಾಯುವ ಅನಾಥರಿಗೆ ಗೌರವಯುತವಾದ ಅಂತ್ಯ ಸಂಸ್ಕಾರವನ್ನು ನೀಡುತ್ತಿದ್ದಾರೆ.

ನಿರ್ಗತಿಕರು ಮಾತ್ರವಲ್ಲ, ಸಾಕಷ್ಟು ಬಂಧು ಬಳಗವಿರುವವರೂ ಸೋಂಕು ತಗಲಿ ಸತ್ತರೆ ಅನಾಥರಂತೆ ಚಿತಾಗಾರ ಸೇರುವುದು ಸಾಮಾನ್ಯವಾಗುತ್ತಿರುವ ಕೋವಿಡ್ ನ ಈ ಬಿಕ್ಕಟ್ಟಿನ ದಿನಗಳಲ್ಲಿ ವರ್ಷಾ ವರ್ಮಾ ಮತ್ತು ಅವರ ಸಂಗಡಿಗರ ಈ ಕಾರ್ಯ ಮನಕಲಕುವಂತಹದ್ದು. ಮಾರ್ಚಿನಿಂದ ಈವರೆಗೂ ಇವರು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ ಆನೇಕ ಕೋವಿಡ್ ಶವಗಳ ಅಂತ್ಯಕ್ರಿಯೇ ನಡೆಸಿದ್ದಾರೆ.

ವಾಸ್ತವದಲ್ಲಿ, ವರ್ಷಾ ವರ್ಮಾ ಮತ್ತು ಅವರ ಸಂಗಡಿಗರು ಎರಡೂವರೆ ವರ್ಷಗಳ ಹಿಂದಿನಿಂದಲೇ ಅನಾಥ ಶವಗಳ ಅಂತ್ಯ ಸರ್ಕಾರ ನಡೆಸುವ ಕೆಲಸವನ್ನು ಶುರು ಮಾಡಿದ್ದರು. ಈ ಕೆಲಸಕ್ಕೆಂದೇ ಇವರು 2017 ರಲ್ಲಿ ‘ದಿವ್ಯ ಸೇವಾ ಫೌಂಡೇಷನ್’ ಎಂಬ ಒಂದು ಸಾಮಾಜಿಕ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ.

ಸಾಮಾನ್ಯವಾಗಿ ಪೋಲಿಸರು ಅನಾಥ ಶವಗಳನ್ನು ಬಟ್ಟೆಯಲ್ಲಿ ಸುತ್ತಿ ತೆರೆದ ಗಾಡಿಗಳಲ್ಲಿ ಹಾಕಿ ಚಿತಾಗಾರಕ್ಕೆ ಕೊಂಡೊಯ್ಯುತ್ತಾರೆ. ಆದರೆ, ವರ್ಮಾ ಈ ಅನಾಥ ಶವಗಳನ್ನು ಗೌರವಯುತವಾದ ಚಟ್ಟದ ಮೇಲಿರಿಸಿ, ಚಿಕ್ಕದೊಂದು ಬಸ್ಸಿನೊಳಗಿಟ್ಟು ಸಕಲ ಮರ್ಯಾದೆಗಳ ಮೂಲಕ ಅವುಗಳ ಅಂತ್ಯ ಕ್ರಿಯೆ ನಡೆಸುತ್ತಾರೆ. ಹೀಗೆ ಈವರೆಗೆ ಮೂವರೂ ಸೇರಿ 800 ಕ್ಕೂ ಹೆಚ್ಚಿನ ಅನಾಥರ ಶವಗಳಿಗೆ ಗೌರವಯುತವಾದ ಮುಕ್ತಿ ನೀಡಿದ್ದಾರೆ.

ವರ್ಷಾ ವರ್ಮಾರ ಪತಿ ರಾಕೇಶ್ ವರ್ಮಾ ಉತ್ತರಪ್ರದೇಶ ಸರ್ಕಾರದ ಪಿಡಬ್ಲ್ಯೂಡಿ ಇಲಾಖೆಯಲ್ಲಿ ಒಬ್ಬ ಎಂಜಿನಿಯರ್. 14 ವರ್ಷದ ಮಗಳು ನಂದಿನಿ ವರ್ಮಾ. “ಈ ನತದೃಷ್ಟರು ಹೇಗೇಗೋ ಬದುಕಿ ತಮ್ಮ ಜೀವನ ಕಳೆದಿರುತ್ತಾರೆ.ಆದರೆ, ಅವರ ಬದುಕಿನ ಪಯಣದ ಕೊನೆಯನ್ನಾದರೂ ತುಸು ಗೌರಯುತವಾಗಿಸುವುದಕ್ಕೆ ನೆರವಾಗುವ ಮೂಲಕ ನನ್ನ ಮನಸ್ಸಿಗೇನೋ ಒಂದು ರೀತಿಯ ಸಮಾಧಾನ ಸಿಗುತ್ತದೆ. ಈ ಕೆಲಸದಿಂದ ನನಗೆ ಸಿಗುವ ಪ್ರತಿಫಲ ಇದೊಂದೇ” ಎನ್ನುತ್ತಾರೆ ವರ್ಷಾ. ತನ್ನ ತಾಯಿಯ ಕೆಲಸಗಳನ್ನು ನೋಡಿ ಬೆಳೆದ ನಂದಿನಿಯೂ ಮುಂದೆ ತಾನೂ ತಾಯಿಯಂತೆ ಸಾಮಾಜಿಕ ಕಾರ್ಯಕರ್ತೆಯಾಗುತ್ತೇನೆ ಅನ್ನುತ್ತಾಳೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಬಹಿರಂಗ

ಡಾ.ಅಂಬೇಡ್ಕರ್‌ರವರ ಬರಹಗಳ ವಿರುದ್ಧ ವ್ಯವಸ್ಥಿತ ಅಸ್ಪೃಶ್ಯತಾಚರಣೆ..?

Published

on

 • ರಘೋತ್ತಮ ಹೊ.ಬ

ಭಾರತದ ಯಾವುದೇ ಪುಸ್ತಕದ ಅಂಗಡಿಗಳಲ್ಲಿ ಡಾ.ಅಂಬೇಡ್ಕರ್‌ರವರು ಬರೆದಿರುವ ಪುಸ್ತಕಗಳು ದೊರೆಯುವುದಿಲ್ಲ. ಹೌದು, ಇದು ಕಟು ಸತ್ಯ. ನಾವು ಅಥವಾ ಅಂಬೇಡ್ಕರರ ಬಗ್ಗೆ ಓದಲು ಆಸಕ್ತಿ ಇರುವ ಯಾರೇ ಆದರೂ ಡಾ.ಅಂಬೇಡ್ಕರ್ ರವರು ಬರೆದಿರುವ ಪುಸ್ತಕಗಳನ್ನು ಖರೀದಿಸಲು ಭಾರತದ ಯಾವುದೇ ಪುಸ್ತಕದ ಮಳಿಗೆಗೆ ಹೋದರು ಪುಸ್ತಕಗಳು ಅವರಿಗೆ ದೊರೆಯುವುದೇ ಇಲ್ಲ! ತಮಾಷೆಗೆ ಹೇಳುತ್ತಿಲ್ಲ.

ಮೊನ್ನೆ ಫೇಸ್‌ಬುಕ್ ಲೈವ್‌ನಲ್ಲಿ ಮಾತನಾಡಿರುವ ಬೆಂಗಳೂರಿನ ಉದಯೋನ್ಮುಖ ನರರೋಗತಜ್ಞರಾದ ಡಾ.ಲಿಂಗರಾಜುರವರು ಫೇಸ್‌ಬುಕ್‌ನಲ್ಲಿ ಲೈವ್‌ನಲ್ಲಿ ಅಂತರರಾಷ್ಟ್ರೀಯ ವೇದಿಕೆಯೊಂದರ ಆಹ್ವಾನದ ಮೇರೆಗೆ ಡಾ.ಅಂಬೇಡ್ಕರರ Annihilation of caste (ಜಾತಿ ವಿನಾಶ) ಕೃತಿ ಬಗ್ಗೆ ಮಾತನಾಡಲು ಒಪ್ಪಿಕೊಂಡು ಪುಸ್ತಕ ಹುಡುಕಲು ಬೆಂಗಳೂರಿನ ಪುಸ್ತಕ ಮಳಿಗೆಯೊಂದಕ್ಕೆ ಹೊರಟಿದ್ದಾರೆ.

ಆದರೆ ಅವರಿಗೆ ಡಾ.ಅಂಬೇಡ್ಕರರು ಬರೆದಿರುವ ಒಂದು ಪುಸ್ತಕ ಕೂಡ ಸಿಕ್ಕಿಲ್ಲ. ಏಷ್ಯಾದ ಬೃಹತ್ ಪುಸ್ತಕ ಮಾರಾಟ ಮಳಿಗೆ ಎಂದು ಬೋರ್ಡ್ ಹಾಕಿಕೊಂಡಿರುವ, ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ಹಲವಾರು ಬ್ರ‍್ಯಾಂಚ್‌ಗಳನ್ನು ಹೊಂದಿರುವ ಆ ಪುಸ್ತಕ ಮಳಿಗೆಯಲ್ಲಿ ಟಾಲ್ ಸ್ಟಾಯ್, ಕಾರ್ಲ್ ಮಾರ್ಕ್ಸ್ ಹೀಗೆ ವಿದೇಶಿ ಚಿಂತಕರ ಕೃತಿಗಳು ಸಿಗುತ್ತವೆ. ಆದರೆ ಸ್ವದೇಶಿ ಡಾ.ಅಂಬೇಡ್ಕರರ ಪುಸ್ತಕಗಳು ಸಿಗುವುದಿಲ್ಲ. ಇದು ಆ ಮಳಿಗೆಯೊಂದರ ಕತೆಯಲ್ಲ, ಭಾರತದ ಎಲ್ಲಾ ನಗರಗಳ ಪುಸ್ತಕ ಮಳಿಗೆಗಳ ಕತೆಯಿದು.

ಈ ಬಗ್ಗೆ ಮಾತನಾಡಿರುವ ಡಾ.ಲಿಂಗರಾಜುರವರು “ಅಂಬೇಡ್ಕರರ ಆ ಕೃತಿ ಕಾನೂನುಬಾಹಿರವೇ? ಇಲ್ಲ. ಏಕೆಂದರೆ ಅದನ್ನು ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾನಿಲಯವೇ ಪಠ್ಯಪುಸ್ತಕವಾಗಿ ಮಾನ್ಯತೆ ನೀಡಿದೆ. ಆದರೆ ವಾಸ್ತವ ಏನೆಂದರೆ ಕೆಲವು ದುಷ್ಟ ಶಕ್ತಿಗಳು ಅಂಬೇಡ್ಕರರ ಕೃತಿಗಳು ಯಾರಿಗೂ ಸಿಗದಂತೆ, ಜನರನ್ನು ತಲುಪುದಂತೆ ತಡೆದಿವೆ” ಎನ್ನುತ್ತಾರೆ. ಕೊನೆಯಲ್ಲಿ ಅಮೆಜಾನ್ ಮೂಲಕ ತಾನು ಪುಸ್ತಕ ತರಿಸಿಕೊಂಡಿದ್ದಾಗಿ ಡಾ.ಲಿಂಗರಾಜು ಹೇಳಿಕೊಂಡಿದ್ದಾರೆ.

ಹಾಗಿದ್ದರೆ ಅಂಬೇಡ್ಕರರ ಕೃತಿಗಳಿಗೆ ಬೇಡಿಕೆ ಕಡಿಮೆಯೇ? ಆ ಕಾರಣಕ್ಕೆ ಮಳಿಗೆಗಳು ತರಿಸುತ್ತಿಲ್ಲವೆ ಎಂದರೆ ಖಂಡಿತ ಇಲ್ಲ. ವಾಸ್ತವ ಏನೆಂದರೆ ಡಾ.ಅಂಬೇಡ್ಕರರು ಬರೆದಿರುವ ಕೃತಿಗಳಿಗೆ ಭಾರೀ ಬೇಡಿಕೆ ಇದೆ. ಸಾಹಿತ್ಯ ಸಮ್ಮೇಳನಗಳಲ್ಲಿ ಅತಿ ಹೆಚ್ಚು ಮಾರಾಟ ಆಗುವುದು ಡಾ.ಅಂಬೇಡ್ಕರ್ ಸಂಬಂಧಿಸಿದ ವೈಚಾರಿಕ ಕೃತಿಗಳೇ! ಡಾ.ಅಂಬೇಡ್ಕರರ ಹೆಸರಿನ ಕಾರಣಕ್ಕೆ ಆ ಕೃತಿಗಳಿಗೆ ಬೇಡಿಕೆಯೇ? ಖಂಡಿತ ಇಲ್ಲ. ಅಂಬೇಡ್ಕರರ ಕೃತಿಗಳಿಗೆ ಈ ಮಟ್ಟಿಗಿನ ಬೇಡಿಕೆಗೆ ಕಾರಣ ಆ ಕೃತಿಗಳ ವಸ್ತು, ವಿಚಾರಗಳನ್ನು ಉತ್ಕೃಷ್ಟ ಇಂಗ್ಲಿಷ್ ಭಾಷೆಯಲ್ಲಿ ಮಂಡಿಸಿರುವ ಶೈಲಿ, ಓದುಗನನ್ನು ಹಿಡಿದಿಡುವ ಧಾಟಿ.

ಕುತೂಹಲಕರ ವಿಚಾರವೆಂದರೆ ಅಂಬೇಡ್ಕರರ ಒಂದು ಪುಟ್ಟ ಕೃತಿ ಒಂದು ಬೃಹತ್ ಚಳುವಳಿಯನ್ನೇ ಒಂದು ಬೃಹತ್ ರಾಜಕೀಯ ಪಕ್ಷವನ್ನೇ ಹುಟ್ಟು ಹಾಕಿದೆ ಎಂದರೆ…!1970ರ ಸಂದರ್ಭದಲ್ಲಿ ದಿವಂಗತ ಕಾನ್ಷೀರಾಮ್‌ರವರಿಗೆ ಡಾ.ಅಂಬೇಡ್ಕರ್ ರವರ ಈ “ಅನ್ನಿಹಿಲೇಷನ್ ಆಫ್ ಕ್ಯಾಸ್ಟ್” ಕೃತಿ ಸಿಕ್ಕಿ ಇಡೀ ರಾತ್ರಿ ಅವರು ಅದನ್ನು ಓದಿ ಜ್ಞಾನೋದಯಗೊಂಡು ಬಹುಜನ ಸಮಾಜ ಪಕ್ಷದ ಉದಯಕ್ಕೆ ಕಾರಣರಾಗುತ್ತಾರೆ! ಆ ಮಟ್ಟಿಗಿನ ಭವ್ಯ ವಸ್ತು, ಸ್ಪೂರ್ತಿ ಚಿಲುಮೆ ಇರುವ ಕೃತಿಗಳು ಡಾ.ಅಂಬೇಡ್ಕರರದು.

ಈ ನಿಟ್ಟಿನಲ್ಲಿ ಅವರ “ಅನ್ನಿಹಿಲೇಷನ್ ಆಫ್ ಕ್ಯಾಸ್ಟ್” ಜೊತೆಗೆ “ರೆವಲ್ಯೂಷನ್ ಅಂಡ್ ಕೌಂಟರ್ ರೆವಲ್ಯೂಷನ್”, ರಿಡಲ್ಸ್ ಇನ್ ಹಿಂದೂಯಿಸಂ”, “ವೂ ವರ್ ಶೂದ್ರಾಸ್”, “ದಿ ಅಂಟಚಬಲ್ಸ್”, “ಪ್ರಾಬ್ಲಂ ಆಫ್ ರುಪೀ“, “ಪಾಕಿಸ್ತಾನ್ ಆರ್ ಪಾರ್ಟಿಷನ್ ಆಫ್ ಇಂಡಿಯಾ “, “ಬುದ್ಧ ಅಂಡ್ ಹಿಸ್ ಧಮ್ಮ” ಹೀಗೆ ಡಾ.ಅಂಬೇಡ್ಕರರ ಇತರೆ ಕೃತಿಗಳು ಅವುಗಳ ವಸ್ತುಗಳ ಜೊತೆಗೆ ಪ್ರಾಚೀನ ಭಾರತದ ಇತಿಹಾಸ, ಭಾರತದ ಸ್ವಾತಂತ್ರ‍್ಯ ಸಂದರ್ಭದ ಘಟನೆಗಳು, ಈ ದೇಶದ ಸಾಮಾಜಿಕ ಕಟುಸತ್ಯಗಳನ್ನು ಐತಿಹಾಸಿಕ ದಾಖಲೆಗಳೊಡನೆ ಮನಮುಟ್ಟುತ್ತವೆಯೆಂದರೆ, ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತವೆಯೆಂದರೆ…, ಅದರಲ್ಲೂ ಅವರ “ಪ್ರಾಬ್ಲಂ ಆಫ್ ರುಪೀ” ಪುಸ್ತಕ ಈ ದೇಶದ ಹಣಕಾಸು ವ್ಯವಸ್ಥೆ ನಿಯಂತ್ರಣ ಮಾಡುವ ಉತ್ಕೃಷ್ಟ ಬ್ಯಾಂಕ್ ಆದ “ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ” ಸ್ಥಾಪನೆಗೆ ಕಾರಣವಾದರೆ “ಪಾಕಿಸ್ತಾನ್ ಆರ್ ಪಾರ್ಟಿಷನ್ ಆಫ್ ಇಂಡಿಯಾ” ಕೃತಿ ದೇಶ ವಿಭಜನೆಯ ಕಾರ್ಯವನ್ನು ಸುಲಲಿತವಾಗಿ ನಡೆಯಲಿಕ್ಕೆ ನೆರವಾಯಿತು.

ದುರಂತವೆಂದರೆ ಇಂತೆಲ್ಲ ಮಹತ್ವದ ಜ್ಞಾನ ಮತ್ತು ಐತಿಹಾಸಿಕ ಬೆಳವಣಿಗೆ ಮಯ ಹಿನ್ನೆಲೆಯನ್ನು ಈ ದೇಶದ ಪಟ್ಟಭದ್ರ ಹಿತಾಸಕ್ತಿಗಳು ಜನಸಾಮಾನ್ಯರಿಗೆ ತಲುಪಲು ಬಿಟ್ಟಿಲ್ಲ. ಮತ್ತೊಂದು ವಾಸ್ತವವೆಂದರೆ ಭಾರತದ ಪ್ರಕಾಶನ ಸಂಸ್ಥೆಗಳ, ಪುಸ್ತಕ ಮಳಿಗೆಗಳ ಇಂತಹ ಧೋರಣೆ ಕೊನೆಗಾಣ ಸಲು1980ರ ಸಮಯದಲ್ಲಿ ಮಹಾರಾಷ್ಟ್ರದಲ್ಲಿ ಅಲ್ಲಿನ ಅಂಬೇಡ್ಕರರ ಅನುಯಾಯಿಗಳ ಒತ್ತಾಯದ ಫಲವಾಗಿ ಸರ್ಕಾರ ಸಂಪೂರ್ಣ ಇಂಗ್ಲಿಷ್ ಭಾಷೆಯಲ್ಲಿದ್ದ ಡಾ.ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳನ್ನು ಸಂಪುಟಗಳ ರೂಪದಲ್ಲಿ ಪ್ರಕಟಿಸಲು ಆರಂಭಿಸಿತು.

ಮಹಾರಾಷ್ಟ್ರದ ಈ ಯೋಜನೆಗೆ ಕೈಗೂಡಿಸಿದ ಇತರೆ ರಾಜ್ಯಗಳು ತಮ್ಮ ತಮ್ಮ ಭಾಷೆಗಳಲ್ಲಿ ಅವುಗಳನ್ನು ಅನುವಾದಿಸಿ ಪ್ರಕಟಿಸಿದವು. ಈ ನಡುವೆ ಬಾಬಾಸಾಹೇಬ್ ಅಂಬೇಡ್ಕರರ ಇಂಗ್ಲಿಷ್ ಬರಹಗಳಿಗೆ ಈ ಮಟ್ಟಿಗಿನ ರಾಷ್ಟ್ರವ್ಯಾಪಿ ಬೇಡಿಕೆ ಮತ್ತು ದಲಿತ ಸಂಘಟನೆಗಳಿಂದ ಒತ್ತಾಯ ಬಂದ ಹಿನ್ನೆಲೆಯಲ್ಲಿ 2004ರಲ್ಲಿ ಯುಪಿಎ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವೆಯಾದ ಕುಮಾರಿ ಶೆಲ್ಜಾರವರ ಒತ್ತಾಸೆಯ ಮೇರೆಗೆ ಮಹಾರಾಷ್ಟ್ರದ ಯೋಜನೆಯನ್ನು ಕೇಂದ್ರ ಸರ್ಕಾರ ಮುಂದುವರಿಸಿ ಅಂಬೇಡ್ಕರರ ಪುಸ್ತಕಗಳು ಎಲ್ಲೆಡೆ ದೊರೆಯಲಿಕ್ಕೆ ಕಾರಣವಾಯಿತು.

ಹಾಗೆಯೇ ಯುಪಿಎ ಸರ್ಕಾರ ಡಾ.ಅಂಬೇಡ್ಕರರ ಈ ಎಲ್ಲಾ ಬರಹಗಳ ಸಂಪುಟಗಳನ್ನು ಪಿಡಿಎಫ್ ಮೂಲಕ ಅಂತರ್ಜಾಲದಲ್ಲೂ ಪ್ರಕಟಿಸಿದೆ. ಆಸಕ್ತರು ಯಾರೂ ಬೇಕಾದರೂ ಅವುಗಳನ್ನು ಡೌನ್‌ಲೋಡ್ ಮಾಡಿಕೊಂಡು ಓದಬಹುದು. ಆದರೆ ಪ್ರಶ್ನೆಯೇನೆಂದರೆ ಭಾರತದ ಪುಸ್ತಕ ಮಳಿಗೆಗಳಲ್ಲಿ ಅಂಬೇಡ್ಕರರ ಈ ಪುಸ್ತಕಗಳ ಲಭ್ಯತೆ?

ಹಾಗಿದ್ದರೆ ಮಹಾರಾಷ್ಟ್ರ ಸರ್ಕಾರ ಪ್ರಕಟಿಸುವ ಮೊದಲು ಅವುಗಳು ಲಭ್ಯವಿರಲಿಲ್ಲವೆಂದೇ? ಪ್ರಕಟವಾಗಿರಲಿಲ್ಲವೆಂದೇ? ಅದಕ್ಕಾಗಿ ಪ್ರಕಾಶನ ಸಂಸ್ಥೆಗಳಿಗೆ ಈ ಕಾರ್ಯ ಸಾಧ್ಯವಾಗಲಿಲ್ಲವೆಂದೇ? ಹಾಗೇನಿಲ್ಲ, ಲಭ್ಯವಿತ್ತು, ಪ್ರಕಟವಾಗಿತ್ತು. ಬಾಬಾಸಾಹೇಬ್ ಅಂಬೇಡ್ಕರರ ಸಹಪಾಠಿ ವಾಲ್ಮೀಕಿ ಭಂಗಿ ಸಮುದಾಯದದಿ.ಭಗವಾನ್‌ದಾಸ್‌ರವರು1960, 70 ರ ಹೊತ್ತಿಗೆ “ದಸ್ ಸ್ಪೋಕ್ ಅಂಬೇಡ್ಕರ್ (ಅಂಬೇಡ್ಕರ್ ಹೀಗೆ ಹೇಳಿದರು)” ಹೆಸರಿನಲ್ಲಿ ಸ್ವಂತ ಖರ್ಚು ಮತ್ತು ಶ್ರಮದ ಮೂಲಕ ಸರಣ ರೂಪದಲ್ಲಿ ಪ್ರಕಟಿಸಿದರು.

ಹಾಗಿದ್ದರೂ ಭಾರತದ ಪುಸ್ತಕ ಮಳಿಗೆಗಳು ಅಂಬೇಡ್ಕರರ ಆ ಸಂಪುಟಗಳತ್ತ ಕಣ್ಣೆತ್ತಿಯೂ ನೋಡಲಿಲ್ಲ ಅಥವಾ ತಮ್ಮ ಮಳಿಗೆಗಳ ಮೂಲಕ ಮಾರಾಟ ಮಾಡಲು ಮುಂದೆ ಬರಲಿಲ್ಲ. ಯಾಕೆ ಹೀಗೆ? ಈ ಲೇಖನದ ಆರಂಭದಲ್ಲೇ ಪ್ರಸ್ತಾಪಿಸಿರುವ ಹಾಗೆ “ಕೆಲವು ದುಷ್ಟ ಶಕ್ತಿಗಳು”. ಹೌದು, ಕೆಲವು ದುಷ್ಟ ಶಕ್ತಿಗಳು, ಅಸ್ಪೃಶ್ಯತಾಚರಣೆಯ ಮನಸ್ಥಿತಿ ಹೊಂದಿರುವ ದುಷ್ಟ ಶಕ್ತಿಗಳು ಅವು. ಸಂವಿಧಾನ ವಿರೋಧಿ ಶಕ್ತಿಗಳು ಎಂದು ಕೂಡ ಹೇಳಬಹುದು.

ಯಾಕೆಂದರೆ ಸಂವಿಧಾನದ ಅನುಚ್ಛೇದ 19 “ಅಭಿವ್ಯಕ್ತಿ ಸ್ವಾತಂತ್ರ‍್ಯ” ನೀಡುತ್ತದೆ. ಆದರೆ ಇಲ್ಲಿ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರರ ಅಭಿವ್ಯಕ್ತಿ ಸ್ವಾತಂತ್ರ‍್ಯಕ್ಕೆ ತಡೆಯೊಡ್ಡಲಾಗಿದೆ. ಯಾವ ಮಟ್ಟಿಗೆ ಎಂದರೆ ಈಗಲೂ ವಯಕ್ತಿಕವಾಗಿ ಬಹುತೇಕರು ನನ್ನನ್ನು “ಸರ್, ಅಂಬೇಡ್ಕರರ ಬರಹಗಳ ಭಾಷಣಗಳ ಇಂಗ್ಲಿಷ್ ಸಂಪುಟಗಳು ಎಲ್ಲಿ ಸಿಗುತ್ತವೆ?” ಎಂದರೆ ನನಗೆ ಭಾರತದ ಯಾವ ಪುಸ್ತಕ ಮಳಿಗೆಗಳಲ್ಲಿ ಸಿಗುತ್ತದೆ ಎಂದು ಹೇಳಲಿಕ್ಕೆ ಖಂಡಿತ ಸಾಧ್ಯವಾಗುವುದಿಲ್ಲ. ಆ ಮಟ್ಟಿಗೆ ಅಂಬೇಡ್ಕರರ ಅಭಿವ್ಯಕ್ತಿ ಸ್ವಾತಂತ್ರ‍್ಯ ಅಸ್ಪೃಶ್ಯತಾಚರಣೆ ಮೂಲಕ ದಮನವಾಗಿದೆ.

ಅಂದಹಾಗೆ ಇದಕ್ಕೆ ಯಾರನ್ನು ದೂರುವುದು? ಯಾರು ಹೊಣೆ?

ಉತ್ತರ: ಈ ದೇಶದ ಹಿಂದುತ್ವವಾದಿ, ಜಾತಿವಾದಿ, ಮನುವಾದಿ ಮನಸ್ಸುಗಳು ಎಂದು ನೇರ ಹೇಳದೆ ವಿಧಿಯಿಲ್ಲ. ಪ್ರಶ್ನೆ ಏನೆಂದರೆ ಮುಂದಾದರೂ ಇಂತಹ ಪರಿಸ್ಥಿತಿ ತೊಲಗುವುದೇ? ಅಂಬೇಡ್ಕರರ ಬರಹಗಳು ಎಲ್ಲರಿಗೂ ಧಕ್ಕುವುದೇ, ಈ ದೇಶದ ಜನಸಾಮಾನ್ಯರ ಜ್ಞಾನ ದಾಹ ಹಿಂಗಿಸುವುದೇ? ಕಾದು ನೋಡಬೇಕಷ್ಟೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ4 hours ago

ಭಾರತದಲ್ಲಿ 118 ವರ್ಷಗಳ ಬಳಿಕ ಅರಳಿದ ಅಪರೂಪದ ಹೂವು..!

ಸುದ್ದಿದಿನ,ನವದೆಹಲಿ: ಭಾರತದಲ್ಲಿ 118 ವರ್ಷಗಳ ಬಳಿಕ ಆರ್ಕಿಡ್ ಜಾತಿಗೆ ಸೇರಿದ ಹೂ ಕಂಡು ಬಂದಿದೆ. ಉತ್ತರ ಪ್ರದೇಶದ ದುಧವಾ ಹುಲಿ ಸಂರಕ್ಷಣ ಅರಣ್ಯ ಪ್ರದೇಶದಲ್ಲಿ ಹೂ ಲಭ್ಯವಾಗಿದೆ....

ದಿನದ ಸುದ್ದಿ5 hours ago

ಸಬ್ ಇನ್ಸ್ ಪೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ: ಸಿಬ್ಬಂದಿ ನೇಮಕಾತಿ ಆಯೋಗದ ವತಿಯಿಂದ ದೆಹಲಿ ಪೊಲೀಸ್, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ಖಾಲಿ ಇರುವ ಸಬ್-ಇನ್ಸ್‍ಪೆಕ್ಟರ್(SI) ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಪದವಿ ವಿದ್ಯಾರ್ಹತೆಯನ್ನು...

ದಿನದ ಸುದ್ದಿ5 hours ago

ಕಾನೂನು ಪದವೀಧರರ ತರಬೇತಿ ಭತ್ಯೆಗೆ ಅರ್ಜಿ ಆಹ್ವಾನ

ಸುದ್ದಿದಿನ,ರಾಯಚೂರು: 2020-21ನೇ ಸಾಲಿನ ಹಿಂದುಳಿದ ವರ್ಗಗಳಿಗೆ ಸೇರಿದ ಕಾನೂನು ಪದವೀಧರರ ತರಬೇತಿ ಭತ್ಯೆಗೆ ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ...

ನೆಲದನಿ5 hours ago

ವೇದಗಳ ಹುಟ್ಟು – ಬ್ರಾಹ್ಮಣರ ಸ್ಪಷ್ಟಿಕರಣ ಅಥವಾ ಲಂಬೋಕ್ತಿ ಕಲೆಯ ಕಸರತ್ತು

ವಿ.ಎಸ್. ಬಾಬು ವೇದಗಳನ್ನು ತನ್ನ ಧರ್ಮದ ಅತ್ಯಂತ ಪವಿತ್ರಗ್ರಂಥಗಳೆಂದು ಪರಿಗಣಿಸದ ಹಿಂದೂ ಪ್ರಾಯಶಃ ಎಲ್ಲೂ ಇರಲಾರ. ಆದರೂ, ಯಾವ ಹಿಂದೂವನ್ನಾದರೂ ವೇದಗಳ ಮೂಲವೆಲ್ಲಿ ಎಂದು ಕೇಳಿದರೆ, ಈ...

ದಿನದ ಸುದ್ದಿ5 hours ago

ಕೋವಿಡ್ ಶವಗಳಿಗೆ ಮಿಡಿಯುವ ಕವಿ ಹೃದಯ..!

ಪಂಜು ಗಂಗೊಳ್ಳಿ, ವ್ಯಂಗ್ಯಚಿತ್ರಕಾರ ಉತ್ತರಪ್ರದೇಶ ಲಕ್ನೋದ 45 ವರ್ಷ ಪ್ರಾಯದ ವರ್ಷಾ ವರ್ಮಾ ಒಬ್ಬ ಕವಯಿತ್ರಿ. ಆದರೆ, ಇವರ ಕವಿ ಹೃದಯ ಇತರರ ನೋವು ನಲಿವುಗಳಿಗೆ ಸ್ಪಂಧಿಸಿ...

ದಿನದ ಸುದ್ದಿ6 hours ago

ಎಚ್ಚರಿಕೆ | ವಿವಿಧ ರಾಜ್ಯಗಳಿಂದ ಜಿಲ್ಲೆಗೆ ಬರುತ್ತಿರುವವರ ಮೇಲೆ ಈ ಕಾರಣಕ್ಕೆ ಬೀಳತ್ತೆ ಕ್ರಿಮಿನಲ್ ಕೇಸ್

ಸುದ್ದಿದಿನ,ಉಡುಪಿ : ಜಿಲ್ಲೆಗೆ ವಿವಿಧ ರಾಜ್ಯಗಳಿಂದ ಆಗಮಿಸುತ್ತಿರುವ ಸಾರ್ವಜನಿಕರು, ಖಾಸಗಿ ಲ್ಯಾಬ್ ಗಳಲ್ಲಿ ನೀಡಿರುವ ತಮ್ಮ ಕೋವಿಡ್-19 ಪರೀಕ್ಷಾ ವರದಿ ಬರುವ ಮುನ್ನವೇ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಜಿಲ್ಲೆಗೆ...

ದಿನದ ಸುದ್ದಿ6 hours ago

ದಾವಣಗೆರೆ | ಜು.13 ರಂದು ದಿಶಾ ಸಮಿತಿ ಸಭೆ : ಸಿಇಒ ಪದ್ಮ ಬಸವಂತಪ್ಪ

ಸುದ್ದಿದಿನ,ದಾವಣಗೆರೆ : ಲೋಕಸಭಾ ಸದಸ್ಯರಾದ ಜಿ.ಎಂ ಸಿದ್ದೇಶ್ವರ ಇವರ ಅಧ್ಯಕ್ಷತೆಯಲ್ಲಿ ಜು.13 ರಂದು ಬೆಳಿಗ್ಗೆ 11.30 ಗಂಟೆಗೆ ಜಿಲ್ಲಾ ಪಂಚಾಯಿತಿಯ ಸಭಾಂಗಣದಲ್ಲ್ಲಿ “ಜಿಲ್ಲಾ ಅಭಿವೃದ್ದಿ ಸಮನ್ವಯ ಮತ್ತು...

ಬಹಿರಂಗ6 hours ago

ಡಾ.ಅಂಬೇಡ್ಕರ್‌ರವರ ಬರಹಗಳ ವಿರುದ್ಧ ವ್ಯವಸ್ಥಿತ ಅಸ್ಪೃಶ್ಯತಾಚರಣೆ..?

ರಘೋತ್ತಮ ಹೊ.ಬ ಭಾರತದ ಯಾವುದೇ ಪುಸ್ತಕದ ಅಂಗಡಿಗಳಲ್ಲಿ ಡಾ.ಅಂಬೇಡ್ಕರ್‌ರವರು ಬರೆದಿರುವ ಪುಸ್ತಕಗಳು ದೊರೆಯುವುದಿಲ್ಲ. ಹೌದು, ಇದು ಕಟು ಸತ್ಯ. ನಾವು ಅಥವಾ ಅಂಬೇಡ್ಕರರ ಬಗ್ಗೆ ಓದಲು ಆಸಕ್ತಿ...

ದಿನದ ಸುದ್ದಿ6 hours ago

ದಾವಣಗೆರೆ | ತೋಟಗಾರಿಕೆ ಮಿಷನ್ ಯೋಜನೆಯಡಿ ರೈತರಿಂದ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ: 2020-21 ನೇ ಸಾಲಿನಲ್ಲಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಜಗಳೂರು ಈ ಕಚೇರಿಯಿಂದ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ವಿವಿಧ ಬೆಳೆಗಳ ಪ್ರದೇಶ ವಿಸ್ತರಣೆ, ಕೃಷಿ...

ದಿನದ ಸುದ್ದಿ6 hours ago

ದಾವಣಗೆರೆ | ಕಂಟೈನ್‍ಮೆಂಟ್ ವಲಯದ ನೋಟಿಫಿಕೇಷನ್

ಸುದ್ದಿದಿನ,ದಾವಣಗೆರೆ:ನಗರದಲ್ಲಿ ಕೊರೊನಾ ಪಾಸಿಟಿವ್ ವರದಿಯಾಗಿದ್ದ ರೋಗಿ ಸಂಖ್ಯೆ 21681 ನೆಲೆಸಿದ್ದ ಕೊಟ್ಟೂರೇಶ್ವರ ಬಡವಣೆ, ನಿಟುವಳ್ಳಿ, ದಾವಣಗೆರೆ ಈ ಪ್ರದೇಶವನ್ನು ವಿಪತ್ತು ನಿರ್ವಹಣೆ ಕಾಯ್ದೆ 2005 ರ ಅಧಿಕೃತ...

Trending