Connect with us

ಬಹಿರಂಗ

ಪ್ರಸ್ತುತವಾಗಿ ಅಂಬೇಡ್ಕರ್ ಮತ್ತು ಜಾತಿಭಯೋತ್ಪಾದನೆಗೆ ದಲಿತರ ಮಾರಣಹೋಮ

Published

on

ನನ್ನ ಅಂತರಾಳದ ನೋವು ಮತ್ತು ದುಃಖವನ್ನು ನೀವು ಅರಿಯಲಾರಿರಿ.ನನ್ನ ಜನ ರಾಜಕೀಯ ಅಧಿಕಾರವನ್ನು ಬೇರೆ ಸಮುದಾಯದವರೊಡನೆ ಸಮನಾಗಿ ಹಂಚಿಕೊಂಡು ಆಳುವ ವರ್ಗವಾಗುವುದನ್ನು ನಾನು ನನ್ನ ಜೀವಿತದಲ್ಲಿ ನೋಡಬೇಕೆಂದು ಇಚ್ಚಿಸಿದ್ದೆ.ಆದರೆ ಅದು ಸಾಧ್ಯವಾಗದು ಎನಿಸುತ್ತಿದೆ.ನನ್ನ ಹೋರಾಟದ ಫಲವನ್ನು ಕೆಲವು ಮಂದಿ ಅನುಭವಿಸುತ್ತಾ ಸಮುದಾಯದ ಹಿತವನ್ನು ಮರೆಯುತಿದ್ದಾರೆ.ನನ್ನ ಅವಿಧ್ಯವಂತರ ಜನರ ಗತಿ ಏನೆಂದು ನೆನೆದು ನೊಂದಿದ್ದೇನೆ.

ನಾನು ಈವರೆಗೆ ಏನನ್ನು ಸಾಧಿಸಿದ್ದೇನೊ ಅವೆಲ್ಲವನ್ನು ಘೋರವಾದ ನೋವು ಹಾಗು ಕೊನೆಯೆ ಇಲ್ಲದ ಕಷ್ಟಗಳ ಹಾದಿಯಲ್ಲಿ ಜೀವಿತದ್ದುಕ್ಕು ವಿರೋಧಿಗಳೊಡನೆ ಹೋರಾಡುತ್ತಾ ಸಧಿಸಿದ್ದೇನೆ.ಇದನ್ನು ನನ್ನ ಜನರಿಗೆ ಹೇಳು ನಾನಕ್ ಚಂದು..ತುಂಬಾ ಶ್ರಮವಹಿಸಿ ಈ ವಿಮೋಚನ ರಥವನ್ನು ಇಲ್ಲಿಯವರೆಗೂ ಎಳೆದು ತಂದಿದ್ದೇನೆ.ಎಷ್ಟೆ ಅಪಾಯ ಅಡೆತಡೆಗಳು ಬಂದರು ಅದು ಹಾಗೆ ಮುಂದೆ ಸಾಗಲಿ ಒಂದು ವೇಳೆ ಮುಂದಕ್ಕೆಳೆಯಲು ಶಕ್ತಿ ಇಲ್ಲದಿದ್ದರೆ ಅಲ್ಲಿಯೆ ಬಿಟ್ಟುಬಿಡಿ ಆದರೆ ಯಾವುದೆ ಕಾರಣಕ್ಕು ಹಿಂದಕ್ಕೆ ತಳ್ಳಬೇಡಿ ಬಹಶಃ ನನ್ನ ಜನರಿಗೆ ಹೇಳುತ್ತಿರುವ ಕೊನೆಯ ಸಂದೇಶ ಇದಾಗಲಿದೆ.”

ಬಾಬಸಾಹೇಬರು ಜುಲೈ 31.1956 ಸಂಜೆ 5 ಗಂಟೆಯಲ್ಲಿ ಜೊತೆಯಲ್ಲಿದ್ದ ತಮ್ಮ ಆಪ್ತರಾದ ನಾನಕ್ ಚಂದು ರತ್ತುರವರೊಡನೆ ತಬ್ಬಿಕೊಂಡು ಹಂಚಿಕೊಂಡ ಕಣ್ಣೀರಿನ ಕೊನೆಯ ಸಂದೇಶ.

ಅಬ್ಬಾ..!ಬಾಬಸಾಹೇಬರ ಮಾತುಗಳು ಎದೆಯೊಳಗೆ ಬೆಂಕಿಜ್ವಾಲೆಯಗಿ ಕಣ್ಣಲ್ಲಿ ನೀರುತರಿಸುತ್ತದೆ.ಆಗಾದರೆ ಈ ಮಹಾನ್ ವ್ಯಕ್ತಿ ಅದೇಕೆ ಕಣ್ಣೀರಿಟ್ಟರು..? ಆ ವಿಮೋಚನಾ ರಥ ಯಾವುದು..?ಪ್ರಶ್ನೆಯನ್ನು ದಲಿತರು ಇಂದು ಆಳವಾಗಿ ಅರ್ಥೈಸಿಕೊಳ್ಳಬೇಕಾಗಿದೆ.
ಇವತ್ತು ಎಗ್ಗಿಲ್ಲದೆ ನಡೆಯುತ್ತಿರುವ ದಲಿತರ ಮೇಲಿ ಕ್ರೌರ್ಯವನ್ನು ಕಂಡು ಅಂದೆ ಬಾಬಸಾಹೇಬರು ಕಣ್ಣೀರಾಕಿರಬಹುದು ಎಂದು ನನಗನಿಸುತ್ತಿದೆ.

ಬಹುಜನಶೋಷಿತ ಜನರ ರಕ್ಷಣೆಯ ಸಂಪೂರ್ಣ ಜವಬ್ದಾರಿಯನ್ನು ದಲಿತ ನೌಕರರು.ರಾಜಕಾರಣಿಗಳು.ವಿದ್ಯಾರ್ಥಿಗಳ ಮೇಲೆ ಹಾಕಿದ್ದರು.ಇವರ ಮೇಲೆ ಬಾಬಸಾಹೇಬರು ತುಂಬಾನೆ ಭರವಸೆಯಿಟ್ಟಿದ್ದರು.ಆದರೆ ದುರಂತ ಅಂದರೆ ಬಾಬಸಾಹೇಬರ ಕನಸ್ಸನ್ನು ನನಸು ಮಾಡುತ್ತ ತಿದ್ದಿಬುದ್ದಿಹೇಳಬೇಕಿದ್ದ ದಲಿತ ನೌಕರರು ಸ್ವಾರ್ಥಿಗಳಾಗಿ ತಾವಾತು ತಮ್ಮ ಕುಟುಂಬವಾಯ್ತು ಎಂಬಂತಾಗಿದ್ದಾರೆ.

ಇನ್ನು ದಲಿತರ ಅಭಿವೃದ್ದಿಗೆ ಹಾಗು ಅವರ ರಕ್ಷಣೆಗೆ ಶಾಸನಸಭೆಗಳಲ್ಲಿ ಮಾತಾಡಬೇಕಿದ್ದ ದಲಿತರಾಜಕಾರಣಿಗಳು ಕೋಮುವಾದಿ ಹಾಗು ದಲಿತರನ್ನು ಕೇವಲ ಮತಬ್ಯಾಂಕಾಗಿಸಿದ ಪಕ್ಷಗಳಿಗೆ ಚಮಚಗಳಗಿ ಗುಲಾಮರಾಗಿದ್ದಾರೆ.ಆದರೆ ನೈಜ ಚರಿತ್ರೆಯನ್ನರಿತು ಚಳುವಳಿಯ ವಿಮೋಚನ ರಥವನ್ನು ಎಳೆಯಲು ಸೈನಿಕರಂತೆ ಸಜ್ಜಾಗಬೇಕಿದ್ದ ದಲಿತ ವಿಧ್ಯಾರ್ಥಿಗಳು ಬೇಜವಬ್ದಾರಿ ಮುರ್ಖರಾಗುತ್ತಿರಾಗಿ ಬದುಕುತ್ತಿದ್ದಾರೆ.ಹಾಗಾದರೆ ಕೋಟ್ಯಾಂತರ ಅನಕ್ಷರಸ್ಥ ಸಮುದಾಯ ದಿನನಿತ್ಯ ಅನುಭವಿಸುವ ನೋವು ದೌರ್ಜನ್ಯವನ್ನು ಖಂಡಿಸುವ ಪ್ರತಿರೋಧ ಒಡ್ಡುವ ಹಾಗು ಪರಿಹಾರ ಕಂಡುಕೊಳ್ಳುವರು ಯಾರು..?ಎಂಬ ಪ್ರಶ್ನೆ ದಲಿತರು ಸೂಕ್ಷ್ಮವಾಗಿ ಯೋಚಿಸಬೇಕಿದೆ.

ಪ್ರಸ್ತುತ ಕೋಮುರಾಜಕಾರಣದ ಎಂಜಲು ತಿನ್ನುಕಮಂಗಿಗಳನ್ನು ಸಮಾನ ಪರಂಪರೆಗೆ ಎಳೆದು ತರಬೇಕಿದೆ.ಬ್ರಾಹ್ಮಣೀಸಂ ಸಂರಕ್ಷಿಸುತ್ತಿರುವ ಒಬಿಸಿಗಳಿಗೆ ಅಂಬೇಡ್ಕರ್ ವಾದವನ್ನು ಮನದಟ್ಟು ಮಾಡುವ ತುರ್ತುಅಗತ್ಯವಿದೆ.ಏಕೆಂದರೆ ಜಾತಿಯೆಂಬ ಭಯೋತ್ಪಾದನೆಗೆ ಸೇರಿ ಉಗ್ರರಾಗುತ್ತಿರುವ ಹಿಂದುಳಿದವರಿಗೆ ತಾವು ಅನುಭವಿಸುತ್ತಿರುವ ಮೀಸಲಾತಿ ಹಾಗು ಸಂವಿಧಾನದ ಸವಲತ್ತುಗಳನ್ನು ಅರ್ಥೈಸಬೇಕಿದೆ.ಮಹಿಳೆಯರ ಮೇಲೆ ಗಧಪ್ರಹಾರ ಮಾಡುತ್ತಿರುವ ಫ್ಯಾಸಿಸ್ಟ್ ಶಕ್ತಿಗಳ ವಿರುದ್ದ ದೊಡ್ಡಮಟ್ಟದ ಚಳುವಳಿಯನ್ನು ರೂಪಿಸುಬೇಕಾಗಿದೆ.

ಪ್ರಸ್ತುತ ದಿನಮಾನಗಳಲ್ಲಿ ಅಂಬೇಡ್ಕರ್ ರವರನ್ನು ಪ್ರತಿಯೊಬ್ಬ ಸ್ವಾಭಿಮಾನಿ ಭಾರತಿಯನಿಗೆ ಸಮಗ್ರವಾಗಿ ಅರ್ಥೈಸುವ ದರ್ದು ಹಿಂದೆಂದಿಗಿಂತಲು ಇಂದು ಅತ್ಯವಶ್ಯಕವಾಗಿದೆ.ಇಲ್ಲದಿದ್ದರೆ ಭಾರತದ ನಾಶಕ್ಕೆ ಟೊಂಕಕಟ್ಟಿ ನಿಂತಿರುವ ಜಾತಿವಾದಿ ಹಾಗು ಮನುವಾದಿಗಳ ಕ್ರೌರ್ಯಕ್ಕೆ ಅಂತ್ಯನೆ ಇಲ್ಲವಾಗುತ್ತದೆ.‌ ಗುಜರಾತಿನಲ್ಲಿ ಮುಸ್ಲಿಂರ ಹತ್ಯಯ ದಂಡಯಾತ್ರೆಯನ್ನು ಯಶಸ್ವಿಯಾಗಿ ಮುಗಿಸಿ ಮುಸ್ಲಿಂ ಗರ್ಭಿಣಿರ ಹೊಟ್ಟೆಗೆ ತ್ರಿಶೂಲದಿಂದ ಗರ್ಭ ಸೀಳಿ ಭ್ರೂಣವನ್ನು ತೆಗೆದು ಹಿಂದುತ್ವದ ಭಯೋತ್ಪಾದನೆಗೆ ಭದ್ರಬುನಾದಿಹಾಕಿ.

ಈ ನೀಚ ಕಾರ್ಯಕ್ಕೆ ಬಹುಸಂಖ್ಯಾತ ಅಮಾಯಕ ದಲಿತ ಹಾಗು ಹಿಂದುಳಿದಯುವಕರ ತಲೆಗೆ ಹಿಂದುತ್ವದ ಅಮಲನ್ನು ತುಂಬಿ ಅಮಾಯಕರನ್ನು ಸಾಯುವವರೆಗು ಜೈಲಿನಲ್ಲಿ ಕೊಳೆಯುವಂತೆ ಮಾಡಿ ಕೇಸರಿ ಭಯೋತ್ಪಾದನೆಯ ಪಿತಾಮಹರೆನಿಸಿದ ಮೂದಿಯೆಂಬ ಮಂಕು ಬೂದಿ ಪ್ರಾಧಾನಿ ಆದಾಗಿನಿಂದಲು ದೇಶದಲ್ಲಿ ದಲಿತರ ಮೇಲೆ ಹಲ್ಲೆ ದಲಿತ ಮಹಿಳೆಯರ ಮೇಲೆ ಅತ್ಯಾಚಾರ. ದಲಿತರ ಕೇರಿಗೆ ನುಗ್ಗಿ ಹೊಡೆಯುವುದು.ನೀರು ಕೇಳಿದರೆ ಬಲವಂತವಾಗಿ ಮೂತ್ರ ಕುಡಿಸುವುದು.ಗೋಹತ್ಯ ನೆಪದಲ್ಲಿ ದಲಿತರನ್ನು ಕೊಲ್ಲುವುದು.

ಏಕಸಂಸ್ಕೃತಿ ವಿಸ್ತರಿಸಿ ಬಹುಸಂಸ್ಕೃತಿಯನ್ನು ದಿಕ್ಕರಿಸುವ.ಹೀನಕೃತ್ಯಗಳು ಎಗ್ಗಿಲ್ಲದೆ ನಡೆಯುತ್ತಿವೆ.ಇವುಗಳಿಗೆ ನೀರುಗೊಬ್ಬರಹಾಕಿ ಪೋಷಿಸುತ್ತಿರುವ ಆರ್.ಎಸ್.ಎಸ್.ಚೆಡ್ಡಿಗಳ ಲಾಜಿಕನ್ನು ನಿರ್ಮೂಲನೆ ಮಾಡಬೇಕಿದೆ.ಬುದ್ದ ಬಸವ ಅಂಬೇಡ್ಕರ್. ಪರಂಪರೆಯಿಂದ ಬಂದಿರುವ ದಲಿತರನ್ನು ದಿಕ್ಕುತಪ್ಪಿಸುವ ಹಾಗು ಇತಿಹಾಸವನ್ನು ತಿರುಚುವ ಹಿಂದುತ್ವದ ಬೆನ್ನುಮೂಳೆ ಮುರಿಯಬೇಕಿದೆ.ದೇಶಾದ್ಯಂತ ಘಟಿಸುತ್ತಿರುವ ಜಾತಿಭಯೋತ್ಪಾದನೆಯೆಂಬ ಹೆಮ್ಮರವನ್ನು ಅಂಬೇಡ್ಕರ್ ವಾದದಿಂದ ಬುಡಮಟ್ಟ ಕಿತ್ತೆಸೆಯಬೇಕಾಗಿದೆ.

ದಲಿತರ ಕೊರಳಲ್ಲಿ ನೇತಾಡುವ ಬಾಬಸಾಹೇಬರನ್ನು ಎಲ್ಲರ ಮೆದುಳನೊಳಗೆ ಇಳಿಸಬೇಕಿದೆ.ಸಂವಿಧಾನವೆಂಬ ಮಹಾ ಬೀಜವನ್ನು ಪ್ರತಿಯೊಬ್ಬ ಭಾರತೀಯನ ಎದೆಯೊಳಗೆ ಬಿತ್ತಬೇಕಿದೆ.ಸಂವಿಧಾನಕ್ಕೆ ಬಂದಿರುವ ಆಪತ್ತನ್ನು ಮನದಟ್ಟು ಮಾಡಿ ಸಂವಿಧಾನದಲ್ಲಿ ಈ ದೇಶದ ಸಂರಕ್ಷಣೆ ಅಡಗಿರುವುದನ್ನು ಪ್ರತಿಯೊಬ್ಬರು ಅರಿಯಬೇಕು.

ಹುಚ್ಚಂಗಿ ಪ್ರಸಾದ್
ಸಂತೇಬೆನ್ನೂರು

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಬಹಿರಂಗ

ಕಾಮಾಟಿಪುರದ ದಲಿತ ಮಹಿಳೆಯರನ್ನುದ್ದೇಶಿಸಿ ಅಂಬೇಡ್ಕರ್

Published

on

 • ರಘೋತ್ತಮ ಹೊ.ಬ

ಕಾಮಾಟಿಪುರ, ಮುಂಬೈ ನಗರದ ಈ ಏರಿಯಾ ವೇಶ್ಯಾವಾಟಿಕೆಗೆ ಕುಪ್ರಸಿದ್ಧ ಸ್ಥಳ.ದುರಂತವೆಂದರೆ ಆ ಏರಿಯಾದ ಬಹುತೇಕರು ದಲಿತರು. ಅದರಲ್ಲೂ ದಲಿತ ಮಹಾರ್ ಜಾತಿಯವರು.

ಹೌದು, ಮನುಪ್ರಣೀತ ಸಾಮಾಜಿಕ ವ್ಯವಸ್ಥೆಯಲ್ಲಿ ಎಲ್ಲಾ ಕೆಲಸಗಳು ಜಾತಿಗೊಂದರಂತೆ ಮೀಸಲಿವೆ. ದುರಂತವೆಂದರೆ ಹಾಗೆ ಜಾತಿಗೊಂದರಂತೆ ಕೆಲಸವನ್ನು ಮೀಸಲಿಟ್ಟಿರುವ ವಿಚ್ಛಿಧ್ರಕಾರಿ ವ್ಯವಸ್ಥೆ ವೇಶ್ಯಾವಾಟಿಕೆಯನ್ನೂ ಸಹ ಬಿಟ್ಟಿಲ್ಲ. ಅದನ್ನೂ ಕೂಡ ಸಮಾಜದ ಕೆಲ ವರ್ಗಗಳಿಗೆ ಸೀಮಿತಗೊಳಿಸಿಬಿಟ್ಟಿದೆ ಮತ್ತು ಅವರನ್ನು ದೇವದಾಸಿ, ಜೋಗತಿ, ಬಸವಿ ಹೀಗೆ ನಾನಾ ಹೆಸರುಗಳಿಂದ ಕರೆಯುತ್ತಿದೆ. ಅಂದಹಾಗೆ ಸೂಳೆಗಾರಿಕೆಯನ್ನೂ ಸಾಮಾಜಿಕ ಚೌಕಟ್ಟಿಗೆ, ಆರ್ಥಿಕ ನೀತಿನಿಯಮಕ್ಕೆ ಒಳಪಡಿಸಿದ್ದು ನಮ್ಮಲ್ಲೇ ಇರಬೇಕು! ಅಷ್ಟೊಂದು ಎಕ್ಕುಟ್ಟಿ ಹೋಗಿದ್ದು, ಹೇಳಲು ಹೇಸಿಗೆಯಾಗುವಂತಹದ್ದು ನಮ್ಮ ಈ ಕ್ರೂರ ಪರಂಪರೆ. ಉದಾಹರಣೆಗೆ ದಾವಣಗೆರೆಯ ಸಮೀಪ ಉಚ್ಛಂಗಿದುರ್ಗ ಎಂಬಲ್ಲಿ ಪ್ರತಿವರ್ಷ ‘ಮುತ್ತು ಕಟ್ಟುವ ಹಬ್ಬ’ ಮಾಡಲಾಗುತ್ತದೆ. ಆ ಹಬ್ಬದಲ್ಲಿ ಮೇಲ್ಜಾತಿ ಮಹಿಳೆಯರಿಗೆ ‘ಗರತಿ ಮುತ್ತು’ ಕಟ್ಟಲ್ಪಟ್ಟರೆ ದಲಿತ ಮಹಿಳೆಯರಿಗೆ ‘ಸೂಳೆ ಮುತ್ತು’ ಕಟ್ಟಲಾಗುತ್ತದೆ! ಅಂದರೆ ಮೇಲ್ಜಾತಿ ಮಹಿಳೆಯರನ್ನು ಗರತಿಯರ ಹಾಗೆ ಮನೆಯಲ್ಲಿ ಇರಿಸಿಕೊಳ್ಳುವುದು ದಲಿತ ಮಹಿಳೆಯರನ್ನು ಉದ್ದೇಶಪೂರ್ವಕವಾಗಿ ವೇಶ್ಯಾವಾಟಿಕೆಗೆ ದೂಡುವುದು! ಇದು ಕೆಲವರಿಗೆ ಶ್ರೇಷ್ಠ ಪರಂಪರೆಯಂತೆ! ಯಾಕೆಂದರೆ ಅಂತಹವರಿಗೆ ಅಂತಹ ಪರಂಪರೆಯ ಹೆಸರಿನಲ್ಲಿ ಎಲ್ಲವೂ ಸಿಗುತ್ತದಲ್ಲ! ವೇಶ್ಯಾವಾಟಿಕೆಯೂ ಕೂಡ ದೇವದಾಸಿ ಹೆಸರಿನಲ್ಲಿ ಫ್ರೀ! ದೇವರಿಗೆ ಬಿಡುವ ಬಸವಿ ಹೆಸರಿನಲ್ಲಿ ಮುಕ್ತ…ಮುಕ್ತ…!

ಈ ನಿಟ್ಟಿನಲಿ ಇಂತಹ ಯಕ್ಕುಟ್ಟಿಹೋದ ಸಮಾಜವನ್ನು ಸರಿಪಡಿಸಲು ಬರೀ ಒಂದು ಶತಕವಲ್ಲ ಯುಗಯುಗಗಳೇ ಬೇಕೆನ್ನಬಹುದು. ಹೌದು, ಈ ಯುಗದ ಯುಗಪುರುಷ ಬಾಬಾಸಾಹೇಬ್ ಅಂಬೇಡ್ಕರ್ ಇಂತಹ ಕ್ರೂರ ಪದ್ಧತಿಯ ವಿರುದ್ಧ , ಹಾಗೇ ಆ ಪದ್ಧತಿಯಲ್ಲಿ ಸಿಲುಕಿಸಲ್ಪಟ್ಟ ತನ್ನ ಸಮುದಾಯದ ಮಹಿಳೆಯರ ಬಗ್ಗೆ ಮಾತನ್ನಾಡಿದ್ದಾರೆ, ಹಾಗೇ ಅವರಿಗೆ ಬುದ್ಧಿ ಹೇಳಿದ್ದಾರೆ. ಅಂದಹಾಗೆ ಅವರ ಆ ಬುದ್ಧಿ ಮಾತು ಕೇಳಿದ, ಅದನ್ನು ಓದಿದ ಯಾರಾದರೂ ಇನ್ನೆಂದು ಅಂತಹ ದಂಧೆಯಲ್ಲಿ ಕೈ ಹಾಕುವುದಿಲ್ಲ ಎಂಬ ನಿಲುವು ತಳೆದರೆ ಅದು ಅಂಬೇಡ್ಕರ್ ಎಂಬ ಅಂತಹ ಜವಾಬ್ದಾರಿಯುತ ತಂದೆಯ ಮಾತಿಗೆ ಕೊಡುವ ಗೌರವವಾಗುತ್ತದೆ.

ಹೌದು, ಅದು 1936 ಜೂನ್ 16 ನೇ ರಾತ್ರಿ. ಬಾಬಾಸಾಹೇಬ್ ಅಂಬೇಡ್ಕರ್ ಅಂದು ಮುಂಬಯಿಯ ದಾಮೋದರ್ ಥ್ಯಾಕರೆ ಹಾಲ್‍ನಲ್ಲಿ ಶೋಷಿತ ವರ್ಗಗಳ ಸಮ್ಮೇಳನವನ್ನುದ್ದೇಶಿಸಿ ಮಾತನ್ನಾಡಿದ್ದಾರೆ. ಆಶ್ಚರ್ಯಕರವೆಂದರೆ ಬಾಬಾಸಾಹೇಬರು ಭಾಗವಹಿಸಿದ್ದ ಆ ಸಮ್ಮೇಳನದಲ್ಲಿ ಹಾಜರಿದ್ದ ಬಹುತೇಕರು ಮುಂಬಯಿಯ ಕಾಮಾಟಿಪುರದ ಏರಿಯಾದವರು. ಅವರೆಲ್ಲ ದೇವದಾಸಿ, ಪೋತರಾಜೆ, ಭೂತೆ, ಆರಾಧಿ ಮತ್ತು ಜೋಗಿಣಿ ಪಂಥಕ್ಕೆ ಸೇರಿದವರು. ಒಟ್ಟಾರೆ ಬಹುತೇಕ ಅವರೆಲ್ಲ ಶೋಷಿತ ಮಹಾರ್ ಸಮುದಾಯಕ್ಕೆ ಸೇರಿದವರಾಗಿದ್ದರು.

ಅಂದಹಾಗೆ ಅಂಬೇಡ್ಕರರೇನು ದೇವದಾಸಿ ಪದ್ಧತಿ ಬಿಟ್ಟುಬಿಡಿ, ವೇಶ್ಯಾವಾಟಿಕೆ ಬೇಡ ಎಂದು ಹೇಳಲಲ್ಲ ಆ ಸಮ್ಮೇಳನ ಕರೆದಿದ್ದು.ಅವರ ಉದ್ದೇಶ ಇದ್ದದ್ದು ದಲಿತರನ್ನು ಬೌದ್ಧ ಧರ್ಮಕ್ಕೆ ಮತಾಂತರಗೊಳಿಸುವ ನಿಟ್ಟಿನಲಿ ಅವರ ಮನಸ್ಸುಗಳನ್ನು ತಯಾರು ಮಾಡುವುದಾಗಿತ್ತು. ಯಾಕೆಂದರೆ ಆಗಷ್ಟೆ ಅಂದರೆ 1935 ಅಂಕ್ಟೋಬರ್ 13, ಅವರು ನಾಸಿಕ್ ಜಿಲ್ಲೆಯ ಈಯೋಲಾ ಎಂಬಲ್ಲಿ “ದುರದೃಷ್ಟಾವಶಾತ್ ನಾನು ಹಿಂದೂವಾಗಿ ಹುಟ್ಟಿದ್ದೇನೆ. ಆದರೆ ಹಿಂದೂವಾಗಿ ಖಂಡಿತ ಸಾಯಲಾರೆ” ಎಂದು ಗುಡುಗಿದ್ದರು. ಆ ಮೂಲಕ ಮತಾಂತರ ಪ್ರಕ್ರಿಯೆಗೆ ಚಾಲನೆ ನೀಡಿದ್ದರು.

ಮೊದಲಿಗೆ ಆ ಸಮ್ಮೇಳನದಲ್ಲಿ ಮಾತನಾಡಿದ ಬಹುತೇಕರು ಮಾತಾಡಿದ್ದು ಅಂಬೇಡ್ಕರರು ಪ್ರಸ್ತಾಪಿಸಿದ್ದ ಮತಾಂತರದ ಬಗ್ಗೆ ಮಾತ್ರ. ಆದರೆ ತಮ್ಮ ಸರದಿ ಬಂದಾಗ ಎದ್ದು ನಿಂತ ಅಂಬೇಡ್ಕಕರರಿಗೆ ಅಂದು ಕಂಡದ್ದು ಅಲ್ಲಿ ಉಪಸ್ಥಿತರಿದ್ದ ಮುಂಬಯಿಯ ಕಾಮಾಟಿಪುರದ ಮಹಿಳೆಯರು ಮತ್ತವರ ವೃತ್ತಿ. ಅವರನ್ನುದ್ದೇಶಿಸಿ ಮಾತನಾಡುತ್ತಾ ಅಂಬೇಡ್ಕರರು “ನಮ್ಮ ಜೊತೆ ನೀವು ಮತಾಂತರವಾಗಿ ಅಥವಾ ಬಿಡಿ ಅದರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ನಾನು ಒತ್ತಿ ಹೇಳುವುದೇನೆಂದರೆ ನನ್ನ ಮತ್ತು ನನ್ನಂತಹ ಇತರರ ಜೊತೆ ನೀವು ಇರಬೇಕೆಂದರೆ ನಿಮ್ಮ ಅಪಮಾನಕರ ಜೀವನವನ್ನು ನೀವು ಕೈಬಿಡಲೇ ಬೇಕು. ಕಾಮಾಟಿಪುರದ ಮಹಾರ್ ಮಹಿಳೆಯರು ಇಡೀ ಸಮುದಾಯಕ್ಕೆ ಅಪಮಾನಕಾರಿಯಾಗಿದ್ದಾರೆ. ಈ ಕಾರಣಕ್ಕಾಗಿ ನಿಮ್ಮ ದಾರಿಯನ್ನು ನೀವು ಬದಲಿಸಿಕೊಳ್ಳದಿದ್ದರೆ ನಿಮ್ಮ ಜೊತೆ ವ್ಯವಹರಿಸಲಿಕ್ಕೆ ನಮಗೆ ಏನೂ ಇರುವುದಿಲ್ಲ. ಹಾಗೆಯೇ ನಮ್ಮಿಂದ ನಿಮಗೆ ಯಾವ ಸಹಾಯವೂ ಕೂಡ ಸಿಗಲಿಕ್ಕಿಲ್ಲ. ಇಂತಹ ಸಂದರ್ಭದಲ್ಲಿ ನಿಮಗೆ ಕೇವಲ ಎರಡು ದಾರಿಗಳು ಮಾತ್ರ ಮುಕ್ತವಾಗಿವೆ. ಒಂದು ಈಗ ನೀವು ಎಲ್ಲಿದ್ದೀರೋ ಅಲ್ಲಿಯೇ ನಮ್ಮಿಂದ ತಿರಸ್ಕರಿಸಲ್ಪಟ್ಟು ದೂರ ಇರುವುದು. ಎರಡನೆಯದು ನಿಮ್ಮ ಅಪಮಾನಕರ ವೃತ್ತಿಯನ್ನು ಬಿಟ್ಟು ನಮ್ಮ ಜೊತೆ ಬರುವುದು ”.

“ಹಾಗಿದ್ದರೆ ನಮ್ಮ ಮುಂದಿನ ಜೀವನಕ್ಕೆ ಏನು ಮಾಡುವುದು ಎಂದು ನೀವು ನನ್ನನ್ನು ಕೇಳಬಹುದು. ಆದರೆ ಅದರ ಬಗ್ಗೆ ನಾನು ನಿಮಗೆ ಏನನ್ನೂ ಹೇಳುವುದಿಲ್ಲ. ಯಾಕೆಂದರೆ ಬದುಕಲಿಕ್ಕೆ ನೂರಾರು ದಾರಿಗಳಿವೆ. ಆದರೆ ನನ್ನ ಒತ್ತಾಯವೆಂದರೆ ಮೊದಲು ನೀವು ಇಂತಹ ಕೆಳದರ್ಜೆಯ ಜೀವನವನ್ನು ಜೀವಿಸುವುದನ್ನು ಬಿಡಿ. ಬೇರೆ ಮಹಿಳೆಯರ ಹಾಗೆ ನೀವು ಕೂಡ ಮದುವೆ ಮಾಡಿಕೊಳ್ಳಿ. ಕೌಟುಂಬಿಕ ಜೀವನದಲ್ಲಿ ನೆಲೆಗೊಳ್ಳಿ. ವಿನಾಕಾರಣವಾಗಿ ವೇಶ್ಯಾವಾಟಿಕೆಗೆ ದೂಡಲ್ಪಡುವ ಇಂತಹ ಸ್ಥಿತಿಯಲ್ಲಿ ಬದುಕುವುದನ್ನು ಮೊದಲು ನಿಲ್ಲಿಸಿ”.

ಬಾಬಾಸಾಹೇಬ್ ಅಂಬೇಡ್ಕರ್ ಕಾಮಾಟಿಪುರದ ದಲಿತ ಮಹಿಳೆಯರನ್ನುದ್ದೇಶಿಸಿ ಹೇಳಿದ ವಾಸ್ತವದ ಮಾತುಗಳಿವು. (Babasaheb Ambedkar writings and speeches. vol,17. Part III. P,150) ಬಹುಶಃ ಅಂಬೇಡ್ಕರರ ಈ ಮಾತುಗಳು ಪ್ರವಾದಿಯೋರ್ವನ ಮಾತುಗಳ ಹಾಗೆ ಕಂಡರೂ ಅಚ್ಚರಿ ಇಲ್ಲ. ಖಂಡಿತ, ಅಂಬೇಡ್ಕರ್ ದಲಿತರ ಪಾಲಿಗೆ ಪ್ರವಾದಿಯೇ. ಯಾಕೆಂದರೆ ವೃತ್ತಿಬದ್ಧ ಶ್ರೇಣೀಕೃತ ಈ ಜಾತಿ ವ್ಯವಸ್ಥೆಯನ್ನು ಬಗೆದು ಬಗೆದು ತೋರಿಸಿದ್ದು ಮತ್ತು ಅಂತಹ ಶ್ರೇಣೀಕೃತ ವ್ಯವಸ್ಥೆಯಲ್ಲಿ ದಿಕ್ಕುತಪ್ಪಿದ್ದ ತನ್ನವರನ್ನೂ ಎಚ್ಚರಿಸಿದ್ದು. ಸೂಕ್ತ ಮಾರ್ಗದಲ್ಲಿ ಚಲಿಸುವಂತೆ ಹೇಳಿದ್ದು. ಖಂಡಿತ ಪ್ರವಾದಿಯೋರ್ವನಿಗೆ ಮಾತ್ರ ಅಂತಹದ್ದು ಸಾಧ್ಯ. ಕಾಮಾಟಿಪುರದ ದಲಿತ ಮಹಿಳೆಯರನ್ನುದ್ದೇಶಿಸಿದ ಅಂಬೇಡ್ಕರರ ಮಾತುಗಳಲ್ಲಿ ಅನುರಣಿಸುವ ಮಾನವಪರ ಕಾಳಜಿಯನ್ನು, ಜೀವಪರಧೋರಣೆಯನ್ನು ಎಂಥವರಾದರೂ ಗುರುತಿಸಬಹುದು. ಅಂಬೇಡ್ಕರರ ಆ ಮಾತುಗಳು ಅದು ಅಂದಿಗೂ ಪ್ರಸ್ತುತ. ಇಂದಿಗೂ ಪ್ರಸ್ತುತ. ಈ ನಿಟ್ಟಿನಲಿ ಅಂತಹ ವೃತ್ತಿಯಲ್ಲಿ ಇರುವ ಯಾರೇ ಆಗಲಿ ಅಂಬೇಡ್ಕರರ ಮಾತುಗಳನ್ನು ಒಮ್ಮೆ ಓದಲಿ, ಕೇಳಲಿ ಮತ್ತು ಅಂತಹ ಹೀನ ಬದುಕಿನಿಂದ ಹೊರಬರಲಿ ಎಂಬುದೇ ಸಧ್ಯದ ಕಳಕಳಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಬಹಿರಂಗ

ಸಂಶೋಧಕ ‘ಡಾ. ಎಂ.ಎಂ. ಕಲಬುರ್ಗಿ’ ಅವರ ಕಿರು ಪರಿಚಯ

Published

on

ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ
 • ಇಂದು ನವೆಂಬರ್ 28. ಸಂಶೋಧಕ,ಚಿಂತಕ ಡಾ.ಎಂ.ಎಂ.ಕಲಬುರ್ಗಿ ಅವರು ಹುಟ್ಟಿದ ದಿನ. ಈ ಸಂದರ್ಭದಲ್ಲಿ ಅವರ ಕಿರುಪರಿಚಯ ನಮ್ಮ ‘ಸುದ್ದಿದಿನ‘ ಓದುಗರಿಗಾಗಿ.

ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ” ಎಂಬ ಬಸವಣ್ಣನವರ ಮಾತು ನಿಜವಾದ ಸಂಶೋಧಕನಿಗೆ ಮಾರ್ಗದರ್ಶಿಯಾಗಿದೆ. ಅಂದರೆ, ಆತ ಸತ್ಯಕ್ಕೆ ಕೇಡು ಒದಗದಂತೆ, ತನ್ನ ಸ್ವಾತಂತ್ರ್ಯಕ್ಕೆ ಭಂಗ ಬರದಂತೆ ಸಂಶೋಧನ ವ್ರತವನ್ನು ಮುಂದುವರಿಸಬೇಕು. ಗತಿಸಿದ ಪರಂಪರೆಯ ಪ್ರಕಟನೆಯ ಹೊರೆ ತನ್ನ ಮೇಲಿದೆ ಎಂಬ ಎಚ್ಚರ ಅವನಲ್ಲಿ ಮನೆಮಾಡಿರಬೇಕು. ಪರಂಪರೆಯನ್ನು ವ್ಯತ್ಯಸ್ತಗೊಳಿಸುವ, ಮುಚ್ಚಿ ಹಾಕುವ ಪಾಪಕಾರ್ಯ ಅವನ ಕೈಯಿಂದ ಜರುಗಬಾರದು. ಆದುದರಿಂದ, ಆತ ಆಕರಸಾಮಗ್ರಿಯನ್ನು ಅವಲಂಬಿಸಿ ಸತ್ಯವನ್ನು, ಅದು ಸಾಧ್ಯವಾಗದಿದ್ದರೆ ಸಂಭಾವ್ಯತೆಯನ್ನು ಸ್ಥಾಪಿಸಬೇಕಾಗುತ್ತದೆ. ಮುಂದಿನವರು ಈ ಸಂಭಾವ್ಯತೆಯನ್ನು ಹೊಸ ಆಕರಗಳಿಂದ ನಿಜಗೊಳಿಸಬಹುದಾಗಿದೆ. ಅದಕ್ಕಾಗಿಯೇ ” ಸಂಶೋಧನೆಯೆನ್ನುವುದು ಅಲ್ಪ ವಿರಾಮ, ಅರ್ಧವಿರಾಮಗಳ ಮೂಲಕ ಪೂರ್ಣವಿರಾಮಕ್ಕೆ ಸಾಗುವ ಕ್ರಿಯೆಯಾಗಿದೆ ” ಎನ್ನುವ ಸಂಶೋಧಕ ಡಾ || ಎಂ. ಎಂ. ಕಲಬುರ್ಗಿ ಅವರು ಈ ನಾಡು ಕಂಡ ಶ್ರೇಷ್ಠ ಚಿಂತಕರು.

ಶ್ರಮ ಸಂಸ್ಕೃತಿಯ ಒಕ್ಕಲುತನ ಮನೆತನ ಮತ್ತು ಮಧ್ಯಮವರ್ಗದ ಸುಸಂಸ್ಕೃತ ಅವಿಭಕ್ತ ಕುಟುಂಬದಲ್ಲಿ 28ನವೆಂಬರ್ 1938 ರಲ್ಲಿಹುಟ್ಟಿದ ಕಲಬುರ್ಗಿಯವರು ಶ್ರಮಮೌಲ್ಯದ ಆರಾಧಕರಾಗಿ ಅನುಷ್ಠಾನನಿಷ್ಠರಾಗಿ ಅರಳಿದವರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮ ಯರಗಲ್ಲದಲ್ಲಿ, ಮಾಧ್ಯಮಿಕ ಶಿಕ್ಷಣವನ್ನು ಸಿಂದಗಿಯಲ್ಲಿ ಪೂರೈಸಿದರು. ವಿಜಯಪುರದ ವಿಜಯ ಕಾಲೇಜಿನಿಂದ ಬಿ. ಎ. ಪದವಿಯನ್ನು, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ವಿಭಾಗದಿಂದ ಎಂ. ಎ. ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ ಪ್ರಶಸ್ತಿಸಹಿತ ಗಳಿಸಿದ ಶ್ರೀಯುತರು ” ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ” ಎಂಬ ವಿಷಯದ ಮೇಲೆ ಪಿಎಚ್. ಡಿ ಸಂಪಾದಿಸಿದರು. ತಮ್ಮ ಗುರುಗಳಾದ ಶ್ರೀ ಬಿ. ಟಿ. ಸಾಸನೂರರ ಮತ್ತು ಡಾ || ಆರ್. ಸಿ. ಹಿರೇಮಠರ ನೆರಳಿನಲ್ಲಿ ದೃಢವಾದ ಹೆಜ್ಜೆಯಿಟ್ಟರು. “ದುಡಿಯುವವನ ಮನಸ್ಸು ಸ್ವಚ್ಛವಿರುತ್ತದೆ” ಎಂಬ ಡಾ|| ಫ. ಗು. ಹಳಕಟ್ಟಿಯವರ ವಾಕ್ಯ ಇವರ ಎಳೆಯ ಮನಸ್ಸನ್ನು ಪ್ರಭಾವಿಸಿದ್ದಿತು. “ಜನಮೆಚ್ಚಿನಡೆಕೊಂಡರೇನುಂಟು ಲೋಕದಿ ಮನಮೆಚ್ಚಿನಡೆಕೊಂಬುದೇ ಚೆಂದವು” ಎಂದು ಮುನ್ನಡೆದು ಮಹಾಮಾರ್ಗ ಕ್ರಮಿಸಿದ ಕ್ರಿಯಾಶೀಲ ವಿದ್ವಾಂಸರು, ಡಾ. ಕಲಬುರ್ಗಿಯವರು.

ಡಾ. ಎಂ. ಎಂ. ಕಲಬುರ್ಗಿ ಅವರದು ಬಹುಮುಖ ವ್ಯಕ್ತಿತ್ವ ; ಬಹುಮುಖ ಪ್ರತಿಭೆ ; ಬಹುಮುಖ ಕಾರ್ಯಯೋಜನೆ. ಕನ್ನಡದ ಶ್ರೇಷ್ಠ ಪ್ರಾಧ್ಯಾಪಕರಾಗಿ, ಉನ್ನತಶ್ರೇಣಿಯ ಸಂಶೋಧಕರಾಗಿ, ಸಮರ್ಥ ಸಂಶೋಧನ ಮಾರ್ಗದರ್ಶಕರಾಗಿ, ವಿಭಾಗದ ದಕ್ಷ ಅಧ್ಯಕ್ಷರಾಗಿ, ಕನ್ನಡ ವಿಶ್ವವಿದ್ಯಾಲಯದ ಮಾದರಿ ಕುಲಪತಿಗಳಾಗಿ, ಅನೇಕ ವಿನೂತನ ಯೋಜನೆಗಳ ಯೋಜಕರಾಗಿ, ಹಲವಾರು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಸಂಘ-ಸಂಸ್ಥೆಗಳ ನಿರ್ದೇಶಕರಾಗಿ ಅವರು ಮಾಡಿದ ಕಾರ್ಯಚಟುವಟಿಕೆಗಳು ಅಚ್ಚರಿ ಮೂಡಿಸುವಂತಿವೆ. ಡಾ || ಕಲಬುರ್ಗಿಯವರದು ‘ಸತ್ಯಶೋಧನೆ’ ಗೆ ಮತ್ತೊಂದು ಹೆಸರು. “ಭಾರತದ ಭಾವನಿಷ್ಠ ರಾಷ್ಟ್ರದಲ್ಲಿ ಸಂಶೋಧನೆ ಸರಳ ದಾರಿಯಲ್ಲ, ಕಹಿಸತ್ಯ ಹೇಳಬಾರದು ಎಂಬ ಸಂಪ್ರದಾಯದ ವಾರಸುದಾರರಾದ ಭಾರತೀಯರಿಗೆ ಅಂಥ ಸತ್ಯ ಸಹಜವಾಗಿಯೇ ಸಿಹಿ ಎನಿಸುವುದಿಲ್ಲ. ಹೀಗಾಗಿ ಈ ರಾಷ್ಟ್ರದಲ್ಲಿ ಸಂಶೋಧಕ ಆಗಾಗ ಸಣ್ಣ ಸಣ್ಣ ಶಿಲುಬೆಗಳನ್ನೇರಬೇಕಾಗುತ್ತದೆ. ‘ಮುಗ್ಧ’ರೊಂದಿಗೆ ‘ಜಾಣ’ರೂ ಕೆಲವೊಮ್ಮೆ ಕೈಗೂಡಿಸಿ ಸಂಶೋಧಕನನ್ನು ಅಂದರೆ ಸತ್ಯವನ್ನು ಹಿಂಸಿಸುವಲ್ಲಿ ತೃಪ್ತಿಪಡುತ್ತಾರೆ. ಇಂಥ ಪ್ರಸಂಗಗಳಿಂದಾಗಿ ಭಾರತೀಯ ಸಂಶೋಧಕ ಅನೇಕ ಅಗ್ನಿಕುಂಡಗಳನ್ನು ದಾಟಬೇಕಾಗುತ್ತದೆ. ‘ ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಬಹುಶಃ ನನ್ನ ತಲೆಮಾರಿನ ಇತರ ಸಂಶೋಧಕರಿಗಿಂತ ಪರಿಸರವು ನನ್ನ ಕಾಲ ಕೆಳಗೆ ತೋಡಿದ ಅಗ್ನಿಕುಂಡಗಳೇ ದೊಡ್ಡವೆಂದು ತೋರುತ್ತದೆ. ಆದರೆ ಕಾಲ ಕೆಳಗಿನ ಬೆಂಕಿಗಿಂತ ಕಣ್ಣ ಮುಂದಿನ ಬೆಳಕು ದೊಡ್ಡದೆಂಬ ನಂಬಿಕೆ ನನ್ನನ್ನು ಈವರೆಗೆ ಉಳಿಸಿದೆ, ಬೆಳೆಸಿದೆಯೆಂದು ನಂಬಿದ್ದೇನೆ”. ಇಂಥ ಆತ್ಮವಿಶ್ವಾಸ, ಸತ್ಯನಿಷ್ಠುರ ಪ್ರೀಯರಾದ ಕಲಬುರ್ಗಿಯವರು ಸಂಶೋಧಕರ ಮಿತ್ರ, ಸೌಜನ್ಯದ ಸಾಕಾರಮೂರ್ತಿ, ಶಿಷ್ಯಾನುರಾಗಿ, ಮಾರ್ಗಕಾರ ಪ್ರತಿಭಾ ಸಂಪನ್ನ, ಸಾಹಿತ್ಯ ಸಂಸ್ಕೃತಿಯ ಧ್ವನಿ ಎಂದೆಲ್ಲಾ ಗುರುತಿಸಲ್ಪಟ್ಟಿದ್ದಾರೆ, ಗೌರವಿಸಲ್ಪಟ್ಟಿದ್ದಾರೆ.

ಡಾ || ಎಂ. ಎಂ. ಕಲಬುರ್ಗಿ ಅವರ ಸಂಶೋಧನ ಕ್ಷೇತ್ರಗಳ – ವಿಷಯಗಳ ಹರವು ತುಂಬ ವಿಸ್ತಾರ, ವ್ಯಾಪ್ತಿ ಬಲು ದೊಡ್ಡದು. ಅವರು ನಿರಂತರವಾಗಿ ಕೈಕೊಂಡ ಸಂಶೋಧನೆಯ ಫಲವಾಗಿ ನೂರಕ್ಕೂ ಹೆಚ್ಚು ಕೃತಿಗಳು ಹಾಗೂ ‘ಮಾರ್ಗ’ ಹೆಸರಿನ ಎಂಟು ಸಂಪುಟಗಳಲ್ಲಿ ಏಳುನೂರಕ್ಕೂ ಹೆಚ್ಚು ಸಂಶೋಧನ ಸಂಪ್ರಬಂಧಗಳು ಪ್ರಕಟವಾಗಿವೆ. ಅವರ ಕನ್ನಡ ಸಂಶೋಧನಾ ಶಾಸ್ತ್ರ, ಕನ್ನಡ ನಾಮ ವಿಜ್ಞಾನ, ಕರ್ನಾಟಕದ ಕೈಫಿಯತ್ತುಗಳು, ಇಮ್ಮಡಿ ಚಿಕ್ಕ ಭೊಪಾಲನ ಸಾಂಗತ್ಯ, ಶಾಸನ ವ್ಯಾಸಂಗ ಮೊದಲಾದ ಕೃತಿಗಳು ಆಯಾ ಕ್ಷೇತ್ರಗಳಲ್ಲಿ ಸಂಶೋಧನೆ ಕೈಕೊಳ್ಳುವವರಿಗೆ ಮಾರ್ಗದರ್ಶಿಯಾಗಿವೆ. ಡಾ. ಕಲಬುರ್ಗಿಯವರು ಯೋಜನೆಗಳ ಬಹುದೊಡ್ಡ ನಿಕ್ಷೇಪವಾಗಿದ್ದರು. ಅವರ ತಲೆಯೊಂದು ಯೋಜನೆಗಳ ಭಂಡಾರವಾಗಿತ್ತು. ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿದ್ದಾಗ ಅವರು ಕೈಕೊಂಡ ವೈಯಕ್ತಿಕ ನೆಲೆಯ ಯುಜಿಸಿ ಅನುದಾನಿತ ಯೋಜನೆಗಳು, ಬಸವಪೀಠದ ಪ್ರಾಧ್ಯಾಪಕರಾಗಿದ್ದಾಗ, ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದಾಗ ಹಾಕಿಕೊಂಡ ಸಾಂಘಿಕ ಯೋಜನೆಗಳು ಅವರ ಶೈಕ್ಷಣಿಕ ಸಾಧನೆಗೆ ಸಾಕ್ಷಿಯಂತಿದ್ದರೆ, ಸಮಗ್ರ ವಚನ ಸಾಹಿತ್ಯ ಪ್ರಕಟನ ಯೋಜನೆ, ಸಮಗ್ರ ದಾಸಸಾಹಿತ್ಯ ಪ್ರಕಟನ ಯೋಜನೆ, ಪ್ರಾಚೀನ ಅಪ್ರಕಟಿತ ಕನ್ನಡ ಸಾಹಿತ್ಯ ಪ್ರಕಟನ ಯೋಜನೆ, ಡಾ ಫ. ಗು. ಹಳಕಟ್ಟಿ ಸಮಗ್ರ ಸಾಹಿತ್ಯ ಪ್ರಕಟನ ಯೋಜನೆ, ಬಸವರಾಜ ಕಟ್ಟಿಮನಿ ಸಮಗ್ರ ಸಾಹಿತ್ಯ ಪ್ರಕಟನ ಯೋಜನೆ, ಆದಿಲ್ ಶಾಹಿ ಸಾಹಿತ್ಯ ಅನುವಾದ ಯೋಜನೆ, ಬಹುಭಾಷಾ ವಚನ ಅನುವಾದ ಯೋಜನೆ ಮೊದಲಾದವು ಅವರ ಸಾಂಸ್ಕೃತಿಕ, ಸಾರಸ್ವತ ಪ್ರೀತಿಯ ದ್ಯೋತಕವೆನಿಸಿವೆ.

ಕನ್ನಡದ ಕೆಲಸಕ್ಕೆ ಎಷ್ಟು ಸಂಸ್ಥೆಗಳಿದ್ದರೂ ಸಾಲದು ಎನ್ನುತ್ತಿದ್ದ ಕಲಬುರ್ಗಿಯವರು ಜಾತಿ, ಪ್ರದೇಶ ಇತ್ಯಾದಿಗಳನ್ನು ಮೀರಿ ಕನ್ನಡ ಕೆಲಸಕ್ಕೆ ಮುಂದು ಬರುವ ಸಂಸ್ಥೆಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ಅವುಗಳಲ್ಲಿ ಗದುಗಿನ ತೋಂಟದಾರ್ಯ ಮಠ, ಮೈಸೂರಿನ ಸುತ್ತೂರು ಮಠ, ವಿಜಯಪುರದ ಬಿ. ಎಲ್. ಡಿ. ಇ ಸಂಸ್ಥೆ, ಬೆಳಗಾವಿಯ ಕೆ. ಎಲ್. ಇ ಸಂಸ್ಥೆ ಮುಂತಾದವುಗಳು ಡಾ. ಕಲಬುರ್ಗಿಯವರು ಹಾಕಿಕೊಟ್ಟ ಯೋಜನೆಗಳ ಮೂಲಕ ವಿಶೇಷ ಪ್ರಸಿದ್ಧಿಗೆ ಪಾತ್ರವಾಗಿವೆ. ಅವರು ಯಾವುದೇ ಸಂಸ್ಥೆಯ ಅಧಿಕಾರವನ್ನು ವಹಿಸಿಕೊಳ್ಳಲಿ ಅದಕ್ಕೆ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಳ್ಳುತ್ತಿದ್ದರು. ಡಾ. ಕಲಬುರ್ಗಿಯವರ ಪರಿಶ್ರಮಕ್ಕೆ ತಕ್ಕಂತೆ ಅನೇಕ ಉನ್ನತ ಪ್ರಶಸ್ತಿ – ಗೌರವಗಳು ಅವರಿಗೆ ಲಭಿಸಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡೆಮಿ, ನೃಪತುಂಗ ಪ್ರಶಸ್ತಿ, ಪಂಪ ಪ್ರಶಸ್ತಿ, ರನ್ನ ಪ್ರಶಸ್ತಿ, ರಾಷ್ಟ್ರೀಯ ಬಸವ ಪ್ರಶಸ್ತಿ ಮುಂತಾದವುಗಳು ಅವರ ಮುಡಿಗೇರಿದವು. ಆದರೆ ಈ ಯಾವ ಗೌರವ-ಪ್ರಶಸ್ತಿಗಳೂ ಅವರ ತಲೆ ತಿರುಗಿಸಲಿಲ್ಲ. “ಅಂಬಲಿ ಕಂಬಳಿ ಆಸ್ತಿ ಮಿಕ್ಕಿದ್ದೆಲ್ಲ ಜಾಸ್ತಿ” ಎಂಬ ತಮ್ಮ ತಂದೆಯವರ ಆದರ್ಶಕ್ಕೆ ಅವರು ಕಟಿಬದ್ಧರಾಗಿದ್ದರು. ಕೆಲಸ ಮಾಡುವುದೊಂದೆ ನನ್ನ ಕರ್ತವ್ಯವೆಂದು ಅವರು ಬದುಕಿನುದ್ದಕ್ಕೂ ವಿನಯದಿಂದ ಬಾಗಿ ನಡೆದರು.

ಡಾ. ಎಂ. ಎಂ. ಕಲಬುರ್ಗಿಯವರು ಅನೇಕ ಸಂಘ – ಸಂಸ್ಥೆಗಳಿಗೆ ಸಾಹಿತ್ಯಿಕವಾಗಿ, ಸಾಮಾಜಿಕವಾಗಿ ಮಾರ್ಗದರ್ಶನ ನೀಡುವುದರ ಜೊತೆಗೆ ಶರಣರು ಕಂಡ ಸಮಾನತೆಯ – ಸದಾಚಾರದ ಸ್ವಸ್ಥಸಮಾಜ ನಿರ್ಮಾಣವಾಗಬೇಕೆಂದು ಬಯಸಿ, ಭಾಷಣ – ಬರಹಗಳ ಮೂಲಕ ಅಸತ್ಯ, ಅನ್ಯಾಯ, ಮೂಢಾಚಾರಗಳನ್ನು ಖಂಡಿಸುತ್ತ ಸಾಮಾಜಿಕರಲ್ಲಿ ಜಾಗೃತಿಯನ್ನು ಮೂಡಿಸುವ ಕಾರ್ಯದಲ್ಲಿ ಅವ್ಯಾಹತವಾಗಿ ತೊಡಗಿಕೊಂಡರು. ಸ್ಥಾವರಗೊಂಡ ವ್ಯವಸ್ಥೆಯನ್ನು ಚಲನಶೀಲಗೊಳಿಸಬೇಕು, ಜಂಗಮಗೊಳಿಸಬೇಕು ಎಂದು ಸಮಾಜ ಶುದ್ಧಿಯ ಕಾರ್ಯದಲ್ಲಿ ನಿರಂತರ ನಿರತರಾಗಿದ್ದರು. ಅವರ ಪ್ರಖರ ವಿಚಾರಗಳು, ವೈಚಾರಿಕ ನಿಲುವುಗಳು, ನಿಷ್ಠುರ ಸತ್ಯಗಳು ಪಟ್ಟಭದ್ರ ಹಿತಾಸಕ್ತಿಗಳಿಗೆ, ಸಂಕುಚಿತ ಭಾವದ ಸನಾತನಿಗಳಿಗೆ ಅಪಥ್ಯವೆನಿಸಿದವು. ಹೀಗಾಗಿ ಸತ್ಯಶೋಧಕರಾದ ಇವರು ೩೦-೦೮-೨೦೧೫ ರಂದು ದುಷ್ಟಶಕ್ತಿಗಳ ಗುಂಡೇಟಿಗೆ ಬಲಿಯಾಗಬೇಕಾಯಿತು, ಕರ್ನಾಟಕದ ಇತಿಹಾಸದಲ್ಲಿ ಅದೊಂದು ಕರಾಳ ದಿನವೆನಿಸಿತು.

“ನನ್ನ ಬಲ, ನನ್ನ ಛಲ ನೀರು ಗೊಬ್ಬರ ನನಗೆ.
ನಾನು ಹುಟ್ಟಿದ್ದು ಸಾಯಲಿಕ್ಕೆ ಅಲ್ಲ,
ಸೂರ್ಯ ಚಂದ್ರರ ಕೂಡ ಬದುಕಲಿಕ್ಕೆ”
ಎನ್ನುವ ಡಾ. ಕಲಬುರ್ಗಿಯವರು ನಿಜವಾಗಿಯೂ ಸಾಯಲಿಕ್ಕೆ ಹುಟ್ಟಲಿಲ್ಲ, ‘ಸತ್ಯ-ಸತ್ವ-ತತ್ವ’ಗಳನ್ನು ಬದುಕಲಿಕ್ಕೆ ಹುಟ್ಟಿದವರು. ಹೀಗಾಗಿ ಡಾ. ಕಲಬುರ್ಗಿಯವರೆಂದರೆ ಎಲ್ಲರಿಗೂ ಒಂದು ಅಚ್ಚರಿ, ವಿಸ್ಮಯ, ಬೆರಗು, ಎಚ್ಚರ.

ಕೃಪೆ : ಡಾ. ಎಂ. ಎಂ. ಕಲಬುರ್ಗಿ “ಜಗಜ್ಜಾಲ ಸಂಚಿಕೆ”

‘ವಿಶ್ವ ಪೂಜಾರ’ ಅವರ ಫೇಸ್‌ಬುಕ್‌ ವಾಲ್ ನಿಂದ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಬಹಿರಂಗ

ಆರೆಸ್ಸೆಸ್ ಗೆ ಅಂಬೇಡ್ಕರ್ ಕೃತಿಗಳನ್ನು ಓದಿಸುವ ಧೈರ್ಯವಿದೆಯಾ?

Published

on

 • ಹರ್ಷಕುಮಾರ್ ಕುಗ್ವೆ

ದೇಶದ ಸಾವಿರಾರು ವರ್ಷಗಳ ಇತಿಹಾಸದಲ್ಲಿ ಸಮಾಜದ ಜಾತಿ- ಲಿಂಗ ತಾರತಮ್ಯವನ್ನು ಹೋಗಲಾಡಿಸಲು ಬುದ್ಧ, ಬಸವ, ಫುಲೆ, ಶಾಹು, ಅಂಬೇಡ್ಕರ್ ಪೆರಿಯಾರ್ ಹೀಗೆ ಅದೆಷ್ಟೋ ದಾರ್ಶನಿಕರು ತಮ್ಮ ಬದುಕುಗಳನ್ನೇ ಸಮರ್ಪಿಸಿದ್ದಾರೆ. ಆದರೂ ಈ ದೇಶದ ವೈದಿಕಶಾಹಿಯನ್ನು ಸೋಲಿಸಲು ಸಾಧ್ಯವಾಗದೇ ಅದು ಮತ್ತಷ್ಟು ಬಲಗೊಳ್ಳುತ್ತಲೇ ಹೋಗಿದೆ, ಅದು ತನ್ನ ಕಬಂಧ ಬಾಹುಗಳನ್ನು ಮೈಲುದ್ದಕ್ಕೆ ಬೆಳೆಸಿಕೊಂಡು ಚಾಚಿಕೊಳ್ಳುತ್ತಾ ಎಲ್ಲವನ್ನೂ ತೆಕ್ಕೆಗೆ ತೆಗೆದುಕೊಳ್ಳುತ್ತಲೇ ಇದೆ. ಇದಕ್ಕೆ ವೈದಿಕಶಾಹಿ ಎಲ್ಲಾ ಕಾಲದಲ್ಲಿ ದಮನದ ತಂತ್ರವನ್ನು ಬಳಸಿದ್ದರೆ ಸಾಧ್ಯವಾಗುತ್ತಿರಲಿಲ್ಲ. ಬದಲಿಗೆ ಅದು ವಂಚನೆ-ನಯವಂಚನೆಯ ತಂತ್ರಗಳನ್ನು ಬಳಸಿರುವುದು ಪ್ರಮುಖ ಕಾರಣ ಎನಿಸುತ್ತದೆ. ಕೌಟಿಲ್ಲ ಹೇಳಿದ್ದ ರಾಜನೀತಿಯ ಚತುರೋಪಾಯಗಳಾದ ಸಾಮ, ದಾನ, ಭೇದ ಮತ್ತು ದಂಡ ಇವುಗಳನ್ನು ಪ್ರತಿ ಹಂತದಲ್ಲಿಯೂ ಅತ್ಯಂತ ಪರಿಣಾಮಕಾರಿಯಾಗಿ ವೈದಿಕಶಾಹಿ ಬಳಸಿಕೊಂಡಿರುವುದರಲ್ಲೇ ಅದರ ಯಶಸ್ಸನ್ನು ಕಾಣಬಹುದು.

ಮೊನ್ನೆ ನವೆಂಬರ್ 24ರಂದು ಬೆಂಗಳೂರಿನ ಆರ್ ವಿ ಕಾಲೇಜಿನಲ್ಲಿ ಬಿಜೆಪಿ ಆಚರಿಸಿದ ಸಂವಿಧಾನ ದಿನಾಚರಣೆಯಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಬಿ ಎಲ್ ಸಂತೋಷ್ ಆಡಿರುವ ಮಾತುಗಳನ್ನು ಮತ್ತು ಕೆಲ ದಲಿತ ಬಂಧುಗಳು ಆ ಮಾತುಗಳನ್ನು ಸೆಲೆಬ್ರೇಟ್ ಮಾಡಿರುವುದನ್ನು ನೋಡಿದಾಗ ವೈದಿಕಶಾಹಿ ನಡೆಸುವ ಈ ಕುಟಿಲ ಚಾಣಾಕ್ಷತನದ ಬಗ್ಗೆ ಯೋಚಿಸುವಂತಾಯಿತು.

ಬಿ ಎಲ್ ಸಂತೋ಼ಷ್ ಆಡಿರುವ ಮಾತುಗಳನ್ನು ಕೇಳಿದರೆ ಸಹಜವಾಗಿ ಈ ದೇಶದ ಸಂವಿಧಾನದ ಬಗ್ಗೆ ಮತ್ತು ಅಂಬೇಡ್ಕರ್ ಬಗ್ಗೆ ಅಭಿಮಾನ ಇರುವ ಯಾರೇ ಆದರೂ ಕ್ಲೀನ್ ಬೋಲ್ಡ್ ಆಗಿಬಿಡುತ್ತಾರೆ. ವಾಹ್ ಎಂತಾ realization! ಅದೂ ಆರೆಸ್ಸೆಸ್ಸಿಗನ ಬಾಯಿಯಲ್ಲಿ ಅಂಬೇಡ್ಕರ್ ಕೊಂಡಾಟದ ಮಾತುಗಳು! ಎನಿಸಿಬಿಡುತ್ತವೆ. ಆದರೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳನ್ನು, ಅವರ ಆಶಯ ಕನಸುಗಳನ್ನು ಅರ್ಥ ಮಾಡಿಕೊಂಡ ಯಾರಿಗೇ ಈ ವೈದಿಕಶಾಹಿ ಸಂತೋ಼ಷನ ಮಾತುಗಳು ಖುಷಿಗೊಳಿಸುವುದಿಲ್ಲ, ಆಕ್ರೋಶ ತರಿಸುತ್ತವೆ. ಕಾರಣವೇನೆಂದರೆ, ಯಾವ ವೈದಿಕಶಾಹಿಯನ್ನು ಹಿಮ್ಮೆಟ್ಟಿಸಲು ಬಾಬಾಸಾಹೇಬರು ತಮ್ಮ ಬದುಕಿನುದ್ದಕ್ಕೂ ಶ್ರಮಪಟ್ಟರೋ; ಯಾವ ವೈದಿಕಶಾಹಿಯ ಹುನ್ನಾರಗಳನ್ನು ತಮ್ಮ ಬರೆಹಗಳಲ್ಲಿ ಎಳೆಎಳೆಯಾಗಿ ಬಿಡಿಸಿಟ್ಟರೋ; ಯಾವ ವೈದಿಕಶಾಹಿಯ ಹತಾರಗಳನ್ನು ಕಾಂಗ್ರೆಸ್ ಮತ್ತು ಮಹಾತ್ಮ ಗಾಂಧಿಯಲ್ಲೂ ಕಂಡು ಅಂಬೇಡ್ಕರ್ ಕೆಂಡಾಮಂಡಲವಾಗಿದ್ದರೋ; ಯಾವ ವೈದಿಕಶಾಹಿಯ ಹಿಡಿತದಿಂದ ತನ್ನ ಸಮುದಾಯವನ್ನು ಮಾತ್ರವಲ್ಲ ಇಡೀ ಭರತಖಂಡವನ್ನು ಬಿಡುಗಡೆಗೊಳಿಸಲು ಇಚ್ಚಿಸಿದ್ದರೋ: ಯಾವ ವೈದಿಕಶಾಹಿಯ ಹಿಡಿತದಿಂದ ಜನರನ್ನು ತಪ್ಪಿಸಲು ವೈದಿಕ ಹಿಂದೂ ಧರ್ಮವನ್ನು ತ್ಯಜಿಸಿ ಸಮತೆಯ ಬೌದ್ಧ ಧರ್ಮಕ್ಕೆ ಮತಾಂತರಗೊಂಡರೋ; ಯಾವ ವೈದಿಕಶಾಹಿಯನ್ನು ಎದುರಿಸಲು ತನ್ನ ಅನುಯಾಯಿಗಳಿಗೆ “ಹಿಂದೂ ದೇವರುಗಳಾದ ರಾಮ, ವಿಷ್ಣು, ಮೊದಲಾದ ದೇವರುಗಳನ್ನು ನಾನು ಪೂಜಿಸುವುದಿಲ್ಲ” ಎಂಬ ಪ್ರತಿಜ್ಞೆಯನ್ನು ಬೋಧಿಸಿದ್ದರೋ; ಯಾವ ವೈದಿಕಶಾಹಿಯ ಸಂಪೂರ್ಣ ನಾಶವನ್ನು ಅಂಬೇಡ್ಕರ್ ಬಯಸಿದ್ದರೋ ಅದೇ ವೈದಿಕಶಾಹಿಯು ಅಂಬೇಡ್ಕರ್ ಅವರನ್ನು ದಿಢೀರನೆ ಇನ್ನಿಲ್ಲದಂತೆ ಹೊಗಳಲು, ಕೊಂಡಾಡಲು ಶುರುಮಾಡಿದೆ! ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಮತ್ತು ಅವರು ರಚಿಸಿದ ಸಂವಿಧಾನವನ್ನು ನರನಾಡಿಗಳಲ್ಲಿ ವೈದಿಕಶಾಹಿ ಚಿಂತನೆ ಮತ್ತು ಹುನ್ನಾರಗಳನ್ನೇ ಹೊಂದಿರುವ ಬಿ ಎಲ್ ಸಂತೋ಼ಷ್ ಕೊಂಡಾಡಿದ್ದನ್ನು ಕಂಡು “ಓ ವೈದಿಕಶಾಹಿಯ ಮನಪರಿವರ್ತನೆ ಆಗುತ್ತಿದೆ” ಎಂದುಕೊಳ್ಳೋಣವೇ? “ಅಂಬೇಡ್ಕರ್ ಕುರಿತು ಆರೆಸ್ಸೆಸ್ ತನ್ನ ಅಭಿಪ್ರಾಯ ಬದಲಿಸಿಕೊಳ್ಳುತ್ತಿದೆ” ಎಂದು ಭ್ರಮಿಸಿ ಸಂಭ್ರಮ ಪಡೋಣವೇ?

ಹಲವರುಷಗಳ ಹಿಂದೆ ಇದೇ ಆರೆಸ್ಸೆಸ್ ಪಾಳಯದಲ್ಲಿ ಬೆಳೆದ ಅರುಣ್ ಶೌರಿ ಎಂಬಾತ ತನ್ನ “Worshipping false gods” ಕೃತಿಯಲ್ಲಿ ಅಂಬೇಡ್ಕರ್ ಒಬ್ಬ ಪೊಳ್ಳು ದೇವರು ಎಂದು ಜರಿದು ಅಪಮಾನಿಸಿದ್ದ. ಒಂದೆರಡು ವರ್ಷಗಳ ಹಿಂದೆ ಜರ್ಮನಿಯ ಯೂನಿವರ್ಸಿಟಿಯೊಂದರಲ್ಲಿರುವ ಬಾಲಗಂಗಾಧರ ಎಂಬ ಅವಿವೇಕಿಯಂತೂ ಅಂಬೇಡ್ಕರ್ ಒಬ್ಬ ಈಡಿಯಟ್ ಎಂದು ಹೇಳಿ ಬೆತ್ತಲಾಗಿದ್ದ, ಎರಡೇ ವರ್ಷದ ಹಿಂದೆ ಉತ್ತರ ಕನ್ನಡವನ್ನು ಪ್ರತಿನಿಧಿಸುವ ಆರೆಸ್ಸೆಸ್ ಚಿಂತನೆಯ ಮುಠ‍್ಠಾಳ ಸಂಸದನೊಬ್ಬ ಸಂವಿಧಾನವನ್ನೇ ಬದಲಿಸುತ್ತೇನೆ ಎಂದು ಹೇಳಿ ಕೊನೆಗೆ ಸಂಸತ್ತಿನಲ್ಲೇ ಕ್ಷಮಾಪಣೆ ಕೇಳಿದ್ದ. ಅರೆ, ಇವರೆಲ್ಲರೂ ಈ ಕ್ಷಣದಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಆರೆಸ್ಸೆಸ್ಸಿನ ನಿಕಟವರ್ತಿಗಳೇ. ಈಗ ಅದೇ ಆರೆಸ್ಸೆಸ್ಸಿನ ಬಿ ಎಲ್ ಸಂತೋ಼ಷ ಅಂಬೇಡ್ಕರ್ ಅವರನ್ನು ಅರ್ಥ ಮಾಡಿಕೊಂಡರೇನೇ ಸಂವಿಧಾನ ಅರ್ಥಮಾಡಿಕೊಳ‍್ಳಲು ಸಾಧ್ಯ ಎನ್ನುತ್ತಾನೆ! ಮಾತ್ರವಲ್ಲ “ಸಂವಿಧಾನ ಕೊಟ್ಟಿರುವ ಮೀಸಲಾತಿ ಇದೆಯಲ್ಲಾ ಅದು ನಾವು ಕೊಟ್ಟಿರುವ ಕೊಡುಗೆಯಲ್ಲ ಬದಲಿಗೆ ದಲಿತರನ್ನು ವಂಚಿಸಿದ ದೊಡ್ಡ ವರ್ಗವೊಂದು ಮಾಡಿಕೊಳ್ಳುತ್ತಿರುವ ಪ್ರಾಯಶ್ಚಿತ್ತ ಎನ್ನುತ್ತಾನೆ! ಎಂತಹಾ ದಾರ್ಶನಿಕ ಮಾತು!! ಇದರಲ್ಲಿನ ತರ್ಕವೇನೋ ಸರಿಯಾಗಿದೆ. ಆದರೆ ಆತ ಮುಂದುವರಿದು ‘ದಲಿತರನ್ನು ಶೂದ್ರರನ್ನು ಈ ದೇಶದಲ್ಲಿ ವಂಚಿಸಿರುವುದು ಬಹುದೊಡ್ಡ ವರ್ಗ ಎಂಬ ಹಸಿಹಸಿ ಸುಳ್ಳು ಹೇಳುತ್ತಾನೆ. ವಾಸ್ತವದಲ್ಲಿ ಇಡೀ ದೇಶದ ಬಹುದೊಡ್ಡ ವರ್ಗವನ್ನು ಅವಕಾಶಗಳನ್ನು ಚಾರಿತ್ರಿಕವಾಗಿ ವಂಚಿಸಿಕೊಂಡು ಬಂದಿದ್ದು ಈ ದೇಶ ಜನಸಂಖ್ಯೆ ಕೇವಲ 3-4 % ಇರುವ ಜನವರ್ಗ ಎಂಬ ಕಟು ಸತ್ಯವನ್ನು ಬೇಕೆಂದೇ ಮರೆಮಾಚುತ್ತಾನೆ.

ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಮಿಲ್ಲರ್ ಆಯೋಗದ ಅನುಸಾರವಾಗಿ ದಲಿತ-ಹಿಂದುಳಿತ ವರ್ಗಗಳ ಬಹುಸಂಖ್ಯಾತರಿಗೆ ಮೀಸಲಾತಿ ನೀಡಿದಾಗ ಅಂಡುಸುಟ್ಟ ಬೆಕ್ಕಿನಂತೆ ಆಡಿದ ಜನವರ್ಗ ಯಾವುದಾಗಿತ್ತು? ಅದು ಬಹದೊಡ್ಡ ವರ್ಗವೋ ಕೇವಲ ಬ್ರಾಹ್ಮಣ ಜಾತಿಯೋ? ಇದೇ ಕಾರಣಕ್ಕೆ ರಾಜೀನಾಮೆ ನೀಡಿದ್ದ ಇಂಜಿನಿಯರ್ ಸರ್ ಎಂ ವಿಶ್ವೇಶ್ವರಯ್ಯ ಅವರ ತಲೆಯಲ್ಲಿದ್ದ ಜಾತಿಭೂತ ಯಾವುದಾಗಿತ್ತು? ಆದರೆ ಅತ್ಯಾಶ್ಚರ್ಯ ಎಂಬಂತೆ ಈಗ ಈ ಆರೆಸ್ಸೆಸ್ಸಿಗ ಮೀಸಲಾತಿಯ ಸಮರ್ಥನೆಗೆ ನಿಂತಿದ್ದಾನೆ ಎಂದರೆ ಅದು ಮನಪರಿವರ್ತನೆ? ಈಗ ನೋಡಿ. ಮೀಸಲಾತಿ ವಿರುದ್ಧವಾಗಿ ಇಡೀ ದೇಶವನ್ನು ಎತ್ತಿ ಕಟ್ಟುತ್ತಿದ ಶೇಕಡಾ ಮೂರ್ನಾಲ್ಕು ಶೇಕಡಾ ಇರುವ ಜನರಿಗೆ ಕಳೆದ ವರ್ಷದಿಂದ 10% ಮೀಸಲಾತಿ ಸಿಗತೊಡಗಿದೆ. ಇಷ್ಟೂ ವರ್ಷಗಳ ಕಾಲ ಮೀಸಲಾತಿ ಎಂದರೇ ಉರಿದು ಬೀಳುತ್ತಿದ್ದವರು ಈಗ ತಮ್ಮ ಜನಸಂಖ್ಯೆಗಿಂತಲೂ ಎರಡು ಮೂರು ಪಟ್ಟು ಮೀಸಲಾತಿ ಪಡೆದುಕೊಳ್ಳುತ್ತಿದ್ದಂತೆ ಮೀಸಲಾತಿಯನ್ನು ಕೊಂಡಾಡತೊಡಗಿದ್ದಾರೆ! ತಿಳಿಯಿತಲ್ಲ ಈ ಮನಪರಿವರ್ತನೆಯ ಹಿಂದಿನ ಹಕೀಕತ್ತು? ದೇಶದಲ್ಲಿ ನಡೆಯುವ ಮನಪರಿವರ್ತನೆಗಳ ಹಿಂದೆ ಅಡಗಿರುವ ಸ್ವಾರ್ಥವೇನು ಎಂದು ಅರಿಯದೇ ಹೋದರೆ ವೈದಿಕಶಾಹಿ ತೋಡುವ ಖೆಡ್ಡಾದಲ್ಲಿ ಬಿದ್ದು ಹೊರಳಾಡಬೇಕಾಗುತ್ತದೆ ಅಷ್ಟೇ.

ಈಗ ಮೀಸಲಾತಿಯನ್ನೂ, ಅಂಬೇಡ್ಕರ್ ಅವರನ್ನೂ ಹಾಡಿ ಹೊಗಳುತ್ತಿರುವ ಬಿ ಎಲ್ ಸಂತೋ಼ಷ್ ಮತ್ತು ಅವನ ಚೇಲಾ ಬಾಲಾಗಳಿಗೆ ನಾವು ಕೆಲವೊಂದಿಷ್ಟು ಪ್ರಶ್ನೆಗಳನ್ನು ಕೇಳೋಣ. ಉತ್ತರಿಸುವ ಪ್ರಾಮಾಣಿಕತೆ ತೋರುತ್ತಾರೋ ನೋಡೋಣ.

 1. ನವೆಂಬರ್ 24ರಂದು ನೀವು ಹಮ್ಮಿಕೊಂಡ ಸಂವಿಧಾನ ದಿನಾಚರಣೆಯ ವಾರದ ಮೊದಲು ನೀವು ಪ್ರಚುರಪಡಿಸಿದ ಭಿತ್ತಿಪತ್ರದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಚಿತ್ರ ಇರಲಿಲ್ಲ. ಬದಲಾಗಿ ಸಂವಿಧಾನಕ್ಕೆ ಸಂಬಂಧವೇ ಇಲ್ಲದ ಶ್ಯಾಮ್ ಪ್ರಸಾದ್ ಮುಖರ್ಜಿಯ ಫೋಟೋ ಇತ್ತು. ಅಂಬೇಡ್ಕರ್ ವಾದಿಗಳು ನೀವು ಅಂಬೇಡ್ಕರ್ ಅವರಿಗೆ ಮಾಡಿದ ಅಪಮಾನದ ಬಗ್ಗೆ ಆಕ್ಷೇಪ ಎತ್ತಿದ ಕೂಡಲೇ ಬದಲಿಸಿದಿರಿ. ಈ ಮೊದಲು ಬಾಬಾಸಾಹೇಬರಿಗೆ ನೀವು ಮಾಡಿದ ಅಪಮಾನಕ್ಕೆ ನಿಜವಾದ ಕಾರಣ ಏನು?
 2. 1991ರಲ್ಲಿ ಮಂಡಲ್ ಆಯೋಗದ ವರದಿಯನ್ನು ವಿ ಪಿ ಸಿಂಗ್ ಜಾರಿಗೊಳಿಸಲು ಯತ್ನಿಸಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಿದ ನಂತರ ವಿ ಪಿ ಸಿಂಗ್ ಗೆ ನೀಡಿದ್ದ ಬೆಂಬಲವನ್ನು ಬಿಜೆಪಿ ಹಿಂತೆಗೆದುಕೊಂಡಿತ್ತು. ನಂತರ ಇಡೀ ದೇಶದಾದ್ಯಂತ ಎಬಿವಿಪಿ ಮೂಲಕ ಮಂಡಲ್-ಕಮಂಡಲ್ ಎಂದು ಘೋಷಿಸಿ ವ್ಯಾಪಕ ಹಿಂಸೆಯನ್ನು ಬಿಜೆಪಿ ನಡೆಸಿತ್ತು. ಮೀಸಲಾತಿ ಎಂದರೆ ಮೇಲ್ಜಾತಿಗಳ ಪ್ರಾಯಶ್ಚಿತ್ತ ಎನ್ನುತ್ತಿರುವ ನೀವು ಈ ಹಿಂದೆ ನಡೆಸಿರುವ ಮೀಸಲಾತಿ ವಿರೋಧಿ ಹಿಂಸೆಗೂ ಪ್ರಾಯಶ್ಚಿತ್ತ ಪಟ್ಟುಕೊಳ್ಳುವಿರಾ?
 3. ಮೋಹನ್ ಭಾಗ್ವತ್ ಮೊನ್ನೆ ಮೊನ್ನೆಯಷ್ಟೇ ಮೀಸಲಾತಿ ಬಗ್ಗೆ ಚರ್ಚೆಯಾಗಬೇಕು ಎಂದ. ಎಲ್ಲಿಯವರೆಗೆ ಈ ದೇಶದಲ್ಲಿ ಅಸಮಾನತೆ, ವಂಚನೆ ಇರುತ್ತದೆಯೋ ಅಲ್ಲಿಯವರೆಗೂ ಮೀಸಲಾತಿಯ ಬೇಕೇ ಬೇಡವೇ ಎಂಬ ಚರ್ಚೆ ಅನಗತ್ಯ. ಆದರೆ ಚರ್ಚೆ ಬೇಕು ಎನ್ನುವು ಆರೆಸ್ಸೆಸ್ ಮುಖಂಡರಿಗೆ ಯಾವ ಪ್ರಾಯಶ್ಚಿತ್ತ ಮಾಡುತ್ತೀರಿ?
 4. ಮೀಸಲಾತಿ ಎಂಬುದು ಅಂಬೇಡ್ಕರ್ ತಮಗಾದ ಅಪಮಾನದ ಕಾರಣಕ್ಕೆ ಸಂವಿಧಾನದಲ್ಲಿ ಸೇರಿಸಿದ್ದು ಎಂದಿದ್ದೀರಿ. ಇದಕ್ಕಿಂತ ಅಸಂಬದ್ಧವಾದ ಬೇರಿಲ್ಲ. ಈ ದೇಶದ ಇತಿಹಾಸವನ್ನು ಸಮಗ್ರವಾಗಿ ಅಧ್ಯಯನ ಮಾಡಿ, ದೇಶದ ನಾನಾ ಜಾತಿ ವರ್ಗಗಳ ವಿಕಾಸವನ್ನು, ಅವು ತುಳಿತಕ್ಕೊಳಗಾದ ಬಗೆಯನ್ನು ದಾಖಲಿಸಿದ ಬೆರಳೆಣಿಕೆಯಷ್ಟು ವಿದ್ವಾಂಸರಲ್ಲಿ ಅಂಬೇಡ್ಕರ್ ಕೂಡಾ ಒಬ್ಬರು. ಸಂವಿಧಾನದಲ್ಲಿ ಮೀಸಲಾತಿ ಸೇರಿಸಲು ಸಮಾಜದ ಬಗ್ಗೆ ಅಂಬೇಡ್ಕರ್ ಅವರಿಗೆ ಇದ್ದ ಸಮಾಜದ ಮತ್ತು ಚರಿತ್ರೆಯ ಅವಗಾಹನೆ ಹಾಗೂ ಈ ದೇಶವನ್ನು ಸಮಾಜವಾದಿ ಹಾದಿಯಲ್ಲಿ ಕಟ್ಟಬೇಕು ಈ ಮೂಲಕ ಎಲ್ಲಾ ವಂಚಿತ ಸಮುದಾಯಗಳು ನ್ಯಾಯ ಪಡೆಯಬೇಕು ಎಂಬ ಅದಮ್ಯ ಆಶೆಯೇ ಪ್ರಮುಖ ಕಾರಣ. ಇದನ್ನು ಬೇಕೆಂದೇ ಮರೆಮಾಚುವ ಪ್ರಯತ್ನ ಮಾಡುತ್ತಿದ್ದೀರಲ್ಲವೇ?
 5. ಮೇಲ್ಜಾತಿಗಳಿಗೆ 10% ಮೀಸಲಾತಿ ಸಿಕ್ಕಿದ ಮೇಲೆ ಮೀಸಲಾತಿಯ ಬಗ್ಗೆ ವರಸೆಯನ್ನೇ ಬದಲಿಸಿಕೊಳ್ಳುತ್ತಿರುವ ನೀವು ದೇಶದ ಪ್ರಮುಖ ಉದ್ಯೋಗ ಕ್ಷೇತ್ರವಾದ ಖಾಸಗಿ ಕ್ಷೇತ್ರಕ್ಕೆ ಮೀಸಲಾತಿ ವಿಸ್ತರಣೆ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂದು ಹೇಳಿ. ಖಾಸಗಿ ಕ್ಷೇತ್ರ ಹೇಗೂ ಪ್ರಮುಖವಾಗಿ ಮೇಲ್ಜಾತಿ “ಪ್ರತಿಭೆಗಳ” ಹಿಡಿತದಲ್ಲೇ ಇರೋದರಿಂದ ಅಲ್ಲಿ ಮೀಸಲಾತಿ ಬೇಡ ಎಂದು ನಿಮ್ಮ ಅಭಿಪ್ರಾಯವಾಗಿದ್ದರೆ ಸ್ಪಷ್ಟಪಡಿಸಿ. ಹೀಗಲ್ಲಾ ಖಾಸಗಿ ಕ್ಷೇತ್ರದಲ್ಲಿಯೂ ಮೇಲ್ಜಾತಿ ಜನರಿಗೆ ಪ್ರಾಯಶ‍್ಚಿತ್ತ ಬೇಕು ಎಂದು ನೀವು ಪ್ರಾಮಾಣಿಕವಾಗಿ ಒಪ್ಪುವುದೇ ಆದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ಖಾಸಗಿ ರಂಗದಲ್ಲಿ ಮೀಸಲಾತಿ ಜಾರಿಗೆ ತಿರುವ ಒತ್ತಾಯವನ್ನು ಯಾವಾಗ ಹಾಕುತ್ತೀರಿ ತಿಳಿಸಿ.
 6. ಅಂಬೇಡ್ಕರ್ ಅವರನ್ನು ನೀವು ಅರ್ಥ ಮಾಡಿಕೊಳ್ಳಲು ಶುರು ಮಾಡಿದ್ದು ತೀರಾ ಇತ್ತೀಚೆಗೆ ಎಂದು ಹೇಳಿದ್ದೀರಿ. ಸಂತೋಷ. ಅಂಬೇಡ್ಕರ್ ಅವರು ಹಿಂದೂ ಧರ್ಮದ ಕುರಿತು ಖಚಿತ ನಿರ್ಧಾರಗಳಿಗೆ ಬಂದಿದ್ದರು. ಉದಾಹರಣೆಗೆ ಹಿಂದೂ ಧರ್ಮದಲ್ಲಿ ಪ್ರಜಾಪ್ರಭುತ್ವಕ್ಕೆ ಅವಕಾಶವಿಲ್ಲ. ಹಿಂದೂ ಧರ್ಮ ಜಾತಿಗಳಿಂದ ನಿರ್ಮಿಲ್ಪಟ್ಟ ಮೆಟ್ಟಿಲುಗಳಿಲ್ಲ ಉಪ್ಪರಿಗೆ ಮನೆ ಎಂದು ಹೇಳಿದ್ದರು. ಇಲ್ಲಿ ಜಾತಿಜಾತಿಗಳ ನಡುವೆ ಸಹೋದರತೆಗೆ ಅವಕಾಶವಿಲ್ಲ, ಸ್ವಾತಂತ್ರ್ಯ, ಸಮಾನತೆಗಳೂ ಇಲ್ಲ. ಹೀಗಾಗಿ ಹಿಂದೂ ಧರ್ಮದ ಈ ಚೌಕಟ್ಟಿನಿಂದ ಹೊರಬರದೇ ತಳಸಮುದಾಯಗಳಿಗೆ ಬಿಡುಗಡೆ ಇಲ್ಲ ಎಂದು ಖಚಿತವಾಗಿ ಹೇಳಿದ್ದರು. ಫಿಲಾಸಫಿ ಆಫ್ ಹಿಂದೂಯಿಸಂ ನಲ್ಲಿ ಹಿಂದೂ ಧರ್ಮ ಯಾವುದರ ತಳಹದಿಯ ಮೇಲೆ ನಿಂತಿದೆ ಎಂದು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ ಅಂಬೇಡ್ಕರ್. ಹಿಂದೂ ಧರ್ಮದ ಕುರಿತ ಅಂಬೇಡ್ಕರ್ ಅವರ ಈ ಖಚಿತ ಮತ್ತು ದಿಟ್ಟ ಅಭಿಪ್ರಾಯಗಳ ಕುರಿತು ನಿಮ್ಮ ಖಚಿತ ಅಭಿಪ್ರಾಯವೇನು?
 7. ಹಿಂದೂ ರಾಷ್ಟ್ರದ ಸ್ಥಾಪನೆ ಈ ದೇಶದ ದಲಿತರಿಗೆ-ಶೂದ್ರರಿಗೆ, ಬಹುಜನರ ಪಾಲಿಗೆ ಕಟ್ಟುವ ಸಮಾಧಿ ಎಂಬುದು ಅಂಬೇಡ್ಕರ್ ಅವರ ಅಭಿಪ್ರಾಯವಾಗಿತ್ತು. ನೀವಿದನ್ನು ಒಪ್ಪುತ್ತೀರಾ?
 8. ಕಾಶ್ಮೀರದ ಕುರಿತಂತೆ ಅಂಬೇಡ್ಕರ್ 1951ರಲ್ಲಿ ಸ್ಪಷ್ಟವಾಗಿ ತಿಳಿಸುತ್ತಾ, ಕಾಶ್ಮೀರಿಗಳ ಜನಾಭಿಪ್ರಾಯ ಸಂಗ್ರಹಿಸುವುದೇ ಏಕೈಕ ಪರಿಹಾರ ಮಾರ್ಗ ಎಂದು ಹೇಳಿದ್ದರು. ಅಂಬೇಡ್ಕರ್ ಅವರು ಎಲ್ಲಿಯೂ ಆರ್ಟಿಕಲ್ 370 ರದ್ದಾಗಬೇಕು ಎಂದು ಹೇಳಿದ ದಾಖಲೆ ಇಲ್ಲ ಕಾಶ್ಮೀರ ಸಮಸ್ಯೆಗೆ ಅಂಬೇಡ್ಕರ್ ತಿಳಿಸಿದ್ದ ಪರಿಹಾರ ಮಾರ್ಗವನ್ನು ನೀವು ಒಪ್ಪಿಕೊಳ್ಳುತ್ತೀರಾ? ಸಾಧ್ಯವಿಲ್ಲ ಅಲ್ಲವೇ?
 9. ನಿಮ್ಮ ಆರೆಸ್ಸೆಸ್- ಬಿಜೆಪಿ ಕಾರ್ಯಕರ್ತರಿಗೆ ಅಂಬೇಡ್ಕರ್ ಅವರ “ಫಿಲಾಸಫಿ ಆಫ್ ಹಿಂದೂಯಿಸಂ” “ಆನ್ಹಿಲೇಶನ್ ಆಫ್ ಕ್ಯಾಸ್ಟ್” “ಬುದ್ಧ ಅಂಡ್ ಹಿಸ್ ದಮ್ಮ” ಇವುಗಳನ್ನು ಓದಿಸುವ ಧೈರ್ಯ ನಿಮಗಿದೆಯೇ? ಅಥವಾ ಕಾಂಗ್ರೆಸ್ ಬಗ್ಗೆ ಅಂಬೇಡ್ಕರ್ ಅವರಿಗಿದ್ದ ಅಸಮಾಧನವನ್ನು ಮಾತ್ರ ಸೆಲೆಕ್ಟಿವ್ ಆಗಿ ಉಣಬಡಿಸುತ್ತಾ ನಿಮ್ಮ ಅಜೆಂಡಾವನ್ನಷ್ಟೇ ಈಡೇರಿಸಿಕೊಳ್ಳುತ್ತೀರೋ?
  ಈ ಪ್ರಶ್ನೆಗಳಿಗೆ ಬಿ ಎಲ್ ಸಂತೋ಼ಷ್ ಆಗಲೀ, ಕಾರ್ಪೊರೇಟ್ ಚೆಡ್ಡಿ ಮೋಹನ್ ದಾಸ್ ಪೈ ಆಗಲೀ ಇನ್ನಾರೇ ಆರೆಸ್ಸೆಸ್ ಪಂಡಿತರಾಗಲೀ ಪ್ರಾಮಾಣಿಕವಾಗಿ ಉತ್ತರಿಸುತ್ತಾರೆ ಎಂಬ ಭ್ರಮೆ ಇಲ್ಲ. ಆದರೆ ಇವರ ಬಂಡವಾಳ ಬಯಲು ಮಾಡಲು ಈ ಪ್ರಶ್ನೆಗಳ ಜೊತೆಗೆ ಇನ್ನಷ್ಟು ಇಂತದೇ ಪ್ರಶ್ನೆಗಳು ಇವರ ಮುಖಕ್ಕೆ ಹಿಡಿಯಬೇಕು.

ಒಂದು ಕಡೆಯಲ್ಲಿ ಮುಂದೊಮ್ಮೆ ಬಾಬಾಸಾಹೇಬರಂತೆಯೇ ನೊಂದು ಬೆಂದು ಛಲದಿಂದ ಓದುತ್ತಿದ್ದ, ಬದುಕಿದ್ದರೆ ಮುಂದೆ ಪ್ರಕಾಶಮಾನವಾಗಿದ್ದ ಬೆಳಗಲಿದ್ದ ರೋಹಿತ್ ವೇಮುಲನಂಹವರನ್ನು ಆತ್ಮಹ್ಯತ್ಯೆಗೆ ತಳ್ಳುವುದು, ನಂತರ ಅವನು ಭಯೋತ್ಪಾದಕ ಎಂಬಂತೆ ಬಿಂಬಿಸುವುದು ಹಾಗೆಯೇ ಡಾ. ಆನಂದ್ ತೇಲ್ತುಂಬ್ಡೆ, ಡಾ. ಸತ್ಯನಾರಾಯಣ ಅವರಂತಹ ಅಂಬೇಡ್ಕರ್ ವಾದಿ ವಿದ್ವಾಂಸರನ್ನು ಸುಳ್ಳು ಕೇಸುಗಳಲ್ಲಿ ಫಿಟ್ ಮಾಡುವುದು, ಅವರನ್ನು ಅರ್ಬನ್ ನಕ್ಸಲ್ ಎಂದು ಹಣೆಪಟ್ಟಿ ಹಚ್ಚುವುದು, ಈ ಮೂಲಕ ಇಂತಹ ಅಂಬೇಡ್ಕರ್ ವಾದಿ ಮೇಧಾವಿಗಳು ದೇಶದ ತಳಸಮುದಾಯಗಳಲ್ಲಿ ಅಂಬೇಡ್ಕರ್ ಚಿಂತನೆಗಳನ್ನು ಬಿತ್ತುತ್ತಿರುವುದನ್ನು ತಡೆಯುವ, ಧ್ವನಿಗಳನ್ನು ಹತ್ತಿಕ್ಕುವ ದಂಡೋಪಾಯವನ್ನು ಬಳಸುತ್ತಲೇ ಮತ್ತೊಂದು ಕಡೆಯಲ್ಲಿ ಉಪಾಯದಿಂದ, ನಯವಂಚಕತನದಿಂದ, ದುಡ್ಡು ಮತ್ತು ಹುದ್ದೆಗಳ ಆಮಿಷದ ಮೂಲಕ ದಲಿತ ಮುಖಂಡರನ್ನು ಆಪೋಶನ ತೆಗೆದುಕೊಳ್ಳುವ “ಸಾಮ-ದಾನ” ಇಲ್ಲವೇ ತಳಸಮುದಾಯಗಳನ್ನು ಒಬ್ಬರ ಮೇಲೆ ಮತ್ತೊಬ್ಬರನ್ನು ಎತ್ತಿಕಟ್ಟಿ ನಡೆಡಸುವ “ಭೇದ” ನೀತಿಯನ್ನು ಪ್ರಯೋಗಿಸಿ ವೈದಿಕ ಹಿತಾಸಕ್ತಿ ಕಾಪಾಡುವುದು… ಇದೇ ಈ ದೇಶ ಸಾವಿರಾರು ವರ್ಷಗಳಿಂದ ಮತ್ತೆ ಮತ್ತೆ ಮೋಸಹೋಗಲು ಕಾರಣವಾಗಿರುವುದು.

ಹೀಗಾಗಿಯೇ ಅಂಬೇಡ್ಕರ್ ಅವರನ್ನೇ ಆಪೋಶನ ತೆಗೆದುಕೊಳ್ಳುತ್ತಿರುವಾಗ ಅಂಬೇಡ್ಕರ್ ಅವರ ಮೇಲಿನ ಅಭಿಮಾನ ಪ್ರೀತಿ ಮಾತ್ರ ಸಾಲುವುದಿಲ್ಲ. ವಂಚಕ ಜಾಲಗಳು ಹೊಂಚು ಹಾಕುತ್ತಿರುವಾಗ ಅಂಬೇಡ್ಕರ್ ರಥವನ್ನು ಮುಂದಕ್ಕೆ ಒಯ್ಯುವುದು ಮತ್ತೂ ಕಠಿಣವಾಗಿದೆ ಎಂಬ ಅರಿವಿನಲ್ಲಿ ಅಂಬೇಡ್ಕರ್ ಅವರು ಕನಸಿದ್ದ ಭಾರತವನ್ನು ನಾವೂ ಕನಸಬೇಕಿದೆ, ಅಂಬೇಡ್ಕರ್ ಆಶಿಸಿದ್ದ ಸಮತೆ-ಕರುಣೆ-ಪ್ರಜ್ಞೆಗಳು ನಮ್ಮೊಳಗೆ ಇಳಿಯಬೇಕಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending