Connect with us
http://www.suddidina.com/category/political-news

ಬಹಿರಂಗ

‘ಭೀಮ ಕೋರೆಗಾಂವ್ ದಂಗೆ’ಯ ಬಗ್ಗೆ ನೀವು ಓದಲೇ ಬೇಕಾದ ಲೇಖನ..!

Published

on

ಭೀಮ ಕೋರೆಗಾಂವ್ ದಂಗೆ : ಜನವರಿ – 1 , 1818 ( ಸಿಪಾಯಿ ದಂಗೆಗಿಂತ 40 ವರ್ಷಗಳ ಮೊದಲೇ ನಡೆದ ಅಸ್ಪಶ್ಯರ ಮಹಾದಂಗೆ )

ಯುದ್ಧದಲ್ಲಿ ಮಡಿದ ಅಸ್ಪಶ್ಯ ವೀರರು

1 . ಸಿದ್ದನಾಕ ಮಕಲನಾಕ ನಾಯಕ
2 . ರಾಮನಾಕ ಯಶನಾಕ ಸಿಪಾಯಿ
3 , ಗೋದನಾಕ ಮೋಡೆನಾಕ ಸಿಪಾಯಿ
4 , ರಾಮನಾಕ ಯಶನಾಕ ಸಿಪಾಯಿ
5 . ಭಾಗನಾಕ ಹರನಾಕ ಸಿಪಾಯಿ
6 . ಅಂಬನಾಕ ಕಾನನಾಕ ಸಿಪಾಯಿ
7 . ಗಣನಾಕ ಬಾಳನಾಕ ಸಿಪಾಯಿ
8 . ಬಾಳನಾಖ ದೊಂಡನಾಕ ಸಿಪಾಯಿ
9 , ರೂಪನಾಕ ಲಖನಾಕ ಸಿಪಾಯಿ
10 . ಬಾಲನಾಕ ರಾಮನಾಕ ಸಿಪಾಯಿ
11 . ವಟಿನಾಕ ಧಾನನಾಕ ಸಿಪಾಯಿ
12 . ಗಜನಾಕ ಗಣನಾಕ gಸಿಪಾಯಿ
13 . ಬಾಪನಾಕ ಹಬನಾಕ ಸಿಪಾಯಿ
14 . ಕೋನಾಕ ಜಾನನಾಕ ಸಿಪಾಯಿ
15 . ಸಮನಾಕ ಯಸನಾಕ ಸಿಪಾಯಿ
16 , ಗಣನಾಕ ಧರಮನಾಕ ಸಿಪಾಯಿ
17 . ದೇವನಾಕ ಅಂಕನಾಕ ಸಿಪಾಯಿ
18 . ಗೋಪಾಲನಾಕ ಬಾಲಿನಾಕ ಸಿಪಾಯಿ
19 , ಹರನಾಕ ಹರಿನಾಕ ಸಿಪಾಯಿ
20 . ಜೇಠನಾಕ ದೌನಾಕ ಸಿಪಾಯಿ
21 . ಗಣನಾಕ ಲಖನಾಕ ಸಿಪಾಯಿ
22 . ಸೀನನಾಕ ಮಕಲನಾಕ ಸಿಪಾಯಿ
ಅಸ್ಪಶ್ಯರನ್ನು ಗುರುತಿಸಲು ಅಂದು ಅವರ ಹೆಸರಿನ ಮುಂದೆ ನಾಕ ಎಂದು ಸೇರಿಸಲಾಗುತ್ತಿತ್ತು .

ಡಾ . ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಎಷ್ಟೇ ತುರ್ತು ಕೆಲಸಕಾರ್ಯಗಳಿದ್ದರೂ ಸಹ ಅವುಗಳೆಲ್ಲವನ್ನೂ ಬದಿಗಿರಿಸಿ , ಜಗತ್ತಿನ ಯಾವ ಮೂಲೆಯಲ್ಲಿದ್ದರೂ ಸಹ ಅಲ್ಲಿಂದ ಹೊರಟು ಜನವರಿ ಒಂದನೇ ತಾರೀಖಿನಂದು ‘ ಕೋರೆಗಾಂವ್ ‘ ಗೆ ತಮ್ಮ ಕುಟುಂಬ ಸಮೇತರಾಗಿ ಬಂದು , ಅಲ್ಲಿರುವ ಹುತಾತ್ಮ ಅಸ್ಪಶ್ಯ ಯೋಧರ ಸ್ಮಾರಕಕ್ಕೆ ( ವಿಜಯ ಸ್ಥಂಬಕ್ಕೆ ) ಶ್ರದ್ದಾಂಜಲಿ ಸಲ್ಲಿಸುತ್ತಿದ್ದ ಅವರು ಬದುಕಿರುವ ತನಕವೂ ಒಂದೇ ಒಂದು ವರ್ಷವೂ ಸಹ ಜನವರಿ 1ನೇ ತಾರೀಖು ಇಲ್ಲಿ ಬರುವುದನ್ನು ಬಾಬಾಸಾಹೇಬರು ತಪಿಸಲಿಲ್ಲ . ಪ್ರತಿವರ್ಷ ಜನವರಿ 1ನೇ ತಾರೀಖು ಜಗತ್ತಿಗೆ ಹೊಸವರ್ಷದ ಸಂಭ್ರಮದ ದಿನವಾದರೆ ಭಾರತದ ದಲಿತರ ಪಾಲಿಗೆ ಇದು ಅಸ್ಪೃಶ್ಯತೆಯ ವಿರುದ್ಧ ಬಂಡೆದ್ದ ಅಸ ಶರ ಗುಂಪೊಂದು ಮಹಾರಾಷ್ಟ್ರದ ಪೇಶ್ವಗಳ ವಿರುದ್ಧ ಕೆಚ್ಚೆದೆಯ ಹೋರಾಟ ನಡೆಸಿ ದಿಗ್ವಿಜಯ ಸಾಧಿಸಿದ ದಿನ , ಈ ದಿನ ಶೋಷಿತರ ಆತ್ಮಗೌರವ ತಲೆಯೆತ್ತಿದ ದಿನವೆಂದೇ ಪ್ರಸಿದ್ದ . ಈ ಘಟನೆ ಡಾ . ಅಂಬೇಡ್ಕರ್‌ರವರ ಹೋರಾಟಗಳ ಬದುಕಿನ ಪ್ರೇರಣೆಗಳಲ್ಲಿ ಒಂದೂ ಹೌದು . ಕ್ರಿ . ಶ . 1800ರಲ್ಲಿ ಮಹಾರಾಷ್ಟ್ರದಲ್ಲಿ ಪೇಶ್ವಗಳು ಆಡಳಿತ ನಡೆಸುತ್ತಿದ್ದರು . ಇವರ ಆಡಳಿತವು ಅಸಶರ ಪಾಲಿನ ಕರಾಳ ಚರಿತ್ರೆಯಾಗಿತ್ತು . ಅಸ್ಪಶ್ಯತೆ ಆಚರಣೆಯ ಕಠೋರತೆಯು ಅಮಾನುಷವಾಗಿತು .ಅಸ್ಪೃಶರ ನೆರಳು ಹಿಂದೂ ಸವರ್ಣಿಯ ಮೇಲೆ ಬಿದ್ದರೆ , ಹಿಂದೂ ಸವರ್ಣಿಯರಿಗೆ ಮೈಲಿಗೆಯಾಗುತ್ತದೆಂಬ ಕಾರಣಕ್ಕಾಗಿ ಸಾರ್ವಜನಿಕ ಸ್ಥಳಗಳಲ್ಲಿ ಅಸ್ಪಶ್ಯರಿಗೆ ಪ್ರವೇಶವನ್ನೇ ನಿಷೇಧಿಸಲಾಗಿತ್ತು . ಅಸ ಶ್ಯರು ಊರ ಮಧ್ಯೆ ಮಧ್ಯಾಹ್ನ 12 ಗಂಟೆ ಸಮಯದಲ್ಲಿ ಮಾತ್ರ ನಡೆದುಕೊಂಡು ಹೋಗಬೇಕಾಗಿತ್ತು .

ಏಕೆಂದರೆ ಈ ಸಮಯದಲ್ಲಿ ಅವನ ನೆರಳು ಬೇರೆಕಡೆ ಬೀಳುವುದಿಲ್ಲ ಎನ್ನುವ ಕಾರಣಕ್ಕಾಗಿ . ಹೋಗುವಾಗ ಕುತ್ತಿಗೆಗೆ ಒಂದು ಮಣ್ಣಿನ ಮಡಿಕೆಯನ್ನು ನೇತು ಹಾಕಿಕೊಳ್ಳಬೇಕಾಗಿತ್ತು . ಏಕೆಂದರೆ ಅಸ್ಪಶ್ಯರು ನೆಲಕ್ಕೆ ಉಗುಳುವ ಹಾಗಿರಲಿಲ್ಲ . ಆ ಮಡಿಕೆಯಲ್ಲಿ ಉಗುಳಿಕೊಳ್ಳಬೇಕಾಗಿತ್ತು . ಅದೇ ರೀತಿ ಸೊಂಟಕ್ಕೆ ಒಂದು ಕಸಪೊರಕೆ ಕಟ್ಟಿಕೊಂಡು ತಾನು ನಡೆದ ದಾರಿಯನ್ನು ತಾನೇ ಗುಡಿಸಿಕೊಂಡು ಹೋಗಬೇಕಾಗಿತ್ತು . ಅಸ್ಪಶ್ಯರು ತಮ್ಮ ಗುರುತು ಪತ್ತೆಗಾಗಿ ತಮ್ಮ ಕುತ್ತಿಗೆ ಮತ್ತು ಮುಂಗೈಗೆ ದಪ್ಪದಾದ ಕಪ್ಪು ದಾರವನ್ನು ಕಡ್ಡಾಯವಾಗಿ ಕಟ್ಟಿಕೊಳ್ಳಬೇಕಾಗಿತ್ತು . ಊರಿನೊಳಗೆ ಸತ್ತ ದನಗಳನ್ನು ಊರಿನಿಂದ ಹೊರಗೆ ಹೊತ್ತುಕೊಂಡು ಹೋಗಿ ಅದರ ಮಾಂಸವನ್ನು ಬೇಯಿಸಿ ತಿನ್ನಬೇಕಾಗಿತ್ತು . ಅವರಿಗೆ ವಿದ್ಯೆ ಕಲಿಯುವ ಹಕ್ಕನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು . ಅಸ್ಪಶ್ಯ ಹೆಂಗಸರು ಚಿನ್ನ ಅಥವಾ ಬೆಳ್ಳಿಯ ಆಭರಣಗಳನ್ನು ತೊಡುವ ಹಾಗಿರಲಿಲ್ಲ . ಹಿಂದೂ ಸವರ್ಣಿಯರು ಮತ್ತು ಪೇಳ್ವೆ ಸೈನಿಕರು ಅಸ್ಪಶ್ಯ ಮಹಿಳೆಯರ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು . ಈ ಎಲ್ಲಾ ಅನ್ಯಾಯ ಮತ್ತು ದೌರ್ಜನ್ಯಗಳನ್ನು ನಿಲ್ಲಿಸಬೇಕೆಂದು ಅಸ್ಪೃಶ್ಯರು 1817ರಲ್ಲಿ ರಾಜ್ಯಭಾರ ನಡೆಸುತ್ತಿದ್ದ ಪೇಶ್ವಿರಾಜ ಎರಡನೇ ಬಾಜೀರಾಯನಲ್ಲಿ ವಿನಂತಿಸಿಕೊಂಡಾಗ ಎರಡನೇ ಬಾಜೀರಾಯನು “ ನೀವುಗಳು ಹುಟ್ಟಿರುವುದೇ ನಮ್ಮಗಳ ಸೇವೆ ಮಾಡಲಿಕ್ಕಾಗಿ & ನಿಮ್ಮ ಹೆಂಗಸರು ಇರುವುದೇ ನಮ್ಮನ್ನು ಸುಖಪಡಿಸಲಿಕ್ಕಾಗಿ , ಇದೇ ನಮ್ಮ ಮನು ಸಂವಿಧಾನ ” ಎಂದು ಅಸ್ಪೃಶ್ಯರಿಗೆ ಖಡಕ್ಕಾಗಿ ತಿಳಿಸಿದನು . ಇದರಿಂದ ಗಾಯಗೊಂಡ ವ್ಯಾಘ್ರಗಳಂತಾದ ಅಸ್ಪೃಶ್ಯರು ಸೇಡುತೀರಿಸಿಕೊಳ್ಳಲಿಕ್ಕಾಗಿ ಸಮಯ ಕಾಯತೊಡಗಿದರು . ಇದೇ ಸಮಯದಲ್ಲಿ ಸರಿಯಾಗಿ ಕೊಲ್ಕತ್ತಾವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಬಹುತೇಕ ಉತ್ತರ ಭಾರತವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದ ಬ್ರಿಟಿಷರು ಮಹಾರಾಷ್ಟ್ರದ ಪೇಶ್ವ ರಾಜ ಎರಡನೇ ಬಾಜೀರಾಯನನ್ನು ಬಗ್ಗುಬಡಿದು ದಕ್ಷಿಣ ಭಾರತದಲ್ಲಿ ಅಮ್ಮಗಳ ಆಳ್ವಿಕೆಗೆ ವಿಸ್ತರಿಸಿಕೊಳ್ಳಲು ಸಮಯ ಕಾಯುತ್ತಿದ್ದರು .

ಪೇಶ್ವಗಳ ದೌರ್ಜನ್ಯ , ದಬ್ಬಾಳಿಕೆಗಳಿಂದ ಇನ್ನಿಲ್ಲದಂತೆ ರೋಸಿಹೋಗಿದ್ದ ಮಹಾರಾಷ್ಟ್ರದ ಅಸ್ಪ ಶ್ಯರು ಅದರಲ್ಲೂ ಅಸ್ಪಶ್ಯ ಯುವಕರು ಪೇಶ್ವಗಳ ಬಿಸಿ ರಕ್ತ ಕುಡಿಯಲು ಹಾತೊರೆಯುತ್ತಿದ್ದರು . ಇದನ್ನು ಗಮನಿಸಿದ ಚಾಣಾಕ್ಷ ಬ್ರಿಟೀಷರು ಪೇಶ್ವಗಳ ವಿರುದ್ಧ ಯುದ್ಧ ಮಾಡಲು ಅಸ್ಪಶ್ಯರನ್ನು ಕೋರಿಕೊಂಡರು , ತಮ್ಮಗಳ ಕಷ್ಟ – ಅಪಮಾನಗಳ ಪರಿಹಾರಕಾಗಿ ಒದಗಿ ಬಂದ ಈ ಸುವರ್ಣಾವಕಾಶವನ್ನು ಮನಃಪೂರ್ವಕವಾಗಿ ಸ್ವೀಕರಿಸಿದ ಅಸ್ಪಶ್ಯರು “ ಸಿದನಾಕ , ಎಂಬ ಅಸ್ಪಶ್ಯ ಯುವಕನ ನಾಯಕತ್ವದಲ್ಲಿ 500 ಜನ ಅಸ್ಪಶ್ಯ ಯುವಕರು ಪೇಶೆಗಳ ವಿರುದ ಯುದ್ಧ ಮಾಡಲು ಬ್ರಿಟೀಷರ ಕೋರಿಕೆಗೆ ಒಪ್ಪಿಕೊಂಡರು . ಕಡೆಗೂ ಆ ಐತಿಹಾಸಿಕ ಯುದ್ದದ ದಿನ ಬಂದೇ ಬಿಟ್ಟಿತು . ಅದೇ 1818ರ ಜನವರಿ 1ನೇ ತಾರೀಖು . ಬ್ರಿಟೀಷ್ ಕ್ಯಾಪನ್ ಎಸ್ . ಎಸ್ . ಸಂಡನ್ ನೇತೃತ್ವದಲ್ಲಿ ಸಿದ್ದನಾಕ ‘ ನ ನಾಯಕತ್ವದ 500 ಅಸ ಶ ಯೋಧರ ಪಡೆ ( ಈ ಎಲ್ಲಾ ಯೋಧರಿಗೆ ಬಂದೂಕು ಉಪಯೋಗಿಸುವ ತರಬೇತಿಯನು . ಬ್ರಿಟೀಷರು ಚೆನ್ನಾಗಿ ನೀಡಿರುತ್ತಾರೆ . ) 1817ರ ಡಿಸೆಂಬರ್ 31ನೇ ತಾರೀಖು ರಾತ್ರಿ ಸಿರೂರ್‌ನಿಂದ ಹೊರಡುತ್ತಾರೆ . ಆ ಇಡೀ ರಾತ್ರಿ ಸತತವಾಗಿ 27 ಕಿಲೋಮೀಟರ್ ನಡೆದು ಮಾರನೇ ದಿನ ಅಂದರೆ 1818ರ ಜನವರಿ 1ರಂದು ಪೂನಾ ನಗರದಿಂದ 15 ಕಿ . ಮೀ . ದೂರದಲ್ಲಿರುವ ಬೀಮಾ ನದಿ ತೀರದಲ್ಲಿರುವ ಕೋರೆಗಾಂವ್ ಎಂಬ ಸ್ಥಳವನ್ನು ಸಿದ್ಧನಾಕನ ಪಡೆ ತಲುಪುತ್ತದೆ . ಇಡೀ ರಾತ್ರಿ ನಿದ್ದೆಯಿಲ್ಲದೆ 27 ಕಿ . ಮೀ . ದೂರವನ್ನು ನಡೆದುಕೊಂಡು ಬಂದಿದ್ದ ಈ ಅಸ್ಪಶ್ಯ ಯೋಧರ ಪಡೆ ನಿದ್ದೆ , ಅನ್ನ – ನೀರು ಯಾವುದನ್ನೂ ಬಯಸದೆ ಬೆಳಿಗ್ಗೆ 9 ಗಂಟೆಗೆ ಸರಿಯಾಗಿ ಪೇಶ್ವ ಸೈನಿಕರ ಮೇಲೆ ಎರಗುತ್ತಾರೆ . 20 ಸಾವಿರ ಅಶ್ವದಳ , 8 ಸಾವಿರ ಕಾಲ್ದಳ ಸೇರಿ ಒಟ್ಟು 28 ಸಾವಿರ ಪೇಳ್ವೆ ಸೈನಿಕರು ಮೂರೂ ದಿಕ್ಕಿನಿಂದ ಅಸ್ಪಶ್ಯ ಯೋಧರಿಗೆ ಎದುರಾಗುತ್ತಾರೆ . ಬೆಳಿಗ್ಗೆ 9 ರಿಂದ ರಾತ್ರಿ 9ರ ವರೆಗೆ ಸತತ 12 ಗಂಟೆಗಳ ಕಾಲ ನಡೆದ ಈ ಘೋರ ಯುದ್ದದಲ್ಲಿ ಹಸಿದ ಹೆಬ್ಬುಲಿಗಳಂತಿದ್ದ ಅಸ್ಪಶ್ಯಯೋಧರು ಪೇಶ್ವ ಸೈನ್ಯವನ್ನು ಧೂಳಿಪಟ ಮಾಡುತ್ತಾರೆ . ಇಡೀ ಯುದ್ಧ ಭೂಮಿಯ ತುಂಬ ರಕ್ತದ ಕೋಡಿಯೇ ಹರಿಯುತ್ತದೆ . ಸಾವಿರಾರು ಸೈನಿಕರು ಯುದ್ಧಭೂಮಿಯಲ್ಲಿ ಸಾವನ್ನಪ್ಪುತ್ತಾರೆ .

ಬೃಹತ್ ಸಂಖ್ಯೆಯಲ್ಲಿದ್ದ ಅಂದರೆ ಅಸ್ಪಶ್ಯಯೋಧರಿಗಿಂತ 56 ಪಟ್ಟು ಹೆಚ್ಚು ಇದ್ದ ಪೇಶ್ವಗಳ ರಣಹೇಡಿ ಸೈನ್ಯ ಗಂಡು ಸಿಂಹಗಳಂತಿದ್ದ ಅಸ್ಪೃಶ್ಯ ಸೈನಿಕರ ಮುಂದೆ ನಿಲ್ಲಲಾಗದೆ ಕೊನೆಗೆ ಜೀವ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡತೊಡಗಿದರು . ಅಂತಿಮವಾಗಿ ಈ ಯುದ್ದದಲ್ಲಿ ಅಸ್ಪಶ್ಯ ಸೈನಿಕರು ಪ್ರಚಂಡ ಜಯ ಗಳಿಸುತ್ತಾರೆ . ಸತತ 12 ಗಂಟೆಗಳ ಕಾಲ ನಡೆದ ಈ ಘೋರ ಕಾಳಗದಲ್ಲಿ 5000ಕ್ಕೂ ಹೆಚ್ಚು ಪೇಳ್ವೆ ಸೈನಿಕರು ಯುದ್ಧ ಭೂಮಿಯಲ್ಲಿ ಸಾವನ್ನಪ್ಪಿದರೆ ಕೇವಲ 22 ಜನ ಅಸ ಶ್ಯಯೋಧರು ವೀರಮರಣವನ್ನಪ್ಪಿದರು . ( ಈ ಯುದ್ಧದಲ್ಲಿ ಒಬ್ಬೊಬ್ಬ ಅಸ್ಪಶ್ಯಯೋಧ ಸರಾಸರಿ ಕನಿಷ್ಠ 100ಜನ ಪೇಳ್ವೆ ಸೈನಿಕರನ್ನು ಕೊಂದುಹಾಕಿರುತ್ತಾನೆ . ಈ ಯುದ್ಧದಲ್ಲಿ ಅಸ್ಪಶ್ಯಯೋಧರ ಪಡೆಯ ನಾಯಕನಾಗಿದ್ದ ಸಿದ್ದನಾಕ ‘ ನು ಸಹ ವೀರಮರಣವನ್ನಪ್ಪುತ್ತಾನೆ . ಅಂದು ರಾತ್ರಿ 10 ಗಂಟೆಗೆ ಸರಿಯಾಗಿ ಬ್ರಿಟೀಷರು ಯುದ್ಧ ನಡೆದ ಆ ಸ್ಥಳದಲ್ಲಿ ( ಪೇಶ್ವಗಳ ಸಾಮ್ರಾಜ್ಯದಲ್ಲಿ ಬ್ರಿಟೀಷ್ ಬಾವುಟವನ್ನು ಹಾರಿಸುತ್ತಾರೆ . ವಿಜಯದ ಬಳಿಕ ಕ್ಯಾಪ್ಟನ್ ಸ್ಟಂಡನ್ ಗೆ ರೀತಿ ಹೇಳಿದನು . ನಿಮ್ಮ ಕೆಚ್ಚೆದೆಯ ಹೋರಾಟವು ನಾವು ಇಂಡಿಯಾದಲ್ಲಿ ಉಳಿಯಲು ಅಧಿಕಾರವನ್ನು ವಿಸ್ತರಿಸಲು ತುಂಬಾ ಸಹಾಯಕವಾಗಿದೆ ಬ್ರಿಟಿಷ್ ಸತ್ಕಾರವು ನಿಮಗೆ ಎಂದೂ ಮರೆಯಲಾಗದ ಕಾಣಿಕೆ ಬಹುಮಾನವನ್ನು ಉಡುಗೊರೆಯಾಗಿ ಮತ್ತು ಮಡದಿ ಮಹಾಯೋಧರ ವಿಜಯ ಸ್ತಂಭವನ್ನು ಸ್ಥಾಪಿಸುವುದರ ಮೂಲಕ ಗೌರವವನ್ನು ಸಲ್ಲಿಸುತ್ತದೆ . ಹಾಗೆಯೇ ನಿಮಗೆ ನಮ್ಮ ಬ್ರಿಟಿಷ್ ಸೈನ್ಯದಲ್ಲಿ ವಿಶೇಷ ಸ್ಥಾನವನ್ನು ಕಲ್ಪಿಸಿ ನಿಮ್ಮ ಕುಟುಂಬದವರಿಗೆ ಸಕಲ ಸೌಲಭ್ಯವನ್ನು ಒದಗಿಸುವ ಏರ್ಪಾಡು ಮಾಡುತ್ತದೆ . ( ಮಹಾರ್ ಸೈನಿಕರು ಸಂತೋಷದಿಂದ ‘ ಬ್ರಿಟೀಷ್ ಸತ್ಕಾರಕ್ಕೆ ಜಯವಾಗಲಿ ಮಹಾರ್ ಸೈನ್ಯ ಚಿರಾಯು ” ಎಂದು ಘೋಷಣೆ ಕೂಗಿದರು . ) ರಣರಂಗದಲ್ಲಿ ಬೃಹತ್ ಸಂಖ್ಯೆಯಲ್ಲಿದ್ದ ಪೇಶ್ವ ಸೈನಿಕರ ಜೊತೆ ವೀರಾವೇಶದಿಂದ ಹೋರಾಡಿ ಜಯ ತಂದುಕೊಟ್ಟು ಹುತಾತ್ಮರಾದ 22 ಅಸ್ಪಶ್ಯಯೋಧರ ನೆನಪಿಗಾಗಿ ಬ್ರಿಟೀಷರು 1921ರ ಮಾರ್ಚ್ 21ರಂದು ಯುದ್ಧ ನಡೆದ ಸ್ಥಳದಲ್ಲಿ ( ಕೋರೆಗಾಂವ್‌ನಲ್ಲಿ ) 65ಅಡಿ ಎತ್ತರದ ಭವ್ಯ ‘ ವಿಜಯ ಸ್ತಂಭ ‘ ವನ್ನು ನಿರ್ಮಿಸಿ , ಆ ಸ್ಥಂಬದ ಮೇಲೆ 22 ಹುತಾತ್ಮ ಯೋಧರ ಹೆಸರುಗಳನ್ನು ಕೆತ್ತಿಸಿದರು . ಆ ಭವ್ಯ ವಿಜಯ ಸಂಬಕ್ಕೆ ಅಡಿಗಲ್ಲು ಹಾಕುವ ಸಂದರ್ಭದಲ್ಲಿ ಬ್ರಿಟೀಷರು 22 ಸುತ್ತು ಕುಶಾಲ ತೋಪುಗಳನ್ನು ಹಾರಿಸುವ ಮೂಲಕ ಹುತಾತ್ಮರಿಗೆ ರಾಜ ಮರ್ಯಾದೆಯ ಶ್ರದ್ದಾಂಜಲಿ ಸಲ್ಲಿಸಿದ್ದರು . ಈ ವಿಜಯ ಸಂಬದ ಮೇಲೆ ಬ್ರಿಟಿಷರು “ One of the Proudest truimphs of the British Army in the East ” ( ಬ್ರಿಟೀಷ್ ಯೋಧರಿಗೆ ಭಾರತದ ಪೂರ್ವಭಾಗದಲ್ಲಿ ಸಿಕ್ಕಿದ ಹೆಮ್ಮೆಯ ವಿಜಯವಾಗಿದೆ ) ಎಂದೂ ಸಹ ಕೆತ್ತಿಸಿದರು . ಈ ವಿಜಯದ ನಂತರ ಬ್ರಿಟೀಷ್ ಬೋರ್ಡ್ ಆಫ್ ಕಂಟ್ರೋಲ್‌ನ ಅಧ್ಯಕ್ಷ ಜಾರ್ಜ್ ಕ್ಯಾನಿಂಗ್
ಈ ವಿಜಯದ ಬಗ್ಗೆ ಅಚ್ಚರಿ ವ್ಯಕ್ತ ಪಡಿಸುತ್ತಾ “ ಸಣ್ಣ ಸಂಖ್ಯೆಯ ಸೈನ್ಯವು ಒಂದು ಬಲಾಢ ಸಂಖ್ಯೆಯ ಸೈನ್ಯವನ್ನು ಮಣ್ಣು ಮುಕ್ಕಿಸಿದ ಉದಾಹರಣೆ ಚಿಕ್ಕ ಸಂಖ್ಯೆ ಹೊಂದಿರುವ ಎಲ್ಲಾ ಸೈನಿಕ ಬೆಟಾಲಿಯನ್‌ಗಳಿಗೂ ಅನುಕರಣೀಯವಾಗಿದೆ ” , ಎಂದು ಹೇಳಿದರು .

ಅದೇ ರೀತಿ ಜನರಲ್ ಸ್ಮಿತ್ ಕೂಡ ಈ ಗೆಲುವನ್ನು ಉತ್ಸಾಹಪೂರ್ವಕವಾಗಿ ಅಭಿನಂದಿಸಿ “ ಇಂಡಿಯಾದ ಬ್ರಿಟಿಷ್ ಸೇನಾ ಇತಿಹಾಸದಲ್ಲಿ ಕೋರೆಗಾಂವ್ ಯುದ್ಧದ ವಿಜಯವೆಂದರೆ ಶೌರ್ಯ ಮತ್ತು ಪರಾಕ್ರಮದ ಯಶೋಗಾಥೆಯೇ ಆಗಿದೆ ” ಎಂದು ಉದ್ದಾರವೆತ್ತಿದ್ದಾನೆ . ಈ ಯುದ್ದದ ಇತಿಹಾಸವನ್ನು ಬಗೆದು ಹೊರತೆಗೆದ ಡಾ . ಅಂಬೇಡ್ಕರ್ 1957ರಲ್ಲಿ ನಡೆದ ‘ ಸಿಪಾಯಿ ದಂಗೆ ‘ ಗಿಂತ ಸುಮಾರು 40 ವರ್ಷಗಳ ಹಿಂದೆಯೇ ನಡೆದ ಕೋರೆಗಾಂವ್ ದಂಗೆ ‘ ಯ ಬಗ್ಗೆ ಭಾರತದ ಮನುವಾದಿ ಲೇಖಕರು ಬೇಕೆಂತಲೇ ಬೆಳಕು ಚೆಲ್ಲಿರಲಿಲ್ಲ . ಈ ಯುದ್ಧದ ಇತಿಹಾಸವನ್ನು ಹೂತುಹಾಕಿದ್ದರು . ಹುತಾತ್ಮ ಯೋಧರ ನೆನಪಿಗಾಗಿ ಕೋರೆಗಾಂವ್‌ನಲ್ಲಿ ಆಲೀಷರು ನಿರ್ಮಿಸಿದ್ದ ‘ ವಿಜಯ ಸ್ಥಂಬ ‘ ವು ಯಾರ ಕಣ್ಣಿಗೂ ಬೀಳದ ರೀತಿಯಲ್ಲಿ ಆ ಸ್ಟಂಬದ ಸುತ್ತ ‘ ಗಳು ಬೆಳೆದುಕೊಂಡು ಅನಾಥವಾಗಿತ್ತು . ಡಾ . ಅಂಬೇಡ್ಕರ್‌ರವರು 1922ರಲ್ಲಿ ಬ್ರಿಟನ್‌ನಲ್ಲಿ
‘ ಬಾರ್ – ಅತ್ – ಲಾ ‘ ವ್ಯಾಸಂಗ ಮಾಡುತ್ತಿದ್ದ ಸಮಯದಲ್ಲಿ ಭಾರತದಲ್ಲಿ ಬ್ರಿಟೀಷರ ಆಳ್ವಿಕೆಯಲ್ಲಿ ನಡೆದ ಪ್ರಮುಖ ಘಟನಾವಳಿಗಳ ಬಗ್ಗೆ ಬ್ರಿಟಿಷ್ ಮ್ಯೂಸಿಯಂ ಲೈಬ್ರರಿಯಲ್ಲಿ ಇಟ್ಟಿದ್ದ ದಾಖಲೆಗಳನ್ನು ಅಧ್ಯಯನ ನಡೆಸುತ್ತಿದ್ದ ಸಂದರ್ಭದಲ್ಲಿ 1818ರಂದು ನಡೆದ ಕೋರೆಗಾಂವ್ ಯುದ್ದದ ಬಗ್ಗೆ ಪ್ರಥಮವಾಗಿ ಮಾಹಿತಿ ಸಿಕ್ಕಿತು . ಈ ಮಾಹಿತಿಯ ಆಧಾರದ ಮೇಲೆ ಕೋರೆಗಾಂವ್ ಯುದ್ದದ ಬಗ್ಗೆ ಸಂಪೂರ್ಣವಾಗಿ ಅಧ್ಯಯನ ನಡೆಸಲು ಪ್ರಾರಂಭಿಸಿದರು . ಕೊನೆಗೆ ಈ ಯುದ್ಧದ ಬಗ್ಗೆ ಸಂಪೂರ್ಣ ಮಾಹಿತಿಯನು ಕಲೆ ಹಾಕಿದರು , ನಂತರ ಮಹಾರಾಷ್ಟ್ರದ ಪೂನಾ ನಗರದಿಂದ 15 ಕಿ . ಮೀ . ದೂರದಲ್ಲಿರುವ ಕೋರೆಗಾಂವ್‌ಗೆ ( ಭೀಮಾನದಿ ತೀರದಲ್ಲಿದೆ ) ತೆರಳಿ ‘ ವಿಜಯಸ್ಥಂಬ ‘ ವನ್ನು ಪತ್ತೆ ಹಚ್ಚಿ ಆ ಸ್ಥಳವನ್ನು ಸ್ವಚ್ಛಗೊಳಿಸಿದರು . ಕೊನೆಗೆ ಯುದ್ಧ ನಡೆದು 109 ವರ್ಷಗಳ ನಂತರ ಅಂದರೆ 1927ರ ಜನವರಿ 1ನೇ ತಾರೀಖಿನಂದು ಡಾ . ಅಂಬೇಡ್ಕರ್‌ರವರು ತಮ್ಮ ಸಾವಿರಾರು ಅನುಯಾಯಿಗಳೊಂದಿಗೆ ಪ್ರಥಮ ಬಾರಿಗೆ ‘ ವಿಜಯ ಸ್ಟಂಬ ‘ ಕ್ಕೆ ದೀರ್ಘದಂಡ ನಮಸ್ಕಾರ ಮಾಡಿ ಶ್ರದ್ದಾಂಜಲಿ ಸಲ್ಲಿಸಿದರು . ಡಾ . ಅಂಬೇಡ್ಕರ್‌ರವರು ಪ್ರಥಮ ಬಾರಿಗೆ ( 1927ರ ಜನವರಿ 1 ) ಕೋರೆಗಾಂವ್‌ನಲ್ಲಿ ‘ ವಿಜಯ ಸ್ಥಂಬ ‘ ಕ್ಕೆ ಗೌರವ ವಂದನೆ ಸಲ್ಲಿಸಿದ ನಂತರ ನಡೆದ ಸಭೆಯಲ್ಲಿ ಮಾತನ್ನಾಡುತ್ತಾ ಈ ರೀತಿ ಹೇಳಿದರು . ಅಂದು ಬ್ರಿಟಿಷರ ಪರವಾಗಿ ಅಸ್ಪಶ್ಯಯೋಧರು ಯುದ್ಧ ಮಾಡಿದ್ದು ಅಭಿಮಾನ ಪಡುವ ಸಂಗತಿಯಲ್ಲದಿದ್ದರೂ , ಅಸ್ಪಶ್ಯಯೋಧರು ಬ್ರಿಟಿಷರ ಪರ ಯಾಕೆ ಹೋಗಬೇಕಾಯಿತು ಎಂಬ ಪ್ರಶ್ನೆ ಎಲ್ಲರ ಮನದಲ್ಲಿ ಮೂಡುವುದು ಸಹಜವೇ ಆಗಿದೆ . ಅಸ್ಪಶ್ಯರು ಮತ್ತೇನು ಮಾಡಲು ಸಾಧ್ಯವಿತ್ತು ? ಹಿಂದೂಗಳ ದಬ್ಬಾಳಿಕೆಯನ್ನು ಸುಮ್ಮನೆ ಸಹಿಸಿಕೊಂಡು ಜೀವನ ನಡೆಸಬೇಕಾಗಿತ್ತೆ ? ಹಿಂದೂಗಳು ಅವರನ್ನು ಕೀಳು ಎಂದು ಪರಿಗಣಿಸಿ ನಾಯಿ – ನರಿಗಳಿಗಿಂತಲೂ ಕೀಳಾಗಿ ಕಂಡಾಗ , ಇನ್ನಿಲ್ಲದಂತೆ ದಬ್ಬಾಳಿಕೆ ನಡೆಸಿದಾಗ , ಅಪಮಾನಿಸಿದಾಗ ಎಲ್ಲವನ್ನೂ ಸಹಿಸಿಕೊಂಡು ಎಷ್ಟು ದಿನ ಬದುಕಬೇಕಾಗಿತ್ತು ? ಸ್ವಾಭಿಮಾನದ ನೆಲೆಯಲ್ಲಿ ಮತ್ತು ಹೊಟ್ಟೆಗೆ ಅನ್ನ ದೊರಕಿಸಿಕೊಳ್ಳಲು ಅವರು ಅನಿವಾರ್ಯವಾಗಿ ಬ್ರಿಟೀಷರ ಪರವಾಗಿ ಯುದ್ದ ಮಾಡಿದರೆಂಬುದನ್ನು ಪ್ರತಿಯೊಬ್ಬರೂ ಲಕ್ಷ್ಮದಲ್ಲಿಡಬೇಕು . – ಗತಿಸಿದ ಕಾಲವೊಂದರಲ್ಲಿ ನಡೆದ ಈ ಘಟನೆಯಲ್ಲಿ ಅಸ್ಪಶ್ಯರು ಅನುಭವಿಸಿದ ಸೋಲು ಗೆಲುವಿನ ನಡುವೆ ಇಂಡಿಯಾದ ಸಾಮಾಜಿಕ ಬದುಕಿನ ಸತ್ಯಗಳನ್ನು ನೀವೇ ನೋಡಿದಿರ . ಇಂತಹ ಅದೆಷ್ಟೋ ಘಟನೆಗಳು ನಡೆದು ಈ ದೇಶದಲ್ಲಿ ಅಸ್ಪಶ್ಯರ ಕೌಶಲ್ಯ ಸಾಹಸ , ಮಾನವೀಯ ಮೌಲ್ಯಗಳು ಮಣ್ಣಲ್ಲಿ ಮುಚ್ಚಿ ಹೋಗಿವೆ.

ಅವುಗಳೆಲ್ಲವನೂ ನಾನು ಬಗೆದು ಹೊರತೆಗೆದೇ ತೀರುತ್ತೇನೆ . ( ಈ ಯುದ್ದವನ್ನಾಧರಿಸಿ ಶ್ರೀ ಅರುಣ್ ಶೌರಿಯವರು ತಮ್ಮ ‘ ವರ್ಷಿಪಿಂಗ್ ಫಾಲ್ಸ್ ಗಾಡ್ ಎಂಬ ಪುಸ್ತಕದಲ್ಲಿ “ ಅಸ್ಪ ಶ್ಯರು ಬ್ರಿಟೀಷರ ಪರವಾಗಿ ಹೋರಾಡಿ ಬ್ರಿಟಿಷರಿಗೆ ಗೆಲುವನ್ನು ಕೊಟ್ಟಿದ್ದಾರೆ , ಆ ಮೂಲಕ ಅವರು ಭಾರತದ ವಿರುದ್ದವೇ ಹೋರಾಡಿದಂತಾಗಿದೆ ” ಎಂದು ಬರೆದಿದ್ದಾರೆ.ಒಂದೆಡೆ ಅಸ್ಪ್ರಶ್ಯರು ಬ್ರಿಟೀಷರ ಪರ ಹೋರಾಡಲು ಕಾರಣಗಳೇನು ಎಂದು ಗೊತ್ತಿದ್ದರೂ ಸಹ ಆ ಪುಸ್ತಕದಲ್ಲಿ ಬರೆದಿಲ್ಲ . ) ಆ ಸಭೆಯಲ್ಲಿ ಡಾ . ಅಂಬೇಡ್ಕರ್‌ರವರು ಮುಂದುವರಿದು ಮಾತನಾಡುತ್ತಾ ಈ ರೀತಿ ಹೇಳಿದರು . “ ಯಾವ ಅಸ್ಪಶ್ಯ ಯೋಧರು ಹಲವಾರು ಯುದ್ಧಗಳಲ್ಲಿ ತಮ್ಮಗಳ ಪರಾಕ್ರಮದಿಂದ ಬ್ರಿಟೀಷರಿಗೆ ವಿಜಯ ತಂದುಕೊಟ್ಟರೋ , ಇಂದು ಅಂತಹ ವೀರತನವನ್ನೇ ಹೊಂದಿರುವ ಅಸ್ಪಶ್ಯ ಯುವಕರನ್ನು ಸೇವೆಗೆ ಸೇರಿಸಿಕೊಳ್ಳಲು ಬ್ರಿಟೀಷ್ ಸರ್ಕಾರ ನಿರ್ಬಂಧ ಹೇರಿದ್ದು ನಂಬಿಕೆ ದ್ರೋಹವೇ ಆಗಿದೆ . ಅಸ್ಪಶ್ಯ ಯುವಕರು ಸೇನೆ ಸೇರುವುದನ್ನು ನಿಷೇಧಿಸಿರುವ ಬ್ರಿಟೀಷ್ ಸರ್ಕಾರ ಅದನ್ನು ತಕ್ಷಣವೇ ಹಿಂಪಡೆದು ಅಸ್ಪಶ್ಯ ಯುವಕರು ಸೇವೆ ಸೇರಲು ಮುಕ್ತ ಅವಕಾಶ ಕಲ್ಪಿಸಿಕೊಡಬೇಕು . ಒಂದು ವೇಳೆ ಬ್ರಿಟೀಷ್ ಸರ್ಕಾರದ ವಿರುದ್ದ ಉಗ್ರ ಚಳುವಳಿಯನ್ನು ಮಾಡಬೇಕಾಗುತ್ತದೆ . ” ( 1892ರಿಂದ ಬ್ರಿಟೀಷ್ ಸರ್ಕಾರವು ಭಾರತದಲ್ಲಿ ಅಸ್ಪಶ್ಯರು ಸೇನೆ ಸೇರುವುದನ್ನು ಸಂಪೂರ್ಣವಾಗಿ ನಿಷೇಧಿಸಿದ್ದರು .

ಡಾ . ಅಂಬೇಡ್ಕರ್‌ರವರ ಸತತ ಹೋರಾಟದ ಫಲವಾಗಿ 1941ರಲ್ಲಿ ಈ ನಿಷೇಧವನ್ನು ತೆಗೆದುಹಾಕಲಾಯಿತು . ) 1927ರಿಂದ ಪ್ರಾರಂಭಿಸಿ ತಾವು ಬದುಕಿರುವವರೆಗೂ ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಪ್ರತಿವರ್ಷ ಜನವರಿ 1ನೇ ತಾರೀಖಿನಂದು ತಮ್ಮ ಕುಟುಂಬ ಹಾಗೂ ತನ್ನ ಸಾವಿರಾರು ಅನುಯಾಯಿಗಳೊಂದಿಗೆ ಆ ಸ್ಥಳಕ್ಕೆ ಭೇಟಿ ನೀಡಿ ‘ ಹುತಾತ್ಮ ಯೋಧರಿಗೆ ಶ್ರದ್ದಾಂಜಲಿ ಸಲ್ಲಿಸುತ್ತಿದ್ದರು . ಈಗ ಪ್ರತಿವರ್ಷ ಜನವರಿ 1ನೇ ತಾರೀಖಿನಂದು ಭಾರತದ ಮೂಲೆ ಮೂಲೆಗಳಿಂದ ನಿವೃತ್ತಯೋಧರುಗಳು ಸೇರಿದಂತೆ ಲಕ್ಷಾಂತರ ಜನರು ಕೋರೆಗಾಂವ್‌ಗೆ ಭೇಟಿ ನೀಡಿ ‘ ವಿಜಯ ಸ್ಟಂಬ ‘ ಕ್ಕೆ ನಮಿಸಿ ಹುತಾತ್ಮ ಅಸ್ಪಶ್ಯ ಯೋಧರಿಗೆ ಶ್ರದ್ದಾಂಜಲಿ ಸಲ್ಲಿಸುತ್ತಾರೆ . ವರ್ಷದಿಂದ ವರ್ಷಕ್ಕೆ ಅಲ್ಲಿಗೆ ತೆರಳುವ ಜನರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಜನವರಿ 1ನೇ ತಾರೀಖಿನಂದು ನಡೆಯುವ ಸ್ಥತಿ ದಿನ ಕಾರ್ಯಕ್ರಮವು ಸುವ್ಯವಸ್ಥಿತವಾಗಿ ನಡೆಯಲೆಂದು ಅದರ ಉಸ್ತುವಾರಿಗಾಗಿ ಒಂದು ಕಾರ್ಯಕಾರಿಣಿ ಮಂಡಳಿಯನ್ನು ಸ್ಥಾಪಿಸಲಾಗಿದೆ . “ ನನ್ನ ಜನರಿಗೆ ಆಯುಧ ಹಿಡಿಯುವ ಅಧಿಕಾರ ನೀಡಿದ್ದರೆ ಈ ದೇಶ ಎಂದೂ ತನ್ನ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಿರಲಿಲ್ಲ ಹಾಗೂ ನನ್ನ ಸಾಮಾಜಿಕ ತತ್ವವು ಮೂರು ಪದಗಳಲ್ಲಿ ಅಡಕವಾಗಿದೆ . ಅವುಗಳೆಂದರೆ ; ಸ್ವಾತಂತ್ರ್ಯ , ಸಮಾನತೆ ಮತ್ತು ಭ್ರಾತೃತ್ವ ಎಂದಿದ್ದಾರೆ ಡಾ . ಬಿ . ಆರ್ . ಅಂಬೇಡ್ಕರ್.

ಸುದ್ದಿದಿನ.ಕಾಂ|ವಾಟ್ಸಾಪ್|9986715401

ಬಹಿರಂಗ

ಬುದ್ಧ ದಲಿತನಲ್ಲ.‌.!

Published

on

ಈಗಷ್ಟೇ ಸ್ನೇಹಿತರೊಬ್ಬರು “ಸರ್, ಬಾಬಾಸಾಹೇಬ್ ಅಂಬೇಡ್ಕರ್ ರವರು ಬರೆದಿರುವ ‘ಬುದ್ಧ ಅಂಡ್ ಹಿಸ್ ಧಮ್ಮ’ ಕನ್ನಡ ಅನುವಾದ ಓದುವಾಗ ಒಂದಷ್ಟು ಕನ್ ಫ್ಯೂಸ್ ಆಗುತ್ತದೆ. ಕೆಲವು ಮೂಢನಂಬಿಕೆಯ ಅಂಶಗಳಿವೆ, ಕತೆಗಳಿವೆ” ಅಂದರು. ನಿಜ, ಸ್ನೇಹಿತರ ಆ ಮಾತು ಸತ್ಯ. ಆದರೆ ಅಂಬೇಡ್ಕರ್ ರವರು ಆ ಕೃತಿ ಬರೆದಿರುವುದು ತ್ರಿಪಿಟಕಗಳನ್ನು ಆಧರಿಸಿ. ತ್ರಿಪಿಟಕಗಳು ಬರೆಯಲ್ಪಟ್ಟಿರುವುದು 2500 ವರ್ಷಗಳ ಹಿಂದೆ ಅಥವಾ ಆಜೂಬಾಜಿನಲ್ಲಿ. ಅಂದಹಾಗೆ ಅರ್ಥ ಮಾಡಿಕೊಳ್ಳಬೇಕಾದ ಒಂದು ವಿಚಾರ ಬುದ್ಧನ ಕಾಲದಲ್ಲಿ ಜಾತಿ ವ್ಯವಸ್ಥೆ ಇರಲಿಲ್ಲ, ಅಸ್ಪೃಶ್ಯತೆ ಇರಲಿಲ್ಲ ಎಂಬುದು. ವರ್ಣವ್ಯವಸ್ಥೆ ಇತ್ತು. ಆದರೆ ಅವು ಜಾತಿಗಳಾಗಿ convert ಆಗಿರಲಿಲ್ಲ.

ಹಾಗೆಯೇ ಬುದ್ಧನಗಿಂತ ಮೊದಲು ವೈದಿಕ ಧರ್ಮ ಇತ್ತು, ವೇದಗಳು ಇದ್ದವು. ಹೀಗಿದ್ದರೂ ಬುದ್ಧನ ಕಾಲದಲ್ಲಿ ಶೇಕಡಾ 90 ರಷ್ಟು ಬ್ರಾಹ್ಮಣರು ಬೌದ್ಧ ಧರ್ಮ ಸೇರಿದರು. ಬೌದ್ಧ ಅನುಯಾಯಿಗಳಾದರು. ಬರೀ ಬ್ರಾಹ್ಮಣರಷ್ಟೆ ಅಲ್ಲ ವೈಶ್ಯ, ಕ್ಷತ್ರಿಯ ಎಲ್ಲರೂ ಬೌದ್ಧ ಅನುಯಾಯಿಗಳಾದರು. ಶೂದ್ರ ಸಮುದಾಯ ಇರಲಿಲ್ಲ. ಅಸ್ಪೃಶ್ಯತೆ ಇರಲಿಲ್ಲ. ಆದ್ದರಿಂದ ಈಗಿನ so called ದಲಿತರು ಇರಲೇ ಇಲ್ಲ!

ಅಸ್ಪೃಶ್ಯತೆ ಹುಟ್ಟು ಪಡೆದದ್ದು ಕ್ರಿ.ಶ.400ರ ಸಮಯದಲ್ಲಿ ಗುಪ್ತರ ಆಳ್ವಿಕೆಯಲ್ಲಿ. ಅಂದರೆ ಬುದ್ಧ ಹುಟ್ಟಿದ್ದು ಕ್ರಿ.ಪೂ.600 ಮತ್ತು ಗುಪ್ತರ ಕಾಲ ಕ್ರಿ.ಶ.400 ಈ ಒಂದು ಸಾವಿರ ವರ್ಷಗಳ ನಡುವೆ ಬೌದ್ಧ ಧರ್ಮ ಮತ್ತು ವೈದಿಕ ಧರ್ಮಗಳ ನಡುವೆ ಸಂಘರ್ಷ ನಡೆದಿದೆ. ಇದು ಇತಿಹಾಸದಲ್ಲಿ ದಾಖಲಾಗಿಲ್ಲ. ಈ 1000 ವರ್ಷಗಳ ನಡುವೆ ನಡೆದಿರುವ ಸಂಘರ್ಷದಲ್ಲಿ
ಬೌದ್ಧ ಧರ್ಮಕ್ಕೆ ಅಂಟಿಕೊಂಡೇ ಉಳಿದವರು ಅಸ್ಪೃಶ್ಯರಾದರು ಎಂದು ಅಂಬೇಡ್ಕರರು ಹೇಳುತ್ತಾರೆ.

ಆದ್ದರಿಂದ ಬುದ್ಧನ ಕಾಲದಲ್ಲಿ ದಲಿತರು ಇರಲಿಲ್ಲ, ಅಸ್ಪೃಶ್ಯ ತೆ ಇರಲಿಲ್ಲ. ಅದು ಹುಟ್ಟಿದ್ದು ಬುದ್ಧ ಪರಿನಿರ್ವಾಣ ಅಥವಾ ನಿಧನ ಹೊಂದಿದ 1000 ವರ್ಷಗಳ ನಂತರ. ಹೀಗಿರುವಾಗ ಈಗಿನ ಕಾಲದ ದಲಿತರು ಬುದ್ಧನ ಬಗ್ಗೆ ತಿಳಿದುಕೊಳ್ಳುವಾಗ ಈಗಿನ ಕಾಲದ ತಾರತಮ್ಯ ಮತ್ತು ಸಾಮಾಜಿಕ ವ್ಯವಸ್ಥೆ ಬುದ್ಧನ ಕಾಲದಲ್ಲೂ ಇತ್ತು ಎಂದು ಕಲ್ಪಿಸಿಕೊಂಡು ಓದುವುದು ತಪ್ಪು. ಬದಲಿಗೆ 2000 ಅಥವಾ 2500 ವರ್ಷಗಳ ಹಿಂದೆ ಸಾಮಾಜಿಕ ವ್ಯವಸ್ಥೆ ಮತ್ತು ಜನರ ನಂಬಿಕೆ ಹೇಗಿತ್ತು ಎಂಬುದನ್ನು ಅರ್ಥ ಮಾಡಿಕೊಂಡು ಬುದ್ಧನ ಕುರಿತು ಓದಬೇಕು, ಅಂಬೇಡ್ಕರರ ಬುದ್ಧ ಅಂಡ್ ಹಿಸ್ ಧಮ್ಮ ಓದಬೇಕು. ಆಗ ಬುದ್ಧ ಅರ್ಥ ಆಗುತ್ತಾನೆ. ಇಲ್ಲದಿದ್ದರೆ ಬುದ್ಧನನ್ನೇ ಪ್ರಶ್ನಿಸುವ ಆ ಮೂಲಕ ಅಂಬೇಡ್ಕರನ್ನೇ ಪ್ರಶ್ನಿಸುವ ದಾರ್ಷ್ಟ್ಯ ಅಂತಹವರು ಪ್ರದರ್ಶಿಸಿದ ಹಾಗಾಗುತ್ತದೆ.

ರಘೋತ್ತಮ ಹೊಬ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಬಹಿರಂಗ

ಮೀಸಲಾತಿ ವಿರೋಧಿಗಳಿಗೊಂದು ಸಂದೇಶ..!

Published

on

ಇಂದು ಬಹುಧೀರ್ಘವಾಗಿ ಚರ್ಛೆಯಾಗುತ್ತಿರುವ ವಿಷಯಗಳಲ್ಲಿ ಮೀಸಲಾತಿ ವಿಷಯ ಬಹಳ ಪ್ರಮುಖವಾಗಿದೆ. ಮೀಸಲಾತಿ ಎಂದ ತಕ್ಷಣ ಕೇವಲ sc/st ಗಳ ಮೇಲೆ ಕಂಗೆಣ್ಣು ಕಾರುವ ಮೂರ್ಖರು ನಮ್ಮ ದೇಶದಲ್ಲಿದ್ದಾರೆ. ಭಾರತ ಸಂವಿಧಾನವು ಜಾರಿಯಾದ ದಿನದಂದು sc/st ಹಾಗೂ OBC ಗಳಿಗೆ ಸೇರಿ 50% ಮೀಸಲಾತಿಯನ್ನು ನೀಡಿತ್ತು. ಆದರೆ ದುರಂತವೆಂದರೆ, ಮೀಸಲಾತಿ ವಿಚಾರದಲ್ಲಿ ಕೇವಲ sc/st ಗಳ ಮೀಸಲಾತಿಯ ಬಗ್ಗೆ ಮಾತನಾಡುವವರು OBC ಗಳ ಮೀಸಲಾತಿಯ ಬಗ್ಗೆ ಒಬ್ಬನೂ ಚಕಾರೆತ್ತುವುದಿಲ್ಲ. ಅದೇನೇಯಿರಲಿ, ಭಾರತದಂತಹ ಶ್ರೇಣೀಕೃತ ವ್ಯವಸ್ಥೆಯಲ್ಲಿ ಮೀಸಲಾತಿ ಬೇಕೆ ಅಥವಾ ಬೇಡವೇ ? ಎಂಬುದನ್ನು ನಿರ್ಧರಿಸಲು ನನಗೊಂದು ಘಟನೆ ನೆನಪಿಗೆ ಬರುತ್ತಿದೆ.

ಮಹಾರಾಷ್ಟ್ರದ ಕೊಲ್ಲಾಪುರ ಪ್ರಾಂತ್ಯದ ರಾಜರಾಗಿದ್ದ ಛತ್ರಪತಿ ಶಾಹುಮಹಾರಾಜರು ತಮ್ಮ ಆಸ್ಥಾನದಲ್ಲಿ ಬ್ರಾಹ್ಮಣೇತರರಿಗೆ 50% ಮೀಸಲಾತಿಯನ್ನು ಜಾರಿಗೊಳಿಸುತ್ತಾರೆ. ಇದಕ್ಕೆ ಸಾಮಾನ್ಯವಾಗಿಯೇ ಬ್ರಾಹ್ಮಣರ ವಿರೋಧ ವ್ಯಕ್ತವಾಯಿತು. ವಕೀಲನೊಬ್ಬ ರಾಜರನ್ನು ಮೀಸಲಾತಿಯನ್ನು ಕೊಡುವುದರಿಂದ ಪ್ರತಿಭೆಗೆ ದಕ್ಕೆ ಉಂಟಾಗುತ್ತದೆ ಎಂದು ಟೀಕಿಸುತ್ತಾನೆ. ಇದರಿಂದ ಸಮಾಧಾನವಾಗಿಯೇ ರಾಜರು ಆ ವಕೀಲನನ್ನು ತಮ್ಮ ಕುದುರೆಯ ಲಾಳಕ್ಕೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿದ್ದ ಕುದುರೆಗಳನ್ನು ನೋಡಿಕೊಳ್ಳುವವನಿಗೆ ಕುದುರೆಗೆ ಹಾಕುವ ಆಹಾರವನ್ನು ಒಂದೇ ಕಡೆ ಸುರಿಯಲು ಹೇಳಿ , ಕುದುರೆಗಳೆಲ್ಲವನ್ನೂ ಆಹಾರ ತಿನ್ನಲು ಬಿಡಲು ಆಜ್ಞಾಪಿಸುತ್ತಾರೆ. ಆ ಕೆಲಸಗಾರನು ಹಾಗೇಯೇ ಮಾಡುತ್ತಾನೆ. ಒಟ್ಟಿಗೇ ಬಂದ ಕುದುರೆಗಳು ಒಂದೆಡೆ ಹಾಕಿದ್ದ ಆಹಾರವನ್ನು ತಿನ್ನಲು ಶುರು ಮಾಡುತ್ತವೆ. ರಾಜರು ವಕೀಲರಿಗೆ ಪ್ರಶ್ನಿಸುತ್ತಾರೆ.

ಶಾಹು : ವಕೀಲರೇ, ಎಲ್ಲಾ ಕುದುರೆಗಳು ಆಹಾರವನ್ನು ತಿನ್ನುತ್ತಿವೆಯೇ ?

ವಕೀಲ :(ಸೂಕ್ಷ್ಮವಾಗಿ ಗಮನಿಸಿ) ಇಲ್ಲ ಸ್ವಾಮಿ !

ಶಾಹು : ಏಕೆ ಹೀಗೆ ಆಗುತ್ತಿದೆ ?

ವಕೀಲ : ಆಹಾರವನ್ನು ಒಂದೇ ಕಡೆ ಹಾಕಿದೆ, ಬಲಿಷ್ಠ ಕುದುರೆಗಳು ಬಡಕಲು ಕುದುರೆಗಳನ್ನು ಹಿಂದೆ ತಳ್ಳಿ ತಿನ್ನುತ್ತಿವೆ. ಆಹಾರವು ಒಂದೇ ಕಡೆ ಇರುವುದರಿಂದ ಸಣ್ಣ ಸಣ್ಣ ಕುದುರೆಗಳು, ಬಡಕಲು ಕುದುರೆಗಳಿಗೆ ಸರಿಯಾಗಿ ಆಹಾರ ಸಿಗುತ್ತಿಲ್ಲ.!

ಈಗ ರಾಜರು ಎಲ್ಲಾ ಕುದುರೆಗಳನ್ನು ತಮ್ಮ ತಮ್ಮ ಜಾಗದಲ್ಲಿ ಕಟ್ಟಿಹಾಕಿ, ಅವಕ್ಕೆ ಬೇಕಾದಷ್ಟು ಆಹಾರವನ್ನು ಹಾಕಲು ಆಜ್ಞಾಪಿಸುತ್ತಾರೆ. ಕೆಲಸಗಾರ ಹಾಗೆಯೇ ಮಾಡುತ್ತಾನೆ.

ಶಾಹು : ಈಗ ಸರಿಯಾಗಿದೆಯೇ ?

ವಕೀಲ : ಹೌದು ಸ್ವಾಮಿ, ಈಗ ಎಲ್ಲಾ ಕುದುರೆಗಳಿಗೂ ಆಹಾರ ಸಿಗುತ್ತಿದೆ.

ಶಾಹು : (ನಗುತ್ತಾ) ವಕೀಲರೇ, ನಾನು ಮೀಸಲಾತಿಯನ್ನು ಏಕೆ ಜಾರಿಗೊಳಿಸಿದೆ ಎಂಬುದು ಈಗ ಅರ್ಥವಾಯಿತೇ !? ರಾಜನಾಗಿರುವ ನನಗೇ ಇಷ್ಟು ಶೋಷಣೆ, ಇನ್ನು ಜನಸಾಮಾನ್ಯರ ಪಾಡೇನು ? ಅದಕ್ಕೇ ಮೀಸಲಾತಿ ತಂದದ್ದು, ಎಂದು ಉತ್ತರಿಸಿದರು.

ಈ ಘಟನೆ ನಿಜಕ್ಕೂ ಗಣನೀಯವಾದದ್ದು. ಮೀಸಲಾತಿ ವಿರೋಧಿಸುವ ಎಲ್ಲಾ ವ್ಯಕ್ತಿಗಳಿಗೂ ಇದನ್ನು ಉತ್ತಮ ಉದಾಹರಣೆಯನ್ನಾಗಿ ಕೊಡಬಹುದು. ಮೀಸಲಾತಿಯಿಂದ ಪ್ರತಿಭೆಗೆ ದಕ್ಕೆಯಾಗುತ್ತದೆ ಎನ್ನುವ ಈ ಸಮಾಜ, ಕೆಳಸ್ತರದಲ್ಲಿರುವ ವ್ಯಕ್ತಿಗಳಿಗೆ ಪ್ರತಿಭೆ ತೋರುವ ಅವಕಾಶವನ್ನೇ ಕೊಡುವುದಿಲ್ಲ. ಪ್ರತಿಭೆ ತೋರಿದ ಏಕಲವ್ಯನನ್ನು ಹೆಬ್ಬೆರಳು ಕತ್ತರಿಸುವುದರ ಮೂಲಕ ಆತನ ಬಿಲ್ವಿದ್ಯ ಶಕ್ತಿಯನ್ನು ಕುಂದಿಸಲಾಯಿತು. ಇಲ್ಲಿ ಬಲಿಷ್ಠರು ಬಡವರನ್ನು ತುಳಿದು ಬದುಕಲು ಇಚ್ಛಿಸುತ್ತಾರೆಯೇ ಹೊರತು , ಮೇಲೆತ್ತುವ ಮನಸ್ಸು ಮಾಡುವುದಿಲ್ಲ.

ಈ ದೇಶದಲ್ಲಿ ಶೇಕಡಾ ನೂರಕ್ಕೆ ನೂರರಷ್ಟು ಮೀಸಲಾತಿಯನ್ನು ಅನುಭವಿಸಿದ ವರ್ಗವೆಂದರೆ ಅದು ಬ್ರಾಹ್ಮಣ ವರ್ಗ ಎಂಬುದು ವಾಸ್ತವಿಕ ವಿಚಾರ. ಬ್ರಾಹ್ಮಣರಿಗೆ ಮನುಸ್ಮೃತಿಯು ಎಲ್ಲಾ ಕ್ಷೇತ್ರಗಳಲ್ಲಿಯೂ ಅವಕಾಶಗಳನ್ನು ಹಾಗೂ ಆರ್ಥಿಕಾಭಿವೃದ್ಧಿ ಮಾರ್ಗವನ್ನು ಕೊಟ್ಟಿತ್ತು. ಇದು ಹಳೆಯ ಪುರಾಣ, ಮನುಸ್ಮೃತಿ ಈಗ ಚಾಲ್ತಿಯಲ್ಲಿ ಇಲ್ಲ ಎಂದು ವಾದಿಸುವವರೂ ಉಂಟು. ಹಾಗಾದರೆ ದೇವಾಲಯಗಳಲ್ಲಿ ಅರ್ಚಕನಾಗಿ ಬ್ರಾಹ್ಮಣರೇ ಏಕೆ ಬೇಕು ? ಕಕ್ಕಸು ಗುಂಡಿ ಸ್ವಚ್ಛ ಮಾಡುವ ಕೆಲಸದಲ್ಲಿ ದಲಿತರೇ ಏಕೆ ಬೇಕು ? ಡಾಂಬರು ಹಾಕುವ ಕೆಲಸಕ್ಕೆ ದಲಿತರೇ ಏಕೆ ಬೇಕು ? ಇಂತಹ ಕೆಲಸಗಳಲ್ಲಿಯೂ ಬದಲಾವಣೆ ಬಯಸಬೇಕಲ್ಲವೇ ? ಅರ್ಚಕನ ಸ್ಥಾನದಲ್ಲಿ ದಲಿತನನ್ನು , ಕಕ್ಕಸು ಗುಂಡಿ ಸ್ವಚ್ಛ ಮಾಡುವ ಕೆಲಸದಲ್ಲಿ ಬ್ರಾಹ್ಮಣನನ್ನು ನೋಡಲು ಈ ಸಮಾಜ ಒಪ್ಪುವುದೇ ? ಖಂಡಿತ ಇಲ್ಲ.

ಬಹಳ ಪ್ರಮುಖವಾಗಿ ನನಗೆ ತಿಳಿದ ವಿಚಾರವೇನೆಂದರೆ, ಮೀಸಲಾತಿಯ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿದ್ದ ವ್ಯಕ್ತಿಗಳು ಇಂದು 10% ಮೀಸಲಾತಿ ದೊರೆತಾಗ ಅದನ್ನು ವಿರೋಧಿಸಲೇ ಇಲ್ಲ !! ಅವರಿಗೆ ಮೀಸಲಾತಿ ಕೊಟ್ಟಿದ್ದರಲ್ಲಿ ತಪ್ಪಿಲ್ಲ, ಆದರೆ ಇಲ್ಲಿ ಅವರು ಬಯಸಿದ್ದಾದರೂ ಏನು ಎನ್ನುವುದು ಪ್ರಶ್ನೆ. ಅವರು ವಿರೋಧಿಸಿದ್ದು ಮೀಸಲಾತಿಯನ್ನಲ್ಲ, ಈ ದೇಶದ ಬಡ ಜನರು ತಮ್ಮ ಮಟ್ಟಕ್ಕೆ ಆರ್ಥಿಕವಾಗಿ ಸಬಲರಾಗುವುದನ್ನು !!

ಸಾವಿರಾರು ವರ್ಷಗಳ ಕಾಲ ವಿದ್ಯೆಯಿಂದ, ಸಾಮಾಜಿಕ ಸ್ಥಿತಿ-ಗತಿಗಳಿಂದ ಬಹು ದೂರವೇ ಬದುಕಿದ ಜನರಿಗೆ, ಮೀಸಲಾತಿ ಎಂಬ ಅಸ್ತ್ರದ ಮೂಲಕ ಅಭಿವೃದ್ಧಿಯಾಗುವುದನ್ನು ಯಾರಾದರೂ ಸಹಿಸುತ್ತಾರೆಯೇ ? ಹಾಗಾಗಿಯೇ ಅವರು ಮೀಸಲಾತಿಯನ್ನು ಇಷ್ಟು ದಿವಸ ವಿರೋಧಿಸಿದ್ದು. ಮೀಸಲಾತಿ ಎಂಬುದು ಭಿಕ್ಷೆಯೂ ಅಲ್ಲ, ಅದು ದೇಶದ ನ್ಯೂನ್ಯತೆಯೂ ಅಲ್ಲ, ಅದೊಂದು ಸಮಾನತೆಯ ಸಾಧನ ಅಷ್ಟೆ. ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಮೀಸಲಾತಿ ಎಂಬ ಅಂಶವಿಲ್ಲ, ಏಕೆಂದರೆ ಬೇರೆ ದೇಶಗಳಲ್ಲಿ ನಮ್ಮಂತೆ ಸಾವಿರಾರು ಜಾತಿಗಳಿಲ್ಲ.! ಭಾರತದಂತಹ ಜಾತಿ ಪೀಡನೆಯ ವ್ಯವಸ್ಥೆಯಲ್ಲಿ ಖಂಡಿತವಾಗಿಯೂ ಮೀಸಲಾತಿಯ ಅವಶ್ಯಕತೆ ಇದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಬಹಿರಂಗ

ಬೌದ್ಧ ಧರ್ಮ ಮತ್ತು ಅಂಬೇಡ್ಕರ್ ಯಾನ

Published

on

ಚಿತ್ರಕಲೆ : ಹಾದಿಮನಿ

ಬೌದ್ಧ ಧರ್ಮದಲ್ಲಿ ಎರಡು ಪಂಥಗಳಿವೆ. 1.ಹೀನಯಾನ 2.ಮಹಾಯಾನ. ಬಾಬಾಸಾಹೇಬ್ ಅಂಬೇಡ್ಕರ್ ರವರು ಬೌದ್ಧ ಧರ್ಮ ಸ್ವೀಕರಿಸಿದಾಗ ಅವರ ಪಂಥವನ್ನು ನವಯಾನ ಎಂದು ಕರೆದರು. ಹಾಗೆಯೇ ಮಹಾರಾಷ್ಟ್ರದ ಬೌದ್ಧರನ್ನು ನವಬೌದ್ಧರು ಅಥವಾ ಹೊಸಬೌದ್ಧರು ಎಂದು ಕರೆಯಲಾಗುತ್ತದೆ. ಆದರೆ ಶೋಷಿತರು ಹಳೆಯ ಬೌದ್ಧರು. ಯಾಕೆಂದರೆ ಅಂಬೇಡ್ಕರರೇ ಒಂದೆಡೆ ಹೇಳಿದ್ದಾರೆ “ಏಷ್ಯಾ ಖಂಡದ ಬಹುಭಾಗವನ್ನು ಆಳಿದ ಭವ್ಯ ನಾಗ ಜನಾಂಗಕ್ಕೆ ಸೇರಿದವರು ನಾವು” ಎಂದು. ಈ ದಿಸೆಯಲ್ಲಿ ಸದ್ಯ “ಯಾನ” ಎಂದರೇನು? ಎಂಬುದರ ಬಗ್ಗೆ ಚರ್ಚೆ ಮಾಡುವ ಅಗತ್ಯವಿದೆ.

“ಯಾನ” ಎಂದರೆ ಪಯಣ ಎಂದರ್ಥ. ಅಂದರೆ ಬೌದ್ಧ ಪಯಣ ಎಂದರ್ಥ. Its way of life ಎನ್ನಬಹುದು. ಹಾಗಿದ್ದರೆ ಬಾಬಾಸಾಹೇಬ್ ಅಂಬೇಡ್ಕರ್ ರು ಬೌದ್ಧ ಧರ್ಮ ಸ್ವೀಕರಿಸಿದಾಗ ಆಗ ಅಸ್ತಿತ್ವದಲ್ಲಿದ್ದ ಬೌದ್ಧ ಧರ್ಮವನ್ನು ಯಥಾವತ್ ಸ್ವೀಕರಿಸಿದರೆ? ಊಹ್ಞೂಂ. ನಿಜ ಹೇಳಬೇಕೆಂದರೆ ಬುದ್ಧ ಅರಮನೆ ತೊರೆದು ಪರಿವ್ರಾಜಕನಾಗಲು ಸಂಬಂಧಿಸಿದ ಮೂಲ ಕತೆಯಾದ, ಪ್ರಸಿದ್ಧ ಕತೆಯಾದ ಆತ ರೋಗಿಯೊಬ್ಬನನ್ನು ನೋಡಿದ, ವೃದ್ಧನೊಬ್ಬನನ್ನು ನೋಡಿದ, ಸತ್ತ ಮನುಷ್ಯನೊಬ್ಬನನ್ನು ನೋಡಿದ ಎಂಬ ಆ very basic ಸಾಂಪ್ರದಾಯಿಕ ಕತೆಯನ್ನೇ ಅಂಬೇಡ್ಕರರು ನಿರಾಕರಿಸಿದರು. ಇದಕ್ಕೆ ಅವರು ಕೊಡುವ ಕಾರಣ “ಪರಿವ್ರಾಜಕ(ಸನ್ಯಾಸ)ವನ್ನು ಬುದ್ಧ ಸ್ವೀಕರಿಸಿದ್ದು ಆತನ 29ನೇ ವಯಸ್ಸಿನಲ್ಲಿ. ಆ ಮೂರು ದೃಶ್ಯಗಳನ್ನು(ರೋಗಿ, ವೃದ್ಧ, ಸತ್ತ ಮನುಷ್ಯ) ನೋಡಿ ಆತ ಸನ್ಯಾಸ ಸ್ವೀಕರಿಸಿದನೆನ್ನುವುದಾದರೆ ಅದಕ್ಕೂ ಮೊದಲು ಅಂದರೆ ಆತನ 29ನೇ ವಯಸ್ಸಿಗೂ ಮೊದಲು ಆ ಮೂರು ದೃಶ್ಯಗಳನ್ನು ಅತ ನೋಡಿಯೇ ಇರಲಿಲ್ಲ ಎನ್ನುವುದು ಅದು ಹೇಗೆ ಸಾಧ್ಯ?” ಎಂದು (Buddha and his Dhamma, by Ambedkar. Introduction page). ಮುಂದುವರೆದು ಅವರು “ಮುಪ್ಪು, ರೋಗ, ಸಾವು ಇವು ದಿನಾಲೂ ನೂರಾರು ಸಂಖ್ಯೆಯಲ್ಲಿ ಸಂಭವಿಸುವ ಘಟನೆಗಳಾಗಿದ್ದು ಬುದ್ಧ ಅವುಗಳನ್ನು ನೋಡಿಯೇ ನೋಡಿರುತ್ತಾನೆ.

ಆದ್ದರಿಂದ ಇವುಗಳನ್ನೆಲ್ಲ ಮೊದಲು ನೋಡಿ ಆತ ಪರಿವ್ರಾಜಕನಾದ ಎಂಬ ಸಾಂಪ್ರದಾಯಿಕ ವಿವರಣೆಯನ್ನು ಸ್ವೀಕರಿಸಲು ಸಾಧ್ಯವೇ ಇಲ್ಲ. ಈ ನಿಟ್ಟಿನಲ್ಲಿ ಈ ವಿವರಣೆ ತೋರಿಕೆಯದ್ದಾಗಿದ್ದು, ಯಾರಾದರೂ ಪ್ರಶ್ನಿಸಿದಾಗ ಅವರಿಗೆ ಈ ವಿವರಣೆ ಅಕ್ಷರಶಃ ಒಪ್ಪಿಗೆಯಾಗುವಂಥದ್ದಲ್ಲ. ಹೀಗಿರುವಾಗ ಬುದ್ಧ ಅರಮನೆ ತೊರೆದು ಸನ್ಯಾಸ ಸ್ವೀಕರಿಸಲು ಇದು ಉತ್ತರ ಅಲ್ಲವಾದರೆ ನಿಜವಾದ ಉತ್ತರವಾದರು ಏನು?” ಎಂದು ಪ್ರಶ್ನಿಸುತ್ತಾರೆ. ಹಾಗೆಯೇ ಉತ್ತರವನ್ನು ಕಂಡುಕೊಳ್ಳುತ್ತಾರೆ.

ಒಟ್ಟಾರೆ ಅರ್ಥವಾಗುವುದು ಬುದ್ಧ ರೋಗಿಯೊಬ್ಬನನ್ನು, ವೃದ್ಧನೊಬ್ಬನನ್ನು, ಸತ್ತ ವ್ಯಕ್ತಿಯೊಬ್ಬನನ್ನು ನೋಡಿ ಅರಮನೆ ತೊರೆದ ಎಂಬ ಮೂಲ ಕತೆಯನ್ನೇ ಅಂಬೇಡ್ಕರ್ ರು ಒಪ್ಪಲಿಲ್ಲ. ಅದನ್ನು ಸಕಾರಣದ ಮೂಲಕ ಪ್ರಶ್ನಿಸಿ ಬೇರೆ ವಿವರಣೆ ಇರಬಹುದಾ ಎಂದು ಹುಡುಕಿದರು ಎಂಬುದು. ಇದಕ್ಕಾಗಿ ಅಂಬೇಡ್ಕರರು ಕಂಡುಕೊಂಡ ಉತ್ತರ, ಆ ಕಾಲದಲ್ಲಿ “ಶಾಕ್ಯರು ಮತ್ತು ಕೋಲೀಯ ಎಂಬ ರಾಜ್ಯಗಳ ನಡುವೆ ರೋಹಿಣಿ ನದಿ ನೀರಿನ ಹಂಚಿಕೆ ವಿಚಾರವಾಗಿ ಸಂಘರ್ಷ ನಡೆಯುತ್ತದೆ. ಆ ಸಂಘರ್ಷದಲ್ಲಿ ಬುದ್ಧ ಪ್ರತಿನಿಧಿಸುವ ಶಾಕ್ಯನ್ನರ ಶಾಕ್ಯ ಸಂಘ ಕೋಲೀಯರ ಮೇಲೆ ಯುದ್ಧ ಸಾರುವ ಬಹುಮತದ ತೀರ್ಮಾನ ಕೈಗೊಳ್ಳುತ್ತದೆ. ಆದರೆ ಸಂಘಧ ಸದಸ್ಯನಾದ ರಾಜಕುಮಾರ ಸಿದ್ಧಾರ್ಥ(ಬುದ್ಧ) ಹಿಂಸೆಯ ಅಂಶ ಮುದ್ದೊಡ್ಡಿ ಸಂಘ ಕೈಗೊಂಡ ಈ ಯುದ್ಧದ ತೀರ್ಮಾನವನ್ನು ವಿರೋಧಿಸುತ್ತಾನೆ. ಪರಿಣಾಮ ಸಂಘದ ನಿಯಮ ಉಲ್ಲಂಘಿಸಿದ ರಾಜಕುಮಾರ ಸಿದ್ಧಾರ್ಥ ಶಾಕ್ಯ ಸಂಘದ ನಿಯಮದಂತೆ ಸಂಘದಿಂದ ಶಿಕ್ಷೆಗೊಳಗಾಗುವ ಎಚ್ಚರಿಕೆ ಎದುರಿಸಬೇಕಾಗುತ್ತದೆ. ಶಿಕ್ಷೆಗೆ ಒಳಗಾಗಬೇಕಾಗುತ್ತದೆ ಕೂಡ. ಇದರಂತೆ ಸಿದ್ಧಾರ್ಥನಿಗೆ ಮೂರು ಆಯ್ಕೆಗಳನ್ನು ನೀಡಲಾಗುತ್ತದೆ.

  1. ಶಾಕ್ಯ ಸಂಘದ ನಿಯಮವನ್ನು ಕಡೆ ಗಳಿಗೆಯಲ್ಲಾದರೂ ಒಪ್ಪಿ ಕೋಲೀಯರ ವಿರುದ್ಧದ ಯುದ್ಧದಲ್ಲಿ ಭಾಗವಹಿಸುವುದು.
  2. ಶಿಕ್ಷೆ ಅನುಭವಿಸಲು ಒಪ್ಪಿ ನೇಣು ಅಥವಾ ದೇಶಭ್ರಷ್ಟನಾಗಿ ಗಡಿಪಾರು ಶಿಕ್ಷೆ ಅನುಭವಿಸುವುದು.
  3. ಆತನ ಕುಟುಂಬದ ವಿರುದ್ಧ ಸಾಮಾಜಿಕ ಬಹಿಷ್ಕಾರ ಹಾಕಲು ಮತ್ತು ‌ಅವರ ಆಸ್ತಿಯನ್ನು ವಶಪಡಿಸಿಕೊಳ್ಳಲು ಸಂಘಕ್ಕೆ ಅನುಮತಿ ನೀಡುವುದು.

ಅಂದಹಾಗೆ ಶಾಂತಿ ಧೂತ ಬುದ್ಧ ಮೊದಲನೆಯ ತೀರ್ಮಾನ ಅಂದರೆ ಖಡಾಖಂಡಿತವಾಗಿ ಕೋಲೀಯರ ವಿರುದ್ಧ ಯುದ್ಧದಲ್ಲಿ
ಭಾಗವಹಿಸಲು ನಿರಾಕರಿಸುತ್ತಾನೆ. ಮೂರನೆಯ ತೀರ್ಮಾನ ಅಂದರೆ ತನ್ನ ಕುಟುಂಬದ ಸದಸ್ಯರಿಗೆ ತನ್ನಿಂದ ತೊಂದರೆಯಾಗುವುದನ್ನು ಆತ ಒಪ್ಪುವುದಿಲ್ಲ. ಈ ನಿಟ್ಟಿನಲ್ಲಿ ತಪ್ಪು ತನ್ನದಾಗಿರುವುದರಿಂದ ಶಿಕ್ಷೆ ತನಗೆ ಮಾತ್ರ ಸಲ್ಲಬೇಕು ಎಂದು ನೇಣು ಶಿಕ್ಷೆಗೆ ಅಥವಾ ರಾಜ್ಯದಿಂದ ಗಡಿಪಾರು ಶಿಕ್ಷೆಗೆ ತನ್ನನ್ನು ಒಳಪಡಿಸಬಹುದು ಎಂದು ಆತ ಶಾಕ್ಯ ಸಂಘಕ್ಕೆ ಹೇಳುತ್ತಾನೆ. ಅದರಂತೆ ಶಾಕ್ಯಸಂಘ ರಾಜಕುಮಾರ ಸಿದ್ಧಾರ್ಥನಿಗೆ ಗಡಿಪಾರು ಶಿಕ್ಷೆ ವಿಧಿಸುತ್ತದೆ, ಸಿದ್ಧಾರ್ಥ ರಾಜ್ಯ ತೊರೆಯುತ್ತಾನೆ.

ಅಂಬೇಡ್ಕರ್ ರು ಕೊಡುವ ಈ ವಿವರಣೆಯಲ್ಲಿ ಖಂಡಿತ ಅವಾಸ್ತವಿಕವಾದ ಅಂಶ ಕಿಂಚಿತ್ತು ಇಲ್ಲ. ನಿಜ, ಇಲ್ಲಿ ರೋಚಕತೆ ಇಲ್ಲದಿರಬಹುದು ಆದರೆ ರಾಜ್ಯ ತೊರೆಯಲು ಪ್ರಮುಖ ಕಾರಣವಂತು ಇದೇ ಆಗುತ್ತದೆ ಮತ್ತು ಇದನ್ನು ಯಾರೂ ಕೂಡ ಪ್ರಶ್ನಿಸಲಾರರು. ಹಾಗಿದ್ದರೆ ಇದಕ್ಕೆ ಆಕರ ಗ್ರಂಥವಾಗಿ ಅಂಬೇಡ್ಕರ್ ರು ಯಾವ ಗ್ರಂಥ ಬಳಸುತ್ತಾರೆ? ಅದಕ್ಕೂ ಕೂಡ ಉತ್ತರ ಇದೆ. ಅದೆಂದರೆ ಅಂಬೇಡ್ಕರ್ ರವರು ಮೆಟ್ರಿಕ್ಯುಲೇಷನ್ ಪರೀಕ್ಷೆ ಪಾಸು ಮಾಡಿದಾಗ ಸನ್ಮಾನ ಸಮಾರಂಭವೊಂದರಲ್ಲಿ ಅತಿಥಿಯೊಬ್ಬರು ತಾವೇ ಬರೆದ ಗೌತಮ ಬುದ್ಧರ ಜೀವನ ಚರಿತ್ರೆಯ ಪುಸ್ತಕವನ್ನು ಬಾಲಕ ಅಂಬೇಡ್ಕರ್ ಗೆ ಕೊಡುತ್ತಾರೆ ಎಂಬ ವಿಚಾರ ಎಲ್ಲರಿಗೂ ಗೊತ್ತು. ಮರಾಠಿಯಲ್ಲಿ ಬುದ್ಧನ ಆ ಜೀವನ ಚರಿತ್ರೆ ಬರೆದು(ಬರೆದ ವರ್ಷ 1898) ಬಾಲಕ ಅಂಬೇಡ್ಕರರಿಗೆ ಕೊಡುಗೆ ಇತ್ತವರು ಅಂದಿನ ಸಮಾಜ ಸುಧಾರಕರಾದ ಬಾಂಬೆಯ ವಿಲ್ಸನ್ ಹೈಸ್ಕೂಲ್ ನ ಮಾಜಿ ಪ್ರಾಂಶುಪಾಲರಾದ ಕೃಷ್ಣಾಜಿ ಅರ್ಜುನ್ ಕೆಲೂಸ್ಕರ್ ರವರು. ಈ ನಿಟ್ಟಿನಲ್ಲಿ ರೋಹಿಣಿ ನದಿಯ ನೀರಿನ ವಿಚಾರವಾಗಿ ಸಿದ್ಧಾರ್ಥನು ರಾಜ್ಯ ತೊರೆದ ಪ್ರಸಂಗವನ್ನು ಅಂಬೇಡ್ಕರರು ತಾವು ಪಡೆದದ್ದು ಕೆಲೂಸ್ಕರ್ ರ ಆ ಕೃತಿಯಲ್ಲೇ!

ನಾಲ್ಕು ಆರ್ಯ ಸತ್ಯಗಳನ್ನು ಒಪ್ಪದ ಅಂಬೇಡ್ಕರರು

ಬೌದ್ಧ ಧರ್ಮದಲ್ಲಿ ನಾಲ್ಕು ಆರ್ಯ ಸತ್ಯಗಳು ಎಂಬ ಪ್ರಮುಖ ಅಂಶ ಬರುತ್ತದೆ. ಸಾಮಾನ್ಯವಾಗಿ ಮಹಾಬೋಧಿ ಸೊಸೈಟಿ ಪ್ರಕಟಿಸುವ ಕೃತಿಗಳನ್ನು ಓದಿದ ಬೌದ್ಧರಿಗೆ ಅವು ಯಾವುವು ಎಂದು ತಿಳಿದಿರುತ್ತವೆ. ಅವುಗಳೆಂದರೆ 1.ದುಃಖ ಸತ್ಯ. 2.ದುಃಖಕ್ಕೆ ಮೂಲ ಇದೆ ಎಂಬ ಸತ್ಯ. 3.ದುಃಖವನ್ನು ಕೊನೆಗಾಣಿಸಬಹುದು ಎಂಬ ಸತ್ಯ. 4.ಆ ದುಃಖವನ್ನು ಕೊನೆಗಾಣಿಸುವ ಮಾರ್ಗ ಯಾವುದೆಂಬ ಸತ್ಯ.

ಆಶ್ಚರ್ಯವೆಂದರೆ ಬಾಬಾಸಾಹೇಬ್ ಅಂಬೇಡ್ಕರ್ ರವರು ಈ ನಾಲ್ಕು ಆರ್ಯ ಸತ್ಯಗಳನ್ನು ಒಪ್ಪುವುದಿಲ್ಲ. ಅವರು ಹೇಳುವುದು “ಈ ಆರ್ಯ ಸತ್ಯಗಳ ಸೂತ್ರ ಬೌದ್ಧ ಧರ್ಮದ ಮೂಲ ಬೇರನ್ನೇ ಕತ್ತರಿಸುತ್ತದೆ” ಎಂದು. ಏಕೆಂದರೆ ಅವರು ಹೇಳುವುದು “ಆರ್ಯ ಸತ್ಯಗಳ ಪ್ರಕಾರ ಈ ಜೀವನ ದುಃಖ, ಸಾವು ಕೂಡ ದುಃಖ, ಪುನರ್ಜನ್ಮ ಕೂಡ ದುಃಖ, ಆದ್ದರಿಂದ ಪ್ರತಿಯೊಂದಕ್ಕೂ ಕೊನೆ ಎಂಬುದಿದೆ ಎಂದಾದರೆ ತತ್ವಜ್ಞಾನವಿರಲಿ ಅಥವಾ ಧರ್ಮವಿರಲಿ ಯಾವುದೂ ಕೂಡ ಈ ಪ್ರಪಂಚದಲ್ಲಿ ಮನುಷ್ಯ ಸಂತಸದಿಂದಿರಲು ಸಹಾಯ ಮಾಡುವುದಿಲ್ಲ. ಏಕೆಂದರೆ ದುಃಖದಿಂದ ತಪ್ಪಿಸಿಕೊಳ್ಳಲು ಸಾಧ್ಯ ಇಲ್ಲ ಎನ್ನುವುದಾದರೆ ಜೀವನದಲ್ಲಿ ಸಹಜವಾಗಿ ಅಂತರ್ಗತವಾಗಿರುವ ಆ ದುಃಖದಿಂದ ಮನುಷ್ಯನನ್ನು ತಪ್ಪಿಸಲು ಬುದ್ಧನಾದರೂ ಏನು ಮಾಡಲು ಸಾಧ್ಯ? ಧರ್ಮವಾದರೂ ಏನು ಮಾಡಲು ಸಾಧ್ಯ?

ಆದ್ದರಿಂದ ನಾಲ್ಕು ಆರ್ಯ ಸತ್ಯಗಳು ಮನುಷ್ಯನಿಗೆ ಭರವಸೆಯನ್ನು ನಿರಾಕರಿಸುತ್ತವೆ. ಈ ನಿಟ್ಟಿನಲ್ಲಿ ಆ ನಾಲ್ಕು ಆರ್ಯ ಸತ್ಯಗಳು ಬುದ್ಧನ ಬೋಧನೆಗಳನ್ನು ನಿರಾಶವಾದದ ಬೋಧನೆಗಳನ್ನಾಗಿ ಮಾಡುತ್ತವೆ” ಎನ್ನುತ್ತಾರೆ. ಅದರಲ್ಲೂ ಅವರು ಹೇಳುವುದು “ಬೌದ್ಧರಲ್ಲದವರಿಗೆ ಬೌದ್ಧ ಧರ್ಮದ ಬೋಧನೆಗಳನ್ನು ಒಪ್ಪಲು ಈ ನಾಲ್ಕು ಆರ್ಯಸತ್ಯಗಳು ಬಹುದೊಡ್ಡ ತಡೆಯಾಗಿವೆ” ಎಂದು. ಈ ಹಿನ್ನೆಲೆಯಲ್ಲಿ ಅವರು ಅನುಮಾನ ವ್ಯಕ್ತಪಡಿಸುವುದು ಇವು ಈ ನಾಲ್ಕು ಆರ್ಯ ಸತ್ಯಗಳು ಬುದ್ಧನ ಬೋಧನೆಯ ಮೂಲ ತಿರುಳಾಗಿತ್ತೇ ಅಥವಾ ಇವು ಭಿಕ್ಕುಗಳು ನಂತರ ಸೇರಿಸಿದ ಅಂಶಗಳಾಗಿರಬಹುದೇ ಎಂದು.

ಮುಂದುವರಿದು ಅಂಬೇಡ್ಕರರು “ಭಿಕ್ಕುಗಳನ್ನು ಬುದ್ಧ ಸೃಷ್ಟಿಸಿದ್ದೇತಕೆ?” ಎಂಬ ಪ್ರಶ್ನೆಯನ್ನೂ ಕೇಳುತ್ತಾರೆ. ಅದಕ್ಕೆ ಅವರು ಹೇಳುವುದು “ಬುದ್ಧ, ಭಿಕ್ಕು ಗಣವನ್ನು ಅವರು ಪರಿಪೂರ್ಣ ಮನುಷ್ಯರಾಗಲಿ ಎಂದು ಸೃಷ್ಟಿಸಿದನೇ ಅಥವಾ ಸಮಾಜ ಸೇವಕರಾಗಿ ಜನತೆಗೆ ಸ್ನೇಹಿತರಾಗಿ, ಮಾರ್ಗದರ್ಶಕರಾಗಿ, ತತ್ವಜ್ಞಾನಿಗಳಾಗಿ ಜನರಿಗಾಗಿ ತಮ್ಮ ಜೀವನ ಮುಡಿಪಿಡಲಿ ಎಂದು ಸೃಷ್ಟಿಸಿದನೇ? ಈ ದಿಸೆಯಲ್ಲಿ ಭಿಕ್ಕು ಪರಿಪೂರ್ಣ ಮನುಷ್ಯನಾದರೆ ಧಮ್ಮದ ಬೆಳವಣಿಗೆಯ ಹಿನ್ನೆಲೆಯಲ್ಲಿ ಆತ ಉಪಯೋಗಕ್ಕೆ ಬರುವುದಿಲ್ಲ. ಏಕೆಂದರೆ ಮನುಷ್ಯ ಪರಿಪೂರ್ಣನಾದರೂ ಆತ ಸ್ವಾರ್ಥಿಯಾಗಿರುತ್ತಾನೆ. ಆದರೆ ಭಿಕ್ಕು ಸಮಾಜ ಸೇವಕನಾದರೆ ಖಂಡಿತ ಬೌದ್ಧ ಧರ್ಮಕ್ಕೆ ಆತ ಬಹು ದೊಡ್ಡ ಭರವಸೆಯಾಗುತ್ತಾನೆ” ಎನ್ನುತ್ತಾರೆ.(ಆಧಾರ: Buddha and His Dhamma, Ambedkar writings and speeches, Vol.11, introduction part).

ಖಂಡಿತ, ಬುದ್ಧ ಪರಿವ್ರಾಜಕ(ಸನ್ಯಾಸ) ಸ್ವೀಕರಿಸಲು ಬಾಬಾಸಾಹೇಬ್ ಅಂಬೇಡ್ಕರ್ ರವರು ಹೇಳುವ ಈ ಕತೆ, ನಾಲ್ಕು ಆರ್ಯ ಸತ್ಯಗಳನ್ನು ಅವರು ಒಪ್ಪದಿರುವುದು, ಹಾಗೆ ಭಿಕ್ಕುಗಳನ್ನು ಸಮಾಜ ಸೇವಕರು ಎನ್ನುವ ಅವರ ವ್ಯಾಖ್ಯೆ ಅಕ್ಷರಶಃ ಬೌದ್ಧ ಧರ್ಮಕ್ಕೆ ಹೊಸ ರೂಪ ಕೊಡುತ್ತದೆ. ಈ ನಿಟ್ಟಿನಲ್ಲಿ ಆ ರೂಪವನ್ನು ನಾವು ನಿಸ್ಸಂಶಯವಾಗಿ ಅಂಬೇಡ್ಕರ್ ಹಾದಿ ಎನ್ನಬಹುದು, ಹೀನಯಾನ ಮತ್ತು ಮಹಾಯಾನದಂತೆ “ಅಂಬೇಡ್ಕರ್ ಯಾನ” ಎನ್ನಬಹುದು. ಬುದ್ಧನ ಹಾದಿಯಲ್ಲಿಂದು ಕೋಟ್ಯಂತರ ಜನರು ಸಾಗುತ್ತಿದ್ದಾರೆ. ಅದರಲ್ಲೂ ಶೋಷಿತ ಸಮುದಾಯಗಳ ಬಂಧುಗಳು ಬುದ್ಧನೆಡೆ ದಿಟ್ಟಹೆಜ್ಜೆ ಇಟ್ಟಿದ್ದಾರೆ. ಖಂಡಿತ, ಅಂತಹವರೆಲ್ಲರಿಗೆ ಅಂಬೇಡ್ಕರ್ ಯಾನ ಹೊಸ ಮಾರ್ಗ ಆಗಲಿದೆ ಹೊಸ ಬೆಳಕು ಆಗಲಿದೆ.

ರಘೋತ್ತಮ ಹೊ.ಬ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending