Connect with us

ಅಂತರಂಗ

ಸಾಹಿತ್ಯ ಸಮ್ಮೇಳನದ ಹೆಸರಿನಲ್ಲಿ ಸ್ವಾರ್ಥ ಸಾಧನೆಯೇ ?

Published

on

ಸಾಹಿತ್ಯದ ಸಮೃದ್ದ ಫಸಲನ್ನು ಸಮೃದ್ದವಾಗಿ ನೀಡಲು ಸಮ್ಮೇಳನಗಳು ಶಕ್ತವಾಗುತ್ತವೆ .ಕನ್ನಡ ಸಮ್ಮೇಳನ ಎಂಬುದು ಸಾಹಿತಿಗಳ ಮನಸ್ಸನ್ನು ಕನ್ನಡಿಯಷ್ಟು ಸ್ಪಷ್ಟವಾಗಿ ಹಿಡಿದಿಡುವ ವೇದಿಕೆ .

ಸಾಹಿತ್ಯ ಸಮ್ಮೇಳನಗಳು ಇತ್ತೀಚಿನ ವರ್ಷಗಳಲ್ಲಿ ಜಾತ್ರೆಯ ಸ್ವರೂಪ ತಳೆಯುತ್ತಿವೆ ಇದು ಸತ್ಯಾಂಶದ ಮಾತು ಜಾತ್ರೆಯಲ್ಲಿ ಸಂಭ್ರಮ ಸಡಗರ ಹೆಚ್ಚು ಯಾವುದೇ ಕಾರ್ಯಕ್ರಮದಲ್ಲೂ ಸಡಗರ ಒಳ್ಳೆಯ ಲಕ್ಷಣಗಳು ಆದರೆ ಸಾಹಿತ್ಯ ಸಮ್ಮೇಳನಗಳಲ್ಲಿ ಮೊದಲಿಗೆ ಆಗಬೇಕಾದ ಕೆಲಸ ಆಗದೇ ಇರುವುದು ದುರಂತವೇ ! ಯಾಕೆ ಹೀಗೆ ?

ಕನ್ನಡ ಸಾರಸ್ವತ ಲೋಕವನ್ನು ಕಟ್ಟಿ ಬೆಳೆಸಿದ ಹಿರಿ ತೆಲೆಮಾರಿನ ಸಾಹಿತಿಗಳಿಗೆ ಯುವ ಜನತೆ ಸಾಹಿತ್ಯದಲ್ಲೂ ಮುಂಚೂಣಿಗೆ ಬರಬೇಕೆಂಬ ಕಾಳಜಿ ಕಳಕಳಿ ಇಲ್ಲವೇ ? ಸಾಹಿತ್ಯ ಸಮ್ಮೇಳನಗಳೆಂದರೆ ಬರೀ ಹಿರಿಯರ ಒಡ್ಡೋಲಗವೇ ಆಗಬೇಕೆ.ವಿಚಾರ ಮಂಡಿಸುವ ಪ್ರಬುದ್ಧತೆ ಇಂದಿನ ಯುವಲೇಖಕರಲ್ಲಿ ಇಲ್ಲವೇ ? ಹಿರಿಯರ ಮುಂಚೂಣಿಯಲ್ಲಿ ಕಿರಿಯರನ್ನು ಬೆಳೆಸುವುದು ಅವರುಗಳ ಕರ್ತವ್ಯವಲ್ಲವೇ ..

ಇಂತಹದ್ದೇ ಪ್ರೆಶ್ನೆಗಳು ಕಾಡತೊಡಗಿವೆ ಹೊಸ ತೆಲೆ ಮಾರಿನ ಯುವಜನರನ್ನು ಸಮಗ್ರವಾಗಿ ಬಳಸಿಕೊಳ್ಳಲು ಯಾಕೆ ಸಾಧ್ಯವಾಗುತ್ತಿಲ್ಲ ?
ಇವತ್ತು ಸಾಹಿತ್ಯ ಕ್ಷೇತ್ರದಲ್ಲಿ ಗ್ರಾಮೀಣ ಪ್ರದೇಶದ ಹಲವಾರು ಲೇಖಕರು , ಕವಿಗಳು ಮುಂಚೂಣಿಯಲ್ಲಿರುವರು, ಆದರೂ ಅಧಿಕಾರ ಮೋಹಿಗಳು ಸಮ್ಮೇಳನವನ್ನು ಯಾವ ರೀತಿ ಮಾಡಬೇಕು ಎನ್ನುವುದು ಸಂಘಟಕರಿಗೆ ತಿಳಿದಿರದ ಬೇಕು. ಎಲ್ಲ ಮಗ್ಗಲುಗಳನ್ನು ಪರಿಶೀಲಿಸಿ ಅವಕಾಶ ವಂಚಿತರಿಗೆ ಅವಕಾಶವನ್ನು ಒದಗಿಸುವುದರ ಬಗ್ಗೆ ಚಿಂತಿಸುವುದು ಅನಿವಾರ್ಯ ಗ್ರಾಮೀಣ ಪ್ರದೇಶದವರನ್ನು , ಯುವಜನರನ್ನು ಪ್ರಚೋದಿಸುವ , ಪ್ರೇರೇಪಿಸುವ , ಪ್ರೊತ್ಸಾಹಿಸುವ ಅಗತ್ಯತೆ ಈಗಿನ ಸಂಘಟಿಕರಿಗೆ ಖಂಡಿತ ಇಲ್ಲ .ಇನ್ನೊಬ್ಬರು ಮುಂಚೂಣಿಗೆ ಬಂದರೆ , ತಾವು ಕಡೆಗಣಿಸಲ್ಪಡುತ್ತೇವೆಂಬ ಭಯ ಇರುವುದರಿಂದ ಇಂತಹ ವ್ಯಕ್ತಿಗಳು ಸಾಹಿತ್ಯ ಕ್ಷೇತ್ರದ ಅಧಿಕಾರದಲ್ಲಿ ಇರೋತನಕ ಯುವಜನತೆಗೆ ಹಳ್ಳಿಗಾಡಿನವರಿಗೆ ಸಾಧ್ಯವೇ ಇಲ್ಲ !

ಜನರಲ್ಲಿ ಸಾಂಸ್ಕೃತಿಕ ಕಳಕಳಿಯನ್ನು ವಿಸ್ತರಿಸುವ ಕೆಲಸ ಸಮ್ಮೇಳನಗಳಿಂದ ಆಗಬೇಕು.” ಹಿಂದೆ ಗೋಷ್ಟಿಗಳಲ್ಲಿ ಪಾಲ್ಗೊಂಡವರೇ ಮುಂದಿನ ಸಮ್ಮೇಳನಗಳಲ್ಲಿ ಭಾಗವಹಿಸುತ್ತಿದ್ದಾರೆ ”
ಇಲ್ಲಿ ಪಾಲ್ಗೊಳ್ಳಲು ಅವರ ಜನಪ್ರಿಯತೆ ಕಾರಣಗಳು ಇರುತ್ತವೆ ಆದರೆ ಕನ್ನಡ ಸಂಸ್ಕ್ರತಿಗಳ ಬೆಳವಣಿಗೆಗೆ ಅವರ ಕಾಣಿಕೆ ಏನು ? ಇಂದಿನ ದಿನಮಾನಗಳಲ್ಲಿ ಸಾಹಿತ್ಯ ಕ್ಷೇತ್ರದ ಹಿರಿಯ ಚೇತನಗಳ ಸರಪಳಿಯ ಕೊಂಡಿಗಳು ಒಂದೊಂದಾಗಿಯೇ ಕಳಚಿ ಬೀಳುವುದು ಅತ್ಯಂತ ದುಖದ ಸಂಗತಿಯಾಗಿದೆ ಹಾಗಿರುವಾಗ ಇದ್ದವರಿಗಾದರೂ ಹೊಸ ತೆಲೆಮಾರಿನ ಬರಹಗಾರರನ್ನು , ಗ್ರಾಮೀಣ ಪ್ರದೇಶದವರನ್ನು ಸಮಗ್ರವಾಗಿ ಸಮ್ಮೇಳನದ ಮುಂಚೂಣಿಯಲ್ಲಿ ತೊಡಗಿಸಿಕೊಳ್ಳಲು ಯಾಕೆ ಮುಂದಾಗಿಲ್ಲ. ! ಎನ್ನೋದೆ ! ಹಲವಾರು ಜನಗಳ ಪ್ರೆಶ್ನೆಗಳು .ಸಾಹಿತ್ಯಾಸಕ್ತ ಯುವಬರಹಗಾರರ ಸಂಖ್ಯೆಗೇನೂ ನಮ್ಮಲ್ಲಿ ಈಗಲೂ ಕಮ್ಮಿ ಇಲ್ಲ . ಸಾಹಿತ್ಯ ಲೋಕ ಬರಿದಾಗುವಂತ ದಾರಿದ್ರ್ಯವೂ ಬಂದಿಲ್ಲ ,
ಎಲೆಮರೆಯ ಕಾಯಿಯಂತಿದ್ದು ಕಥೆ , ಕವನ , ಕಾದಂಬರಿ ಲೇಖನಗಳನ್ನು ಬರೆಯುವ ಅಸಂಖ್ಯಾತ ಬರಹಗಾರರಿದ್ದಾರೆ .

ಜನರಲ್ಲಿ ಸಾಂಸ್ಕೃತಿಕ ಕಳಕಳಿಯನ್ನು ವಿಸ್ತರಿಸುವ ಕೆಲಸ ಸಮ್ಮೇಳನಗಳಿಂದ ಆಗಬೇಕು” ಹಿಂದೆ ಗೋಷ್ಟಿಗಳಲ್ಲಿ ಪಾಲ್ಗೊಂಡವರೇ ಮುಂದಿನ ಸಮ್ಮೇಳನಗಳಲ್ಲಿ ಭಾಗವಹಿಸುತ್ತಿದ್ದಾರೆ ”
ಇಲ್ಲಿ ಪಾಲ್ಗೊಳ್ಳಲು ಅವರ ಜನಪ್ರಿಯತೆ ಕಾರಣಗಳು ಇರುತ್ತವೆ ಆದರೆ ಕನ್ನಡ ಸಂಸ್ಕ್ರತಿಗಳ ಬೆಳವಣಿಗೆಗೆ ಅವರ ಕಾಣಿಕೆ ಏನು ? ಇಂದಿನ ದಿನಮಾನಗಳಲ್ಲಿ ಸಾಹಿತ್ಯ ಕ್ಷೇತ್ರದ ಹಿರಿಯ ಚೇತನಗಳ ಸರಪಳಿಯ ಕೊಂಡಿಗಳು ಒಂದೊಂದಾಗಿಯೇ ಕಳಚಿ ಬೀಳುತ್ತಿರುವುದು ಅತ್ಯಂತ ದುಖದ ಸಂಗತಿಯಾಗಿದೆ ಹಾಗಿರುವಾಗ ಇದ್ದವರಿಗಾದರೂ ಹೊಸ ತೆಲೆಮಾರಿನ ಬರಹಗಾರರನ್ನು , ಗ್ರಾಮೀಣ ಪ್ರದೇಶದವರನ್ನು ಸಮಗ್ರವಾಗಿ ಸಮ್ಮೇಳನದ ಮುಂಚೂಣಿಯಲ್ಲಿ ತೊಡಗಿಸಿಕೊಳ್ಳಲು ಯಾಕೆ ಮುಂದಾಗಿಲ್ಲ . ಎನ್ನೋದೇ ಹಲವಾರು ಜನಗಳ ಪ್ರೆಶ್ನೆಗಳು .
ಸಾಹಿತ್ಯಾಸಕ್ತ ಯುವಬರಹಗಾರರ ಸಂಖ್ಯೆಗೇನೂ ನಮ್ಮಲ್ಲಿ ಈಗಲೂ ಕಮ್ಮಿ ಇಲ್ಲ .

ಸಾಹಿತ್ಯ ಲೋಕ ಬರಿದಾಗುವಂತ ದಾರಿದ್ರ್ಯವೂ ಬಂದಿಲ್ಲ , ಎಲೆಮರೆಯ ಕಾಯಿಯಂತಿದ್ದು ಕಥೆ , ಕವನ , ಕಾದಂಬರಿ ಲೇಖನಗಳನ್ನು ಬರೆಯುವ ಅಸಂಖ್ಯಾತ ಬರಹಗಾರರಿದ್ದಾರೆ ..

ಗ್ರಾಮೀಣ ಪ್ರದೇಶದವರನ್ನು ಯುವಜನರನ್ನು ಹುಡುಕಿ ಪ್ರೊತ್ಸಾಹಿಸಿ ಜಿಲ್ಲಾ ಮಟ್ಟ , ರಾಜ್ಯ ಮಟ್ಟದವರೆಗೂ ಪರಿಚಯಿಸುವುದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕರ್ತವ್ಯವಾಗಿರುತ್ತದೆ.
ಇಲ್ಲಿ ಅಂಥದ್ದನ್ನು ಹುಟ್ಟು ಹಾಕುವ ಸಂಸ್ಕ್ರತಿ ಇಲ್ಲದೆ ಇಡೀ ಸಾಹಿತ್ಯ ಸಮ್ಮೇಳನವೇ ಸ್ವಾರ್ಥ ಕತೆಗೆ ಕಾರಣವಾಗುತ್ತಿದೆ ಎಂಬುದು ನಮ್ಮಂಥವರ ಕಾಳಜಿ. ಇಷ್ಟು ಕಾಲ ಉಳಿದು ಬೆಳೆದು ಬಂದ ಕನ್ನಡ ಸಾಹಿತ್ಯ ಸಂಸ್ಕ್ರತಿಗಳ ಬದುಕು ಈಗ ಇಡೀ ಸ್ವಾರ್ಥಿಗಳ ಕೈಗೆ ಸಿಕ್ಕು ಕೆಲನೆಲೆಗೆ ಇಳಿಯುತ್ತಿದೆ. ಎನ್ನುವುದನ್ನು ಗಮನಿಸಿದಾಗ ಮನಸ್ಸು ವಿಷಾಧದಿಂದ ಖಿನ್ನವಾಗುತ್ತದೆ .‌ಗ್ರಾಮೀಣ ಪ್ರದೇಶದ ಸೂಕ್ಷ್ಮ ತೆಗಳಿಗೆ ಅಭಿವ್ಯಕ್ತಿ ಕೊಡಬಲ್ಲದ್ದನ್ನು ಬೆಳೆಸಿ ಅರಳಿಸಬಲ್ಲ ಸಾಹಿತ್ಯ ಸಮ್ಮೇಳನಗಳು ಕ್ರಮೇಣ ಅವರ ಬದುಕಿನಿಂದ ದೂರಸರಿಯುತ್ತಿರುವುದು ವಿಷಾಧಕರ ಎನ್ನಿಸುತ್ತದೆ .. ಗ್ರಾಮೀಣ ಭಾಗದ ಜನರ ಮುಗ್ಧತನ ಅಸಾಹಯಕತೆಯನ್ನೆ ಬಂಡವಾಳ ಮಾಡಿಕೊಂಡು ಕನ್ನಡದ ಹೆಸರಿನಲ್ಲಿ ಬದುಕುವವರ ಸಂಖ್ಯೆ ಬಲುದೊಡ್ಡದು ..
ಸಮ್ಮೇಳನ ಏಂಬ ಹೆಸರಿನಲ್ಲಿ ಸಾಹಿತ್ಯ ಸಮ್ಮೇಳನಗಳು ಸರಕಾರ ಪರಿಷತ್ತು ಮಾಡುವ ಕಾರ್ಯ ಮಾತ್ರ ಅಲ್ಲ . ಇಲ್ಲಿ ಮನಸ್ಸು ಸಾಹಿತ್ಯಗಳನ್ನು ಬಲಾಡ್ಯಗೊಳಿಸುವ ನಾಡುನುಡಿಯ ಬೆಳವಣಿಗಾಗಿ ಭಾಷೆ ಮತ್ತು ಸಾಹಿತ್ಯಕ್ಕೆ ಗೌರವ ತರುವಂತಿರಬೇಕು. ಎಲ್ಲ ಸಾಹಿತ್ಯ ಸಮ್ಮೇಳನಗಳ ಆಶಯ ಒಂದೆ .
ನಮ್ಮ ಭಾಷೆ , ಸಂಸ್ಕ್ರತಿ ಸಾದ ಚಂದವಾಗಿ ಕೊಂಡೊಯ್ಯಬೇಕು ಎನ್ನುವುದು ಇಲ್ಲಿ ಮನಸ್ಸುಗಳನ್ನು ಒಂದುಗೂಡಿಸುವ ಕೆಲಸವಾಗಿರಬೇಕು ಆದರೆ ಈ ಸಮ್ಮೇಳನಗಳು ಎಲ್ಲಾರ ಮನಸ್ಸು ಕೆಡಿಸುತ್ತಿದೆ ..

ಇನ್ನಾದರೂ ಎಲ್ಲ ವರ್ಗದವರಿಗೆ ನಾಡು-ನುಡಿ ಕಟ್ಟುವ ಆಶಯಗಳು ಇರಲಿ ..ವರ್ಗ ಹಿನ್ನೆಲೆಗಳು ಚರ್ಚೆಯಾಗದಿರಲಿ ಕನ್ನಡ ಮತ್ತು ಸಮ್ಮೇಳನವು ಎಲ್ಲರ ಜೀವವೆಂಬಂತೆ ಪರಿಗಣಿಸಿ. ಸಮ್ಮೇಳನ ಎಂಬ ಹೆಸರಿನಲ್ಲಿ ಇದು ಹೀಗೆ ಮುಂದುವರಿದರೆ ಸಾಹಿತ್ಯ ಸಮ್ಮೇಳನಕ್ಕೂ ಯುವಜನತೆಗೂ ಒಂದಕ್ಕೊಂದು ಸಂಬಂಧವಿಲ್ಲದೆ ಅಲ್ಲಲ್ಲಿ ಯುವಸಮ್ಮೇಳನಗಳು ನಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ . ಇಂತಹ ಪರಿಸ್ಥಿತಿ ಬರುವ ಮುನ್ನವೆ ಕನ್ನಡ ಸಾಹಿತ್ಯ ಪರಿಷತ್ತು ಏಚ್ಚೆತ್ತುಕೊಳ್ಳಬೇಕಿದೆ. ಸಾಹಿತ್ಯ ಸಮ್ಮೇಳನ ಮುಖವಾಡಗಳ ಹಿಂದೆ ಯಾವ ಸ್ವಾರ್ಥಗಳು , ಸ್ವಾರ್ಥಿಗಳು , ಅಡಗಿದ್ದಾರೆ ಎಂದು ಅರಿತು ಸಾಹಿತ್ಯ ಕೃಷಿಯಲ್ಲಿ ನಿರತವಾಗಿರುವ ಯುವಜನರಿಗೂ ಕನ್ನಡ ಸಂಸ್ಕ್ರತಿ ಸಮ್ಮೇಳನಗಳು ಭಾವಿಷ್ಯದಲ್ಲಿ ಉತ್ತಮ ಮಾರ್ಗದರ್ಶನ ನೀಡಲು ಹೆಚ್ಚಿನ ಗಮನದ ಅಗತ್ಯತೆ ಇದೆ …

ಉದ್ದಕ್ಕೂ ಅಕ್ಷರ, ವಾಕ್ಯ ದೋಷಗಳಿವೆ. ಅಲ್ಪವಿರಾಮ, ಪೂರ್ಣ ವಿರಾಮಗಳು ಇರಬೇಕಾದ ಜಾಗದಲ್ಲಿ ಇಲ್ಲ. ಇದು ನನ್ನ ಆಲೋಚನೆ, ಪ್ರಶ್ನೆಗಳನ್ನು ದೂರ ತಂದು ನಿಲ್ಲಿಸುತ್ತವೆ . ದಯವಿಟ್ಟು ತಿದ್ದಿ ಓದಿ ಟೈಪ್ ಮಾಡುವಾಗ ಆದ ಅವಸರ.

ಇಲ್ಲಿ ಈ ವಿಷಯ ಯಾರಿಗಾದರೂ ಅನ್ವಯಿಸಿದರೆ ನಮ್ಮಗೆ ಸಂಬಂಧ ಪಟ್ಟಿರುವುದಿಲ್ಲ ಇದು ನನ್ನ ಸ್ವಂತ ಅನಿಸಿಕೆ ..

ಕೆ.ಜಿ.ಸರೋಜಾ ನಾಗರಾಜ್
ಪಾಂಡೋಮಟ್ಟಿ

ಸುದ್ದಿದಿನ.ಕಾಂ|ವಾಟ್ಸಾಪ್|9986715401

ಅಂತರಂಗ

ಪಕ್ಕೆಲುಬು – ಕಪ್ಪೆಲುಬು : ಸ್ತ್ರೀಲಿಂಗ – ಪುಲ್ಲಿಂಗ

Published

on

ಸಾಂದರ್ಭಿಕ ಚಿತ್ರ
  • ವಿವೇಕಾನಂದ. ಹೆಚ್.ಕೆ.

ಕ್ಕೆಲುಬು – ಕಪ್ಪೆಲುಬು : ಸ್ತ್ರೀಲಿಂಗ – ಪುಲ್ಲಿಂಗ’,         ಮುಂತಾದ ಕೆಲವು ಪದಗಳನ್ನು ಶಾಲೆಯ ಪುಟ್ಟ ಮಕ್ಕಳು ತಪ್ಪಾಗಿ ಉಚ್ಚರಿಸುವುದನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ – ನೋಡಿ ನಗು ಬಂದಿತು. ಅವರ ಮುಗ್ದತೆ ಖುಷಿ ನೀಡಿತು. ಮಕ್ಕಳ ಉಚ್ಚಾರಣೆಯ ತಪ್ಪುಗಳೇ ಒಂದು ನಿಷ್ಕಲ್ಮಶ ನಗುವನ್ನು ಮನದಲ್ಲಿ ಮೂಡಿಸಿತು.ಮಕ್ಕಳು ಈ ರೀತಿಯ ತಪ್ಪು ಮಾಡಿದರೆ ಅದೇ ಚೆಂದ. ನನ್ನಂತ ಕತ್ತೆಗಳು ತಪ್ಪು ಮಾಡಿದರೆ ಅದು ಅಸಹ್ಯ.

ಆದರೆ ಆ ಮಗುವಿನ ತಪ್ಪನ್ನು ಮಹಾ ಅಪರಾಧ ಎಂಬಂತೆ ಬಿಂಬಿಸುವುದು, ತುಂಬಾ ದಡ್ಡ ಎಂದು ಭಾವಿಸುವುದು, ತಪ್ಪಾಗಿ ಉಚ್ಚರಿಸಿದ್ದಕ್ಕೆ ಹೊಡೆಯುವುದು, ಸಾಮಾಜಿಕ ಜಾಲತಾಣಗಳಲ್ಲಿ ಅದನ್ನು ಹರಿಯಬಿಟ್ಟು ಮಗುವನ್ನು ಮೂದಲಿಸಿ ಅದರ ಆತ್ಮವಿಶ್ವಾಸ ಕುಂದಿಸುವುದು ಅಕ್ಷಮ್ಯ ಅಪರಾಧ ಮತ್ತು ಅಮಾನವೀಯ ವರ್ತನೆ. ಅದರಲ್ಲೂ ಮಕ್ಕಳಿಗೆ ತಪ್ಪನ್ನು ತಿದ್ದಿ ಮತ್ತೆ ಮತ್ತೆ ತಾಳ್ಮೆಯಿಂದ ಕಲಿಸಬೇಕಾದ ಶಿಕ್ಷಕರೇ ಹೀಗೆ ಅಪಹಾಸ್ಯ ಮಾಡಿದರೆ ಅದು ದೊಡ್ಡ ತಪ್ಪಾಗುತ್ತದೆ.

ಮಕ್ಕಳು ಬಿಡಿ ದೊಡ್ಡವರ ತಪ್ಪುಗಳೇ ಪ್ರತಿ ದಿನವೂ ನಡೆಯುತ್ತಲೇ ಇರುತ್ತದೆ. ನಾನಾಗ ಕಿರುತೆರೆಯ ಧಾರಾವಾಹಿ, ಕಿರುಚಿತ್ರ, ಸಾಕ್ಷ್ಯಚಿತ್ರ, ಜಾಹೀರಾತು ಚಿತ್ರಗಳನ್ನು ನಿರಂತರವಾಗಿ ಮಾಡುತ್ತಿದ್ದೆ. ಅನೇಕ ಜನ ಪರಿಚಯದ ಡಾಕ್ಟರುಗಳು, ಇಂಜಿನಿಯರುಗಳು, ಶಿಕ್ಷಕರು, ಸರ್ಕಾರಿ ಅಧಿಕಾರಿಗಳು ‌ಸೇರಿ ಕೆಲವರು ನಟಿಸುವ ಅವಕಾಶಗಳನ್ನು ಕೇಳುತ್ತಿದ್ದರು. ಆಗ ಅವರಿಗೆ ಕೆಲವು ಚಿಕ್ಕ ಪಾತ್ರಗಳನ್ನು ಕೊಡುತ್ತಿದ್ದೆವು.

ಅಂತಹ ವಿದ್ಯಾವಂತರುಗಳೇ ನಾಲ್ಕು ಐದು ವಾಕ್ಯಗಳನ್ನು ಒಟ್ಟಿಗೆ ಹೇಳಲು 30/40 ಟೇಕ್ ಗಳನ್ನು ತೆಗೆದುಕೊಳ್ಳುತ್ತಿದ್ದರು. ಆಗ ಧಾರವಾಹಿಗಳಿಗೆ ಡಬ್ಬಿಂಗ್ ಮಾಡುವುದು ಸ್ವಲ್ಪ ಹೆಚ್ಚು ದುಬಾರಿ ಆಗಿದ್ದುದರಿಂದ ನೇರ ಧ್ವನಿಮುದ್ರಣಕ್ಕೆ ಪ್ರಾಮುಖ್ಯತೆ ಕೊಡುತ್ತಿದ್ದೆವು.

ಒಬ್ಬ ವ್ಯಕ್ತಿಯಂತು ” ನಮ್ಮ ಅಪ್ಪನಿಗೆ ಮೂಗಿನ ತುದಿಯಲ್ಲಿ ಕೋಪ ಇರುತ್ತದೆ ” ಎಂದು ಹೇಳಲು ಐದು ಗಂಟೆಯಷ್ಟು ಸಮಯ ವ್ಯರ್ಥ ಮಾಡಿದರು. ರಿಹರ್ಸಲ್ ಸಮಯದಲ್ಲಿ ಸರಿಯಾಗಿ ಹೇಳುತ್ತಿದ್ದ ಅವರು ಟೇಕ್ ಸಮಯದಲ್ಲಿ ಲೈಟ್ಸ್ – ಸೌಂಡ್ – ಕ್ಯಾಮರಾ – ಆಕ್ಷನ್ ಎಂದು ಹೇಳುತ್ತಿದ್ದಂತೆ ” ಅಪ್ಪನ ತುದಿಯಲ್ಲಿ…. ಅಪ್ಪನ ತುದಿಯಲ್ಲಿ…. ” ಎಂದು ತೊದಲುತ್ತಿದ್ದರು. ಆಗ ಸಹಜವಾಗಿ ಅಲ್ಲಿದ್ದ ತಾಂತ್ರಿಕ ಸಿಬ್ಬಂದಿ ನಗುತ್ತಿದ್ದರು. ಇದು ಆ ವ್ಯಕ್ತಿಯ ಮಾನಸಿಕ ಒತ್ತಡ ಮತ್ತಷ್ಟು ಹೆಚ್ಚಿಸಿ ಮತ್ತೂ ತಪ್ಪು ಹೇಳುತ್ತಿದ್ದರು.

ಈಗಲೂ ಎಷ್ಟೋ ಜನರಿಗೆ ಅ ಕಾರ ಹ ಕಾರ, ಸ ಕಾರ ಶ ಕಾರ, ಸಂಕ್ರಾಂತಿ ಶಂಕ್ರಾಂತಿ, ಪುದಿನ ಸೊಪ್ಪು ಕುದಿನ ಸೊಪ್ಪು ಮುಂತಾದ ಅನೇಕ ದಿನನಿತ್ಯದ ತಪ್ಪುಗಳು ನಮ್ಮ ನಡುವೆಯೇ ಆಗುತ್ತಿರುತ್ತದೆ. ಆದ್ದರಿಂದ ಆ ಪುಟ್ಟ ಮಗುವಿನ ಮುಗ್ಧ ಕಪ್ಪೆಲುಬು ಉಚ್ಚಾರಣೆಯನ್ನು ಒಂದು ಮುಗ್ಧ ನಗುವಿನಿಂದ ಸ್ವೀಕರಿಸಿಬೇಕೆ ಹೊರತು ಅದನ್ನು ತಪ್ಪು ಎಂದು ಭಾವಿಸಿದಲ್ಲಿ ನಾವು ಅಮಾನವೀಯ ಮನಸ್ಥಿತಿಯ ವ್ಯಕ್ತಿಗಳು ಎಂದೇ ನಮ್ಮನ್ನು ಕರೆದುಕೊಳ್ಳಬೇಕು.

ಕನ್ನಡದಲ್ಲಿ ಸದಾ ಬರೆಯುವ ನಾನು ಹೊಗಳು ಭಟರು ಎಂಬುದನ್ನು ಭಟ್ಟರು ಎಂದೂ, ಆಗುಹೋಗುಗಳನ್ನು ಹಾಗುಹೋಗುಗಳು ಎಂದೂ ಬರೆಯುತ್ತಿದ್ದೆ. ಗೆಳೆಯರು ತಪ್ಪು ತಿದ್ದಿದಾಗ ನನಗೂ ನನ್ನ ಬಗ್ಗೆ ನಗು ಬಂತು.ಯಾವಾಗಲೂ ಸಹಜ ತಪ್ಪುಗಳು ಸ್ವೀಕಾರಾರ್ಹ,
ಉದ್ದೇಶಪೂರ್ವಕ ತಪ್ಪುಗಳು ಶಿಕ್ಷಾರ್ಹ. ಒಂದು ವಾಸ್ತವ ಉದಾಹರಣೆಯೊಂದಿಗೆ ಇದನ್ನು ಮುಗಿಸುತ್ತಿದ್ದೇನೆ.

ಒಂದು ವೇಳೆ ನಾವು ದಾರಿಯಲ್ಲಿ ಹೋಗುವಾಗ ನಮ್ಮ ಎದುರಿಗೆ ಯಾರಾದರೂ ಎಡವಿ ಬಿದ್ದಾಗ ನಮಗೆ ಅರಿವಿಲ್ಲದೆ ನಮ್ಮಲ್ಲಿ ಒಂದು ನಗು ಮೂಡಿದರೆ ಅದು ಸಹಜ. ಆದರೆ ಕೆಲವು ಕ್ಷಣದ ನಂತರವೂ ಆ ವ್ಯಕ್ತಿಯನ್ನು ನೋಡಿ ನಾವು ಗಹಗಹಿಸಿ ನಗುತ್ತಿದ್ದರೆ ಅದು ಕ್ಷಮಿಸಲು ಸಾಧ್ಯವಾಗದ ತಪ್ಪು ಮತ್ತು ಅಮಾನವೀಯ ಹಾಗು ವಿಕೃತ ಮನಸ್ಸು ಅದನ್ನು ಬದಲಾಯಿಸಿಕೊಳ್ಳಬೇಕು.

ಹಾಗೆಯೇ, ಹತ್ತು ವರ್ಷಕ್ಕೂ ಕಡಿಮೆ ವಯಸ್ಸಿನ ಮಗು ಎಡವಿ ಬಿದ್ದವರನ್ನು ನೋಡಿ ಜೋರಾಗಿ ನಕ್ಕರೂ ಅದು ದೊಡ್ಡ ತಪ್ಪಲ್ಲ. ಕ್ಷಮೆಗೆ ಅರ್ಹ. ಆದರೆ ಆ ಸಮಯದಲ್ಲಿ ಮಕ್ಕಳಿಗೆ ಒಂದು ಪ್ರೀತಿ ಪೂರ್ವಕ ತಿಳಿವಳಿಕೆ ನೀಡಬೇಕು. ” ನೀನು ಬಿದ್ದಾಗ ಯಾರಾದರೂ ನಕ್ಕರೆ ನಿನಗೆ ಕೋಪ ಬರುವುದಿಲ್ಲವೇ ಆದ್ದರಿಂದ ನಗಬಾರದು ” ಎಂದು ಅರ್ಥಮಾಡಿಸಬೇಕು. ಮುಂದೆ ಮಗು ದೊಡ್ಡದಾದ ಮೇಲೆ ನೆನಪಿಸಿಕೊಳ್ಳಬಹುದು.

ಮಕ್ಕಳನ್ನು ಮಕ್ಕಳಂತೆ ನೋಡಿ, ನೀವು ದೊಡ್ಡವರಾಗಿದ್ದರೂ….!

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ವೀಸಾರಹಿತ ವ್ಯವಸ್ಥೆ

Published

on

  • ರಘೋತ್ತಮ ಹೊ.ಬ.

ನಿನ್ನೆ ಡಿಸೆಂಬರ್ 25 ಕ್ರಿಸ್ಮಸ್ ಹಬ್ಬ. ನನಗೆ ತಿಳಿದಂತೆ ಕ್ರಿಶ್ಚಿಯನ್ನರೆಂದರೆ ಬಹುತೇಕ ಅವರು ಮಾಜಿ ದಲಿತರು. ದಲಿತರು ಮಾತ್ರ ಯಾಕೆ ಕ್ರಿಶ್ಚಿಯನ್ನರಾದರು? ಹಾಗೆಯೇ ಸಿಖ್, ಮುಸ್ಲಿಂ ಹೀಗೆ ಇತರೆ ಧರ್ಮಗಳಿಗೆ ಮತಾಂತರ ಹೊಂದಿದರು? ತಾವು ಹಿಂದೂಗಳಲ್ಲ ಎಂಬ ಕಾರಣಕ್ಕೆ ಅವರು ಹೀಗೆ ಮಾಡಿದರೆ? ಊಹ್ಞೂಂ. ಹಿಂದೂ ಪರಿಕಲ್ಪನೆಗೂ ಅವರ ಮತಾಂತರಕ್ಕೂ ಸಂಬಂಧವಿಲ್ಲ. ಯಾಕೆಂದರೆ ಹಿಂದೂ ಪರಿಕಲ್ಪನೆ ತೀರಾ ಈಚಿನದ್ದು.

ಹಾಗಿದ್ದರೆ ಕಾರಣ? ಉತ್ತರ: ವೀಸಾ! ಏನಿದು ವೀಸಾ ಎಂದುಕೊಂಡಿರಾ? ಖ್ಯಾತ ಚಿಂತಕ ವಿ.ಟಿ.ರಾಜಶೇಖರ್ ಜಾತಿವ್ಯವಸ್ಥೆಯನ್ನು “Nations within a Nation (ರಾಷ್ಟ್ರದೊಳಗಿನ ರಾಷ್ಟ್ರಗಳು) ” ಎನ್ನುತ್ತಾರೆ. ವಿ.ಟಿ.ರಾಜಶೇಖರರ ಈ ಮಾತಿಗೆ ಸ್ಫೂರ್ತಿ ಅಂಬೇಡ್ಕರರ Waiting for a Visa (ವೀಸಾ ಪಡೆಯಲು ಕಾಯುತ್ತಿದ್ದೇನೆ) ಕೃತಿ.

ಈ ಕೃತಿಯ ಪ್ರಕಾರ ಭಾರತ ಒಂದು ರಾಷ್ಟ್ರವಾದರೆ ವಿವಿಧ ಜಾತಿಗಳು ಅದರೊಳಗಿನ ಪುಟ್ಟ ಪುಟ್ಟ ರಾಷ್ಟ್ರಗಳು. ಯಾಕೀ ಪರಿಕಲ್ಪನೆ? ಯಾಕೆಂದರೆ, ಎಲ್ಲರಿಗೂ ತಿಳಿದಿರುವಂತೆ ಭಾರತದಿಂದ ಅಮೆರಿಕಾ, ಇಂಗ್ಲೆಂಡ್, ಜಪಾನ್ ಹೀಗೆ ಬೇರೆ ಬೇರೆ ದೇಶಗಳಿಗೆ ಹೋಗಲು ವೀಸಾ ಬೇಕು. ಆಶ್ಚರ್ಯವೆಂದರೆ ಇದೆ ವೀಸಾ ವ್ಯವಸ್ಥೆ ಜಾತಿಪದ್ಧತಿಯಲ್ಲಿದೆ! ಹೇಗೆಂದರೆ ಒಂದು ಬೀದಿಯಿಂದ ಮತ್ತೊಂದು ಬೀದಿಗೆ ಹೋಗಲು!

ಉದಾಹರಣೆಗೆ ನಮ್ಮೂರಿನ ಲಿಂಗಾಯತರ ಕೇರಿಗೆ ಹೋಗಲು, ಕುರುಬರ ಬೀದಿಗೆ ಹೋಗಲು ನಾನು ಹೀಗೆಯೇ ವೀಸಾ ಇದೆಯೇ ಇಲ್ಲವೇ ಎಂದು ಈಗಲೂ ಚಡಪಡಿಸಬೇಕಿದೆ. ಅವರ ಬೀದಿಯೊಳಕ್ಕೆ ಹೋಗುತ್ತಲೇ ನನ್ನ ಅಪ್ಪನನ್ನು ನಾನು ಅಪ್ಪ ಎಂದು ಕರೆಯದಿದ್ದರೂ ಅವರುಗಳನ್ನು ‘ಅಪ್ಪಾ, ಅವ್ವಾ,’ ಎನ್ನಬೇಕಿದೆ! ನಾಗರಾಜು ಅಂತ ಅವರ ಹೆಸರಿದ್ದರೆ ನಾನು ನಾಗರಾಜಪ್ಪ ಎನ್ನಬೇಕು! ಇನ್ನು ಬುದ್ಧಿ, ಸ್ವಾಮಿ ಪದ ಧಾರಾಳವಾಗಿ ಬಂದರಷ್ಟೆ ನಮಗೆ ವೀಸಾ ಸಿಗುತ್ತದೆಯೇ ಇಲ್ಲವೆ ಎಂಬ ಕಾತರಿ.

ಒಟ್ಟಾರೆ ಆ ದೇಶಕ್ಕೆ(ಬೀದಿಗೆ) ಹೋಗಲು ವೀಸಾ(ಒಪ್ಪಿಗೆ ಪತ್ರ) ಬೇಕೇಬೇಕು. ವಾಸ್ತವ ಹೀಗಿದ್ದಾಗ ಕ್ರಿಶ್ಚಿಯನ್ ಮತ್ತು ಇತರೆ ಧರ್ಮಗಳು ದಲಿತರಿಗೆ ಮುಕ್ತವಾಗಿ ಬಾಗಿಲು ತೆರೆದವು, ವೀಸಾ ನೀಡಿದವು. ಮತ್ತು ಅಂಬೇಡ್ಕರರೂ ಅಷ್ಟೆಯೇ ಹೀಗೆ ತಮ್ಮದೇ ಒಂದು ವೀಸಾರಹಿತ ವ್ಯವಸ್ಥೆಯನ್ನು (ಬೌದ್ಧಧರ್ಮ) ಆರಿಸಿಕೊಂಡರು. ಅಂತಿಮ ಘಳಿಗೆಯಲ್ಲಿ ನೆಮ್ಮದಿಯ ನಿಟ್ಟುಸಿರು ಬಿಟ್ಟರು.

ಜಾತಿ ವ್ಯವಸ್ಥೆ ತೊಲಗಬೇಕು. ಅಂತಹ ಆಸೆ ಸಹೃದಯಿಗಳಲ್ಲಿದ್ದರೆ ಹೀಗೆ ವೀಸಾ ಬೇಡುವ ಪದ್ಧತಿ ನಾಶವಾಗಬೇಕು. ವೀಸಾ ಇಲ್ಲ ಎಂಬ ಕಾರಣಕ್ಕೆ ಅಂತಹವರ ವಿರುದ್ಧ ದೌರ್ಜನ್ಯ ಎಸಗುವ ಮನಸ್ಥಿತಿ ತೊಲಗಬೇಕು. ರಾಷ್ಟ್ರದೊಳಗಿನ ರಾಷ್ಟ್ರಗಳ ನಡುವೆ ಇರುವ ಗೋಡೆ ಮುರಿದು ಬೀಳಬೇಕು. ಎಲ್ಲರಿಗೂ ಮುಕ್ತಪ್ರವೇಶವಿದೆ ಎಂಬ ಬೋರ್ಡುಗಳು ಎಲ್ಲ ಕಡೆ ಬರಬೇಕು.

ಅಂದಹಾಗೆ ಹಾಗೆ ವ್ಯವಸ್ಥೆ ಬದಲಾದರೆ ‘ಮತಾಂತರ’ದ ಅಗತ್ಯವಾದರೂ ಎಲ್ಲುಂಟಾಗುತ್ತದೆ? ಈ ನಿಟ್ಟಿನಲ್ಲಿ ವೀಸಾ ವ್ಯವಸ್ಥೆಯಿಂದ ನಮ್ಮ ವ್ಯವಸ್ಥೆ ಹೊರಬರಲಿ, ಭಾರತ ಬರೇ ಒಂದು ರಾಷ್ಟ್ರವಾಗಲಿ, ರಾಷ್ಟ್ರದೊಳಗಿನ ರಾಷ್ಟ್ರ ವ್ಯವಸ್ಥೆ ತೊಲಗಲಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಮನೆಯವರು ನೋಡುತ್ತಿದ್ದಂತೆಯೇ ಗುಂಡೇಟಿಗೆ ಬಲಿಯಾದ ಆಧಾರಸ್ತಂಭ

Published

on

ನೌಶೀನ್ ಕುದ್ರೂಳಿ / ಅಬ್ದುಲ್ ಜಲೀಲ್
  • ರಶೀದ್ ವಿಟ್ಲ

44ರ ಹರೆಯದ ಅಬ್ದುಲ್ ಜಲೀಲ್ ಅದಾಗಲೇ ಶಾಲೆಯಿಂದ ಮಕ್ಕಳನ್ನು ಕರಕೊಂಡು ಮನೆಗೆ ಬಂದಿದ್ದರು. ಬಂದರ್ ನಾರಾಯಣ ಹೋಟೆಲ್ ಎದುರುಗಡೆ ಬಾಡಿಗೆ ಫ್ಲಾಟ್’ನಲ್ಲಿದ್ದ ಅಬ್ದುಲ್ ಜಲೀಲ್ ಹೊರಗೆ ಶಬ್ದ ಕೇಳಿ ರಸ್ತೆ ಕಡೆ ಧಾವಿಸಿದರು. ಪತ್ನಿ, ಮಕ್ಕಳು ಹಿಂದಿಂದ ನೋಡುತ್ತಿದ್ದರು. ನಿರಂತರ ಗುಂಡಿನ ಶಬ್ದ ಕಿವಿಕ್ಕಪ್ಪಳಿಸುತ್ತಿತ್ತು.

ಅದರಲ್ಲೊಂದು ಗುಂಡು ಜಲೀಲ್’ರ ಕಣ್ಣ ಗುಡ್ಡೆಯನ್ನೇ ಸೀಳಿತು. ರಕ್ತ ಚಿಮ್ಮಿತು. ಮನೆಯವರೆದುರೇ ನೆಲಕ್ಕುರುಳಿದರು. ಬಂದರಿನ ದಕ್ಕೆಯಲ್ಲಿ ಮೀನು ಮಾರಿ ಪತ್ನಿ ಮತ್ತು ಎರಡು ಮಕ್ಕಳೊಂದಿಗೆ ಬಾಡಿಗೆ ಫ್ಲಾಟಲ್ಲಿ ಜೀವನ ಸವೆಸುತ್ತಿದ್ದ ಅಮಾಯಕ ಜಲೀಲ್ ಅನ್ಯಾಯವಾಗಿ ಬಲಿಯಾದರು.

ಎಲ್ಲರಿಗೂ ಬೇಕಾಗಿದ್ದ ಯುವಕನ ಬೆನ್ನಿಗೆ ಬಿದ್ದ ಗುಂಡು ಎದೆಯನ್ನು ಸೀಳಿ ಹೊರಬಂತು

ನೌಶೀನ್ ಕುದ್ರೋಳಿಯ ಜನರ ಪ್ರೀತಿಗೆ ಪಾತ್ರನಾದವ. ವಯಸ್ಸು 23 ಆದರೂ ವಯಸ್ಸಿಗೂ ಮೀರಿದ ಪಕ್ವತೆ ಇತ್ತು. ಮಾತುಗಾರಿಕೆ ಮತ್ತು ತಮಾಷೆಯಿಂದ ಕುದ್ರೋಳಿಯ ಸರ್ವ ಜನರ ಹೃದಯದಲ್ಲಿ ಮನೆಮಾತಾಗಿದ್ದ. “ವಾಯ್ಸ್ ಆಫ್ ಪೀಪಲ್” ಸಂಘಟನೆ ಮೂಲಕ ಸಮಾಜ ಸೇವೆ ಹಾಗೂ ಧಾರ್ಮಿಕ ಕೈಂಕರ್ಯದಲ್ಲಿ ತೊಡಗಿದ್ದ.ಮೆಕ್ಯಾನಿಕ್ ವೃತ್ತಿಯನ್ನು ಮಾಡುತ್ತಿದ್ದ.

ಅದಾಗಲೇ ಅಸರ್ ನಮಾಝ್ ಮಾಡಿ ಹೊರಬಂದಿದ್ದ. ಪ್ರತಿಭಟಿಸುತ್ತಿದ್ದ ನೂರಾರು ಜನರ ವಿದ್ಯಾಮಾನವನ್ನು ಗಮನಿಸುತ್ತಿದ್ದ. ಅಶ್ರುವಾಯು, ಲಾಠಿಚಾರ್ಜ್ ನಡೆಯುತ್ತಿತ್ತು. ಗುಂಡು ಹಾರಾಟ ಮಾಲೆ ಪಟಾಕಿಯಂತೆ ಕೇಳುತ್ತಿತ್ತು. ಮನೆಕಡೆ ಹೋಗುತ್ತಿದ್ದ ನೌಶೀನ್’ನ ಬೆನ್ನಿಗೆ ಗುಂಡು ಹೊಡೆಯಿತು.

ಬಂದರಿನ ಸ್ಟೀಲ್ ಸೆಂಟರ್ ಬಳಿ ಈ ಘಟನೆ ನಡೆಯಿತು. ಗುಂಡಿನ ತೀವ್ರತೆ ಎಷ್ಟಿತ್ತೆಂದರೆ ಬೆನ್ನು ಸೀಳಿ ಒಳನುಗ್ಗಿ ಹೃದಯ ದಾಟಿ ಎದುರಿನಿಂದ ಹೊರಬಂತು. ನೌಶೀನ್ ದೊಪ್ಪನೆ ಬಿದ್ದ. ಪ್ರಾಣಪಕ್ಷಿ ಹಾರಿಹೋಯಿತು. ಎಲ್ಲರಿಗೂ ಬೇಕಾಗಿದ್ದ ಪ್ರೀತಿಯ ಹುಡುಗ ನೀರವ ಮೌನವಾದ.

ಹೀಗೇ ಮಂಗಳೂರಿನ ಹಿಂಸಾಚಾರದಲ್ಲಿ ಎರಡು ಜೀವಗಳ ತರ್ಪಣವಾಯಿತು. ಒಂದು ಮನೆಯ ಆಧಾರಸ್ತಂಭವೇ ಕಳಚಿ ಬಿದ್ದರೆ ಇನ್ನೊಂದು ಊರಿನ ಬೆಳಕು ಆರಿತು. ಮಂಗಳೂರು ನಿಧಾನವಾಗಿ ಶಾಂತವಾಗುತ್ತಿದೆ. ಮೃತರ ಕುಟುಂಬ ಮಾತ್ರ ಅನಾಥವಾಗಿದೆ. ಯಾರದೋ ಸೇಡಿಗೆ ಇನ್ಯಾರೋ ಬಲಿಯಾದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending