Connect with us

ಬಹಿರಂಗ

ದುಷ್ಟನೊಬ್ಬನ ದೇಶಪ್ರೇಮ ಮತ್ತು “ಪವರ್”ಮೀಡಿಯಾ

Published

on

ಹೊಸದಾಗಿ ಪ್ರಾರಂಭವಾದರೂ ಇನ್ನೂ ಜನರ ಮುಂದೆ ಬಾರದ ಪವರ್ ಟಿವಿ ದುಷ್ಟ ದೇಶಪ್ರೇಮವನ್ನು ಪ್ರದರ್ಶಿಸಿದೆ. ಪವರ್ ಟಿವಿಯಲ್ಲಿ ಕೆಲಸ ಮಾಡುವ ಪತ್ರಕರ್ತನೊಬ್ಬ ಏರ್ ಸ್ಟ್ರೈಕ್ ಬಗ್ಗೆ ವ್ಯಂಗ್ಯವಾಗಿ ಪ್ರಶ್ನೆಗಳನ್ನೆತ್ತಿದ ಎಂಬ ಕಾರಣಕ್ಕಾಗಿ ಕೆಲಸದಿಂದ ಕಿತ್ತು ಹಾಕಲಾಗಿದೆ ಎಂದು ಪವರ್ ಟಿವಿ ಎಕ್ಸಿಕ್ಯೂಟಿವ್ ಎಡಿಟರ್ ಚಂದನ್ ಶರ್ಮ‌ ಹೇಳಿದ್ದಾರೆ.

ಚಂದನ್ ಶರ್ಮ ಹೇಳಿಕೆಯ ಒಟ್ಟು ಸಾರಾಂಶ ಏನೆಂದರೆ, ಪವರ್ ಟಿವಿಯು ಸೈನಿಕರಿಗೆ ಅರ್ಪಣೆಯಾದ ರಾಜ್ಯದ ಮೊದಲ ಚಾನೆಲ್ ಆಗಿದ್ದು, ಸೈನಿಕರಿಗೆ ಯಾರೇ ಅವಮಾನ ಮಾಡಿದ್ರೂ ಸಹಿಸೋದಿಲ್ಲ. ಆದ್ದರಿಂದ ಪತ್ರಕರ್ತ ಮೋಹನ್ ನನ್ನು ಕೆಲಸದಿಂದ ತೆಗೆಯಲಾಗಿದೆ ಎಂದಿದೆ. ಚಿರು ಭಟ್ ಎಂಬ ಬಲಪಂಥೀಯ ವ್ಯಕ್ತಿ ಪತ್ರಕರ್ತ ಮೋಹನ್ ರನ್ನು ಕೆಲಸದಿಂದ ತೆಗೆಯಿರಿ ಎಂದು ಫೇಸ್ ಬುಕ್ ನಲ್ಲಿ ಹಾಕಿದ ಅರ್ಧ ಗಂಟೆಯ ಒಳಗೆ ಯಾವುದೇ ತನಿಖೆ ನಡೆಸದೇ, ಪತ್ರಕರ್ತನ ಸ್ಟೇಟಸ್ ನ ಅರ್ಥವನ್ನು ಕೇಳದೇ ಆತನನ್ನು ಕೆಲಸದಿಂದ ತೆಗೆಯಲಾಯ್ತು.

“ಲಾರ್ಡ್ ಲಬಕ್ ದಾಸ್” ಚಂದನ್ ಶರ್ಮಾರವರೇ,

ತಮ್ಮ ವಿರುದ್ದ ಮತ್ತು ನಿಮ್ಮ ಪವರ್ ಟಿವಿಯ ನಾಲ್ವರು ಸಿಬ್ಬಂದಿಗಳ ವಿರುದ್ದ ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ಕ್ರಿಮಿನಲ್ ದೂರು ದಾಖಲಾಗಿದೆ. ಜ್ಯುವೆಲರಿ ಅಂಗಡಿಯೊಂದರಿಂದ ಎರಡು ಕೋಟಿ ರೂಪಾಯಿ ವಸೂಲಿ ಮಾಡಲು ಹೋಗಿದ್ರಿ ಎಂದು ನಿಜಾಮುದ್ದೀನ್ ಎಂಬವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದು ಕೇವಲ ಆರೋಪವೂ ಅಲ್ಲ, ಫೇಸ್ ಬುಕ್ ಸ್ಟೇಟಸ್ಸೂ ಅಲ್ಲ, ಇದು ಖುಲ್ಲಂ ಖುಲ್ಲಾ ಎಫ್ ಐ ಆರ್ ಆಗಿರುವ ಗಂಭೀರ ಪ್ರಕರಣ !

ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ತಾವು ಅಂದರೆ ಎಕ್ಸಿಕ್ಯೂಟಿವ್ ಎಡಿಟರ್ ಚಂದನ್ ಶರ್ಮ, ಪವರ್ ಟಿವಿ ಮಾಲೀಕ ರಾಕೇಶ್ ಶೆಟ್ಟಿ, ಅಸಿಸ್ಟೆಂಟ್ ಮ್ಯಾನೇಜರ್ ವಿನೋದ್ ಕುಮಾರ್, ರಿಪೋರ್ಟರ್ ಚಂದ್ರಶೇಖರ್, ವಿರುದ್ದ ಐಪಿಸಿ ಸೆಕ್ಷನ್ 384- ಅಂದರೆ ಸುಲಿಗೆ ಪ್ರಕರಣ ದಾಖಲಾಗಿದೆ. ನೀವು ರಾಜೀನಾಮೆ ಕೊಟ್ರಾ ? ಮೋಹನ್ ಮೇಲೆ ಆರೋಪ ಬಂದಾಗ ಆತನನ್ನು ಕೆಲಸದಿಂದ ತಕ್ಷಣ ತೆಗೆದಂತೆ ನಿಮ್ಮನ್ನು ಮಾಲೀಕರು ಯಾಕೆ ಕೆಲಸದಿಂದ ತೆಗೆದಿಲ್ಲ ? ಅಥವಾ ನೈತಿಕತೆ ಹೊಣೆ ಹೊತ್ತು ತಾವೇ ರಾಜೀನಾಮೆಯನ್ನ ಯಾಕೆ ಬಿಸಾಕಲಿಲ್ಲ? ನಿಮಗೊಂದು ನ್ಯಾಯ ? ನಿಮ್ಮ ಕೈಕೆಳಗೆ ಕೆಲಸ ಮಾಡೋ ಪತ್ರಕರ್ತ ಮೋಹನ್ ಗೊಂದು ನ್ಯಾಯವೇ ?

ಪುಲ್ವಾಮದಲ್ಲಿ ಸೈನಿಕರ ಮೇಲೆ ದಾಳಿಯಾಗಿ 40 ಜನ ನಮ್ಮ ದೇಶದ ವೀರ ಯೋಧರು ಪ್ರಾಣಾರ್ಪಣೆ ಮಾಡಿದ ದಿನ ಸೈನಿಕರಿಗಾಗಿ ಅರ್ಪಣೆಯಾದ ಮೊದಲ ಚಾನೆಲ್ ಎಂದು ಸಿಲ್ಲಿಸಿಲ್ಲಿಯಾಗಿ ಘೋಷಿಸಿರುವ ಪವರ್ ಟಿವಿ ಏನ್ ಮಾಡ್ತಿತ್ತು ಅಂತ ಜನ ನೋಡಿದ್ದಾರೆ. ಅಲ್ಲಿ ಸೈನಿಕರು ಸಾಯ್ತಾ ಇದ್ರೆ ನೀವು ಸ್ಟುಡಿಯೋದಲ್ಲಿ ಖಾಲಿ ಚೇರ್ ಇಟ್ಟು ನಿಮ್ಮ ವಸೂಲಿ ಪ್ರಕರಣಕ್ಕೆ ಸ್ಪಷ್ಟನೆ ಕೊಡ್ತಾ ಇದ್ರಿ. “ನಮ್ಮ ಮೇಲೆ ಆರೋಪಿಸಿ ಎಫ್ ಐಆರ್ ದಾಖಲಿಸಿದ ಜ್ಯುವೆಲ್ಲರಿ ಮಾಲೀಕ ಈ ಚೇರ್ ನಲ್ಲಿ ಕುಳಿತು ಆರೋಪ ಸಾಬೀತು ಮಾಡಲಿ” ಎಂದು ಬೊಬ್ಬಿರಿದು ಇಡೀ ದಿನ ಚಾನೆಲ್ ಸ್ಟುಡಿಯೋವನ್ನು ಅದಕ್ಕಾಗಿ ಬಳಕೆ ಮಾಡಿಕೊಂಡ್ರಿ. ‌ಅದೇ ನ್ಯಾಯ ವ್ಯವಸ್ಥೆ ಮೋಹನ್ ಗೆ ಯಾಕಿಲ್ಲ ? ಕನಿಷ್ಟ ನಿಮ್ಮ ಪತ್ರಕರ್ತ ಮೋಹನ್ ನ ಹೇಳಿಕೆಯನ್ನಾದ್ರೂ ಪಡೆದು ಪವರ್ ಟಿವಿಯಲ್ಲಿ ಪ್ರಕಟಿಸಬಹುದಿತ್ತಲ್ವಾ ? ನಿಮ್ಮ ಮೇಲಿನ ದರೋಡೆ ಪ್ರಕರಣವನ್ನು ಅಲ್ಲಗಳೆಯಲು ಜರ್ನಲಿಸಂ ಬಳಕೆಯಾಗುತ್ತದೆ, ಮೋಹನನಂತಹ ಬಡ ಪತ್ರಕರ್ತನೊಬ್ಬ ಫೇಸ್ ಬುಕ್ ನಲ್ಲಿ ಕೇಂದ್ರ ಸರಕಾರವನ್ನು ತನ್ನ ವಯಕ್ತಿಕ ವ್ಯಂಗ್ಯಭರಿತವಾಗಿ ಪ್ರಶ್ನೆ ಮಾಡಿದ್ರೆ ಅದಕ್ಕೆ ವಿವರಣೆ ಪಡೆಯದೆ ಅಮಾನತ್ತು ಮಾಡ್ತೀರಿ. ನಿಮ್ಮದೇ ಪತ್ರಕರ್ತ ಮೋಹನ್ ಮತ್ತು ಅವನ ಸ್ಟೇಟಸ್ ವಿರುದ್ದ ನಿಮಗೆ ದೂರು ನೀಡಿದ ಬಲಪಂಥೀಯ ಪತ್ರಕರ್ತ ಚಿರು ಭಟ್ ನನ್ನು ಕರೆದು ಡಿಸ್ಕಷನ್ ಮಾಡಬಹುದಿತ್ತಲ್ಲವೇ ? ನಿಮ್ಮ ಶೋ ನಲ್ಲಿ ಒಂದತ್ತು ಬಾರಿ ನೀವೇ ಹೇಳುವ “ನಾನು ಇವತ್ತು ಒಂದಿಷ್ಟು ಚಿಂತನ-ಮಂಥನ ನಡೆಸಬೇಕಿದೆ. ನಾನು ಒಬ್ಬ ಪತ್ರಕರ್ತನಾಗಿ ಈ ಚೇರ್ ನಲ್ಲಿ ಕೂತಿದ್ದೇನೆ.‌ನಾನು ನ್ಯೂಟ್ರಲ್” ಎಂದು ಬೊಬ್ಬೆ ಹಾಕುತ್ತೀರಿ. ಹಾಗಾದ್ರೆ ಒಬ್ಬ ಪತ್ರಕರ್ತನ ನ್ಯೂಟ್ರಲ್ ಸ್ಟ್ಯಾಂಡ್ ಯಾವುದು? ಏಕಾಏಕಿ ಒಬ್ಬ ಪತ್ರಕರ್ತನನ್ನ ಕೆಲಸದಿಂದ ತೆಗೆಯುವುದಾ?

ಚಿರು ಭಟ್ ಎಂಬ ಬಲಪಂಥೀಯ ಪತ್ರಕರ್ತರು ನಿಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವ ಮೋಹನ್ ಬಗ್ಗೆ ಫೇಸ್ ಬುಕ್ ನಲ್ಲಿ ಬರೆಯುತ್ತಾರೆ. ಅದನ್ನು ಆಧರಿಸಿ ತಾವು ಮೋಹನ್ ವಿರುದ್ದ ಕ್ರಮ ಕೈಗೊಂಡಿರಿ. ಆದರೆ ಮೋಹನ್ ತಕ್ಷಣ ನನ್ನದು ತಪ್ಪಾಯ್ತು ಎಂದೂ ಕ್ಷಮೆ ಕೇಳಿ ಸ್ಟೇಟಸ್ ಹಾಕಿದ್ದ. ಇಷ್ಟಕ್ಕೂ ಇದು ಚಾನೆಲ್ ಗೆ ಸಂಬಂಧಿಸಿದ ವಿಚಾರವಲ್ಲ. ಮೋಹನ್ ನಿಜವಾಗಿಯೂ ಸೈನಿಕರಿಗೆ ಅವಹೇಳನ ಮಾಡಿದ್ದರೆ ಎಫ್ ಐಆರ್ ದಾಖಲಿಸಲು ಚಿರು ಭಟ್ ಗೆ ಸೂಚಿಸಬೇಕಿತ್ತು. ಅದ್ಯಾವುದನ್ನೂ ಮಾಡದೇ ತಾವು ಸಾಚಾ ಎಂದು ಬಿಂಬಿಸಲು ಪತ್ರಕರ್ತನೊಬ್ಬನನ್ನು ಬಲಿ ಕೊಟ್ಟಿದ್ದು ಕನ್ನಡ ಪತ್ರಿಕೋಧ್ಯಮದ ದುರಂತ.

ಬೆಂಗಳೂರು ಕಮರ್ಷಿಯಲ್ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಸೆಕ್ಷನ್ ಗಳಡಿ ದಾಖಲಿಸಿಕೊಂಡ ಎಫ್ ಐಆರ್ ಪ್ರಕಾರ ದರೋಡೆಕೋರ/ವಸೂಲಿಕೋರ ಆಗಿರುವ ತಾವು ಮತ್ತೊಬ್ಬ ಪತ್ರಕರ್ತ ಅಪರಾಧಿ ಎಂದು ನ್ಯಾಯ ತೀರ್ಮಾನ ಮಾಡುತ್ತಿರುವುದು ಮಾಧ್ಯಮ ಜಗತ್ತಿನ ದುರಂತ. ನೀವು ಕೆಲಸದಿಂದ ಕಿತ್ತು ಹಾಕಿದ ಪತ್ರಕರ್ತ ಮೋಹನ್, ಪೊಲೀಸರ ಭಾಷೆಯಲ್ಲಿ ಹೇಳೋದಾದರೆ ನಿಮ್ಮಂತೆ ದರೋಡೆಕೋರನೂ ಅಲ್ಲ, ವಸೂಲಿಕೋರನೂ ಅಲ್ಲ. ಆತನ ವಿರುದ್ದ ನಿಮ್ಮ ವಿರುದ್ದ ದಾಖಲಾದಂತೆ ಎಲ್ಲೂ ಎಫ್ ಐಆರ್ ಆಗಿಲ್ಲ ! ದುಷ್ಟನೊಬ್ಬ ತನ್ನ ಮೇಲಿನ ಆರೋಪಗಳಿಂದ ಮುಕ್ತವಾಗಲು ದೇಶಪ್ರೇಮವನ್ನು ಆಯ್ಕೆ ಮಾಡುತ್ತಾನೆ !

ಲಾರ್ಡ್ ಲಬಕ್ ದಾಸ್ ಎಂಬ ಚಂದನ್ ಶರ್ಮಾರವರೇ ಈ ಲಬಕ್ ದಾಸ್ ಹೆಸರಿನ ಹಿಂದೆ ಹತ್ತಾರು ಕತೆಗಳಿವೆ ಅದನ್ನ ಬರೆದ್ರೆ ನೀವು ಯಾವ “ದೇಶಪ್ರೇಮ”ದ ಓಝೋನ್ ಪರದೆಯಲ್ಲಿ ಅಡಗಿ ಕೂತರು ರಕ್ಷಣೆ ಸಿಗಲಾರದು. ಇದು ಕೂಡ ನಿಮ್ “ನೋ ನಾನ್ ಸೆನ್ಸ್ ” ಅಡಿಯಲ್ಲಿಯೇ ಬರುತ್ತೆ. ಬಾಯಿ‌ಬಡುಕತನ ಮಾತ್ರ ಜರ್ನಲಿಸಂ ಅಲ್ಲ ಎಂಬ ಕಟು ಸತ್ಯ ನಿಮಿಗೂ ಗೊತ್ತಾಗಬೇಕಿದೆ.

ಜ್ಯುವೆಲ್ಲರಿ ಮಾಲೀಕ ಕೊಟ್ಟ ದೂರಿನ ಹಿನ್ನಲೆಯಲ್ಲಿ ಎಫ್ ಐಆರ್ ದಾಖಲಾಗಿ ಕಳ್ಳ, ಛೀ, ಥೂ ಎಂದು ಉಗಿಸಿಕೊಳ್ಳುತ್ತಿದ್ದ ನೀವು ಈಗ ಸೈನಿಕರ ನೆಪದಲ್ಲಿ ಪತ್ರಕರ್ತನನ್ನು ಕೆಲಸದಿಂದ ತೆಗೆದು ದೇಶಪ್ರೇಮದ ಪರದೆಯಲ್ಲಿ ಅಡಗಿ ಕೂರಬಹುದು ಅಂದುಕೊಂಡ್ರಾ ?

-ಸತೀಶ್ ನಾಯ್ಕ್

ಸುದ್ದಿದಿನ.ಕಾಂ|ವಾಟ್ಸಾಪ್|9986715401

ಬಹಿರಂಗ

ಕೆ.ಆರ್.ಎಸ್.ನಿರ್ಮಾಣ : ಮತ್ತಷ್ಟು ಇತಿಹಾಸ

Published

on

  • ರಘೋತ್ತಮ ಹೊ.ಬ

ದು 1902 ನೇ ಇಸವಿ. ಏಷ್ಯಾದಲ್ಲೆ ಪ್ರಪ್ರಥಮ ಜಲವಿದ್ಯುತ್ ಉತ್ಪಾದನಾ ಕೇಂದ್ರ ಸ್ಥಾಪನೆಯಾದ ವರ್ಷ. ಅಂದಹಾಗೆ ಅದನ್ನು ಸ್ಥಾಪಿಸಿದವರು ಮೈಸೂರಿನ ಅಂದಿನ ಮಹಾರಾಜ ನಾಲ್ವಡಿ ಕೃಷ್ಣರಾಜಒಡೆಯರ್‍ರವರು.

ಬ್ರಿಟಿಷರೊಂದಿಗೆ ಕೋಲಾರ ಚಿನ್ನದ ಗಣಿಗೆ ವಿದ್ಯುತ್ ಸರಬರಾಜು ಮಾಡುವ ಒಪ್ಪಂದ ಮಾಡಿಕೊಂಡಿದ್ದ ಅವರು ಆ ನಿಟ್ಟಿನಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಶಿವನಸಮುದ್ರ ಎಂಬಲ್ಲಿ ಪ್ರಪ್ರಥಮ ಜಲವಿದ್ಯುತ್ ಕೇಂದ್ರ ಸ್ಥಾಪಿಸಿದರು ಮತ್ತು ಆ ಕಾಲದಲ್ಲೆ 30,000 ವೋಲ್ಟ್ ವಿದ್ಯುತ್‍ಅನ್ನು ಕೋಲಾರದ ಚಿನ್ನದÀ ಗಣಿಗೆ ವರ್ಗಾಯಿಸಿದರು. ಈ ಸಂದರ್ಭದಲ್ಲಿ ಒಂದು ಮಾತು ಅದೇನೆಂದರೆ ಆಗಿನ್ನು ಸರ್.ಎಂ.ವಿಶ್ವೇಶ್ವರಯ್ಯನವರು ಮೈಸೂರು ಸಂಸ್ಥಾನಕ್ಕೆ ಪ್ರವೇಶ ಪಡೆದೇ ಇರಲಿಲ್ಲ!

ಇರಲಿ, ಜಲವಿದ್ಯುತ್ ಕೇಂದ್ರವನ್ನೇನೋ ಒಡೆಯರ್‍ರವರು ಸ್ಥಾಪಿಸಿದರು. ಆದರೆ ವಿದ್ಯುತ್ ಉತ್ಪಾದನೆಗೆ ನೀರು ವರ್ಷಾಕಾಲ ದೊರೆಯುತ್ತದೆಯೇ? ಖಂಡಿತ ಇಲ್ಲ. ಮಳೆ ಬಂದಾಗ ವಿದ್ಯುತ್. ಇಲ್ಲದಿದ್ರೆ ನೋ ವಿದ್ಯುತ್! ಬೇಸಿಗೆ ಕಾಲದಲ್ಲಂತೂ ಒಂದು ವೋಲ್ಟ್ ಉತ್ಪತ್ತಿ ಕೂಡ ಕಷ್ಟವಾಗಿತ್ತು. ಇದರಿಂದ ಚಿನ್ನದ ಗಣಿಗೆ ನಿರಂತರ ವಿದ್ಯುತ್ ಸರಬರಾಜು ಮಾಡುವುದಾಗಿ ಒಪ್ಪಂದ ಮಾಡಿಕೊಂಡಿದ್ದ ಒಡೆಯರ್‍ರಿಗೆ ಅದರ ಪೂರೈಕೆ ಸವಾಲಿನ ಕೆಲಸವಾಗಿತ್ತು.

ಈ ಕಾರಣಕ್ಕಾಗಿ ಅಂದರೆ ವಿದ್ಯುತ್ ಉತ್ಪಾದನ ಕೇಂದ್ರಕ್ಕೆ ನಿರಂತರ ನೀರು ಸರಬರಾಜು ಮಾಡಲು ಶಿವನಸಮುದ್ರದ ಹತ್ತಿರ ತೋರೆಕಾಡನಹಳ್ಳಿ ಎಂಬಲ್ಲಿ ಚೆಕ್‍ಡ್ಯಾಂ ನಿರ್ಮಿಸಲು ಕೂಡ ಒಡೆಯರ್‍ರವರು ಆಲೋಚಿಸಿದರು. ಹಾಗೆಯೇ ಅದರ ನಿರ್ಮಾಣ ಕೂಡ ಆಯಿತು ಆದರೆ ಕೆಲವೇ ಅಡಿಗಳಷ್ಟಿದ್ದ ಚೆಕ್‍ಡ್ಯಾಂ ನೀರು ಏನೇನಕ್ಕು ಸಾಲುತ್ತಿರಲಿಲ್ಲ. ಕಡೆಗೆ ಚಿನ್ನದ ಗಣಿಗೆ ವಿದ್ಯುತ್ ಪೂರೈಕೆ ಮಾಡಲೇಬೇಕಾದ ಒತ್ತಡಕ್ಕೆ ಸಿಲುಕಿದ ಅವರು 1904 ರಲ್ಲಿ ಜೋಗ್ ಬಳಿ ವಿದ್ಯುತ್ ಉತ್ಪಾದನೆ ಮಾಡಲು ಅನುಮತಿ ಕೋರಿ ಅಂದಿನ ಬ್ರೀಟಿಷ್ ವೈಸ್ ರಾಯ್ ಲಾರ್ಡ ಕರ್ಜನ್‍ರವರಿಗೆ ಪತ್ರ ಕೂಡ ಬರೆದರು.

ಆದರೆ ಪರಿಸರದ ನೆಪ ಒಡ್ಡಿ ಕರ್ಜನ್ ಅದಕ್ಕೆ ಅನುಮತಿ ನೀಡಲಿಲ್ಲ. ಕಡೆಗೆ ಬೇರಾವ ದಾರಿ ಕಾಣದೆ ಒಡೆಯರ್‍ರವರು ಜೋಗ್‍ನಲ್ಲಿ ವಿದ್ಯುತ್ ಉತ್ಪತ್ತಿ ಮಾಡುವ ಆಲೋಚನೆ ಕೈಬಿಟ್ಟು ಶಿವನಸಮುದ್ರಕ್ಕೆ ನಿರಂತರ ನೀರು ಒದಗಿಸುವ ದಿಕ್ಕಿನಲಿ ಮತ್ತೆ ಆಲೋಚನೆಗಿಳಿದರು. ಈ ಸಂಧರ್ಭದಲ್ಲಿ ಅವರ ಆ ಆಲೋಚನೆಗೆ ಆಗ ಕೈ ಜೋಡಿಸಿದ್ದು ಆಗಿನ ಮೈಸೂರು ಪ್ರಾಂತ್ಯದ ಮುಖ್ಯ ಇಂಜಿನಿಯರ್ ಆಗಿದ್ದ ಮ್ಯಾಕ್ ಹಚ್‍ರವರು.

ಅಂದಹಾಗೆ ಮಹಾರಾಜರ ಆ ಆಲೋಚನೆಗೆ ಇಂಬು ಕೊಡಲೆಂಬಂತೆ 120 ವರ್ಷಗಳ ಹಿಂದೆ ಟಿಪ್ಪು ಸುಲ್ತಾನ್ ಕಾವೇರಿ ನದಿಗೆ ಅಡ್ಡಲಾಗಿ ಕನ್ನಂಬಾಡಿ ಎಂಬಲ್ಲಿ ಅಣೆಕಟ್ಟೆ ನಿರ್ಮಿಸಲು ಯೋಜನೆ ರೂಪಿಸಿ ಶಂಕು ಸ್ಥಾಪನೆಗೈದಿರುವ ಹಳೆ ಕಡತವೊಂದು ಅವರ ಕಣ್ಣಿಗೆ ಬಿತ್ತು.

ಈ ನಿಟ್ಟಿನಲ್ಲಿ ಶಿವನಸಮುದ್ರದ ವಿದ್ಯುತ್ ಕೇಂದ್ರಕ್ಕೆ ತಕ್ಷಣ ಮತ್ತು ಶಾಶ್ವತ ಪರಿಹಾರವಾಗಿ, ನಿರಂತರ ನೀರು ಒದಗಿಸಲು ಇದೇ ತಕ್ಕ ಯೋಜನೆ ಎಂದು ಪರಿಗಣಿಸಿದ ಅವರು ಟಿಪ್ಪು ಸುಲ್ತಾನನ ಕನಸಿನ ಯೋಜನೆಗೆ ಮರು ಜೀವ ನೀಡಲು ತಮ್ಮ ಇಂಜಿನಿಯರ್ಗಳ ತಂಡಕ್ಕೆ ಸೂಚಿಸಿದರು. ಅಂದಹಾಗೆ ಅಣೆಕಟ್ಟು ಕಟ್ಟಲು ಒಡೆಯರ್‍ರವರು ಸೂಚನೆ ನೀಡಿದ(1906) ಇಂಜಿನಿಯರ್‍ಗಳ ಆ ತಂಡದಲ್ಲಿ ವಿಶ್ವೇಶ್ವರಯ್ಯನವರಿರಲಿಲ್ಲ! ಅಥವಾ ಮೈಸೂರು ಸಂಸ್ಥಾನಕ್ಕೆ ವಿಶ್ವೇಶ್ವರಯ್ಯನವರ ಆಗಮನ ಇನ್ನು ಆಗೇ ಇರಲಿಲ್ಲ!

ಇರಲಿ, ಕನ್ನಂಬಾಡಿಯಲ್ಲಿ ಅಣೆಕಟ್ಟೆಯನ್ನೇನೊ ಕಟ್ಟಲು ಮಹಾರಾಜರು ನಿರ್ಧರಿಸಿದರು. ಆದರೆ ಬ್ರಿಟಿಷ್ ರೆಸಿಡೆಂಟರಿಂದ ಅವರಿಗೆ ಸಿಕ್ಕಿದ್ದು ಕೇವಲ 70 ಅಡಿ ಎತ್ತರ ಕಟ್ಟಲು ಹಾಗೂ 60ಅಡಿ ನೀರು ಸಂಗ್ರಹಿಸಲು ಮಾತ್ರ. ಈ ನಿಟ್ಟಿನಲಿ ಬ್ರೀಟಿಷರ ನಿಲುವನ್ನು ಮಹಾರಾಜರು ಸುತಾರಾಂ ತಿರಸ್ಕರಿಸಿದರು.

ಈ ನಡುವೆ ಬ್ರೀಟಿಷರು ಮತ್ತೊಂದು ಕಂಡೀಷನ್ ಹಾಕಿದರು. ಅದೇನೆಂದರೆ ಕೆ.ಆರ್.ಎಸ್ ನೀರನ್ನು ವಿದ್ಯುತ್ ಉತ್ಪಾದನೆಗೆ ಮಾತ್ರ ಬಳಸಬೇಕು, ಹಾಗೆಯೇ ಹಾಗೆ ಉತ್ಪತ್ತಿಯಾದ ವಿದ್ಯುತ್ತಿನಲ್ಲಿ ಚಿನ್ನದಗಣಿಗೆ ಸಾಗಿಸಿ ಉಳಿದ ವಿದ್ಯುತ್ತನ್ನು ತಮ್ಮ ನೇರ ಆಳ್ವಿಕೆಗೆ ಒಳಪಟ್ಟಿದ್ದ ಮದ್ರಾಸ್ ಮತ್ತು ಕೊಯಮತ್ತೂರಿಗೆ ಒದಗಿಸಬೇಕು ಎಂಬುದೇ ಆ ಕಂಡೀಷನ್. ಆದರೆ ಈ ಕಂಡೀಷನ್‍ಗೆ ಸಹ ಒಡೆಯರ್ ಜಗ್ಗಲಿಲ್ಲ. ಬದಲಿಗೆ ಕೃಷಿಗೆ ವಿದ್ಯುತ್ ಮತ್ತು ನೀರು ಒದಗಿಸುವ ತಮ್ಮ ನಿಲುವಿಗೆ ಅವರು ಕಟಿಬದ್ಧರಾದರು.

ಅಂತಿಮವಾಗಿ ಮಹಾರಾಜರ ಈ ನಿಲುವಿಗೆ ಬ್ರಿಟೀಷರು ತಲೆಬಾಗಿ ಅಣೆಕಟ್ಟೆಯ ಎತ್ತರ ಹೆಚ್ಚಿಸಲು ಸಮ್ಮತಿಸಿದರು. 90ಅಡಿ ಎತ್ತರ ಮತ್ತು 80ಅಡಿ ನೀರು ಸಂಗ್ರಹಿಸಲು ಮತ್ತು ಮುಂದೆ ವಿಸ್ತರಿಸಬಹುದಾದ ಅವಕಾಶ ನೀಡಿ ಒಪ್ಪಿಗೆ ನೀಡಿದರು. ಈ ಸಂಧರ್ಭದಲ್ಲಿ ಬ್ರಿಟಿಷ್ ರೆಸಿಡೆಂಟರಿಂದ ಒಪ್ಪಿಗೆ ಸಿಕ್ಕಿದ್ದೆ ತಡ ಮುಖ್ಯ ಇಂಜಿನಿಯರ್ ಮ್ಯಾಕ್ ಹಚ್ ಮತ್ತವರ ತಂಡ ಜಲಾಶಯದ ನಿರ್ಮಾಣಕ್ಕೆ ಕಾರ್ಯೋನ್ಮುಖವಾಯಿತು. ಅಂದಹಾಗೆ ಜಲಾಶಯ ನಿರ್ಮಾಣದ ಪ್ರಾಥಮಿಕ ತಯಾರಿ ನಡೆದ ಈ ಸಂಧರ್ಭದಲ್ಲಿಯೂ ಕೂಡ ವಿಶ್ವೇಶ್ವರಯ್ಯನವರಿರಲಿಲ್ಲ!

ಇನ್ನು ಅದು 1908ರ ಅಂತ್ಯದ ಸಮಯ. ಮುಖ್ಯ ಇಂಜಿನಿಯರ್ ಮ್ಯಾಕ್ ಹಚ್ ಸೇವೆಯಿಂದ ನಿವೃತ್ತರಾದರು. ಸ್ವಾಭಾವಿಕವಾಗಿ ತೆರವುಗೊಂಡ ಆ ಸ್ಥಾನಕ್ಕೆ ಕ್ಯಾಪ್ಟನ್ ಡೇವಿಸ್‍ರವರು ಮುಖ್ಯ ಇಂಜಿನಿಯರಾಗಿ ನೇಮಕಗೊಂಡರು ಹಾಗೆಯೆ ಕನ್ನಂಬಾಡಿ ಬಳಿ ನದಿಗೆ ಅಡ್ಡಲಾಗಿ ಮರಳು ಮೂಟೆಗಳನ್ನಿಟ್ಟು ಅದರ ಪಾತ್ರವನ್ನು ಬದಲಿಸುª ಹಚ್‍ರವರ ಕಾಮಗಾರಿಯನ್ನು ಡೇವಿಸ್‍ರವರು ಮುಂದುವರೆಸಿದರು.

ದುರಂತವೆದಂರೆ 1909ರ ಮೇ-ಜೂನ್ ಮುಂಗಾರಿನ ತಿಂಗಳು. ನದಿಯ ಪ್ರವಾಹ ಉಕ್ಕಿ ನದಿಗೆ ಅಡ್ಡಲಾಗಿ ಕಟ್ಟಿದ್ದ ಮರಳು ಮೂಟೆಗಳೆಲ್ಲವು ಪ್ರವಾಹಕ್ಕೆ ಕೊಚ್ಚಿ ಹೋದವು. ಇದನ್ನು ತಡೆಯುವ ನಿಟ್ಟಿನಲ್ಲಿ ರಾತ್ರೋರಾತ್ರಿ ತೆಪ್ಪಗಳೊಂದಿಗೆ ಕಾರ್ಮಿಕರ ಜೊತೆ ಕಾರ್ಯಾಚರಣೆಗೆ ಇಳಿದ ಕ್ಯಾ.ಡೇವಿಸ್ ತನ್ನ ಸಹಪಾಠಿ ಕಾರ್ಮಿಕನೋರ್ವನನ್ನು ಉಳಿಸಲು ಹೋಗಿ ನದಿಯ ಪ್ರವಾಹದಲ್ಲಿ ಕೋಚ್ಚಿಹೋದ. ಘಟನೆಯಲ್ಲಿ ಕ್ಯಾ.ಡೇವಿಸ್ ಹಠಾತ್ ಸಾವಿಗೀಡಾದ. ಈ ಕಾರಣದಿಂದಾಗಿ ಮೈಸೂರು ಸಂಸ್ಥಾನದ ಮುಖ್ಯ ಇಂಜಿನಿಯರ್ ಹುದ್ದೆ ಖಾಲಿಬಿದ್ದಿತು.

ಇದೇ ಸಂಧರ್ಭದಲ್ಲಿ ಮೈಸೂರು ಸಂಸ್ಥಾನದಲ್ಲಿ ಒಳಗೊಳಗೆ ಮತ್ತೊಂದು ಹೋರಾಟ ಪ್ರಾರಂಭವಾಗಿತ್ತು. ಅದು ಮೈಸೂರು ಮೈಸೂರಿಗರಿಗೆ ಎಂಬ ಹೋರಾಟ. ಅಂದರೆ ಮೈಸೂರು ಪ್ರಾಂತ್ಯದಲ್ಲಿದ್ದ ಮದ್ರಾಸಿ ಅಧಿಕಾರಿಗಳನ್ನು ಓಡಿಸುವ ಹೋರಾಟವದು. ಈ ಹೋರಾಟ ಕಾವು ಪಡೆದುಕೊಳ್ಳುತ್ತಿದ್ದಂತೆ ಇದನ್ನು ಶಮನಮಾಡುವ ನಿಟ್ಟಿನಲಿ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್‍ರವರು ಚಿಂತನೆಗಿಳಿದರು ಹಾಗೆಯೇ ಅದೇ ಸಮಯದಲ್ಲಿ ಖಾಲಿಯಾದ ಮುಖ್ಯ ಇಂಜಿನಿಯರ್ ಹುದ್ದೆಗೆ ಬೇರೋಬ್ಬರನ್ನು ನೇಮಿಸಬೇಕಾದ ಅನಿವಾರ್ಯತೆ ಕೂಡ ಅವರಿಗೆ ಎದುರಾಯಿತು.

ಇಂಜಿನಿಯರ್ ನೇಮಕ ಮತ್ತು ಮೈಸೂರು ಮೈಸೂರಿಗರಿಗೆ ಎಂಬ ಎರಡೂ ಬೇಡಿಕೆಯ ಹಿನ್ನೆಲೆಯಲ್ಲಿ ಮಹಾರಾಜರು ದೂರದ ಮುಂಬಯಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೈಸೂರು ಸಂಸ್ಥಾನದವರೆ ಆದ ವಿಶ್ವೇಶ್ವರಯ್ಯರವರನ್ನು ಮುಖ್ಯ ಇಂಜಿನಿಯರ ಹುದ್ದೆಗೆ ನೇಮಿಸಿಕೊಂಡರು. ಈ ನಿಟ್ಟಿನಲಿ ಮಹಾರಾಜರ ಆದೇಶದ ಮೇರೆಗೆ 1909ರ ಅಂತ್ಯದಲ್ಲಿ ವಿಶ್ವೇಶ್ವರಯ್ಯನವರು ಮೈಸೂರು ಸಂಸ್ಥಾನಕ್ಕೆ ಪ್ರವೇಶ ಪಡೆದುಕೊಂಡರು!

ಅಂದಹಾಗೆ ಅವರು ಹಾಗೆ ಸಂಸ್ಥಾನಕ್ಕೆ ಸೇವೆಗೆ ಪ್ರವೇಶಪಡೆಯುತ್ತಿದ್ದಂತೆ ಇಂಜಿನಿಯರರಾದ ಅವರ ಹೆಗಲ ಮೇಲೆ ಸಂಸ್ಥಾನದ ಎಲ್ಲ ನಿರ್ಮಾಣದ ಕಾಮಗಾರಿಗಳ ಹೊರೆಯು ಬಿತ್ತು. ಹಾಗೆಯೆ ಕೆ.ಆರ್.ಎಸ್ ನಿರ್ಮಾಣ ಕಾಮಗಾರಿ ಕೂಡ. ಯಾಕೆಂದರೆ ಮೊದಲೇ ತಿಳಿಸಿದ ಹಾಗೆ ಅದಾಗಲೆ ಜಲಾಶಯ ನಿರ್ಮಾಣದ ಪ್ರಾಥಮಿಕ ಕಾರ್ಯಗಳು ಜಾರಿಯಲ್ಲಿತ್ತು. ಈ ನಿಟ್ಟಿನಲಿ ಇದಕ್ಕೆ ಸಾಕ್ಷಿ ಬೇಕೆನ್ನುವವರು ಸ್ವತಃ ವಿಶ್ವೇಶ್ವರಯ್ಯನವರೆ ತಮ್ಮ ಆತ್ಮಕಥೆ “ನನ್ನ ವೃತ್ತಿ ಜೀವನದ ನೆನಪುಗಳು “ ಕೃತಿಯಲ್ಲಿ ನಾನು ಬರುವುದಕ್ಕೆ ಮೊದಲೆ ಶ್ರೀರಂಗಪಟ್ಟಣದಿಂದ 10 ಮೈಲು ದೂರದಲ್ಲಿ ಕಾವೇರಿ ನದಿಯ ಪಶ್ಚಿಮ ದಂಡೆ ಮೇಲೆ ಕನ್ನಂಬಾಡಿ ಎಂಬಲ್ಲಿ ಅಣೆಕಟ್ಟೆ ನಿರ್ಮಾಣದ ಕಾಮಗಾರಿ ನೆಡೆದಿತ್ತು. ಎಂದು ಬರೆದಿರುವುದನ್ನು ಗಮನಿಸಬಹುದು.

ಆ ಮೂಲಕ ಪ್ರಾಮಾಣಿಕವಾಗಿ ಸ್ವತಃ ಸರ್.ಎಂ.ವಿ.ರವರೆ ಜಲಾಶಯದ ನಿರ್ಮಾಣದ ಕಾಮಗಾರಿ ತನ್ನ ಆಗಮನಕ್ಕೂ ಮೊದಲೇ ಪ್ರಾರಂಭಗೊಂಡಿತ್ತೆಂಬುದನ್ನು ಸೂಚಿಸಿದ್ದಾರೆ. ಒಟ್ಟಾರೆ ಈ ನಿಟ್ಟಿನಲಿ ಹೇಳುವುದಾದರೆ ಕೆ.ಆರ್.ಎಸ್ ವಿಶ್ವೇಶ್ವರಯ್ಯನವರ ಕನಸಿನ ಕೂಸಂತು ಅಲ್ಲ. ಟಿಪ್ಪು ಕನಸಿದ್ದನ್ನು ನಾಲ್ವಡಿರವರು ಕಾರ್ಯರೂಪಕ್ಕೆ ತಂದ ಸಂದರ್ಭದಲ್ಲಿ ಮಧ್ಯ ಇಂಜಿನಿಯರರಾಗಿ ನೇಮಕಗೊಂಡು ಅವರು ಕೆಲಸ ಮುಂದುವರೆಸಿದ್ದಾರೆ ಅಷ್ಟೆ!

ಈ ನಿಟ್ಟಿನಲ್ಲಿ ಇಂಜಿನಿಯರ್ ಕ್ಯಾ.ಡೇವಿಸ್ ಏನಾದರು ಸಾಯದಿದ್ದರೆ ವಿಶ್ವೇಶ್ವರಯ್ಯನವರು ಮೈಸೂರು ಸಂಸ್ಥಾನಕ್ಕೆ ಬರುತ್ತಿರಲೇ ಇರಲಿಲ್ಲ. ಹಾಗೆಯೇ ಕೆ.ಆರ್.ಎಸ್ ನಿರ್ಮಾಣದ ಶ್ರೇಯಸ್ಸು ಅವರ ಹೆಸರಿಗೆ ಹೈಜಾಕ್ ಆಗುವುದು ಕೂಡ ನೆಡೆಯುತ್ತಿರಲಿಲ್ಲ. ಕ್ಯಾ.ಡೇವಿಸ್ ಸದ್ದಿಲ್ಲದೆ ಸಂಬಳಪಡೆದು ಕಾಮಗಾರಿ ಮುಗಿಸುತ್ತಿದ್ದ!

ಇರಲಿ, ಈ ನಡುವೆ ಮಹಾರಾಜರ ವಿಶ್ವಾಸ ಸಂಪಾದಿಸಿದ ವಿಶ್ವೇಶ್ವರಯ್ಯನವರು ಮೈಸೂರು ಮೈಸೂರಿಗರಿಗೆ ಎಂಬ ತತ್ವದ ಅಡಿಯಲ್ಲಿ ದಿವಾನ ಹುದ್ದೆಗೂ ಕೂಡ ನೇಮಿಸಲ್ಪಟ್ಟರು. ಅಂದಹಾಗೆ ಆಗ ತೆರವಾದÀ ಮುಖ್ಯ ಇಂಜಿನಿಯರ್ ಹುದ್ದೆಗೆ ನೇಮಿಸಲ್ಪಟ್ಟವರು ಯಾರು? ಯಾರು ಯಾಕೆ ಅವರ ಹೆಸರು ಹೇಳುವುದಿಲ್ಲ? ಕೆ.ಆರ್.ಎಸ್ ಇತಿಹಾಸದ ದ್ವಂದ್ವವೆಂದರೆ ಇದೇ!

ಇರಲಿ, 1911ರಲ್ಲಿ ನದಿ ಪ್ರವಾಹ ಬದಲಿಸುವ ಕಾರ್ಯ ಮುಗಿದು ಜಲಾಶಯದ ಕಟ್ಟಡ ಕಾಮಗಾರಿ ಪ್ರಾರಂಭ ವಾಯಿತು. ಈನಿಟ್ಟಿನಲ್ಲಿ 2ಕೋಟಿ 70ಲಕ್ಷ ಬಜೆಟ್ಟಿನ ಈ ಯೋಜನೆ ಹಣದ ಕೊರತೆಯನ್ನೆದುರಿಸಿತು. ಯಾಕೆಂದರೆ ಮೈಸೂರು ರಾಜ್ಯದ ಅಂದಿನ ಒಟ್ಟು ಬಜೆಟ್ಟೆ 2ಕೋಟಿ 30ಲಕ್ಷ. ಹೀಗಿರುವಾಗ ಜಲಾಶಯಕ್ಕಾಗಿ 2ಕೋಟಿ 70ಲಕ್ಷ ತರುವುದು?

ಅಂದಹಾಗೆ ಈ ಸಂಧರ್ಭದಲ್ಲಿ ಧೃತಿಗೆಡದ ಮಹಾರಾಜ ನಾಲ್ವಡಿಯವರು ತಮ್ಮ ತಾಯಿ ಮತ್ತು ತಮ್ಮ ಧರ್ಮಪತ್ನಿಯವರಿಗೆ ಸೇರಿದ 4 ಮೂಟೆ ವಜ್ರಾಭರಣಗಳನ್ನು ಮುಂಬೈ ಚಿನಿವಾರ ಪೇಟೆಯಲ್ಲಿ ಮಾರಾಟ ಮಾಡಿ ಹಣ ಒದಗಿಸಿದರು. ಅಂದಹಾಗೆ ಅಣೆಕಟ್ಟು ನಿರ್ಮಾಣಕ್ಕೆ ಮಹಾರಾಜರು ಒದಗಿಸಿದ ಆ 2ಕೋಟಿ 70ಲಕ್ಷ ರೂಗಳಲ್ಲಿ ಮುಖ್ಯ ಇಂಜಿನಿಯರ್ ವಿಶ್ವೇಶ್ವರಯ್ಯನವರ ಸಂಬಳವೂ ಕೂಡ ಸೇರಿತ್ತು!

ಇರಲಿ, ಮೊದಲೆ ಹೇಳಿದಹಾಗೆ ವಿಶ್ವೇಶ್ವರಯ್ಯನವರು ದಿವಾನರಾದ ನಂತರ ಬೇರೊಬ್ಬರು ಮುಖ್ಯ ಇಂಜಿನಿಯರರಾಗಿ ನೇಮಕಗೊಂಡರು. ಬಳಿಕ ಆ ಹೊಸ ಇಂಜಿನಿಯರ್ ಕೆ.ಆರ್. ಎಸ್ ನಿರ್ಮಾಣದ ಕಾಮಗಾರಿ ಮುಂದುವರೆಸಿದರು. ಅಂದಹಾಗೆ ಜಲಾಶಯದಲ್ಲಿ ಈಗಲೂ ಕೆ.ಆರ್.ಎಸ್. ನಿರ್ಮಾಣದಲ್ಲಿ ಕಾರ್ಯನಿರ್ವಹಿಸಿದ 50ಕ್ಕೂ ಹೆಚ್ಚು ಇಂಜಿನಿಯರ್‍ಗಳ ಹೆಸರನ್ನೊಳಗೊಂಡ ನಾಮಫಲಕವಿದೆ. ಅದರಲ್ಲಿ ವಿಶ್ವೇಶ್ವರಯ್ಯ ಒಬ್ಬರಷ್ಟೆ. ಬರೀ ವಿಶ್ವೇರಯ್ಯರವರೊಬ್ಬರೇ ಅಲ್ಲ!

ಅಂದಹಾಗೆ ಕೆಆರ್‍ಎಸ್‍ನ ಕಾಮಗಾರಿ ಹೀಗೆ ಮುಂದುವರಿದಿರಬೇಕಾದರೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೊಡುವುದನ್ನು ವಿರೋಧಿಸುವ ನಿಟ್ಟಿನಲ್ಲಿ ವಿಶ್ವೇಶ್ವರಯ್ಯನವರು ಮಹಾರಾಜರ ಜೊತೆ ವಿಶ್ವಾಸಕೆಡಿಸಿಕೊಂಡರು. ಯಾಕೆಂದರೆ ಮೀಸಲಾತಿ ನೀಡುವುದರಿಂದ ಪ್ರತಿಭೆಗಳಿಗೆ ಮೊಸವಾಗುತ್ತದೆ ಎಂಬ ತಮ್ಮನಿಲುವಿಗೆ ಅಂಟಿಕೊಂಡ ವಿಶ್ವೇಶ್ವರಯ್ಯನವರು ಒಬಿಸಿ ಮೀಸಲಾತಿಗೆ ಕಟಿಬದ್ಧರಾದ ಮಹಾರಾಜರ ಕೆಂಗಣ್ಣಿಗೆ ಗುರಿಯಾದರು. ತತ್ಪರಿಣಾಮವಾಗಿ ಅವರು ದಿವಾನ ಹುದ್ದೆಗೆ ರಾಜೀನಾಮೆ ಕೊಡಬೇಕಾಗಿ ಬಂತು ಮತ್ತು ಆಗ ಇಸವಿ 1918!

ಹೌದು, ಕೆ.ಆರ್.ಎಸ್. ಕಟ್ಟಡ ಕಾಮಗಾರಿ ಪ್ರಾರಂಭ ವಾದದ್ದು 1911ರಲ್ಲಿ, ಮತ್ತೆ ಅದು ಹಾಗೆಯೇ ಮುಂದುವರೆದಿತ್ತು. ಪ್ರಶ್ನೆಯೇನೆಂದರೆ 1918ರಲ್ಲಿ ಸರ್.ಎಂ.ವಿ.ರವರು ರಾಜೀನಾಮೆ ಇತ್ತಾಕ್ಷಣ ಕಾಮಗಾರಿ ನಿಂತು ಹೋಯಿತೆ ಎಂಬುದು? ಖಂಡಿತ ಇಲ್ಲ! ಯಾಕೆಂದರೆ ಅದರ ನಿಜವಾದ ನಿರ್ಮಾತೃ ನಾಲ್ವಡಿಕೃಷ್ಣರಾಜ ಒಡೆಯರ್‍ರವರು ಅದಕ್ಕಾಗಿ ಉಸಿರು ಹಿಡಿದುಕೊಂಡು ಇದ್ದರಲ್ಲ!

ಈ ಸಂಧರ್ಭದಲಿ ಮತ್ತೊಂದು ಆಕ್ಷೇಪಣೆ ಅದೇನೆಂದರೆ ಕೆ.ಆರ್.ಎಸ್ ನಿರ್ಮಾಣವೇ ವಿಶ್ವೇಶ್ವರಯ್ಯನ್ನವರ ಧ್ಯೇಯವಾಗಿದ್ದರೆ ಅವರು ರಾಜೀನಾಮೆ ನೀಡಬಾರದಿತ್ತು! ಕೆ.ಆರ್.ಎಸ್ ಕಟ್ಟಿಯೇ ನಾನು ಹೋಗುವುದು ಎಂದು ಅವರು ಹೇಳಬೇಕಿತ್ತು! ಊಹ್ಞೂಂ, ಅದ್ಯಾವುದೂ ನಡೆದಿಲ್ಲ! ವಿಶ್ವೇಶ್ವರಯ್ಯನವರು ರಾಜೀನಾಮೆ ಇತ್ತು ಹೋದರು ಜಲಾಶಯದ ಕಾಮಗಾರಿ ಅದರ ಪಾಡಿಗೆ ಅದು ನಡೆದಿತ್ತು!

ಈ ನಿಟ್ಟಿನಲಿ ವಿಶ್ವೇಶ್ವರಯ್ಯನವರ ರಾಜೀನಾಮೆಯ ನಂತರ ಅವರು ನಂತರದ ದಿವಾನರುಗಳಿಗೆ ಸಹಾಯಕರಾದದ್ದಾಗಲಿ ಸಲಹೆಗಾರರಾದದ್ದಾಗಲಿ ಎಂಥದ್ದು ಇಲ್ಲ! ಕಡೆ ಪಕ್ಷ ಅಲ್ಲಿ ಗಾರೆ ಕೆಲಸ ಮಾಡುತ್ತಿದ್ದವರಿಗೆ ಮೇಸ್ತ್ರಿಯಾಗಿಯಾದರೂ ಅವರಿದ್ದರೆ? ಉಹ್ಞೂಂ, ಅದೂ ಇಲ್ಲ! ಹಾಗಿದ್ದರೆ ಅದರ ನಿರ್ಮಾಣದ ಶ್ರೇಯಸ್ಸು ಅವರಿಗ್ಹೇಗೆ ಸಂದಿತು ಎಂಬುದು? ಯಾಕೆಂದರೆ ಅವರು ರಾಜೀನಾಮೆ ನೀಡಿದ 14 ವರ್ಷಗಳ ನಂತರ ಅಂದರೆ 1932 ರಲ್ಲಿ ಕಾಮಗಾರಿ ಮುಗಿದದ್ದು. ಅಂದಹಾಗೆ ಅಗಲೂ ಕೂಡ ನಾಲ್ವಡಿಯವರು ರಾಜರಾಗಿ ಮುಂದುವರಿದಿದ್ದರು ಮತ್ತು ತಾವು ಪ್ರಾರಂಭಿಸಿದ ಯೋಜನೆಯನ್ನು ತಾವೇ ತಮ್ಮ ಕೈಯಾರ ಉದ್ಘಾಟಿಸಿದರು.

ದುರಂತವೆಂದರೆ ಅದರ ಶ್ರೇಯಸ್ಸು ಅವರಿಗೆ ಸಲ್ಲಲಿಲ್ಲ! ಅವರ ಕೈ ಕೆಳಗೆ ವೇತನಕ್ಕಾಗಿ ದುಡಿದವರೊಬ್ಬರಿಗೆ ಅದು ಸಂದಿತು! ಸತ್ಯ ಹೀಗಿರುವಾಗ, ಇತಿಹಾಸದಲ್ಲಿ ನಾಲ್ವಡಿಯವರಿಗೆ ಘಟಿಸಿರುವ ಇಂತಹ ಘೋರತೆಗೆ ಯಾರು ಹೊಣೆ? ನಮ್ಮ ಕಣ್ಣೆದುರೇ ಒಬ್ಬ ಶ್ರೇಷ್ಠ ರಾಜನಿಗೆ ಅವನ ಸಾಧನೆಯ ಶ್ರೇಷ್ಠತೆ ಧಕ್ಕಲಿಲ್ಲವೆಂದರೆ? ಹಾಗಿದ್ದರೆ ತನ್ನ ತನು ಮನ ಧನವನ್ನೆಲ್ಲ ಧಾರೆ ಎರೆದು ಆತ ಮಾಡಿದ ತ್ಯಾಗಕ್ಕೆ ಬೆಲೆಯಾದರೂ ಎಲ್ಲಿದೆ? ನಾಲ್ವಡಿಯವರಿಗೆ ಯಾರು ಇಂಥ ದ್ರೋಹ ಎಸಗಿದ್ದು? ವಿಶ್ವೇಶ್ವರಯ್ಯನವರಂತು ಖಂಡಿತ ಅಲ್ಲ. ಕಪೋಲಕಲ್ಪಿತ ಕಥೆ ಕಟ್ಟಿದ ಅವರ ಅನುಯಾಯಿಗಳು. ಹಾಗೆ ಬಂಗಾರ ಮನುಷ್ಯ ಚಿತ್ರದಲ್ಲಿ “ಕಾವೇರಿಯನು ಹರಿಯಲು ಬಿಟ್ಟು ವಿಶ್ವೇಶ್ವರಯ್ಯ ಶ್ರಮಪಡದಿದ್ದರೆ..” ಎಂಬ ಅಂತಹದ್ದೊಂದು ಆಘಾತಕಾರಿ ಸಾಹಿತ್ಯ ಬರೆಸಿದ ಆ ನಿರ್ಮಾಪಕ ಹಾಗು ಬರೆದ ಆ ಕವಿ!

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಬಹಿರಂಗ

ಜಾರ್ಜ್ ಫ್ಲಾಯ್ಡ್ ಮತ್ತು ಇಂಡಿಯನ್ ಹಿಪಾಕ್ರಸಿ

Published

on

  • ಸಿದ್ದು ಸತ್ಯಣ್ಣನವರ್

ತ ಅಟ್ಲಿ ಅಂತಲೇ ಪ್ರಸಿದ್ಧ. ಪೂರ್ಣ ಹೆಸರು ಅಟ್ಲಿ ಕುಮಾರ್. ಕಪ್ಪು ಮೈ ಬಣ್ಣದವ. ಹೆಸರಾಂತ ತಮಿಳು ಸಿನೆಮಾ ನಿರ್ದೇಶಕ. ಆತನ ಮೈ ಬಣ್ಣ, ಪ್ರೇಮಿಸಿ ಮದುವೆಯಾದ ಆತನ ಪತ್ನಿ ಕೃಷ್ಣಪ್ರಿಯಾಳಿಗೆ ಎಂದೂ ಸಮಸ್ಯೆಯಾಗಲಿಲ್ಲ. ಆದರೆ ನಮ್ಮ ಕೆಲ ಜನರಿಗೆ ಮಾತ್ರ ಅದು ಬಹಳ ದೊಡ್ಡ ಸಮಸ್ಯೆಯಾಗಿ ಕಾಡಿತು. ಅಟ್ಲೀ ನಿಜವಾಗಲೂ ಕಡು ಕಪ್ಪು.

ನಿರ್ದೇಶಕನಾಗುವ ಮೊದಲು ಸಹ ನಿರ್ದೇಶಕನಾಗಿದ್ದಾಗಲೂ ಚಿತ್ರರಂಗದ ಚಿಳ್ಳೆ ಮಿಳ್ಳೆಗಳೆಲ್ಲ ಆತನನ್ನು ಬಣ್ಣದ ಕಾರಣಕ್ಕೆ ಹೀಯಾಳಿಸಿದ್ದುಂಟು. ಹಾಗಂತ ಅಟ್ಲಿಯೇನೂ ಸಾಮಾನ್ಯನಲ್ಲ. ‘ರೋಬೋಟ್’ ದಂತಹ ಸಿನೇಮಾ ನಿರ್ದೇಶಿಸಿದ ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಗೆ ಸಹ ನಿರ್ದೇಶಕನಾಗಿದ್ದವನು. ಅಟ್ಲೀ ತನ್ನ ಮುಗ್ಧತೆಯಿಂದಲೇ ರಜನೀಕಾಂತ್ ಆಪ್ತವಲಯದಲ್ಲಿರುವವನು.

ರಜನಿಕಾಂತ್ ಇಂಥ ಅಟ್ಲಿಯ ಮದುವೆಗೆ ಹಾರೈಸಿ, ಈತನ ಸಿನೀಮಾ ಮುಹೂರ್ತಕ್ಕೂ ಹೋಗಿ ಕ್ಲಾಪ್ ಮಾಡಿದ್ದರು. ಭಾವುಕ ಹಾಗೂ ತೆಳು ನಿರೂಪಣೆಯ ಅಟ್ಲಿ ನಿರ್ದೇಶನದ ಸಿನಿಮಾಗಳ ಬಗ್ಗೆ ನನಗೆ ತಕರಾರಿದೆ. ಅದು ನನ್ನ ವೈಯಕ್ತಿಕ ಅಭಿಪ್ರಾಯ. ಆದರೆ, ಅಟ್ಲಿ ನಿರ್ದೇಶಿಸಿದ ‘ಮೆರ್ಸಲ್’ ಚಿತ್ರದಲ್ಲಿ ಜಿಎಸ್ ಟಿ ಕುರಿತಾದ ಸಂಭಾಷಣೆ ದೆಹಲಿವರೆಗೂ ಸದ್ದು ಮಾಡಿತ್ತು.

ದೊಡ್ಡ ವಿವಾದ ಸೃಷ್ಟಿಸಿತ್ತು. ‘ಮೆರ್ಸಲ್’ ಹೊರತುಪಡಿಸಿ ಆತನ ‘ರಾಜ ರಾಣಿ’, ‘ಥೇರಿ’, ‘ಬಿಗಿಲ್’ ಸಿನಿಮಾಗಳೆಲ್ಲ ಯಶಸ್ಸು ಕಂಡಂಥವೇ. ಇದರಲ್ಲಿ ಮೆರ್ಸಲ್ ಚಿತ್ರ 2017ರಲ್ಲಿ 251 ಕೋಟಿ ಗಳಿಸಿದರೆ, ‘ಬಿಗಿಲ್’ ಸಿನಿಮಾ ಗಳಿಸಿದ್ದು ಬರೋಬ್ಬರಿ 300 ಕೋಟಿಗೂ ಅಧಿಕ. ‘ರಾಜ ರಾಣಿ’ ‘ಥೇರಿ’ ಗಳಿಕೆಯೇನು ಸಣ್ಣದಲ್ಲ.

ಅಟ್ಲಿಯ ಮೈ ಬಣ್ಣದ ಕಾರಣಕ್ಕೆ ಆತನ ಯಶಸ್ಸನ್ನು ನೋಡದೆ, ಜನ ಆತನನ್ನು ಕಾಡಿಸಿದ್ದು ಅಷ್ಟಿಷ್ಟಲ್ಲ. ಕೊನೆಗೂ ಆತನ ಮದುವೆಯ ಫೋಟೊ ಸಹ ದೊಡ್ಡ ಮಟ್ಟದ ಟ್ರೋಲಿಗೆ ತುತ್ತಾಯಿತು. ಅದೊಂದು ದಂಪತಿಗಳ ಫೋಟೊ. ಅದರಲ್ಲಿ ಕಪ್ಪು ಮೈ ಬಣ್ಣದ ಅಟ್ಲಿ ಜೊತೆ, ಪಕ್ಕದಲ್ಲಿ ಆತನನ್ನು ಪ್ರೇಮಿಸಿ ಮದುವೆಯಾದ ಕೃಷ್ಣಪ್ರಿಯಾ ಇದ್ದಳು.

ಅವರಿಬ್ಬರ ಬಣ್ಣದಲ್ಲಿದ್ದ ವ್ಯತ್ಯಾಸವೇ ನಮ್ಮ ಜನರಿಗೆ ದೊಡ್ಡದಾಯಿತು. ಎಷ್ಟೋ ವರ್ಷ ಅಟ್ಲಿಯನ್ನು ನಿಷ್ಕಾರಣವಾಗಿ ಪ್ರೀತಿಸಿದ ಕೃಷ್ಣಕುಮಾರಿಯ ಪ್ರೀತಿಯೂ ಟ್ರೋಲ್ ಮಾಡುವವರಿಗೆ ಕಾಣದಾಯಿತು. ‘ಸರಕಾರಿ ನೌಕರಿ ಇದ್ದರೆ ಸಿಗುವ ಹೆಂಡತಿ’ ಅಂತ ಆ ಫೋಟೊ ಮೇಲೆ ಕೆಳಗೆ ಬರೆದು ಹರಿ ಬಿಡಲಾಯಿತು. ಅಟ್ಲಿ ಇದರಿಂದ ಕುದ್ದರೂ, ನೊಂದರೂ ಅಸಹಾಯಕನಾಗುವುದು ಅನಿವಾರ್ಯವಿತ್ತು.

ಈ ಬಗ್ಗೆ ಸಂದರ್ಶನವೊಂದರಲ್ಲಿ ನಿರೂಪಕಿಯೊಬ್ಬಳು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಆತ ಹೀಗಂದಿದ್ದ ‘ನೋವಾಗಿದೆ. ಆಗುತ್ತದೆ. ಆಗ್ತಲೇ ಇರ್ತದೆ. ನಾನು ಮಾಡುವ ಸಿನಿಮಾಗಿಂತ ಜನರಿಗೆ ನನ್ನ ಬಣ್ಣ ಮುಖ್ಯ ಎನಿಸಿದರೆ ನಾನೇನು ಮಾಡಲಿ? ನಾನು ಸವೆಸಿದ ಹಾದಿ, ತುಳಿದ ಮುಳ್ಳುಗಳ ಗಾಯ, ಒಂದು ಯಶಸ್ಸು ಬೇಡಿದ ಹಲವು ವರ್ಷಗಳ ಶ್ರಮ.

ಇವೆಲ್ಲಕ್ಕಿಂತ ಮೈ ಬಣ್ಣವನ್ನು ಮುಖ್ಯ ಮಾಡಿದ್ರಲ್ಲ?’ ಎಂದು ದೀರ್ಘ ಉಸಿರೆಳೆದುಕೊಂಡು ಸುಮ್ಮನಾಗಿದ್ದ. ಇದೇ ಅಟ್ಲಿಯ ‘ಮೆರ್ಸಲ್’ ಚಿತ್ರದ ವಿವಾದಾತ್ಮಕ ಸಂಭಾಷಣೆ ಭಾಗವನ್ನು ಹಂಚಿಕೊಂಡು ಖುಷಿಪಟ್ಟಿದ್ದ ಎಷ್ಟೋ ಜನರು, ಅದಕ್ಕೂ ಮೊದಲು ಆತನ ಟ್ರೋಲ್ ಪಟವನ್ನು ವಾಟ್ಸಾಪಿನ ತುಂಬ ಪಸರಿಸಿದ್ದರು. ಫೇಸ್ಬುಕ್ಕಿನಲ್ಲೂ ಹಂಚಿಕೊಂಡು ನಕ್ಕಿದ್ದರು.

ಅಮೇರಿಕದ ಬಿಳಿ ಪೊಲೀಸನ ದೌರ್ಜನ್ಯಕ್ಕೆ ತೀರಿಕೊಂಡ ಅಲ್ಲಿಯ ಕಪ್ಪು ವರ್ಣದ ಪ್ರಜೆ ಫ್ಲಾಯ್ಡ್ ನ ಅಸಹಾಯಕ ದನಿ ಆ ವಿಡಿಯೋ ನೋಡಿದಾಗಿಂದ ಕಾಡುತ್ತಲೇ ಇದೆ. ಆ ಸಾವು ಖಂಡಿಸಿ ಅಮೇರಿಕದ 75ಕ್ಕೂ ಹೆಚ್ಚು ನಗರಗಳು ಹೊತ್ತಿ ಉರಿಯುತ್ತಿವೆ. ಕರಿಯ ಅಮೇರಿಕನ್ನರಿಗೆ ಎಷ್ಟೋ ಬಿಳಿ ಅಮೇರಿಕನ್ನರು ಬೆಂಬಲ ಸೂಚಿಸಿ ಬೀದಿಗಿಳಿದಿದ್ದಾರೆ.

ವೈಟ್ ಹೌಸ್ ತನ್ನ ಅಂಗಳದಲ್ಲಿ ಎಂದೂ ಕಾಣದ ದೊಡ್ಡ ಪ್ರತಿಭಟನೆಗೆ ಸಾಕ್ಷಿಯಾಗಿದೆ. ಕೊರೊನಾದಿಂದ ಅಮೇರಿಕದಲ್ಲಿ ಲಕ್ಷಕ್ಕಿಂತ ಹೆಚ್ಚು ಜನ ಸತ್ತರೂ ಜನ ನಿರ್ಭೀತರಾಗಿ, ಜನಾಂಗೀಯ ವರ್ಣಭೇದದ ವಿರುದ್ಧ ಲಕ್ಷಾಂತರ ಲೆಕ್ಕದಲ್ಲಿ ಬೀದಿಗಿಳಿದ್ದಾರೆ. ಕಪ್ಪು ವರ್ಣೀಯರಿಗೆ ಸವರ್ಣೀಯರು ಬೆಂಬಲದ ಜೊತೆಗೆ ಬಲವನ್ನು ಕೊಟ್ಟಿದ್ದಾರೆ. ಒಬ್ಬ ಪೊಲೀಸನ ವಿಷಗುಣಕ್ಕೆ ಅಲ್ಲಿನ ನೂರಾರು ಪೊಲೀಸರು ಪ್ರತಿಭಟನಾಕಾರರ ಎದುರು ಮಂಡಿಯೂರಿ ಕೂತು ನೈತಿಕ ಹೊಣೆ ಹೊತ್ತುಕೊಂಡದ್ದಾಗಿದೆ.

ದೌರ್ಜನ್ಯಕ್ಕೆ ಈಡಾಗಿ ಸತ್ತ ಆ ಕಪ್ಪು ಪ್ರಜೆ ಜಾರ್ಜ್ ಫ್ಲಾಯ್ಡ್ ‘ನನಗೆ ಉಸಿರಾಡಲಾಗುತ್ತಿಲ್ಲ, ಪ್ಲೀಸ್ ಆಫೀಸರ್’ ಎಂದರೂ ಆ ಬಿಳಿ ಪೊಲೀಸನ ಮಂಡಿ ಆತನ ಕುತ್ತಿಗೆ ಮೇಲಿನಿಂದ ಸರಿಯುವುದೇ ಇಲ್ಲ. ಇಂಥವನ್ನೆಲ್ಲ ನೋಡುವಾಗ ಅರಗಿಸಿಕೊಳ್ಳುವುದು ಕಷ್ಟ. ಪ್ರಭುತ್ವದ ದುಷ್ಟತನ ಪೊಲೀಸರ ಮೂಲಕ ಬಿಂಬಿತವಾಗುತ್ತದೆ ಎಂಬ ಪಿ.ಲಂಕೇಶ್ ಮೇಷ್ಟ್ರ ಮಾತು ಮತ್ತೊಮ್ಮೆ ನಿಜವಾಗಿದೆ.

ಫ್ಲಾಯ್ಡ್ ಸಾವಿಗೆ ಇಂದು ಇಡೀ ಅಮೇರಿಕದಲ್ಲಿ ಮಿಡಿದವರು‌ ಲಕ್ಷಾಂತರ ಜನ. ಫ್ಲಾಯ್ಡ್ ವಿಚಾರದಲ್ಲಿ ಆ ಬಿಳಿ ಪೊಲೀಸ್ ನಡೆದುಕೊಂಡಿದ್ದು ಘೋರ. ಅಧಿಕಾರದ ಮದದಲ್ಲಿ ಹುಚ್ಚನಂತಾಡುತ್ತಿದ್ದ ಟ್ರಂಪ್ ಗೂ ಸಹ ಈ ಘಟನೆ ಬಿಸಿ ತಾಕಿಸಿದೆ‌. ಫ್ಲಾಯ್ಡ್ ಸಾವನ್ನು ಬಹುತೇಕರು ಖಂಡಿಸುತ್ತಿದ್ದಾರೆ. ಅದು ಸ್ವಾಗತಾರ್ಹ. ಈ ಮೊದಲು ಇದೇ ಅಟ್ಲಿ ಕುಮಾರ್ ಮೈ ಬಣ್ಣದ ಬಗೆಗಿದ್ದ ಕೆಟ್ಟ ಟ್ರೋಲ್ ಗಳನ್ನು ಕಾಮೇಡಿಗಾಗಿ ಹಂಚಿಕೊಂಡಿದ್ದ ಅನೇಕರು ಈಗ ಫ್ಲಾಯ್ಡ್ ಸಾವಿನ ಬಗ್ಗೆ ಕುದಿಯುತ್ತಿದ್ದಾರೆ.

ಮನುಷ್ಯ ಎಂಥವನೇ ಆಗಲಿ, ಆತನ ಮೈ ಬಣ್ಣದ ಕಾರಣಕ್ಕೆ ‘ಕರಿ ಇಡ್ಲಿ’ ಎಂದು ನಮ್ಮ ನಡುವೆಯೇ ಕುಹಕವಾಡಿಕೊಂಡು ಓಡಾಡುವ ಜನ ಸಹ ಇಂದು ದೂರದ ಅಮೇರಿಕದ ವಿದ್ಯಮಾನದ ಕುರಿತು ಆಕ್ರೋಶಭರಿತರಾಗಿದ್ದಾರೆ. ಮೈ ಬಣ್ಣದ ಕುರಿತ ಕೆಟ್ಟ ಟ್ರೋಲ್ ಮಾಡಿ ನಗುವವರು, ಮತ್ತೊಬ್ಬನನ್ನು ‘ಕರಿ ಇಡ್ಲಿ’ ಎಂದು ಕರೆದು ಹೀಯಾಳಿಸುವವರು ಹಾಗೂ ಫ್ಲಾಯ್ಡ್ ನನ್ನು ಕೊಂದ ಆ ಪೊಲೀಸನ ಮನಸ್ಥಿತಿ ಬೇರೆ ಬೇರೆಯಂತೂ ಅಲ್ಲವೇ ಅಲ್ಲ. ಫ್ಲಾಯ್ಡ್ ಸಾವು, ಸಾವಿನ ಹಿನ್ನೆಲೆ ಭುಗಿಲೆದ್ದ ಆಕ್ರೋಶ ಖಂಡಿತ ಕೆಲ ಯುರೋಪ್ ರಾಷ್ಟ್ರಗಳಿಗೆ ಪಾಠ‌. ನಮಗೂ ಸಹ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಈ ಭೂಮಿಯ ನೆಲಮಾಳಿಗೆಯಲ್ಲಿ ಬುದ್ಧನಿದ್ದಾನೆ..!

Published

on

  • ರಾಣಪ್ಪ ಡಿ ಪಾಳಾ

ದೇವಾಲಯದ ಕೆಳಗೆ ಚಿನ್ನವನ್ನು, ಬೌದ್ಧ ನಾಗರಿಕತೆಯನ್ನು ನೆಲದ ಕೆಳಗೆ ಮರೆಮಾಡಲಾಗಿದೆ..!

ಬೌದ್ಧ ವಿಹಾರಗಳಲ್ಲಿ ಚಿನ್ನ ಎಂದಿಗೂ ಸಿಗುವುದಿಲ್ಲ. ಪ್ರಾರ್ಥನಾ ಸ್ಥಳಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಹಣವನ್ನು ಬಳಸುವುದು ಆದರೂ ಏನು. ಪ್ರಾಚೀನ ಇಟ್ಟಿಗೆಗಳ ಅವಶೇಷಗಳು ವಿಹಾರ ಚೈತ ಸ್ತೂಪದ ಕೆಳಗೆ ಶಿಥಿಲಾವಸ್ಥೆಯಲ್ಲಿ ಕಂಡುಬರುತ್ತಿವೆ!

ಫೋರ್ಬ್ಸ್ ನಿಯತಕಾಲಿಕೆಯ ಅಂದಾಜಿನ ಪ್ರಕಾರ, ಕೇರಳದ ಪದ್ಮನಾಭಸ್ವಾಮಿ ದೇವಸ್ಥಾನದ ನೆಲಮಾಳಿಗೆಯಲ್ಲಿ ಮಾತ್ರ ದೊರೆತ ಚಿನ್ನವು ಕೇವಲ 1 ಟ್ರಿಲಿಯನ್ ಡಾಲರ್, ಅಂದರೆ 75 ಲಕ್ಷ ಕೋಟಿ. ಇದರಿಂದ, ಭಾರತದ ಇತರ ದೇವಾಲಯಗಳಲ್ಲಿ ಎಷ್ಟು ರಹಸ್ಯ ಕಪ್ಪು ಹಣವನ್ನು ಮರೆಮಾಡಲಾಗಿದೆ ಎಂದು ಅಂದಾಜಿಸಬಹುದು.

ಈ ದೇವಾಲಯವನ್ನು ತಿರುವಾಂಕೂರಿನ ಬ್ರಾಹ್ಮಣ ರಾಜರು ನಿರ್ಮಿಸಿದ್ದು, ಅವರು ಶೂದ್ರ ಮಹಿಳೆಯರಿಂದ ಸ್ತನ ತೆರಿಗೆ ಸಂಗ್ರಹಿಸಿದರು. ಇಂದಿಗೂ ಈ ದೇವಾಲಯದ ಮುಖ್ಯ ಟ್ರಸ್ಟಿ ಮತ್ತು ಉಸ್ತುವಾರಿ ಹುದ್ದೆಯನ್ನು ತಿರುವಾಂಕೂರು ಕುಟುಂಬದ ಸದಸ್ಯರು ಹೊಂದಿದ್ದಾರೆ!

ಇಷ್ಟು ಶ್ರೀಮಂತ ದೇವಾಲಯವಾಗಿದ್ದರೂ, 2019 ರಲ್ಲಿ ನರೇಂದ್ರ ಮೋದಿ ಜಿ ಈ ದೇವಾಲಯದ ನಿರ್ವಹಣೆಗಾಗಿ 92 ಕೋಟಿ ರೂ.ಗಳನ್ನು ನೀಡಿದರು. ಕೇರಳದ ಇತರ ದೇವಾಲಯಗಳ ನಡುವೆ 550 ಕೋಟಿ ರೂ. ನಮಗೆ ಐಹಿಕ ಬೌದ್ಧ ನಾಗರಿಕತೆಯ ಸಂಪತ್ತು ಬೇಕು. ನಮ್ಮ ಪ್ರಾಚೀನ ಪರಂಪರೆಯನ್ನು ನಾವು ಬಯಸುತ್ತೇವೆ. ನಮ್ಮ ನಿಜವಾದ ಸಂಪತ್ತು ಬುದ್ಧ.

ಬುದ್ಧನ ಚಿತ್ರವನ್ನು ಕೋಲ್ಕತ್ತಾದ ಭಾರತೀಯ ವಸ್ತುಸಂಗ್ರಹಾಲಯದಲ್ಲಿ ಇರಿಸಲಾಗಿದೆ. ಈ ಪ್ರತಿಮೆಯು 2 ನೇ ಶತಮಾನಕ್ಕೆ ಹಿಂದಿನದು, ಮರ್ದನ್ಮಾರ್ದನ್ ಖೈಬರ್ ಪಖ್ತೂನ್ ಪಾಕಿಸ್ತಾನದಲ್ಲಿ ಉತ್ಖನನದ ಸಮಯದಲ್ಲಿ ಕಂಡುಬಂದಿದೆ. ಈ ಪ್ರದೇಶವನ್ನು ಒಮ್ಮೆ ಗಾಂಧಾರ ಎಂದು ಕರೆಯಲಾಗುತ್ತಿತ್ತು!

ದೇವಾಲಯಗಳ ರಹಸ್ಯ ಕಪ್ಪು ಹಣ ರಾಷ್ಟ್ರದ ಆಸ್ತಿಯಾಗಿದೆ, ಈ ಹಣವನ್ನು ರಾಷ್ಟ್ರ ನಿರ್ಮಾಣಕ್ಕಾಗಿ ಖರ್ಚು ಮಾಡಬೇಕಾಗುತ್ತದೆ.

(ರಾಣಪ್ಪ ಡಿ ಪಾಳಾ
ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿ
ಮನೋವಿಜ್ಞಾನ ವಿಭಾಗ
ಮೋ 9663727268)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ3 hours ago

ಕರ್ನಾಟಕದಲ್ಲಿ ಮಿಡತೆ ಹಿಂಡುಗಳ ದಾಳಿ; ಎಚ್ಚರಿಕೆ..!?

ಸುದ್ದಿದಿನ,ಧಾರವಾಡ: ಮಿಡತೆಗಳು ಉತ್ತರ ಭಾರತದ ಗುಜರಾತ, ರಾಜ್ಯಸ್ಥಾನ, ಹರಿಯಾಣ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಕೃಷಿ, ಅರಣ್ಯ ಹಾಗೂ ತೋಟಗಾರಿಕಾ ಬೆಳೆಗಳ ಮೇಲೆ ದಂಡಿನ ರೂಪದಲ್ಲಿ ದಾಳಿ ಇಟ್ಟಿದ್ದು,...

ಬಹಿರಂಗ4 hours ago

ಕೆ.ಆರ್.ಎಸ್.ನಿರ್ಮಾಣ : ಮತ್ತಷ್ಟು ಇತಿಹಾಸ

ರಘೋತ್ತಮ ಹೊ.ಬ ಅದು 1902 ನೇ ಇಸವಿ. ಏಷ್ಯಾದಲ್ಲೆ ಪ್ರಪ್ರಥಮ ಜಲವಿದ್ಯುತ್ ಉತ್ಪಾದನಾ ಕೇಂದ್ರ ಸ್ಥಾಪನೆಯಾದ ವರ್ಷ. ಅಂದಹಾಗೆ ಅದನ್ನು ಸ್ಥಾಪಿಸಿದವರು ಮೈಸೂರಿನ ಅಂದಿನ ಮಹಾರಾಜ ನಾಲ್ವಡಿ...

ಸಿನಿ ಸುದ್ದಿ5 hours ago

ವಿಡಿಯೋ | ಅಭಿಮಾನಿಯ ಹುಟ್ಟು ಹಬ್ಬಕ್ಕೆ ‘ಪಿಯಾನೋ’ ನುಡಿಸಿದ ಕಿಚ್ಚ ಸುದೀಪ

ಸುದ್ದಿದಿನ,ಬೆಂಗಳೂರು: ನಟ ಕಿಚ್ಚ ಸುದೀಪ್ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿದ್ದು, ತಮ್ಮ ಆಪ್ತ ನಟ, ನಟಿಯರು, ತಂತ್ರಜ್ಞರ ಜನ್ಮದಿನದ ಸಂದರ್ಭದಲ್ಲಿ ವಿಶೇಷವಾಗಿ ಶುಭಾಶಯ ಕೋರುತ್ತಾರೆ. ಇದೀಗ ತಮ್ಮ...

ಅಂತರಂಗ6 hours ago

ವರ್ಣಭೇದ, ಧರ್ಮಭೇದ, ಜಾತಿಬೇಧದ ವಿರುದ್ಧ ಒಂದಾಗೋಣ ನಾವೆಲ್ಲಾ..!

ಕ್ರಾಂತಿರಾಜ್ ಒಡೆಯರ್ ಎಂ,ಸಹಾಯಕ ಪ್ರಾಧ್ಯಾಪಕರು,ವ್ಯವಹಾರ ನಿರ್ವಹಣಾ ವಿಭಾಗ,ಸೇಪಿಯೆಂಟ್ ಕಾಲೇಜು,ಮೈಸೂರು ಇಂದು ಇಡೀ ಅಮೇರಿಕಾ ದೇಶ ಒಟ್ಟಾಗಿ ನಿಂತಿದೆ. ಜಾರ್ಜ್ ಫ್ಲಾಯ್ಡ್ ಎಂಬ ಆಫ್ರಿಕನ್ – ಅಮೆರಿಕನ್ ವ್ಯಕ್ತಿ...

ಬಹಿರಂಗ6 hours ago

ಜಾರ್ಜ್ ಫ್ಲಾಯ್ಡ್ ಮತ್ತು ಇಂಡಿಯನ್ ಹಿಪಾಕ್ರಸಿ

ಸಿದ್ದು ಸತ್ಯಣ್ಣನವರ್ ಆತ ಅಟ್ಲಿ ಅಂತಲೇ ಪ್ರಸಿದ್ಧ. ಪೂರ್ಣ ಹೆಸರು ಅಟ್ಲಿ ಕುಮಾರ್. ಕಪ್ಪು ಮೈ ಬಣ್ಣದವ. ಹೆಸರಾಂತ ತಮಿಳು ಸಿನೆಮಾ ನಿರ್ದೇಶಕ. ಆತನ ಮೈ ಬಣ್ಣ,...

ದಿನದ ಸುದ್ದಿ8 hours ago

ದಾವಣಗೆರೆ | ಮಳೆಯಿಂದ ಬೆಳೆಹಾನಿ : ರೈತರಿಗೆ ಪರಿಹಾರ ಒದಗಿಸುವಂತೆ ಜಿ.ಪಂ ಸದಸ್ಯ ಬಸಂತಪ್ಪ ‌ಸರ್ಕಾರಕ್ಕೆ ಒತ್ತಾಯ

ಸುದ್ದಿದಿನ,ದಾವಣಗೆರೆ: ಸೋಮವಾರ ಭಾರೀ‌ಮಳೆ‌‌ ಸುರಿದ ಹಿನ್ನೆಲೆಯಲ್ಲಿ ‌ಮಾಯಕೊಂಡ ಕ್ಷೇತ್ರದ ಗ್ರಾಮಗಳಿಗೆ ಭೇಟಿ ನೀಡಿದ ಜಿ.ಪಂ. ಸದಸ್ಯ ಬಸವಂತಪ್ಪ ಅವರು ರೈತರಿಗೆ ಸಾಂತ್ವನ ಹೇಳಿದರು. ಗೋಣಿವಾಡ ಕ್ಯಾಂಪ್, ಮತ್ತಿ,...

ದಿನದ ಸುದ್ದಿ9 hours ago

ದಾವಣಗೆರೆ | ಇಂದಿರಾಗಾಂಧಿ ಭಾವಚಿತ್ರಕ್ಕೆ ಮಸಿ ; ವ್ಯಕ್ತಿ ಬಂಧನ : ಫ್ಲೈ ಓವರ್ ಗೆ ಸಾವರ್ಕರ್ ಹೆಸರು ವಿರೋಧಿಸಿದ ಕಾರಣ ಈ ಕೃತ್ಯ

ಸುದ್ದಿದಿನ,ದಾವಣಗೆರೆ: ನಗರದ ಜಿಲ್ಲಾಸ್ಪತ್ರೆ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಹಿಂಭಾಗದಲ್ಲಿನ ಇಂದಿರಾ ಕ್ಯಾಂಟೀನ್‌ ಆವರಣದಲ್ಲಿರುವ ಇಂದಿರಾಗಾಂಧಿ ಚಿತ್ರಕ್ಕೆ ಶನಿವಾರ ರಾತ್ರಿ ಎಂಜಿನ್‌ ಆಯಿಲ್‌ ಬಳಿದು ವಿರೂಪಗೊಳಿಸಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ...

ದಿನದ ಸುದ್ದಿ13 hours ago

ರಾಜ್ಯದಲ್ಲಿ ಒಟ್ಟು 3408 ಕೊರೋನಾ ಪ್ರಕರಣಗಳು

ಸುದ್ದಿದಿನ,ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಕಡಿಮೆಯಾದಂತೆ ಕಾಣುತ್ತಿಲ್ಲ. ದಿನೇ ದಿನೇ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದ್ದು ಜನರಲ್ಲಿ ಆತಂಕ ಮೂಡಿಸಿದೆ. ಲಾಕ್ ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಕೊರೋನಾ...

ದಿನದ ಸುದ್ದಿ13 hours ago

ಜಿಲ್ಲಾ ಪಂಚಾಯತ್, ನೂತನ, ಪ್ರಭಾರ ಅಧ್ಯಕ್ಷರಾಗಿ ಲೋಕೆಶ್ವರ ಪದಗ್ರಹಣ

ಸುದ್ದಿದಿನ,ದಾವಣಗೆರೆ : ನಲ್ಲೂರು ಜಿಲ್ಲಾ ಪಂಚಾಯತ್ ಸದಸ್ಯರು, ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಲೋಕೆಶ್ವರ, ಇಂದು ಜಿಲ್ಲಾ ಪಂಚಾಯತ್ ಪ್ರಭಾರ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು....

ಲೈಫ್ ಸ್ಟೈಲ್13 hours ago

ಮದುವೆಯು ವಿಳಂಬವಾಗುತ್ತಿದೆಯೇ? ಚಿಂತೆ ಬೇಡ ಇಲ್ಲಿದೇ ಪರಿಹಾರ..!

ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂಜ್ಯೋತಿಷ್ಯರು ಪ್ರದಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ :9945410150 ಮದುವೆಯ ಕನಸು ನೀವು ಕಾಣುತ್ತಿರಬಹುದು. ಬರಬರುತ್ತಾ ವಯಸ್ಸು ಹೆಚ್ಚಾಗುತ್ತಾ ಹೋಗುತ್ತಿದೆ ಆದರೆ ಸೂಕ್ತ ಸಂಗಾತಿ...

Trending